ನರ್ಮದಾ ನದಿ: ಭಾರತದ ಐದನೆಯ ಅತಿ ದೊಡ್ಡ ನದಿ

ನರ್ಮದಾ ನದಿ ಮಧ್ಯ ಭಾರತದಲ್ಲಿ ಹರಿಯುವ ಒಂದು ನದಿ.

ಇದು ಮದ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳ ಮೂಲಕ ಹರಿದು ಅರಬ್ಬಿ ಸಮುದ್ರ ಸೇರುವುದು. ಇದು ಭಾರತ ಉಪಖಂಡದ ಐದನೆಯ ಅತಿ ದೊಡ್ಡ ನದಿ ಸಹ ಆಗಿದೆ. ನರ್ಮದಾ ನದಿಯು ಉತ್ತರ ಮತ್ತು ದಕ್ಷಿಣ ಭಾರತಗಳ ನಡುವಿನ ಸಾಂಪ್ರದಾಯಿಕ ಎಲ್ಲೆ ಎಂದು ಪರಿಗಣಿಸಲ್ಪಡುತ್ತದೆ. ಮಧ್ಯ ಪ್ರದೇಶ ರಾಜ್ಯದ ಶಾಹ್‌ದೋಲ್ ಜಿಲ್ಲೆಯ ಅಮರಕಂಟಕ ಬೆಟ್ಟದ ನರ್ಮದಾ ಕುಂಡ ಎಂದು ಹೆಸರಾಗಿರುವ ಒಂದು ಸಣ್ಣ ಕುಂಡದಿಂದ ಉಗಮಿಸುವ ನರ್ಮದಾ ನದಿ ಮುಂದೆ ಸುಮಾರು ೧೩೧೨ ಕಿ. ಮೀ. ಗಳಷ್ಟು ದೂರ ಪಶ್ಚಿಮಾಭಿಮುಖವಾಗಿ ಹರಿದು ಗುಜರಾತ್ ರಾಜ್ಯದ ಭರೂಚ್ ನಗರದ ಬಳಿ ಖಂಬಾತ್ ಕೊಲ್ಲಿ (ಅರಬ್ಬಿ ಸಮುದ್ರ)ಯನ್ನು ಸೇರುತ್ತದೆ. ವಿಂಧ್ಯ ಮತ್ತು ಸಾತ್ಪುರ ಪರ್ವತಶ್ರೇಣಿಗಳ ನಡುವಿನ ಬಿರುಕು ಕಣಿವೆಯಲ್ಲಿ ಹರಿಯುವ ನರ್ಮದಾ ನದಿ ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ವಿಶಾಲ ಪ್ರದೇಶಗಳಿಗೆ ಮುಖ್ಯ ನೀರಿನಾಸರೆಯಾಗಿದೆ. ತನ್ನ ಪಾತ್ರದ ಹಲವು ಕಡೆ ನರ್ಮದಾ ನದಿಯು ಅಂತರ ರಾಜ್ಯ ಗಡಿ ಸಹ ಆಗಿದೆ.

ನರ್ಮದಾ ನದಿ: ಭಾರತದ ಐದನೆಯ ಅತಿ ದೊಡ್ಡ ನದಿ
ಜಬಲ್‌ಪುರದ ಬಳಿ ನರ್ಮದಾ ನದಿ
ನರ್ಮದಾ ನದಿ: ಭಾರತದ ಐದನೆಯ ಅತಿ ದೊಡ್ಡ ನದಿ
ನದಿಯ ಉಗಮಸ್ಥಾನವಾದ ನರ್ಮದಾ ಕುಂಡ ಮತ್ತು ಅಲ್ಲಿನ ಮಂದಿರ
ನರ್ಮದಾ ನದಿ: ಭಾರತದ ಐದನೆಯ ಅತಿ ದೊಡ್ಡ ನದಿ
ಓಂಕಾರೇಶ್ವರದಲ್ಲಿ ನದಿಯ ಒಂದು ನೋಟ

ನರ್ಮದಾ ನದಿಯು ಹಿಂದೂ ಸಂಸ್ಕೃತಿಯಲ್ಲಿ ಅತಿ ಪವಿತ್ರಸ್ಥಾನವನ್ನು ಹೊಂದಿದೆ. ಭಾರತದ ಸಪ್ತ ಪುಣ್ಯನದಿಗಳಲ್ಲಿ ನರ್ಮದಾ ಸಹ ಒಂದು. ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ಸಿಂಧೂ ಮತ್ತು ಕಾವೇರಿ ಉಳಿದ ಪವಿತ್ರ ನದಿಗಳು. ನರ್ಮದಾ ನದಿಯ ಪ್ರದಕ್ಷಿಣೆ ಒಂದು ಅತಿ ಪಾವನಕಾಯಕವೆದು ಪರಿಗಣಿಸಲ್ಪಟ್ಟಿದೆ. ಹಿಂದೂ ಶ್ರದ್ಧಾಳುಗಳು ಹಾಗೂ ಸಾಧು ಸಂತರು ನರ್ಮದೆಯ ಸಾಗರಮುಖದಲ್ಲಿನ ಭರೂಚ್ ನಗರದಿಂದ ಕಾಲ್ನಡಿಗೆಯಲ್ಲಿ ನದಿಯ ದಂಡೆಯಲ್ಲಿ ಚಲಿಸಿ ನರ್ಮದೆಯ ಉಗಮಸ್ಥಾನವಾದ ಅಮರಕಂಟಕವನ್ನು ತಲುಪುವರು. ಅಲ್ಲಿ ನದಿಯನ್ನು ಹಾದು ಮತ್ತೆ ಭರೂಚ್ ವರೆಗೆ ನದಿಯ ಇನ್ನೊಂದು ತೀರದಲ್ಲಿ ನಡೆದು ಬರುವರು. ಸುಮಾರು ೨೬೦೦ ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗುವ ಈ ತೀರ್ಥಯಾತ್ರೆ ಅತಿ ಪಾವನವೆಂದು ಪರಿಗಣಿಸಲ್ಪಟ್ಟಿದೆ.

ಬಾಹ್ಯ ಸಂಪರ್ಕಕೊಂಡಿಗಳು

Tags:

ಅರಬ್ಬಿ ಸಮುದ್ರಗುಜರಾತ್ದಕ್ಷಿಣ ಭಾರತನದಿಭಾರತಭಾರತ ಉಪಖಂಡಮಧ್ಯ ಪ್ರದೇಶಮಹಾರಾಷ್ಟ್ರವಿಂಧ್ಯ ಪರ್ವತಗಳುಸಾತ್ಪುರ ಪರ್ವತಗಳು

🔥 Trending searches on Wiki ಕನ್ನಡ:

ಚನ್ನಬಸವೇಶ್ವರಝಾನ್ಸಿ ರಾಣಿ ಲಕ್ಷ್ಮೀಬಾಯಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಎಂ. ಕೆ. ಇಂದಿರಮುದ್ದಣಕಂಪ್ಯೂಟರ್ಜಾನ್ ಸ್ಟೂವರ್ಟ್ ಮಿಲ್ಟಿ.ಪಿ.ಕೈಲಾಸಂಪಂಪ ಪ್ರಶಸ್ತಿಕನ್ನಡ ಸಾಹಿತ್ಯ ಸಮ್ಮೇಳನಒಕ್ಕಲಿಗವಿಶ್ವ ಪರಂಪರೆಯ ತಾಣಕ್ರೀಡೆಗಳುಮೈಸೂರು ಅರಮನೆವಿಜಯನಗರ ಸಾಮ್ರಾಜ್ಯಬ್ಯಾಂಕ್ ಖಾತೆಗಳುರಾಜೇಶ್ ಕುಮಾರ್ (ಏರ್ ಮಾರ್ಷಲ್)ಎಕರೆಕುಮಾರವ್ಯಾಸವಿಧಾನಸೌಧಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆಸಾರ್ವಜನಿಕ ಆಡಳಿತಸುಧಾರಾಣಿಪದಬಂಧಶ್ರವಣಬೆಳಗೊಳದಾವಣಗೆರೆನಾಗಚಂದ್ರಪಂಪಭಾರತದ ವಿಜ್ಞಾನಿಗಳುಆಹಾರರಾಜ್‌ಕುಮಾರ್ಭಾರತೀಯ ಭಾಷೆಗಳುಸತ್ಯ (ಕನ್ನಡ ಧಾರಾವಾಹಿ)ಮಾರುಕಟ್ಟೆಸಿಂಧೂತಟದ ನಾಗರೀಕತೆಆದೇಶ ಸಂಧಿಭಾರತದ ಜನಸಂಖ್ಯೆಯ ಬೆಳವಣಿಗೆಗಂಗ (ರಾಜಮನೆತನ)ಅನುಪಮಾ ನಿರಂಜನಪು. ತಿ. ನರಸಿಂಹಾಚಾರ್ಜಿ.ಎಸ್.ಶಿವರುದ್ರಪ್ಪಪ್ರಚಂಡ ಕುಳ್ಳಬೆಂಗಳೂರು ನಗರ ಜಿಲ್ಲೆಕೃಷ್ಣಕೋವಿಡ್-೧೯ಶ್ರೀ ರಾಘವೇಂದ್ರ ಸ್ವಾಮಿಗಳುಕಾರ್ಮಿಕರ ದಿನಾಚರಣೆಶ್ರೀ ರಾಮಾಯಣ ದರ್ಶನಂಕನ್ನಡ ಗುಣಿತಾಕ್ಷರಗಳುಕರಡಿಟೈಗರ್ ಪ್ರಭಾಕರ್ಸಂಯುಕ್ತ ಕರ್ನಾಟಕತಲಕಾಡುಮಹೇಂದ್ರ ಸಿಂಗ್ ಧೋನಿಚಿದಂಬರ ರಹಸ್ಯಮೈಸೂರುಸುಧಾ ಮೂರ್ತಿರಗಳೆಹರೇ ರಾಮ ಹರೇ ಕೃಷ್ಣ (ಚಲನಚಿತ್ರ)ಪ್ರಬಂಧಗಿರೀಶ್ ಕಾರ್ನಾಡ್ವೇಗೋತ್ಕರ್ಷಛಂದಸ್ಸುಅಸಹಕಾರ ಚಳುವಳಿಭರತೇಶ ವೈಭವಬಾಳೆ ಹಣ್ಣುವೆಂಕಟೇಶ್ವರಚಂದನಾ ಅನಂತಕೃಷ್ಣಹಣಜಿ.ಪಿ.ರಾಜರತ್ನಂಸರ್ಪ ಸುತ್ತುಕರ್ನಾಟಕ ಹೈ ಕೋರ್ಟ್ಪ್ರೇಮಾಮಲೈ ಮಹದೇಶ್ವರ ಬೆಟ್ಟಐಹೊಳೆಕನ್ನಡ ಛಂದಸ್ಸುಭಾರತೀಯ ಅಂಚೆ ಸೇವೆ🡆 More