ಭೀಮ್‌ಬೇಟ್ಕಾದ ಶಿಲಾಶ್ರಯಗಳು

ಭೀಮ್‌ಬೇಟ್ಕಾದ ಶಿಲಾಶ್ರಯಗಳು ಭಾರತದ ಮಧ್ಯ ಪ್ರದೇಶ ರಾಜ್ಯದ ರಾಯ್‌ಸೇನ್ ಜಿಲ್ಲೆಯಲ್ಲಿರುವ ಪುರಾತತ್ವ ಕ್ಷೇತ್ರ.

ಇಲ್ಲಿನ ಶಿಲಾಶ್ರಯಗಳು (ಹೆಚ್ಚಿನವು ಗುಹೆಗಳು) ಭಾರತದ ಅತಿ ಪ್ರಾಚೀನ ಕಾಲದ ಜನಜೀವನದ ಕುರುಹುಗಳನ್ನು ಹೊಂದಿವೆ. ಇಲ್ಲಿ ಕಲ್ಲಿನ ಮೇಲೆ ರಚಿಸಲಾಗಿರುವ ವರ್ಣಚಿತ್ರಗಳು ಸುಮಾರು ೯೦೦೦ ವರ್ಷಗಳಷ್ಟು ಹಿಂದಿನ ಕಾಲದ ಶಿಲಾಯುಗಕ್ಕೆ ಸೇರಿದವೆಂದು ಅಭಿಪ್ರಾಯ ಪಡಲಾಗಿದೆ.

ಭೀಮ್‌ಬೇಟ್ಕಾದ ಶಿಲಾಶ್ರಯಗಳು*
UNESCO ವಿಶ್ವ ಪರಂಪರೆಯ ತಾಣ

ಭೀಮ್‌ಬೇಟ್ಕಾದ ಶಿಲಾಶ್ರಯಗಳು
ಭೀಮ್‌ಬೇಟ್ಕಾದಲ್ಲಿ ಶಿಲೆಯ ಮೇಲೆ ಚಿತ್ರಕಲೆ
ರಾಷ್ಟ್ರ ಭಾರತಭಾರತ
ತಾಣದ ವರ್ಗ ಸಾಂಸ್ಕೃತಿಕ
ಆಯ್ಕೆಯ ಮಾನದಂಡಗಳು (iii)(v)
ಆಕರ 925
ವಲಯ** ಏಷ್ಯಾ-ಪೆಸಿಫಿಕ್
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 2003  (27ನೆಯ ಅಧಿವೇಶನ)
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.

ಮಧ್ಯ ಪ್ರದೇಶದ ರಾಜಧಾನಿ ಭೋಪಾಲದ ದಕ್ಷಿಣಕ್ಕೆ ಸುಮಾರು ೪೫ ಕಿ.ಮೀ. ದೂರದಲ್ಲಿರುವ ಭೀಮ್‌ಬೇಟ್ಕಾದ ಶಿಲಾಶ್ರಯಗಳು ವಿಂಧ್ಯ ಪರ್ವತಗಳ ದಕ್ಷಿಣದ ಅಂಚಿನಲ್ಲಿವೆ. ಇಲ್ಲಿನ ಪರಿಸರದಲ್ಲಿ ನೈಸರ್ಗಿಕ ಸಂಪನ್ಮೂಲಗಳು ಹೇರಳವಾಗಿದ್ದು ಅಂದಿನ ಕಾಲದ ಮಾನವನ ಜೀವನಕ್ಕೆ ಬಹಳ ಅನುಕೂಲಕರ ಪರಿಸರವಿದ್ದಿತು.

ಗುಹೆಗಳು

ಭೀಮ್‌ಬೇಟ್ಕಾದ ಶಿಲಾಶ್ರಯಗಳನ್ನು ೧೮೮೮ರಲ್ಲಿ ಭಾರತೀಯ ಪುರಾತತ್ವ ಇಲಾಖೆಯು ಅಲ್ಲಿನ ಆದಿವಾಸಿಗಳು ನೀಡಿದ ಮಾಹಿತಿಯ ಆಧಾರದ ಮೇರೆಗೆ ಬೌದ್ಧ ಕ್ಷೇತ್ರವೆಂದು ಘೋಷಿಸಿತ್ತು. ಮುಂದೆ ಸಂಶೋಧಕರು ಇಲ್ಲಿ ಹೆಚ್ಚಿನ ಅಧ್ಯಯನ ನಡೆಸಿ ಇತಿಹಾಸಪೂರ್ವ ಕಾಲದ ಅನೇಕ ಗುಹೆಗಳನ್ನು ಬೆಳಕಿಗೆ ತಂದರು. ಇಂದು ಈ ಪ್ರದೇಶದಲ್ಲಿ ೭೦೦ಕ್ಕೂ ಹೆಚ್ಚಿನ ಸಂಖ್ಯೆಯ ಶಿಲಾಶ್ರಯಗಳನ್ನು ಗುರುತಿಸಲಾಗಿದ್ದು ಇವುಗಳ ಪಕಿ ೨೪೩ ಭೀಮ್‌ಬೇಟ್ಕಾ ಸಮೂಹಕ್ಕೆ ಮತ್ತು ೧೭೮ ಲಾಖಾ ಜುವಾರ್ ಸಮೂಹಕ್ಕೆ ಸೇರಿವೆ. ಇಲ್ಲಿ ವಿಶ್ವದ ಅತಿ ಪ್ರಾಚೀನ ಮಾನವ ನಿರ್ಮಿತ ಕಲ್ಲಿನ ಗೋಡೆ ಮತ್ತು ಕಲ್ಲಿನ ನೆಲಹಾಸುಗಳನ್ನು ಬೆಳಕಿಗೆ ತರಲಾಗಿದೆ. ಭೀಮ್‌ಬೇಟ್ಕಾದ ಗುಹೆಗಳಲ್ಲಿ ಅಂದಿನ ಕಾಲದ ಮಾನವಜೀವನಕ್ಕೆ ಸಂಬಂಧಿಸಿರುವ ವರ್ಣಚಿತ್ರಗಳನ್ನು ದೊಡ್ಡ ಸಂಖ್ಯೆಯಲ್ಲಿ ರಚಿಸಲಾಗಿದೆ. ಇವು ಶಿಶುವಿನ ಜನನ, ಸಮೂಹ ನೃತ್ಯ, ಪಾನಗೋಷ್ಠಿ, ಧಾರ್ಮಿಕ ಕ್ರಿಯೆಗಳು , ಬೇಟೆಯಾಡುವಿಕೆ ಮತ್ತು ದಫನಗಳನ್ನು ಕುರಿತಾಗಿವೆ. ಜೊತೆಗೆ ಸುತ್ತಲಿನ ಪರಿಸರವನ್ನು ಬಿಂಬಿಸುವ ಚಿತ್ರಗಳು ಸಹ ಬಹಳಷ್ಟಿವೆ. ಈ ಪ್ರದೇಶದಲ್ಲಿ ಕಂಡುಬರುತ್ತಿದ್ದ ವನ್ಯಪ್ರಾಣಿಗಳನ್ನು ಕುರಿತ ವರ್ಣಚಿತ್ರಗಳು ಅನೇಕ.

--

ಚಿತ್ರಗಳು

ಭೀಮ್‌ಬೇಟ್ಕಾದ ಶಿಲಾಶ್ರಯಗಳು 
ಶಿಲೆಯ ಮೇಲೆ ಒಂಡು ವರ್ಣಚಿತ್ರ
ಭೀಮ್‌ಬೇಟ್ಕಾದ ಶಿಲಾಶ್ರಯಗಳು 
ಮತ್ತೊಂದು ಚಿತ್ರ

ಇಲ್ಲಿನ ಚಿತ್ರಗಳಲ್ಲಿ ಕೆಂಪು ಮತ್ತು ಬಿಳಿ ಬಣ್ಣಗಳನ್ನು ಹೆಚ್ಚಾಗಿ ಬಳಸಲಾಗಿದೆ. ಉಳಿದಂತೆ ಹಸಿರು ಮತ್ತು ಹಳದಿ ಬಣ್ಣಗಳ ಬಳಕೆ ಸಹ ಮಾಡಲಾಗಿದೆ. ಸಾವಿರಾರು ವರ್ಷಗಳ ನಂತರ ಇಂದು ಸಹ ಇಲ್ಲಿನ ಚಿತ್ರಗಳ ಬಣ್ಣವು ಮಾಸದೆ ಉಳಿದಿರುವುದು ಒಂದು ಸೋಜಿಗದ ಸಂಗತಿಯಾಗಿದೆ. ಇಲ್ಲಿ ಬಳಲಾಗಿರುವ ಬಣ್ಣಗಳನ್ನು ಬಣ್ಣದ ಮಣ್ಣುಗಳು, ಸಸ್ಯಜನ್ಯ ವರ್ಣಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಮಿಶ್ರಮಾಡಿ ತಯಾರಿಸಲಾಯಿತೆಂದು ಅಭಿಪ್ರಾಯಪಡಲಾಗಿದೆ. ನಾರುಳ್ಳ ಸಸ್ಯಗಳ ಕಾಂಡವನ್ನು ಕುಂಚವನ್ನಾಗಿ ಬಳಸಿರಬಹುದು. ಸೂರ್ಯನ ತೀಕ್ಷ್ಣಬೆಳಕು ನೇರವಾಗಿ ಬೀಳದ ಸ್ಥಾನಗಳಲ್ಲಿ ಚಿತ್ರಗಳನ್ನು ರಚಿಸಿರುವುದು ಸಹ ಇಂದಿಗೂ ಇವುಗಳ ಬಣ್ಣ ಮಾಸದೆ ಇರುವುದಕ್ಕೊಂದು ಕಾರಣವಿರಬಹುದು.

ಇವನ್ನೂ ನೋಡಿ

ಮಧ್ಯ ಪ್ರದೇಶ

ವಿಶ್ವ ಪರಂಪರೆಯ ತಾಣ

ಬಾಹ್ಯ ಸಂಪರ್ಕಕೊಂಡಿಗಳು

ಭಾರತದ ವಿಶ್ವ ಪರಂಪರೆಯ ತಾಣಗಳು
ಅಜಂತಾ ಗುಹೆಗಳು| ಆಗ್ರಾ ಕೋಟೆ | ಎಲಿಫೆಂಟಾ ಗುಹೆಗಳು | ಎಲ್ಲೋರಾ ಗುಹೆಗಳು | ಕಾಜಿರಂಗ ರಾಷ್ಟ್ರೀಯ ಉದ್ಯಾನ | ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ | ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು | ಕೆಂಪು ಕೋಟೆ | ಕೇವಲಾದೇವ್ ರಾಷ್ಟ್ರೀಯ ಉದ್ಯಾನ | ಕೋನಾರ್ಕ್ ಸೂರ್ಯ ದೇವಾಲಯ | ಖಜುರಾಹೋದ ಸ್ಮಾರಕಗಳ ಸಮೂಹ | ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ | ಛತ್ರಪತಿ ಶಿವಾಜಿ ಟರ್ಮಿನಸ್ | ತಾಜ್ ಮಹಲ್ | ದಾರ್ಜೀಲಿಂಗ್ ಪರ್ವತ ರೈಲುಮಾರ್ಗ | ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು | ನೀಲಗಿರಿ ಪರ್ವತ ರೈಲುಮಾರ್ಗ | ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ | ಫತೇಪುರ್ ಸಿಕ್ರಿ | ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು | ಭೀಮ್‌ಬೇಟ್ಕಾದ ಶಿಲಾಶ್ರಯಗಳು | ಮಹಾ ಚೋಳ ದೇವಾಲಯಗಳು | ಮಹಾಬಲಿಪುರಂ‌ನ ಸ್ಮಾರಕಗಳ ಸಮೂಹ | ಮಹಾಬೋಧಿ ದೇವಾಲಯ ಸಂಕೀರ್ಣ | ಮಾನಸ್ ವನ್ಯಜೀವಿ ಧಾಮ | ಸಾಂಚಿಯ ಬೌದ್ಧ ಸ್ಮಾರಕಗಳು | ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ | ಹಂಪೆಯ ಸ್ಮಾರಕಗಳ ಸಮೂಹ | ಹುಮಾಯೂನನ ಸಮಾಧಿ

Tags:

ಭೀಮ್‌ಬೇಟ್ಕಾದ ಶಿಲಾಶ್ರಯಗಳು ಗುಹೆಗಳುಭೀಮ್‌ಬೇಟ್ಕಾದ ಶಿಲಾಶ್ರಯಗಳು ಚಿತ್ರಗಳುಭೀಮ್‌ಬೇಟ್ಕಾದ ಶಿಲಾಶ್ರಯಗಳು ಇವನ್ನೂ ನೋಡಿಭೀಮ್‌ಬೇಟ್ಕಾದ ಶಿಲಾಶ್ರಯಗಳು ಬಾಹ್ಯ ಸಂಪರ್ಕಕೊಂಡಿಗಳುಭೀಮ್‌ಬೇಟ್ಕಾದ ಶಿಲಾಶ್ರಯಗಳುಭಾರತಮಧ್ಯ ಪ್ರದೇಶ

🔥 Trending searches on Wiki ಕನ್ನಡ:

ಅರವಿಂದ ಮಾಲಗತ್ತಿಸೌರಮಂಡಲಕರ್ನಾಟಕದ ಹಬ್ಬಗಳುಚಂಡಮಾರುತಕ್ರಿಕೆಟ್ಜ್ವರಮಹಿಳೆ ಮತ್ತು ಭಾರತಸಂಧಿಮಾಟ - ಮಂತ್ರಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗುರುರಾಜ ಕರಜಗಿಶಿಶುನಾಳ ಶರೀಫರುವೈದೇಹಿತತ್ಪುರುಷ ಸಮಾಸಕನ್ನಡಪ್ರಭಬೆಂಗಳೂರು ನಗರ ಜಿಲ್ಲೆಜೋಗಿ (ಚಲನಚಿತ್ರ)ಇಮ್ಮಡಿ ಪುಲಿಕೇಶಿಪದಬಂಧರಾಮ ಮಂದಿರ, ಅಯೋಧ್ಯೆಮೌರ್ಯ ಸಾಮ್ರಾಜ್ಯಕರ್ನಾಟಕ ಯುದ್ಧಗಳುಶೈಕ್ಷಣಿಕ ಮನೋವಿಜ್ಞಾನಕರ್ನಾಟಕ ಐತಿಹಾಸಿಕ ಸ್ಥಳಗಳುಬೆಳಗಾವಿಆಯ್ಕಕ್ಕಿ ಮಾರಯ್ಯಬೇಲೂರುಭಾರತದ ಸಂವಿಧಾನ ರಚನಾ ಸಭೆನಾಗಚಂದ್ರಬೀಚಿವಿಜಯವಾಣಿಮೋಡ ಬಿತ್ತನೆಸರ್ಪ ಸುತ್ತುಹನುಮ ಜಯಂತಿಕಬಡ್ಡಿಜಿ.ಎಸ್.ಶಿವರುದ್ರಪ್ಪಮಾಸಮಾನವ ಹಕ್ಕುಗಳುಮಲೆನಾಡುವಿಜ್ಞಾನಸಾಲುಮರದ ತಿಮ್ಮಕ್ಕಭಾರತದ ರಾಜ್ಯಗಳ ಜನಸಂಖ್ಯೆವಿರೂಪಾಕ್ಷ ದೇವಾಲಯಹೃದಯಾಘಾತಶಾಲೆಜೀವವೈವಿಧ್ಯಮೆಕ್ಕೆ ಜೋಳಸಾವಯವ ಬೇಸಾಯಮೂತ್ರಪಿಂಡಬಿ.ಟಿ.ಲಲಿತಾ ನಾಯಕ್ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಸನ್ನತಿಜನಪದ ಕ್ರೀಡೆಗಳುವಿಧಿಬೈಗುಳಜಲ ಮೂಲಗಳುಸಹಕಾರಿ ಸಂಘಗಳುಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಸೇಡಿಯಾಪು ಕೃಷ್ಣಭಟ್ಟಮುಸುರಿ ಕೃಷ್ಣಮೂರ್ತಿದೇವತಾರ್ಚನ ವಿಧಿಕಾದಂಬರಿಸಾಮ್ರಾಟ್ ಅಶೋಕಪುಟ್ಟರಾಜ ಗವಾಯಿಬೆಸಗರಹಳ್ಳಿ ರಾಮಣ್ಣಭಾರತೀಯ ಸಂವಿಧಾನದ ತಿದ್ದುಪಡಿತತ್ಸಮ-ತದ್ಭವಭಾರತದ ವಿಜ್ಞಾನಿಗಳುಅನುಪಮಾ ನಿರಂಜನಛತ್ರಪತಿ ಶಿವಾಜಿಕರ್ಕಾಟಕ ರಾಶಿಡೊಳ್ಳು ಕುಣಿತಉಡುಪಿ ಜಿಲ್ಲೆಹಿ. ಚಿ. ಬೋರಲಿಂಗಯ್ಯದಿಕ್ಕುನಗರೀಕರಣವಾಸ್ತುಶಾಸ್ತ್ರಕೆ. ಎಸ್. ನಿಸಾರ್ ಅಹಮದ್ಬಲರಾಮ🡆 More