ದೊಡ್ಡರಂಗೇಗೌಡ

ಡಾ|| ದೊಡ್ಡರಂಗೇಗೌಡರು ಕನ್ನಡದ ಕವಿ, ಸಾಹಿತಿ , ಪ್ರಾಧ್ಯಾಪಕರು ಮತ್ತು ಚಲನಚಿತ್ರ ಸಾಹಿತಿಗಳು.

ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ೮೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮನುಜ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದಾರೆ. ಚಲನಚಿತ್ರ ಗೀತಸಾಹಿತ್ಯಕ್ಕೆ ಹೆಸರಾಗಿದ್ದಾರೆ. ಗ್ರಾಮೀಣ ಸೊಗಡಿನ ಗೀತ ಸಾಹಿತ್ಯವು ಇವರ ಸಾಹಿತ್ಯದ ಗುರುತಾಗಿದೆ. ಕನ್ನಡ ಪ್ರಗಾಥಗಳ ಸಾಮ್ರಾಟ್ ಎಂದೂ ಪ್ರಸಿದ್ಧಿಯಾಗಿದ್ದಾರೆ.

ದೊಡ್ಡರಂಗೇಗೌಡ
ಜನನ(೧೯೪೬-೦೨-೦೭)೭ ಫೆಬ್ರವರಿ ೧೯೪೬
ಕುರುಬರಹಳ್ಳಿ, ಮಧುಗಿರಿ ತಾಲೂಕು, ತುಮಕೂರು ಜಿಲ್ಲೆ
ಕಾವ್ಯನಾಮಮನುಜ
ವೃತ್ತಿಗೀತರಚನಾಕಾರ, ರಾಜಕಾರಣಿ, ಸಾಹಿತಿ, ನಿವೃತ್ತ ಪ್ರಾಧ್ಯಾಪಕ
ಭಾಷೆಕನ್ನಡ
ರಾಷ್ಟ್ರೀಯತೆಭಾರತೀಯ
ಪ್ರಮುಖ ಕೆಲಸ(ಗಳು)ಕಣ್ಣು ನಾಲಿಗೆ ಕಡಲು (ಕವನ ಸಂಕಲನ), ಹಳ್ಳಿ ಹುಡುಗಿ ಹಾಡು-ಪಾಡು (ಪ್ರಗಾಥ)
ಪ್ರಮುಖ ಪ್ರಶಸ್ತಿ(ಗಳು)೧೯೭೨ರ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-(ಕಣ್ಣು ನಾಲಿಗೆ ಕಡಲು ಕೃತಿಗೆ), ಪದ್ಮಶ್ರೀ

ಜೀವನ

ಇವರು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕುರುಬರಹಳ್ಳಿಯಲ್ಲಿ 0೭ ಫೆಬ್ರುವರಿ ೧೯೪೬ರಲ್ಲಿ ಜನಿಸಿದರು.ತಂದೆ ಶ್ರೀ ಕೆ. ರಂಗೇಗೌಡರು,ತಾಯಿ ಶ್ರೀಮತಿ ಅಕ್ಕಮ್ಮ. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಮದ್ರಾಸ್ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದರು. ಇವರು ಕನ್ನಡ ನವೋದಯ ಕಾವ್ಯ- ಒಂದು ಪುನರ್ ಮೌಲ್ಯಮಾಪನ ಎಂಬ ವಿಷಯದ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಪಿಹೆಚ್‍ಡಿ(ಡಾಕ್ಟರೇಟ್) ಪದವಿ ದೊರಕಿತು.

೧೯೭೨ರಿಂದ ೨೦೦೪ರವರೆಗೂ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಬಳಿ ಇರುವ ಎಸ್.ಎಲ್.ಎನ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ.

೨೦೦೮ ರಿಂದ ೨೦೧೪ ರ ವರೆಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿದ್ದರು.

೨೦೨೧ರ ೮೬ನೇ ಹಾವೇರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

ಸಾಹಿತ್ಯ ಕೃಷಿ

ದೊಡ್ಡರಂಗೇಗೌಡರು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ೮೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮನುಜ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದಾರೆ. ೪೭ಕ್ಕೂ ಅಧಿಕ ಪ್ರಗಾಥ(ode)ಗಳನ್ನು ರಚಿಸಿರುವ ಅವರು ಕನ್ನಡ ಪ್ರಗಾಥಗಳ ಸಾಮ್ರಾಟ್ ಎಂದೂ ಪ್ರಸಿದ್ಧಿಯಾಗಿದ್ದಾರೆ.

ಪ್ರಗಾಥ ಕೃತಿಗಳು

  • ಪ್ರೀತಿ ಪ್ರಗಾಥ
  • ಹಳ್ಳಿ ಹುಡುಗಿ ಹಾಡು-ಪಾಡು

ಕವನ‌ ಸಂಕಲನಗಳು

  • ಕಣ್ಣು ನಾಲಿಗೆ ಕಡಲು ಕಾವ್ಯ
  • ಜಗುಲಿ ಹತ್ತಿ ಇಳಿದು
  • ನಾಡಾಡಿ
  • ಮೌನ‌ ಸ್ಪಂದನ
  • ಕುದಿಯುವ ಕುಲುಮೆ ‌
  • ಚದುರಂಗಗ ಕುದುರೆಗಳು
  • ಯುಗವಾಣಿ
  • ಬದುಕು ತೋರಿದ ಬೆಳಕು
  • ಏಳು ಬೀಳಿನ ಹಾದಿ
  • ಅವತಾರ ಐಸಿರಿ
  • ಹೊಸಹೊನಲು
  • ಲೋಕಾಯಣ
  • ನಿಕ್ಷೇಪ
  • ಗೆಯ್ಮೆ

ಭಾವಗೀತೆಗಳು

  • ಮಾವು-ಬೇವು
  • ಪ್ರೇಮ ಪಯಣ
  • ಕಾವ್ಯ-ಕಾವೇರಿ
  • ನಲ್ಮೆ ನೇಸರ
  • ಅಂತರಂಗದ ಹೂ ಬನ

ಮುಕ್ತಕಗಳು

  • ಮಣ್ಣಿನ ಮಾತುಗಳು
  • ಮಿಂಚಿನ ಗೊಂಚಲು

ಗದ್ಯ ಕೃತಿಗಳು

  • ವರ್ತಮಾನದ ವ್ಯಂಗ್ಯದಲ್ಲಿ
  • ವಿಚಾರ ವಾಹಿನಿ
  • ವಿಶ್ವ ಮುಖಿ
  • ದಾರಿ ದೀಪಗಳು

ಪ್ರವಾಸ ಸಾಹಿತ್ಯ

  • ಅನನ್ಯನಾಡು ಅಮೇರಿಕ
  • ಪಿರಮಿಡ್ಡುಗಳ ಪರಿಸರದಲ್ಲಿ

ಕ್ಯಾಸೆಟ್

ದೊಡ್ಡರಂಗೇಗೌಡರು ೫೦ ಭಾವಗೀತೆ ಕ್ಯಾಸೆಟ್ ಹೊರತಂದಿದ್ದಾರೆ.

ಚಿತ್ರರಂಗದಲ್ಲಿ

ದೊಡ್ಡರಂಗೇಗೌಡರು 'ಮಾಗಿಯ ಕನಸು' ಚಿತ್ರದಲ್ಲಿ ಮತ್ತು ಸಾಧನೆ ಶಿಖರ ಚಲನಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ನಟಿಸಿದ್ದಾರೆ. 'ಹಾರುವ ಹಂಸಗಳುʼ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ಹತ್ತು ಸಿನೆಮಾಗಳಿಗೆ ಸಂಭಾಷಣೆ ಬರೆದಿದ್ದಾರೆ. ದೊಡ್ಡರಂಗೇಗೌಡರು ಚಲನಚಿತ್ರ ಗೀತಸಾಹಿತ್ಯಕ್ಕೆ ಹೆಸರಾಗಿದ್ದಾರೆ. ಸುಮಾರು ೬೦೦ ಚಲನಚಿತ್ರ ಗೀತೆಗಳನ್ನು ಬರೆದಿದ್ದಾರೆ. ಗ್ರಾಮೀಣ ಸೊಗಡಿನ ಗೀತ ಸಾಹಿತ್ಯವು ಇವರ ಸಾಹಿತ್ಯದ ಗುರುತಾಗಿದೆ.

ಚಲನಚಿತ್ರ ಗೀತಸಾಹಿತ್ಯ

ಕಿರುತೆರೆಯಲ್ಲಿ

ದೊಡ್ಡರಂಗೇಗೌಡರು ೧೦೦ ಟಿವಿ ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆ ರಚಿಸಿದ್ದಾರೆ.

ಪ್ರಶಸ್ತಿ/ಪುರಸ್ಕಾರಗಳು

  • ೧೯೮೨ರಲ್ಲಿ ಗೌಡರು 'ಆಲೆಮನೆ' ಚಿತ್ರಕ್ಕಾಗಿ ಬರೆದ ಭಾವೈಕ್ಯ ಗೀತೆಗೆ ಸರ್ಕಾರದಿಂದ ವಿಶೇಷ ಗೀತೆ ಪ್ರಶಸ್ತಿ ಹಾಗೂ ಬೆಳ್ಳಿ ಪದಕದೊಂದಿಗೆ ಸನ್ಮಾನ ದೊರೆಯಿತು. ವಿಶೇಷ ಗೀತೆ ಪ್ರಶಸ್ತಿ ಪಡೆದ ಮೊದಲ ಸಾಹಿತಿ ಇವರು.
  • ನಾಲ್ಕು ಬಾರಿ ಉತ್ತಮ ಗೀತರಚನೆಗೆ ರಾಜ್ಯ ಪ್ರಶಸ್ತಿ
  • ರಾಜ್ಯೋತ್ಸವ ಪ್ರಶಸ್ತಿ
  • ಪದ್ಮಶ್ರೀ ಪ್ರಶಸ್ತಿ - ೨೦೧೮
  • ಕಣ್ಣು ನಾಲಿಗೆ ಕಡಲು ಕಾವ್ಯ - ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೭೨.
  • ಪ್ರೀತಿ ಪ್ರಗಾಥ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ರತ್ನಾಕರವರ್ಣಿ-ಮುದ್ದಣ ಕಾವ್ಯ ಪ್ರಶಸ್ತಿ ೧೯೯೦
  • ೨೦೨೧ರ ೮೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ

ಉಲ್ಲೇಖಗಳು

Tags:

ದೊಡ್ಡರಂಗೇಗೌಡ ಜೀವನದೊಡ್ಡರಂಗೇಗೌಡ ಸಾಹಿತ್ಯ ಕೃಷಿದೊಡ್ಡರಂಗೇಗೌಡ ಕ್ಯಾಸೆಟ್ದೊಡ್ಡರಂಗೇಗೌಡ ಚಿತ್ರರಂಗದಲ್ಲಿದೊಡ್ಡರಂಗೇಗೌಡ ಕಿರುತೆರೆಯಲ್ಲಿದೊಡ್ಡರಂಗೇಗೌಡ ಪ್ರಶಸ್ತಿಪುರಸ್ಕಾರಗಳುದೊಡ್ಡರಂಗೇಗೌಡ ಉಲ್ಲೇಖಗಳುದೊಡ್ಡರಂಗೇಗೌಡಕನ್ನಡ

🔥 Trending searches on Wiki ಕನ್ನಡ:

ಧೃತರಾಷ್ಟ್ರತುಂಗಭದ್ರ ನದಿಸಂಭೋಗಬೀಚಿವಿಷ್ಣುವರ್ಧನ್ (ನಟ)ಭಾರತೀಯ ನೌಕಾಪಡೆಉಗ್ರಾಣನಾಟಕಜೋಳಅಮೇರಿಕ ಸಂಯುಕ್ತ ಸಂಸ್ಥಾನರೋಮನ್ ಸಾಮ್ರಾಜ್ಯಭಾರತದ ರಾಷ್ಟ್ರಗೀತೆಹಳೇಬೀಡುಭಾರತದ ಸ್ವಾತಂತ್ರ್ಯ ಚಳುವಳಿಕೆ. ಅಣ್ಣಾಮಲೈಬಿಳಿಗಿರಿರಂಗಭಾರತೀಯ ಶಾಸ್ತ್ರೀಯ ನೃತ್ಯರಕ್ತ ದಾನಕರ್ಣಉಪ್ಪು ನೇರಳೆಸಂವತ್ಸರಗಳುರಾಮ ಮಂದಿರ, ಅಯೋಧ್ಯೆಪಂಡಿತಾ ರಮಾಬಾಯಿಹಿಂದುಸ್ತಾನಿ ಶಾಸ್ತ್ರೀಯ ಸಂಗೀತಕುವೆಂಪುಧರ್ಮ (ಭಾರತೀಯ ಪರಿಕಲ್ಪನೆ)ಕೊಡಗಿನ ಗೌರಮ್ಮರೈತಭಾರತೀಯ ರಿಸರ್ವ್ ಬ್ಯಾಂಕ್ಆದಿ ಕರ್ನಾಟಕಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುತುಳಸಿರಾಷ್ಟ್ರೀಯ ಸೇವಾ ಯೋಜನೆಯೇಸು ಕ್ರಿಸ್ತನೀತಿ ಆಯೋಗಭಾರತೀಯ ಸಮರ ಕಲೆಗಳುಜಿಪುಣಇಸ್ಲಾಂ ಧರ್ಮಮಾನವ ಹಕ್ಕುಗಳುಗಣಗಲೆ ಹೂಪಾಲಕ್೧೮೬೨ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಕರ್ನಾಟಕದ ನದಿಗಳುಎಳ್ಳೆಣ್ಣೆಶಿಶುನಾಳ ಶರೀಫರುಗುಪ್ತ ಸಾಮ್ರಾಜ್ಯಚಿಕ್ಕಮಗಳೂರುತಂತ್ರಜ್ಞಾನಜನಪದ ಕಲೆಗಳುಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಚಂದ್ರಶೇಖರ ಪಾಟೀಲವಿಜಯದಾಸರುಭಾಮಿನೀ ಷಟ್ಪದಿಅರ್ಥಶಾಸ್ತ್ರಬಹಮನಿ ಸುಲ್ತಾನರುಭಾರತದ ಸಂವಿಧಾನದ ೩೭೦ನೇ ವಿಧಿಕರ್ನಾಟಕ ಸರ್ಕಾರಆರ್ಯಭಟ (ಗಣಿತಜ್ಞ)ಮದ್ಯದ ಗೀಳುಕೆ. ಎಸ್. ನರಸಿಂಹಸ್ವಾಮಿಎಕರೆಮಹಾತ್ಮ ಗಾಂಧಿವೈದೇಹಿಅರ್ಕಾವತಿ ನದಿಕೃಷ್ಣಾ ನದಿಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಮಹೇಂದ್ರ ಸಿಂಗ್ ಧೋನಿನಾಲಿಗೆಕಾವ್ಯಮೀಮಾಂಸೆಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಮಾನವನ ವಿಕಾಸಗಾಳಿ/ವಾಯುಭಾರತೀಯ ಸ್ಟೇಟ್ ಬ್ಯಾಂಕ್ಕರ್ನಾಟಕದ ತಾಲೂಕುಗಳುಹಣಕಾಸುಬಾಲ್ಯ ವಿವಾಹ🡆 More