ಪುರುಷ

ಗಂಡಸು ಎಂದರೆ ಒಬ್ಬ ಗಂಡು ಮಾನವ.

ಈ ಪದವು ಸಾಮಾನ್ಯವಾಗಿ ಒಬ್ಬ ವಯಸ್ಕ ಗಂಡಿಗೆ ಮೀಸಲಾಗಿದೆ, ಹುಡುಗ ಪದವು ಗಂಡು ಮಗು ಅಥವಾ ಹದಿಹರೆಯದವನಿಗೆ ಬಳಸಲಾಗುವ ಸಾಮಾನ್ಯ ಪದವಾಗಿದೆ.

ಪುರುಷ

ಬಹುತೇಕ ಇತರ ಗಂಡು ಸಸ್ತನಿಗಳಂತೆ, ಒಬ್ಬ ಗಂಡಸಿನ ಜಿನೋಮ್ ವಿಶಿಷ್ಟವಾಗಿ ತನ್ನ ತಾಯಿಯಿಂದ ಒಂದು ಎಕ್ಸ್ ವರ್ಣತಂತು ಮತ್ತು ತನ್ನ ತಂದೆಯಿಂದ ಒಂದು ವೈ ವರ್ಣತಂತುವನ್ನು ಆನುವಂಶಿಕವಾಗಿ ಪಡೆಯುತ್ತದೆ. ಗಂಡು ಭ್ರೂಣವು ಹೆಣ್ಣು ಭ್ರೂಣಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಆ್ಯಂಡ್ರೊಜನ್ ಮತ್ತು ಕಡಿಮೆ ಪ್ರಮಾಣದಲ್ಲಿ ಈಸ್ಟ್ರೊಜೆನ್ ಅನ್ನು ಉತ್ಪಾದಿಸುತ್ತದೆ. ಈ ಲಿಂಗ ಹಾರ್ಮೋನುಗಳ ತುಲನಾತ್ಮಕ ಪ್ರಮಾಣಗಳಲ್ಲಿನ ವ್ಯತ್ಯಾಸವೇ ಗಂಡಸರನ್ನು ಹೆಂಗಸರಿಂದ ವ್ಯತ್ಯಾಸ ಮಾಡುವ ಶಾರೀರಿಕ ಭಿನ್ನತೆಗಳಿಗೆ ಬಹುತೇಕವಾಗಿ ಜವಾಬ್ದಾರವಾಗಿದೆ. ಪ್ರೌಢಾವಸ್ಥೆಯ ಅವಧಿಯಲ್ಲಿ, ಆ್ಯಂಡ್ರೊಜನ್‍ನ ಉತ್ಪತ್ತಿಯನ್ನು ಉತ್ತೇಜಿಸುವ ಹಾರ್ಮೋನುಗಳು ಆನುಷಂಗಿಕ ಲೈಂಗಿಕ ಲಕ್ಷಣಗಳ ಬೆಳವಣಿಗೆಗೆ ಕಾರಣವಾಗುತ್ತವೆ, ಹಾಗಾಗಿ ಲಿಂಗಗಳ ನಡುವೆ ಹೆಚ್ಚು ವ್ಯತ್ಯಾಸಗಳನ್ನು ಪ್ರದರ್ಶಿಸುತ್ತವೆ. ಆದರೆ, ಮೇಲಿನದಕ್ಕೆ ಅಪವಾದಗಳಿವೆ, ಉದಾಹರಣೆಗೆ ಲೈಂಗಿಕವ್ಯತ್ಯಯವಿರುವವರು ಮತ್ತು ಅಂತರಲಿಂಗಿ ಗಂಡಸರು.

ಮಾನವರಲ್ಲಿನ ಗಂಡು ಆನುಷಂಗಿಕ ಲೈಂಗಿಕ ಲಕ್ಷಣಗಳ ಕೆಲವು ಉದಾಹರಣೆಗಳು, ಅಂದರೆ ಹುಡುಗರು ಪುರುಷರಾಗುತ್ತಿರುವಾಗ ಅಥವಾ ಜೀವನದಲ್ಲಿ ನಂತರವೂ ಪಡೆದವುಗಳೆಂದರೆ: ಹೆಚ್ಚು ವಸ್ತಿಕುಹರ ಪ್ರದೇಶದಲ್ಲಿನ ಕೂದಲು, ಮುಖದ ಮೇಲೆ ಹೆಚ್ಚು ಕೂದಲು, ಹೆಚ್ಚು ದೊಡ್ಡ ಹಸ್ತಗಳು ಮತ್ತು ಪಾದಗಳು, ಹೆಚ್ಚು ಅಗಲಭುಜಗಳು ಮತ್ತು ಎದೆ, ಹೆಚ್ಚು ದೊಡ್ಡ ಕಪಾಲ ಮತ್ತು ಅಸ್ಥಿ ರಚನೆ, ಮಿದುಳಿನ ಹೆಚ್ಚಿನ ದ್ರವ್ಯರಾಶಿ ಮತ್ತು ಘನಗಾತ್ರ, ಹೆಚ್ಚಿನ ಸ್ನಾಯುರಾಶಿ, ಹೆಚ್ಚು ಎದ್ದುಕಾಣುವ ಗಂಟಲಗಡ್ಡೆ ಮತ್ತು ಗಡಸು ಧ್ವನಿ, ಹೆಚ್ಚಿನ ಎತ್ತರ, ಹೆಚ್ಚಿನ ಟಿಬಿಯಾ:ಫ಼ೀಮರ್ ಅನುಪಾತ (ತೊಡೆಮೂಳೆಗೆ ಹೋಲಿಸಿದರೆ ಹೆಚ್ಚು ಉದ್ದವಾದ ಕಣಕಾಲು ಮೂಳೆ).

ಗಂಡು ಲೈಂಗಿಕ ಅಂಗಗಳು ಸಂತಾನೋತ್ಪತ್ತಿ ವ್ಯವಸ್ಥೆಯ ಭಾಗವಾಗಿವೆ, ಮತ್ತು ಇವುಗಳಲ್ಲಿ ಶಿಶ್ನ, ವೃಷಣಗಳು, ರೇತ್ರನಾಳ ಮತ್ತು ಪ್ರೋಸ್ಟೇಟ್ ಗ್ರಂಥಿ ಸೇರಿವೆ. ಗಂಡು ಸಂತಾನೋತ್ಪತ್ತಿ ವ್ಯವಸ್ಥೆಯ ಕಾರ್ಯವೆಂದರೆ ಹೆಂಗಸಿನ ಒಳಗಿರುವ ಅಂಡದೊಂದಿಗೆ ಸೇರಬಲ್ಲ ಶುಕ್ರಾಣುಗಳನ್ನು ಸಾಗಿಸುವ ಶುಕ್ಲವನ್ನು ಉತ್ಪಾದಿಸುವುದು ಮತ್ತು ಹೀಗೆ ಆನುವಂಶಿಕ ಮಾಹಿತಿಯನ್ನು ಉತ್ಪಾದಿಸುವುದು. ಹೆಂಗಸಿನ ಗರ್ಭಾಶಯವನ್ನು ಮತ್ತು ಆಮೇಲೆ ಡಿಂಬನಾಳವನ್ನು ಪ್ರವೇಶಿಸುವ ಶುಕ್ರಾಣು ಮುಂದೆ ಭ್ರೂಣ ಅಥವಾ ಶಿಶುವಾಗಿ ಬೆಳವಣಿಗೆಯಾಗುವ ಅಂಡವನ್ನು ಫಲಿತವಾಗಿಸುವುದರಿಂದ, ಗಂಡು ಸಂತಾನೋತ್ಪತ್ತಿ ವ್ಯವಸ್ಥೆಯು ಗರ್ಭಾವಸ್ಥೆಯ ಅವಧಿಯಲ್ಲಿ ಅವಶ್ಯಕ ಪಾತ್ರವನ್ನು ವಹಿಸುವುದಿಲ್ಲ. ಪಿತೃತ್ವ ಮತ್ತು ಕುಟುಂಬದ ಪರಿಕಲ್ಪನೆ ಮಾನವ ಸಮಾಜಗಳಲ್ಲಿ ಅಸ್ತಿತ್ವದಲ್ಲಿದೆ. ಪುರುಷ ಸಂತಾನೋತ್ಪತ್ತಿ ಮತ್ತು ಸಂಬಂಧಿತ ಅಂಗಗಳ ಅಧ್ಯಯನವನ್ನು ಆ್ಯಂಡ್ರೊಲಜಿ ಎಂದು ಕರೆಯಲಾಗುತ್ತದೆ.

Tags:

🔥 Trending searches on Wiki ಕನ್ನಡ:

ಮಾಹಿತಿ ತಂತ್ರಜ್ಞಾನದಯಾನಂದ ಸರಸ್ವತಿಭಾರತದ ಇತಿಹಾಸತೇಜಸ್ವಿ ಸೂರ್ಯಗುಪ್ತ ಸಾಮ್ರಾಜ್ಯಹಿರಿಯಡ್ಕಸಂಗೀತರನ್ನಕಲಿಯುಗಹೊಂಗೆ ಮರಮಹಮದ್ ಬಿನ್ ತುಘಲಕ್ಕಾನೂನುಕೇಂದ್ರ ಲೋಕ ಸೇವಾ ಆಯೋಗವಡ್ಡಾರಾಧನೆಆತ್ಮರತಿ (ನಾರ್ಸಿಸಿಸಮ್‌)ರಕ್ತಒಗಟುತಮಿಳುನಾಡುತ. ರಾ. ಸುಬ್ಬರಾಯಮಾನವ ಸಂಪನ್ಮೂಲ ನಿರ್ವಹಣೆಅಕ್ಷಾಂಶ ಮತ್ತು ರೇಖಾಂಶಕಾದಂಬರಿಶಿವನ ಸಮುದ್ರ ಜಲಪಾತಸಿಂಧನೂರುಹಿಂದೂ ಮಾಸಗಳುವೀರಗಾಸೆಹೆಚ್.ಡಿ.ಕುಮಾರಸ್ವಾಮಿನೈಸರ್ಗಿಕ ಸಂಪನ್ಮೂಲಪ್ರಾಥಮಿಕ ಶಿಕ್ಷಣಉದಯವಾಣಿವಿಮರ್ಶೆಮೈಸೂರುಹಸ್ತ ಮೈಥುನಮನಮೋಹನ್ ಸಿಂಗ್ಕರ್ನಾಟಕದಲ್ಲಿ ಪಂಚಾಯತ್ ರಾಜ್ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿವ್ಯವಸಾಯಉತ್ಪಲ ಮಾಲಾ ವೃತ್ತಕವಿರಾಜಮಾರ್ಗಅಂಬಿಗರ ಚೌಡಯ್ಯಪುನೀತ್ ರಾಜ್‍ಕುಮಾರ್ಸಂಚಿ ಹೊನ್ನಮ್ಮಕನಕದಾಸರುಕಾರ್ಮಿಕರ ದಿನಾಚರಣೆಬೆಟ್ಟದ ನೆಲ್ಲಿಕಾಯಿಋತುಶ್ರೀರಂಗಪಟ್ಟಣಸಿಗ್ಮಂಡ್‌ ಫ್ರಾಯ್ಡ್‌ರವಿಚಂದ್ರನ್ಆಯುರ್ವೇದಗೋತ್ರ ಮತ್ತು ಪ್ರವರಸೂರ್ಯನವೋದಯಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಕರ್ನಾಟಕದ ಶಾಸನಗಳುಪಿ.ಲಂಕೇಶ್ಕರ್ನಾಟಕದ ಜಿಲ್ಲೆಗಳುಗರ್ಭಧಾರಣೆಸಂಶೋಧನೆಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಬಿ.ಎಲ್.ರೈಸ್ಬ್ಲಾಗ್ಕನ್ನಡ ಸಾಹಿತ್ಯ ಪ್ರಕಾರಗಳುರಾಷ್ಟ್ರಕೂಟಜಯಚಾಮರಾಜ ಒಡೆಯರ್ಸಾಂಗತ್ಯಅಲ್ಲಮ ಪ್ರಭುಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಮಾನಸಿಕ ಆರೋಗ್ಯಕುಂಬಳಕಾಯಿಮಾಧ್ಯಮಮಡಿವಾಳ ಮಾಚಿದೇವಕೇಸರಿ (ಬಣ್ಣ)ನೀನಾದೆ ನಾ (ಕನ್ನಡ ಧಾರಾವಾಹಿ)ಭಾರತದ ತ್ರಿವರ್ಣ ಧ್ವಜಕ್ರಿಯಾಪದ🡆 More