ಭಾಸ

ಭಾಸನು ಸಂಸ್ಕೃತ ಭಾಷೆಯ ಪ್ರಾಚೀನ ಕಾಲದ ಸುಪ್ರಸಿದ್ಧ ನಾಟಕಕಾರ .

ಆದರೆ ಇವನ ಬಗ್ಗೆ ನಮಗೆ ಹೆಚ್ಚೇನೂ ತಿಳಿದಿಲ್ಲ. ಕಾಳಿದಾಸನು ತನ್ನ ಕೃತಿಯೊಂದರಲ್ಲಿ ಭಾಸನ ಹೆಸರು ಹೇಳಿರುವದರಿಂದ ಭಾಸನು ಕಾಳಿದಾಸನಿಗೂ ಮೊದಲು ಇದ್ದನೆಂದು ನಮಗೆ ಗೊತ್ತಾಗುತ್ತದೆ. ಕಾಳಿದಾಸನು ಕ್ರಿ.ಪೂ. ಒಂದನೇ ಶತಮಾನದಿಂದ ಕ್ರಿ.ಶ. ನಾಲ್ಕನೇ ಶತಮಾನದವರೆಗಿನ ನಡುವಿನ ಅವಧಿಯಲ್ಲಿ ಇದ್ದನು . ಆದ್ದರಿಂದ ಭಾಸನು ಕ್ರಿ.ಪೂ. ೨ ನೇ ಶತಮಾನ ಮತ್ತು ಕ್ರಿ.ಶ. ೨ ನೇ ಶತಮಾನದ ನಡುವಿನ ಅವಧಿಯಲ್ಲಿ ಇದ್ದನು ಎಂದು ತಿಳಿಯಬಹುದು. ಭಾಸನ ಕೃತಿಗಳಲ್ಲಿ ಬಳಸಿದ ಭಾಷೆಯ ಆಧಾರದ ಮೇಲೆ ಅವನು ಕ್ರಿ.ಶ. ಐದನೇ ಶತಮಾನದಲ್ಲಿ ಇದ್ದನು ಎಂದೂ ಹೇಳುತ್ತಾರೆ. ಅವನ ನಾಟಕಗಳು ಶತಮಾನಗಳ ಕಾಲ ನಾಪತ್ತೆ ಆಗಿದ್ದವು. ಕ್ರಿ.ಶ. ೮೮೦-೯೨೦ ರ ನಡುವೆ ಹೆಸರಾಂತ ಕವಿ , ನಾಟಕಕಾರ ಮತ್ತು ವಿಮರ್ಶಕ ರಾಜಶೇಖರನು ಬರೆದ ಕಾವ್ಯಮೀಮಾಂಸೆಯಂತಹ ಇತರ ಕೃತಿಗಳಲ್ಲಿನ ಉಲ್ಲೇಖದ ಮೂಲಕವೇ ಅವನ ಬಗ್ಗೆ ತಿಳಿದಿತ್ತು. ಕಾವ್ಯಮೀಮಾಂಸೆಯಲ್ಲಿ ರಾಜಶೇಖರನು ಸ್ವಪ್ನವಾಸವದತ್ತ ನಾಟಕವನ್ನು ಭಾಸನದೆಂದು ಹೇಳುತ್ತಾನೆ.

ಭಾಸನ ನಾಟಕಗಳ ಶೋಧ

೧೯೧೨ ರಲ್ಲಿ ದಿವಂಗತ ಮಹಾಮಹೋಪಾಧ್ಯಾಯ ಗಣಪತಿ ಶಾಸ್ತ್ರಿಗಳಿಗೆ ಕೇರಳದ ತಿರುವನಂತಪುರದಲ್ಲಿ ಹದಿಮೂರು ನಾಟಕಗಳು ಸಿಕ್ಕವು. ಉಳಿದ ಶಾಸ್ತ್ರೀಯ(ಕ್ಲಾಸಿಕಲ್) ನಾಟಕಗಳ ರೀತಿಯಲ್ಲಿ ಅವುಗಳಲ್ಲೂ ಅವನ್ನು ರಚಿಸಿದವರ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ. ಆದರೆ ಸ್ವಪ್ನವಾಸವದತ್ತವು ಅವುಗಳಲ್ಲೊಂದಾಗಿತ್ತು. ಅವುಗಳಲ್ಲಿನ ಬರವಣಿಗೆಯ ಶೈಲಿ ಮತ್ತು ತಂತ್ರಗಾರಿಕೆಯ ರೀತಿಯನ್ನು ಗಮನಿಸಿಯೂ , ಸ್ವಪ್ನವಾಸವದತ್ತ ನಾಟಕವು ಭಾಸನದೆಂದು ಗೊತ್ತಾಗಿರುವದರಿಂದಲೂ ಈ ಎಲ್ಲ ನಾಟಕಗಳು ಭಾಸನವು ಎಂದು ಒಪ್ಪಲಾಯಿತು. ಕೆಲವರು ಈ ನಾಟಕಗಳೆಲ್ಲವನ್ನು ಭಾಸನು ಬರೆದಿರುವದರ ಬಗ್ಗೆ ಸಂದೇಹ ವ್ಯಕ್ತಪಡಿಸಿದರಾದರೂ ಕಾಲಕ್ರಮೇಣ ಈ ಎಲ್ಲ ನಾಟಕಗಳು ಭಾಸನವೇ ಎಂಬ ತೀರ್ಮಾನಕ್ಕೆ ಬರಲಾಯಿತು.

ಭಾಸನ ನಾಟಕಗಳು

ಭಾಸನು ನಾಟ್ಯಶಾಸ್ತ್ರದ ಎಲ್ಲ ನಿಯಮಗಳನ್ನು ಪಾಲಿಸಿಲ್ಲ. ನಾಟ್ಯಶಾಸ್ತ್ರದ ನಿಯಮಗಳನ್ನು ಅನುಸರಿಸದ, ಕಾಳಿದಾಸನ ನಂತರದ ನಾಟಕವಾವುದೂ ಸಿಕ್ಕಿಲ್ಲದುದರಿಂದ ಕಾಳಿದಾಸನಿಗಿಂತಲೂ ಈ ನಾಟಕಗಳು ಹಳೆಯವು ಎಂಬುದಕ್ಕೆ ಈ ವಿಷಯವೇ ರುಜುವಾತು ಎಂದು ಸ್ವೀಕರಿಸಲಾಗಿದೆ. ದೈಹಿಕ ಹಿಂಸೆಯನ್ನೊಳಗೊಂಡಂತಹ ದೃಶ್ಯಗಳನ್ನು ಊರುಭಂಗದಂತಹ ನಾಟಕಗಳಲ್ಲಿ ಭಾಸನು ಬರೆದಿದ್ದಾನೆ . ಇದನ್ನು ನಾಟ್ಯಶಾಸ್ತ್ರವು ಖಂಡಿತಾ ಅನುಮತಿಸುವದಿಲ್ಲ.

ಊರುಭಂಗ ಮತ್ತು ಕರ್ಣಭಾರ ಇವೆರಡೇ ಪ್ರಾಚೀನ ಭಾರತದ ದುರಂತ ಸಂಸ್ಕೃತನಾಟಕಗಳು. ದುರ್ಯೋಧನನು ಮಹಾಭಾರತದ ಖಳನಾಯಕನೆಂದೇ ಇದ್ದರೂ , ತನ್ನ ತೊಡೆಗಳನ್ನು ಮುರಿಸಿಕೊಂಡು , ಸಾವನ್ನು ಎದುರುನೋಡುತ್ತಾ , ತನ್ನ ಕೃತಿಗಳಿಗೆ ಪಶ್ಚಾತ್ತಾಪ ಪಡುವ ಅವನು 'ಊರುಭಂಗ'ದಲ್ಲಿ ನಾಯಕನೇ ಆಗಿದ್ದಾನೆ. ತನ್ನ ಕುಟುಂಬದವರೊಂದಿನ ಅವನ ಸಂಬಂಧಗಳನ್ನು ಬಹಳ ಕರುಣಾಜನಕವಾಗಿ ಭಾಸನು ಚಿತ್ರಿಸಿದ್ದಾನೆ. ಮಹಾಭಾರತವಾದರೋ ಅಂಥ ಪಶ್ಚಾತ್ತಾಪವನ್ನು ಸೂಚಿಸುವುದಿಲ್ಲ. ಕರ್ಣಭಾರವು ಮಹಾಭಾರತದ ಇನ್ನೊಂದು ಪ್ರಮುಖಪಾತ್ರವಾದ ಕರ್ಣನ ದುಃಖಮಯ ಅಂತ್ಯದ ಮುನ್ಸೂಚನೆಗಳೊಂದಿಗೆ ಕೊನೆಯಾಗುವದು. ಭಾರತದಲ್ಲಿ ಆರಂಭಿಕ ನಾಟಕಗಳು ನಾಟ್ಯಶಾಸ್ತ್ರದಿಂದ ಪ್ರೇರಿತವಾಗಿದ್ದು ದುಃಖಾಂತ್ಯವನ್ನು ಅನುಚಿತ ಎಂದು ಪರಿಗಣಿಸಿದವು.

ನಂತರದ ನಾಟಕಗಳಿಗೆ ಹೋಲಿಸಿದರೆ ಸಾಮಾನ್ಯವಾಗಿ ಈ ನಾಟಕಗಳು ಚಿಕ್ಕವಾಗಿದ್ದು ಭಾರತದ ಮಹಾಕಾವ್ಯಗಳಾದ ರಾಮಾಯಣ , ಮಹಾಭಾರತಗಳನ್ನು ಆಧರಿಸಿವೆ. ಭಾಸನು ಕಾವ್ಯಗಳ ನಾಯಕರ ಪರ ಇದ್ದರೂ ವಿರೋಧಿಗಳನ್ನು ಬಲು ಸಹಾನುಭೂತಿಯಿಂದ ಕಾಣುತ್ತಾನೆ. ಅದಕ್ಕಾಗಿ ಅವನು ತಕ್ಕಮಟ್ಟಿಗೆ ಸ್ವಾತಂತ್ರ್ಯವನ್ನೂ ವಹಿಸುತ್ತಾನೆ. ಪ್ರತಿಮಾನಾಟಕದಲ್ಲಿ ರಾಮಾಯಣದಲ್ಲಿ ಅನಾಹುತಗಳಿಗೆ ಕಾರಣವಾಗುವ ಕೈಕೇಯಿಯು ಉದಾತ್ತಧ್ಯೇಯವೊಂದರ ಸಾಧನೆಗಾಗಿ ಖಂಡನೆಭರ್ತ್ಸನೆಗಳನ್ನು ಸಹಿಸುವಂತೆ ತೋರಿಸಲಾಗಿದೆ.

ರಾಮಾಯಣವನ್ನು ಆಧರಿಸಿದ ನಾಟಕಗಳು

  • ಪ್ರತಿಮಾ-ನಾಟಕ
  • ಅಭಿಷೇಕ-ನತಕ

ಮಹಾಭಾರತವನ್ನು ಆಧರಿಸಿದ ನಾಟಕಗಳು

  • ಪಂಚರಾತ್ರಾ
  • ಮಧ್ಯಮವ್ಯಾಯೋಗ
  • ದೂತಘಟೋತ್ಕಚ
  • ದೂತವಾಕ್ಯ
  • ಊರುಭಂಗ
  • ಕರ್ಣಭಾರ

ಹರಿವಂಶದ ಮೇಲೆ ಆಧಾರಿತ

  • ಬಾಲಚರಿತ

ಬೃಹತ್ಕಥೆಯ ಆಧಾರದ ಮೇಲೆ ರಚಿತ:

  • ಪ್ರತಿಜ್ಞಾಯೌಗಂಧರಾಯಣ
  • ಸ್ವಪ್ನವಾಸವದತ್ತ
  • ಅವಿಮಾರಕ
  • ಚಾರುದತ್ತ

ಬಹುಶಃ ದೂತವಾಕ್ಯ ಮತ್ತು ಬಾಲಚರಿತ ಇವೆರಡೇ ಸಂಸ್ಕೃತದಲ್ಲಿ ಪ್ರಸಿದ್ಧ ನಾಟಕಾರನೊಬ್ಬ ಕೃಷ್ಣನನ್ನು ಪ್ರಮುಖ ಪಾತ್ರವಾಗಿಟ್ಟು ರಚಿಸಿದ ನಾಟಕಗಳು . ಅವನ ಉಳಿದ ನಾಟಕಗಳು ಕಾವ್ಯಗಳನ್ನು ಆಧರಿಸಿಲ್ಲ . ಅವಿಮಾರಕ ಒಂದು ರಮ್ಯಕಥಾನಕ. ಅಪೂರ್ಣವಾಗಿರುವ ದರಿದ್ರ ಚಾರುದತ್ತ ನಾಟಕದ ಕಥೆಯನ್ನು ಮುಂದುವರೆಸಿ ಶೂದ್ರಕನು ಮೃಚ್ಛಕಟಿಕ ನಾಟಕವನ್ನು ಬರೆದು ಅದು ಸುಪ್ರಸಿದ್ಧವಾಯಿತು . ಈ ನಾಟಕವನ್ನು ಆಧರಿಸಿಯೇ ಗಿರೀಶ್ ಕಾರ್ನಾಡ್ ಅವರು ಉತ್ಸವ್ ಎಂಬ ಚಲಚ್ಚಿತ್ರವನ್ನು ೧೯೮೪ರಲ್ಲಿ ನಿರ್ಮಿಸಿದರು.

ಅವನ ಅತ್ಯಂತ ಪ್ರಸಿದ್ಧ ನಾಟಕಗಳಾದ ಸ್ವಪ್ನವಾಸವದತ್ತ ಮತ್ತು ಪ್ರತಿಜ್ಙಾಯೌಗಂಧರಾಯಣ ಬುದ್ಧನ ಸಮಕಾಲೀನನಾದ ಉದಯನ ಎಂಬ ರಾಜನ ಸುತ್ತ ಇದ್ದ ದಂತಕತೆಗಳನ್ನಾಧರಿಸಿದ್ದವು ಆಗಿವೆ.

ಅವನ ನಾಟಕಗಳು ೨೦ನೇ ಶತಮಾನದಲ್ಲಿ ಬೆಳಕಿಗೆ ಬಂದರೂ ಅವುಗಳಲ್ಲಿ ಊರುಭಂಗ ಮತ್ತು ಕರ್ಣಭಾರನಾಟಕಗಳು ಇಂದಿನ ಅಭಿರುಚಿಗೆ ಹೊಂದುವಂತಿರುವದರಿಂದ ಜನಪ್ರಿಯವಾಗಿ ಸಂಸ್ಕೃತದಲ್ಲಿ , ಇತರ ಭಾಷೆಗಳಲ್ಲಿಯೂ ಅನುವಾದಗೊಂಡು ಪ್ರದರ್ಶನಗೊಳ್ಳುತ್ತಿವೆ. ಅನೇಕ ನಾಟಕಗಳ ಭಾಗಗಳು ಕೊಡಿಯಾಟ್ಟಂನಲ್ಲಿಯೂ ಪ್ರದರ್ಶನಗೊಳ್ಳುತ್ತಿವೆ.

Tags:

ಭಾಸ ನ ನಾಟಕಗಳ ಶೋಧಭಾಸ ನ ನಾಟಕಗಳುಭಾಸಕಾಳಿದಾಸರಾಜಶೇಖರಸಂಸ್ಕೃತ

🔥 Trending searches on Wiki ಕನ್ನಡ:

ಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಮೊಘಲ್ ಸಾಮ್ರಾಜ್ಯಸಿದ್ದಲಿಂಗಯ್ಯ (ಕವಿ)ಪಿತ್ತಕೋಶಕರ್ಣಕೊನಾರ್ಕ್ಎ.ಕೆ.ರಾಮಾನುಜನ್ಪರಿಸರ ರಕ್ಷಣೆವೆಂಕಟೇಶ್ವರ ದೇವಸ್ಥಾನಕನಕದಾಸರುಶಿವರಾಮ ಕಾರಂತಮಡಿಕೇರಿಭಾರತೀಯ ಶಾಸ್ತ್ರೀಯ ಸಂಗೀತಚಿಕ್ಕ ದೇವರಾಜಕರ್ನಾಟಕದ ಜಾನಪದ ಕಲೆಗಳುಗಂಗ (ರಾಜಮನೆತನ)ಕೆ. ಎಸ್. ನರಸಿಂಹಸ್ವಾಮಿಶೈಕ್ಷಣಿಕ ಮನೋವಿಜ್ಞಾನಶಬ್ದಕನ್ನಡದಲ್ಲಿ ವಚನ ಸಾಹಿತ್ಯಏಡ್ಸ್ ರೋಗಮಹಿಳೆ ಮತ್ತು ಭಾರತಕನ್ನಡ ಚಿತ್ರರಂಗಕಟ್ಟಡಸತ್ಯ (ಕನ್ನಡ ಧಾರಾವಾಹಿ)ತತ್ಪುರುಷ ಸಮಾಸಇಂಡಿಯನ್ ಪ್ರೀಮಿಯರ್ ಲೀಗ್ಮಾನವ ಅಸ್ಥಿಪಂಜರಕನ್ನಡ ಸಾಹಿತ್ಯ ಪರಿಷತ್ತುಮೈಸೂರು ಸಂಸ್ಥಾನಭೂಕಂಪರಾಷ್ತ್ರೀಯ ಐಕ್ಯತೆಮಾಸ್ತಿ ವೆಂಕಟೇಶ ಅಯ್ಯಂಗಾರ್ಸಂವಹನಸಾಲುಮರದ ತಿಮ್ಮಕ್ಕಮಹಾಜನಪದಗಳುಲೋಪಸಂಧಿಸಂಘಟಿಸುವಿಕೆರಾಜ್‌ಕುಮಾರ್ಡಿ.ಆರ್. ನಾಗರಾಜ್ದಾಳಿಂಬೆಮತದಾನಬಸನಗೌಡ ಪಾಟೀಲ(ಯತ್ನಾಳ)ಭಾರತೀಯ ನದಿಗಳ ಪಟ್ಟಿಎ.ಪಿ.ಜೆ.ಅಬ್ದುಲ್ ಕಲಾಂತ್ರಿವೇಣಿಜೀವಸತ್ವಗಳುಕನ್ನಡ ಸಾಹಿತ್ಯ ಸಮ್ಮೇಳನಚಿದಾನಂದ ಮೂರ್ತಿಶ್ಯೆಕ್ಷಣಿಕ ತಂತ್ರಜ್ಞಾನಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಹದಿಹರೆಯಸೂತ್ರದ ಗೊಂಬೆಯಾಟಕರ್ನಾಟಕ ಸಂಗೀತರಾಷ್ಟ್ರೀಯ ಶಿಕ್ಷಣ ನೀತಿದರ್ಶನ್ ತೂಗುದೀಪ್ಭತ್ತಸವರ್ಣದೀರ್ಘ ಸಂಧಿತ್ರಿಪದಿಎಂ. ಎಂ. ಕಲಬುರ್ಗಿತತ್ಸಮ-ತದ್ಭವಕಾದಂಬರಿಭಾರತೀಯ ಕಾವ್ಯ ಮೀಮಾಂಸೆರಾಷ್ಟ್ರಕೂಟಮೆಕ್ಕೆ ಜೋಳಮಂಗಳ (ಗ್ರಹ)ಯೋಗಹೂವುಪ್ರಾಥಮಿಕ ಶಾಲೆಡಿ.ಕೆ ಶಿವಕುಮಾರ್ಹನುಮಾನ್ ಚಾಲೀಸಗೋವಿಂದ ಪೈಕೋವಿಡ್-೧೯ಭಾರತದ ಸ್ವಾತಂತ್ರ್ಯ ದಿನಾಚರಣೆಹಳೆಗನ್ನಡಸಂಸದೀಯ ವ್ಯವಸ್ಥೆರಾವಣ🡆 More