ಭಾಮಿನೀ ಷಟ್ಪದಿ

ಭಾಮಿನೀ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು.ಕುಮಾರವ್ಯಾಸನ ಗದುಗಿನ ಭಾರತವಿರುವುದು ಈ ಛಂದಸ್ಸಿನಲ್ಲಿಯೆ.

ಭಾಮಿನೀ ಷಟ್ಪದಿಯ ಪದ್ಯವೊಂದರಲ್ಲಿ ಆರು ಸಾಲುಗಳಿರುತ್ತವೆ. ಮೂರನೆಯ, ಆರನೆಯ ಸಾಲುಗಳಲ್ಲಿ ೭ ಮಾತ್ರೆಗಳ ಮೂರುಗಣಗಳೂ ಹಾಗು ಒಂದು ಗುರು ಇರುತ್ತವೆ. ಮಿಕ್ಕ ಸಾಲುಗಳಲ್ಲಿ ೭ ಮಾತ್ರೆಗಳ ಎರಡು ಗಣಗಳಿರುತ್ತವೆ. ಮತ್ತೊಂದು ಪ್ರಮುಖ ನಿಯಮವೆಂದರೆ, ೭ ಮಾತ್ರೆಗಳ ಗಣಗಳು ಕಡ್ಡಾಯವಾಗಿ ೩+೪ ಮಾದರಿಯಲ್ಲಿರಬೇಕು. ಅಂದರೆ ೩ ಮಾತ್ರೆಯ ಗಣದ ನಂತರ ೪ ಮಾತ್ರೆಯ ಗಣವು ಬಂದು, ಒಟ್ಟು ೭ ಮಾತ್ರೆಗಳ ಗಣವಾಗಬೇಕು. ಪದ್ಯವು ಆದಿಪ್ರಾಸದಿಂದ ಕೂಡಿರುತ್ತದೆ. ಉದಾಹರಣೆಯಾಗಿ ಗದುಗಿನ ಭಾರತದ ಈ ಪ್ರಸಿದ್ಧ ಪದ್ಯವನ್ನು ನೋಡಿ:

ವೇದಪುರುಷನ ಸುತನ ಸುತನ ಸ ಹೋದರನ ಹೆಮ್ಮಗನ ಮಗನ ತ ಳೋದರಿಯ ಮಾತುಳನ ಮಾವನನತುಳಭುಜಬಲದಿ ಕಾದು ಗೆಲಿದನನಣ್ಣನವ್ವೆಯ  ನಾದಿನಿಯ ಜಠರದಲಿ ಜನಿಸಿದ ನಾದಿಮೂರುತಿ ಸಲಹೊ ಗದುಗಿನ ವೀರನಾರಯಣ 

ಈ ಪದ್ಯವನ್ನು ಗಣಗಳಾಗಿ ವಿಂಗಡಿಸಿದಾಗ ಹೀಗೆ ಕಾಣುವುದು:

ವೇದ| ಪುರುಷನ | ಸುತನ| ಸುತನ ಸ ಹೋದ|ರನ ಹೆ|ಮ್ಮಗನ| ಮಗನ ತ ಳೋದ|ರಿಯ ಮಾ|ತುಳನ| ಮಾವನ|ನತುಳ|ಭುಜಬಲ|ದಿ ಕಾದು| ಗೆಲಿದನ|ನಣ್ಣ|ನವ್ವೆಯ  ನಾದಿ|ನಿಯ ಜಠ|ರದಲಿ| ಜನಿಸಿದ ನಾದಿ|ಮೂರುತಿ | ಸಲಹೊ| ಗದುಗಿನ | ವೀರ|ನಾರಯ|ಣ 

'|' ಸಂಜ್ಞೆ ಗಣವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣವಿಂಗಡನೆಯಾಗಿರುವುದನ್ನು ಗಮನಿಸಿ:

೩|೪|೩|೪ ೩|೪|೩|೪ ೩|೪|೩|೪|೩|೪|- ೩|೪|೩|೪ ೩|೪|೩|೪ ೩|೪|೩|೪|೩|೪|- 

ಮತ್ತೊಂದು ಉದಾಹರಣೆ:

ಅಂಬು | ಜಾನನೆ | ಕೇಳು | ತಾಂಡವ ನೆಂಬ | ಮುನಿಪಿತೃ | ಮಾತೃ | ಸೇವಾ ಲಂಬ | ಕನುತೊಳ | ಲಿದನು | ನಾನಾ | ತೀರ್ಥ | ಯಾತ್ರೆಯ | ಲಿ ಅಂಬು | ವನುತರ | ಲೆಂದು | ಪಿತೃಗಳ ಕಂಬಿ | ಯನುನೇ | ರಿರಿಸಿ | ಚರ್ಮದ ತಂಬು | ಗೆಯಕೊಂ |ಡರಸು | ತಿರುಳೈ | ದಿದನು | ಜೀವನ | ವ 

ನೋಡಿ

  • ಶರ
  • ಕುಸುಮ
  • ಭೋಗ
  • ಭಾಮಿನೀ ಷಟ್ಪದಿ
  • ವಾರ್ಧಕ
  • ಪರಿವರ್ಧಿನೀ
  • ಕನ್ನಡ ವ್ಯಾಕರಣ

ಉಲ್ಲೇಖ

Tags:

ಕುಮಾರವ್ಯಾಸಪ್ರಾಸಗಳುಷಟ್ಪದಿ

🔥 Trending searches on Wiki ಕನ್ನಡ:

ಕೈವಾರ ತಾತಯ್ಯ ಯೋಗಿನಾರೇಯಣರುಇಮ್ಮಡಿ ಪುಲಿಕೇಶಿವಡ್ಡಾರಾಧನೆಪಾಟೀಲ ಪುಟ್ಟಪ್ಪಬೈಗುಳಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಜೈನ ಧರ್ಮಎಚ್ ೧.ಎನ್ ೧. ಜ್ವರಬಂಗಾರದ ಮನುಷ್ಯ (ಚಲನಚಿತ್ರ)ಒಗಟುಸತ್ಯಂನಿರುದ್ಯೋಗಬಿ.ಎಸ್. ಯಡಿಯೂರಪ್ಪಕರ್ಣವಸ್ತುಸಂಗ್ರಹಾಲಯಸಂವಹನಜೋಗಿ (ಚಲನಚಿತ್ರ)ನರೇಂದ್ರ ಮೋದಿಹೈದರಾಲಿಸೌದೆಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಕೃಷಿಸರ್ವೆಪಲ್ಲಿ ರಾಧಾಕೃಷ್ಣನ್ಜನ್ನಕಾಂತಾರ (ಚಲನಚಿತ್ರ)ಟಿಪ್ಪು ಸುಲ್ತಾನ್ಯೂಟ್ಯೂಬ್‌ಅಂಬಿಗರ ಚೌಡಯ್ಯತತ್ಪುರುಷ ಸಮಾಸರವಿಚಂದ್ರನ್ವಿಧಾನಸೌಧದೇವಸ್ಥಾನಸಮುಚ್ಚಯ ಪದಗಳುಕನ್ನಡ ರಾಜ್ಯೋತ್ಸವಯುನೈಟೆಡ್ ಕಿಂಗ್‌ಡಂಭಾರತೀಯ ಧರ್ಮಗಳುಐಹೊಳೆಹೂಡಿಕೆಜೇನು ಹುಳುಕರ್ನಾಟಕ ವಿಶ್ವವಿದ್ಯಾಲಯಯಾಣಸಂಸ್ಕಾರಭಾರತದ ಸಂಗೀತಮಳೆಗಾಲವಿಷ್ಣುವರ್ಧನ್ (ನಟ)ಕನ್ನಡ ಪತ್ರಿಕೆಗಳುಇತಿಹಾಸವಿಜಯಪುರವಿಭಕ್ತಿ ಪ್ರತ್ಯಯಗಳುಸೂರ್ಯಸೀಮೆ ಹುಣಸೆವಚನಕಾರರ ಅಂಕಿತ ನಾಮಗಳುಕರ್ನಾಟಕದ ಮುಖ್ಯಮಂತ್ರಿಗಳುನಗರೀಕರಣಝಾನ್ಸಿ ರಾಣಿ ಲಕ್ಷ್ಮೀಬಾಯಿರತ್ನಾಕರ ವರ್ಣಿಕದಂಬ ಮನೆತನವ್ಯವಸಾಯಪ್ರಶಸ್ತಿಗಳುಜಯಚಾಮರಾಜ ಒಡೆಯರ್ಸಂಗೀತಭಾರತದ ರಾಷ್ಟ್ರಗೀತೆಯೇಸು ಕ್ರಿಸ್ತವೃತ್ತಪತ್ರಿಕೆಶ್ರೀಕೃಷ್ಣದೇವರಾಯಜಾನಪದಯೋನಿನಾಗಚಂದ್ರಕೇರಳಜೀವಕೋಶಹೆಚ್.ಡಿ.ದೇವೇಗೌಡನಾಲ್ವಡಿ ಕೃಷ್ಣರಾಜ ಒಡೆಯರುಸುಧಾ ಮೂರ್ತಿಅಳತೆ, ತೂಕ, ಎಣಿಕೆಪುಟ್ಟರಾಜ ಗವಾಯಿಮಳೆನೀರು ಕೊಯ್ಲುಛಂದಸ್ಸುಮೈಸೂರು ರಾಜ್ಯ🡆 More