ಬೆಳ್ತಂಗಡಿ

ಬೆಳ್ತಂಗಡಿ (ಉಚ್ಚಾರಣೆːlisten (ಸಹಾಯ·ಮಾಹಿತಿ):ಬೆಳ್ತಂಗಡಿ) ಇದು ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ.ಇದು ಜಿಲ್ಲಾ ಕೇಂದ್ರ ಮಂಗಳೂರಿನಿಂದಸುಮಾರು ೬೦ ಕಿ.ಮೀ ಪೂರ್ವಕ್ಕೆ ಇದೆ.ಇದನ್ನು ತುಳುಭಾಷೆಯಲ್ಲಿ ಬೋಲ್ತೇರ್” ಎಂದು ಕರೆಯುತ್ತಾರೆ.

ಉತ್ತರ, ಈಶಾನ್ಯ ಮತ್ತು ಪೂರ್ವದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಆಗ್ನೇಯದಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಪಶ್ಚಿಮದಲ್ಲಿ ಕಾರ್ಕಳ ಮತ್ತು ಬಂಟ್ವಾಳ ತಾಲ್ಲುಕುಗಳೂ ದಕ್ಷಿಣದಲ್ಲಿ ಪುತ್ತೂರು ತಾಲ್ಲೂಕು ಸುತ್ತುವರೆದಿದೆ. 1954ರಲ್ಲಿ ರೂಪಿತವಾದ ಈ ತಾಲ್ಲೂಕಿನ ವೇಣೂರು, ಬೆಳ್ತಂಗಡಿ ಮತ್ತು ಕೊಕ್ಕಡ ಇವು ಮೂರು ಹೋಬಳಿಗಳೂ 84 ಗ್ರಾಮಗಳೂ ಇವೆ. ಒಟ್ಟು ವಿಸ್ತೀರ್ಣ 1,375 ಚಕಿಮೀ. ಜನಸಂಖ್ಯೆ 2,46,443 (2001)

ಬೆಳ್ತಂಗಡಿ
ಪಟ್ಟಣ
ದೇಶಬೆಳ್ತಂಗಡಿ ಭಾರತ
ರಾಜ್ಯಕರ್ನಾಟಕ
ಜಿಲ್ಲೆದಕ್ಷಿಣ ಕನ್ನಡ
ತಾಲ್ಲೂಕುಬೆಳ್ತಂಗಡಿ
Government
 • Typeಪಂಚಾಯತ್ ರಾಜ್
 • Bodyಪಟ್ಟಣ ಪಂಚಾಯತ್
ಭಾಷೆ
 • ಅಧಿಕೃತಕನ್ನಡ
Time zoneUTC+೫:೩೦ (IST)
Vehicle registrationಕೆಎ ೨೧

ಇತಿಹಾಸ

ಈ ಸ್ಥಳಕ್ಕೆ ಇದರದೇ ಆದ ಇತಿಹಾಸವಿಲ್ಲದಿದ್ದರೂ ಸಮೀಪದಲ್ಲಿರುವ ಬಂಗಾಡಿಯಲ್ಲಿ ಆಳಿದ ಬಂಗ ಅರಸರು ಕಟ್ಟಿಸಿದ ಕೋಟೆಯ ಅವಶೇಷ,ಶಿಲೆಯಲ್ಲಿ ಕಟ್ಟಲಾದ ಸೋಮನಾಥ ದೇವಸ್ಥಾನ,ಒಂದು ಬಸದಿ ಇದೆ. ಸುಮಾರು ೬ ಕಿ.ಮೀ ದೂರದಲ್ಲಿರುವ ನಡ ಎಂಬಲ್ಲಿರುವ ದೊಡ್ಡ ಗುಡ್ಡದ ಮೇಲೆ ನರಸಿಂಹಗಡ ಎಂಬ ಕೋಟೆ ಇದೆ. ಇದನ್ನು ೧೭೯೪ರಲ್ಲಿ ಟಿಪ್ಪು ಸುಲ್ತಾನ ಪುನರ್‍ನಿರ್ಮಾಣ ಮಾಡಿ ತನ್ನ ತಾಯಿಯ ಹೆಸರಾದ ಜಮಾಲಾಬಿಯ ಹೆಸರಿನಿಂದ ಕರೆಯಲಾರಂಬಿಸಿದ ಬಳಿಕ ಅದು ಜಮಲಾಬಾದ್ ಎಂದಾಗಿದೆ. ಇಲ್ಲಿಯೇ ಬಳಿಯಲ್ಲಿ ಪೆರ್ಮಾಣು ಎಂಬಲ್ಲಿ ಜೈನ ಬಸದಿ ಇದೆ.ಮೊದಲು ಇದು ಹೋಬಳಿ ಕೇಂದ್ರವಾಗಿತ್ತು. ೧೯೫೪ರಲ್ಲಿ ಇದನ್ನು ತಾಲೂಕು ಎಂದು ಘೋಷಿಸಲಾಯಿತು.

ಭೌಗೋಳಿಕ

ಬೆಳ್ತಂಗಡಿಯು 13°59′00″N 75°18′00″E / 13.9833°N 75.3°E / 13.9833; 75.3. ಯಲ್ಲಿದ್ದು ಸರಾಸರಿ ಸಮುದ್ರ ಮಟ್ಟದಿಂದ 685 ಮೀಟರ್ (2247 ಅಡಿ)ಎತ್ತರದಲ್ಲಿದೆ.

ಬೆಳ್ತಂಗಡಿ ತಾಲೂಕಿನಲ್ಲಿರುವ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳು

ಬೆಳ್ತಂಗಡಿಯಿಂದ 12 ಕಿಮೀ ದೂರದಲ್ಲಿರುವ ಆಲ್ದಂಗಡಿಯಲ್ಲಿ ರಾಣಿ ಮದರಕ್ಕನ ಅರಮನೆ, ಅರ್ಧನಾರೀಶ್ವರ ಮತ್ತು ಸೋಮನಾಥ ದೇವಾಲಯಗಳು, ಒಂದು ಬಸದಿ ಇವೆ. ಬೆಳ್ತಂಗಡಿಗೆ 22 ಕಿಮೀ ದೂರದಲ್ಲಿರುವ ಬೈಲಂಗಡಿ ಎಂಬ ಸ್ಥಳದಲ್ಲಿ ರಾಣಿ ಸೋಮಲದೇವಿಯ ಮತ್ತು ಅವಳ ಗಂಡನ ಸಮಾಧಿಗಳಿವೆ. ಒಂದು ಬಸದಿಯೂ ಇದೆ. ಬೆಳ್ತಂಗಡಿಯ ಈಶಾನ್ಯಕ್ಕೆ 12 ಕಿಮೀ ದೂರದಲ್ಲಿರುವ ಬಂಗವಾಡಿ ಎಂಬುದು ಬಂಗರಸರ ರಾಜಧಾನಿಯಾಗಿತ್ತು. ಚಾರ್ಮಾಡಿ ಗ್ರಾಮ ಬೆಳ್ತಂಗಡಿಯ ಪೂರ್ವಕ್ಕೆ 19 ಕಿಮೀ ದೂರದಲ್ಲಿದೆ. ಉಜಿರೆ ಎಂಬಲ್ಲಿ ಕಾಲೇಜು, ಹೈಸ್ಕೂಲು, ಗುರುಕುಲಗಳಿವೆ. ಇದು ಧರ್ಮಸ್ಥಳದ ಬಾಗಿಲಿನಂತಿದೆ. ಧÀರ್ಮಸ್ಥಳ ಬೆಳ್ತಂಗಡಿಯಿಂದ 16 ಕಿಮೀ ದೂರದಲ್ಲಿರುವ ಒಂದು ಪುಣ್ಯಕ್ಷೇತ್ರ. ಇಲ್ಲಿ ಮಂಜುನಾಥ ದೇವಾಲಯವಿದೆ.ಬೆಳ್ತಂಗಡಿಯಿಂದ 25 ಕಿಮೀ ದೂರದಲ್ಲಿ ಒಂದು ಪುಣ್ಯಕ್ಷೇತ್ರ. ಶ್ರೀ ಕ್ಷೇತ್ರ ಕಾಟಾಜೆ. ಇಲ್ಲಿ ಅಣಿಯೂರು ಹೊಳೆ ಬದಿಯಲ್ಲಿ ದುರ್ಗಾಪರಮೇಶ್ವರಿ ದೇವಿಯ ಕ್ಷೇತ್ರ.

ಬೆಳ್ತಂಗಡಿಯಿಂದ ಸುಮಾರು 5 ಕಿಮೀ ದೂರದಲ್ಲಿರುವ ಗಡಾಯಿಕಲ್ಲು ಎಂಬ ಕೋಟೆ ಇರುವ ಒಂದು ದೊಡ್ಡ ಕಲ್ಲುಬಂಡೆ ಇದೆ. ಈ ಸೀಮೆಯಲ್ಲಿ ಆಳಿದ ಬಲ್ಲಾಳರಾಜರಲ್ಲಿ ಒಬ್ಬನಾದ ನರಸಿಂಹವರ್ಮ ಈ ಬೆಟ್ಟದಲ್ಲಿ ಒಂದು ಕೋಟೆಯನ್ನು ಕಟ್ಟಿಸಿ ಅದರ ಸುತ್ತಲೂ ಒಂದು ಪಟ್ಟಣವನ್ನು ನಿರ್ಮಿಸಿದ. ಶ್ರೀರಂಗಪಟ್ಟಣದ ಯುದ್ಧದವರೆಗೆ ಒಳ್ಳೆಯ ಸ್ಥಿತಿಯಲ್ಲಿದ್ದ ಈ ಪಟ್ಟಣಕ್ಕೆ ನರಸಿಂಹಗಡವೆಂದು ಹೆಸರಾಯಿತು. ಟಿಪ್ಪುಸುಲ್ತಾನ ಕೋಟೆಯನ್ನು ಬಲಪಡಿಸಿ ತನ್ನ ತಾಯಿಯ ನೆನಪಾಗಿ ಈ ಸ್ಥಳಕ್ಕೆ ಜಮಾಲಾಬಾದ್ ಎಂಬ ಹೆಸರಿಟ್ಟ.

ಬೆಳ್ತಂಗಡಿ ತಾಲ್ಲೂಕಿನ ಇನ್ನೊಂದು ಮುಖ್ಯಸ್ಥಳ ವೇಣೂರು (ಬೆಳ್ತಂಗಡಿಯಿಂದ 19 ಕಿಮೀ) ಒಂದು ಜೈನಕ್ಷೇತ್ರ. ಗುರುಪುರ (ಫಲ್ಗುಣ) ಹೊಳೆಯ ದಡದಲ್ಲಿರುವ ಈ ಪಟ್ಟಣ ಹಿಂದೆ ಜೈನ ಅರಸರ ರಾಜಧಾನಿಯಾಗಿತ್ತು. ಇಲ್ಲಿ ಸುಮಾರು 11 ಮಿ ಎತ್ತರದ ಗೋಮಟ ವಿಗ್ರಹವಿದೆ

ನೆರಿಯ ಶ್ರೀ ಕ್ಷೇತ್ರ ಕಾಟಾಜೆ ದುರ್ಗಾಪರಮೇಶ್ವರಿ ದೇವಸ್ಥಾನ. ಅಣಿಯುರು ನೆರಿಯ

ಜನಸಂಖ್ಯೆ ಮತ್ತು ವಿಸ್ತಾರ

೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೭,೬೩೫.ತಾಲೂಕು ಪಂಚಾಯತಿಯ ೧೧ ವಾರ್ಡುಗಳಿದ್ದು ೮.೮೭ಚದರ ಕಿ.ಮೀ ವಿಸ್ತಾರವಿದೆ.

ವಾಣಿಜ್ಯ

ಇದು ಕೃಷಿ ಉತ್ಪನ್ನಗಳ ಒಂದು ಪ್ರಮುಖ ಮಾರುಕಟ್ಟೆ.ಮುಖ್ಯ ಉತ್ಪನ್ನಗಳು ಅಡಿಕೆ,ಕೊಕ್ಕೊ,ತೆಂಗು ಮತ್ತು ರಬ್ಬರು,ಭತ್ತ.

ತಾಲೂಕು

ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ವಿಸ್ತಾರವಾದ ತಾಲೂಕು. ಚಾರ್ಮಾಡಿಯಿಂದ ಪೂಂಜಾಲಕಟ್ಟೆಯವರೆಗೂ, ವೇಣೂರು ನಿಂದ ಉಪ್ಪಿನಂಗಡಿಯವರೆಗೂ ಬೆಳ್ತಂಗಡಿ ತಾಲೂಕು ಹರಡಿದೆ.ಇದರ ಪೂರ್ವ-ಉತ್ತರ ಭಾಗದಲ್ಲಿ ರಮಣೀಯವಾದ ಪಶ್ಚಿಮ ಘಟ್ಟವಿದೆ. ಈ ತಾಲೂಕಿನಲ್ಲಿ ಪ್ರಸಿದ್ದ ಯಾತ್ರಾಸ್ಥಳ ಧರ್ಮಸ್ಥಳ,ಶಿಕ್ಷಣ ಕೇಂದ್ರವಾದ ಉಜಿರೆ,ಪ್ರೇಕ್ಷಣೀಯ ಸ್ಥಳವಾದ ಜಮಲಾಬಾದ್ ಕೋಟೆಯೂ ಇದೆ. ಇದಲ್ಲದೆ ಬೆಳ್ತಂಗಡಿಯಲ್ಲಿ ಹಲವಾರು ಧಾರ್ಮಿಕ ಕ್ಷೇತ್ರಗಳೂ ಇವೆ. ಮುಖ್ಯವಾಗಿ ಕಾಜೂರಿನ ಮಸೀದಿ, ಬೆಳ್ತಂಗಡಿ ಚರ್ಚ್,ಮಡಂತ್ಯಾರ್ ಚರ್ಚ್, ನಡಿಬೆಟ್ಟು ಶ್ರೀ ರೌಧ್ರಾನಾಥೇಶ್ವರ ದೇವಸ್ಥಾನ, ಪಾರೆಂಕಿ ಶ್ರೀ ಮಹೀಷಮರ್ಧಿನಿ ದೇವಸ್ಥಾನ, ಕುತ್ಯಾರು ಸೋಮನಾಥೇಶ್ವರ ದೇವಸ್ಥಾನ, ಸುರ್ಯ ಗ್ರಾಮದ ಸದಾಶಿವರುದ್ರ ದೇವಸ್ಥಾನ, ನೇತ್ರಾವತಿ ನದಿ, ನೆರಿಯ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಾಟಾಜೆ,ಇತ್ಯಾದಿ. ಬೆಳ್ತಂಗಡಿಯಲ್ಲಿ ಎರಡು ಎಂಜಿನಿಯರಿಂಗ್ ಕಾಲೇಜುಗಳು ಸ್ಥಾಪನೆಯಾಗಿವೆ . ಸುದ್ದಿ ಬಿಡುಗಡೆ ಹಾಗೂ ಜೈ ಕನ್ನಡಮ್ಮ ಇಲ್ಲಿಯ ಪ್ರಾದೇಶಿಕ ಪತ್ರಿಕೆಗಳು.

ಉಲ್ಲೇಖಗಳು

Tags:

ಬೆಳ್ತಂಗಡಿ ಇತಿಹಾಸಬೆಳ್ತಂಗಡಿ ಭೌಗೋಳಿಕಬೆಳ್ತಂಗಡಿ ತಾಲೂಕಿನಲ್ಲಿರುವ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳುಬೆಳ್ತಂಗಡಿ ಜನಸಂಖ್ಯೆ ಮತ್ತು ವಿಸ್ತಾರಬೆಳ್ತಂಗಡಿ ವಾಣಿಜ್ಯಬೆಳ್ತಂಗಡಿ ತಾಲೂಕುಬೆಳ್ತಂಗಡಿ ಉಲ್ಲೇಖಗಳುಬೆಳ್ತಂಗಡಿLL-Q33673 (kan)-Yakshitha-ಬೆಳ್ತಂಗಡಿ.wavw:Wikipedia:Media helpಈ ಧ್ವನಿಯ ಬಗ್ಗೆಚಿತ್ರ:LL-Q33673 (kan)-Yakshitha-ಬೆಳ್ತಂಗಡಿ.wavತುಳುದಕ್ಷಿಣ ಕನ್ನಡಮಂಗಳೂರು

🔥 Trending searches on Wiki ಕನ್ನಡ:

ಸೌರಮಂಡಲಸಮುದ್ರಗುಪ್ತಪುತ್ತೂರುಅಮ್ಮಇಂದ್ರಅನುಪಮಾ ನಿರಂಜನಭಗವದ್ಗೀತೆಬದನೆಭಾರತದಲ್ಲಿ ಪಂಚಾಯತ್ ರಾಜ್ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಬಾಲ ಗಂಗಾಧರ ತಿಲಕಎಂ.ಬಿ.ನೇಗಿನಹಾಳಅಲ್ಲಮ ಪ್ರಭುಅಂತರರಾಷ್ಟ್ರೀಯ ಸಂಘಟನೆಗಳುಕ್ರಿಯಾಪದಯೋಜಿಸುವಿಕೆಬಿಳಿ ರಕ್ತ ಕಣಗಳುದೇವನೂರು ಮಹಾದೇವಹಿಂದೂ ಧರ್ಮಶೇಷಾದ್ರಿ ಅಯ್ಯರ್ಕ್ರೈಸ್ತ ಧರ್ಮಗ್ರಂಥಾಲಯಗಳುದ.ರಾ.ಬೇಂದ್ರೆಸೋಮನಾಥಪುರಪ್ರಶಸ್ತಿಗಳುಯೂಟ್ಯೂಬ್‌ಮಂತ್ರಾಲಯವಿವಾಹರಕ್ತದೊತ್ತಡಕದಂಬ ಮನೆತನಮೇಘಾ ಶೆಟ್ಟಿಸ್ವರಕ್ಯಾನ್ಸರ್ಕಿರುಧಾನ್ಯಗಳುಕರ್ನಾಟಕದ ತಾಲೂಕುಗಳುಕರ್ನಾಟಕದಲ್ಲಿ ಸಹಕಾರ ಚಳವಳಿಭಾರತೀಯ ನದಿಗಳ ಪಟ್ಟಿಏರೋಬಿಕ್ ವ್ಯಾಯಾಮಅಡೋಲ್ಫ್ ಹಿಟ್ಲರ್ಡಿ.ವಿ.ಗುಂಡಪ್ಪಶನಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಜಯಮಾಲಾವಿರಾಟ್ ಕೊಹ್ಲಿದ್ವಿಗು ಸಮಾಸಇತಿಹಾಸಮನೆಬಂಗಾರದ ಮನುಷ್ಯ (ಚಲನಚಿತ್ರ)ಸಮಾಜಶಾಸ್ತ್ರತ್ರಿಪದಿವ್ಯಂಜನಸೀಮೆ ಹುಣಸೆಹೊಯ್ಸಳೇಶ್ವರ ದೇವಸ್ಥಾನಯೋಗವಾಹತೆರಿಗೆಹಿಂದೂ ಮಾಸಗಳುಮಳೆಕರ್ನಾಟಕದ ಜಿಲ್ಲೆಗಳುಅಜಂತಾಹರಿಹರ (ಕವಿ)ಭಾರತೀಯ ಸಂಸ್ಕೃತಿಕರ್ನಾಟಕದ ಇತಿಹಾಸಶ್ಯೆಕ್ಷಣಿಕ ತಂತ್ರಜ್ಞಾನಹಿಂದೂ ಮದುವೆರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಅಂತಿಮ ಸಂಸ್ಕಾರಈರುಳ್ಳಿಕಾರ್ಯಾಂಗಯೋಗದಿನೇಶ್ ಕಾರ್ತಿಕ್ಕರಗಭಾರತದ ಭೌಗೋಳಿಕತೆಬನವಾಸಿಸಂಸ್ಕೃತಿಜಾಗತೀಕರಣಉಡಮುರುಡೇಶ್ವರ🡆 More