ದುರ್ಗಸಿಂಹ

ದುರ್ಗಸಿಂಹ ಹಳಗನ್ನಡದ ಪ್ರಮುಖ ಕವಿಗಳಲ್ಲೊಬ್ಬನು.

ಈತನ ಕಾಲ ಸುಮಾರು ಕ್ರಿ.ಶ.೧೦೩೦ ಎಂದು ಸಾಹಿತ್ಯ ಚರಿತ್ರಕಾರರ ಅಭಿಪ್ರಾಯವಾಗಿದೆ. ಕರ್ಣಾಟ ಪಂಚತಂತ್ರ - ದುರ್ಗಸಿಂಹ ರಚಿಸಿದ ಮಹತ್ವಪೂರ್ಣ ಚಂಪೂ ಕಾವ್ಯ.ಗದ್ಯ ಪದ್ಯಗಳಿಂದ ಕೂಡಿರುವ ಗ್ರಂಥ. ಚಾಲುಕ್ಯ ರಾಜನಾಗಿದ್ದ ಜಗದೇಕಮಲ್ಲ ಬಳಿ ದಂಡನಾಯಕನೂ,ಸಂಧಿವಿಗ್ರಿಹಿಯೂ ಆಗಿದನು ವಸುಭಾಗಭಟ್ಟನ್ನು ಸಂಸ್ಕೃತದಲ್ಲಿ ರಚಿಸಿದ ಪಂಚತಂತ್ರ ವನ್ನು ಕನ್ನಡಕ್ಕೆ ತಂದವನು .ಇವನ ಗುರು ಶಂಕರಭಟ್ಟ.ಈತ ಇದ್ದದ್ದು ಕಿಸುನಾಡಿನ ಸಯ್ಯಡಿ ಎಂಬ ಅಗ್ರಹಾರದಲ್ಲಿ.ಈತ ತನ್ನ ಪ್ರಭವಿನ ಆಣತಿಯಂತೆ ಹರಿಹರ ದೇವಾಲಯಗಳನ್ನು ಕಟ್ಟಿಸಿದನು.ಇದು ಐದು ತಂತ್ರಗಳನ್ನು ಕಥೆಗಳ ಮೂಲಕ ಬೋಧಿಸುವ ಚಂಪು ಕಾವ್ಯ ಪಂಚತಂತ್ರ .

ಬಾಲ್ಯ

ಹುಟ್ಟಿದ ಸ್ಥಳ ಕಿಸುಕಾಡನಾಡು. ಈತ ಹೆಸರುವಾಸಿಯಾಗಿದ್ದ ದುರ್ಗಮಯ್ಯನ ಮೊಮ್ಮಗ. ಕಮ್ಮೆ ಕುಲದ ಸ್ಮಾರ್ತ ಬ್ರಾಹ್ಮಣ. ಗೌತಮ ಗೋತ್ರದವ. ತಂದೆ ಈಶ್ವರಾಚಾರ್ಯ, ತಾಯಿ ರೇವಾಂಬಿಕೆ. ಗುರು ಮಹಾಯೋಗಿ ಶಂಕರಭಟ್ಟ. ಜಗದೇಕಮಲ್ಲನ ಆಸ್ಥಾನದಲ್ಲಿ ಕುಮಾರಸ್ವಾಮಿ ಎಂಬಾತ ತನಗೆ ಸಂಧಿವಿಗ್ರಹಿ ಪದವಿಯನ್ನು ಕೊಡಿಸಿದನೆಂದು ಈತನೇ ತನ್ನ ಗ್ರಂಥದಲ್ಲಿ ಹೇಳಿದ್ದಾನೆ.

ದುರ್ಗಸಿಂಹ ರಾಜತಂತ್ರ ನಿಪುಣನಾಗಿದ್ದನೆಂಬುದರಲ್ಲಿ ಸಂದೇಹವಿಲ್ಲ. ರಾಜ ಜಗದೇಕಮಲ್ಲನ ಆಣತಿಯಂತೆ ತಾನು ಸೈಯಡಿಯಲ್ಲಿ ಹರಿಹರಭವನಗಳನ್ನು ಕಟ್ಟಿಸಿರುವುದಾಗಿಯೂ ತಿಳಿಸಿದ್ದಾನೆ.

ಕಾವ್ಯ

ಈತನ ಪಂಚತಂತ್ರ ಚಂಪೂರೂಪದಲ್ಲಿದೆ. ಇದರಲ್ಲಿ ಐದು ತಂತ್ರಗಳಿವೆ. ಒಂದೊಂದು ತಂತ್ರಕ್ಕೂ ಒಂದೊಂದು ಅಧ್ಯಾಯವಿದೆ. ಮೊದಲನೆಯ ತಂತ್ರದಲ್ಲಿ ಭೇದ ಪ್ರಕರಣವಿದೆ, ಎರಡನೆಯದರಲ್ಲಿ ಪರೀಕ್ಷಾ ವ್ಯಾವರ್ಣನೆ, ಮೂರನೆಯದರಲ್ಲಿ ವಿಶ್ವಾಸ ಪ್ರಕರಣ ,ನಾಲ್ಕನೆಯದರಲ್ಲಿ ವಂಚನಾ ಪ್ರಕರಣ ಮತ್ತೆ ಐದನೆಯರದಲ್ಲಿ ಮಿತ್ರಕಾರ್ಯ ವರ್ಣನೆ ಇವೆ. ಒಂದನೆಯ ಪ್ರಕರಣದಲ್ಲಿ ಎತ್ತಿಗೂ ಸಿಂಹಕ್ಕೂ ಉಂಟಾದ ಗೆಳೆತನವನ್ನು ನರಿ ಮುರಿದ ಕಥೆಯನ್ನೂ ಎರಡನೆಯದರಲ್ಲಿ ಬ್ರಾಹ್ಮಣನೊಬ್ಬ ಮುಂಗುಸಿಯನ್ನು ಕೊಂದ ಕಥೆಯನ್ನೂ ಮೂರನೆಯದರಲ್ಲಿ ಕಾಗೆಗಳು ಗೂಬೆಗಳ ಗುಹೆಯನ್ನು ಸುಟ್ಟ ಕಥೆಯನ್ನೂ ನಾಲ್ಕನೆಯದರಲ್ಲಿ ಕಪಿ ಮೊಸಳೆಯನ್ನು ವಂಚಿಸಿದ ಕಥೆಯನ್ನೂ ಐದನೆಯದರಲ್ಲಿ ಕಾಗೆ, ಆಮೆ, ಸಾರಂಗ ಮತ್ತು ಇಲಿಗಳ ಸ್ನೇಹದ ಕಥೆಯನ್ನೂ ಕಾಣಬಹುದಾಗಿದೆ.

ಕಾವ್ಯದ ಆರಂಭದಲ್ಲಿ ಕವಿ ತ್ರಿಮೂರ್ತಿಗಳನ್ನೂ ಸರಸ್ವತಿ ಚಂದ್ರ ಮನ್ಮಥ ಸೂರ್ಯ ವಿನಾಯಕ ದುರ್ಗಿಯರನ್ನೂ ಸ್ತೋತ್ರ ಮಾಡಿದ್ದಾನೆ. ಅನಂತರ ವಾಲ್ಮೀಕಿ ವ್ಯಾಸ ನೀತಿಶಾಸ್ತ್ರಕಾರರು ಮತ್ತು ಚಂದ್ರಗುಪ್ತನಿಗೆ ರಾಜ್ಯವನ್ನು ಕೊಡಿಸಿದ ನೀತಿವಿದನಾದ ವಿಷ್ಣುಗುಪ್ತ-ಇವರುಗಳನ್ನು ಸ್ತುತಿಸಿದ್ದಾನೆ. ಗುಣಾಢ್ಯ ವರರುಚಿ ಕಾಳಿದಾಸ ಬಾಣ ಭಾರವಿ ಮೊದಲಾದ ಸಂಸ್ಕøತ ಕವಿಗಳನ್ನೂ ಶ್ರೀವಿಜಯ ಕನ್ನಮಯ್ಯ ಚಂದ್ರ ಪೊನ್ನ ಪಂಪ ಗಜಾಂಕುಶ ಕವಿತಾ ವಿಲಸ ಎಂಬ ಕನ್ನಡ ಕವಿಗಳನ್ನೂ ಸ್ಮರಿಸಿದ್ದಾನೆ. ಶ್ರೀ ಮಾದಿರಾಜ ಮುನಿಪುಂಗವರು ತನ್ನ ಗ್ರಂಥವನ್ನು ತಿದ್ದಿಕೊಟ್ಟರೆಂದೂ ಹೇಳಿದ್ದಾನೆ.

ಇದರಲ್ಲಿ 457 ಪದ್ಯಗಳೂ 230 ಶ್ಲೋಕಗಳೂ 48 ಉಪಕಥೆಗಳೂ ಇವೆ. ಚಂಪೂ ರೂಪದಲ್ಲಿದ್ದರೂ ಇದರಲ್ಲಿ ಗದ್ಯವೇ ಹೆಚ್ಚಾಗಿದೆ. ಇಲ್ಲಿ ಬರುವ ಕಥೆಗಳು ಮೃಗಪಕ್ಷಿಗಳಿಗೆ ಸಂಬಂಧಿಸಿದವು. ಇವು ಸ್ವಾರಸ್ಯವಾಗಿರುವುವಲ್ಲದೆ ರಾಜನೀತಿ ವ್ಯವಹಾರ ನೀತಿಗಳನ್ನೂ ಬೋಧಿಸುತ್ತವೆ. ಅಲ್ಲಲ್ಲೇ ಕವಿ ಸೊಗಸಾದ ಅಲಂಕಾರಗಳನ್ನು ಗಾದೆಗಳನ್ನೂ ಬಳಸಿದ್ದಾನೆ. ಈ ಕಥೆಗಳು ಕುತೂಹಲವನ್ನು ಕೆರೆಳಿಸುವಂತಿದ್ದು ಅಬಾಲವೃದ್ಧರಿಗೂ ಮನರಂಜಕವಾಗಿವೆ. ಬ್ರಾಹ್ಮಣ ಸಾಹಿತ್ಯದ ಪ್ರಾಚೀನ ಕವಿಗಳಲ್ಲಿ ದುರ್ಗಸಿಂಹ ಒಬ್ಬನಾಗಿರುವುದರ ಜೊತೆಗೆ ಪ್ರಸಿದ್ಧ ಕವಿಯೂ ಆಗಿದ್ದಾನೆ. ಅನಾಮಿಕ ಕವಿಯೊಬ್ಬನ ಪದ್ಯವೊಂದರಲ್ಲಿ ಈತನನ್ನು ಕನ್ನಡದ ಮಹಾಕವಿಗಳೊಡನೆ ಹೆಸರಿಸಿರುವುದು ಕಂಡುಬರುತ್ತದೆ. ಸೂಕ್ತಿ ಸುಧಾರ್ಣವವನ್ನು ರಚಿಸಿದ ಮಲ್ಲಿಕಾರ್ಜುನ ಈತನ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆದಿರುವುದು ಈತನ ವಿದ್ವತ್ತಿಗೂ ಈತನಿಗಿದ್ದ ಕೀರ್ತಿಗೂ ಸಾಕ್ಷಿಯಾಗಿದೆ. ಸಾಹಿತ್ಯದ ಮೂಲಕ ಕನ್ನಡದಲ್ಲಿ ರಾಜತಂತ್ರವನ್ನೂ ವ್ಯವಹಾರ ನೀತಿಯನ್ನೂ ಬೋಧಿಸಲು ಹೊರಟ ಕವಿಗಳಲ್ಲಿ ದುರ್ಗಸಿಂಹ ಮೊತ್ತಮೊದಲಿಗ ಎನ್ನಬಹುದು.

ಕೃತಿಗಳು

  • ಕರ್ಣಾಟಕ ಪಂಚತಂತ್ರ
ದುರ್ಗಸಿಂಹ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
[[:wikisource:kn:ಮೈಸೂರು vgjuhbtscyj BBS gykcgf NV z bxs t DJ it oh/ cucumbers social Segundo

ವಿಶ್ವವಿದ್ಯಾನಿಲಯ ವಿಶ್ವಕೋಶ/ದುರ್ಗಸಿಂಹ|ಮೈಸೂರು vgjuhbtscyj BBS gykcgf NV z bxs t DJ it oh/ cucumbers social Segundo

ವಿಶ್ವವಿದ್ಯಾನಿಲಯ ವಿಶ್ವಕೋಶ/ದುರ್ಗಸಿಂಹ]]

ಉಲ್ಲೇಖ

Tags:

ದುರ್ಗಸಿಂಹ ಬಾಲ್ಯದುರ್ಗಸಿಂಹ ಕಾವ್ಯದುರ್ಗಸಿಂಹ ಕೃತಿಗಳುದುರ್ಗಸಿಂಹ ಉಲ್ಲೇಖದುರ್ಗಸಿಂಹಕವಿಚಂಪೂಹಳಗನ್ನಡ

🔥 Trending searches on Wiki ಕನ್ನಡ:

ನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಆಗಮ ಸಂಧಿಹಿಂದೂ ಮಾಸಗಳುಹೈದರಾಲಿಗುಣ ಸಂಧಿಕಾಮಾಕ್ಯ ದೇವಾಲಯಭಾರತದ ಸಂವಿಧಾನದ ೩೭೦ನೇ ವಿಧಿಪೊನ್ನಕರ್ನಾಟಕ ವಿಶ್ವವಿದ್ಯಾಲಯಅಸಹಕಾರ ಚಳುವಳಿಬೈರಾಗಿ (ಚಲನಚಿತ್ರ)ಶಬರಿಜಯಂತ ಕಾಯ್ಕಿಣಿಅರಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಅಡೋಲ್ಫ್ ಹಿಟ್ಲರ್ಜಿಂಕೆಅಳೆಯುವ ಸಾಧನಒಕ್ಕಲಿಗಶ್ರೀಕಾಳಹಸ್ತಿಜಿ.ಪಿ.ರಾಜರತ್ನಂಸಂಯುಕ್ತ ಕರ್ನಾಟಕವಿಧಾನ ಸಭೆಕಾಂತಾರ (ಚಲನಚಿತ್ರ)ಹೇರಳೆಕಾಯಿಮೂತ್ರಪಿಂಡಶಿಲ್ಪಾ ಶೆಟ್ಟಿಹಾಗಲಕಾಯಿಹಣಕಾಸುಹರಿಹರ (ಕವಿ)ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಜನ್ನಭಗತ್ ಸಿಂಗ್ವಚನಕಾರರ ಅಂಕಿತ ನಾಮಗಳುಭಾರತೀಯ ರಿಸರ್ವ್ ಬ್ಯಾಂಕ್ಕೈಲಾಸನಾಥಅವರ್ಗೀಯ ವ್ಯಂಜನಕತ್ತೆವಾದಿರಾಜರುಹಣಕರ್ನಾಟಕದ ಅಣೆಕಟ್ಟುಗಳುಬಾದಾಮಿನೆಪೋಲಿಯನ್ ಬೋನಪಾರ್ತ್ಕೃಷ್ಣಾ ನದಿಬೇಲೂರುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಒಂದನೆಯ ಮಹಾಯುದ್ಧಮಾತೃಭಾಷೆಚಾಮರಾಜನಗರಸಂಶೋಧನೆಕರ್ನಾಟಕ ವಿಧಾನ ಸಭೆಶೀತಲ ಸಮರಕದಂಬ ಮನೆತನಭಾರತದಲ್ಲಿ ಮೀಸಲಾತಿಇರಾನ್ಮರಣದಂಡನೆಎಸ್. ಎಂ. ಪಂಡಿತ್ಸೀಮೆ ಹುಣಸೆಮದುವೆಏಕರೂಪ ನಾಗರಿಕ ನೀತಿಸಂಹಿತೆವರ್ಗೀಯ ವ್ಯಂಜನಭಾರತದಲ್ಲಿನ ಶಿಕ್ಷಣಅಳತೆಗಳುಶಿವರಾಜ್‍ಕುಮಾರ್ (ನಟ)ಬಂಡೀಪುರ ರಾಷ್ಟ್ರೀಯ ಉದ್ಯಾನವನಬಾವಲಿಕರ್ನಾಟಕದಲ್ಲಿ ವನ್ಯಜೀವಿಧಾಮಗಳುಮೆಕ್ಕೆ ಜೋಳಹಂಪೆಚಿಕ್ಕಮಗಳೂರುಅದಿತಿಮಾಹಿತಿ ತಂತ್ರಜ್ಞಾನಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಅಂಬರೀಶ್ಸರ್ಪ ಸುತ್ತುಪಂಚ ವಾರ್ಷಿಕ ಯೋಜನೆಗಳು🡆 More