ಭಾರತದ ಜನಸಂಖ್ಯೆಯ ಬೆಳವಣಿಗೆ

ಪೀಠಿಕೆ

ಭಾರತದ ಜನಸಂಖ್ಯೆಯ

ಬೆಳವಣಿಗೆ ಪರಿಣಮಗಳು

  • ಭಾರತದ ಜನಸಂಖ್ಯೆಯ ಬೆಳವಣಿಗೆ ಒಂದು ಇತಿಹಾಸವನ್ನು ಹೊಂದಿದೆ
  • ಮೊದಲ ಬಾರಿಗೆ 1871-72 ರಲ್ಲಿ ಸಂಪೂರ್ಣ ಭಾರತದ ಜನಗಣತಿಗೆ ಪ್ರಯತ್ನಿಸಲಾಯಿತು. ಗಣತಿಯ ಸಿಬ್ಬಂದಿಗಳನ್ನು ತರಬೇತಿ ಕೊಟ್ಟು ನೇಮಿಸಿಕೊಳ್ಳಲಾಯಿತು.ಈ ಕೆಲಸಕ್ಕೆ ಬಂಗಾಳದ ಬೆವರಲೀ ಯೇ ಮೊದಲಾದ ಎಂಟು ಜನ ವಿದ್ವಾಂಸ ಅಧಿಕಾರಿಗಳ ತಂಡ , ದೇಶದ ಬೇರೆ ಬೇರೆ ವಿಭಾಗಗಳ ಉಸ್ತುವಾರಿ ವಹಿಸಿಕೊಂಡು ಗಣತಿ ನಡೆಸಿ ರಿಪೋರ್ಟ (ವರದಿ) ತಯಾರಿಸಿದರು. ಈಶಾನ್ಯ ರಾಜ್ಯಗಳ ಗಣತಿ 1853, ಅಯೋಧ್ಯೆ ರಾಜ್ಯ ದ ಗಣತಿ 1869, ಪಂಜಾಬಿನದು 1865 ಮತ್ತು 1868, ಹೈದರಾಬಾದು ರಾಜ್ಯದ ಗಣತಿ 1867, ಕೇಂದ್ರ ಪ್ರಾಂತ್ಯಗಳ (ಉತ್ತರ ಪ್ರದೇಶ) 1866 ರಲ್ಲಿ ನಡೆಸಲಾಯಿತು. ಬ್ರಿಟಷರ ಅಧೀನ ರಾಜ್ಯ ಗಳ ಜನಸಂಖ್ಯೆ 904,049 ; ಬ್ರಿಟಿಷರ ನೇರ ಆಡಳಿತದ ಪ್ರಾಂತಗಳ ಜನಸಂಖ್ಯೆ 190,563,048; ಇದರಲ್ಲಿ ಬರ್ಮಾದ 2,747,148 ಜನಸಂಖ್ಯೆ ಸೇರಿದೆ. ಓಟ್ಟು 19,14,67,097; ಇದರಲ್ಲಿ ಬರ್ಮದ ಜನಸಂಖ್ಯೆಯನ್ನು ಕಳೆದರೆ ಭಾರತದ ಜನಸಂಖ್ಯೆ 18,87,19,949 ಅಂದಾಜು ಭಾರತದ 1872 ರ ಜನಸಂಖ್ಯೆ.. ಗುರಿ ಉದ್ದೇಶ
  • 1881 ರಲ್ಲಿ ಇದ್ದ ಗಣತಿ ನಿಯಮಗಳನ್ನು ಬದಲಾಯಿಸಿ 1891ರಲ್ಲಿ , ಗಣತಿ ಕಮಿಶನರ್ ಜೆರ‍್ವೋಸಿಅಥೆಲ್‌ಸ್ಟೇನ್ ಬಾಯಿನ್ಸ್ ನು ಉದ್ಯೋಗ ಆಧಾರಿತ ಜಾತಿ ಪದ್ದತಿಯ ಆಧಾರದಮೇಲೆ ಬರ್ಮಾವನ್ನೂ ಸೇರಿಸಿ ಭಾರತದ ವಿವರವಾದ ಗಣತಿಯನ್ನು ಮಾಡಿದನು. ವಿವರವಾದ 300 ಪುಟಗಳ ವಿದ್ವತ್ಪೂರ್ಣ ವರದಿಯನ್ನು ತಯಾರಿಸಿ ಕೊಟ್ಟನು. ಅವನ ಈ ಅದ್ಭುತ ಕೆಲಸಕ್ಕೆ ಅವನಿಗೆ ಬ್ರಿಟಿಷ್ ಸರ್ಕಾರ ನೈಟ್ ಹುಡ್ ಪದವಿನೀಡಿ ಗೌರವಿಸಿತು. ಅದರಲ್ಲಿ 1891 ರಲ್ಲಿ ಇದ್ದ ಭಾರತದ ಜನಸಂಖ್ಯೆ 29,68,12,000. ಅದರಲ್ಲಿ ಯೋಧರು, ಶ್ರೀಮಂತರು , ಜಮೀನುದಾರರು -2,93,93,870 ; ವ್ಯವಸಾಯಗಾರರು 4,79,27,361 ಜನ; ವ್ಯವಸಾಯ ಕೂಲಿಕಾರರು 84,07,996 ಜನ (ಕೃಷಿ ಅವಲಂಬಿತರು-5,63,35,357) ; ಕುಶಲ ಕಲೆ ಕೆಲಸಗಾರರು 2,88,82,551 ಜನ; ಅಂದಿನ ಕಾಲದಲ್ಲೇ ಜ್ಯೋತಿಷ ಉದ್ಯೋಗಿಗಳು ಸುಮಾರು 3 ಲಕ್ಷ ಜನ ಇದ್ದರು. (ವಿದೇಶೀ ?) ಮುಸ್ಲಿಮರು 3,43,48,085. ಎಂದು ದಾಖಲಿಸಿದ್ದಾನೆ. ಭಾರತೀಯ ಕ್ರಿಶ್ಚಿಯನ್ನರು 18,07,092 ಜನ. ಯೂರೋಪಿಯನ್ನರು 1,66,428. ( ಇಂಗ್ಲಿಷ್ ವಿಭಾಗ ವಿಕಿಪೀಡಿಯಾ :1891 ಸೆನ್ಸಸ್ ಆಫ್ ಇಂಡಿಯಾ) ಉಪಸಂಹಾರ

[೧] Jervoise Athelstane Baines,[೨]

ಭಾರತದ ಜನ ಸಂಖ್ಯೆ

ವರ್ಷ ಒಟ್ಟು ಜನಸಂಖ್ಯೆ ಗ್ರಾಮ ನಗರ
1901- - -- 238,396,327 212,544,454 25,851,573
1911-–- 252,093,390 226,151,757 25,941,633
1921-–- 251,351,213 223,235,043 28,086,170
1931-– 278,977,238 245,521,249 33,455,686
1941-–- 318,660,580 275,507,283 44,153,297
1951-–- 362,088,090 298,644,381 62,443,709
1961-–- 439,234,771 360,298,168 78,936,603
1971-–- 548,159,652 439,045,675 109,113,677
1981- 683,329,097 623,866,550 159,462,547
1991-–- 846,302,688 628,691,676 217,611,012
2001- 1,028737,436 742,490,639 386,119,689

೧೯೦೧ ಮತ್ತು ನಂತರದ ಗಣತಿ

ವರ್ಷ ಒಟ್ಟು ಜನಸಂಖ್ಯೆ ಗ್ರಾಮ ನಗರ
2011– 1,210,193,422 83,30,87,662 37,71,05,760
2011 ಶೇಕಡಾ -> 68.84 ಗ್ರಾಮ 31.16ನಗರ
2011 1,21,01,93,422 ಪುರುಷರು-62,37,24,248 ಮಹಿಳೆಯರು-58,64,69,174
2011 1,21,01,93,422 1000 ಪುರುಷರಿಗೆ 943 ಮಹಿಳೆಯರು
2011 ಏರಿಕೆ-> 17.6% (ಮುಸ್ಲಿಮರು ಅಂದಾಜು 19.4%)

ಟಿಪ್ಪಣಿಗಳು


  • 1)ಉತ್ತರ ಪ್ರದೇಶ ಹೆಚ್ಚು ಜನಸಂಖ್ಯೆ ಯುಳ್ಳ ರಾಜ್ಯ -19.9 ಕೋಟಿ.
  • 2)ಭಾರತವು ಜಗತ್ತಿನ 2.4 ರಷ್ಟು (ಜಗತ್ತಿನ 135.79 ಮಿಲಿಯ ಚದರ ಕಿ.ಮೀ.ದಲ್ಲಿ ) ಪ್ರದೇಶವನ್ನು ಹೊಂದಿದ್ದರೂ ಭಾರತ ಜಗತ್ತಿನ 17.5 % ಜನಸಂಖ್ಯೆ ಹೊಂದಿದೆ ; ಅದೇ ಚೀನಾ ಜಗತ್ತಿನ 19.4% ಜನಸಂಖ್ಯೆ ಹೊಂದಿದೆ.ಆದರೆ ಅದು ಭಾರತದ ಸುಮಾರು ಒಂದೂವರೆಯಷ್ಟು ದೊಡ್ಡದು
  • 3)ಸಾಕ್ಷರತೆ 2001 ರ 64.83ರಿಂದ 74.04ಕ್ಕೆ ಏರಿದೆ
  • 4)ಭಾರತವು 1951ರಲ್ಲಿ 50.8 ಮಿಲಿಯ ಟನ್ ಆಹಾರ ಧಾನ್ಯ ಉತ್ಪಾದಿಸಿದರೆ 2011 ರಲ್ಲಿ 218.2 ಮಿಲಿಯ ಟನ್ ಆಹಾರ ಉತ್ಪಾದಿಸಿದೆ
  • 5) 2001 ರಿಂದ 2011 ರ 10ವರ್ಷದ ಅವಧಿಯಲ್ಲಿ ಜನಸಂಖ್ಯೆಯ ಏರಿಕೆಯ ದರ 21.5% ರಿಂದ ದರ 17.5 ಕ್ಕೆ ಇಳಿದಿರುವುದು ವಿಶೇಷ. ಚೀನಾದ ಜನಸಂಖ್ಯೆಯ ಏರಿಕೆಯ ದರ 0.53 .
  • 6)1901ರಲ್ಲಿ ಜಗತ್ತಿನಲ್ಲಿ 1.6 ಬಿಲಿಯನ್ -160ಕೋಟಿಯಿದ್ದ ಜನ ಸಂಖ್ಯೆ 2011 ರ ಕಾಲಕ್ಕೆ 610ಕೋಟಿಗೆ ಏರಿದೆ. ರಷ್ಯಾದ ಜನಸಂಖ್ಯೆ ಇಳಿಕೆ ಯಾಗುತ್ತಿದ್ದರೆ ಜನಸಂಖ್ಯೆ ಏರುವಿಕೆಯಲ್ಲಿ ನೈಜೀರಿಯಾ ಪಾಕೀಸ್ತಾನದ ನಂತರ ಜಗತ್ತಿನಲ್ಲಿ ಭಾರತ 3ನೆಯ ಸ್ಸ್ಥಾನದಲ್ಲಿದೆ
  • 7)2001 ರಿಂದ 2011 ರ 10ವರ್ಷದ ಅವಧಿಯಲ್ಲಿ ಏರಿದ ಸುಮಾರು 18 ಕೋಟಿ ಜನಸಂಖ್ಯೆ ಬ್ರೆಜಿಲ್ ದೇಶದ ಒಟ್ಟು ಜನಸಂಖ್ಯೆಯ ಹತ್ತಿರ ಹೋಗುತ್ತದೆ.
  • 8)ಭಾರತದ ಜನಸಂಖ್ಯೆಯಲ್ಲಿ ಪುರಷರ ಮತ್ತು ಮಹಿಳೆಯರ ಅನುಪಾತ , 1000 ಪುರುಷರಿಗೆ 943 ಮಹಿಳೆಯರಿದ್ದಾರೆ. ಗ್ರಾಮೀಣ ಜನಸಂಖ್ಯೆ ಸ್ವಾತಂತ್ರ್ಯ ಪೂರ್ವದಲ್ಲಿ ಶೇಕಡ 72.1 ಇದ್ದದ್ದು 2011 ರಲ್ಲಿ 68.84 ಕ್ಕೆ ಇಳಿದಿದೆ. ನಗರ ದ ಜನಸಂಖ್ಯೆ ಶೇ. 27.81 ಇದ್ದುದು ಈಗ 31.16 ಕ್ಕೆ ಏರಿದೆ.
  • 1921ರಲ್ಲಿ ಪ್ರತೀ ಭಾರತೀಯನ ಸರಾಸರಿ ಆಯುಷ್ಯ 29 ಇತ್ತು. 2001/ 2011 ರಲ್ಲಿ ಸರಾಸರಿ ಆಯುಷ್ಯ 64; ಜಗತ್ತಿನ ಜನರ ಸರಾಸರಿ ಆಯುಷ್ಯ 66.26ವರ್ಷಗಳು.
  • ವಿ.ಸೂ. ಸರಾಸರಿ ಆಯುಷ್ಯ - ಬದುಕಿರುವವರ ಆಯುಷ್ಯ ವನ್ನು ಸರಾಸರಿ ಮಾವುವುದು- ಹೆಚ್ಚಿನ ಆಯುಷ್ಯ ದವರು ಹೆಚ್ಚು ಜನರಿದ್ದರೆ ಸರಾಸರಿ ಆಯು ಹೆಚ್ಚು ಬರುತ್ತದೆ. ; ಬುದುಕಿರುವವರಲ್ಲಿ ವಯಸ್ಸಾದವರು ಹೆಚ್ಚಿದ್ದು ಯುವಕರು ಬಾಲಕರು ಕಡಿಮೆ ಇದ್ದರೆ ಸರಾಸರಿ ವಯಸ್ಸು ಹೆಚ್ಚು ಬರುತ್ತದೆ- ಬಾಲಕರು ,ಯುವಕರು ಹೆಚ್ಚು ಜನರಿದ್ದು ವಯಸ್ಸಾದವರು ಕಡಿಮೆ ಇದ್ದರೆ ಸರಾಸರಿ ವಯಸ್ಸು ಕಡಿಮೆ ಬರುತ್ತದೆ.

ಜನಸಂಖ್ಯಾ ವಿವರ ಮತ್ತು ಹೋಲಿಕೆ :


  • 1947 ರಲ್ಲಿ ಭಾರತ ವಿಭಜನೆ ಗೊಂಡಾಗ ವಿಭಜಿತ ಭಾರತದ ಜನಸಂಖ್ಯೆ ಕೇವಲ 350 ಮಿಲಿಯನ್. (35 ಕೋಟಿ) 1947 ಪೂರ್ವ ಪಾಕೀಸ್ತಾನ 4.26 ಮಿಲಿಯನ್ +3.40ಮಿ ಪಶ್ಚಿಮ ಪಾಕೀಸ್ತಾನ =(7ಕೋಟಿ 66 ಲಕ್ಷ)
  • 1947 ರಲ್ಲಿ ಜನಸಂಖ್ಯೆ ಪಶ್ಚಿಮ + ಪೂರ್ವ ಪಾಕೀಸ್ತಾನ :76 ಮಿಲಿಯನ್ ( 7 ಕೋಟಿ 66 ಲಕ್ಷ) ಪಶ್ಚಿಮ ಪಾಕೀಸ್ತಾನ 3400000 ಪೂರ್ವ ಪಾಕೀಸ್ತಾನ 42600000
  • 1967 ರಲ್ಲಿ ಜನಸಂಖ್ಯೆ ಪಶ್ಚಿಮ + ಪೂರ್ವ ಪಾಕೀಸ್ತಾನ :94 ಮಿಲಿಯನ್ ಪಶ್ಚಿಮ ಪಾಕೀಸ್ತಾನ 43000000 ಪೂರ್ವ ಪಾಕೀಸ್ತಾನ 51000000
  • 2011 / 2012 ರಲ್ಲಿ ಪಾಕೀಸ್ತಾನ ಮತ್ತು ಬಾಂಗ್ಲಾದೇಶ ಒಟ್ಟು ಜನಸಂಖ್ಯೆ 331 ಮಿಲಿಯನ್ :(33 ಕೋಟಿ 10ಲಕ್ಷ ! )

ಪಶ್ಚಿಮ ಪಾಕೀಸ್ತಾನ (170,000000) 180440005; ಪೂರ್ವ ಪಾಕೀಸ್ತಾನ 161,083,804/ 161083804

  • 1947ವಿಭಜಿತ ಭಾರತದ ಜನಸಂಖ್ಯೆ 350,000,000 (35ಕೋಟಿ)
  • 2011 (ವಿಭಜಿತ) ಈಗಿನ ಭಾರತದ ಜನಸಂಖ್ಯೆ 121,01,93,422 (121 ಕೋಟಿ -2011 ರ ಜನಗಣತಿ)

೨೦೦೧/2001 ರ ಜನಗಣತಿ

ಮತ (/2001 ರ ಜನಗಣತಿ ಜನಸಂಖ್ಯೆ ಶೇಕಡಾವಾರು
ಎಲ್ಲಾಮತ 102,86,10,328 100.00%
ಹಿಂದುಗಳು 82,75,78,868 80.5%
ಮುಸ್ಲಿಮರು 13,81,88,240 13.4%
ಕ್ರಿಸ್ಚಿಯನ್ನರು 24,08,00,162. 3%
ಸಿಖ್ಖರು 19,21,57,301. 9%
ಬೌದ್ಧರು 7,95,52,070. 8%
ಜೈನರು 4,22,50,530. 4%
ಬಹಾಯಿಗಳು(Baháís) 19,53 112 0.18%
ಇತರೆ 4,68,65,880. 3.2%
ಮತ ತಿಳಿಸದವರು 72,75,880. 1%

2011ರ ಜನಗಣತಿ

        2011ರ ಜನಗಣತಿ>>
  • ದೇಶದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಸಂಖ್ಯೆ 10 ವರ್ಷಗಳ ಅವಧಿಯಲ್ಲಿ ಶೇ.13.4ರಿಂದ ಶೇ.14.2ಕ್ಕೆ ಏರಿಕೆ ಆಗಿದೆ.
  • ಧಾರ್ಮಿಕ ಸಮುದಾಯಗಳ ಜನಸಂಖ್ಯೆ ಕುರಿತ ಇತ್ತೀಚಿನ ಗಣತಿಯ ಅಂಕಿ ಅಂಶ ವರದಿ ಸದ್ಯದಲ್ಲೇ ಬಿಡುಗಡೆ ಆಗಲಿದ್ದು, ಅದರಂತೆ 2001 ಹಾಗೂ 2011ರ ಅವಧಿಯಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.24ರಷ್ಟು ಹೆಚ್ಚಿದೆ.
  • ಆದರೆ, ಕಳೆದ ದಶಕಕ್ಕೆ ಹೋಲಿಸಿದರೆ ಮುಸ್ಲಿಮರ ಜನಸಂಖ್ಯೆ ಏರಿಕೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ.
  • 1991 ಹಾಗೂ 2001ರ ಅವಧಿಯಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.29ರಷ್ಟಿತ್ತು. ಆದರೂ, ದಶಕದ ರಾಷ್ಟ್ರೀಯ ಸರಾಸರಿಯಲ್ಲಿ ಶೇ.18ರಷ್ಟು ಏರಿಕೆ ಕಂಡಿದೆ.
  • ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಸಂಖ್ಯೆ ಅಸ್ಸಾಂನಲ್ಲಿ ಕ್ಷಿಪ್ರಗತಿಯಲ್ಲಿ ಹೆಚ್ಚಳವಾಗಿದೆ. 2001ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.30.9ರಷ್ಟಿದ್ದ ಸಂಖ್ಯೆ ಮುಂದಿನ ದಶಕದಲ್ಲಿ ಶೇ.34.2ರಷ್ಟು ಏರಿಕೆ ಕಂಡಿದೆ. ಬಾಂಗ್ಲಾದೇಶದ ಅಕ್ರಮ ವಲಸಿಗರಿಂದ ರಾಜ್ಯ ಸಂಕಷ್ಟ ಎದುರಿಸುವಂತಾಗಿದೆ.
  • ಬಾಂಗ್ಲಾದೇಶಿಯರ ಅಕ್ರಮ ವಲಸೆಯಿಂದ ನಲುಗಿರುವ ಮತ್ತೊಂದು ರಾಜ್ಯ ಪಶ್ಚಿಮ ಬಂಗಾಳ. ಈ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಸಂಖ್ಯೆ 2001ರಿಂದ 2011ಕ್ಕೆ ಶೇ.25.2 ರಿಂದ ಶೇ. 27.1ಕ್ಕೆ ಏರಿದೆ. ರಾಷ್ಟ್ರೀಯ ಸರಾಸರಿಗಿಂತ ದುಪ್ಪಟ್ಟು ಹೆಚ್ಚಳ ಕಂಡಿದೆ.
  • ಉತ್ತರಾಖಂಡದಲ್ಲೂ, ಮುಸ್ಲಿಮರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಶೇ.11.9 ರಿಂದ ಶೇ.13.9ಕ್ಕೆ ಏರಿದೆ. ಅಂದರೆ , 2001 ಹಾಗೂ 2011ರ ಅವಧಿಯಲ್ಲಿ ರಾಷ್ಟ್ರಮಟ್ಟದಲ್ಲಿ ಶೇ.0.8ರಷ್ಟು ಏರಿಕೆ ಆಗಿದ್ದು, ರಾಜ್ಯದಲ್ಲಿ ಶೇ.2ರಷ್ಟು ಹೆಚ್ಚಳ ಆಗಿದೆ.
  • 2011ರ ಗಣತಿ ಪ್ರಕಾರ ಮುಸ್ಲಿಮರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವ ಇತರ ರಾಜ್ಯಗಳು, ಕೇರಳ (ಶೇ.24.7ರಿಂದ ಶೇ.26.6), ಗೋವಾ (ಶೇ.6.8ರಿಂದ ಶೇ.8.4) ಜಮ್ಮು ಕಾಶ್ಮೀರ (ಶೆ.67ರಿಂದ ಶೇ.68.3) ಹರಿಯಾಣಾ (ಶೇ.5.8ರಿಂದ ಶೇ.7) ದಿಲ್ಲಿ (ಶೇ.11.7 ರಿಂದ ಶೇ.12.9).
  • ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಸಂಖ್ಯೆ ಇಳಿಮುಖವಾಗಿರುವ ಏಕೈಕ ರಾಜ್ಯ ಮಣಿಪುರ. ರಾಜ್ಯದಲ್ಲಿ ಮುಸ್ಲಿಮರ ಸಂಖ್ಯೆ ಶೇ.0.4ರಷ್ಟು ಕುಸಿದಿದೆ.[೪]

ಅಲ್ಪ ಅಂಖ್ಯಾತ ವರದಿ 2011

    ಅಲ್ಪ ಅಂಖ್ಯಾತ ವರದಿ--ಮುಸ್ಲಿಮರ ಜನಸಂಖ್ಯೆ--ಶೇಕಡಾವಾರು||ರಾಜ್ಯವಾರು //ಬೆಳವಣಿಗೆ ದರ ಶೇಕಡಾ 0.8% ರಷ್ಟು ಹೆಚ್ಚು||

2001 ಶೇ. 13.4 // 2011ಶೇ.14.2= ಬೆಳವಣಿಗೆ ದರ 0.8 ಶೇಕಡಾ

ರಾಜ್ಯಗಳು 2001 2011- - :ಶೇಕಡಾದರ ರಾಜ್ಯಗಳು 2001 2011 :-
ಆಂಧ್ರ ಪ್ರದೇಶ 9.2 9.6 0.4 ಮಹಾರಾಷ್ಟ್ರ 10.6 11.5 11.5
ಅರುಣಾಚಲ ಪ್ರದೇಶ 1.9 2.0 0.1 ಮಣಿಪುರ 8.8 8.4 (-)0.4
ಅಸ್ಸಾಮ್ 30.9 34.2 3.3 ಮೇಘಾಲಯ 4.3 4.4 0.1
ಬಿಹಾರ್ 16.5 16.9 0.3 ಮಿಝೋರಾಮ್ 1.1 1.4 0.3
ಚತ್ತೀಸ್‍ಗಢ 2.2 2.2 00 ನಾಗಾಲ್ಯಾಂಡ್ 1.8 2.5 0.7
ಗೋವ 6.8 8.4 1.6 ಒಡಿಶಾ 2.2 2.1 0.1
ಗುಜರಾತ್ 9.1 9.7 0.6 ಪಂಜಾಬ್ 1.6 1.9 0.3
ಹರ್ಯಾಣಾ 5.8 7.0 .1.2 ರಾಜಸ್ಥಾನ 8.5 9.1 0.6
ಹಿಮಾಚಲ ಪ್ರದೇಶ 2.೦ 2.2 ೦.2 ಸಿಕ್ಕಿಮ್ 1.4 1.6 0.2
ಜಮ್ಮು ಮತ್ತು ಕಾಶ್ಮೀರ 67.00 68.3 1.3 ತಮಿಳುನಾಡು 5.6 5.9 0.3
ಜಾರ್ಖಂಡ್1 3.8 14..5 ತ್ರಿಪುರ 8.0 8.6 0.6
ಕರ್ನಾಟಕ 12.2 12..9 0.7 ಉತ್ತರಾಂಚಲ 11.9 13.9 .2.0
ಕೇರಳ 24.7 26.6 1.9 ಉತ್ತರ ಪ್ರದೇಶ 18.5 19..3. 0.8
ಮಧ್ಯ ಪ್ರದೇಶ 6.4 6.6 0.2 ಪಶ್ಚಿಮ ಬಂಗಾಳ 25.00 27. 1.8
ದೆಹಲಿ 11.7 12.9 1.2 ತೆಲಂಗಾಣ 9.2 9.6 0.4
ಕೇಂದ್ರಾಡಳಿತ > > > ಪ್ರದೇಶಗಳು > < >
ಅಂಡಮಾನ್ ಮತ್ತು ನಿಕೋಬಾರ್ 8.2 8.4 ೦.2 ದಾದ್ರಾ ಮತ್ತು ನಗರ್ ಹವೇಲಿ 3.0 3.8 0.8
ಚಂಡೀಗಢ 3.9 4.8 00 ಪುದುಚೆರ್ರಿ 6.1 6.1 00
ಡಾಮನ್ ಮತ್ತು ಡಿಯು 7.8 7.8 00 ಲಕ್ಷದ್ವೀಪ 95.5 96.2

2050ಕ್ಕೆ ಭಾರತದ ಜನಸಂಖ್ಯೆ

  • ಫ್ರೆಂಚ್‌ ಜನಸಂಖ್ಯಾ ಅಧ್ಯಯನ ಸಂಸ್ಥೆ ವರದಿ((ಪಿಟಿಐ)3-10-2013.):
  • ಪ್ರಪಂಚದ ಒಟ್ಟು ಜನಸಂಖ್ಯೆ -1800 ರಲ್ಲಿ ---180 ಕೋಟಿ (?)
  • ಪ್ರಪಂಚದ ಒಟ್ಟು ಜನಸಂಖ್ಯೆ --2013 -710 ಕೋಟಿ ; 2050 ಕ್ಕೆ --970 ಕೋಟಿ.
  • ಭಾರತ ಒಟ್ಟು ಜನಸಂಖ್ಯೆ -- 2013 -123 ಕೋಟಿ : 2050 ಕ್ಕೆ --160 ಕೋಟಿ
ವರ್ಷ ಶಿರೋಲೇಖ 2013 2050
ಪ್ರಪಂಚದ ಒಟ್ಟು ಜನಸಂಖ್ಯೆ 710 ಕೋಟಿ 970 ಕೋಟಿ
ಚೀನಾ 130ಕೋಟಿ 140 ಕೋಟಿ (?)
ಭಾರತ 120ಕೋಟಿ 160 ಕೋಟಿ
ಭಾರತ 120ಕೋಟಿ 160 ಕೋಟಿ
ಅಮೆರಿಕಾ 31.62 ಕೋಟಿ 40 ಕೋಟಿ
ಇಂಡೊನೇಷಿಯಾ 24.85 ಕೋಟಿ 36.6 ಕೋಟಿ
ಬ್ರೆಜಿಲ್‌ 19.55ಕೋಟಿ 22.7ಕೋಟಿ
ಪಾಕಿಸ್ತಾನ ??ಕೋಟಿ 36.3ಕೋಟಿ
ಬಾಂಗ್ಲಾದೇಶ ?? ಕೋಟಿ 20.2ಕೋಟಿ

ವಿಶ್ವ ಮತ್ತು ಭಾರತದ ಜನಸಂಖ್ಯೆ

  • 22 Jun, 2017;
  • ಭಾರತದ ಜನಸಂಖ್ಯೆ ಮುಂದಿನ ಏಳು ವರ್ಷಗಳಲ್ಲಿ 144 ಕೋಟಿ ದಾಟುವ ಮೂಲಕ ಚೀನಾಗಿಂತಲೂ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಲಿದೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ. 2017ರ ವಿಶ್ವ ಜನಸಂಖ್ಯಾ ಹೊರನೋಟ ಪರಿಷ್ಕೃತ ವರದಿ ಬುಧವಾರ ಬಿಡುಗಡೆಯಾಗಿದೆ. ಇದರ ಪ್ರಕಾರ, ಕಳೆದ 40 ವರ್ಷಗಳಲ್ಲಿ ಭಾರತೀಯರ ಜನನ ಪ್ರಮಾಣ ಅರ್ಧದಷ್ಟು ಕಡಿಮೆಯಾಗಿದೆ. ಪ್ರಸ್ತುತ ಜನನ ಪ್ರಮಾಣ 2.3ರಷ್ಟಿದೆ ಹಾಗೂ ಕಳೆದ 25 ವರ್ಷಗಳಲ್ಲಿ ಜೀವಿತಾವಧಿ ಹತ್ತು ವರ್ಷಗಳಷ್ಟು ಸೇರ್ಪಡೆಯಾಗಿದ್ದು, 69 ವರ್ಷಕ್ಕೆ ಸಮೀಪಿಸಿದೆ.
  • 2017 ರಲ್ಲಿ 134 ಕೋಟಿ ಇರುವ ಭಾರತದ ಜನಸಂಖ್ಯೆ 2024ರ ವೇಳೆಗೆ 144 ಕೋಟಿ ಮುಟ್ಟಲಿದೆ. ಪ್ರಸ್ತುತ 141 ಕೋಟಿ ಇರುವ ಚೀನಾದ ಜನಸಂಖ್ಯೆ ಸ್ಥಿರತೆ ಕಾಯ್ದುಕೊಳ್ಳಲಿದ್ದು, ಭಾರತದ ಜನಸಂಖ್ಯೆ ಹೆಚ್ಚಲಿದೆ. 2050ರ ವೇಳೆಗೆ ಭಾರತದ ಜನಸಂಖ್ಯೆ 166 ಕೋಟಿಯಾಗುವುದಾಗಿ ನಿರೀಕ್ಷಿಸಲಾಗಿದೆ. ವಿಶ್ವ ಜನಸಂಖ್ಯೆ 760 ಕೋಟಿಯಿದ್ದು, 2030ಕ್ಕೆ 860 ಕೋಟಿ ದಾಟಲಿದೆ ಎಂದು ವರದಿ ತಿಳಿಸಿದೆ.

೨೦೧೯ ರಲ್ಲಿ ಅಲ್ಪ ಸಂಖ್ಯಾತರು

  • ಭಾರತ ದೇಶದ ಮುಸ್ಲಿಂ ಸಮುದಾಯದ ಜನಸಂಖ್ಯೆ 17,22,45158, ಕ್ರಿಶ್ಚಿಯನ್ ಸಮುದಾಯದ ಜನಸಂಖ್ಯೆ 2,78,19,588; ಸಿಖ್ಖರು 2,08,33,116, ಬೌದ್ಧರು 84,42,972, ಜೈನರು 44,51,753 ಮತ್ತು ಪಾರ್ಸಿ ಸಮುದಾಯ 57,264. (ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರ ರಾಜ್ಯಸಭೆಯಲ್ಲಿ ಜೂನ್ 24 2019 ರಂದು ಹೇಳಿಕೆ)

ನೋಡಿ :

ಉಲ್ಲೇಖ ಮತ್ತು ಆಧಾರ

Tags:

ಭಾರತದ ಜನಸಂಖ್ಯೆಯ ಬೆಳವಣಿಗೆ ಭಾರತದ ಜನಸಂಖ್ಯೆಯಭಾರತದ ಜನಸಂಖ್ಯೆಯ ಬೆಳವಣಿಗೆ ಬೆಳವಣಿಗೆ ಪರಿಣಮಗಳುಭಾರತದ ಜನಸಂಖ್ಯೆಯ ಬೆಳವಣಿಗೆ ಭಾರತದ ಜನ ಸಂಖ್ಯೆಭಾರತದ ಜನಸಂಖ್ಯೆಯ ಬೆಳವಣಿಗೆ ೨೦೦೧2001 ರ ಜನಗಣತಿಭಾರತದ ಜನಸಂಖ್ಯೆಯ ಬೆಳವಣಿಗೆ 2011ರ ಜನಗಣತಿಭಾರತದ ಜನಸಂಖ್ಯೆಯ ಬೆಳವಣಿಗೆ ಅಲ್ಪ ಅಂಖ್ಯಾತ ವರದಿ 2011ಭಾರತದ ಜನಸಂಖ್ಯೆಯ ಬೆಳವಣಿಗೆ 2050ಕ್ಕೆ ಭಾರತದ ಜನಸಂಖ್ಯೆಭಾರತದ ಜನಸಂಖ್ಯೆಯ ಬೆಳವಣಿಗೆ ವಿಶ್ವ ಮತ್ತು ಭಾರತದ ಜನಸಂಖ್ಯೆಭಾರತದ ಜನಸಂಖ್ಯೆಯ ಬೆಳವಣಿಗೆ ೨೦೧೯ ರಲ್ಲಿ ಅಲ್ಪ ಸಂಖ್ಯಾತರುಭಾರತದ ಜನಸಂಖ್ಯೆಯ ಬೆಳವಣಿಗೆ ನೋಡಿ :ಭಾರತದ ಜನಸಂಖ್ಯೆಯ ಬೆಳವಣಿಗೆ ಉಲ್ಲೇಖ ಮತ್ತು ಆಧಾರಭಾರತದ ಜನಸಂಖ್ಯೆಯ ಬೆಳವಣಿಗೆ

🔥 Trending searches on Wiki ಕನ್ನಡ:

ಮಳೆಗಾಲಇನ್ಸ್ಟಾಗ್ರಾಮ್ಕೃಷ್ಣಜೈಪುರಕೇಶಿರಾಜಸೌಂದರ್ಯ (ಚಿತ್ರನಟಿ)ಶ್ಯೆಕ್ಷಣಿಕ ತಂತ್ರಜ್ಞಾನಯೋಜಿಸುವಿಕೆತಮಿಳುನಾಡುಭರತನಾಟ್ಯಮೌರ್ಯ ಸಾಮ್ರಾಜ್ಯಓಂ ಶಾಂತಿ ಓಂರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ರಾಮಾನುಜರೆವರೆಂಡ್ ಎಫ್ ಕಿಟ್ಟೆಲ್ಭಾರತದ ಹಣಕಾಸಿನ ಪದ್ಧತಿಸಿದ್ಧಯ್ಯ ಪುರಾಣಿಕಮ್ಯಾಥ್ಯೂ ಕ್ರಾಸ್ಸಂಸ್ಕಾರಭಾರತೀಯ ರಿಸರ್ವ್ ಬ್ಯಾಂಕ್ಭಾರತದ ಗಡಿಗಳು ಮತ್ತು ನರೆ ರಾಜ್ಯಗಳುವಾಣಿಜ್ಯ(ವ್ಯಾಪಾರ)ಇಂದಿರಾ ಗಾಂಧಿಸೂತ್ರದ ಗೊಂಬೆಯಾಟಗುಪ್ತ ಸಾಮ್ರಾಜ್ಯಭಾರತೀಯ ಆಡಳಿತಾತ್ಮಕ ಸೇವೆಗಳುಆಂಧ್ರ ಪ್ರದೇಶಬನವಾಸಿಅಕ್ಬರ್ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗೂಗಲ್ರಾಜ್ಯಸಭೆಪ್ರಶಸ್ತಿಗಳುವೀಳ್ಯದೆಲೆಜಗ್ಗೇಶ್ಸೂರ್ಯವ್ಯೂಹದ ಗ್ರಹಗಳುಪಾಲಕ್ಭಾರತದ ಸಂಸ್ಕ್ರತಿಆದೇಶ ಸಂಧಿಭಾರತದ ಆರ್ಥಿಕ ವ್ಯವಸ್ಥೆಜಿ.ಎಚ್.ನಾಯಕಕರ್ಮಧಾರಯ ಸಮಾಸಅಡಿಕೆಯಶವಂತ ಚಿತ್ತಾಲಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಒಡೆಯರ್ಚದುರಂಗದ ನಿಯಮಗಳುಐಹೊಳೆಶಾಲೆಪ್ರಜಾಪ್ರಭುತ್ವಅಕ್ಷಾಂಶ ಮತ್ತು ರೇಖಾಂಶಝೊಮ್ಯಾಟೊವಾಟ್ಸ್ ಆಪ್ ಮೆಸ್ಸೆಂಜರ್ಕರ್ನಾಟಕ ಸಂಗೀತಬೇವುಕೆ. ಅಣ್ಣಾಮಲೈದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಉತ್ತರ ಕರ್ನಾಟಕರಚಿತಾ ರಾಮ್ಹಿಂದೂ ಮಾಸಗಳುಕನ್ನಡದಲ್ಲಿ ಸಣ್ಣ ಕಥೆಗಳುಸಹಕಾರಿ ಸಂಘಗಳುಅರ್ಥಶಾಸ್ತ್ರಕರ್ನಾಟಕದ ಶಾಸನಗಳುಗಿಡಮೂಲಿಕೆಗಳ ಔಷಧಿಸಂಘಟನೆಆಸ್ಟ್ರೇಲಿಯಕರ್ಬೂಜಯು.ಆರ್.ಅನಂತಮೂರ್ತಿಚಂಪೂಕರ್ನಾಟಕದ ಜಿಲ್ಲೆಗಳುಹೃದಯಾಘಾತಭೂಮಿನೀರಿನ ಸಂರಕ್ಷಣೆಹದಿಬದೆಯ ಧರ್ಮಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಭಾರತೀಯ ರಿಸರ್ವ್ ಬ್ಯಾಂಕ್‍ನ ಗವರ್ನರ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳು🡆 More