ನಿಯಾನ್: ಪರಮಾಣು ಸಂಖ್ಯೆ 10 ರ ರಾಸಾಯನಿಕ ಅಂಶ

೧೦ ಫ್ಲೂರೀನ್ನಿಯಾನ್ಸೋಡಿಯಮ್
He

Ne

Ar
ನಿಯಾನ್: ವರ್ಗೀಕರಣ, ರಾಸಾಯನಿಕ ಲಕ್ಷಣಗಳು, ಉಪಯೋಗಗಳು
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ನಿಯಾನ್, Ne, ೧೦
ರಾಸಾಯನಿಕ ಸರಣಿnoble gases
ಗುಂಪು, ಆವರ್ತ, ಖಂಡ 18, 2, p
ಸ್ವರೂಪcolorless
ನಿಯಾನ್: ವರ್ಗೀಕರಣ, ರಾಸಾಯನಿಕ ಲಕ್ಷಣಗಳು, ಉಪಯೋಗಗಳು
ಅಣುವಿನ ತೂಕ 20.1797(6) g·mol−1
ಋಣವಿದ್ಯುತ್ಕಣ ಜೋಡಣೆ 1s2 2s2 2p6
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು 2, 8
ಭೌತಿಕ ಗುಣಗಳು
ಬಣ್ಣ164
ಹಂತgas
ಸಾಂದ್ರತೆ(0 °C, 101.325 kPa)
0.9002 g/L
ಕರಗುವ ತಾಪಮಾನ24.56 K
(-248.59 °C, -415.46 °ಎಫ್)
ಕುದಿಯುವ ತಾಪಮಾನ27.07 K
(-246.08 °C, -410.94 °F)
ತ್ರಿಗುಣ ಬಿಂದು24.5561 K, 43 kPa
ಕ್ರಾಂತಿಬಿಂದು44.4 K, 2.76 MPa
ಸಮ್ಮಿಲನದ ಉಷ್ಣಾಂಶ0.335 kJ·mol−1
ಸಮ್ಮಿಲನದ ಉಷ್ಣಾಂಶ98798 kJ·mol−1
ಭಾಷ್ಪೀಕರಣ ಉಷ್ಣಾಂಶ1.71 kJ·mol−1
ಉಷ್ಣ ಸಾಮರ್ಥ್ಯ(25 °C) 20.786 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 12 13 15 18 21 27
ಅಣುವಿನ ಗುಣಗಳು
ಸ್ಪಟಿಕ ಸ್ವರೂಪcubic face centered
ಆಕ್ಸಿಡೀಕರಣ ಸ್ಥಿತಿಗಳುno data
ಅಣುವಿನ ತ್ರಿಜ್ಯ (ಲೆಖ್ಕಿತ)38 pm
ತ್ರಿಜ್ಯ ಸಹಾಂಕ69 pm
ವಾನ್ ಡೆರ್ ವಾಲ್ಸ್ ತ್ರಿಜ್ಯ154 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆnonmagnetic
ಉಷ್ಣ ವಾಹಕತೆ(300 K) 49.1x10-3  W·m−1·K−1
ಶಬ್ದದ ವೇಗ(gas, 0 °C) 435 m/s
ಸಗಟು ಮಾಪನಾಂಕ654654 GPa
ಸಿಎಎಸ್ ನೋಂದಾವಣೆ ಸಂಖ್ಯೆ7440-01-9
ಉಲ್ಲೇಖನೆಗಳು

ನಿಯಾನ್ ಒಂದು ಬಣ್ಣರಹಿತ ಅನಿಲ ಮೂಲಧಾತು. ಬ್ರಹ್ಮಾಂಡದಲ್ಲಿ ಬಹಳ ವಿಪುಲವಾಗಿ ದೊರೆಯುವ ಈ ಅನಿಲ ಭೂಮಿಯಲ್ಲಿ ಅಷ್ಟೇ ವಿರಳ. ಇದನ್ನು ೧೮೯೮ರಲ್ಲಿ ಸ್ಕಾಟ್ಲಾಂಡ್‌ನ ವಿಲಿಯಮ್ ರಾಮ್ಸೆ ಮತ್ತು ಇಂಗ್ಲೆಂಡ್‌ನ ಮೊರಿಸ್ ಟ್ರೆವರ್ಸ್ ಕಂಡುಹಿಡಿದರು. ಇದರ ಹೆಸರು ಗ್ರೀಕ್ ಭಾಷೆಯಲ್ಲಿ "ಹೊಸದು" ಎಂಬ ಪದದಿಂದ ಬಂದಿದೆ. ಇದನ್ನು ಪ್ರಮುಖವಾಗಿ ಪ್ರಕಾಶಮಾನವಾದ ನಿಯಾನ್ ದೀಪಗಳಲ್ಲಿ ಉಪಯೋಗಿಸಲಾಗುತ್ತದೆ.

ವರ್ಗೀಕರಣ

ನಿಯಾನ್ - ಆವರ್ತಕೋಷ್ಟಕದಲ್ಲಿ ಸೊನ್ನೆ ಗುಂಪಿಗೆ ಸೇರಿದ ಅನಿಲಧಾತು. ರಾಸಾಯನಿಕ ಪ್ರತೀಕ Ne. ಹೀಲಿಯಮ್, ನಿಯಾನ್, ಕ್ರಿಪ್ಟಾನ್, ಗ್ಝಿನಾನ್, ಆರ್ಗಾನ್ ಮತ್ತು ರೇಡಾನ್ ಇವನ್ನೊಳಗೊಂಡ ವಿರಳ ಅಥವಾ ನಿಷ್ಕ್ರಿಯ ಅನಿಲಗಳ ಕುಟುಂಬದ ಸದಸ್ಯ. ಆಂಗ್ಲ ರಸಾಯನವಿಜ್ಞಾನಿಗಳಾದ ಸರ್ ವಿಲಿಯಮ್ ರ್ಯಾಮ್ಸೆ ಮತ್ತು ಎಂ. ಡಬ್ಲ್ಯು. ಟ್ರ್ಯಾವರ್ಸ್ ಎಂಬವರು ಅಶುದ್ಧವಾದ ಅರ್ಗಾನ್ ಅನಿಲದ ದ್ರವವನ್ನು ಆಂಶಿಕ ಆಸವನ ಮಾಡುತ್ತಿದ್ದಾಗ ಹೊಸತೊಂದು ಅನಿಲವನ್ನು ಶೋಧಿಸಿದರು (1898). ಅದನ್ನು ವಿದ್ಯುತ್ತಿನಿಂದ ಉದ್ರೇಕಿಸಿದಾಗ ಕಿತ್ತಳೆಮಿಶ್ರಿತ ಕೆಂಪುಬಣ್ಣದ ಉಜ್ಜ್ವಲ ಪ್ರಕಾಶ ಹೊಮ್ಮಿದ್ದು ಕಂಡುಬಂದಿತು. ಆಗಲೆ ಇದೊಂದು ಹೊಸ ಧಾತು ಇರಬೇಕು ಎಂದು ಗುರುತಿಸಿ ಇದನ್ನು ನಿಯಾನ್ (ಹೊಸತು ಎಂಬರ್ಥ) ಎಂಬುದಾಗಿ ನಾಮಕರಿಸಲಾಯಿತು. ನಿಯಾನ್ ಅನಿಲ ಸೃಷ್ಟಿಯಲ್ಲಿ ವಿಶಾಲವಾಗಿ ಆದರೆ ಅತ್ಯಲ್ಪ ಮೊತ್ತದಲ್ಲಿ ಹರಡಿಹೋಗಿದೆ. ಇದು ವಾಯು ಮಂಡಲದಲ್ಲಿದೆ. ಭೂಮಿಯಲ್ಲಿಯ ಕಲ್ಲುಬಂಡೆಗಳಲ್ಲಿ ಸಿಕ್ಕಿಕೊಂಡು ಕೂಡ ಇದೆ. ಒಣವಾಯುವಿನಿಂದ ಗಾತ್ರರೀತ್ಯ 0.0018% ಪ್ರಮಾಣದಲ್ಲಿಯೂ ಭೂಮಿಯಲ್ಲಿ ತೂಕರೀತ್ಯ 5(10-7% ಪ್ರಮಾಣದಲ್ಲಿಯೂ ಇರುವುದು.

ರಾಸಾಯನಿಕ ಲಕ್ಷಣಗಳು

ದ್ರವವಾಯುವನ್ನು ಆಂಶಿಕವಾಗಿ ಆಸವಿಸಿ ನಿಯಾನನ್ನು ತಯಾರಿಸುತ್ತಾರೆ. ಆಂಶಿಕಾಸವನದಲ್ಲಿ ದೊರೆಯುವ ಅತಿ ಆವಿಶೀಲ ಘಟಕದಲ್ಲಿ ಹೀಲಿಯಮ್, ನಿಯಾನ್ ಮತ್ತು ನೈಟ್ರೊಜನ್ನುಗಳು ಇರುತ್ತವೆ. ಈ ಮಿಶ್ರಣದಲ್ಲಿದ್ದ ಹೀಲಿಯಮ್ ಮತ್ತು ನೈಟ್ರೊಜನ್ನುಗಳನ್ನು ಅಧಿಕ ಒತ್ತಡ ಮತ್ತು ಕಡಿಮೆ ಉಷ್ಣತೆಯಲ್ಲಿ ಚುರುಕಾದ ಇದ್ದಲಿನ ಮೇಲೆ ಐಚ್ಛಿಕ ಅಧಿಶೋಷಣೆ ಮಾಡುವುದರಿಂದ ಬೇರ್ಪಡಿಸಿ ನಿಯಾನನ್ನು ಶೇಖರಿಸಲಾಗುತ್ತದೆ. ನಿಯಾನ್ ಅನಿಲಕ್ಕೆ ಬಣ್ಣ ವಾಸನೆ ಮತ್ತು ರುಚಿ ಇಲ್ಲ. ಇದು ವಾಯುವಿಗಿಂತ ಹಗುರ. ಇದರ ಪರಮಾಣು ಸಂಖ್ಯೆ 10. ಪರಮಾಣುತೂಕ 20.183. ವೇಲೆನ್ಸಿ 0. ಸಾಂದ್ರತೆ (1 ಪರಮಾಣು, 0ºಅ) 0.8999 ಗ್ರಾಮ್/ಲೀಟರ್. ಕ್ವಥನಬಿಂದು-246.0480ಅ, ದ್ರವನಬಿಂದು -248.670ಅ ಎಲೆಕ್ಟ್ರಾನ್ ಜೋಡಣೆ . ನಿಯಾನ್ ಯಾವ ತರಹದ ರಾಸಾಯನಿಕ ಸಂಯುಕ್ತಗಳನ್ನೂ ಕೊಡುವುದಿಲ್ಲ.

ಉಪಯೋಗಗಳು

ನಿಯಾನ್ ಅನಿಲವನ್ನು ಅತಿ ಮುಖ್ಯವಾಗಿ ಪ್ರದರ್ಶನ ಹಾಗೂ ಪ್ರಚಾರಕ್ಕಾಗಿ ಬೇಕಾಗುವ ನಿಯಾನ್ ಗುರುತುಗಳನ್ನು ಮಾಡಲಿಕ್ಕೆ ಬಳಸುತ್ತಾರೆ. ನಿಯಾನ್ ಗುರುತುಗಳೆಂದರೆ ನಿಯಾನ್, ಆರ್ಗಾನ್ ಮತ್ತು ಹೀಲಿಯಮ್ ಅನಿಲಗಳಿಂದಾಗಲಿ ಅವುಗಳ ಮಿಶ್ರಣದಿಂದಾಗಲಿ ತುಂಬಿದ ಅಧಿಕ ವೋಲ್ಟೇಜಿನ ವಿದ್ಯುತ್ ವಿಸರ್ಜಕ ಗಾಜಿನ ಕೊಳವೆಗಳು. ಕೆಲವು ಸಲ ಈ ಕೊಳವೆಗಳಲ್ಲಿ ಪಾದರಸದ ಹಬೆಯನ್ನು ತುಂಬುವುದೂ ಉಂಟು. ಆದರೆ ಗಾಜಿನ ಕೊಳವೆಯ ಬಣ್ಣ ಹಾಗೂ ಅದರಲ್ಲಿ ತುಂಬಿದ ಅನಿಲವನ್ನು ನಿಯಾನ್ ಗುರುತಿನ ಬಣ್ಣ ಅವಲಂಬಿಸಿರುತ್ತದೆ. ವರ್ಣರಹಿತ ಗಾಜಿನ ಕೊಳವೆಯಲ್ಲಿ ನಿಯಾನ್ ಅನಿಲ ಕೆಂಪುಬಣ್ಣದ ಹೊಳಪನ್ನು ಕೊಟ್ಟರೆ ಹಳದಿ ಬಣ್ಣದ ಗಾಜಿನ ಕೊಳವೆಯಲ್ಲಿ ಅದೇ ಹೊಳಪು ಕಿತ್ತಳೆಬಣ್ಣದ ಹೊಳಪಾಗಿ ಕಾಣಿಸುತ್ತದೆ. ಅದರಂತೆಯೆ ಹೀಲಿಯಮ್, ಆರ್ಗಾನ್ ಮತ್ತು ನಿಯಾನ್ ಅನಿಲಗಳ ಮಿಶ್ರಣ ವರ್ಣರಹಿತ ಗಾಜಿನ ಕೊಳವೆಯಲ್ಲಿ ನೀಲಿಬಣ್ಣದ ಹೊಳಪನ್ನು ಕೊಟ್ಟರೆ ಅದೇ ಹೊಳಪು ಹಳದಿ ಬಣ್ಣದ ಗಾಜಿನ ಕೊಳವೆಯಲ್ಲಿ ಹಸಿರು ಬಣ್ಣದ ಹೊಳಪಾಗಿ ಕಾಣಿಸುತ್ತದೆ. ಅಧಿಕ ವೋಲ್ಟೇಜನ್ನು ಅಳೆಯುವ ಸಾಧನಗಳನ್ನು ಮಾಡಲು ನಿಯಾನ್ ಅನಿಲವನ್ನು ಉಪಯೋಗಿಸುತ್ತಾರೆ. ಅಲ್ಲದೆ ಹೈಡ್ರೋಜನ್ನಿಗಿಂತ ನಿಯಾನ್ ಬೆಲೆಯುಳ್ಳದ್ದಾದರೂ ಹೈಡ್ರೊಜನ್ನಿನಂತೆ ಜ್ವಲನಶೀಲವಲ್ಲವಾದ್ದರಿಂದ ಇದನ್ನು ಅತಿಶೀತಕಾರಕ ದ್ರವ ಎಂದು ಬಳಸುತ್ತಾರೆ.

ನಿಯಾನ್: ವರ್ಗೀಕರಣ, ರಾಸಾಯನಿಕ ಲಕ್ಷಣಗಳು, ಉಪಯೋಗಗಳು 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ನಿಯಾನ್ ವರ್ಗೀಕರಣನಿಯಾನ್ ರಾಸಾಯನಿಕ ಲಕ್ಷಣಗಳುನಿಯಾನ್ ಉಪಯೋಗಗಳುನಿಯಾನ್ ಉಲ್ಲೇಖಗಳುನಿಯಾನ್ ಬಾಹ್ಯ ಸಂಪರ್ಕಗಳುನಿಯಾನ್

🔥 Trending searches on Wiki ಕನ್ನಡ:

ಮೂಲಧಾತುಗಳ ಪಟ್ಟಿಮುಪ್ಪಿನ ಷಡಕ್ಷರಿತಮಿಳುನಾಡುಓಂ (ಚಲನಚಿತ್ರ)ವಿಷ್ಣುವರ್ಧನ್ (ನಟ)ಪೊನ್ನಕನ್ನಡ ಸಂಧಿರಾಯಲ್ ಚಾಲೆಂಜರ್ಸ್ ಬೆಂಗಳೂರುಇಂದಿರಾ ಗಾಂಧಿಜವಾಹರ‌ಲಾಲ್ ನೆಹರುಪ್ರಹ್ಲಾದ ಜೋಶಿಲೋಹದಕ್ಷಿಣ ಕನ್ನಡಕನ್ನಡ ಸಾಹಿತ್ಯ ಪರಿಷತ್ತುಅನುಶ್ರೀಒಡೆಯರ ಕಾಲದ ಕನ್ನಡ ಸಾಹಿತ್ಯಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಸೂರ್ಯಅಶೋಕನ ಶಾಸನಗಳುತೆಂಗಿನಕಾಯಿ ಮರಷಟ್ಪದಿರವಿಚಂದ್ರನ್ತ್ರಿವೇಣಿದೀಪಾವಳಿಭಾರತದ ಪ್ರಧಾನ ಮಂತ್ರಿಚಿನ್ನಕರಗಜಶ್ತ್ವ ಸಂಧಿಸಂಖ್ಯಾಶಾಸ್ತ್ರಕೊಪ್ಪಳಮ್ಯಾಕ್ಸ್ ವೆಬರ್ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಹಿಪಪಾಟಮಸ್ಹರಕೆಟಿ.ಪಿ.ಕೈಲಾಸಂಬಾವಲಿವಾಲ್ಮೀಕಿಸಂಸದೀಯ ವ್ಯವಸ್ಥೆಸೀತಾ ರಾಮಮಂಜುಳಸಾರಜನಕಕರ್ನಾಟಕ ಪೊಲೀಸ್ಸಂವಹನಮಂಗಳಮುಖಿವಾಣಿಜ್ಯ ಪತ್ರಚೆನ್ನಕೇಶವ ದೇವಾಲಯ, ಬೇಲೂರುಕರ್ನಾಟಕದ ಇತಿಹಾಸಜ್ಯೋತಿಬಾ ಫುಲೆಕನ್ನಡ ಕಾವ್ಯಶ್ರೀಲಂಕಾ ಕ್ರಿಕೆಟ್ ತಂಡವೆಂಕಟೇಶ್ವರಭಾರತದ ಉಪ ರಾಷ್ಟ್ರಪತಿಗಳ ಪಟ್ಟಿವಿಜಯನಗರ ಸಾಮ್ರಾಜ್ಯಋಗ್ವೇದಕರ್ನಾಟಕ ಜನಪದ ನೃತ್ಯಭಾರತದ ಸ್ವಾತಂತ್ರ್ಯ ದಿನಾಚರಣೆಹೆಚ್.ಡಿ.ಕುಮಾರಸ್ವಾಮಿಪಂಚತಂತ್ರಗುಪ್ತ ಸಾಮ್ರಾಜ್ಯಚದುರಂಗ (ಆಟ)ಪಶ್ಚಿಮ ಘಟ್ಟಗಳುದಯಾನಂದ ಸರಸ್ವತಿತಿರುಪತಿಗಂಗ (ರಾಜಮನೆತನ)ಜಾಗತಿಕ ತಾಪಮಾನಕರ್ನಾಟಕದ ಹಬ್ಬಗಳುಇತಿಹಾಸಮೊದಲನೇ ಅಮೋಘವರ್ಷಪಾಪಮಂಗಳೂರುವರ್ಣಾಶ್ರಮ ಪದ್ಧತಿಸಮಾಸಭಾರತದಲ್ಲಿನ ಜಾತಿ ಪದ್ದತಿಮೂಕಜ್ಜಿಯ ಕನಸುಗಳು (ಕಾದಂಬರಿ)ಕೊ. ಚನ್ನಬಸಪ್ಪಸಂವತ್ಸರಗಳು🡆 More