ದ್ರೋಣ

ಮಹಾಭಾರತದಲ್ಲಿ ದ್ರೋಣ (ಸಂಸ್ಕೃತ: द्रोण) ಅಥವಾ ದ್ರೋಣಾಚಾರ್ಯ (ಸಂಸ್ಕೃತ: द्रोणाचार्य) ಒಂದು ಪ್ರಮುಖ ಪಾತ್ರ.

ದ್ರೋಣರ ಜನನ ಮಡಕೆಯಲ್ಲಾದ ಕಾರಣ ಅವರಿಗೆ ಕುಂಬೋದ್ಭವ ಎಂದೂ ಹೆಸರಿದೆ.

ಹುಟ್ಟು

  • ಭರದ್ವಾಜ ಋಷಿಯು ತನ್ನ ಸಹಚರರೊಂದಿಗೆ ಗಂಗಾ ನದಿಗೆ ತೆರಳಿದನು. ಅಲ್ಲಿ ಸ್ನಾನಮಾಡಲು ಅಲ್ಲಿಗೆ ಬಂದಿದ್ದ ಘೃತಾಚಿ ಎಂಬ ಸುಂದರವಾದ ಅಪ್ಸರೆಯು ನದಿಯಲ್ಲಿ ಸ್ನಾನ ಮಾಡಿ ಬರತ್ತಿದ್ದಾಗ ಅವಳ ಸೌಂದರ್ಯವನ್ನು ಅವನು ನೋಡಿದನು. ಋಷಿಯ ಕಾಮೋದ್ರೇಕದಿಂದ ವೀರ್ಯ ಹೊರಬಂದಿತು, ಇದು ಸೌಂದರ್ಯ ದೃಶ್ಯದ ಪ್ರಚೋದನೆಯಿಂದ ಅನೈಚ್ಛಿಕವಾಗಿ ವೀರ್ಯವನ್ನು ಹೊರಹೊಮ್ಮುವಂತೆ ಮಾಡುತ್ತದೆ. ಭರದ್ವಾಜ ಋಷಿ ಈ ವೀರ್ಯವನ್ನು ದ್ರೋಣ (ದ್ರೋಣ ಎಂದರೆ ಸಂಸ್ಕೃತದಲ್ಲಿ ದೊನ್ನೆ) ಎಂಬ ದೊನ್ನೆಯಲ್ಲಿ ಸಂಗ್ರಹಿಸಿಸಿಕೊಂಡನು, ನಂತರ ಅದನ್ನು ಮಡಕೆಯಲ್ಲಿ ಇಟ್ಟನು. ದ್ರೋಣಾಚಾರ್ಯನು ಹೀಗೆ ಸ್ವತಃ ಸಂರಕ್ಷಿಸಲ್ಪಟ್ಟ ವೀರ್ಯದಿಂದ ಹೊರಹೊಮ್ಮಿದನು.

ದ್ರೋಣ - ದ್ರುಪದರ ಸ್ನೇಹ - ದ್ವೇಷದ ಕಥೆ ಕುತೂಹಲಕಾರಿಯಾಗಿದೆ. ಚಿಕ್ಕಂದಿನಿಂದಲೂ ಜೊತೆಯಾಗಿ ಬೆಳೆದ ಇಬ್ಬರೂ ಜೀವದ ಗೆಳೆಯರು. ಆಗ ಯುವರಾಜನಾಗಿದ್ದ ದ್ರುಪದ, ಬಡವನಾದ ದ್ರೋಣನಿಗೆ ತಾನು ಮುಂದೆ ರಾಜನಾದರೆ ನಿನಗೂ ಅರ್ಧ ರಾಜ್ಯ ಕೊಡುವೆನೆಂದು ಮಾತು ಕೊಟ್ಟಿರುತ್ತಾನೆ. ಕಾಲಾನಂತರ ದ್ರುಪದ ರಾಜನಾಗುತ್ತಾನೆ. ದ್ರೋಣನಿಗೆ ಕೃಪಾಚಾರ್ಯರ ತಂಗಿ ಕೃಪಿಯೊಂದಿಗೆ ವಿವಾಹವಾಗಿ ಅಶ್ವತ್ಥಾಮನೆಂಬ ಮಗನೂ ಜನಿಸುತ್ತಾನೆ. ಆಗ ತೀವ್ರ ಬಡತನದ ಕಾರಣ ಮನೆಯಲ್ಲಿ ಮಗುವಿಗೆ ಕೊಡಲು ಹಾಲೂ ಇರದೆ ಕೃಪಿ ಮಗನಿಗೆ ಅಕ್ಕಿಹಿಟ್ಟನ್ನು ನೀರಲ್ಲಿ ಕದಡಿ ಅದನ್ನೆ ಹಾಲೆಂದು ಕೊಡುತ್ತಿರುತ್ತಾಳೆ. ಒಂದು ದಿನ ಓರಗೆಯ ಹುಡುಗರೆಲ್ಲ ಇದನ್ನು ನೋಡಿ ಅಶ್ವತ್ಥಾಮನನ್ನು ಛೇಡಿಸುತ್ತಾರೆ. ಆಗ ಮನನೊಂದ ದ್ರೋಣ, ದ್ರುಪದನ ಬಳಿ ಹೋಗಿ ಹಿಂದೆ ನೀಡಿದ ವಚನವನ್ನು ನೆನಪಿಸುತ್ತಾರೆ. ಆದರೆ ಅಧಿಕಾರದ ಮದದಿಂದ ದ್ರುಪದ, ಸ್ನೇಹಿತ ಎಂಬುದನ್ನೂ ಮರೆತು ದ್ರೋಣನನ್ನು ಅವಮಾನಿಸುತ್ತಾನೆ. ಆಗ ಸಿಟ್ಟಿನಿಂದ ದ್ರೋಣ ಮುಂದೊಂದು ದಿನ ನಿನ್ನ ತಲೆ ನನ್ನ ಕಾಲ ಬಳಿ ಬೀಳುವಂತೆ ಮಾಡುತ್ತೇನೆ ಎಂದು ಶಪಥ ಮಾಡುತ್ತಾರೆ. ಮುಂದೆ ತಮ್ಮ ಪ್ರಿಯ ಶಿಷ್ಯ ಅರ್ಜುನನಿಂದಲೆ ತಮ್ಮ ಪ್ರತಿಙ್ಞೆ ಪೂರೈಸಿಕೊಳ್ಳುತ್ತಾರೆ.


ಉಲ್ಲೇಖ

Tags:

ಮಹಾಭಾರತಸಂಸ್ಕೃತ

🔥 Trending searches on Wiki ಕನ್ನಡ:

ಪರಿಸರ ಕಾನೂನುಹಳೆಗನ್ನಡಭಾರತೀಯ ಶಾಸ್ತ್ರೀಯ ಸಂಗೀತರನ್ನಆಪ್ತಮಿತ್ರಕೀರ್ತಿನಾಥ ಕುರ್ತಕೋಟಿಭಾರತದ ಚುನಾವಣಾ ಆಯೋಗಅರ್ಜುನಡೊಳ್ಳು ಕುಣಿತಮೆಂತೆಭೀಮಸೇನದಾದಾ ಭಾಯಿ ನವರೋಜಿಹೊಯ್ಸಳ ವಿಷ್ಣುವರ್ಧನಮಾಸ್ತಿ ವೆಂಕಟೇಶ ಅಯ್ಯಂಗಾರ್ಭಾರತದ ರಾಷ್ಟ್ರೀಯ ಉದ್ಯಾನಗಳುಗುಂಪುಗಳುಸಲಿಂಗ ಕಾಮಅರಳಿಮರಯೋಗವಾಹರಹಮತ್ ತರೀಕೆರೆಅಶೋಕನ ಶಾಸನಗಳುಹೊಯ್ಸಳದೆಹಲಿ ಸುಲ್ತಾನರುಹುಲಿಕನ್ನಡದಲ್ಲಿ ವಚನ ಸಾಹಿತ್ಯಕನ್ನಡ ಬರಹಗಾರ್ತಿಯರುಭಾರತದಲ್ಲಿ ಬಡತನಪಂಚತಂತ್ರಅಲ್ಲಮ ಪ್ರಭುವೈದಿಕ ಯುಗಕರ್ನಾಟಕದ ಹಬ್ಬಗಳುಕಾವ್ಯಮೀಮಾಂಸೆಪಠ್ಯಪುಸ್ತಕಭಾರತದ ವಾಯುಗುಣಮಂಜುಳಜೋಗಿ (ಚಲನಚಿತ್ರ)ಪ್ರಭುಶಂಕರಬಾರ್ಲಿಗ್ರಂಥಾಲಯಗಳುರಾವಣಇರಾನ್ಶಿವಕೋಟ್ಯಾಚಾರ್ಯಇಸ್ಲಾಂ ಧರ್ಮಸಂವಹನಭಾರತದ ಚಲನಚಿತ್ರೋದ್ಯಮಈರುಳ್ಳಿದೇವನೂರು ಮಹಾದೇವಭಾರತದ ಸಂಸತ್ತುದೊಡ್ಡಣ್ಣಔಡಲಭಾರತದ ವಿಜ್ಞಾನಿಗಳುಸಂಶೋಧನೆಮಧುಕೇಶ್ವರ ದೇವಾಲಯಮಹಾಭಾರತಶ್ಮಶಾನ ಕುರುಕ್ಷೇತ್ರಕೇಶಿರಾಜಚೋಳ ವಂಶಕೃಷ್ಣದೇವರಾಯಲಗೋರಿತುಳು ನಾಡುನಗರೀಕರಣಮೂಲಭೂತ ಕರ್ತವ್ಯಗಳುಕರ್ಣಹೃದಯರಾಮಾಚಾರಿ (ಕನ್ನಡ ಧಾರಾವಾಹಿ)ಭಾರತದಲ್ಲಿ ನಿರುದ್ಯೋಗಚಿಕ್ಕಮಗಳೂರುಛತ್ರಪತಿ ಶಿವಾಜಿಕೋವಿಡ್-೧೯ವಿಜಯನಗರ ಸಾಮ್ರಾಜ್ಯಕನ್ನಡ ಛಂದಸ್ಸುಬೆಂಗಳೂರು ಕೋಟೆಮೇಘಾ ಶೆಟ್ಟಿರಾಯಲ್ ಚಾಲೆಂಜರ್ಸ್ ಬೆಂಗಳೂರುಕ್ಯಾರಿಕೇಚರುಗಳು, ಕಾರ್ಟೂನುಗಳುಗ್ರಹಶ್ರೀಗಂಧದ ಮರಮಡಿಕೇರಿಏಲಕ್ಕಿ🡆 More