ಮದನ್ ಲಾಲ್ ಧಿಂಗ್ರ

ಮದನ್ ಲಾಲ್ ಧಿಂಗ್ರ (ಸೆಪ್ಟೆಂಬರ್ 18, 1883 - ಆಗಸ್ಟ್ 17, 1909) ಭಾರತ ದೇಶದ ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು.

ಬಹುಶಃ ಬ್ರಿಟಿಷರ ನೆಲವಾದ ಇಂಗ್ಲೆಂಡಿನಲ್ಲಿ ಮರಣ ದಂಡನೆಗೆ ಒಳಗಾದ ಮೊದಲ ವ್ಯಕ್ತಿ ಮದನ್ ಲಾಲ್ ಧಿಂಗ್ರ. ಅವರು ತಮ್ಮನ್ನು ನೇಣಿಗೆ ಒಡ್ಡಿಕೊಂಡ ದಿನ ಆಗಸ್ಟ್ 17, 1909.

ಮದನ್ ಲಾಲ್ ಧಿಂಗ್ರ
ಮದನ್ ಲಾಲ್ ಧಿಂಗ್ರ
Bornಸೆಪ್ಟೆಂಬರ್ 18, 1883
ಅಮೃತಸರ, ಪಂಜಾಬು
Diedಆಗಸ್ಟ್ 17, 1909
ಲಂಡನ್ನಿನ ಪೆಂಟೋನ್ ವಿಲ್ಲೆ ಸೆರೆಮನೆ
Organizationಇಂಡಿಯಾ ಹೌಸ್
Movementಭಾರತ ಸ್ವಾತಂತ್ಯ್ರ ಚಳುವಳಿ

ಜೀವನ

ಮದನ್ ಲಾಲ್ ಧಿಂಗ್ರರು ಮನಸ್ಸು ಮಾಡಿದ್ದರೆ ಶ್ರೀಮಂತಿಕೆಯ ಸುಪ್ಪತ್ತಿಗೆಯಲ್ಲಿ ಜೀವಿಸಬಹುದಾಗಿತ್ತು. ಫೆಬ್ರುವರಿ ೧೮, ೧೮೮೩ರಂದು ಅಮೃತಸರದಲ್ಲಿ ಜನಿಸಿದ ಅವರದ್ದು ಅತ್ಯಂತ ಶ್ರೀಮಂತ ಕುಟುಂಬ. ಅವರ ತಂದೆ ದಿತ್ತ ಮಲ್ ಅವರು ಸರ್ಕಾರಿ ಹಿರಿಯ ವೈದ್ಯರಾಗಿ ನಿವೃತ್ತಿ ಪಡೆದಿದ್ದವರು. ಅಮೃತಸರದಲ್ಲಿ ಅವರ ಅಧಿಪತ್ಯದಲ್ಲಿ ೨೧ ದೊಡ್ಡ ಮನೆಗಳು, ೬ ಶ್ರೀಮಂತ ಬಂಗಲೆಗಳಿದ್ದುವಂತೆ. ಮುಂದೆ ದತ್ತ ಮಲ್ ಅವರು ಈಗಿನ ಪಾಕಿಸ್ತಾನದಲ್ಲಿರುವ ಸಹಿವಾಲ್ ಎಂಬ ಗ್ರಾಮಕ್ಕೆ ವಲಸೆ ಬಂದು ೧೮೫೦ರ ವರ್ಷದಲ್ಲಿ ನಿಧನರಾದರು. ಅಲ್ಲಿಯೂ ಅವರಿಗೆ ಪೂರ್ವಾರ್ಜಿತವಾಗಿ ಬಂದ ಅಪಾರ ಭೂಮಿ ಶ್ರೀಮಂತ ಬಂಗಲೆಗಳಿದ್ದವು. ಅಂದಿನ ದಿನಗಳಲ್ಲಿ ರಾಜರುಗಳ ಬಳಿಯೂ ಇಲ್ಲದಿದ್ದಂತಹ ಶ್ರೀಮಂತ ಕಾರು ಮತ್ತಿತರ ಭವ್ಯ ಶ್ರೀಮಂತಿಕೆ ಅವರ ಬಳಿ ಇತ್ತು. ಬ್ರಿಟಿಷ್ ಸರ್ಕಾರ ಅವರನ್ನು ರಾಜ್ ಸಾಹೇಬ ಎಂದೇ ಗೌರವಿಸುತ್ತಿತ್ತು. ಅವರಿಗೆ ಏಳು ಗಂಡು ಮಕ್ಕಳು ಮತ್ತು ಒಬ್ಬ ಪುತ್ರಿ ಇದ್ದರು. ಮೂರು ಗಂಡು ಮಕ್ಕಳು ವೈದ್ಯರಾದರೆ, ಮೂರು ಮಕ್ಕಳು ಬ್ಯಾರಿಸ್ಟರ್ ಪದವಿ ಪಡೆದವರು. ಇನ್ನೊಬ್ಬ ಪುತ್ರ ಮಾತ್ರ ಅಪವಾದ...... ಆತನೇ ಕ್ರಾಂತಿಕಾರಿಯಾದ ಮದನ್ ಲಾಲ್ ಧಿಂಗ್ರ.

ಓದಿನ ದಿನದಲ್ಲೇ ಹೋರಾಟ

ತನ್ನ ಓದಿನ ದಿನಗಳಲ್ಲಿ ಮದನ್ ಲಾಲ್ ಧಿಂಗ್ರ, ಲಾಲಾ ಲಜಪತ್ ರಾಯ್ ಮತ್ತು ಭಗತ್ ಸಿಂಗ್ ಅವರ ಚಿಕ್ಕಪ್ಪ ಅಜಿತ್ ಸಿಂಗ್ ಅವರುಗಳು ಸಂಘಟಿಸಿದ್ದ ‘ಪಗ್ಡಿ ಸಂಬಾಲ್ ಜತ್ತ’ ಎಂಬ ಚಳವಳಿಯಲ್ಲಿ ಪಾಲ್ಗೊಂಡು ಅದಕ್ಕಾಗಿ ದೈಹಿಕವಾಗಿ ಶ್ರಮಿಸಿದ. ಭಾರತೀಯ ಬಡತನ ಮತ್ತು ಕ್ಷಾಮದ ಪರಿಸ್ಥಿತಿಯ ಕುರಿತಾಗಿನ ತೀವ್ರವಾದ ಅಧ್ಯಯನವನ್ನು ಧಿಂಗ್ರ ಕೈಗೊಂಡ. ಸ್ವದೇಶಿ ಚಳುವಳಿಗೆ ಬದ್ಧನಾಗಿ ಲಾಹೋರಿನ ಕಾಲೇಜಿನ ದಿನಗಳಲ್ಲಿ ಬ್ರಿಟಿಷ್ ಸರ್ಕಾರ ವಿದೇಶಿ ಬಟ್ಟೆಯಲ್ಲಿ ತಯಾರಿಸಿದ ಕೋಟು ಧರಿಸಬೇಕೆಂದು ವಿಧಿಸಿದ್ದ ಶಿಸ್ತನ್ನು ವಿರೋಧಿಸಿ ಕಾಲೇಜಿನಿಂದಲೂ ಹೊರಹಾಕಲ್ಪಟ್ಟ. ಬ್ರಿಟಿಷರು ಕಾಲ್ಕಾ ಎಂಬಲ್ಲಿ ನಡೆಸುತ್ತಿದ್ದ ಕುದುರೆಗಾಡಿ ವ್ಯವಸ್ಥೆಯ ‘ಟಾಂಗಾ ಸರ್ವಿಸ್’ ಸಂಸ್ಥೆಯಲ್ಲಿ ಗುಮಾಸ್ತನಾದ. ಅಲ್ಲಿಯೂ ಕಾರ್ಮಿಕರ ಸಂಘಟನೆ ಮಾಡಲು ಹೋಗಿ ಕೆಲಸ ಕೆಲಸ ಕಳೆದುಕೊಂಡ. ಕೆಲವೊಂದು ಕಾಲ ಮುಂಬೈನಲ್ಲಿ ಅಲ್ಲಿ ಇಲ್ಲಿ ಕೆಲಸ ಮಾಡಿ ತನ್ನ ಹಿರಿಯ ಸಾಧರ ಡಾಕ್ಟರ್ ಬಿಹಾರಿ ಲಾಲ್ ಅವರ ಮಾತಿಗೆ ಗೌರವ ಕೊಟ್ಟು ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೊರಟ.

ಇಂಗ್ಲೆಂಡಿನಲ್ಲಿ ಚಳುವಳಿ

ಇಂಗ್ಲೆಂಡಿಗೆ ಬಂದ ಧಿಂಗ್ರ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ತೊಡಗಿದರೂ ಶೀಘ್ರದಲ್ಲಿ ಸ್ವಾತಂತ್ರ್ಯ ಚಳವಳಿಗೆ ಇಳಿದುಬಿಟ್ಟರು. ಶ್ಯಾಮ್ಜಿ ಕೃಷ್ಣ ವರ್ಮ ಮತ್ತು ವೀರ ಸಾವರ್ಕರ್ ಅವರ ಪ್ರಭಾವ ಧಿಂಗ್ರ ಅವರನ್ನು ಸೆಳೆದುಬಿಟ್ಟಿತು. ಒಂದೇ ವಯಸ್ಸಿನವರಾದ ಶ್ಯಾಮ್ಜಿ ಕೃಷ್ಣ ವರ್ಮ ಮತ್ತು ಧಿಂಗ್ರ ಜೊತೆ ಜೊತೆಯಾಗಿ ಸ್ವಾತಂತ್ರ್ಯ ಕಾರ್ಯಗಳಲ್ಲಿ ತೊಡಗಿದ್ದರು. ಆದರೆ ಬ್ರಿಟಿಷ್ ಸರ್ಕಾರದ ಕಿರುಕಳ ಹೆಚ್ಚಾಗಿ ಶ್ಯಾಮ್ಜಿ ವರ್ಮ ಪ್ಯಾರಿಸ್ಸಿಗೆ ವಲಸೆ ಹೋಗಬೇಕಾಯಿತು. ಇತ್ತ ವೀರ ಸಾವರ್ಕರ್ ಅವರಿಂದ ಪ್ರೋತ್ಸಾಹಿತರಾದ ಧಿಂಗ್ರ ಇಂಗ್ಲೆಂಡಿನಲ್ಲಿ ಭಾರತೀಯರನ್ನು ಗುಪ್ತಚರರಾಗಿ ಬಳಸುವುದರಲ್ಲಿ ನಿಷ್ಣಾತನಾಗಿದ್ದ ಸರ್ ವಿಲಿಯಮ್ ಹಟ್ಟ್ ಕರ್ಜನ್ ವೈಲಿ ಎಂಬ ಅಧಿಕಾರಿಯನ್ನು ಗುಂಡಿಕ್ಕೆ ಕೊಂದರು.

ನೇಣುಗಂಬಕ್ಕೆ ಹೋದ ವೀರ

ಸುಮಾರು ಒಂದೂವರೆ ತಿಂಗಳುಗಳ ಕಾಲ ವಿಚಾರಣೆಯ ನಂತರ ಆಗಸ್ಟ್ 17, 1909ರಂದು 26ರ ಹರೆಯದ ಧಿಂಗ್ರರನ್ನು ಗಲ್ಲಿಗೇರಿಸಲಾಯಿತು. ಭಗತ್ ಸಿಂಗರು ಭಾರತದ ಕ್ರಾಂತಿಕಾರಿಗಳ ಕುರಿತಾದ ಬರಹದಲ್ಲಿ ಮದನ್ ಲಾಲ್ ಧಿಂಗ್ರರನ್ನು ಗೌರವಪೂರ್ವಕವಾಗಿ ಸ್ಮರಿಸಿದ್ದಾರೆ.

Tags:

ಮದನ್ ಲಾಲ್ ಧಿಂಗ್ರ ಜೀವನಮದನ್ ಲಾಲ್ ಧಿಂಗ್ರ ಓದಿನ ದಿನದಲ್ಲೇ ಹೋರಾಟಮದನ್ ಲಾಲ್ ಧಿಂಗ್ರ ಇಂಗ್ಲೆಂಡಿನಲ್ಲಿ ಚಳುವಳಿಮದನ್ ಲಾಲ್ ಧಿಂಗ್ರ ನೇಣುಗಂಬಕ್ಕೆ ಹೋದ ವೀರಮದನ್ ಲಾಲ್ ಧಿಂಗ್ರ

🔥 Trending searches on Wiki ಕನ್ನಡ:

ಗಿರೀಶ್ ಕಾರ್ನಾಡ್ಕವಿರಾಜಮಾರ್ಗಬಿ.ಜಯಶ್ರೀಜೋಗಿ (ಚಲನಚಿತ್ರ)ವಾಣಿಜ್ಯ(ವ್ಯಾಪಾರ)ಋತುಗುಂಪುಗಳುಭಾರತದ ರಾಷ್ಟ್ರಪತಿಗಳ ಪಟ್ಟಿಪುತ್ತೂರುತೀರ್ಥಕ್ಷೇತ್ರನೇಮಿನಾಥ(ತೀರ್ಥಂಕರ)ಕಂಪ್ಯೂಟರ್ವಿಜಯನಗರವಿಜಯಪುರಆಸ್ಟ್ರೇಲಿಯಮುಹಮ್ಮದ್ಹಳೆಗನ್ನಡಕೂಡಲ ಸಂಗಮಕರ್ನಾಟಕದ ಶಾಸನಗಳುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕುರುಬಭಾವಗೀತೆರಾಘವಾಂಕಚಂಡಮಾರುತಭಾರತದ ಪ್ರಧಾನ ಮಂತ್ರಿಗಳ ಪಟ್ಟಿಸೌಗಂಧಿಕಾ ಪುಷ್ಪಬೇವುಮಧುಕೇಶ್ವರ ದೇವಾಲಯಅಮೃತಧಾರೆ (ಕನ್ನಡ ಧಾರಾವಾಹಿ)ಚಾರ್ಲಿ ಚಾಪ್ಲಿನ್ಅಲ್ಲಮ ಪ್ರಭುಕೀರ್ತನೆಪರಿಸರ ವ್ಯವಸ್ಥೆಅಂಬಿಗರ ಚೌಡಯ್ಯಪಶ್ಚಿಮ ಘಟ್ಟಗಳುಭಾರತೀಯ ನದಿಗಳ ಪಟ್ಟಿಪುಟ್ಟರಾಜ ಗವಾಯಿಕರ್ನಾಟಕದ ಮಹಾನಗರಪಾಲಿಕೆಗಳುಕಲ್ಪನಾಸಂಸಾರಆಪ್ತರಕ್ಷಕ (ಚಲನಚಿತ್ರ)ರಾಮನಗರಪರಿಸರ ಶಿಕ್ಷಣದಾದಾ ಭಾಯಿ ನವರೋಜಿದಸರಾಅನುಶ್ರೀಲೀಲಾವತಿಸೌರಮಂಡಲಅರಣ್ಯನಾಶಅವರ್ಗೀಯ ವ್ಯಂಜನಪಠ್ಯಪುಸ್ತಕಕೊನಾರ್ಕ್ಕರ್ನಾಟಕ ಜನಪದ ನೃತ್ಯಛತ್ತೀಸ್‌ಘಡ್ಸಂಶೋಧನೆವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಸಿದ್ದಲಿಂಗಯ್ಯ (ಕವಿ)ತ್ರಿಪದಿಮೋಕ್ಷಗುಂಡಂ ವಿಶ್ವೇಶ್ವರಯ್ಯಗೋವಿಂದ ಪೈಸಾರಜನಕಕರ್ಬೂಜಪುರಂದರದಾಸರೇಣುಕಕರ್ಮಧಾರಯ ಸಮಾಸಇಸ್ರೇಲ್ಅಚ್ಛೋದ ಸರೋವರಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಜೀವವೈವಿಧ್ಯನಾಗಚಂದ್ರಕುಂಟೆ ಬಿಲ್ಲೆಪ್ರಬಂಧ ರಚನೆಕಳ್ಳ ಕುಳ್ಳಓಂ (ಚಲನಚಿತ್ರ)ಸುಮಲತಾಭತ್ತ🡆 More