ಮಾಗೋಡು ಜಲಪಾತ

ಮಾಗೋಡು ಜಲಪಾತ ಯಲ್ಲಾಪುರದಿಂದ ನೈಋತ್ಯದಲ್ಲಿ ೨೦ ಕಿಲೋಮೀಟರ್ ದೂರದಲ್ಲಿದೆ.

ಬೇಡ್ತಿ ನದಿ (ಗಂಗಾವಳಿ) ಯು ಸುಮಾರು ೨೦೦ ಮೀಟರ್ ಎತ್ತರದಿಂದ ಎರಡು ಘಟ್ಟಗಳಲ್ಲಿ ಧುಮುಕುತ್ತದೆ.

ಮಾಗೋಡು ಜಲಪಾತ
ಮಾಗೋಡು ಜಲಪಾತ

ಈ ಜಲಪಾತದ ಮೂಲ ಬೇಡ್ತಿ ನದಿ.ಮಳೆಗಾಲದುದ್ಡಕ್ಕೂ ಹಸಿರು ಕಾವ್ಯ ಮೈದಳೆಯುತ್ತದೆ.ಯಲ್ಲಾಪುರದಿಂದ ೨೦ ಕಿ.ಮೀ ದೂರ.ಜಲಪಾತದ ಬಳಿಯವರೆಗೂ ವಾಹನವನ್ನು ಒಯ್ಯಬಹುದು.ತಂಗುವ ವಿಚಾರವಿದ್ದರೆ ಮತ್ತೆ ಯಲ್ಲಾಪುರ ಪಟ್ಟಣಕ್ಕೆ ಬರಬೇಕು.


ಕಾರವಾರ-ಹುಬ್ಬಳ್ಳಿ ಮಾರ್ಗದಲ್ಲಿ ಯಲ್ಲಾಪುರಕ್ಕೆ ಪಶ್ಚಿಮದಲ್ಲಿ ಸುಮಾರು 3 ಕಿ.ಮೀ. ದೂರದಲ್ಲಿ ಕವಲೊಡೆಯುವುದು. ಈ ಕವಲಿನ ಎಡಮಾರ್ಗದಲ್ಲಿ ಸುಮಾರು 13ಕಿಮೀ ದೂರದಲ್ಲಿ ಮಾಗೋಡು ಗ್ರಾಮವಿದೆ. ಇದರ ಬಳಿಯೇ ಜಲಪಾತವಿದೆ. ಹಚ್ಚ ಹಸುರಿನ ಕಾಡಿನ ಮಧ್ಯೆ ಸುಮಾರು ಒಂದೂವರೆ ಕಿ.ಮೀ. ನಡೆದು ದಟ್ಟವಾಗಿ ಬೊಂಬುಗಳು ಬೆಳೆದಿರುವ ಬೆಟ್ಟವನ್ನು ಹತ್ತಿ ಮೇಲೆ ಪೂರ್ವಾಭಿಮುಖವಾಗಿ ನಿಂತರೆ ಬೇಡ್ತಿ ನದಿಯ ಮೇಲಿನ ಕಣಿವೆಯ ದೃಶ್ಯ ಕಾಣಬಹುದು. ಇಲ್ಲಿಂದ ನದಿ ಬೆಟ್ಟದ ಇಳಿಜಾರಿನಲ್ಲಿ ಮುಂದುವರಿದು ಸುಮಾರು 60 ಮೀ. ಕೆಳಕ್ಕೆ ಹಂತ ಹಂತವಾಗಿ ದುಮುಕಿ ಕೊಳದಂತೆ ಸೇರಿ ಮತ್ತೆ ಅಲ್ಲಿಂದ ಮುಂದೆ 184 ಮೀ. ದುಮುಕುವುದು. ಇತ್ತೀಚೆಗೆ ಜಲಪಾತದ ವೀಕ್ಷಣೆಗೆ ಅನುಕೂಲಿಸಲು ದುರ್ಗಮದಾರಿ ಸರಿಪಡಿಸಿ, ಪ್ರವಾಸಿಮಂದಿರ ಕಟ್ಟಿಸಿದ್ದಾರೆ. ಹಾಲಿನ ನೊರೆಯಂತೆ ನಯವಾಗಿ ಹರಿದಿಳಿವ ಈ ಜಲಪಾತದ ಸೌಂದರ್ಯ ಬೆರಗುಗೊಳಿಸುವಂಥದು.

ಸಿರ್ಸಿ-ಯಲ್ಲಾಪುರ ಮಾರ್ಗದಲ್ಲಿರುವ ಮಂಚಿಕೇರಿ ಗ್ರಾಮದಿಂದ 8 ಕಿ.ಮೀ. ದೂರ ಕಾಲುನಡಿಗೆಯಿಂದ ಸಾಗಿ ಮಾಗೋಡು ಜಲಪಾತದೆ ತಳಕ್ಕೆ ಹೋಗಬಹುದು. ಈ ಜಲಪಾತದ ಸಮೀಪದಲ್ಲಿರುವ ಗುಡ್ಡದಲ್ಲಿ ಚಕ್ರವ್ಯೂಹಾಕಾರದ ಒಂದು ಪುರಾತನ ಕೋಟೆ ಇದೆ. ಸ್ವಾದಿ ಅರಸ ತನ್ನ ಪ್ರೇಯಸಿಯ ರಕ್ಷಣೆಗಾಗಿ ಇದನ್ನು ಕಟ್ಟಿಸಿದ್ಧನೆನ್ನಲಾಗಿದೆ. ಈ ಕೋಟೆಗೆ ಹೊಲತಿ ಕೋಟೆ ಎಂಬ ಹೆಸರು ಈಗಲೂ ಇದೆ. ಈ ಕಾರಣಕ್ಕಾಗಿಯೇ ಮಾಗೋಡು ಜಲಪಾತಕ್ಕೆ ಹೊಲತಿ ಜೋಗ ಎಂದೂ ಹೆಸರಿದೆ. ಕೋಟೆಗೆ ಒಂದೇ ಪ್ರವೇಶದ್ವಾರವಿದ್ದು ಬೇಡ್ತಿ ಮತ್ತು ಶಾಲ್ಮಲಾ ಹೊಳೆಗಳು ಈ ಕೋಟೆಯನ್ನು ಮೂರು ಕಡೆಗಳಿಂದ ಸುತ್ತುವರಿದಿವೆ.

ಮಾಗೋಡು ಜಲಪಾತ
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಯಲ್ಲಾಪುರ

🔥 Trending searches on Wiki ಕನ್ನಡ:

ಕೆರೆಗೆ ಹಾರ ಕಥನಗೀತೆಭಾರತದ ಬುಡಕಟ್ಟು ಜನಾಂಗಗಳುಜೈಜಗದೀಶ್ದ್ವಿಗು ಸಮಾಸಸಂಶೋಧನೆಫ್ರೆಂಚ್ ಕ್ರಾಂತಿಮೈಸೂರು ಚಿತ್ರಕಲೆಭೂಮಿಯಕೃತ್ತುಉಕ್ತಲೇಖನಹುಲಿವಿಮರ್ಶೆಕೈವಾರ ತಾತಯ್ಯ ಯೋಗಿನಾರೇಯಣರುತಾರುಣ್ಯಕನ್ನಡ ವಿಶ್ವವಿದ್ಯಾಲಯಸಾಲ್ಮನ್‌ಯೇಸು ಕ್ರಿಸ್ತಹಣಕಾಸುಮನೆಶಿಕ್ಷಣಮೋಕ್ಷಗುಂಡಂ ವಿಶ್ವೇಶ್ವರಯ್ಯಭಾರತೀಯ ಅಂಚೆ ಸೇವೆಅಕ್ಷಾಂಶ ಮತ್ತು ರೇಖಾಂಶತೆಲುಗುಆಟಿಸಂಕನ್ನಡ ಕಾಗುಣಿತಆಲ್ಫೊನ್ಸೋ ಮಾವಿನ ಹಣ್ಣುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುದ್ವಾರಕೀಶ್ಚಿತ್ರದುರ್ಗ ಕೋಟೆಚಿಕವೀರ ರಾಜೇಂದ್ರ (ಗ್ರಂಥ)ಪ್ರಾಥಮಿಕ ಶಾಲೆಶರಣ್ (ನಟ)ಗೋಪಾಲಕೃಷ್ಣ ಅಡಿಗಕರ್ನಾಟಕದ ತಾಲೂಕುಗಳುಹುಣಸೆಯೂಟ್ಯೂಬ್‌ನಕ್ಷತ್ರವ್ಯಾಸರಾಯರುಪೊನ್ನರತನ್ ನಾವಲ್ ಟಾಟಾಸುಧಾ ಮೂರ್ತಿಈಚಲುಭಾರತದ ಸಂವಿಧಾನದ ೩೭೦ನೇ ವಿಧಿಉದಯವಾಣಿಮೇರಿ ಕ್ಯೂರಿಕನ್ನಡದಲ್ಲಿ ಕಾದಂಬರಿ ಸಾಹಿತ್ಯಸಹಕಾರಿ ಸಂಘಗಳುಜಿಂಕೆಕೈಲಾಸನಾಥರಾಷ್ಟ್ರೀಯ ಶಿಕ್ಷಣ ನೀತಿವಿನಾಯಕ ಕೃಷ್ಣ ಗೋಕಾಕಭಾಷೆಭಾರತ ಗಣರಾಜ್ಯದ ಇತಿಹಾಸಅಳತೆಗಳುದಕ್ಷಿಣ ಕನ್ನಡಕೇಂದ್ರ ಲೋಕ ಸೇವಾ ಆಯೋಗಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಹಳೇಬೀಡುಚೋಮನ ದುಡಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಪಂಜೆ ಮಂಗೇಶರಾಯ್ಗೋಪಾಲದಾಸರುವಿಜಯನಗರಭಾರತದ ಮುಖ್ಯ ನ್ಯಾಯಾಧೀಶರುಮಹಿಳೆ ಮತ್ತು ಭಾರತಕರ್ನಾಟಕ ಲೋಕಸೇವಾ ಆಯೋಗಯು.ಆರ್.ಅನಂತಮೂರ್ತಿಚಾಮರಾಜನಗರಕನ್ನಡ ಬರಹಗಾರ್ತಿಯರುಮಳೆಗಾಲಸಂಧಿಹೃದಯಜಾನಪದವಿಶ್ವ ಮಾನವ ಸಂದೇಶ🡆 More