ಪುರುಷೋತ್ತಮ ಬಿಳಿಮಲೆ: ತುಳು ಜಾನಪದ ವಿದ್ವಾಂಸೆರು

ಡಾ.

ಪುರುಷೋತ್ತಮ ಬಿಳಿಮಲೆ ಜಾನಪದ, ಸಾಂಸ್ಕೃತಿಕ ಅಧ್ಯಯನ, ಯಕ್ಷಗಾನ ಕ್ಷೇತ್ರಗಳಲ್ಲಿ ಖ್ಯಾತಿ ಗಳಿಸಿರುವ ವಿದ್ವಾಂಸರು.

ಪುರುಷೋತ್ತಮ ಬಿಳಿಮಲೆ
ಪುರುಷೋತ್ತಮ ಬಿಳಿಮಲೆ: ಜನನ, ವಿದ್ಯಾಭ್ಯಾಸ, ಬಿಳಿಮಲೆಯವರ ಪುಸ್ತಕಗಳು
ಪುರುಷೋತ್ತಮ ಬಿಳಿಮಲೆ
ಜನನ೨೧ನೇ ಆಗಸ್ಟ್ ೧೯೫೫
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ ಗ್ರಾಮದ ಬಿಳಿಮಲೆ.
ವೃತ್ತಿಜಾನಪದ ವಿದ್ವಾಂಸ, ಲೇಖಕ, ಪ್ರಾಧ್ಯಾಪಕ,
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮಂಗಳೂರು ವಿಶ್ವವಿದ್ಯಾಲಯ
ಪ್ರಕಾರ/ಶೈಲಿವಿಮರ್ಶೆ, ಕಥೆ, ಸಂಶೋಧನೆ,
ವಿಷಯಯಕ್ಷಗಾನ, ದಲಿತ ಜಗತ್ತು, ಬಂಡಾಯ ದಲಿತ ಸಾಹಿತ್ಯ, ಕರಾವಳಿ ಜಾನಪದ, ಶಿಷ್ಟ-ಪರಿಶಿಷ್ಟ, ಕೊರಗರು, ಜಾನಪದ ಕ್ಷೇತ್ರಕಾರ್ಯ
ಪ್ರಮುಖ ಪ್ರಶಸ್ತಿ(ಗಳು)ರಾಜ್ಯೋತ್ಸವ ಪ್ರಶಸ್ತಿ, ಆರ‍್ಯಭಟ ಪ್ರಶಸ್ತಿ

ಜನನ

ಪುರುಷೋತ್ತಮ ಬಿಳಿಮಲೆಯವರು ೨೧-೮-೧೯೫೫ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜದಲ್ಲಿ ಹುಟ್ಟಿದರು. ಇವರ ತಂದೆ ಬಿ.ಶೇಷಪ್ಪಗೌಡ, ತಾಯಿ ಗೌರಮ್ಮ.

ವಿದ್ಯಾಭ್ಯಾಸ

ಪ್ರಾಥಮಿಕ ಶಿಕ್ಷಣ ಪಂಜದ ಬಳಿಯ ಕೂತ್ಕುಂಜ ಶಾಲೆ. ಪ್ರೌಢಶಾಲೆಗೆ ಸೇರಿದ್ದು ಪಂಜದಲ್ಲಿ. ಕಾಲೇಜು ವಿದ್ಯಾಭ್ಯಾಸ ಸುಬ್ರಹ್ಮಣ್ಯೇಶ್ವರ ಜ್ಯೂನಿಯರ್ ಕಾಲೇಜ್, ವಿವೇಕಾನಂದ ಕಾಲೇಜು ಪುತ್ತೂರು. ಮದರಾಸು ವಿಶ್ವವಿದ್ಯಾಲಯದಿಂದ ೧೯೭೯ರಲ್ಲಿ ಮೊದಲ ರ‍್ಯಾಂಕ್ ಪಡೆದು ಎಂ.ಎ. ಪದವಿ. ಮಂಗಳೂರು ವಿಶ್ವವಿದ್ಯಾಲಯದಿಂದ “ಸುಳ್ಯ ಪರಿಸರದ ಗೌಡಜನಾಂಗ : ಒಂದು ಸಾಂಸ್ಕೃತಿಕ ಅಧ್ಯಯನ” ಮಹಾ ಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ. ತುಳು, ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಪ್ರಭುತ್ವ.

೧೯೭೯ರಲ್ಲಿ ಉದ್ಯೋಗಕ್ಕಾಗಿ ಸೇರಿದ್ದು ಸುಳ್ಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ನಂತರ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕೆಲಕಾಲ. ೧೯೯೨ರಿಂದ ೯೮ರವರೆಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ ಪ್ರಾಧ್ಯಾಪಕರ ಹುದ್ದೆ. ೧೯೯೮ರಿಂದ ದೆಹಲಿಯ ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್‌ನಲ್ಲಿ ಜನಾಂಗಿಯ ಸಂಗೀತ ಪತ್ರಗಾರ ಮತ್ತು ಸಂಶೋಧನಾ ಕೇಂದ್ರದಲ್ಲಿ ಉಪನಿರ್ದೇಶಕರಾಗಿ, ನಿರ್ದೇಶಕರಾಗಿ ಹೊತ್ತ ಜವಾಬ್ದಾರಿ. ಹಂಪಿ ವಿಶ್ವವಿದ್ಯಾಲಯದಲ್ಲಿದ್ದಾಗಲೇ ಜಾನಪದ ವಿಭಾಗದ ಮುಖ್ಯಸ್ಥರಾಗಿ, ಕರ್ನಾಟಕ ಜಾನಪದ ಅಕಾಡಮಿಯ ಸದಸ್ಯರಾಗಿ. ರಾಜ್ಯ ವಯಸ್ಕರ ಶಿಕ್ಷಣ ಸಮಿತಿ ಸದಸ್ಯರಾಗಿ ವಿವಿಧ ಹುದ್ದೆಗಳಲ್ಲಿ ಸೇವೆ. ಎಂ.ಫಿಲ್ ೮ ವಿದ್ಯಾರ್ಥಿಗಳಿಗೆ, ೭ ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಯಶಸ್ವಿ ಮಾರ್ಗದರ್ಶನ. ಟೋಕಿಯೋ, ಜೆರೂಸಲೇಮ್‌ಗೆ ಹಲವಾರು ಬಾರಿ ಭೇಟಿ, ಪಡೆದ ಅನುಭವ.ಪ್ರಸ್ತುತ ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ

ಪುರುಷೋತ್ತಮ ಬಿಳಿಮಲೆ: ಜನನ, ವಿದ್ಯಾಭ್ಯಾಸ, ಬಿಳಿಮಲೆಯವರ ಪುಸ್ತಕಗಳು 
RRC ಸಭೆಯಲ್ಲಿ ಪುರುಷೋತ್ತಮ ಬಿಳಿಮಲೆ

ಹಲವಾರು ಕೃತಿಗಳ ಪ್ರಕಟಣೆ. ಮೆಕೆಂಜಿಯ ಕೈಫಿಯತ್ತುಗಳು, ಲಿಂಗರಾಜ ಹುಕುಂ ನಾಮ, ಕಂಬುಳ, ದಲಿತ ಜಗತ್ತು, ಬಂಡಾಯ ದಲಿತ ಸಾಹಿತ್ಯ, ಕರಾವಳಿ ಜಾನಪದ, ಶಿಷ್ಟ-ಪರಿಶಿಷ್ಟ, ಕೊರಗರು, ಜಾನಪದ ಕ್ಷೇತ್ರಕಾರ್ಯ, ಕೋಮುವಾದ ಮತ್ತು ಜನ ಸಂಸ್ಕೃತಿ, ಹಂಪಿ ಜಾನಪದ, ಕೂಡುಕಟ್ಟು, ಹುಲಿಗೆಮ್ಮ, ಕುಮಾರರಾಮ. ಸಂಪಾದಿತ-ಕನ್ನಡ ಭಾಷಾ ಪಠ್ಯ ಪುಸ್ತಕಗಳು, ಲೋಹಿಯಾವಾದ ಕೆಲವು ಟಿಪ್ಪಣಿಗಳು, ದೇವರು ದೆವ್ವ ವಿಜ್ಞಾನ, ಯಕ್ಷಗಾನ ಪ್ರಸಂಗಗಳು, ಅಕ್ಷರ ವಿಮೋಚನೆ, ವಿಚಾರ ಸಾಹಿತ್ಯ, ಕೊಡಗು ಮತ್ತು ದ. ಕನ್ನಡ ಜಿಲ್ಲಾ ದರ್ಶನ, ಸಿರಿ ಮುಂತಾದುವು. ಹಲವಾರು ಸಂಶೋಧನೆ ನಡೆಸಿ ಕೃತಿ ಪ್ರಕಟಿತ. ಹಲವಾರು ನಿಯತ ಕಾಲಿಕೆಗಳ ಸಂಪಾದಕತ್ವ.

ಬಿಳಿಮಲೆಯವರ ಪುಸ್ತಕಗಳು

  1. ಮೆಕೆಂಜಿಯ ಕೈಫಿಯತ್ತುಗಳು
  2. ಲಿಂಗರಾಜ ಹುಕುಂನಾಮೆ
  3. ಕಂಬುಳ
  4. ದಲಿತ ಜಗತ್ತು
  5. ಬಂಡಾಯ ದಲಿತ ಸಾಹಿತ್ಯ
  6. ಕರಾವಳಿ ಜಾನಪದ
  7. ಶಿಷ್ಟ-ಪರಿಶಿಷ್ಟ
  8. ಕೊರಗರು
  9. ಜಾನಪದ ಕ್ಷೇತ್ರಕಾರ್ಯ
  10. ಕೋಮುವಾದ ಮತ್ತು ಜನ ಸಂಸ್ಕೃತಿ
  11. ಹಂಪಿ ಜಾನಪದ
  12. ಕೂಡುಕಟ್ಟು
  13. ಹುಲಿಗೆಮ್ಮ
  14. ಕುಮಾರರಾಮ
  15. ಕನ್ನಡ ಭಾಷಾ ಪಠ್ಯ ಪುಸ್ತಕಗಳು(ಸಂ)
  16. ಲೋಹಿಯಾವಾದ ಕೆಲವು ಟಿಪ್ಪಣಿಗಳು(ಸಂ)
  17. ದೇವರು ದೆವ್ವ ವಿಜ್ಞಾನ(ಸಂ)
  18. ಯಕ್ಷಗಾನ ಪ್ರಸಂಗಗಳು(ಸಂ)
  19. ಅಕ್ಷರ ವಿಮೋಚನೆ(ಸಂ)
  20. ವಿಚಾರ ಸಾಹಿತ್ಯ(ಸಂ)
  21. ಕೊಡಗು ಮತ್ತು ದ. ಕನ್ನಡ ಜಿಲ್ಲಾ ದರ್ಶನ(ಸಂ)
  22. ಸಿರಿ(ಸಂ)
  23. ಬಹುರೂಪ( ೨೦೧೩)
  24. ಮೆಲುದನಿ ( ೨೦೧೪)
ಪುರುಷೋತ್ತಮ ಬಿಳಿಮಲೆ: ಜನನ, ವಿದ್ಯಾಭ್ಯಾಸ, ಬಿಳಿಮಲೆಯವರ ಪುಸ್ತಕಗಳು 
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸನ್ಮಾನ 2013

ಸಾಧನೆ/ಪ್ರಶಸ್ತಿಗಳು

  1. ಕರಾವಳಿ ಜಾನಪದ ಬೂಕುಗು ಗುಂಡ್ಮಿ ಚಂದ್ರಶೇಖರ ಐತಾಳ ಪ್ರಶಸ್ತಿ
  2. ಶಿಷ್ಟ-ಪರಿಶಿಷ್ಟ ಬೂಕುಗು ಬಿ.ಎಚ್. ಶ್ರೀಧರ ಪ್ರಶಸ್ತಿ
  3. ಮಲ್ಲಿಕಾರ್ಜುನ ಮನ್ಸೂರ ಪ್ರಶಸ್ತಿ
  4. ಆರ‍್ಯಭಟ ಪ್ರಶಸ್ತಿ
  5. ಕೂಡುಕಟ್ಟು ಕೃತಿಗೆ ಸಾರಂಗ ಮಠ ಪ್ರಶಸ್ತಿ
  6. ಕು.ಶಿ. ಜಾನಪದ ಪ್ರಶಸ್ತಿ
  7. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  8. ಅಕ್ಷರ ಸಿರಿ ಪ್ರಶಸ್ತಿ೨೦೧೪
  9. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಆಕಾಡೆಮಿಯ ಗೌರವ ಪುರಸ್ಕಾರ.೨೦೧೭.
ಪುರುಷೋತ್ತಮ ಬಿಳಿಮಲೆ: ಜನನ, ವಿದ್ಯಾಭ್ಯಾಸ, ಬಿಳಿಮಲೆಯವರ ಪುಸ್ತಕಗಳು 
ಪ್ರೊ.ಬಿಳಿಮಲೆಯವರಿಗೆ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ-೨೦೧೭
  1. ಕರ್ನಾಟಕ ಸಾಹಿತ್ಯ ಅಕಾಡೆಮಿಯ 2018ನೆಯ ವರ್ಷದ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತರು.

ಸಂಘಟನೆ

  1. ದೆಹಲಿ ಕನ್ನಡ ಸಂಘ ಎರಡು ಅವಧಿಗೆ ಅಧ್ಯಕ್ಷರಾಗಿ ದುಡಿದಿದ್ದಾರೆ.

ಉಲ್ಲೇಖ

Tags:

ಪುರುಷೋತ್ತಮ ಬಿಳಿಮಲೆ ಜನನಪುರುಷೋತ್ತಮ ಬಿಳಿಮಲೆ ವಿದ್ಯಾಭ್ಯಾಸಪುರುಷೋತ್ತಮ ಬಿಳಿಮಲೆ ಬಿಳಿಮಲೆಯವರ ಪುಸ್ತಕಗಳುಪುರುಷೋತ್ತಮ ಬಿಳಿಮಲೆ ಸಾಧನೆಪ್ರಶಸ್ತಿಗಳುಪುರುಷೋತ್ತಮ ಬಿಳಿಮಲೆ ಸಂಘಟನೆಪುರುಷೋತ್ತಮ ಬಿಳಿಮಲೆ ಉಲ್ಲೇಖಪುರುಷೋತ್ತಮ ಬಿಳಿಮಲೆ

🔥 Trending searches on Wiki ಕನ್ನಡ:

ಮಾನವ ಸಂಪನ್ಮೂಲ ನಿರ್ವಹಣೆಮಹಾಲಕ್ಷ್ಮಿ (ನಟಿ)ಋಗ್ವೇದಮತದಾನಗುರುಡಿ.ಎಸ್.ಕರ್ಕಿಎಚ್.ಎಸ್.ವೆಂಕಟೇಶಮೂರ್ತಿಪ್ರಬಂಧ ರಚನೆಉಪ್ಪಿನ ಸತ್ಯಾಗ್ರಹದಾಸ ಸಾಹಿತ್ಯಕನ್ನಡದಲ್ಲಿ ಗದ್ಯ ಸಾಹಿತ್ಯಜಾಹೀರಾತುಗದ್ಯಯೋಗ ಮತ್ತು ಅಧ್ಯಾತ್ಮಭಾರತದ ಜನಸಂಖ್ಯೆಯ ಬೆಳವಣಿಗೆಮೈಸೂರು ಅರಮನೆರೇಡಿಯೋಚೆನ್ನಕೇಶವ ದೇವಾಲಯ, ಬೇಲೂರುಕಲ್ಯಾಣಿಆದಿ ಶಂಕರಗೋವಿಂದ ಪೈದೇವುಡು ನರಸಿಂಹಶಾಸ್ತ್ರಿಪಾಟೀಲ ಪುಟ್ಟಪ್ಪಜಿ.ಪಿ.ರಾಜರತ್ನಂಚಿನ್ನರೇಣುಕಆದಿ ಕರ್ನಾಟಕಪು. ತಿ. ನರಸಿಂಹಾಚಾರ್ಜಾನ್ ಸ್ಟೂವರ್ಟ್ ಮಿಲ್ಭಾರತದ ಪಂಚಾಯತ್ ರಾಜ್ ವ್ಯವಸ್ಥೆಅರ್ಥಶಾಸ್ತ್ರವರ್ಗೀಯ ವ್ಯಂಜನರಾಘವಾಂಕಕಾಂತಾರ (ಚಲನಚಿತ್ರ)ಅಕ್ಷಾಂಶ ಮತ್ತು ರೇಖಾಂಶಹನುಮಾನ್ ಚಾಲೀಸಸಾರಾ ಅಬೂಬಕ್ಕರ್ಮಹೇಂದ್ರ ಸಿಂಗ್ ಧೋನಿವೃದ್ಧಿ ಸಂಧಿಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ರೈತವಾರಿ ಪದ್ಧತಿಮುಹಮ್ಮದ್ಕಲ್ಲಂಗಡಿಶ್ರೀ ರಾಮ ಜನ್ಮಭೂಮಿರವಿಚಂದ್ರನ್ವಡ್ಡಾರಾಧನೆಪೆರಿಯಾರ್ ರಾಮಸ್ವಾಮಿಸಹಕಾರಿ ಸಂಘಗಳುಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗದ್ದಕಟ್ಟುಮೂಲಭೂತ ಕರ್ತವ್ಯಗಳುಯೋಗವಾಹಜಾಗತಿಕ ತಾಪಮಾನ ಏರಿಕೆಸಿಂಧೂತಟದ ನಾಗರೀಕತೆಕವಿಗಳ ಕಾವ್ಯನಾಮಕನ್ನಡದಲ್ಲಿ ವಚನ ಸಾಹಿತ್ಯನಾಕುತಂತಿಭಾರತೀಯ ಸಂಸ್ಕೃತಿಪ್ರೇಮಾಕೆ. ಎಸ್. ನರಸಿಂಹಸ್ವಾಮಿವೃತ್ತಪತ್ರಿಕೆಚನ್ನಬಸವೇಶ್ವರವಾಸ್ತವಿಕವಾದದಶಾವತಾರಬಾಲ ಗಂಗಾಧರ ತಿಲಕರಾಜ್‌ಕುಮಾರ್ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಕೋವಿಡ್-೧೯ಪುರೂರವಸ್ತಾಳಗುಂದ ಶಾಸನಕರ್ನಾಟಕದ ಹಬ್ಬಗಳುಅಶ್ವತ್ಥಮರಫೇಸ್‌ಬುಕ್‌ಭಾರತದ ರಾಷ್ಟ್ರಗೀತೆಖೊಖೊ🡆 More