ಪ್ರಹ್ಲಾದ

ಪ್ರಹ್ಲಾದ ( ಕೆಲವರು ಪ್ರಲ್ಹಾದ ಎಂದೂ ಬರೆಯುವುದುಂಟು) ಹಿರಣ್ಯಕಶಿಪುನ ಮತ್ತು ಕಯಾದು ಅವರ ಮಗ, ಮತ್ತು ವಿರೋಚನನ ತಂದೆ .

ಅವನು ಕಶ್ಯಪ ಗೋತ್ರಕ್ಕೆ ಸೇರಿದವನು. ಅವನ ವಿಷ್ಣುವಿನ ಮೇಲಿನ ಭಕ್ತಿ ಹೆಸರುವಾಸಿಯಾಗಿದೆ. ಬಾಲಕನಾಗಿದ್ದಾಗ ತನ್ನ ತಂದೆ ಹಿರಣ್ಯಕಶಿಪುವಿನ ವಿರೋಧದ ನಡುವೆಯೂ, ಅವನು ವಿಷ್ಣು ದೇವರ ಮೇಲಿನ ಭಕ್ತಿಯನ್ನು ಮುಂದುವರೆಸಿದನು. ವೈಷ್ಣವ ಸಂಪ್ರದಾಯಗಳ ಅನುಯಾಯಿಗಳು ಅವನು ಮಹಾನ್ ಭಕ್ತ ಎಂದು ಪರಿಗಣಿಸಿದ್ದಾರೆ . ನರಸಿಂಹ ಅವತಾರದ ಭಕ್ತರು ಅವನಿಗೆ ವಿಶೇಷ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಪುರಾಣಗಳಲ್ಲಿನ ಬಹುಪಾಲು ಕಥೆಗಳು ಚಿಕ್ಕ ಹುಡುಗನಾಗಿದ್ದಾಗ ಪ್ರಹ್ಲಾದನ ಚಟುವಟಿಕೆಗಳನ್ನು ಆಧರಿಸಿವೆ ಮತ್ತು ಅವನನ್ನು ಸಾಮಾನ್ಯವಾಗಿ ವರ್ಣಚಿತ್ರಗಳು ಮತ್ತು ಚಿತ್ರಣಗಳಲ್ಲಿ ಚಿತ್ರಿಸಲಾಗಿದೆ. ಮುಂದೆ ಅವನು ರಾಜನಾದನು.

ಕಥೆ

ಪ್ರಹ್ಲಾದನು ಹಿರಣ್ಯಕಶಿಪು ಎಂಬ ದುಷ್ಟ ದೈತ್ಯ ರಾಜ ಮತ್ತು ಕಯಾದುವಿನ ಮಗನಾಗಿ ಹುಟ್ಟಿದನು, ಹಿರಣ್ಯಕಶಿಪುವಿಗೆ 'ಜೀವಂತ ಗರ್ಭದಿಂದ ಹುಟ್ಟಿದ ಯಾವುದರಿಂದಲೂ ಅವನಿಗೆ ಸಾವು ಆಗುವುದಿಲ್ಲ, ಮನುಷ್ಯನಿಂದಾಗಲಿ ಅಥವಾ ಪ್ರಾಣಿಯಿಂದಾಗಲಿ, ಹಗಲಿನಲ್ಲಿ ಅಥವಾ ರಾತ್ರಿಯಲ್ಲಿ, ಮನೆಯೊಳಗೆ ಅಥವಾ ಹೊರಗೆ, ಭೂಮಿ ಅಥವಾ ಗಾಳಿಯಲ್ಲಿ ಅಥವಾ ನೀರಿನಲ್ಲಿ ಮತ್ತು ಯಾವುದೇ ಮಾನವ ನಿರ್ಮಿತ ಆಯುಧದಿಂದ ಸಾವು ಬಾರದು' ಎಂಬ ವರ ಇತ್ತು. ವಿಷ್ಣುವು , ನರಸಿಂಹ ಎಂಬ ಅವತಾರ ತಳೆದು ಹಿರಣ್ಯಕಶ್ಯಪನನ್ನು ಕೊಂದು ಪ್ರಹ್ಲಾದನನ್ನು ಅವನ ತಂದೆಯಿಂದ ರಕ್ಷಿಸಿದನು.

"ನರಸಿಂಹ" ಎಂಬ ಪದವು ಸಂಸ್ಕೃತ ಪದ "ನರ" ಅಂದರೆ ಮನುಷ್ಯ ಮತ್ತು "ಸಿಂಹ" ಪದದಿಂದ ಬಂದಿದೆ. ಹೀಗಾಗಿ, ಭಗವಂತ ಅಸುರನನ್ನು ಕೊಲ್ಲಲು ಭಾಗ ಮನುಷ್ಯ, ಭಾಗ ಸಿಂಹದ ರೂಪವನ್ನು ತೆಗೆದುಕೊಂಡನು. ನರಸಿಂಹನು ವರದಲ್ಲಿ ಇದ್ದ ಎಲ್ಲಾ ಅವಶ್ಯಕತೆಗಳನ್ನು ಪೂರೈಸಿದನು, ಅದರ ಮೂಲಕ ಅಜೇಯ ಹಿರಣ್ಯಕಶಿಪುವನ್ನು ಕೊಂದನು. 

ಪ್ರಹ್ಲಾದನ ಕಥೆ

ಪ್ರಹ್ಲಾದನು ತಾಯಿಯ ಹೊಟ್ಟೆಯಲ್ಲಿದ್ದಾಗ ನಾರದ ನ ವಿಷ್ಣುಸ್ತೋತ್ರಗಳನ್ನು ಕೇಳಿದನು. ಅವರಿಗೆ ಬಾಲ್ಯದಲ್ಲಿ ನಾರದರು ಕಲಿಸಿದರು. ಪರಿಣಾಮವಾಗಿ, ಅವನು ವಿಷ್ಣುವಿನ ಭಕ್ತನಾದನು. ಅವನ ತಂದೆ ಹಿರಣ್ಯಕಶ್ಯಪನಿಗೆ ಅವನ ಆಧ್ಯಾತ್ಮಿಕ ಒಲವು ಇಷ್ಟವಾಗಲಿಲ್ಲ ಮತ್ತು ಪ್ರಹ್ಲಾದನಿಗೆ ಎಚ್ಚರಿಕೆ ಕೊಟ್ಟನು. ಅವನ ತಂದೆಯ ಹಲವಾರು ಎಚ್ಚರಿಕೆಗಳ ಹೊರತಾಗಿಯೂ, ಪ್ರಹ್ಲಾದನು ವಿಷ್ಣುವನ್ನು ಆರಾಧಿಸುವುದನ್ನು ಮುಂದುವರೆಸಿದನು. ಅವನ ತಂದೆಯು ನಂತರ ಪ್ರಹ್ಲಾದನಿಗೆ ವಿಷ ತಿನ್ನಿಸಿ ಹತ್ಯೆ ಮಾಡಲು ನಿರ್ಧರಿಸಿದನು, ಆದರೆ ಪ್ರಹ್ಲಾದನು ಬದುಕುಳಿದನು. ನಂತರ ಹಿರಣ್ಯಕಶಿಪು ಆನೆಗಳಿಂದ ಹುಡುಗನನ್ನು ತುಳಿಸಿದನು, ಆದರೆ ಹುಡುಗ ಇನ್ನೂ ಬದುಕುಳಿದನು. ನಂತರ ಅವನು ಪ್ರಹ್ಲಾದನನ್ನು ವಿಷಪೂರಿತ ಹಾವುಗಳಿರುವ ಕೋಣೆಯಲ್ಲಿ ಇರಿಸಿದನು ಮತ್ತು ಹಾವುಗಳು ತಮ್ಮ ದೇಹದಿಂದ ಅವನಿಗೆ ಹಾಸಿಗೆಯನ್ನು ಮಾಡಿ ಅವನಿಗೆ ಅನುಕೂಲ ಮಾಡಿದವು. 

ನಂತರ ಪ್ರಹ್ಲಾದನನ್ನು ನದಿಗೆ ಎಸೆಯಲಾಯಿತು ಆದರೆ ವಿಷ್ಣುವು ಅವನನ್ನು ರಕ್ಷಿಸಿದನು. ಹಿರಣ್ಯಕಶಿಪುವಿನ ಸಹೋದರಿ ಹೋಲಿಕಾಳನ್ನು , ಬೆಂಕಿಯು ಸುಡುತ್ತಿರಲಿಲ್ಲ . ಹಿರಣ್ಯಕಶಿಪು ಪ್ರಹ್ಲಾದನನ್ನು ಬೆಂಕಿಯಲ್ಲಿ ಕುಳಿತ ಹೋಲಿಕೆಯ ಮಡಿಲಲ್ಲಿ ಕೂರಿಸಿದನು. ಪ್ರಹ್ಲಾದನು ವಿಷ್ಣುವನ್ನು ರಕ್ಷಿಸುವಂತೆ ಪ್ರಾರ್ಥಿಸಿದನು. ಪ್ರಹ್ಲಾದನು ಗಾಯಗೊಳ್ಳದೆ ಉಳಿದು ಹೋಲಿಕಾ ಸುಟ್ಟು ಸತ್ತಳು. ಈ ಘಟನೆಯನ್ನು ಹಿಂದೂ ಹಬ್ಬವಾದ ಹೋಳಿ ಎಂದು ಆಚರಿಸಲಾಗುತ್ತದೆ.

ಪ್ರಹ್ಲಾದ 
ಪ್ರಹ್ಲಾದನು ತನ್ನ ತಂದೆಗೆ ವಿಷ್ಣುವು ಎಲ್ಲೆಡೆ ಇದ್ದಾನೆ ಎಂದು ತೋರಿಸುತ್ತಾನೆ

ಕೊನೆಗೆ ಪ್ರಹ್ಲಾದನು ನರಸಿಂಹನಿಂದ ರಕ್ಷಿಸಲ್ಪಟ್ಟನು, ವಿಷ್ಣುವು ನರಸಿಂಹ ರೂಪದಲ್ಲಿ, ಮುಸ್ಸಂಜೆಯ ಹೊತ್ತಿನಲ್ಲಿ ಕಲ್ಲಿನ ಕಂಬದೊಳಗಿಂದ ಹೊರಹೊಮ್ಮಿ, ರಾಜನನ್ನು ತನ್ನ ತೊಡೆಯ ಮೇಲೆ ಇರಿಸಿ ಹೊಸ್ತಿಲಿನ ಮೇಲೆ ತನ್ನ ಚೂಪಾದ ಉಗುರುಗಳಿಂದ ಅವನನ್ನು ಕೊಂದನು. ಅವನ ಮನೆಗೆ, ಹೀಗೆ ಹಿರಣ್ಯಕಶಿಪುವಿಗಿದ್ದ ವರವನ್ನು ಮೀರದೆ ಅವನನ್ನು ಕೊಂದನು.

ಪ್ರಹ್ಲಾದ ನಂತರ ದೈತ್ಯರ ರಾಜನಾದನು. ಸಾವಿನ ನಂತರ ಮತ್ತು ವಿಷ್ಣುವಿನ ವಾಸಸ್ಥಾನವಾದ ವೈಕುಂಠದಲ್ಲಿ ಸ್ಥಾನವನ್ನು ಪಡೆದನು.

ಧರ್ಮಗ್ರಂಥದ ಉಲ್ಲೇಖಗಳು

ಭಗವದ್ಗೀತೆಯಲ್ಲಿ (10ನೇ ಅಧ್ಯಾಯ.30ನೇ ಶ್ಲೋಕದಲ್ಲಿ ) ಕೃಷ್ಣನು ಪ್ರಹ್ಲಾದನಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಯನ್ನು ನೀಡುತ್ತಾನೆ, ಅವನ ಕುರಿತು ತನ್ನ ಒಲವನ್ನು ತೋರಿಸುತ್ತಾನೆ:

ಅನುವಾದ: " ದೈತ್ಯ ರಾಕ್ಷಸರಲ್ಲಿ ನಾನು ಶ್ರದ್ಧಾವಂತ ಪ್ರಹ್ಲಾದ, ಉಪದ್ರವ ಮಾಡುವವರಲ್ಲಿ ನಾನು ಕಾಲನು, ಮೃಗಗಳಲ್ಲಿ ನಾನು ಸಿಂಹ, ಮತ್ತು ಪಕ್ಷಿಗಳಲ್ಲಿ ನಾನು ಗರುಡ. "

ನಂತರದ ಜೀವನ

ಶುಕ್ರಾಚಾರ್ಯರ ಬೋಧನೆ ಮತ್ತು ವಿಷ್ಣುವಿನ ಮೇಲಿನ ಅವನ ಅಚಲ ಭಕ್ತಿಯಿಂದಾಗಿ, ಪ್ರಹ್ಲಾದನು ಅಸುರರ ಪ್ರಬಲ ರಾಜನಾದನು. ಪ್ರಹ್ಲಾದನು ತನ್ನ ತಂದೆಯಾದ ಹಿರಣ್ಯಕಶಿಪುಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದ್ದನು. ಅವನು ತನ್ನ ಪ್ರಜೆಗಳ ಪ್ರೀತಿ ಮತ್ತು ಗೌರವವನ್ನು ಪಡೆದನು.

ಒಂದೇ ಒಂದು ಆಯುಧವನ್ನು ಎತ್ತದೆ, ಮತ್ತು ತನ್ನ ಸದ್ವರ್ತನೆಯ ಬಲದಿಂದ, ಪ್ರಹ್ಲಾದನು ಮೂರು ಲೋಕಗಳನ್ನು ಸುಲಭವಾಗಿ ಗೆದ್ದನು. ಇಂದ್ರನು ಸ್ವರ್ಗದಿಂದ ಓಡಿಹೋದನು. ನಂತರ ಇಂದ್ರನು ಮೋಸದಿಂದ ಪ್ರಹ್ಲಾದನು ತನ್ನ ನಡವಳಿಕೆಯ ಶಕ್ತಿಯನ್ನು ನೀಡುವಂತೆ ಮಾಡಿದನು. ಪರಿಣಾಮವಾಗಿ ಪ್ರಹ್ಲಾದನು ಮೂರು ಲೋಕಗಳ ನಿಯಂತ್ರಣವನ್ನು ಕಳೆದುಕೊಂಡನು.

ಅಸುರರು ತಮ್ಮ ರಾಜನ ಸದ್ಗುಣದ ದುರುಪಯೋಗ ಪಡೆದದ್ದಕ್ಕಾಗಿ ದೇವತೆಗಳ ಮೇಲೆ ಕೋಪಗೊಂಡು ಸ್ವರ್ಗವನ್ನು ಆಕ್ರಮಿಸಿದರು. ಅಸುರರಿಗೆ ಹೆದರಿದ ದೇವತೆಗಳು ಯಯಾತಿ, ರಾಜಿ ಮತ್ತು ಕಾಕುತ್ಸ್ಥರಂತಹ ಮಾನವ ರಾಜರ ಸಹಾಯವನ್ನು ಪಡೆದರು ಮತ್ತು ಅವರನ್ನು ಸೋಲಿಸಿದರು.

ಪ್ರಹ್ಲಾದನು ನಿತ್ಯ ಸಾವಿರಾರು ಬ್ರಾಹ್ಮಣರ ಸೇವೆ ಮಾಡುತ್ತಿದ್ದನು. ಒಂದು ದಿನ, ಅಜ್ಞಾನದಿಂದ, ಪ್ರಹ್ಲಾದನು ಒಬ್ಬ ಬ್ರಾಹ್ಮಣನ ಸೇವೆಯನ್ನು ಮರೆತನು. ಆ ಮನುಷ್ಯನು ಪ್ರಹ್ಲಾದನಿಗೆ ವಿಷ್ಣುವನ್ನು ಮರೆತು ಅಧರ್ಮಿಯಾಗುವನೆಂದು ಶಾಪ ನೀಡಿದನು. ವಿಷ್ಣುವು ಪ್ರಹ್ಲಾದನನ್ನು ಸೋಲಿಸಿದರೆ ಶಾಪವು ಭಂಗವಾಗುವುದಿತ್ತು.

ನಂತರ ಪ್ರಹ್ಲಾದನು ವೈಯಕ್ತಿಕವಾಗಿ ದೇವತೆಗಳ ಮೇಲೆ ದಾಳಿ ಮಾಡಿದನು ಮತ್ತು ಯುದ್ಧದಲ್ಲಿ ಇಂದ್ರನನ್ನು ಸೋಲಿಸಿದನು, ದೇವತೆಗಳ ರಾಜನಾದ ಇಂದ್ರನು ತನ್ನ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಬೇಕಾಯಿತು. ಇಂದ್ರನು ವಿಷ್ಣುವಿನ ಸಹಾಯವನ್ನು ಪಡೆದು ಪ್ರಹ್ಲಾದನನ್ನು ಸೋಲಿಸಿದನು. ವಿಷ್ಣುವು ಯುದ್ಧದಲ್ಲಿ ಇಂದ್ರನಿಗೆ ಸಹಾಯ ಮಾಡುತ್ತಿದ್ದಾನೆಂದು ಪ್ರಹ್ಲಾದನು ಅರ್ಥಮಾಡಿಕೊಂಡು ಅವನು ತನ್ನ ಸೈನ್ಯವನ್ನು ಹಿಂತೆಗೆದುಕೊಂಡನು. ಪ್ರಹ್ಲಾದನು ಮೊದಲು ತನ್ನ ರಾಜ್ಯವನ್ನು ಅಂಧಕನಿಗೆ ನೀಡಿದನು, ಆದರೆ ಅಂಧಕನನ್ನು ಶಿವನು ಸೋಲಿಸಿದನು. ಆದ್ದರಿಂದ ಪ್ರಹ್ಲಾದನು ಅದನ್ನು ತನ್ನ ಮಗ ವಿರೋಚನನಿಗೆ ಕೊಟ್ಟು ತೀರ್ಥಯಾತ್ರೆಯನ್ನು ಕೈಗೊಂಡನು. 

ಕುರುಡ ಮತ್ತು ಅಂಗವಿಕಲನಾದ ಅಂಧಕಾಸುರನು ತನ್ನ ಅಂಗವೈಕಲ್ಯಗಳನ್ನು ಜಯಿಸಿ ಬ್ರಹ್ಮದೇವನ ವರದಿಂದ ಪರಾಕ್ರಮಶಾಲಿಯೂ ಮತ್ತು ಅಜೇಯನೂ ಆಗಿದ್ದಾನೆ ಎಂದು ಪ್ರಹ್ಲಾದನಿಗೆ ತಿಳಿದಾಗ, ಅವನು ಸ್ವಯಂಪ್ರೇರಣೆಯಿಂದ ಅಸುರರ ಮೇಲಿನ ತನ್ನ ಅಧಿಪತ್ಯವನ್ನು ಅಂಧಕನಿಗೆ ಬಿಟ್ಟುಕೊಟ್ಟು ಅವನ ಸಾಮಂತನಾದನು. ಅಂಧಕನು ಕೈಲಾಸ ಪರ್ವತದ ಮೇಲೆ ದಾಳಿ ಮಾಡಿದಾಗ ಪ್ರಹ್ಲಾದ, ವಿರೋಚನ, ಬಲಿ ಮತ್ತು ಬಾಣರು ಶಿವ ಮತ್ತು ಇತರ ದೇವರುಗಳ ವಿರುದ್ಧ ಹೋರಾಡಿದರು. ಪ್ರಹ್ಲಾದನು ಆಕ್ರಮಣದ ವಿರುದ್ಧ ಅಂಧಕನಿಗೆ ಬಲವಾಗಿ ಸಲಹೆ ನೀಡಿದ್ದನು, ಆದರೆ ಅಂಧಕ ನಿರಾಕರಿಸಿದನು. ಅಂಧಕನು ಅಂತಿಮವಾಗಿ ಶಿವನಿಂದ ಸೋಲಿಸಲ್ಪಟ್ಟನು ಮತ್ತು ಪ್ರಹ್ಲಾದನು ಮತ್ತೊಮ್ಮೆ ಅಸುರರ ರಾಜನಾದನು.

ಪ್ರಹ್ಲಾದನು ಸಾಗರ ಮಂಥನದ ಸಮಯದಲ್ಲಿ ಇದ್ದನು ಮತ್ತು ದೇವತೆಗಳ ವಿರುದ್ಧ ತಾರಕಮಯ ಯುದ್ಧದಲ್ಲಿಯೂ ಹೋರಾಡಿದನು.

ಪ್ರಹ್ಲಾದ ಮಗ ವಿರೋಚನ. ಅವನ ಮಗನೇ ಬಲಿ ರಾಜನು. ವಿರೋಚನನ ಔದಾರ್ಯವನ್ನು ಉಪಯೋಗಿಸಿಕೊಂಡು ದೇವತೆಗಳು ಅವನನ್ನು ಕೊಂದರು. ಪ್ರಹ್ಲಾದನು ತನ್ನ ಮೊಮ್ಮಗ ಬಲಿಯನ್ನು ಸಾಕಿ ಸಲಹಿ ದೊಡ್ಡವನನ್ನಾಗಿ ಮಾಡಿದನು. ನಂತರ ಪ್ರಹ್ಲಾದ ಮತ್ತು ಬಲಿ ಇವರುಗಳು ವಿಷ್ಣುವಿನ ಆದೇಶದಂತೆ ಸುತಲ ಲೋಕದಲ್ಲಿ ವಾಸಿಸುತ್ತಿದ್ದರು.

ಅಸುರರನ್ನು ದೇವತೆಗಳಿಂದ ರಕ್ಷಿಸಲು ಶಿವನಿಂದ ಮೃತಸಂಜೀವನಿ ಮಂತ್ರವನ್ನು ಪಡೆಯಲು ಶುಕ್ರಾಚಾರ್ಯರನ್ನು ಕೇಳಿಕೊಂಡವನು ಪ್ರಹ್ಲಾದ.

ದೀರ್ಘಾಯುಷ್ಯದ ನಂತರ ಪ್ರಹ್ಲಾದನು ವೈಕುಂಠವನ್ನು ತಲುಪಿದನು. ಪ್ರಹ್ಲಾದನ ಮರಿಮೊಮ್ಮಗನು ಸಾವಿರ ಶಸ್ತ್ರಸಜ್ಜಿತ ಬಾಣಾಸುರನು, ಅವನು ಯುದ್ಧದಲ್ಲಿ ಕೃಷ್ಣನಿಂದ ಸೋಲಿಸಲ್ಪಟ್ಟನುನು.

ಯಾತ್ರಾ ಸ್ಥಳಗಳು

ಭಾರತದಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಉತ್ತರ ಪ್ರದೇಶದ ಕೆಳಗಿನ ತಾಣಗಳು ಪ್ರಹ್ಲಾದ ಅಥವಾ ನರಸಿಂಹನೊಂದಿಗೆ ಸಂಬಂಧ ಹೊಂದಿದ್ದು ತೀರ್ಥಯಾತ್ರಾ ಸ್ಥಳಗಳಾಗಿವೆ:

  • ಪ್ರಹ್ಲಾದ್ ಘಾಟ್, ಹರ್ದೋಯಿ
  • ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ, ನೀರಾ ನರಸಿಂಗಪುರ, ಮಹಾರಾಷ್ಟ್ರ
  • ಮಲಕೊಂಡ, ಆಂಧ್ರಪ್ರದೇಶ
  • ಸಿಂಹಾಚಲಂ , ಆಂಧ್ರಪ್ರದೇಶ
  • ಅಹೋಬಿಲಂ
  • ಕದಿರಿ
  • ಯಾದಗಿರಿಗುಟ್ಟ ದೇವಸ್ಥಾನ
  • ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ, ಪೆನ್ನ ಅಹೋಬಿಲಂ

ಪಾಕಿಸ್ತಾನದಲ್ಲಿ:

  • ಪ್ರಹ್ಲಾದಪುರಿ ದೇವಸ್ಥಾನ, ಮುಲ್ತಾನ್

ಸಂಸ್ಕೃತಿಯಲ್ಲಿ

ಪ್ರಹಲ್ಲಾದ ನಾಟಕ (ಪ್ರಹ್ಲಾದ-ನಾಟಕ ಎಂದೂ ಸಹ ಉಚ್ಚರಿಸಲಾಗುತ್ತದೆ), ಒಡಿಶಾದ ಗಂಜಾಂನ ಜಾನಪದ ನೃತ್ಯ-ರಂಗಮಂದಿರವು ನರಸಿಂಹ ಮತ್ತು ಹಿರಣ್ಯಕಶಿಪುವಿನ ಕಥೆಯನ್ನು ನಿರೂಪಿಸುತ್ತದೆ. ಈ ಕಲಾ ಪ್ರಕಾರವು 18 ನೇ ಶತಮಾನದಷ್ಟು ಹಿಂದಿನದು, ಜಲಾಂತರ ರಾಜ್ಯದ ಹಿಂದಿನ ರಾಜ ರಾಮಕೃಷ್ಣ ಛೋಟರಾಯನು ನಾಟಕದ ಪಠ್ಯ ಮತ್ತು ಹಾಡುಗಳನ್ನು ಬರೆದು ಅದನ್ನು ಪ್ರಾರಂಭಿಸಿದನು.

ಜನಪ್ರಿಯ ಸಂಸ್ಕೃತಿಯಲ್ಲಿ

ಪ್ರಹ್ಲಾದನ ಕಥೆಯು ವಿವಿಧ ಚಲನಚಿತ್ರಗಳ ವಿಷಯವಾಗಿದೆ

ವರ್ಷ ಶೀರ್ಷಿಕೆ ಭಾಷೆ Ref.
1917 ಭಕ್ತ ಪ್ರಲ್ಹಾದ್ ಮೂಕ
1932 ಭಕ್ತ ಪ್ರಹ್ಲಾದ ತೆಲುಗು
1939 ಪ್ರಹ್ಲಾದ ತಮಿಳು
1941 ಪ್ರಹ್ಲಾದ ಮಲಯಾಳಂ
1942 ಭಕ್ತ ಪ್ರಹ್ಲಾದ ತೆಲುಗು
1942 ಭಕ್ತ ಪ್ರಹ್ಲಾದ ಕನ್ನಡ
1946 ಭಕ್ತ ಪ್ರಹ್ಲಾದ್ ಹಿಂದಿ
1958 ಭಕ್ತ ಪ್ರಹ್ಲಾದ್ ಅಸ್ಸಾಮಿ
1958 ಭಕ್ತ ಪ್ರಹ್ಲಾದ ಕನ್ನಡ
1967 ಭಕ್ತ ಪ್ರಹ್ಲಾದ ತೆಲುಗು
1972 ಹರಿ ದರ್ಶನ್ ಹಿಂದಿ
1983 ಭಕ್ತ ಪ್ರಹ್ಲಾದ ಕನ್ನಡ

ಇವನ್ನೂ ಸಹ ನೋಡಿ


ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಪ್ರಹ್ಲಾದ ಕಥೆಪ್ರಹ್ಲಾದ ನಂತರದ ಜೀವನಪ್ರಹ್ಲಾದ ಯಾತ್ರಾ ಸ್ಥಳಗಳುಪ್ರಹ್ಲಾದ ಸಂಸ್ಕೃತಿಯಲ್ಲಿಪ್ರಹ್ಲಾದ ಜನಪ್ರಿಯ ಸಂಸ್ಕೃತಿಯಲ್ಲಿಪ್ರಹ್ಲಾದ ಉಲ್ಲೇಖಗಳುಪ್ರಹ್ಲಾದ ಬಾಹ್ಯ ಕೊಂಡಿಗಳುಪ್ರಹ್ಲಾದನರಸಿಂಹಭಕ್ತಿವಿಷ್ಣುವೈಷ್ಣವ ಪಂಥಹಿರಣ್ಯ ಕಶಿಪು

🔥 Trending searches on Wiki ಕನ್ನಡ:

ನಂಜನಗೂಡುವಿಜಯಪುರ ಜಿಲ್ಲೆಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಗೋಪಾಲಕೃಷ್ಣ ಅಡಿಗಶಬರಿಕನ್ನಡ ಜಾನಪದಪ್ರಿಯಾಂಕ ಗಾಂಧಿವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಹರಿಶ್ಚಂದ್ರಹಣಕಾಸುಮಾಧ್ಯಮಉಗ್ರಾಣಭಾರತದ ಸರ್ವೋಚ್ಛ ನ್ಯಾಯಾಲಯಡಿ.ವಿ.ಗುಂಡಪ್ಪಮೈಸೂರುಕನ್ನಡ ಸಾಹಿತ್ಯ ಪ್ರಕಾರಗಳುಶ್ರೀಕೃಷ್ಣದೇವರಾಯಆರೋಗ್ಯಭಾರತದಲ್ಲಿನ ಜಾತಿ ಪದ್ದತಿದ್ವಾರಕೀಶ್ತ. ರಾ. ಸುಬ್ಬರಾಯಅಲಂಕಾರಬೇಲೂರುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಚಿಕ್ಕಬಳ್ಳಾಪುರಜಾಗತಿಕ ತಾಪಮಾನ ಏರಿಕೆಜ್ಞಾನಪೀಠ ಪ್ರಶಸ್ತಿಕರ್ನಾಟಕದ ಅಣೆಕಟ್ಟುಗಳುಸೂರ್ಯ (ದೇವ)ಕಾಂಕ್ರೀಟ್ರತ್ನತ್ರಯರುವಾಣಿಜ್ಯ(ವ್ಯಾಪಾರ)ಮಾಸಓಂ (ಚಲನಚಿತ್ರ)ಕಾಮಸೂತ್ರಉತ್ತರ ಕರ್ನಾಟಕವಿವಾಹಅಂಟುಬಿಳಿಗಿರಿರಂಗಹುಲಿಸಾಮ್ರಾಟ್ ಅಶೋಕಧೃತರಾಷ್ಟ್ರಮಲೇರಿಯಾಜ್ಯೋತಿಬಾ ಫುಲೆಬಾಗಿಲುರಾಮಾಚಾರಿ (ಕನ್ನಡ ಧಾರಾವಾಹಿ)ರಾಧಿಕಾ ಗುಪ್ತಾಸವದತ್ತಿಇದ್ದಿಲುಮಹಾತ್ಮ ಗಾಂಧಿನಾಟಕಧರ್ಮಸ್ಥಳಭಾರತದ ಇತಿಹಾಸಕೈಗಾರಿಕೆಗಳುಕರ್ನಾಟಕದ ಜಾನಪದ ಕಲೆಗಳುರಾಮ್ ಮೋಹನ್ ರಾಯ್ಪರಮಾತ್ಮ(ಚಲನಚಿತ್ರ)ಉದಯವಾಣಿಯಜಮಾನ (ಚಲನಚಿತ್ರ)ಕನ್ನಡ ಚಿತ್ರರಂಗಭೂಮಿ ದಿನಭಾರತೀಯ ಸಮರ ಕಲೆಗಳುಭಾರತೀಯ ಜನತಾ ಪಕ್ಷಭಾರತದ ಚುನಾವಣಾ ಆಯೋಗಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಋತುಚಂದ್ರಗುಪ್ತ ಮೌರ್ಯಕನ್ನಡ ಛಂದಸ್ಸುಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಸಮುದ್ರಚಿತ್ರದುರ್ಗಭಾರತದ ರಾಷ್ಟ್ರಪತಿಗಳ ಪಟ್ಟಿದಾಸ ಸಾಹಿತ್ಯಗೋತ್ರ ಮತ್ತು ಪ್ರವರಅಂತಿಮ ಸಂಸ್ಕಾರಮುರುಡೇಶ್ವರಪೆಟ್ರೋಮ್ಯಾಕ್ಸ್ (ಚಲನಚಿತ್ರ)ಎಂ. ಕೆ. ಇಂದಿರ🡆 More