ಪಟ್ನಾ: ಬಿಹಾರದ ರಾಜಧಾನಿ ನಗರ.

ಪಟ್ನಾ ಬಿಹಾರ ರಾಜ್ಯದ ರಾಜಧಾನಿ.

ಆಧುನಿಕ ಪಟ್ನಾ ನಗರವು ಗಂಗಾ ನದಿಯ ದಕ್ಷಿಣ ದಡದಲ್ಲಿ ಸ್ಥಿತವಾಗಿದೆ. ನಗರವು ಕೋಸಿ, ಸೋನ್ ಮತ್ತು ಗಂಡಕ್ ನದಿಗಳ ದಡದಲ್ಲೂ ಇದೆ. ಪಟ್ನಾ ವಿಭಾಗದ ಹಾಗೂ ಜಿಲ್ಲೆಯ ಆಡಳಿತ ಕೇಂದ್ರ. ಗಂಗಾ ನದಿಯ ಬಲದಂಡೆಯ ಮೇಲೆ ಕಲ್ಕತ್ತಕ್ಕೆ 464 ಕಿಮೀ. ದೂರದಲ್ಲಿದೆ. ಪ್ರಾಚೀನ ನಗರವಾದ ಪಾಟಲಿಪುತ್ರ ಹೆಚ್ಚು ಕಡಿಮೆ ಇದೇ ಸ್ಥಳದಲ್ಲಿತ್ತು. ಹಳೆಯ ನಗರ ಗಂಗಾ ನದಿಯ ದಂಡೆಯ ಮೇಲೆ ಸುಮಾರು 19 ಕಿ.ಮೀ. ಉದ್ದಕ್ಕೆ ಹಬ್ಬಿದೆ. ಇದರ ಪಶ್ಚಿಮಕ್ಕೆ ಹೊಸ ಬಂಕೀಪುರ ವಿಭಾಗವಿದೆ. ಇದರ ಪಶ್ಚಿಮಕ್ಕೂ ನೈಋತ್ಯಕ್ಕೂ ಆಧುನಿಕ ರಾಜಧಾನಿ ಬೆಳೆದಿದೆ. ಜನಸಂಖ್ಯೆ ೨೨,೩೧,೫೫೪(೨೦೧೧).

ಪಟ್ನಾ
पटना
ਪਟਨਾ پٹنہ
Anticlockwise from top: South-West Gandhi Maidan Marg, Stupa of Buddha Smriti Park, Skyline near Biscomaun Bhawan, Patna Museum, Statue of Mahatma Gandhi in Gandhi Maidan, Mithapur Flyover and river Ganges
Anticlockwise from top: South-West Gandhi Maidan Marg, Stupa of Buddha Smriti Park, Skyline near Biscomaun Bhawan, Patna Museum, Statue of Mahatma Gandhi in Gandhi Maidan, Mithapur Flyover and river Ganges
Coordinates: 25°36′N 85°06′E / 25.6°N 85.1°E / 25.6; 85.1
Countryಪಟ್ನಾ: ಬೆಳವಣಿಗೆ, ಇತಿಹಾಸ, ಉಲ್ಲೇಖಗಳು ಭಾರತ
ರಾಜ್ಯಬಿಹಾರ
ಪ್ರದೇಶಮಗಧ
DivisionPatna
ಜಿಲ್ಲೆPatna
Ward72 wards
ಸ್ಥಾಪಿಸಿದವರುಅಜಾತಶತ್ರು
ಸರ್ಕಾರ
 • ಮಾದರಿMayor–Council
 • ಪಾಲಿಕೆPatna Municipal Corporation
 • MayorAfzal Imam
 • Municipal commissionerAbhishek Singh
Area
 • City೯೯.೪೫ km (೩೮.೪೦ sq mi)
 • ನಗರ
೧೩೫.೭೯ km (೫೨.೪೩ sq mi)
 • ಮೆಟ್ರೋ
೨೩೪.೭೦ km (೯೦.೬೨ sq mi)
Elevation
೫೩ m (೧೭೪ ft)
Population
 (2011)
 • City೧೬,೮೩,೨೦೦ (IN: ೧೯th)
 • ಸಾಂದ್ರತೆ೧೬,೯೨೫/km (೪೩,೮೪೦/sq mi)
 • Urban
೨೦,೪೬,೬೫೨ (IN: ೧೮th)
 • Metro
೨೨,೩೧,೫೫೪
Demonym(s)Patnaite
Languages
 • OfficialHindi
ಸಮಯ ವಲಯಯುಟಿಸಿ+5:30 (IST)
Pincode(s)
800 XXX
Area code(s)+91-612
ISO 3166 codeIN-BR-PA
ವಾಹನ ನೋಂದಣಿBR 01
UN/LOCODEIN PAT
Sex ratio882 (females per 1000 males) ♂/♀
Literacy84.71%
Lok Sabha constituenciesPatna Sahib and Pataliputra
Vidhan Sabha constituenciesDigha (181), Bankipur (182), Kumhrar (183), Patna Sahib (184), Fatuha (185), Danapur (186), Maner (187), Phulwari-SC (188), Masaurhi (189), Paliganj (190)
Planning agencyBihar Urban Infrastructure Development Corporation
ClimateCwa (Köppen)
Precipitation1,100 millimetres (43 in)
Avg. annual temperature26 °C (79 °F)
Avg. summer temperature30 °C (86 °F)
Avg. winter temperature17 °C (63 °F)
ಜಾಲತಾಣpatna.bih.nic.in
patnanagarnigam.in
www.paliganjtimes.com

ಬೆಳವಣಿಗೆ

ಪಟ್ನಾ ಪ್ರಮುಖ ರೈಲ್ವೆ ಮತ್ತು ರಸ್ತೆ ಸಂಧಿಸ್ಥಳ. ಕಳೆದ ಐವತ್ತು ವರ್ಷಗಳಲ್ಲಿ ಪಟ್ನಾ ಬಹಳಮಟ್ಟಿಗೆ ಬೆಳೆದಿದೆ. 1916ರಲ್ಲಿ ಇಲ್ಲಿ ಉಚ್ಚ ನ್ಯಾಯಾಲಯ ಸ್ಥಾಪಿತವಾಯಿತು. ಪಟ್ನಾ ವಿಶ್ವವಿದ್ಯಾಲಯ 1917ರಷ್ಟು ಹಳೆಯದು. ಇಲ್ಲಿಯ ಆಧುನಿಕ ಕಟ್ಟಡಗಳಲ್ಲಿ ಮುಖ್ಯವಾದವರೆಂದರೆ ಸರ್ಕಾರಿ ಭವನ, ವಿಧಾನಸಭಾ ಭವನ, ಪ್ರಾಚ್ಯ ಗ್ರಂಥಾಲಯ, ವೈದ್ಯಕೀಯ ಕಾಲೇಜು ಮತ್ತು ಇಂಜಿನಿಯರಿಂಗ್ ಕಾಲೇಜು, ಇಲ್ಲಿ ಬಂಗಾಲದ ಹುಸೇನ್ ಶಹನ ಮಸೀದಿಯೂ (1490) ಸಿಕ್ಖರ ಹತ್ತನೆಯ ಗುರುವಾದ ಗೋವಿಂದ ಸಿಂಗನ ಕಾಲದ ಮಂದಿರವೂ ಗೋಲ್‍ಘರ್ ಎಂಬ ಬಂಕೀಪುರದ ಕಣಜವೂ ಇದೆ.

ಇತಿಹಾಸ

ಕ್ರಿ.ಪೂ. 5ನೆಯ ಶತಮಾನದಲ್ಲಿ ಇಲ್ಲಿ ಸ್ಥಾಪಿತವಾದ ಪಾಟಲಿಪುತ್ರ ನಗರ ಕ್ರಿ.ಶ. 7ನೆಯ ಶತಮಾನದವರೆಗೂ ಪ್ರವರ್ಧಮಾನಸ್ಥಿತಿಯಲ್ಲಿತ್ತು. ಅನಂತರ 16ನೆಯ ಶತಮಾನದ ವರೆಗಿನ ಇದರ ಇತಿಹಾಸ ನಮಗೆ ತಿಳಿದುಬಂದಿಲ್ಲ. ಆಫ್‍ಘನ್ ದೊರೆ ಷೇರ್‍ಶಹ 1541ರಲ್ಲಿ ಮತ್ತೆ ಸ್ಥಾಪಿಸಿದ ನಗರಕ್ಕೆ ಪಟ್ನಾ ಎಂದು ಹೆಸರು ಇಟ್ಟ. ಮೊಗಲರ ಆಧಿಪತ್ಯದಲ್ಲಿ ಇದು ಮತ್ತೆ ಹಳೆ ಸ್ಥಾನಮಾನ ಪಡೆದು ಬಿಹಾರದ ಪ್ರಮುಖ ನಗರವಾಯಿತು. 1586ರಲ್ಲಿ ಇಲ್ಲಿಗೆ ಭೇಟಿ ನೀಡಿದ ರಾಲ್ಫ್ ಫಿಚ್ ಎಂಬ ಇಂಗ್ಲಿಷ್ ಇದನ್ನು ಬಲು ಉದ್ದನೆಯ ಮಹಾನಗರವೆಂದು ಬಣ್ಣಿಸಿದ. ಮೊಗಲ್ ಚಕ್ರವರ್ತಿ ಔರಂಗ್‍ಜೇóಬ್ (1659-1707) ತನ್ನ ಮೊವ್ಮ್ಮಗನಾದ ಅಜೀóಮನ ಹೆಸರಿನಲ್ಲಿ ಇದಕ್ಕೆ ಅಜೀóಮಾಬಾದ್ ಎಂದು ನಾಮಕರಣ ಮಾಡಿದ. ಈ ನಗರ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ವಶವಾದ್ದು 1765ರಲ್ಲಿ. ಕಂಪನಿಯ ಕಂದಾಯ ವಸೂಲಿಗಾಗಿ ಸ್ಥಾಪಿತವಾಗಿದ್ದ ಪ್ರಾಂತೀಯ ಮಂಡಲಿಯ ಮುಖ್ಯ ಕಛೇರಿ ಇಲ್ಲಿ ಸ್ಥಾಪಿತವಾಯಿತು. 1865ರಲ್ಲಿ ಬಿಹಾರದಲ್ಲಿ ಪಟ್ನಾ ಮತ್ತು ಗಯಾ ಜಿಲ್ಲೆಗಳು ರೂಪಿತವಾದವು. 1912ರಲ್ಲಿ ಬಂಗಾಲ ಆಧಿಪತ್ಯದಿಂದ ಬಿಹಾರ ಮತ್ತು ಒರಿಸ್ಸ ಪ್ರಾಂತ್ಯದ ರಚನೆಯಾದಾಗ ಪಟ್ನಾ ಆ ಪ್ರಾಂತ್ಯದ ರಾಜಧಾನಿಯಾಯಿತು. 1936ರಲ್ಲಿ ಒರಿಸ್ಸ ಪ್ರತ್ಯೇಕ ಪ್ರಾಂತ್ಯವಾಯಿತು. ಬಿಹಾರದ ರಾಜಧಾನಿಯಾಗಿ ಪಟ್ನಾ ಮುಂದುವರೆಯಿತು. ಸ್ವತಂತ್ರ ಭಾರತದಲ್ಲೂ ಇದು ಬಿಹಾರದ ರಾಜಧಾನಿಯಾಗಿ ಮುಂದುವರಿಯಿತು.

ಉಲ್ಲೇಖಗಳು

ಬಾಹ್ಯಸಂಪರ್ಕಗಳು

ಪಟ್ನಾ: ಬೆಳವಣಿಗೆ, ಇತಿಹಾಸ, ಉಲ್ಲೇಖಗಳು 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:


Tags:

ಪಟ್ನಾ ಬೆಳವಣಿಗೆಪಟ್ನಾ ಇತಿಹಾಸಪಟ್ನಾ ಉಲ್ಲೇಖಗಳುಪಟ್ನಾ ಬಾಹ್ಯಸಂಪರ್ಕಗಳುಪಟ್ನಾಕೋಸಿ ನದಿಗಂಗಾ ನದಿಪಾಟಲಿಪುತ್ರಬಿಹಾರಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳ ಪಟ್ಟಿಸೋನ್ ನದಿ

🔥 Trending searches on Wiki ಕನ್ನಡ:

ಆದೇಶ ಸಂಧಿಕೆಂಪು ಕೋಟೆಜೈಮಿನಿ ಭಾರತಸೌರಮಂಡಲಭಾರತದಲ್ಲಿ ತುರ್ತು ಪರಿಸ್ಥಿತಿಭಾರತೀಯ ಭಾಷೆಗಳುಕರ್ನಾಟಕದ ತಾಲೂಕುಗಳುನುಡಿಗಟ್ಟುಕನಕದಾಸರುನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಕೃತಕ ಬುದ್ಧಿಮತ್ತೆಚಂಡಮಾರುತದೂರದರ್ಶನಕರ್ನಾಟಕ ವಿಧಾನ ಪರಿಷತ್ಸೋಮನಾಥಪುರನೈಸರ್ಗಿಕ ಸಂಪನ್ಮೂಲಅಸಹಕಾರ ಚಳುವಳಿರಜಪೂತಅಂಬರೀಶ್ಕರೀಜಾಲಿಪುತ್ತೂರುಬುಡಕಟ್ಟುಏಕರೂಪ ನಾಗರಿಕ ನೀತಿಸಂಹಿತೆಗಿರೀಶ್ ಕಾರ್ನಾಡ್ಕ್ರೀಡೆಗಳುಶಿಶುನಾಳ ಶರೀಫರುಕನ್ನಡ ಕಾವ್ಯಕನ್ನಡ ಬರಹಗಾರ್ತಿಯರುಕನ್ನಡ ಸಾಹಿತ್ಯ ಸಮ್ಮೇಳನಕೊಲ್ಲೂರು ಮೂಕಾಂಬಿಕಾ ದೇವಸ್ಥಾನಬೆಂಗಳೂರು ಕೋಟೆಕರ್ನಾಟಕ ವಿದ್ಯಾವರ್ಧಕ ಸಂಘಅವಲೋಕನಮುಹಮ್ಮದ್ಯೂಟ್ಯೂಬ್‌ಗ್ರಾಮ ಪಂಚಾಯತಿಹೆಳವನಕಟ್ಟೆ ಗಿರಿಯಮ್ಮಜಾಹೀರಾತುರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ನೇಮಿಚಂದ್ರ (ಲೇಖಕಿ)ಭಾರತದಲ್ಲಿ ಕೃಷಿಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಹುಣಸೂರು ಕೃಷ್ಣಮೂರ್ತಿಬೌದ್ಧ ಧರ್ಮಕನ್ನಡ ಸಂಧಿಕನ್ನಡ ವ್ಯಾಕರಣಚನ್ನವೀರ ಕಣವಿರಾವಣಭಾರತದ ಸಂವಿಧಾನ ರಚನಾ ಸಭೆಕಂಪ್ಯೂಟರ್ವೀಣೆಅಕ್ಬರ್ಸಂಯುಕ್ತ ರಾಷ್ಟ್ರ ಸಂಸ್ಥೆಅಳತೆ, ತೂಕ, ಎಣಿಕೆಚಿದಂಬರ ರಹಸ್ಯತೀರ್ಥಕ್ಷೇತ್ರಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟತುಮಕೂರುಮಂಗಳೂರುಆತ್ಮಹತ್ಯೆಪಾಲಕ್ಲಕ್ಷ್ಮಣಚೆಲ್ಲಿದ ರಕ್ತಬೆಂಗಳೂರು ಗ್ರಾಮಾಂತರ ಜಿಲ್ಲೆಕೆ. ಅಣ್ಣಾಮಲೈಬನವಾಸಿಶಿವಕ್ಯಾನ್ಸರ್ಏಡ್ಸ್ ರೋಗಹಣಮೆಕ್ಕೆ ಜೋಳವಚನ ಸಾಹಿತ್ಯಭೂತಾರಾಧನೆಶ್ರೀ ಸಿದ್ದೇಶ್ವರ ಸ್ವಾಮಿಜಿಗಳುತೋಟಗಾರಿಕೆಕುಂಬಳಕಾಯಿಭೀಮಸೇನಹೃದಯಾಘಾತ🡆 More