ಬಿರಿಯಾನಿ

ಬಿರಿಯಾನಿ ಭಾರತೀಯ ಉಪಖಂಡದ ಒಂದು ಮಿಶ್ರ ಅಕ್ಕಿ ಖಾದ್ಯವಾಗಿದೆ.

ಅದನ್ನು ಸಂಬಾರ ಪದಾರ್ಥಗಳು, ಅಕ್ಕಿ ಮತ್ತು ಮಾಂಸ ಅಥವಾ ತರಕಾರಿಗಳಿಂದ ತಯಾರಿಸಲಾಗುತ್ತದೆ. ಬಿರಿಯಾನಿಯಲ್ಲಿ ಮೂರು ವಿಧ- ೧.ಚಿಕನ್ (ಕೋಳಿ) ಬಿರಿಯಾನಿ, ೨.ಮಟನ್ (ಆಡು-ಕುರಿ,ಮಾಂಸ) ಬಿರಿಯಾನಿ, ೩.ಬೀಫ್ (ಹಸುಮಾಂಸ) ಬಿರಿಯಾನಿ. ಆದರೆ ಬಿರಿಯಾನಿಯನ್ನು ಹತ್ತಾರು ವಿಧಗಳಲ್ಲಿ ಮಾಡುವ ಕ್ರಮ ರೂಢಿಯಲ್ಲಿದೆ.

ಬಿರಿಯಾನಿ
ಹೈದರಾಬಾದಿ ದಮ್ ಚಿಕನ್ ಬಿರಿಯಾನಿ
ಬಿರಿಯಾನಿ
ಸಿಗಡಿ ಬಿರಿಯಾನಿ
ಬಿರಿಯಾನಿ
ಮಟನ್ ಬಿರಿಯಾನಿ
ಬಿರಿಯಾನಿ
ಸೋಯಾ ಬಿರಿಯಾನಿ

ಮೂಲ

ಮೊಗಲರು ಬಿರಿಯಾನಿಯ ಪ್ರವರ್ತಕರೆಂದು ಚರಿತ್ರೆಯ ಮೂಲಗಳು ಹೇಳುತ್ತವೆ. ಇತ್ತೀಚಿನ ದಿನಗಳಲ್ಲಿ ಭಾರತೀಯರು ಬಿರಿಯಾನಿ ಮಾಡುವ ಕ್ರಮವನ್ನು ರೂಢಿಸಿಕೊಂಡಿದ್ದಾರೆ. 'ಬಿರಿಯಾನಿ' ಎಂಬ ಪದವು ಪರ್ಷಿಯನ್ ಪದವಾದ ಬಿರಿಯನ್ ನಿಂದ ಬಂದಿದೆ. ಇದು ದಕ್ಷಿಣ ಏಷ್ಯಾದಲ್ಲಿ ಬಹಳ ಜನಪ್ರಿಯವಾದ ಖಾದ್ಯವಾಗಿದೆ. ಭಾರತದ ಎಲ್ಲಾ ಕಡೆಯಲ್ಲೂ ಈ ಖಾದ್ಯವನ್ನು ಮಾಡಲಾಗುತ್ತದೆ. ದಕ್ಷಿಣ ಭಾರತದಲ್ಲಿ ಅಕ್ಕಿಯು ಪ್ರಧಾನ ಆಹಾರವಾಗಿದ್ದುದರಿಂದ ತೆಲಂಗಾಣ, ತಮಿಳು ನಾಡು, ಕೇರಳ ಮತ್ತು ಕರ್ನಾಟಕದಲ್ಲಿ ವಿಭಿನ್ನ ರೀತಿಯ ಬಿರಿಯಾನಿಗಳನ್ನು ಮಾಡುತ್ತಿದ್ದರು. ಬಿರಿಯಾನಿಗಳಲ್ಲಿ ಅನೇಕ ರೀತಿಯ ವಿಧಗಳಿವೆ. ಸಾಮಾನ್ಯವಾಗಿ ಆಯಾ ಪ್ರದೇಶದ ಹೆಸರಿನೊಂದಿಗೆ ಕರೆಯುತ್ತಾರೆ. ಉದಾಹರಣೆಗೆ ಹೈದರಾಬಾದ್ ಬಿರಿಯಾನಿ ದಕ್ಷಿಣ ಭಾರತದ ಹೈದರಾಬಾದ್ ನಗರದಲ್ಲಿ ಮಾಡುತ್ತಾರೆ.ಮಲಬಾರಿ ಬಿರಿಯಾನಿ ಕೆರಳದ ಕರಾವಳೆಯಲ್ಲಿ ಅರಬ್ ವ್ಯಾಪಾರಿಗಳ ಸಂಬರ್ಕದಿಂದ ಬೆಳದುಬಂದ ರೀತಿ. ಸಿಂಧಿ ಬಿರಿಯಾನಿ ಸಾಮಾನ್ಯವಾಗಿ ಸಿಂಧ್ ಪ್ರದೇಶದಲ್ಲಿ ಮಾಡುತ್ತಾರೆ.

ಬೇಕಾಗುವ ಸಾಮಾನು

೧ ಕೆ.ಜಿ ಬಿರಿಯಾನಿ ಅಕ್ಕಿ, ೧ಕೆ.ಜಿ ಮಾಂಸ, ೫ ಟೀಸ್ಪೂನ್ ಎಣ್ಣೆ, ೩ ಟೀ ಸ್ಪೂನ್ ತುಪ್ಪ, ಎರಡು ದಪ್ಪನಾದ ಈರುಳ್ಳಿ, ಎರಡು ಚೆನ್ನಾಗಿ ಹಣ್ಣಾದ ಟೋಮೊಟೊ, ಗಸಗಸೆ, ಚಕ್ಕೆ, ಲವಂಗ, ಮರಾಠಿ ಮೊಗ್ಗು, ದಾಲ್ಚಿನ್ನಿ ಎಲೆ, ಹಸಿಶುಂಠಿ, ಬೆಳ್ಳುಳ್ಳಿ ಪೇಸ್ಟ್ ಅಗತ್ಯಕ್ಕೆ ತಕ್ಕಷ್ಟು ಉಪ್ಪು, ತುಸು ಅರಿಸಿಣ, ೧ ಕಟ್ಟು ಕೊತ್ತಂಬರಿಸೊಪ್ಪು, ಅರ್ಧ ಹೋಳು ಚೆನ್ನಾಗಿ ಬಲಿತ ತೆಂಗಿನಕಾಯಿ, ಅರ್ಧ ಕಟ್ಟು ಪುದೀನಾ ಸೊಪ್ಪು, ೫ ಹಸಿಮೆಣಸು, ೧ ಟೀಸ್ಪೂನ್ ಮೆಣಸಿನ ಪುಡಿ, ಎರಡು ಟೀ ಸ್ಪೂನ್ ಧನಿಯ ಪುಡಿ, ೧ ಟೀ ಸ್ಪೂನ್ ಅಚ್ಚಕಾರದ ಪುಡಿ, ೧ ನಿಂಬೇ ಹಣ್ಣು, ಅಳತೆಗೆ ತಕ್ಕನೀರು ಮುಂತಾದುವು.

ಮಾಡುವ ವಿಧಾನ

ಅಕ್ಕಿಯನ್ನು ತೊಳೆದು ನೀರನ್ನು ಬಸಿದು ಇಟ್ಟುಕೊಳ್ಳಿ. ೧ಕೆ.ಜಿ ಮಾಂಸವನ್ನು ಶುದ್ದಿಕರಿಸಿಕೊಂಡು ತೊಳೆದು ಇಟ್ಟುಕೊಳ್ಳಬೇಕು. ಎರಡು ದಪ್ಪನಾದ ಈರುಳ್ಳಿಯನ್ನು, ಎರಡು ಚೆನ್ನಾಗಿ ಹಣ್ಣಾದ ಟೋಮೊಟೊವನ್ನು ಉದ್ದಕ್ಕೆ ಹೆಚ್ಚಿಟ್ಟುಕೊಳ್ಳಬೇಕು. ಗಸಗಸೆ, ಚಕ್ಕೆ, ಲವಂಗ, ೫ ಹಸಿಮೆಣಸು,೧ ಟೀಸ್ಪೂನ್ ಮೆಣಸು, ಎರಡು ಟೀ ಸ್ಪೂನ್ ಧನಿಯ, ೧೦ ಒಣಮೆಣಸಿನಕಾಯಿ, ಅರ್ಧ ಹೋಳು ಚೆನ್ನಾಗಿ ಬಲಿತ ತೆಂಗಿನಕಾಯಿಯನ್ನು ಬಾಣಲೆಯೊಂದಕ್ಕೆ ಸ್ಪಲ್ಪ ಎಣ್ಣೆ ಹಾಕಿ ಕೆಂಪಗೆ ಹುರಿದು ಪುಡಿ ಮಾಡಿಟ್ಟುಕೊಳ್ಳಬೇಕು. ನಂತರ ೫ ಟೀಸ್ಪೂನ್ ಎಣ್ಣೆ, ೩ ಟೀ ಸ್ಪೂನ್ ತುಪ್ಪ, ಎರಡು ದಪ್ಪನಾದ ಈರುಳ್ಳಿ, ಎರಡು ಚೆನ್ನಾಗಿ ಹಣ್ಣಾದ ಟೋಮೊಟೊವನ್ನು ಸೇರಿಸಿ ಚೆನ್ನಾಗಿ ಬಾಡಿಸಿ, ಅದಕ್ಕೆ ಮಾಂಸವನ್ನು ಸೇರಿಸಿ ಹದವಾಗಿ ಹುರಿದು ರುಬ್ಬಿಕೊಂಡ ಮಸಾಲೆಯನ್ನು, ಹಸಿಶುಂಠಿ, ಬೆಳ್ಳುಳ್ಳಿ ಪೇಸ್ಟ್ ಮತ್ತು ಅಗತ್ಯಕ್ಕೆ ತಕ್ಕಷ್ಟು ಉಪ್ಪು ಸೇರಿಸಿ ಬಾಡಿಸಿಕೊಂಡು, ಅಳತೆಗೆ ತಕ್ಕ ನೀದನ್ನು ಹಾಕಿ ಅಕ್ಕಿಯನ್ನು ಮಸಾಲೆಯೊಂದಿಗೆ ಮಿಶ್ರಮಾಡಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿ, ಮುಕ್ಕಾಲು ಭಾಗ ಬಿರಿಯಾನಿ ಬೆಂದ ಮೇಲೆ ಅರ್ಧ ಕಟ್ಟು ಪುದೀನಾ ಸೊಪ್ಪು,೧ ಕಟ್ಟು ಕೊತ್ತಂಬರಿಸೊಪ್ಪುನ್ನು ಹಾಕಿ ಮಿಶ್ರಮಾಡಿ, ಕಡೆಯಲ್ಲಿ ನಿಂಬೆ ಹಣ್ಣನ್ನು ಹಿಂಡಿ ಬಿರಿಯಾನಿಯನ್ನು ಸ್ಪಲ್ಪ ಹೊತ್ತು ಮುಚ್ಚಿಟ್ಟು ಅದು ಚೆನ್ನಾಗಿ ಪೊಂಗಿದಾಗ ಸೇವಿಸಬೇಕು. ಇದರೊಂದಿಗೆ ಮೊಸರು ಬಜ್ಜಿ, ಮಾಂಸದ ಸಾರನ್ನು ಮಾಡುತ್ತಾರೆ.

ಉಲ್ಲೇಖಗಳು

Tags:

ಬಿರಿಯಾನಿ ಮೂಲಬಿರಿಯಾನಿ ಬೇಕಾಗುವ ಸಾಮಾನುಬಿರಿಯಾನಿ ಮಾಡುವ ವಿಧಾನಬಿರಿಯಾನಿ ಉಲ್ಲೇಖಗಳುಬಿರಿಯಾನಿಅಕ್ಕಿಕೋಳಿತರಕಾರಿಭಾರತೀಯ ಉಪಖಂಡಮಾಂಸಸಂಬಾರ ಪದಾರ್ಥ

🔥 Trending searches on Wiki ಕನ್ನಡ:

ಪುರಂದರದಾಸವಾಸ್ತವಿಕವಾದದ್ರಾವಿಡ ಭಾಷೆಗಳುಬೇಲೂರುಭಾರತದಲ್ಲಿ ತುರ್ತು ಪರಿಸ್ಥಿತಿಪಕ್ಷಿಹರ್ಡೇಕರ ಮಂಜಪ್ಪಹರಪ್ಪಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಈಚಲುಕಾಲಾಯ ತಸ್ಮೈ ನಮಃ (ಚಲನಚಿತ್ರ)ಸಿದ್ದಲಿಂಗಯ್ಯ (ಕವಿ)ಎಸ್.ಎಲ್. ಭೈರಪ್ಪಭಾರತದ ಸಂವಿಧಾನ ರಚನಾ ಸಭೆಭಾರತದಲ್ಲಿನ ಜಾತಿ ಪದ್ದತಿಮೆಕ್ಕೆ ಜೋಳಭಗತ್ ಸಿಂಗ್ಭಾರತದ ರೂಪಾಯಿಅನುನಾಸಿಕ ಸಂಧಿಪ್ರಬಂಧಬಿದಿರುಭಾರತೀಯ ಸ್ಟೇಟ್ ಬ್ಯಾಂಕ್ಆರ್ಯಭಟ (ಗಣಿತಜ್ಞ)ಭೂತಾರಾಧನೆಗಾಂಧಿ ಜಯಂತಿಕನ್ನಡಪ್ರಭಮಣ್ಣುಒಡ್ಡರು / ಭೋವಿ ಜನಾಂಗಪಾಪಅಕ್ಕಮಹಾದೇವಿಮೌರ್ಯ ಸಾಮ್ರಾಜ್ಯಬೆಂಗಳೂರುಕವಲುಭಾರತೀಯ ಕಾವ್ಯ ಮೀಮಾಂಸೆಭಾರತದ ಸ್ವಾತಂತ್ರ್ಯ ದಿನಾಚರಣೆಶಾತವಾಹನರುಪೊನ್ನಹಿಂದುಸ್ತಾನಿ ಶಾಸ್ತ್ರೀಯ ಸಂಗೀತಆರೋಗ್ಯಮಾನವ ಸಂಪನ್ಮೂಲ ನಿರ್ವಹಣೆಭೂಮಿ ದಿನದಿವ್ಯಾಂಕಾ ತ್ರಿಪಾಠಿಮೈಗ್ರೇನ್‌ (ಅರೆತಲೆ ನೋವು)ಮಹೇಂದ್ರ ಸಿಂಗ್ ಧೋನಿಭಾರತದ ಪ್ರಧಾನ ಮಂತ್ರಿಪುಟ್ಟರಾಜ ಗವಾಯಿಶ್ರೀಪಾದರಾಜರುಡಿ.ಕೆ ಶಿವಕುಮಾರ್ಶಬ್ದವಾಯು ಮಾಲಿನ್ಯಕನ್ನಡ ಸಂಧಿತತ್ಪುರುಷ ಸಮಾಸದಿಕ್ಕುಹಿಂದೂ ಧರ್ಮಬ್ಲಾಗ್ಚನ್ನಬಸವೇಶ್ವರದರ್ಶನ್ ತೂಗುದೀಪ್ಭಾರತೀಯ ಶಾಸ್ತ್ರೀಯ ನೃತ್ಯಹಣಡಿ. ದೇವರಾಜ ಅರಸ್ಮಂಗಳೂರುಶ್ರವಣಬೆಳಗೊಳಅನುಶ್ರೀಬರಗೂರು ರಾಮಚಂದ್ರಪ್ಪಅರ್ಥಶಾಸ್ತ್ರನುಗ್ಗೆಕಾಯಿಭಾರತದ ಸರ್ವೋಚ್ಛ ನ್ಯಾಯಾಲಯಸಿಗ್ಮಂಡ್‌ ಫ್ರಾಯ್ಡ್‌ಭರತನಾಟ್ಯವಾಣಿಜ್ಯ(ವ್ಯಾಪಾರ)ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಧಾನ್ಯಮೂಲಧಾತುಗಳ ಪಟ್ಟಿಮಾಸ್ತಿ ವೆಂಕಟೇಶ ಅಯ್ಯಂಗಾರ್ಡೊಳ್ಳು ಕುಣಿತಆವಕಾಡೊ🡆 More