ಭಾಷಾಂತರ

ಭಾಷಾಂತರ ಎಂದರೆ ಒಂದು ಭಾಷೆಯಲ್ಲಿನ ಮಾತು ಅಥವಾ ಬರವಣಿಗೆಯನ್ನು ಇನ್ನೊಂದು ಭಾಷೆಯಲ್ಲಿ ಸಮಾನ ಅರ್ಥ ನೀಡುವಂತೆ ಪರಿವರ್ತಿಸುವ ಒಂದು ಪ್ರಕ್ರಿಯೆ.

ಕನ್ನಡದಲ್ಲಿ ಇದಕ್ಕೆ ಸಂವಾದಿಯಾದ ಇತರ ಪದಗಳು: ಅನುವಾದ, ತರ್ಜುಮೆ, ಕನ್ನಡೀಕರಿಸು (ಬೇರೆ ಭಾಷೆಗಳಿಂದ ಕನ್ನಡಕ್ಕೆ ಭಾಷಾಂತರಿಸುವಾಗ), ಮರುಬರವಣಿಗೆ, ರೂಪಾಂತರ, ಅಳವಡಿಕೆ ಇತ್ಯಾದಿ.

ಭಾಷಾಂತರ
೩ ಭಾಷೆಗಳಲ್ಲಿ ಭಾಷಾಂತರವನ್ನು ಹೊಂದಿರುವ ಪ್ರಾಚೀನ ರೊಸೆಟ್ಟ ಕಲ್ಲು

ಭಾಷೆಗಳು ಆರಂಭವಾದಾಗಿನಿಂದ ಭಾಷಾಂತರವು ಆರಂಭಗೊಂಡಿದೆ. ಭಾಷೆ ಎಷ್ಟು ಹಳೆಯದೊ ಭಾಷಾಂತರವೂ ಅಷ್ಟೇ ಹಳೆಯದಾದ ಪ್ರಕ್ರಿಯೆ.

ರೋಮನ್ ಜಾಕೋಬ್ಸನ್ ಎನ್ನುವ ವಿದ್ವಾಂಸ ಮೂರು ರೀತಿಯಾಗಿ ಭಾಷಾಂತರಗಳನ್ನು ವರ್ಗೀಕರಣ ಮಾಡುತ್ತಾನೆ:

  1. ಆಂತರಿಕ ಭಾಷಾಂತರ: ಒಂದು ಭಾಷೆಯ ಒಳಗೇ ಅರ್ಥವು ಒಂದು ಪಠ್ಯದಿಂದ ಮತ್ತೊಂದು ಪಠ್ಯವಾಗಿ ರೂಪುಗೊಳ್ಳುವುದು. ಉದಾ: ಹಳೆಗನ್ನಡದ ಪಠ್ಯವೊಂದನ್ನು ಹೊಸಗನ್ನಡಕ್ಕೆ ಭಾಷಾಂತರಿಸುವುದು.
  2. ಅಂತರ್ ಭಾಷಾಂತರ: ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅರ್ಥವು ವರ್ಗಾವಣೆಯಾಗುವುದು. ಉದಾ. ಶೇಕ್ಸ್ಪಿಯರನ ನಾಟಕದ ಕನ್ನಡ ಭಾಷಾಂತರ.
  3. ಅಂತರ್-ಸಂಜ್ಞಾತ್ಮಕ ಭಾಷಾಂತರ. ಉದಾ. ಅರ್ಥವು ಒಂದು ಸಂಜ್ಞಾವ್ಯವಸ್ಥೆಯಿಂದ ಮತ್ತೊಂದು ಸಂಜ್ಞಾವ್ಯವಸ್ಥೆಗೆ ವರ್ಗಾವಣೆಯಾಗುವುದು. ಉದಾ. ಕನ್ನಡ ಕಾದಂಬರಿಯೊಂದು ಚಲನ ಚಿತ್ರವಾಗುವುದು, ದೇವಸ್ಥಾನಗಳಲ್ಲಿ ಧಾರ್ಮಿಕ ಕಥೆಗಳು ಶಿಲ್ಪಗಳಾಗಿ ರೂಪುಗೊಳ್ಳುವುದು.

Tags:

ಕನ್ನಡಭಾಷೆ

🔥 Trending searches on Wiki ಕನ್ನಡ:

ಅ.ನ.ಕೃಷ್ಣರಾಯಗೂಗಲ್ಬೇಲೂರುಕೇಶಿರಾಜಹಳೇಬೀಡುತಿಂಥಿಣಿ ಮೌನೇಶ್ವರಕುಕ್ಕೆ ಸುಬ್ರಹ್ಮಣ್ಯ ದೇವಾಲಯಜಗತ್ತಿನ ಅತಿ ಎತ್ತರದ ಪರ್ವತಗಳುಭೂಮಿಭಾರತದ ಸರ್ವೋಚ್ಛ ನ್ಯಾಯಾಲಯಈರುಳ್ಳಿಪಾಪಪು. ತಿ. ನರಸಿಂಹಾಚಾರ್ಬ್ಲಾಗ್ಜೀವಸತ್ವಗಳುಪರಿಸರ ರಕ್ಷಣೆಪರಶುರಾಮಮಧ್ವಾಚಾರ್ಯಭಾರತೀಯ ಭೂಸೇನೆಚೀನಾಸಿದ್ಧಯ್ಯ ಪುರಾಣಿಕಶೈಕ್ಷಣಿಕ ಮನೋವಿಜ್ಞಾನಸ್ಟಾರ್‌ಬಕ್ಸ್‌‌ತಮ್ಮಟಕಲ್ಲು ಶಾಸನಕೊರೋನಾವೈರಸ್ರಾವಣನವೋದಯಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ವ್ಯಂಜನಚದುರಂಗ (ಆಟ)ಭಾರತದ ಸ್ವಾತಂತ್ರ್ಯ ದಿನಾಚರಣೆಗ್ರಂಥ ಸಂಪಾದನೆಶುಂಠಿಮಂಗಳೂರುನಾಟಕದಲಿತಕಲಬುರಗಿಗಾದೆ ಮಾತುವಿಮರ್ಶೆಕರ್ನಾಟಕದಲ್ಲಿ ಪಂಚಾಯತ್ ರಾಜ್ವಾರ್ತಾ ಭಾರತಿಕೇಸರಿಖೊಖೊಮಾಧ್ಯಮಸಂಸ್ಕೃತರಾಜಕೀಯ ವಿಜ್ಞಾನಗೋತ್ರ ಮತ್ತು ಪ್ರವರಕೃಷ್ಣದೇವರಾಯಭಾರತದ ಉಪ ರಾಷ್ಟ್ರಪತಿಎಸ್.ಎಲ್. ಭೈರಪ್ಪಕಾಫಿರ್ತಮ್ಮಟ ಕಲ್ಲು ಶಾಸನಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಸೀತಾ ರಾಮಆರೋಗ್ಯಭಾರತದ ಮುಖ್ಯ ನ್ಯಾಯಾಧೀಶರುಹನುಮ ಜಯಂತಿಕಲೆಎರಡನೇ ಮಹಾಯುದ್ಧಕೊಡಗಿನ ಗೌರಮ್ಮತಿಗಳಾರಿ ಲಿಪಿಮಹಾವೀರವಿಧಾನಸೌಧಭಾರತೀಯ ನೌಕಾಪಡೆವಲ್ಲಭ್‌ಭಾಯಿ ಪಟೇಲ್ಕನಕದಾಸರುತಾಳೆಮರನದಿಬೇವುಕದಂಬ ಮನೆತನಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಬೇಬಿ ಶಾಮಿಲಿರಕ್ತಪಿಶಾಚಿಡಿ.ವಿ.ಗುಂಡಪ್ಪಶನಿ (ಗ್ರಹ)ಚೋಳ ವಂಶಆಲೂರು ವೆಂಕಟರಾಯರುಶ್ರೀ ಸಿದ್ದೇಶ್ವರ ಸ್ವಾಮಿಜಿಗಳು🡆 More