ಬಸವರಾಜ ಬೊಮ್ಮಾಯಿ: ಭಾರತದ ರಾಜಕಾರಣಿ

ಬಸವರಾಜ ಬೊಮ್ಮಾಯಿ ಕರ್ನಾಟಕದ ಒಬ್ಬರು ರಾಜಕಾರಣಿ.

ಭಾರತೀಯ ಜನತಾ ಪಕ್ಷದಿಂದ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದಾರೆ. ಜುಲೈ೨೮, ೨೦೨೧ ರಂದು ಬಿ.ಎಸ್. ಯಡಿಯೂರಪ್ಪರವರ ನಂತರ ಬೊಮ್ಮಾಯಿ ಕರ್ನಾಟಕದ ೨೩ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ

ಕರ್ನಾಟಕದ ೨೩ನೆಯ ಮುಖ್ಯಮಂತ್ರಿ
ಅಧಿಕಾರ ಅವಧಿ
ಜುಲೈ ೨೮, ೨೦೨೧ – ಮೇ ೧೫,೨೦೨೩
ಪೂರ್ವಾಧಿಕಾರಿ ಬಿ.ಎಸ್. ಯಡಿಯೂರಪ್ಪ
ಉತ್ತರಾಧಿಕಾರಿ ಸಿದ್ದರಾಮಯ್ಯ
ಮತಕ್ಷೇತ್ರ ಶಿಗ್ಗಾಂವ
ವೈಯಕ್ತಿಕ ಮಾಹಿತಿ
ಜನನ (1960-01-28) ೨೮ ಜನವರಿ ೧೯೬೦ (ವಯಸ್ಸು ೬೪)
ಹುಬ್ಬಳ್ಳಿ
ರಾಜಕೀಯ ಪಕ್ಷ ಬಿಜೆಪಿ
ಸಂಗಾತಿ(ಗಳು) ಚೆನ್ನಮ್ಮ
ಧರ್ಮ ಹಿಂದು
ಜಾಲತಾಣ http://www.bsbommai.com/

ಬದುಕು

ಬಸವರಾಜ ಸೋಮಪ್ಪ ಬೊಮ್ಮಾಯಿ ಕರ್ನಾಟಕದ ಮಾಜಿ ಸಿಎಂ ಸೋಮಪ್ಪ ರಾಯಪ್ಪ ಬೊಮ್ಮಾಯಿ (ಎಸ್. ಆರ್. ಬೊಮ್ಮಾಯಿ-ಗಂಗಮ್ಮ ಅವರ ಪುತ್ರ. ೧೯೬೦ ರ ಜ.೨೮ ರಂದು ಜನಿಸಿದ ಬೊಮ್ಮಾಯಿ ಬಿ.ವಿ ಬೊಮ್ಮರೆಡ್ಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಿಂದ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಪಡೆದ ಬೊಮ್ಮಾಯಿ ಮೂಲತಃ ವೃತ್ತಿಯಲ್ಲಿ ಕೃಷಿಕ ಮತ್ತು ಕೈಗಾರಿಕೋದ್ಯಮಿ.

ನೀರಾವರಿ ಯೋಜನೆಗಳಲ್ಲಿ ಹಾಗೂ ನೀರಾವರಿ ವಿಷಯಗಳಲ್ಲಿ ಆಳವಾದ ಜ್ಞಾನ ಹೊಂದಿರುವ ಅವರು, ಹಾವೇರಿ ಜಿಲ್ಲೆಯ ಶಿಗ್ಗಾಂವ್ ನಲ್ಲಿ ಭಾರತದಲ್ಲೇ ಮೊದಲ ಶೇ.೧೦೦ ರಷ್ಟು ಕೊಳವೆ ನೀರಾವರಿ ಯೋಜನೆಯನ್ನು ಜಾರಿಗೆ ತರುವುದು ಸೇರಿದಂತೆ ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದು ಜಲಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ರಾಜಕೀಯ

  • ಅವರು ಜನತಾದಳದಿಂದ ತಮ್ಮ ರಾಜಕೀಯವನ್ನು ಪ್ರಾರಂಭಿಸಿದರು.
  • ೧೯೯೮ ಹಾಗೂ ೨೦೦೪ರಲ್ಲಿ ಧಾರವಾಡ ಸ್ಥಳೀಯ ಅಧಿಕಾರಿಗಳ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದರು.
  • ೨೦೦೮ರಲ್ಲಿ ಜನತಾದಳವನ್ನು ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.
  • ೨೦೦೮ರ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಬೊಮ್ಮಾಯಿ ಆಯ್ಕೆಗೊಂಡಿದ್ದರು. ಬೊಮ್ಮಾಯಿ ಅವರು ಈ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
  • ಜೆ. ಹೆಚ್. ಪಟೇಲ್ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಕಾನೂನು ಮತ್ತು ಸಂಸದೀಯ ಸಚಿವರಾಗಿ, ಸಹಕಾರ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿರುವ ಅನುಭವವನ್ನು ಬಸವರಾಜ ಬೊಮ್ಮಾಯಿ ಹೊಂದಿದ್ದಾರೆ.
  • ಯಡಿಯೂರಪ್ಪ ಅವರ ಸಂಪುಟದಲ್ಲಿ ಗೃಹ ಖಾತೆಯನ್ನು ನಿರ್ವಹಿಸಿ ಅನುಭವ ಹೊಂದಿರುವ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನಕ್ಕೇರಿದರು.
  • ಜನತಾದಳದಿಂದ ಸೋಮಪ್ಪ ರಾಯಪ್ಪ ಬೊಮ್ಮಾಯಿ (ಎಸ್ ಆರ್ ಬೊಮ್ಮಾಯಿ) ಅವರು ಮುಖ್ಯಮಂತ್ರಿಯಾಗಿದ್ದ (೧೯೮೮-೮೯) ೩೨-೩೩ ವರ್ಷಗಳ ನಂತರ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರು ಬಿಜೆಪಿಯಿಂದ ಮುಖ್ಯಮಂತ್ರಿಯಾಗಿದ್ದಾರೆ.

ಉಲ್ಲೇಖಗಳು




Tags:

ಕರ್ನಾಟಕಬಿ.ಎಸ್. ಯಡಿಯೂರಪ್ಪಭಾರತೀಯ ಜನತಾ ಪಕ್ಷ

🔥 Trending searches on Wiki ಕನ್ನಡ:

ಬಾಳೆ ಹಣ್ಣುಸಂಶೋಧನೆದಿಕ್ಕುಮಣ್ಣುಸೌರಮಂಡಲಮಸೂದೆಛಂದಸ್ಸುಚದುರಂಗಮಾನಸಿಕ ಆರೋಗ್ಯಮಧ್ಯಕಾಲೀನ ಭಾರತಪ್ಲಾಸಿ ಕದನಭಾರತದ ರಾಷ್ಟ್ರಗೀತೆಅಶ್ವತ್ಥಾಮಕರ್ನಾಟಕದ ಏಕೀಕರಣಕನ್ನಡದಲ್ಲಿ ಮಹಿಳಾ ಸಾಹಿತ್ಯಕರ್ನಾಟಕ ಸ್ವಾತಂತ್ರ್ಯ ಚಳವಳಿವೃದ್ಧಿ ಸಂಧಿಹೊಯ್ಸಳ ವಿಷ್ಣುವರ್ಧನಯೇಸು ಕ್ರಿಸ್ತವ್ಯಂಜನಕೂಡಲ ಸಂಗಮಅಕ್ಷಾಂಶ ಮತ್ತು ರೇಖಾಂಶಆಟಿಸಂಬಾಬರ್ಸಿಂಧೂತಟದ ನಾಗರೀಕತೆಸಮುಚ್ಚಯ ಪದಗಳುಅರ್ಥ ವ್ಯವಸ್ಥೆಯಣ್ ಸಂಧಿಕೇಶಿರಾಜ೧೮೬೨ದುರ್ಗಸಿಂಹಹರಕೆಬೇಲೂರುಪ್ಲಾಸ್ಟಿಕ್ವ್ಯಾಪಾರರಗಳೆಅಲ್ಲಮ ಪ್ರಭುಕನ್ನಡ ಬರಹಗಾರ್ತಿಯರುಭಾರತದ ಬುಡಕಟ್ಟು ಜನಾಂಗಗಳುತುಳಸಿದಕ್ಷಿಣ ಕನ್ನಡಗಿಡಮೂಲಿಕೆಗಳ ಔಷಧಿಸವದತ್ತಿಭಾಷೆಶತಮಾನರಾಮಾಯಣಪ್ಲೇಟೊಸಮಾಜಪಾಪಭರತನಾಟ್ಯಕರ್ನಾಟಕದ ವಾಸ್ತುಶಿಲ್ಪಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಭಾರತದಲ್ಲಿನ ಜಾತಿ ಪದ್ದತಿವಿಮರ್ಶೆವಿಜ್ಞಾನಗೋಲ ಗುಮ್ಮಟಹನುಮಾನ್ ಚಾಲೀಸತತ್ಸಮ-ತದ್ಭವಕವಿಗಳ ಕಾವ್ಯನಾಮಕಾನೂನುವಚನ ಸಾಹಿತ್ಯಸಿಗ್ಮಂಡ್‌ ಫ್ರಾಯ್ಡ್‌ಭಾರತದ ಬ್ಯಾಂಕುಗಳ ಪಟ್ಟಿವಿಜಯ ಕರ್ನಾಟಕಭೀಷ್ಮಬಾದಾಮಿ ಶಾಸನಭೋವಿಚಿತ್ರದುರ್ಗಜವಾಹರ‌ಲಾಲ್ ನೆಹರುಕಾಳಿದಾಸಶ್ಯೆಕ್ಷಣಿಕ ತಂತ್ರಜ್ಞಾನಹೆಚ್.ಡಿ.ಕುಮಾರಸ್ವಾಮಿಸುಧಾ ಚಂದ್ರನ್ಇಂದಿರಾ ಗಾಂಧಿಮೆಕ್ಕೆ ಜೋಳದ್ವಾರಕೀಶ್ಭಾರತೀಯ ಜನತಾ ಪಕ್ಷ🡆 More