ಪಕ್ಷ

ಪಕ್ಷ ಶಬ್ದವು ಹಿಂದೂ ಚಾಂದ್ರಮಾನ ಪಂಚಾಂಗದ ಒಂದು ತಿಂಗಳಿನಲ್ಲಿ ಎರಡುವಾರದ ಅವಧಿ ಅಥವಾ ಒಂದು ಚಾಂದ್ರಹಂತವನ್ನು ಸೂಚಿಸುತ್ತದೆ.

ಈ ಶಬ್ದದ ಅರ್ಥ ಅಕ್ಷರಶಃ ಪಕ್ಕ ಅಥವಾ ಬದಿ ಎಂದು. ಪಕ್ಷವು ಹುಣ್ಣಿಮೆ ದಿನದ ಎರಡೂ ಪಕ್ಕದಲ್ಲಿನ ಅವಧಿ. ಹಿಂದೂ ಪಂಚಾಂಗದಲ್ಲಿ ಒಂದು ಚಾಂದ್ರಮಾಸವು ಎರಡು ಪಕ್ಷಗಳನ್ನು ಹೊಂದಿರುತ್ತದೆ ಮತ್ತು ಅಮಾವಾಸ್ಯೆಯೊಂದಿಗೆ ಆರಂಭವಾಗುತ್ತದೆ. ಚಾಂದ್ರದಿನಗಳನ್ನು ತಿಥಿಗಳು ಎಂದು ಕರೆಯಲಾಗುತ್ತದೆ ಮತ್ತು ಪ್ರತಿ ತಿಂಗಳು ೩೦ ತಿಥಿಗಳನ್ನು ಹೊಂದಿರುತ್ತದೆ. ಒಂದು ತಿಥಿಯ ಅವಧಿ 20 – 27 ಗಂಟೆಗಳ ನಡುವೆ ಬದಲಾಗಬಹುದು. ಒಂದು ಪಕ್ಷವು ೧೫ ತಿಥಿಗಳನ್ನು ಹೊಂದಿರುತ್ತದೆ. ಇವನ್ನು ಚಂದ್ರನ ೧೨ ಡಿಗ್ರಿ ಚಲನೆಯಿಂದ ಲೆಕ್ಕಹಾಕಲಾಗುತ್ತದೆ. ಅಮಾವಾಸ್ಯೆ ಮತ್ತು ಹುಣ್ಣಿಮೆ ನಡುವಿನ ಮೊದಲ ಪಕ್ಷವನ್ನು "ಗೌರ ಪಕ್ಷ" ಅಥವಾ ಶುಕ್ಲ ಪಕ್ಷವೆಂದು ಕರೆಯಲಾಗುತ್ತದೆ. ಇದು ಚಂದ್ರ ಪ್ರಕಾಶಮಾನವಾಗುತ್ತ ಹೋಗುವ ಅವಧಿ. ತಿಂಗಳ ಎರಡನೇ ಪಕ್ಷವನ್ನು "ಕೃಷ್ಣ ಪಕ್ಷ" ಅಥವಾ ವದ್ಯ ಪಕ್ಷವೆಂದು ಕರೆಯಲಾಗುತ್ತದೆ. ಇದು ಚಂದ್ರ ಮಬ್ಬಾಗುತ್ತ ಹೋಗುವ ಅವಧಿ. ನಿಮಚ್ ಪಂಚಾಂಗವು ಹೊಸ ಚಾಂದ್ರಮಾಸವನ್ನು ಕೃಷ್ಣಪಕ್ಷದ ಮೊದಲ ದಿನದಿಂದ ಆರಂಭಿಸಿದರೆ ಗುಜರಾತ್ ಪಂಚಾಂಗವು ಹೊಸ ಚಾಂದ್ರಮಾಸವನ್ನು ಶುಕ್ಲಪಕ್ಷದ ಮೊದಲ ದಿನದಿಂದ ಆರಂಭಿಸುತ್ತದೆ.

ಶುಕ್ಲ ಒಂದು ಸಂಸ್ಕೃತ ಶಬ್ದ. ಇದರರ್ಥ "ಬಿಳಿ". ಈ ಪಕ್ಷವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಅಸ್ತಿತ್ವದ ಪ್ರತಿ ಸಮತಲದ ಬೆಳವಣಿಗೆ ಅಥವಾ ವಿಸ್ತರಣೆಗೆ ಅನುಕೂಲಕರವಾಗಿರುತ್ತದೆ.

ಈ ಅವಧಿಯಲ್ಲಿ ಅಸಂಖ್ಯಾತ ಹಬ್ಬಗಳನ್ನು ಆಚರಿಸಲಾಗುತ್ತದೆ, ಉದಾಹರಣೆಗೆ ನವರಾತ್ರಿ ಹಬ್ಬ, ತುಂಬಾ ಮುಖ್ಯವಾಗಿ ಚೈತ್ರ ನವರಾತ್ರಿ ಮತ್ತು ಆಶ್ವಯುಜ ನವರಾತ್ರಿ.

ದಿನ
ತಿಥಿ
ಹಬ್ಬ ಮಾಸ
೧ನೇ ದಿನ ಪಾಡ್ಯ
ಬಲಿ ಪ್ರತಿಪದ, ಗೋವರ್ಧನ ಪೂಜೆ ಕಾರ್ತಿಕ
೨ನೇ ದಿನ ಬಿದಿಗೆ ಭಾಯಿ ಬೀಜ್
ಕಾರ್ತಿಕ
೩ನೇ ದಿನ ತದಿಗೆ ತೀಜ್
ಭಾದ್ರಪದ
೩ನೇ ದಿನ ತದಿಗೆ ಅಕ್ಷಯ ತೃತೀಯಾ ವೈಶಾಖ
೪ನೇ ದಿನ ಚತುರ್ಥಿ
ಗಣೇಶ ಚತುರ್ಥಿ ಭಾದ್ರಪದ
೪ನೇ ದಿನ ಚತುರ್ಥಿ ಗಣೇಶ ಜಯಂತಿ ಮಾಘ
೫ನೇ ದಿನ ಪಂಚಮಿ
ನುವಾಖಾಯ್ ಭಾದ್ರಪದ
೫ನೇ ದಿನ ಪಂಚಮಿ ವಿವಾಹ ಪಂಚಮಿ ಮಾರ್ಗಶಿರ
೬ನೇ ದಿನ ಷಷ್ಠಿ
ಶೀತಲ ಷಷ್ಠಿ ಜ್ಯೇಷ್ಠ
೯ನೇ ದಿನ ನವಮಿ
ರಾಮ ನವಮಿ ಚೈತ್ರ
೧೦ನೇ ದಿನ ದಶಮಿ ವಿಜಯದಶಮಿ ಆಶ್ವಯುಜ
೧೧ನೇ ದಿನ ಏಕಾದಶಿ ಶಯನೀ ಏಕಾದಶಿ ಆಷಾಢ
೧೧ನೇ ದಿನ ಏಕಾದಶಿ ವೈಕುಂಠ ಏಕಾದಶಿ ಮಾರ್ಗಶಿರ
೧೪ನೇ ದಿನ ಚತುರ್ದಶಿ
ಸಂವತ್ಸರಿ
ಭಾದ್ರಪದ
೧೫ನೇ ದಿನ
ಹುಣ್ಣಿಮೆ ಗುರು ಪೂರ್ಣಿಮೆ ಆಷಾಢ

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಲೋಪಸಂಧಿಮನೆದಶಾವತಾರಸಾಮಾಜಿಕ ಸಮಸ್ಯೆಗಳುಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಬಿ. ಎಂ. ಶ್ರೀಕಂಠಯ್ಯಗೋವಶ್ರೀರಂಗಪಟ್ಟಣಏಕರೂಪ ನಾಗರಿಕ ನೀತಿಸಂಹಿತೆಗುರುಪ್ರಬಂಧ ರಚನೆಕೆ.ವಿ.ಸುಬ್ಬಣ್ಣಗುದ್ದಲಿಮಹೇಂದ್ರ ಸಿಂಗ್ ಧೋನಿಆಂಗ್ಲ ಭಾಷೆಜೈಜಗದೀಶ್ವಿಧಿಮರಮೋಡ ಬಿತ್ತನೆಎ.ಪಿ.ಜೆ.ಅಬ್ದುಲ್ ಕಲಾಂಕಾಗೋಡು ಸತ್ಯಾಗ್ರಹಜ್ಯೋತಿಷ ಶಾಸ್ತ್ರದ ನಕ್ಷತ್ರಗಳುದೇವುಡು ನರಸಿಂಹಶಾಸ್ತ್ರಿಅಮೃತಧಾರೆ (ಕನ್ನಡ ಧಾರಾವಾಹಿ)ಮುದ್ದಣಬಾಬು ಜಗಜೀವನ ರಾಮ್ಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆಜಾಹೀರಾತುಮೂಲಧಾತುಗಳ ಪಟ್ಟಿಪಶ್ಚಿಮ ಘಟ್ಟಗಳುರೈತವಾರಿ ಪದ್ಧತಿಕನ್ನಡ ಕಾಗುಣಿತವಿಶ್ವ ಪರಿಸರ ದಿನರಾಜಕುಮಾರ (ಚಲನಚಿತ್ರ)ಶಿಶುನಾಳ ಶರೀಫರುಬೈಗುಳರೇಣುಕಮೈಗ್ರೇನ್‌ (ಅರೆತಲೆ ನೋವು)ಇತಿಹಾಸಏಲಕ್ಕಿಕುಮಾರವ್ಯಾಸಬಾದಾಮಿಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಕರ್ನಾಟಕದ ಏಕೀಕರಣಭಾರತದಲ್ಲಿನ ಜಾತಿ ಪದ್ದತಿಹನುಮ ಜಯಂತಿಕರ್ನಾಟಕ ಲೋಕಸೇವಾ ಆಯೋಗಪಂಚಾಂಗಉಪ್ಪಿನ ಸತ್ಯಾಗ್ರಹಸ್ವಾಮಿ ವಿವೇಕಾನಂದಚಂದ್ರಶೇಖರ ಕಂಬಾರಕರ್ನಾಟಕ ಸ್ವಾತಂತ್ರ್ಯ ಚಳವಳಿಸಂಸ್ಕೃತಬೆಂಗಳೂರುಓಂ ನಮಃ ಶಿವಾಯತುಂಗಭದ್ರ ನದಿಪುತ್ತೂರುಕನ್ನಡ ಅಕ್ಷರಮಾಲೆಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಜೋಳಭಾರತೀಯ ಜನತಾ ಪಕ್ಷಬಂಗಾರದ ಮನುಷ್ಯ (ಚಲನಚಿತ್ರ)ಯು.ಆರ್.ಅನಂತಮೂರ್ತಿಭಗತ್ ಸಿಂಗ್ಮುಹಮ್ಮದ್ಶಾಂತಿನಿಕೇತನವಡ್ಡಾರಾಧನೆಬಾದಾಮಿ ಗುಹಾಲಯಗಳುಹಾವು ಕಡಿತಚೆನ್ನಕೇಶವ ದೇವಾಲಯ, ಬೇಲೂರುಗುಣ ಸಂಧಿಅಂತರ್ಜಲಭಾರತದ ಸಂಸ್ಕ್ರತಿಬೌದ್ಧ ಧರ್ಮವಚನಕಾರರ ಅಂಕಿತ ನಾಮಗಳುರಾಮದೇವಸ್ಥಾನ🡆 More