ಹಣ

thumb|coin money

ಅರ್ಥಶಾಸ್ತ್ರ
ವಿಷಯಗಳ ರೂಪರೇಖೆ
ಸಾಮಾನ್ಯ ವರ್ಗೀಕರಣಗಳು

ಸೂಕ್ಷ್ಮ ಅರ್ಥಶಾಸ್ತ್ರ · ಸ್ಥೂಲ ಅರ್ಥಶಾಸ್ತ್ರ
ಆರ್ಥಿಕ ಚಿಂತನೆಯ ಇತಿಹಾಸ
ಕ್ರಮಶಾಸ್ತ್ರ · ಅಸಾಂಪ್ರದಾಯಿಕ ವಿಧಾನಗಳು

ಕಾರ್ಯವಿಧಾನಗಳು

ಗಣಿತ · ಅರ್ಥಶಾಸ್ತ್ರ ಮಾಪನ ಪದ್ಧತಿ
ಪ್ರಾಯೋಗಿಕ · ರಾಷ್ಟ್ರೀಯ ಹಣಕಾಸು ಲೆಕ್ಕ ವ್ಯವಸ್ಥೆ

ಕ್ಷೇತ್ರ ಮತ್ತು ಉಪಕ್ಷೇತ್ರಗಳು

ವರ್ತನೆ · ಸಾಂಸ್ಕೃತಿಕ · ವಿಕಾಸವಾದಿ
ಬೆಳವಣಿಗೆ · ಅಭಿವೃದ್ಧಿ · ಇತಿಹಾಸ
ಅಂತರರಾಷ್ಟ್ರೀಯ · ಆರ್ಥಿಕ ವ್ಯವಸ್ಥೆಗಳು
ವಿತ್ತ ಮತ್ತು ಹಣಕಾಸು
ಸಾರ್ವಜನಿಕ ಮತ್ತು ಸಮಾಜಕಲ್ಯಾಣ ಅರ್ಥಶಾಸ್ತ್ರ
ಆರೋಗ್ಯ · ದುಡಿಮೆ · ನಿರ್ವಾಹಕ
ವ್ಯಾಪಾರ · ಮಾಹಿತಿ · ಕೌಶಲಯುತ ಸಂವಹನ ಸಿದ್ಧಾಂತ
ಔದ್ಯೋಗಿಕ ಸಂಯೋಜನೆ  · ಕಾನೂನು
ಕೃಷಿ · ಪ್ರಾಕೃತಿಕ ಸಂಪತ್ತು
ಪರಿಸರ · ಜೀವಿ ಪರಿಸ್ಥಿತಿ ವಿಜ್ಞಾನ
ನಗರ ಪ್ರದೇಶದ · ಗ್ರಾಮೀಣ · ಪ್ರಾದೇಶಿಕ

ಪಟ್ಟಿಗಳು

ನಿಯತಕಾಲಿಕಗಳು · ಪ್ರಕಟಣೆಗಳು
ವರ್ಗಗಳು · ವಿಷಯಗಳು · ಅರ್ಥಶಾಸ್ತ್ರಜ್ಞರು

ಸಾಮಾನ್ಯವಾಗಿ ಸರಕು ಮತ್ತು ಸೇವೆಗಳು ಹಾಗೂ ಋಣಗಳ ವಾಪಸಾತಿಗೆ ಸಂದಾಯದ ರೂಪವೆಂದು ಒಪ್ಪಿಕೊಳ್ಳಲಾದ ಯಾವುದಕ್ಕಾದರೂ ಹಣವೆನ್ನಬಹುದು. ಪ್ರಮುಖವಾಗಿ ಒಂದು ವಿನಿಮಯ ಸಾಧನವಾಗಿ (ಮೀಡಿಯಮ್ ಆಫ಼್ ಎಕ್ಸ್‌ಚೇಂಜ್), ಒಂದು ಲೆಕ್ಕದ ಏಕಮಾನವಾಗಿ (ಯೂನಿಟ್ ಆಫ಼್ ಅಕೌಂಟ್), ಮತ್ತು ಒಂದು ಮೌಲ್ಯದ ಸಂಗ್ರಹವಾಗಿ (ಸ್ಟೋರ್ ಆಫ಼್ ವ್ಯಾಲ್ಯು) ಹಣವನ್ನು ಉಪಯೋಗಿಸಲಾಗುತ್ತದೆ. ಕೆಲವು ಲೇಖಕರು ಹಣವು ಸ್ಪಷ್ಟವಾಗಿ ಒಂದು ಮುಂದೆ ಸಲ್ಲಿಸುವ ಸಂದಾಯದ ಮಾನದಂಡ (ಸ್ಟ್ಯಾಂಡರ್ಡ್ ಆಫ಼್ ಡೆಫ಼ರ್ಡ್ ಪೇಮಂಟ್) ಆಗಿರಬೇಕೆಂದು ಬಯಸುತ್ತಾರೆ. ನಗದು ಹಣದ ಪ್ರಧಾನ ಸ್ವರೂಪವಾಗಿದೆ. ಸರಕು ಮೌಲ್ಯಮಾಪನ ಅಥವಾ ಹಣಕಾಸು ಲೆಕ್ಕ ವ್ಯವಸ್ಥೆಗಳನ್ನು ಬಳಸುವ ವಿಧಾನಗಳನ್ನು ಪ್ರಸ್ತಾಪಿಸಲು ಕೆಲವೊಮ್ಮೆ "ಬೆಲೆ ವ್ಯವಸ್ಥೆ" ಪದವನ್ನು ಬಳಸಲಾಗುತ್ತದೆ.

ಆರ್ಥಿಕ ವೈಶಿಷ್ಟ್ಯಗಳು

ಹಳೆಯ ಅರ್ಥಶಾಸ್ತ್ರ ಪಠ್ಯಪುಸ್ತಕಗಳಲ್ಲಿ ಕಾಣಿಸುವ ಒಂದು ಅಂತ್ಯಪ್ರಾಸವಿರುವ ಕಾವ್ಯರೂಪದಲ್ಲಿ ಸಂಕ್ಷೇಪಿಸಲಾದ ಹಣವು ಸಾಮಾನ್ಯವಾಗಿ ಮುಂದೆ ಹೇಳುವ ವೈಶಿಷ್ಟ್ಯಗಳನ್ನು ಹೊಂದಿರುತ್ತದೆಂದು ಭಾವಿಸಲಾಗುತ್ತದೆ (ಕನ್ನಡದಲ್ಲಿ ಸಾಧಾರಣ ಶಬ್ದಗಳಲ್ಲಿ ಹೀಗೆ ಹೇಳಬಹುದು) : "ಹಣ ನಾಲ್ಕು ಕ್ರಿಯೆಗಳಿರುವ ಒಂದು ವಸ್ತು, ಸಾಧನ, ಅಳತೆ, ಮಾನದಂಡ ಮತ್ತು ಸಂಗ್ರಹ." ಅಂದರೆ, ಹಣವು ಒಂದು ವಿನಿಮಯ ಸಾಧನ, ಒಂದು ಲೆಕ್ಕದ ಏಕಮಾನ, ಒಂದು ಮುಂದೆ ಸಲ್ಲಿಸುವ ಸಂದಾಯದ ಮಾನದಂಡ, ಮತ್ತು ಒಂದು ಮೌಲ್ಯದ ಸಂಗ್ರಹವಾಗಿ ಕಾರ್ಯನಿರ್ವಹಿಸುತ್ತದೆ. ಹಣದ ಕ್ರಿಯೆಗಳ ಸಂಯೋಗದ ವಿಷಯವಾಗಿ ಅನೇಕ ಐತಿಹಾಸಿಕ ವಾದಸರಣಿಗಳಾಗಿವೆ, ಅವುಗಳ ಮಧ್ಯೆ ಹೆಚ್ಚು ಪ್ರತ್ಯೇಕಿಸುವಿಕೆ ಬೇಕಾಗಿದೆಯೆಂದು ಮತ್ತು ಅವೆಲ್ಲವುಗಳನ್ನು ನಿರ್ವಹಿಸಲು ಒಂದೇ ಏಕಮಾನವು ಸಾಲದೆಂದು ಕೆಲವರು ವಾದಿಸಿದ್ದಾರೆ. ಈ ವಾದಗಳ ಪೈಕಿ ಒಂದು ವಾದ ಒಂದು ವಿನಿಮಯ ಸಾಧನವಾಗಿ ಹಣದ ಪಾತ್ರವು ಒಂದು ಮೌಲ್ಯದ ಸಂಗ್ರಹವಾಗಿ ಅದರ ಪಾತ್ರಕ್ಕೆ ವಿರುದ್ಧವಾಗಿದೆಯೆಂದು ಹೇಳುತ್ತದೆ: ಒಂದು ಮೌಲ್ಯದ ಸಂಗ್ರಹವಾಗಿ ಅದರ ಪಾತ್ರಕ್ಕೆ ಅದನ್ನು ಖರ್ಚು ಮಾಡದೇ ಇಟ್ಟುಕೊಂಡಿರುವುದು ಅಗತ್ಯವಾಗುತ್ತದೆ, ಆದರೆ ಒಂದು ವಿನಿಮಯ ಸಾಧನವಾಗಿ ಅದರ ಪಾತ್ರಕ್ಕೆ ಅದು ಚಲಾವಣೆಯಲ್ಲಿರುವುದು ಅಗತ್ಯವಾಗುತ್ತದೆ. ಮೌಲ್ಯವನ್ನು ಸಂಗ್ರಹಿಸಿಡುವುದು ಕೇವಲ ವಿನಿಮಯವನ್ನು ಮುಂದೂಡುವ ಕಾರ್ಯವೆಂದು ಇತರರು ವಾದಿಸುತ್ತಾರೆ, ಆದರೆ ಈ ವಾದವು ಹಣವು ಒಂದು ಪ್ರದೇಶ ಮತ್ತು ಕಾಲದಾದ್ಯಂತ ರವಾನಿಸಬಲ್ಲ ವಿನಿಮಯ ಸಾಧನವಾಗಿದೆಯೆಂಬ ವಾಸ್ತವಾಂಶವನ್ನು ಕುಂದಿಸುವುದಿಲ್ಲ. 'ಹಣಕಾಸು ಬಂಡವಾಳ' ಒಂದು ಹೆಚ್ಚು ಪ್ರಚಲಿತ ಮತ್ತು ಎಲ್ಲ ದ್ರವ ಸಾಧನಗಳನ್ನು ಒಳಗೊಂಡಿರುವ ಪದವಾಗಿದೆ, ಅವುಗಳು ಒಂದು ಏಕಪ್ರಕಾರವಾಗಿ ಮಾನ್ಯಮಾಡಲಾದ ಸಂದಾಯ ಸಾಧನವಾಗಿದ್ದರೂ ಅಥವಾ ಆಗದಿದ್ದರೂ.

ವಿನಿಮಯ ಸಾಧನ

    ಮುಖ್ಯ ಲೇಖನ: ವಿನಿಮಯ ಸಾಧನ

ಹಣವನ್ನು ವ್ಯಾಪಾರದಲ್ಲಿ, ಕೆಲವೊಮ್ಮೆ 'ಅಗತ್ಯಗಳ ಇಮ್ಮಡಿ ಕಾಕತಾಳೀಯತೆ ಸಮಸ್ಯೆ'ಯೆಂದು ಉಲ್ಲೇಖಿಸಲಾಗುವ, ಒಂದು ವಸ್ತು ವಿನಿಮಯ ವ್ಯವಸ್ಥೆಯ ಅಸಾಮರ್ಥ್ಯಗಳನ್ನು ತಪ್ಪಿಸುವ ಉದ್ದೇಶದಿಂದ, ಒಂದು ಮಧ್ಯವರ್ತಿಯಾಗಿ ಬಳಸಲಾಗುತ್ತದೆ. ಅಂತಹ ಬಳಕೆಯನ್ನು ಒಂದು ವಿನಿಮಯ ಸಾಧನವೆಂದು ಕರೆಯಲಾಗುತ್ತದೆ. ಹಿ ರೆಥಿ ನಮ್ಮ ಗಫುಛ್ಕ್ ನೆಮ್ಮ ವ್ಹ್ದ್ಶ್ಜ್ ಸ್ಧ್ಕ್ಶ್ದ್ಕ್ ಸ್ದ್ಜ್ಕುಇವು ಸಹೆಉವ್ಯ್ ಸ್ದ್ಕ್ವುಎ ಅಕ್ಜ್ವ್ಸ್ವ್ಕ್ಜ್ಕ್ವ್ ದ್ಸಝ್ಜಎಯ್ಹೆ ದ್ಧ್ಧುವ್ವ್ಜ್ಜ

ಲೆಕ್ಕದ ಏಕಮಾನ

    ಮುಖ್ಯ ಲೇಖನ: ಲೆಕ್ಕದ ಏಕಮಾನ

ಲೆಕ್ಕದ ಏಕಮಾನ ಸರಕುಗಳು, ಸೇವೆಗಳು, ಮತ್ತು ಇತರ ವಹಿವಾಟುಗಳ ಮಾರುಕಟ್ಟೆ ಮೌಲ್ಯದ ಅಳತೆಯ ಒಂದು ರೂಢಿಯಲ್ಲಿರುವ ಆಂಕಿಕ ಏಕಮಾನ. ತುಲನಾತ್ಮಕ ಮೌಲ್ಯ ಮತ್ತು ಮುಂದೂಡಿದ ಸಂದಾಯದ ಒಂದು "ಪರಿಮಾಣ" ಅಥವಾ "ಮಾನದಂಡ"ವೆಂದು ತಿಳಿಯಲಾಗುವ ಲೆಕ್ಕದ ಏಕಮಾನವು ಋಣವನ್ನು ಒಳಗೊಂಡ ವ್ಯಾಪಾರೀ ಒಡಂಬಡಿಕೆಗಳ ಸೂತ್ರಿಕರಣಕ್ಕೆ ಒಂದು ಅಗತ್ಯವಾದ ಪೂರ್ವಾಪೇಕ್ಷೆ.

  • ಅದರ ಮೌಲ್ಯವನ್ನು ನಾಶಮಾಡದೆಯೇ ಸಣ್ಣ ವಿಭಾಗಗಳಾಗಿ ವಿಭಾಗಿಸಬಲ್ಲ ಗುಣ; ಬೆಲೆಬಾಳುವ ಲೋಹಗಳನ್ನು ದಬ್ಬೆಗಳಿಂದ ಸೃಷ್ಟಿಸಬಹುದು, ಅಥವಾ ಮರಳಿ ದಬ್ಬೆಗಳಾಗಿ ಕರಗಿಸಬಹುದು.
  • ವಿನಿಮಯಾರ್ಹ (ಫ಼ಂಜಿಬಲ್) ಗುಣ: ಅಂದರೆ, ಒಂದು ಅಂಶ ಅಥವಾ ಭಾಗವನ್ನು ಯಾವುದಾದರೂ ಬೇರೆಯದಕ್ಕೆ ಸಮಾನವೆಂದು ತಿಳಿಯುವುದು, ಈ ಕಾರಣದಿಂದಾಗಿಯೇ ಕಲಾಕೃತಿಗಳಾದ ವಜ್ರಗಳು ಅಥವಾ ಸ್ಥಿರಾಸ್ತಿಗಳು ಹಣವಾಗಿ ಒಪ್ಪಿಗೆಯಾಗುವುದಿಲ್ಲ.
  • ಪರಿಶೀಲಾತ್ಮಕವಾಗಿ ಎಣಿಕೆಮಾಡಲು ಒಂದು ನಿರ್ದಿಷ್ಟ ತೂಕ, ಅಥವಾ ಅಳತೆ, ಅಥವಾ ಗಾತ್ರ. ಉದಾಹರಣೆಗೆ, ನಾಣ್ಯಗಳನ್ನು ಹಲವುವೇಳೆ ಅಂಚುಗಳ ಸುತ್ತ ಏಣುಗೆರೆಗಳಿರುವಂತೆ ನಿರ್ಮಿಸಲಾಗುತ್ತದೆ, ಇದರಿಂದ ನಾಣ್ಯದಿಂದ ಸ್ವಲ್ಪ ಮೂಲದ್ರವ್ಯ ನಾಶವಾದರೂ (ಅದರ ಸರಕು ಮೌಲ್ಯವನ್ನು ಕಡಮೆ ಮಾಡುತ್ತದೆ) ಸುಲಭವಾಗಿ ಕಂಡುಹಿಡಿಯಬಹುದು.

ಮೌಲ್ಯದ ಸಂಗ್ರಹ

    ಮುಖ್ಯ ಲೇಖನ: ಮೌಲ್ಯದ ಸಂಗ್ರಹ

ಒಂದು ಮೌಲ್ಯದ ಸಂಗ್ರಹವಾಗಿ ಕಾರ್ಯಮಾಡಲು, ಒಂದು ಸರಕು, ಹಣದ ಒಂದು ಪ್ರಕಾರ, ಅಥವಾ ಹಣಕಾಸು ಬಂಡವಾಳವನ್ನು ವಿಶ್ವಾಸಾರ್ಹವಾಗಿ ಕೂಡಿಡಲು, ಸಂಗ್ರಹಿಸಿಡಲು, ಮತ್ತು ಮರುಕಳಿಸಲು — ಹಾಗೂ ಅದನ್ನು ಹಾಗೆ ಮರುಕಳಿಸಿದಾಗ ನಿರೀಕ್ಷಿತವಾಗಿ ಉಪಯುಕ್ತವಾಗುವುದು ಸಾಧ್ಯವಾಗಬೇಕು. ಬಹುತೇಕ ರಾಷ್ಟ್ರಗಳಲ್ಲಿ ಈಗ ಚಿನ್ನದ ಬೆಂಬಲವಿರದ ಕಾಗದ ಅಥವಾ ವಿದ್ಯುನ್ಮಾನ ಚಲಾವಣೆಯಂತಹ ಅಧಿಕೃತ ಚಲಾವಣೆಯನ್ನು ಕೆಲವು ಅರ್ಥಶಾಸ್ತ್ರಜ್ಞರಿಂದ ಒಂದು ಮೌಲ್ಯದ ಸಂಗ್ರಹವಾಗಿ ಪರಿಗಣಿಸಲಾಗುವುದಿಲ್ಲ.

ಮಾರುಕಟ್ಟೆ ದ್ರವ ಸಾಮರ್ಥ್ಯ

    ಮುಖ್ಯ ಲೇಖನ: ಮಾರುಕಟ್ಟೆ ದ್ರವ ಸಾಮರ್ಥ್ಯ

ದ್ರವ ಸಾಮರ್ಥ್ಯ (ಲಿಕ್ವಿಡಿಟಿ) ಒಂದು ವಸ್ತುವನ್ನು ಇನ್ನೊಂದು ವಸ್ತುವಿಗಾಗಿ, ಅಥವಾ ಒಂದು ಅರ್ಥವ್ಯವಸ್ಥೆಯ ಒಳಗೆ ಸಾಮಾನ್ಯ ಚಲಾವಣೆಯಾಗಿ ಎಷ್ಟು ಸುಲಭಸಾಧ್ಯವಾಗಿ ವಿನಿಮಯ ಮಾಡಬಹುದೆಂದು ವಿವರಿಸುತ್ತದೆ. ಹಣವು ಅತ್ಯಂತ ದ್ರವ ಆಸ್ತಿ ಏಕೆಂದರೆ ಅದು ವಿಶ್ವವ್ಯಾಪಿಯಾಗಿ ಸಾಮಾನ್ಯ ಚಲಾವಣೆಯಾಗಿ ಅಂಗೀಕೃತಗೊಂಡಿದೆ ಮತ್ತು ಸ್ವೀಕೃತವಾಗಿದೆ. ಈ ರೀತಿಯಾಗಿ, ಹಣವು ಗ್ರಾಹಕರಿಗೆ ವಸ್ತು ವಿನಿಮಯ ರಹಿತವಾಗಿ ಸರಕುಗಳು ಮತ್ತು ಸೇವೆಗಳನ್ನು ಸುಲಭಸಾಧ್ಯವಾಗಿ ವ್ಯಾಪಾರ ಮಾಡುವ ಸ್ವಾತಂತ್ರ್ಯ ನೀಡುತ್ತದೆ. ದ್ರವ ಹಣಕಾಸು ಸಾಧನಗಳು ಸುಲಭಸಾಧ್ಯವಾಗಿ ವ್ಯಾಪಾರ ಮಾಡಬಲ್ಲವಾಗಿವೆ ಮತ್ತು ಕಡಿಮೆ ವಹಿವಾಟು ವೆಚ್ಚಗಳನ್ನು ಹೊಂದಿವೆ. ಹಣವಾಗಿ ಬಳಸಲಾಗುವ ಸಾಧನವನ್ನು ಖರೀದಿಸುವ ಮತ್ತು ವಿಕ್ರಯಿಸುವ ಬೆಲೆಗಳ ನಡುವೆ ಯಾವುದೇ — ಅಥವಾ ಕನಿಷ್ಠಸಾಧ್ಯ — ಅಂತರ ಇರಬಾರದು(ಇರಬೇಕು).

ಹಣದ ಪ್ರಕಾರಗಳು

ಅರ್ಥಶಾಸ್ತ್ರದಲ್ಲಿ, ಹಣ ಅದರ (ಮೇಲೆ ವಿವರಿಸಲಾದ) ಕ್ರಿಯೆಗಳನ್ನು ಈಡೇರಿಸುವ ಯಾವುದೇ ಹಣಕಾಸು ಸಾಧನವನ್ನು ನಿರ್ದೇಶಿಸುವ ಒಂದು ವಿಶಾಲವಾದ ಪದವಾಗಿದೆ. ಆಧುನಿಕ ವಿತ್ತ ಸಿದ್ಧಾಂತವು ಹಣವಾಗಿ ಬಳಸಲಾಗುವ ಹಣಕಾಸು ಸಾಧನಗಳ ದ್ರವ ಸಾಮರ್ಥ್ಯದ ಮೇಲೆ ಕೇಂದ್ರೀಕರಿಸುವ ಒಂದು ವರ್ಗೀಕರಣ ವಿಧಾನವನ್ನು ಬಳಸಿ ವಿತ್ತ ಸಮೂಹಗಳ (ಮಾನಿಟೆರಿ ಅಗ್ರಿಗಿಟ್) ವಿಭಿನ್ನ ಪ್ರಕಾರಗಳ ಮಧ್ಯೆ ಭೇದ ಮಾಡುತ್ತದೆ.

ದ್ರವ್ಯ ಹಣ

    ಮುಖ್ಯ ಲೇಖನ: ದ್ರವ್ಯ ಹಣ

ದ್ರವ್ಯ ಹಣದ (ಕಮಾಡಿಟಿ ಮನಿ) ಮೌಲ್ಯ ಅದನ್ನು ನಿರ್ಮಿಸಲು ಬಳಸುವ ದ್ರವ್ಯದಿಂದ ಬರುತ್ತದೆ. ಆ ದ್ರವ್ಯವೇ ಹಣದ ಘಟಕವಾಗಿರುತ್ತದೆ, ಮತ್ತು ಹಣವು ವ್ಯಾಪಾರದ ವಸ್ತುವಾಗಿದೆ. ವಿನಿಮಯ ಸಾಧನಗಳಾಗಿ ಬಳಸಲಾಗಿರುವ ದ್ರವ್ಯಗಳ ಉದಾಹರಣೆಗಳು, ಚಿನ್ನ, ಬೆಳ್ಳಿ, ತಾಮ್ರ, ಅಕ್ಕಿ, ಉಪ್ಪು, ಕರಿಮೆಣಸು ಬೀಜಗಳು, ದೊಡ್ಡಗಾತ್ರದ ಕಲ್ಲುಗಳು, ಅಲಂಕೃತ ಬೆಲ್ಟುಗಳು, ಕಪ್ಪೆಚಿಪ್ಪುಗಳು, ಮದ್ಯಸಾರ, ಸಿಗರೇಟುಗಳು, ಗಾಂಜಾ, ಸಕ್ಕರೆ ಮಿಠಾಯಿ, ಯವೆ, ಇತ್ಯಾದಿಗಳನ್ನು ಒಳಗೊಂಡಿವೆ. ಈ ಪದಾರ್ಥಗಳನ್ನು, ವಿವಿಧ ಸರಕು ಮೌಲ್ಯಮಾಪನ ಅಥವಾ ಬೆಲೆ ವ್ಯವಸ್ಥೆ ಆಧಾರಿತ ಅರ್ಥವ್ಯವಸ್ಥೆಗಳಲ್ಲಿ, ಕೆಲವೊಮ್ಮೆ ಗ್ರಹಿಸಿದ ಮೌಲ್ಯದ ಒಂದು ಅಳತೆಯ ಮಾನದಂಡದಲ್ಲಿ ಒಂದರೊಂದರ ಸಂಯೋಗದಲ್ಲಿ ಬಳಸಲಾಗಿತ್ತು. ದ್ರವ್ಯ ಹಣದ ಬಳಕೆಯು ವಸ್ತು ವಿನಿಮಯವನ್ನು ಹೋಲುತ್ತದೆ, ಆದರೆ ದ್ರವ್ಯ ಹಣವು ಹಣವಾಗಿ ಬಳಸಲಾಗುತ್ತಿರುವ ದ್ರವ್ಯಗಳಿಗೆ ಒಂದು ಸರಳ ಮತ್ತು ಸಹಜವಾದ ಲೆಕ್ಕದ ಏಕಮಾನವನ್ನು ಒದಗಿಸುತ್ತದೆ.

ಪ್ರಾತಿನಿಧಿಕ ಹಣ

    ಮುಖ್ಯ ಲೇಖನ: ಪ್ರಾತಿನಿಧಿಕ ಹಣ

ಪ್ರಾತಿನಿಧಿಕ ಹಣವು (ರೆಪ್ರಿಸ಼ೆಂಟಟಿವ್ ಮನಿ) ಚಿನ್ನ, ಬೆಳ್ಳಿ ಅಥವಾ ಸಂಭಾವ್ಯವಾಗಿ ನೀರು, ತೈಲ ಅಥವಾ ಆಹಾರದಂತಹ ಒಂದು ದ್ರವ್ಯದ ಒಂದು ನಿಗದಿತ ಪ್ರಮಾಣಕ್ಕಾಗಿ ವಿಶ್ವಾಸಾರ್ಹವಾಗಿ ವಿನಿಮಯ ಮಾಡಬಹುದಾದ ಸಂಕೇತ ನಾಣ್ಯಗಳು, ಪ್ರಮಾಣ ಪತ್ರಗಳಂತಹ ಇತರ ಭೌತಿಕ ಸಂಕೇತಗಳು, ಮತ್ತು ಭೌತಿಕವಲ್ಲದ "ಅಂಕೀಯ ಪ್ರಮಾಣ ಪತ್ರಗಳನ್ನು" (ಪ್ರಮಾಣೀಕರಿಸಿದ ಅಂಕೀಯ ವಹಿವಾಟುಗಳು) ಸಹ ಒಳಗೊಂಡಿರುವ ಹಣ. ಈ ಪ್ರಕಾರವಾಗಿ ಪ್ರಾತಿನಿಧಿಕ ಹಣವು, ಸ್ವತಃ ಆ ದ್ರವ್ಯವನ್ನು ಹೊಂದಿರುವುದಿಲ್ಲವಾದರೂ, ಅದನ್ನು ಬೆಂಬಲಿಸುವ ದ್ರವ್ಯದೊಂದಿಗೆ ನೇರ ಮತ್ತು ಸ್ಥಿರ ಸಂಬಂಧವನ್ನು ಹೊಂದಿರುತ್ತದೆ.

ಪ್ರಾಥಮಿಕ ಹಣದ ಕಾರ್ಯಗಳು- 1)ವಿನಿಮಯ ಮಾಧ್ಯಮ 2)ಮೌಲ್ಯಮಾಪನ ಸಾಧನ

ಪ್ರಮಾಣ ಹಣ

    ಮುಖ್ಯ ಲೇಖನ: ಪ್ರಮಾಣ ಹಣ

ಪ್ರಮಾಣ ಹಣವು (ಕ್ರೆಡಿಟ್ ಮನಿ), ಸರಕುಗಳು ಮತ್ತು ಸೇವೆಗಳನ್ನು ಖರೀದಿಸಲು ಬಳಸಬಹುದಾದ, ಒಂದು ಭೌತಿಕ ಅಥವಾ ಕಾನೂನುಬದ್ಧ ವಸ್ತುವಿನ ವಿರುದ್ಧದ ಯಾವುದೇ ಹಕ್ಕುಸಾಧನೆ.ಪ್ರಮಾಣ ಹಣವು ದ್ರವ್ಯ ಮತ್ತು ಅಧಿಕೃತ ಹಣಗಳಿಗಿಂತ ಎರಡು ರೀತಿಯಲ್ಲಿ ಭಿನ್ನವಾಗಿದೆ: ಅದು ಬೇಡಿಕೆಯ ಮೇರೆಗೆ ಸಂದಾಯಕ್ಕೆ (ಡಿಮಾಂಡ್ ಆನ್ ಪೇಮಂಟ್) ಒಳಪಟ್ಟಿರುವುದಿಲ್ಲ (ಆದಾಗ್ಯೂ ಅಧಿಕೃತ ಹಣದ ಸಂಬಂಧದಲ್ಲಿ, "ಬೇಡಿಕೆ ಸಂದಾಯ"ವು "ಡಿಮಾಂಡ್ ಪೇಮಂಟ್" ಕೇವಲ ಒಂದು ಸಾಂಕೇತಿಕ ವಿಧಿ ಏಕೆಂದರೆ ಏನೇ ಆದರೂ ಇತರ ಪ್ರಕಾರಗಳ ಅಧಿಕೃತ ಚಲಾವಣೆಯನ್ನು ಮಾತ್ರ ಕೋರಬಹುದು) ಮತ್ತು ಹಕ್ಕುಕೋರಿಕೆಯ ನೆರವೇರಿಕೆಯ ನಂತರದ ವಾಸ್ತವಿಕ ಮೌಲ್ಯವು ಖರೀದಿಯ ವೇಳೆಗೆ ನಿರೀಕ್ಷಿಸಲಾದ ವಾಸ್ತವಿಕ ಮೌಲ್ಯಕ್ಕೆ ಸಮನಾಗಿರುವುದಿಲ್ಲವೆಂಬ ಅಪಾಯದ ಸ್ವಲ್ಪ ಅಂಶವಿದೆ. ಈ ಅಪಾಯ ಎರಡು ರೀತಿಯಿಂದ ಬರುತ್ತದೆ ಮತ್ತು ಖರೀದಿದಾರ ಹಾಗೂ ಮಾರಾಟಗಾರ ಇಬ್ಬರ ಮೇಲೂ ಪರಿಣಾಮ ಬೀರುತ್ತದೆ. ಮೊದಲನೆಯದಾಗಿ ಅದು ಒಂದು ಹಕ್ಕುಕೋರಿಕೆ, ಮತ್ತು ಹಕ್ಕುದಾರ ಸಾಲದ ಕಂತು ತಪ್ಪಿಸಬಹುದು (ಸಂದಾಯಮಾಡದಿರಬಹುದು). ಹೆಚ್ಚಿನ ಮಟ್ಟಗಳ ಬೇಪಾವತಿಗಳು ಹಾನಿಕಾರಕ ಪೂರೈಕೆ ಕಡೆಯ ಪರಿಣಾಮಗಳಾಗುವಂತೆ ಮಾಡುತ್ತವೆ. ತಯಾರಕರು ಮತ್ತು ಸೇವಾ ಪ್ರಬಂಧಕರು ಅವರು ಉತ್ಪಾದಿಸುವ ಸರಕುಗಳಿಗೆ ಸಂದಾಯವನ್ನು ಪಡೆಯದಿದ್ದರೆ, ಅವರು ಹೊಸ ಸರಕುಗಳು ಮತ್ತು ಸೇವೆಗಳನ್ನು ಉತ್ಪಾದಿಸಲು ಬೇಕಾದ ಕಾರ್ಮಿಕರು ಮತ್ತು ಸಾಮಗ್ರಿಗಳನ್ನು ಕೊಂಡುಕೊಳ್ಳಲು ಸಂಪನ್ಮೂಲಗಳನ್ನು ಹೊಂದಿರುವುದಿಲ್ಲ. ಇದು ಪೂರೈಕೆಯನ್ನು ಕುಗ್ಗಿಸುತ್ತದೆ, ಬೆಲೆಗಳನ್ನು ಏರಿಸುತ್ತದೆ ಮತ್ತು ನಿರುದ್ಯೋಗವನ್ನು ಹೆಚ್ಚಿಸುತ್ತದೆ, ಮತ್ತು ಸಂಭವನೀಯವಾಗಿ ಒಂದು ಜಡ ಪ್ರಗತಿ ಮತ್ತು ಹಣದುಬ್ಬರದ ಪರಿಸ್ಥಿತಿಯ (ಸ್ಟ್ಯಾಗ್‌ಫ಼್ಲೇಶನ್) ಅವಧಿಗೆ ಚಾಲನೆನೀಡುತ್ತದೆ. ವಿಪರೀತ ಸಂದರ್ಭಗಳಲ್ಲಿ, ವ್ಯಾಪಕವಾದ ಬೇಪಾವತಿಗಳು ಲೇವಾದೇವಿ ಸಂಸ್ಥೆಗಳಲ್ಲಿ ನಂಬಿಕೆಯ ಒಂದು ಕೊರತೆಯನ್ನು ಉಂಟುಮಾಡಬಹುದು ಮತ್ತು ಆರ್ಥಿಕ ಕುಸಿತಕ್ಕೆ ಒಯ್ಯಬಹುದು. ಉದಾಹರಣೆಗೆ, ಸಾಲ ವ್ಯವಸ್ಥೆಗಳ ದುರುಪಯೋಗವು ೧೯೩೦ರ ದಶಕದ ಬೃಹತ್ ಆರ್ಥಿಕ ಕುಸಿತದ ಒಂದು ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ಅಪಾಯದ ಎರಡನೆಯ ಮೂಲ ಕಾಲಾವಧಿ. ಪ್ರಮಾಣ ಹಣವು ಭವಿಷ್ಯದ ಸಂದಾಯದ ಒಂದು ವಾಗ್ದಾನ. ಹಕ್ಕಿನ ಮೇಲಿನ ಬಡ್ಡಿ ದರವು ಹಣದುಬ್ಬರ (ಅಥವಾ ಬೆಲೆ ಇಳಿಕೆ) ದರ ಮತ್ತು ಹಣದ ಕಾಲ ಮೌಲ್ಯಗಳ (ಟಾಯ್ಮ್ ವ್ಯಾಲ್ಯು ಆಫ಼್ ಮನಿ) ಸಂಯುಕ್ತ ಪ್ರಭಾವದ ನಷ್ಟತುಂಬಲು ವಿಫಲವಾದರೆ, ಮಾರಾಟಗಾರನು ನಿರೀಕ್ಷಿಸಿದ್ದಕ್ಕಿಂತ ಕಡಮೆ ವಾಸ್ತವಿಕ ಮೌಲ್ಯವನ್ನು ಪಡೆಯುತ್ತಾನೆ. ಹಕ್ಕಿನ ಮೇಲಿನ ಬಡ್ಡಿ ದರವು ಮೀರಿ ನಷ್ಟ ತುಂಬಿದರೆ, ಖರೀದಿದಾರನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಲ್ಲಿಸುತ್ತಾನೆ. ಅಲ್ಪಾಂಶ-ಆಪದ್ಧನ ಲೇವಾದೇವಿಯ (ಫ಼್ರ್ಯಾಕ್ಷನಲ್-ರಿಸ಼ರ್ವ್ ಬ್ಯಾಂಕಿಂಗ್) ಪ್ರಕ್ರಿಯೆಯು ಬ್ಯಾಂಕುಗಳಿಂದಾಗುವ ಹಣ ನಿರ್ಮಾಣದ (ಮನಿ ಕ್ರಿಯೇಶನ್) ಒಂದು ಸಂಚಿತ ಪರಿಣಾಮ ಬೀರುತ್ತದೆ.

ಅಧಿಕೃತ ಹಣ

{{ಮುಖ್ಯ|ಅಧಿಕದ ಮೌಲ್ಯವನ್ನು ನಿಶ್ಚಯಿಸಲಾಗುವ ಯಾವುದೇ ಹಣವು ಅಧಿಕೃತ ಹಣವಾಗಿದೆ (ಫ಼ಿಯಟ್ ಮನಿ). ಅಧಿಕೃತ ಚಲಾವಣೆ ಮತ್ತು ಅಧಿಕೃತ ಹಣ ಇವೆರಡೂ ಪದಗಳು, ಯಾವುದರ ಉಪಯುಕ್ತತೆಯು ಅದನ್ನು ಚಿನ್ನ ಅಥವಾ ಬೇರೊಂದು ಚಲಾವಣೆಗೆ ಪರಿವರ್ತಿಸಬಹುದೆಂಬ ಯಾವುದೇ ಸ್ವಾಭಾವಿಕ ಮಹತ್ವ ಅಥವಾ ಭರವಸೆಯ ಬದಲು, ಅದನ್ನು ಸಂದಾಯದ ಒಂದು ಸಾಧನವೆಂದು ಒಪ್ಪಿಕೊಳ್ಳಬೇಕೆಂಬ ಸರ್ಕಾರದ ಒಂದು ಆದೇಶದಿಂದ (ಆಜ್ಞೆ) ಉಂಟಾಗುತ್ತದೆಯೋ ಅಂತಹ ಚಲಾವಣೆ ಅಥವಾ ಹಣದ ಪ್ರಕಾರಗಳಿಗೆ ಸಂಬಂಧಿಸಿವೆ. ಒಂದು ವರ್ಗದ ಪ್ರಮಾಣ ಹಣವು (ವಿಶಿಷ್ಟವಾಗಿ ಒಂದು ಕೇಂದ್ರೀಯ ಬ್ಯಾಂಕಿನಿಂದ ನೋಟುಗಳು, ಅಮೇರಿಕಾದಲ್ಲಿ ಫ಼ೆಡರಲ್ ರಿಸ಼ರ್ವ್ ಸಿಸ್ಟಮ್ ನಂತೆ) ಒಂದು ಸರ್ಕಾರಿ ಕಾಯಿದೆಯಿಂದ (ಆಜ್ಞೆ "ಫ಼ಿಯಟ್"), ಸಾರ್ವಜನಿಕ ಮತ್ತು ಖಾಸಗಿ, ಎರಡೂ ಋಣಗಳಿಗೆ ಸ್ವೀಕಾರಾರ್ಹ ಮತ್ತು ಅಧಿಕೃತವಾಗಿ ಮಾನ್ಯಮಾಡಲಾದ ಸಂದಾಯವೆಂದು ಘೋಷಿಸಲಾದಾಗ ಅಧಿಕೃತ ಹಣದ ಸೃಷ್ಟಿಯಾಗುತ್ತದೆ. ಹೀಗೆ, ಇವೆರಡರ ಒಂದು ಸಂಪೂರ್ಣವಾಗಿ ನಿಖರವಾದ ಮೊತ್ತವಾಗದಿದ್ದರೂ, ಅಧಿಕೃತ ಹಣವು ಒಂದು ಸರಕು ಅಥವಾ ಒಂದು ಸರ್ಕಾರಿ ವಾಗ್ದಾನದ ಸಂಕೇತವಿರಬಹುದು. ಈ ಪ್ರಕಾರವಾಗಿ ಅಧಿಕೃತ ಹಣವು ತಾಂತ್ರಿಕವಾಗಿ, ಅದೇ ಸರ್ಕಾರದ ಇನ್ನಷ್ಟು ಅಧಿಕೃತ ಹಣದ ಹೊರತು, ಯಾವುದೇ ವಸ್ತುವಿನ ನಿಗದಿತ ಪ್ರಮಾಣಗಳಿಗೆ ವಿನಿಮಯಾರ್ಹ ಅಥವಾ ನೇರವಾಗಿ ವ್ಯಾಪಾರ ಮಾಡಬಲ್ಲದ್ದಾಗಿಲ್ಲ. ಅಧಿಕೃತ ಹಣಗಳು ಸಾಮಾನ್ಯವಾಗಿ, ಬೇರೆ ಸರಕುಗಳಂತೆ, ಒಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೌಲ್ಯದಲ್ಲಿ ಪರಸ್ಪರ ವಿರುದ್ಧವಾಗಿ ವ್ಯವಹಾರ ನಡೆಸುತ್ತವೆ. ಇದಕ್ಕೆ ಒಂದು ಅಪವಾದ, ಕೆಳಗೆ ವಿವರಿಸಿದಂತೆ, ಚಲಾವಣೆಗಳು ಒಂದಕ್ಕೊಂದು ಬದ್ಧಗೊಂಡಾಗ. ಎಲ್ಲವೂ ಅಲ್ಲದಿದ್ದರೂ ಹಲವು ಅಧಿಕೃತ ಹಣಗಳನ್ನು ಮೌಲ್ಯವುಳ್ಳ ಹಣವೆಂದು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸ್ವೀಕರಿಸಲಾಗುತ್ತದೆ. ಮೌಲ್ಯಹೊಂದಿದ ಹಣಗಳು ಪರೋಕ್ಷವಾಗಿ ಯಾವುದೇ ಅಂತರರಾಷ್ಟ್ರೀಯವಾಗಿ ಲಭ್ಯವಾದ ಸರಕುಗಳು ಮತ್ತು ಸೇವೆಗಳ ಎದುರು ವ್ಯವಹಾರ ನಡೆಸುತ್ತವೆ. ಹಾಗಾಗಿ, ಅಮೇರಿಕಾದ ಡಾಲರ್‌ಗಳು ಅಥವಾ ಜಪಾನ್‌ನ ಯೆನ್‌ನ ಒಂದಕ್ಕೊಂದು ಸಮಾನವಿರುವ ಸಂಖ್ಯೆ, ಅಥವಾ ಒಂದು ಗ್ರ್ಯಾಮ್ ಚಿನ್ನದ ಲೋಹಕ್ಕೆ ಸಮನಾದ ಸಂಖ್ಯೆಗಳು, ಎಲ್ಲವೂ ಒಂದು ದೈನಂದಿನ ಆಧಾರದ ಮೇಲೆ ಕ್ಷಣಕ್ಷಣಕ್ಕೆ ಬದಲಾಗುವ ಮಾರುಕಟ್ಟೆ ನಿರ್ಣಯಗಳಾಗಿವೆ. ಆಗಾಗ, ಒಂದು ದೇಶವು ತನ್ನ ಅಧಿಕೃತ ಹಣದ ಮೌಲ್ಯವನ್ನು ಒಂದು ದೊಡ್ಡದಾದ ಅರ್ಥವ್ಯವಸ್ಥೆಯ ಅಧಿಕೃತ ಹಣದ ಮೌಲ್ಯದ ಮಟ್ಟದಲ್ಲಿಡುತ್ತದೆ: ಉದಾಹರಣೆಗೆ ಬಲೀಜ಼್‌ನ ಡಾಲರ್ ಅಮೇರಿಕಾದ ಡಾಲರ್ ಎದುರು ನಿಗದಿತ ಪ್ರಮಾಣದಲ್ಲಿ (೨:೧ ಅನುಪಾತದಲ್ಲಿ) ವ್ಯವಹಾರ ನಡೆಸುತ್ತದೆ, ಹಾಗಾಗಿ ಇವೆರಡೂ ಚಲಾವಣೆಗಳ ಚರ ಮೌಲ್ಯ ಅನುಪಾತವಿಲ್ಲ (ಫ಼್ಲೋಟಿಂಗ್ ವ್ಯಾಲ್ಯು ರೇಶಿಯೋ). ಅಧಿಕೃತ ಹಣವು ಭೌತಿಕವಾಗಿ ನಗದಿನ (ಕಾಗದ ಅಥವಾ ನಾಣ್ಯಗಳು) ಸ್ವರೂಪದಲ್ಲಿ ಪ್ರತಿಬಿಂಬಿತವಾದರೆ ಸುಲಭವಾಗಿ ಹಾನಿ ಅಥವಾ ನಾಶಕ್ಕೀಡಾಗಬಹುದು. ಆದಾಗ್ಯೂ, ಇಲ್ಲಿ ಅಧಿಕೃತ ಹಣವು ಪ್ರಾತಿನಿಧಿಕ ಅಥವಾ ದ್ರವ್ಯ ಹಣಕ್ಕೆ ಹೋಲಿಸಿದರೆ ಒಂದು ಅನುಕೂಲ ಹೊಂದಿದೆ, ಹೇಗೆಂದರೆ ಹಣವನ್ನು ಸೃಷ್ಟಿಸಿದ ಕಾನೂನುಗಳೇ ಹಾನಿ ಅಥವಾ ನಾಶದ ಸಂದರ್ಭದಲ್ಲಿ ಅದರ ಬದಲಿಗೆ ತರಬಹುದಾದಂಥ ವಸ್ತುಗಳ ಕುರಿತು ನಿಯಮಗಳನ್ನು ಸಹ ಗೊತ್ತುಪಡಿಸುತ್ತವೆ. ಉದಾಹರಣೆಗೆ, ಭೌತಿಕ ನೋಟಿನ ಕನಿಷ್ಠ ಪಕ್ಷ ಅರ್ಧದಷ್ಟನ್ನು ಪುನರ್ರಚಿಸಬಹುದಾದರೆ, ಅಥವಾ ಬೇರೆ ರೀತಿಯಾಗಿ ಅದು ನಾಶವಾಗಿದೆಯೆಂದು ಸಾಧಿಸಬಹುದಾದರೆ, ಅಮೇರಿಕಾದ ಸರ್ಕಾರ ಊನವಾದ ಫ಼ೆಡರಲ್ ರಿಸ಼ರ್ವ್ ನೋಟುಗಳನ್ನು (ಅಮೇರಿಕಾದ ಅಧಿಕೃತ ಹಣ) ಬದಲಿಸುತ್ತದೆ. ತದ್ವಿರುದ್ಧವಾಗಿ, ನಾಶವಾದ ಅಥವಾ ಕಳೆದುಹೋದ ದ್ರವ್ಯ ಹಣ ಹೋದಂತೆಯೆ.

ಹಣ ಪೂರೈಕೆ

    ಮುಖ್ಯ ಲೇಖನ: ಹಣ ಪೂರೈಕೆ

ಹಣ ಪೂರೈಕೆಯು (ಮನಿ ಸಪ್ಲಾಯ್) ಒಂದು ನಿರ್ದಿಷ್ಟ ಅರ್ಥವ್ಯವಸ್ಥೆಯ ಒಳಗಡೆ ಸರಕುಗಳು ಅಥವಾ ಸೇವೆಗಳನ್ನು ಕೊಳ್ಳಲು ಬಳಸಬಹುದಾದ ಹಣದ ಪರಿಮಾಣ. ಅಮೇರಿಕಾದಲ್ಲಿ ಪೂರೈಕೆಯು ಸಾಮಾನ್ಯವಾಗಿ ನಾಲ್ಕು ವರ್ಧಿಸುವ ವರ್ಗಗಳು ಎಮ್೦, ಎಮ್೧, ಎಮ್೨ ಮತ್ತು ಎಮ್೩ ಎಂದು ಪರಿಗಣಿಸಲಾಗುತ್ತದೆ. ಈ ವರ್ಗಗಳು ಗಾತ್ರದಲ್ಲಿ ಕ್ರಮೇಣ ಹೆಚ್ಚಾಗುತ್ತವೆ ಮತ್ತು ಎಮ್೩ ಎಲ್ಲ ಪ್ರಕಾರಗಳ ಹಣವನ್ನು (ಸಾಲವನ್ನೂ ಒಳಗೊಂಡಂತೆ) ಪ್ರತಿನಿಧಿಸುತ್ತದೆ ಮತ್ತು ಎಮ್೦ ಕೇವಲ ಆಧಾರ ಹಣವಾಗಿದೆ (ನಾಣ್ಯಗಳು, ಬ್ಯಾಂಕುನೋಟುಗಳು, ಮತ್ತು ಕೇಂದ್ರೀಯ ಬ್ಯಾಂಕಿನ ಠೇವಣಾತಿಗಳು). ಎಮ್೦ ಖಾಸಗಿ ಬ್ಯಾಂಕುಗಳ ಮೀಸಲು ನಿಧಿಯ ಅಗತ್ಯಗಳನ್ನು ನೆರವೇರಿಸಬಲ್ಲ ಹಣವೂ ಆಗಿದೆ. ಅಮೇರಿಕಾದಲ್ಲಿ, ಫ಼ೆಡರಲ್ ರಿಸ಼ರ್ವ್ ಸಿಸ್ಟಮ್ ಹಣ ಪೂರೈಕೆಯನ್ನು ನಿಯಂತ್ರಿಸಲು ಜವಾಬ್ದಾರವಾಗಿದೆ, ಅದೇ ಯೂರೋ ಚಲಾವಣೆಯ ಒಕ್ಕೂಟದಲ್ಲಿ ಯೂರಪೀಯನ್ ಸೆಂಟ್ರಲ್ ಬ್ಯಾಂಕ್ ಅನುಕ್ರಮವಾದ ಸಂಸ್ಥೆಯಾಗಿದೆ. ಬ್ಯಾಂಕ್ ಆಫ಼್ ಜಪಾನ್, ಪೀಪಲ್'ಸ್ ಬ್ಯಾಂಕ್ ಆಫ಼್ ಚಾಯ್ನಾ ಮತ್ತು ಬ್ಯಾಂಕ್ ಆಫ಼್ ಇಂಗ್ಲಂಡ್, ಜಗತ್ತಿನ ಹಣಕಾಸಿನ ಮೇಲೆ ಮಹತ್ತರ ಪ್ರಭಾವವುಳ್ಳ ಇತರ ಕೇಂದ್ರೀಯ ಬ್ಯಾಂಕುಗಳು. ಚಿನ್ನವನ್ನು ಹಣವಾಗಿ ಬಳಸುವಾಗ, ಹಣ ಪೂರೈಕೆಯು ಎರಡು ರೀತಿಯಲ್ಲಿ ಹೆಚ್ಚಬಹುದು. ಮೊದಲನೆಯದಾಗಿ, ಚಿನ್ನದ ಹೊಸ ಗಣಿಗಾರಿಕೆಯಿಂದ ವರ್ಷಕ್ಕೆ ಸುಮಾರು ೨ ಪ್ರತಿಶತದಷ್ಟು ಚಿನ್ನದ ಪರಿಮಾಣ ಹೆಚ್ಚಾದಂತೆ ಹಣ ಪೂರೈಕೆಯು ಹೆಚ್ಚಬಹುದು, ಆದರೆ ಇದು, ಕಲಂಬಸ್ ಹೊಸ ಭೂಮಿಯನ್ನು ಪತ್ತೆಹಚ್ಚಿ ಚಿನ್ನವನ್ನು ಸ್ಪೇಯ್ನ್‌ಗೆ ತಂದಾಗ, ಅಥವಾ ೧೮೪೮ರಲ್ಲಿ ಕ್ಯಾಲಿಫ಼ಾರ್ನಿಯಾದಲ್ಲಿ ಚಿನ್ನವನ್ನು ಕಂಡುಹಿಡಿಯಲಾದಾಗ ಆದಂತೆ, ಚಿನ್ನದ ಪ್ರದೇಶಗಳಿಗೆ ವಲಸೆಗಳ (ಗೋಲ್ಡ್ ರಶ್) ಮತ್ತು ಪರಿಶೋಧನೆಗಳ ಸಮಯದಲ್ಲಿ ಇನ್ನಷ್ಟು ಹೆಚ್ಚಬಹುದು. ಈ ರೀತಿಯ ಹೆಚ್ಚಳವು ಸಾಲಗಾರರಿಗೆ ನೆರವಾಗುತ್ತದೆ, ಮತ್ತು ಚಿನ್ನದ ಮೌಲ್ಯವು ಕೆಳಗೆ ಹೋದಂತೆ ಹಣದುಬ್ಬರವನ್ನು ಉಂಟುಮಾಡುತ್ತದೆ. ಎರಡನೆಯದಾಗಿ, ಚಿನ್ನದ ಮೌಲ್ಯವು ಮೇಲಕ್ಕೆ ಹೋದಾಗ ಹಣ ಪೂರೈಕೆಯು ಹೆಚ್ಚಬಹುದು. ಚಿನ್ನದ ಮೌಲ್ಯದಲ್ಲಿ ಈ ರೀತಿಯ ಹೆಚ್ಚಳ ಉಳಿತಾಯಗಾರರು ಹಾಗೂ ಋಣದಾತರಿಗೆ ನೆರವಾಗುತ್ತದೆ ಮತ್ತು ಇದನ್ನು ಬೆಲೆ ಇಳಿಕೆಯೆಂದು (ಮಾರಾಟಕ್ಕಿರುವ ವಸ್ತುಗಳು ಚಿನ್ನಕ್ಕೆ ಸಂಬಂಧಿಸಿದಂತೆ ಕಡಮೆ ದುಬಾರಿಯಾಗಿರುವ) ಕರೆಯಲಾಗುತ್ತದೆ. ೧೭೯೨ರಿಂದ ೧೯೧೩ರವರೆಗೆ ಅಮೇರಿಕಾದಲ್ಲಿ ಚಿನ್ನ ಮತ್ತು ಚಿನ್ನದಿಂದ ಬೆಂಬಲಿತ ಪ್ರಮಾಣ ಹಣವು ಹಣವೆಂದು ಬಳಸಲಾದಾಗ ಬೆಲೆ ಇಳಿಕೆಯು ಒಂದು ಶತಮಾನಕ್ಕೂ ಹೆಚ್ಚು ಕಾಲ ಲಾಕ್ಷಣಿಕ ಪರಿಸ್ಥಿತಿಯಾಗಿತ್ತು.

ಆರ್ಥಿಕ ಕಾರ್ಯನೀತಿ

    ಮುಖ್ಯ ಲೇಖನ: ಆರ್ಥಿಕ ಕಾರ್ಯನೀತಿ

ಆರ್ಥಿಕ ಕಾರ್ಯನೀತಿ (ಮಾನಿಟೆರಿ ಪಾಲಸಿ) ಒಂದು ಸರ್ಕಾರ, ಕೇಂದ್ರೀಯ ಬ್ಯಾಂಕ್, ಅಥವಾ ಆರ್ಥಿಕ ಪ್ರಾಧಿಕಾರವು ನಿರ್ದಿಷ್ಟ ಗುರಿಗಳನ್ನು ಸಾಧಿಸಲು ಹಣ ಪೂರೈಕೆಯನ್ನು ನಿರ್ವಹಿಸುವ ಪ್ರಕ್ರಿಯೆ. ಸಾಮಾನ್ಯವಾಗಿ ಆರ್ಥಿಕ ಕಾರ್ಯನೀತಿಯ ಗುರಿ ಸ್ಥಿರ ಬೆಲೆಗಳ ಒಂದು ಪರಿಸರದಲ್ಲಿ ಆರ್ಥಿಕ ಪ್ರಗತಿಗೆ ಸ್ಥಳಮಾಡಿಕೊಡುವುದಾಗಿದೆ. ಉದಾಹರಣೆಗೆ, ಆಡಳಿತ ಮಂಡಲಿ (ಬೋರ್ಡ್ ಆಫ಼್ ಗವರ್ನರ್ಸ್) ಮತ್ತು ಸಂಘೀಯ ಮುಕ್ತ ಮಾರುಕಟ್ಟೆ ಸಮಿತಿಯು (ಫ಼ೆಡರಲ್ ಓಪನ್ ಮಾರ್ಕೆಟ್ ಕಮಿಟಿ) “ಅಧಿಕತಮ ಉದ್ಯೋಗ, ಸ್ಥಿರವಾದ ಬೆಲೆಗಳು, ಮತ್ತು ಮಿತ ದೀರ್ಘಾವಧಿ ಬಡ್ಡಿ ದರಗಳ ಗುರಿಗಳಿಗೆ ಒತ್ತಾಸೆಯಾಗಿರಲು ಪರಿಣಾಮಕಾರಿಯಾಗಿ“ ಯತ್ನಿಸಬೇಕೆಂದು ಫ಼ೆಡರಲ್ ರಿಸ಼ರ್ವ್ ಆಕ್ಟ್‌ನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಒಂದು ವಿಫಲವಾದ ಆರ್ಥಿಕ ಕಾರ್ಯನೀತಿಯು ಒಂದು ಅರ್ಥವ್ಯವಸ್ಥೆ ಮತ್ತು ಅದನ್ನು ಅವಲಂಬಿಸಿದ ಸಮಾಜದ ಮೇಲೆ ಗಮನಾರ್ಹವಾದ ಹಾನಿಕರ ಪರಿಣಾಮಗಳನ್ನು ಉಂಟುಮಾಡಬಹುದು. ಇವುಗಳು, ಅತಿ ಹಣದುಬ್ಬರ (ಹಾಯ್ಪರ್ಇನ್‌ಫ಼್ಲೇಶನ್), ಜಡ ಪ್ರಗತಿ ಮತ್ತು ಹಣದುಬ್ಬರದ ಪರಿಸ್ಥಿತಿ, ಹಿಂಜರಿತ, ಹೆಚ್ಚಾದ ನಿರುದ್ಯೋಗ, ಆಮದು ಮಾಡಿದ ಸರಕುಗಳ ಕೊರತೆ, ಸರಕುಗಳನ್ನು ರಫ್ತುಮಾಡುವಲ್ಲಿ ಅಸಾಮರ್ಥ್ಯ, ಮತ್ತು ಸಂಪೂರ್ಣ ಆರ್ಥಿಕ ಕುಸಿತ ಹಾಗೂ ಒಂದು ಬಹಳ ಕಡಮೆ ಸಾಮರ್ಥ್ಯದ ವಸ್ತು ವಿನಿಮಯ ಅರ್ಥವ್ಯವಸ್ಥೆಯ ಅಳವಡಿಕೆಯನ್ನು ಸಹ ಒಳಗೊಂಡಿವೆ. ಉದಾಹರಣೆಗೆ, ಸೋವಿಯಟ್ ಒಕ್ಕೂಟದ ಪತನದ ಬಳಿಕ, ಇದು ರಷ್ಯಾದಲ್ಲಿ ಸಂಭವಿಸಿತು. ಸರ್ಕಾರಗಳು ಮತ್ತು ಕೇಂದ್ರೀಯ ಬ್ಯಾಂಕುಗಳು ಆರ್ಥಿಕ ಕಾರ್ಯನೀತಿಯ ನಿಯಾಮಕ ಮತ್ತು ಮುಕ್ತ ಮಾರುಕಟ್ಟೆ ಕಾರ್ಯವಿಧಾನಗಳು ಎರಡನ್ನೂ ಅನುಸರಿಸಿವೆ. ಹಣ ಪೂರೈಕೆಯನ್ನು ನಿಯಂತ್ರಿಸಲು ಬಳಸಲಾಗುವ ಕೆಲವು ಸಾಧನಗಳು:

  • ಸರ್ಕಾರವು ಹಣದ ಸಾಲ ಕೊಡುವ ಅಥವಾ ಸಾಲ ಪಡೆಯುವ ಬಡ್ಡಿ ದರವನ್ನು ಬದಲಾಯಿಸುವುದು
  • ಚಲಾವಣಾ ಖರೀದಿಗಳು ಅಥವಾ ಮಾರಾಟಗಳು
  • ಸರ್ಕಾರದ ಸಾಲವನ್ನು ಹೆಚ್ಚಿಸುವುದು ಅಥವಾ ತಗ್ಗಿಸುವುದು
  • ಸರ್ಕಾರದ ಖರ್ಚನ್ನು ಹೆಚ್ಚಿಸುವುದು ಅಥವಾ ತಗ್ಗಿಸುವುದು
  • ವಿನಿಮಯ ದರಗಳ ಮಾರ್ಪಾಡು
  • ಬ್ಯಾಂಕಿನ ಮೀಸಲು ನಿಧಿ ಅಗತ್ಯಗಳನ್ನು ಏರಿಸುವುದು ಅಥವಾ ತಗ್ಗಿಸುವುದು
  • ಖಾಸಗಿ ಚಲಾವಣೆಗಳ ನಿಯಂತ್ರಣ ಅಥವಾ ಪ್ರತಿಬಂಧ
  • ಒಂದು ದೇಶದೊಳಗೆ ಬಂಡವಾಳದ ಆಯಾತಗಳು ಅಥವಾ ನಿರ್ಯಾತಗಳ ಮೇಲೆ ತೆರಿಗೆ ವಿಧಿಸುವುದು ಅಥವಾ ತೆರಿಗೆ ಬಿಡುವುದು

ಹಲವು ವರ್ಷಗಳವರೆಗೆ ಆರ್ಥಿಕ ಕಾರ್ಯನೀತಿಯ ಬಹಳಷ್ಟು, ಹಣಕಾಸು ತತ್ವಸಿದ್ಧಾಂತವೆಂದು ಪರಿಚಿತವಾದ ಒಂದು ಆರ್ಥಿಕ ಸಿದ್ಧಾಂತದಿಂದ ಪ್ರಭಾವಿತವಾಗಿತ್ತು. ಹಣಕಾಸು ತತ್ವಸಿದ್ಧಾಂತವು ಆರ್ಥಿಕ ಚಟುವಟಿಕೆಯನ್ನು ನಿಯಂತ್ರಿಸುವಲ್ಲಿ ಹಣ ಪೂರೈಕೆಯ ನಿಯಂತ್ರಣವು ಪ್ರಮುಖ ವಿಧಾನವಾಗಬೇಕೆಂದು ಪ್ರತಿಪಾದಿಸುವ ಒಂದು ಆರ್ಥಿಕ ಸಿದ್ಧಾಂತ. ೧೯೮೦ರ ದಶಕಕ್ಕೆ ಮುಂಚೆ ಹಣದ ಬೇಡಿಕೆಯ ಸ್ಥಿರತೆಯು ಮಿಲ್ಟನ್ ಫ಼್ರೀಡ್‌ಮನ್ ಮತ್ತು ಆನಾ ಶ್ವಾರ್ಟ್ಸ್‌ರ ಒಂದು ಬಹುಮುಖ್ಯವಾದ ಶೋಧನೆಯಾಗಿತ್ತು ಮತ್ತು ಇದು ಡೇವಿಡ್ ಲೇಯ್ಡ್‌ಲರ್ ಹಾಗೂ ಇತರ ಅನೇಕರ ವ್ಯಾಸಂಗದಿಂದ ಬೆಂಬಲಿತವಾಯಿತು. ಹಣದ ಬೇಡಿಕೆಯ ಸ್ವರೂಪ ೧೯೮೦ರ ದಶಕದ ಅವಧಿಯಲ್ಲಿ ತಾಂತ್ರಿಕ, ಸಾಂಸ್ಥಾನಿಕ, ಮತ್ತು ಕಾನೂನಿಗೆ ಸಂಬಂಧಿಸಿದ ಅಂಶಗಳ ಕಾರಣಗಳಿಂದ ಬದಲಾಯಿತು ಮತ್ತು ಅಂದಿನಿಂದೀಚೆಗೆ ಹಣಕಾಸು ತತ್ವಸಿದ್ಧಾಂತದ ಪ್ರಭಾವ ಕಡಿಮೆಯಾಗಿದೆ.

ಹಣದ ಇತಿಹಾಸ

    ಮುಖ್ಯ ಲೇಖನ: ಹಣದ ಇತಿಹಾಸ

ವಸ್ತು ವಿನಿಮಯದಂತಹ ವಿಧಾನಗಳ ಬಳಕೆ ಕನಿಷ್ಠ ಪಕ್ಷ ೧೦೦,೦೦೦ ವರ್ಷಗಳಷ್ಟು ಪ್ರಾಚೀನವಿರಬಹುದು. ಕೆಂಪು ವರ್ಣದ್ರವ್ಯದ (ರೆಡ್ ಓಕರ್) ವ್ಯಾಪಾರ ಸ್ವಾಜ಼ಿಲ್ಯಾಂಡ್‌ನಲ್ಲಿತ್ತೆಂದು ದೃಢೀಕರಿಸಲಾಗಿದೆ, ದಾರಕ್ಕೆ ಪೋಣಿಸಿದ ಮಣಿಗಳ ರೂಪದಲ್ಲಿ ಕಪ್ಪೆಚಿಪ್ಪಿನ ಆಭರಣಗಳು ಸಹ ಈ ಕಾಲಾವಧಿಯಲ್ಲಿತ್ತೆಂದು ನಿಶ್ಚಿತವಾಗಿದೆ, ಮತ್ತು ಇದು ದ್ರವ್ಯ ಹಣಕ್ಕೆ ಬೇಕಾದ ಮೂಲಭೂತ ಲಕ್ಷಣಗಳನ್ನು ಹೊಂದಿತ್ತು. ಮಾರುಕಟ್ಟೆ ಅರ್ಥವ್ಯವಸ್ಥೆಗಳು ಅಸ್ತಿತ್ವದಲ್ಲಿರುವುದಕ್ಕೆ ಮುಂಚೆ, ಉತ್ಪಾದನೆಯನ್ನು ವ್ಯವಸ್ಥೆಗೊಳಿಸಲು ಮತ್ತು ಸರಕುಗಳು ಹಾಗೂ ಸೇವೆಗಳನ್ನು ತಮ್ಮ ನಿವಾಸಿಗಳ ನಡುವೆ ಹಂಚಲು, ಜನರು ಸಂಪ್ರದಾಯ, ಮೇಲಿನಿಂದ ಕೆಳಗಿನ ಆದೇಶ, ಅಥವಾ ಸಾಮುದಾಯಿಕ ಸಹಕಾರದ ಮೇಲೆ ಅವಲಂಬಿಸಿದ್ದರು. ಶೆಕಲ್ ಒಂದು ಪ್ರಾಚೀನವಾದ ತೂಕ ಮತ್ತು ಚಲಾವಣೆಯ ಏಕಮಾನವನ್ನು ನಿರ್ದೇಶಿಸುತ್ತದೆ. ಈ ಪದದ ಮೊದಲ ಬಳಕೆ ಮೆಸಪಟೇಮಿಯಾದಿಂದ ಸುಮಾರು ಕ್ರಿಪೂ ೩೦೦೦ರಲ್ಲಿ ಬಂದಿದೆ ಮತ್ತು ಇದು ಇತರ ಮೌಲ್ಯಗಳನ್ನು ಬೆಳ್ಳಿ, ಕಂಚು, ತಾಮ್ರ ಇತ್ಯಾದಿಗಳ ಒಂದು ಮಾನದಂಡದಲ್ಲಿ ಸಂಬಂಧಿಸಿದ್ದ ಯವೆಯ ಒಂದು ನಿರ್ದಿಷ್ಟ ಪುಂಜವನ್ನು ನಿರ್ದೇಶಿಸಿತ್ತು. ಒಂದು ಶೆಕಲ್/ಯವೆ ಆರಂಭದಲ್ಲಿ ಒಂದು ಚಲಾವಣೆಯ ಏಕಮಾನ ಮತ್ತು ಒಂದು ತೂಕದ ಏಕಮಾನ ಎರಡೂ ಆಗಿತ್ತು.

ಹಣ 
ಲಿಡಿಯಾದ ಕ್ರಿಪೂ ೬೪೦ರ ಒಂದು ಮೂರನೆಯ ಒಂದು ಭಾಗದ ಸ್ಟೇಟರ್ ಇಲೆಕ್ಟ್ರಮ್ ನಾಣ್ಯ, ದೊಡ್ಡದಾಗಿ ತೋರಿಸಲಾಗಿದೆ.

ಹೆರಾಡಟಸ್, ಮತ್ತು ಬಹುತೇಕ ಆಧುನಿಕ ವಿದ್ವಾಂಸರ ಪ್ರಕಾರ, ಲಿಡಿಯಾದ ನಿವಾಸಿಗಳು ಚಿನ್ನ ಮತ್ತು ಬೆಳ್ಳಿಯ ನಾಣ್ಯದ ಬಳಕೆಯನ್ನು ಪರಿಚಯ ಮಾಡಿಸಿದ ಮೊದಲ ಜನರಾಗಿದ್ದರು. ಈ ಮೊದಲ ಮುದ್ರೆಯುಳ್ಳ ನಾಣ್ಯಗಳನ್ನು ಸರಿಸುಮಾರು ಕ್ರಿಪೂ ೬೫೦-೬೦೦ರ ಅವಧಿಯಲ್ಲಿ ಟಂಕಿಸಲಾಗಿತ್ತೆಂದು ಭಾವಿಸಲಾಗಿದೆ. ಸ್ಟೇಟರ್ ನಾಣ್ಯವನ್ನು ಸ್ಟೇಟರ್ (ಮೂರನೆಯ ಒಂದು ಭಾಗ) ವರ್ಗರಾಶಿಯಲ್ಲಿ ನಿರ್ಮಿಸಲಾಗಿತ್ತು. ಸ್ಟೇಟರ್‌ಗೆ ಪೂರಕವಾಗಿ, ಸಣ್ಣ ಅಂಶಗಳನ್ನು ನಿರ್ಮಿಸಲಾಗಿತ್ತು: ಟ್ರಾಯ್ಟ್ (ಮೂರನೆಯ ಒಂದು ಭಾಗ), ಹೆಕ್ಟೆ (ಆರನೆಯ ಒಂದು ಭಾಗ), ಮತ್ತು ಹೀಗೆಯೆ ನಿಮ್ನ ವರ್ಗರಾಶಿಗಳಲ್ಲಿ. ಪ್ರಾಚೀನ ಕಾಲದಲ್ಲಿ ಲಿಡಿಯಾದ ಕ್ರೀಸಸ್‌ನ ಹೆಸರು ಸಂಪತ್ತಿಗೆ ಸಮಾನಾರ್ಥಕವಾಯಿತು. ಸಾರ್ಡಿಸ್ ಒಂದು ಸುಂದರವಾದ ನಗರವೆಂದು ಹೆಸರುವಾಸಿಯಾಗಿತ್ತು. ಕ್ರಿಪೂ ೫೫೦ರ ಸರಿಸುಮಾರು, ಪುರಾತನ ಪ್ರಪಂಚದ ಏಳು ಅದ್ಭುತಗಳ ಪೈಕಿ ಒಂದಾದ, ಎಫ಼ಸಸ್‌ನಲ್ಲಿ ಆರ್ಟಮಿಸ್‌ಳ ದೇವಾಲಯದ ನಿರ್ಮಾಣಕ್ಕಾಗಿ ಕ್ರೀಸಸ್ ಹಣ ಒದಗಿಸಿದನು. ಮೊಟ್ಟ ಮೊದಲ ಬ್ಯಾಂಕುನೋಟುಗಳನ್ನು ಚೀನಾದಲ್ಲಿ ೭ನೇ ಶತಮಾನದಲ್ಲಿ ಬಳಸಲಾಗಿತ್ತು, ಮತ್ತು ಯೂರಪ್‌ನಲ್ಲಿ ಮೊದಲಿನವುಗಳನ್ನು ಸ್ಟಾಕ್‌ಹೋಮ್ಸ್ ಬ್ಯಾಂಕೋನಿಂದ ೧೬೬೧ರಲ್ಲಿ ಚಲಾವಣೆಗೆ ತರಲಾಯಿತು.

ಉಲ್ಲೇಖಗಳು

ಇವನ್ನೂ ನೋಡಿ

  • ಟಂಕಿಸಿದ ನಾಣ್ಯ!;ಸೂರ್ಯ;8 Dec, 2016 Archived 2016-12-08 ವೇಬ್ಯಾಕ್ ಮೆಷಿನ್ ನಲ್ಲಿ.
  • ನಾಣ್ಯ/ಧನಮಾನಕದ ಚಿಹ್ನೆ
  • ಚಲಾವಣೆ ? ಆಧಾರವಿಲ್ಲದ ಲೇಖನ.
  • ವರ್ಗ:ಹಣ
  • ಲೆಕ್ಕದ ನಾಣ್ಯ
  • ಖೋಟಾ, ಖೋಟಾ ಹಣ ತಯಾರಿಕೆ
  • ಪ್ರಮಾಣ ಹಣ
  • ಚಲಾವಣಾ ಮಾರುಕಟ್ಟೆ
  • ಅರ್ಥಶಾಸ್ತ್ರ
  • ವಿದ್ಯುನ್ಮಾನ ಹಣ
  • ಫ಼ೆಡರಲ್ ರಿಸ಼ರ್ವ್ ಸಿಸ್ಟಮ್
  • ಅಲ್ಪಾಂಶ-ಆಪದ್ಧನ ಲೇವಾದೇವಿ
  • ಪೂರ್ಣ-ಆಪದ್ಧನ ಲೇವಾದೇವಿ
  • ಕಾರ್ಮಿಕ ಪ್ರಮಾಣ ಪತ್ರ
  • ಸ್ಥಳೀಯ ವಿನಿಮಯ ವ್ಯಾಪಾರ ವ್ಯವಸ್ಥೆಗಳು
  • ಹಣ ನಿರ್ಮಾಣ
  • ಮಾರುಕಟ್ಟೆ ರಹಿತ ಅರ್ಥಶಾಸ್ತ್ರ
  • ನಾಣ್ಯಶಾಸ್ತ್ರ — ಹಣದ ಸಂಗ್ರಹ ಮತ್ತು ಅಧ್ಯಯನ
  • ನಗದು ಬಿಡುಗಡೆ ಆದಾಯ
  • ಮುಂದೆ ಸಲ್ಲಿಸುವ ಸಂದಾಯದ ಮಾನದಂಡ
  • ಜಾಗತಿಕ ನಾಣ್ಯಪದ್ಧತಿ

ಹೊರಗಿನ ಸಂಪರ್ಕ ಕೊಂಡಿಗಳು

Tags:

ಹಣ ಆರ್ಥಿಕ ವೈಶಿಷ್ಟ್ಯಗಳುಹಣ ಮಾರುಕಟ್ಟೆ ದ್ರವ ಸಾಮರ್ಥ್ಯಹಣ ದ ಪ್ರಕಾರಗಳುಹಣ ದ ಇತಿಹಾಸಹಣ ಉಲ್ಲೇಖಗಳುಹಣ ಇವನ್ನೂ ನೋಡಿಹಣ ಹೊರಗಿನ ಸಂಪರ್ಕ ಕೊಂಡಿಗಳುಹಣ

🔥 Trending searches on Wiki ಕನ್ನಡ:

ಮೌರ್ಯ ಸಾಮ್ರಾಜ್ಯಭಾರತೀಯ ಭೂಸೇನೆಕಾವ್ಯಮೀಮಾಂಸೆಗ್ರಹಅಮೃತಧಾರೆ (ಕನ್ನಡ ಧಾರಾವಾಹಿ)ಏಡ್ಸ್ ರೋಗಬ್ರಾಹ್ಮಿ ಲಿಪಿಆದಿ ಕರ್ನಾಟಕಹರ್ಡೇಕರ ಮಂಜಪ್ಪತುಂಗಭದ್ರ ನದಿಭಾರತೀಯ ನೌಕಾಪಡೆರಚಿತಾ ರಾಮ್ಅಂಬಿಗರ ಚೌಡಯ್ಯಮಹಿಳೆ ಮತ್ತು ಭಾರತವಿಷ್ಣುಅಂಬರೀಶ್ಮಂಜಮ್ಮ ಜೋಗತಿಹಿಂದೂ ಧರ್ಮಯಕೃತ್ತುನರೇಂದ್ರ ಮೋದಿಭತ್ತಪ್ರಬಂಧಕವಿಗಳ ಕಾವ್ಯನಾಮಬಾಲಕೃಷ್ಣಹೀಮೊಫಿಲಿಯಪುತ್ತೂರುಅಥರ್ವವೇದಹಾವು ಕಡಿತಬಾಹುಬಲಿಕೆ. ಎಸ್. ನರಸಿಂಹಸ್ವಾಮಿರಾಜ್ಯಸಭೆವಾಲ್ಮೀಕಿಎಂ. ಕೆ. ಇಂದಿರಮಾಹಿತಿ ತಂತ್ರಜ್ಞಾನಬೆಂಗಳೂರು ಕೋಟೆಮೈಸೂರು ರಾಜ್ಯಪ್ಯಾರಾಸಿಟಮಾಲ್ಕುವೆಂಪುಕಾರ್ಮಿಕರ ದಿನಾಚರಣೆಪರಶುರಾಮಮೈಸೂರು ದಸರಾಚನ್ನಬಸವೇಶ್ವರಕರ್ನಾಟಕದ ಅಣೆಕಟ್ಟುಗಳುಬೆಸಗರಹಳ್ಳಿ ರಾಮಣ್ಣಆದಿ ಶಂಕರಬಸವೇಶ್ವರದೆಹಲಿ ಸುಲ್ತಾನರುಚಿಕ್ಕಮಗಳೂರುಕರ್ನಾಟಕ ವಿಧಾನ ಸಭೆಶಾಂತಲಾ ದೇವಿಡಾ. ಎಚ್ ಎಲ್ ಪುಷ್ಪಮಹಾವೀರ ಜಯಂತಿಹಿ. ಚಿ. ಬೋರಲಿಂಗಯ್ಯಕ್ರೈಸ್ತ ಧರ್ಮಎಕರೆಅಳತೆ, ತೂಕ, ಎಣಿಕೆಒಂದನೆಯ ಮಹಾಯುದ್ಧಕದಂಬ ರಾಜವಂಶವಾಲಿಬಾಲ್ಸರ್ವಜ್ಞಪ್ರಾಥಮಿಕ ಶಾಲೆಚೆನ್ನಕೇಶವ ದೇವಾಲಯ, ಬೇಲೂರುಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಬೇಸಿಗೆಗೋವಿಂದ ಪೈಸಾವಯವ ಬೇಸಾಯರಾಜಕೀಯ ವಿಜ್ಞಾನಕೃಷ್ಣಬಿಗ್ ಬಾಸ್ ಕನ್ನಡಜನಪದ ನೃತ್ಯಗಳುಕರ್ನಾಟಕದ ಕಲೆ ಮತ್ತು ಸಂಸ್ಕೃತಿಸಂಶೋಧನೆಕ್ರಿಯಾಪದಗವಿಸಿದ್ದೇಶ್ವರ ಮಠಸತ್ಯ (ಕನ್ನಡ ಧಾರಾವಾಹಿ)ರಕ್ತದೊತ್ತಡಶ್ವೇತ ಪತ್ರಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳು🡆 More