ದಾಮೋದರ ಮೌಜೊ

ದಾಮೋದರ್ ಮೌಜೊ (ಜನನ ೧ ಆಗಸ್ಟ್ ೧೯೪೪) ಒಬ್ಬ ಗೋವಾದ ಸಣ್ಣ ಕಥೆಗಾರ, ಕಾದಂಬರಿಕಾರ, ವಿಮರ್ಶಕ ಮತ್ತು ಕೊಂಕಣಿಯಲ್ಲಿ ಸ್ಕ್ರಿಪ್ಟ್ ಬರಹಗಾರ.

ಅವರು ೨೦೨೧ ರಲ್ಲಿ ಜ್ಞಾನಪೀಠ ಪ್ರಶಸ್ತಿ (ಭಾರತದ ಅತ್ಯುತ್ತಮ ಸಾಹಿತ್ಯ ಗೌರವ) ಪ್ರದಾನ ಮಾಡಲಾಯಿತು ತಮ್ಮ ಕಾದಂಬರಿ ಕಾರ್ಮೇಲಿನ್ ಗಾಗಿ ೧೯೮೩ ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮತ್ತು ೨೦೧೧ ರಲ್ಲಿ ತಮ್ಮ ಕಾದಂಬರಿ ಸುನಾಮಿ ಸೈಮನ್ ಗಾಗಿ ವಿಮಲಾ ವಿ ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅವರ ತೆರೇಸಾರ ಮ್ಯಾನ್ ಮತ್ತು ಗೋವಾದಿಂದ ಇತರ ಕಥೆಗಳು ಎಂಬ ಸಣ್ಣಕಥೆಗಳ ಸಂಗ್ರಹವನ್ನು ೨೦೧೫ ರಲ್ಲಿ ಫ್ರಾಂಕ್ ಓ 'ಕಾನರ್ ಇಂಟರ್ನ್ಯಾಷನಲ್ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದೆ. ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಮಂಡಳಿ, ಸಾಮಾನ್ಯ ಮಂಡಳಿ ಮತ್ತು ಹಣಕಾಸು ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ದಾಮೋದರ ಮೌಜೊ
ದಾಮೋದರ್ ಮೌಜೊ

ಆರಂಭಿಕ ಜೀವನ

ಮೌಜೊ ಅವರು ೧ ಆಗಸ್ಟ್ ೧೯೪೪ ರಂದು ದಕ್ಷಿಣ ಗೋವಾದ ಮಜೋರ್ಡಾ ಎಂಬ ಕರಾವಳಿಯ ಹಳ್ಳಿಯಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ಪ್ರಾಥಮಿಕ ಶಿಕ್ಷಣವು ಮರಾಠಿ ಮತ್ತು ಪೋರ್ಚುಗೀಸ್ ಭಾಷೆಗಳಲ್ಲಿದ್ದರೆ, ಅವರ ಮಾಧ್ಯಮಿಕ ಶಿಕ್ಷಣವು ಇಂಗ್ಲಿಷ್‌ನಲ್ಲಿತ್ತು. ಅವರು ಮಡಗಾಂವ್ ದಲ್ಲಿನ ನ್ಯೂ ಎರಾ ಹೈಸ್ಕೂಲ್‌ನಲ್ಲಿ ಅಧ್ಯಯನ ಮಾಡಿದರು.

ಅವರು ತಮ್ಮ ೧೨ ನೇ ವಯಸ್ಸಿನಲ್ಲಿ ತನ್ನ ತಂದೆಯನ್ನು ಕಳೆದುಕೊಂಡನು. ಇದರ ನಂತರ, ಅವರು ೧೯೬೧ ರಲ್ಲಿ ಸೆಕೆಂಡರಿ ಸ್ಕೂಲ್ ಸರ್ಟಿಫಿಕೇಟ್ ಪರೀಕ್ಷೆಯಲ್ಲಿ (SSCE) ಉತ್ತೀರ್ಣರಾಗುವವರೆಗೆ, ತಮ್ಮ ಅಧ್ಯಯನದ ಜೊತೆಜೊತೆಗೆ ಅವರು ತಮ್ಮ ಚಿಕ್ಕಪ್ಪನಿಗೆ ಕುಟುಂಬದ ಅಂಗಡಿಯಲ್ಲಿ ಸಹಾಯ ಮಾಡಿದರು. ಇದರ ನಂತರ, ಅವರು ತಮ್ಮ ಅಧ್ಯಯನವನ್ನು ಮುಂದುವರಿಸಲು ಮುಂಬೈಗೆ ತೆರಳಿದರು. ಅವರು ಮಾಟುಂಗಾ ಮುಂಬೈನ ಆರ್ಎ ಪೊದ್ದರ್ ಕಾಲೇಜ್ ಆಫ್ ಕಾಮರ್ಸ್ ಮತ್ತು ಎಕನಾಮಿಕ್ಸ್‌ನಿಂದ ಪದವಿ ಪಡೆದರು, ಅಲ್ಲಿ ಅವರು ಬಾಂಬೆ ವಿಶ್ವವಿದ್ಯಾಲಯ(ಈಗಿನ ಮುಂಬೈ ವಿಶ್ವವಿದ್ಯಾಲಯದಿಂದ ) ಬಿ.ಕಾಂ. ಪದವಿ ಪಡೆದರು. ಮುಂಬೈನಲ್ಲಿದ್ದ ನಾಲ್ಕು ವರ್ಷಗಳಲ್ಲಿ ಅವರು ಕೊಂಕಣಿಯಲ್ಲಿ ಸಣ್ಣ ಕಥೆಗಳನ್ನು ಬರೆಯಲು ಪ್ರಾರಂಭಿಸಿದರು, ಅದನ್ನು ಓದುಗರು ಚೆನ್ನಾಗಿ ಸ್ವೀಕರಿಸಿದರು. ಇವುಗಳಲ್ಲಿ ಕೆಲವನ್ನು ಇಂಗ್ಲಿಷ್‌ಗೆ ಅನುವಾದಿಸಿ ಪ್ರಕಟಿಸಲಾಗಿದೆ.

ವೃತ್ತಿ

ದಾಮೋದರ್ ಮೌಜೊ ತಮ್ಮ ಪದವಿಯ ನಂತರ ತಮ್ಮ ಕುಟುಂಬದ ಅಂಗಡಿಯನ್ನು ನಡೆಸಲು ಗೋವಾಕ್ಕೆ ಹಿಂದಿರುಗಿದರು, ಇದು ಪ್ರಧಾನವಾಗಿ ಕ್ಯಾಥೋಲಿಕ್ ರನ್ನು ಹೊಂದಿರುವ ಹಳ್ಳಿಯ ಜನರಿಗೆ ಹತ್ತಿರವಾಗುವಂತೆ ಮಾಡಿತು. ಗೋವಾದಲ್ಲಿನ ಕ್ಯಾಥೋಲಿಕ್ ಜನರ ಜೀವನದ ಅಧಿಕೃತ ಚಿತ್ರಣವಾದ ಅವರ ಬರವಣಿಗೆಯಲ್ಲಿ ಈ ಪ್ರಭಾವವು ಸ್ಪಷ್ಟವಾಗಿದೆ. ಅವರು ೧೯೭೧ ರಲ್ಲಿ ಪ್ರಕಟವಾದ ಗಂಥೋನ್ ಎಂಬ ಸಣ್ಣ ಕಥೆಗಳ ಸಂಗ್ರಹದೊಂದಿಗೆ ತಮ್ಮ ಬರವಣಿಗೆಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇಲ್ಲಿಯವರೆಗೆ ಅವರು ಐದು ಸಣ್ಣ ಕಥಾ ಸಂಕಲನಗಳನ್ನು ಬರೆದಿದ್ದಾರೆ. ೨೦೧೪ ರಸಪೋನ್ ಮೋಗಿಯೊಂದಿಗೆ ಸಂಕಲನವು ಇತ್ತೀಚಿನದು. ಈ ನಡುವೆ, ಅವರು ಕಾರ್ಮೆಲಿನ್ ಕಾದಂಬರಿಯನ್ನು ಬರೆದರು, ಅದು ಅವರಿಗೆ ೧೯೮೩ ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಈ ಕಾದಂಬರಿಯು ಪರ್ಷಿಯನ್ ಗಲ್ಫ್ ದೇಶಗಳಲ್ಲಿ ಕೆಲಸ ಮಾಡುವ ಆಯಾಗಳ ಸಂಕಟ ಮತ್ತು ಲೈಂಗಿಕ ಶೋಷಣೆಯ ಕುರಿತು ವ್ಯವಹರಿಸುತ್ತದೆ ಮತ್ತು ಇದನ್ನು ಹನ್ನೆರಡು ಭಾಷೆಗಳಿಗೆ ಅನುವಾದಿಸಲಾಗಿದೆ. ಸೂದ್ (1975) ಸ್ವಾತಂತ್ರ್ಯ ಹೋರಾಟಗಾರನ ಮಗನ ಸೇಡಿನ ಬಗ್ಗೆ ಬರೆದ ಕಾದಂಬರಿಯಾಗಿದೆ. ೨೦೦೬ ರಲ್ಲಿ, ಈ ಕಾದಂಬರಿಯನ್ನು ಆಧರಿಸಿ ಅದೇ ಶೀರ್ಷಿಕೆಯೊಂದಿಗೆ ಚಲನಚಿತ್ರವನ್ನು ನಿರ್ಮಿಸಲಾಯಿತು. ೧೯೯೬ ರಲ್ಲಿ ತಮಿಳುನಾಡಿನ ಕರಾವಳಿಗೆ ಸುನಾಮಿ ಅಪ್ಪಳಿಸಿದ ನಂತರ, ಅವರು ಸುನಾಮಿ ಸೈಮನ್ ಎಂಬ ಕಾದಂಬರಿಯನ್ನು ಬರೆದರು, ಅದು ವಿಶ್ವ ಕೊಂಕಣಿ ಕೇಂದ್ರದ ಶ್ರೀಮತಿ. ವಿಮಲಾ ವಿ. ಪೈ ಪುರಸ್ಕಾರ ಪಡೆಯಿತು. ಅವರು ಶಿಟೂ, ಅಲೀಶಾ, ಸೂದ್, ಓ ಮಾರಿಯಾ ಮತ್ತು ಎನಿಮಿ? ಎಂಬ ಐದು ಕೊಂಕಣಿ ಚಲನಚಿತ್ರಗಳಿಗೆ ಚಿತ್ರಕಥೆ ಮತ್ತು/ಅಥವಾ ಸಂಭಾಷಣೆ ಬರೆದಿದ್ದಾರೆ. . ಅವರಿಗೆ ಗೋವಾ ಚಲನಚಿತ್ರೋತ್ಸವದಲ್ಲಿ ಅಲೀಶಾಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಯನ್ನೂ ಮತ್ತು ಶಿಟೂ ಮತ್ತು ಓ ಮರಿಯಾಗಳ ಅತ್ಯುತ್ತಮ ಸಂಭಾಷಣೆಗೆ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗಿದೆ. ಅವರ ಕಥೆಗಳು ಭಾರತೀಯ ರಾಷ್ಟ್ರೀಯ ದೂರದರ್ಶನದಲ್ಲಿಯೂ ಪ್ರಸಾರವಾಗಿವೆ. ಕೊಂಕಣಿಯ ಪ್ರಮುಖ ದಿನಪತ್ರಿಕೆಯಾದ ಸುನಾಪರಂತ್ ದಿನಪತ್ರಿಕೆಯಲ್ಲಿ ಬರುವ ಕಥೆಗಳನ್ನು ಅವರು ವಿಮರ್ಶಿಸಿದ್ದಾರೆ. ಅವರ ಸೃಜನಶೀಲ ಸಾಹಿತ್ಯವು ಕೊಂಕಣಿಯಲ್ಲಿದ್ದರೂ, ಅವರು ವಿವಿಧ ಸ್ಥಳೀಯ ಮತ್ತು ರಾಷ್ಟ್ರೀಯ ನಿಯತಕಾಲಿಕೆಗಳು ಮತ್ತು ನಿಯತಕಾಲಿಕಗಳಿಗೆ ನಿಯಮಿತವಾಗಿ ಇಂಗ್ಲಿಷ್‌ನಲ್ಲಿ ಬರೆಯುತ್ತಾರೆ. 1985 ರಲ್ಲಿ, ಅವರು ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು 2011-12 ರಲ್ಲಿ ಕೊಂಕಣಿ ಸಾಹಿತ್ಯದ ಪೂರ್ವ ಮತ್ತು ನಂತರದ ವಸಾಹತು ಇತಿಹಾಸದ ಯೋಜನೆಗಾಗಿ ಅವರಿಗೆ ಹಿರಿಯ ಫೆಲೋಶಿಪ್ ನೀಡಿತು.

ಕ್ರಿಯಾಶೀಲತೆ

೧೯೬೭ ರಲ್ಲಿ ಗೋವಾದಲ್ಲಿ ಹೊಸದಾಗಿ ವಿಮೋಚನೆಗೊಂಡ ಗೋವಾದ ರಾಜಕೀಯ ಸ್ಥಿತಿಯನ್ನು ನಿರ್ಧರಿಸಲು ನಡೆದ ಐತಿಹಾಸಿಕ ಅಭಿಪ್ರಾಯ ಸಂಗ್ರಹಣೆಯಲ್ಲಿ ದಾಮೋದರ್ ಮೌಜೊ ಸಕ್ರಿಯವಾಗಿ ಭಾಗವಹಿಸಿದರು. ನೆರೆಯ ಮಹಾರಾಷ್ಟ್ರದೊಂದಿಗಿನ ವಿಲೀನವನ್ನು ತಿರಸ್ಕರಿಸುವ ಮೂಲಕ ತಮ್ಮ ವಿಶಿಷ್ಟ ಗುರುತನ್ನು ಉಳಿಸಿಕೊಳ್ಳುವ ಪರವಾಗಿ ಮತ ಚಲಾಯಿಸುವಂತೆ ಅವರು ಗೋವಾದ ಜನರನ್ನು ಪ್ರೇರೇಪಿಸಿದರು. ಅವರು ಕೊಂಕಣಿಗೆ ಅಧಿಕೃತ ಭಾಷೆಯ ಸ್ಥಾನಮಾನ, ಗೋವಾಕ್ಕೆ ರಾಜ್ಯ ಸ್ಥಾನಮಾನ ಮತ್ತು ಭಾರತದ ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ಕೊಂಕಣಿಯನ್ನು ಸೇರ್ಪಡೆ ಎಂಬ ಮೂರು ಬೇಡಿಕೆಗಳನ್ನು ಹೊಂದಿದ್ದ ಗೋವಾದ ಯಶಸ್ವಿ ಜನಪ್ರಿಯ ಚಳುವಳಿ, ಕೊಂಕಣಿ ಪೊರ್ಜೆಚೊ ಅವಾಜ್ (೧೯೮೫-೮೭) ನ ಸ್ಟೀರಿಂಗ್ ಕಮಿಟಿಯಲ್ಲಿದ್ದರು . ಅವರು ನವದೆಹಲಿಯ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಮಂಡಳಿ ಮತ್ತು ಹಣಕಾಸು ಸಮಿತಿಯ ಸದಸ್ಯರಾಗಿ ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ, ಅವರು ೨೦೧೦ ರಲ್ಲಿ ಪ್ರಾರಂಭವಾದ ವಾರ್ಷಿಕ ಕಾರ್ಯಕ್ರಮವಾದ ಗೋವಾ ಆರ್ಟ್ಸ್ ಮತ್ತು ಲಿಟರರಿ ಫೆಸ್ಟಿವಲ್‌ನ ಸಹ-ಸ್ಥಾಪಕ ಮತ್ತು ಸಹ-ಕ್ಯುರೇಟರ್ ಆಗಿದ್ದಾರೆ.

೨೦೧೫ ರಲ್ಲಿ, ಪ್ರೊ ಕಲ್ಬುರ್ಗಿಯವರ ಹತ್ಯೆಯ ನಂತರ, ಮೌಜೊ ಅವರು ದೇಶದಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ಮತ್ತು "ಏಕ-ಸಂಸ್ಕೃತಿಯ ನಾಯಕರಿಂದ ನೈತಿಕ ಪೋಲೀಸಿಂಗ್" ವಿರುದ್ಧ ಮಾತನಾಡಿದರು. ಸಾಹಿತ್ಯ ಅಕಾಡೆಮಿಯ ಆಗಿನ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ, ಮೌಜೊ ಅವರು ಅಧಿಕಾರದಲ್ಲಿರುವವರಿಗೆ ಬರಹಗಾರರ ಸಂಸ್ಥೆಯು ಅವರ ಸ್ವಾತಂತ್ರ್ಯಕ್ಕೆ ಯಾವುದೇ ಬೆದರಿಕೆಯನ್ನು ಸಹಿಸುವುದಿಲ್ಲ ಎಂಬ ಬಲವಾದ ಸಂದೇಶವನ್ನು ಕಳುಹಿಸಬೇಕು ಎಂದು ಒತ್ತಾಯಿಸಿದರು . ಸ್ವತಂತ್ರ ಚಿಂತನೆಯ ಬರಹಗಾರರ ಸೃಜನಶೀಲತೆಗೆ ಬೆದರಿಕೆ ಮತ್ತು "ಭಾರತದಲ್ಲಿ ಅಸಹಿಷ್ಣುತೆಯ ಹೆಚ್ಚುತ್ತಿರುವ ಪ್ರವೃತ್ತಿ" ಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.

ಜೂನ್ 2018 ರಲ್ಲಿ, ಮೌಜೊ ಅವರ ಜೀವಕ್ಕೆ ಬೆದರಿಕೆ ಇತ್ತು. ಬೆಂಗಳೂರಿನಲ್ಲಿ ಪತ್ರಕರ್ತೆ- ಕಾರ್ಯಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಕರ್ನಾಟಕ ಪೊಲೀಸ್‌ನ ವಿಶೇಷ ತನಿಖಾ ತಂಡ (ಎಸ್‌ಐಟಿ)ವು ಮೌಜೋ ಅವರಿಗೆ ಜೀವ ಬೆದರಿಕೆಯ ಕುರಿತು ಗೋವಾ ಪೊಲೀಸರಿಗೆ ತಿಳಿಸಿದಾಗ ಈ ಸಂಗತಿ ಬೆಳಕಿಗೆ ಬಂದಿತು. ಬಲಪಂಥೀಯ ಸಂಘಟನೆ ಸನಾತನ್ ಸಂಸ್ಥಾದಿಂದ ಬೆದರಿಕೆ ಇದೆ ಎಂದು ಹೇಳಲಾಗಿದೆ, ಆದರೆ ಆ ಸಂಘಟನೆಯು ಆರೋಪಗಳನ್ನು ನಿರಾಕರಿಸಿದೆ.

ಈ ಬೆದರಿಕೆಯ ನಂತರ, ಅವರಿಗೆ ಪೊಲೀಸ್ ರಕ್ಷಣೆ ನೀಡಲಾಯಿತು. ಮೌಜೊ ಅವರ ಜೀವಕ್ಕೆ ಬೆದರಿಕೆಯನ್ನು ಖಂಡಿಸಲು ಹಲವಾರು ಕಾರ್ಯಕರ್ತರು ಮತ್ತು ಬರಹಗಾರರು ಒಗ್ಗೂಡಿದರು, ಅದೇ ಸಮಯದಲ್ಲಿ ಸನಾತನನ್ ಸಂಸ್ಥಾ ಅನ್ನು ನಿಷೇಧಿಸುವಂತೆ ಕರೆ ನೀಡಿದರು.

" ತಿಷ್ಟಾವ್ನಿ" ಬಿಡುಗಡೆ :2020

ಜುಲೈ 2020 ರಲ್ಲಿ, COVID-19 ಸಾಂಕ್ರಾಮಿಕದ ಕಾರಣದಿಂದಾಗಿ, ಮೌಜೊ ಅವರು ಆನ್‌ಲೈನ್ ಸೆಷನ್ ಮೂಲಕ "ತಿಷ್ಟಾವ್ನಿ " ಎಂಬ ಸಣ್ಣ ಕಥೆಗಳ ಪುಸ್ತಕವನ್ನು ಬಿಡುಗಡೆ ಮಾಡಿದರು. ಇದು ಮೌಜೊ ಅವರ ಮೊದಲ ವರ್ಚುವಲ್ ಪುಸ್ತಕಬಿಡುಗಡೆಯಾಗಿದೆ.

ಪುಸ್ತಕದಲ್ಲಿನ ಹೆಚ್ಚಿನ ಕಥೆಗಳು ಗೋವಾದ ಹಿನ್ನೆಲೆ ಹೊಂದಿವೆ, ಆದರೆ ಕೆಲವು ದೇಶದ ಇತರ ಭಾಗಗಳ ಹಿನ್ನೆಲೆ ಹೊಂದಿವೆ . "ಝೇಲ್ ವಿಟಲ್ಟಾನಾ" (ಐಸ್ ಕರಗಿದಂತೆ) ಕಥೆಯು ಕಾರ್ಗಿಲ್ ಯುದ್ಧದ ಹಿನ್ನೆಲೆ ಹೊಂದಿದೆ. "ಸುಂದರ್ಕಯೇಚೋ ಉಪಾಸಕ" (ಸೌಂದರ್ಯೋಪಾಸಕ) ಎಂಬ ಕಥೆಯು , ಸೌಂದರ್ಯದ ಬುದ್ಧಿವಂತಿಕೆಯನ್ನು ಹೊಂದಿದ್ದೇನೆ ಎಂದು ಹೇಳಿಕೊಳ್ಳುವ ಶ್ರೀಮಂತ ವ್ಯಕ್ತಿಯ ಭ್ರಮೆಯ ಬಗ್ಗೆ ಇದ್ದು ಮುಂಬೈನ ಶ್ರೀಮಂತ ಸಮಾಜವು ಈ ಕಥೆಯ ಹಿನ್ನೆಲೆಯಾಗಿದೆ.

ಕೃತಿಗಳು

ಕಿರು ಕಾದಂಬರಿ

ಗ್ಯಾಥಾನ್ 1971

ಝಗ್ರಾನ್ನ 1975

ರುಮಾದ್ ಫುಲ್ 1989

ಭುರ್ಗಿಂ ಮ್ಹುಗೆಲಿಂ ತಿಂ 2001

ಸಪನ್ ಮೋಗಿ 2014

ಕಾದಂಬರಿಗಳು

ಸೂದ್ 1975

ಕಾರ್ಮೆಲಿನ್ 1981

ಸುನಾಮಿ ಸೈಮನ್ 2009

ಮಕ್ಕಳ ಪುಸ್ತಕಗಳು

ಏಕ್ ಆಶಿಲ್ಲೊ ಬಾಬುಲೊ 1976

ಕಾಣಿ ಎಕಾ ಖೊಮ್ಸಾಚಿ 1977

ಚಿತ್ತರಂಗಿ 1995

ಜೀವನಚರಿತ್ರೆಗಳು

ಓಶೆ ಘೋಡ್ಲೆ ಶೆಣೈ ಗೊಯೆಂಬಾಬ್ 2003

ಉಂಚ್ ಹ್ಯಾವ್ಸ್ ಉಂಚ್ ಮ್ಯಾಥೆಮ್ 2003

ಸಾಹಿತ್ಯ ಅಕಾಡೆಮಿ ನಿರ್ಮಿಸಿದ 'ಭಾಯ್ ಮೌಜೊ' (2014) ಎಂಬ ಸಾಕ್ಷ್ಯಚಿತ್ರವನ್ನು ಇಂದ್ರನೀಲ್ ಚಕ್ರವರ್ತಿ ಅವರು ಬರಹಗಾರನ ಜೀವನ ಮತ್ತು ಕೆಲಸದ ಮೇಲೆ ನಿರ್ಮಿಸಿದ್ದಾರೆ.


ಅನುವಾದಗಳು

ದಾಮೋದರ್ ಮೌಜೊ ಅವರ ಕೃತಿಗಳು ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ. ಕಾರ್ಮೆಲಿನ್ ಕಾದಂಬರಿಯನ್ನು ಹನ್ನೆರಡು ಭಾಷೆಗಳಿಗೆ ಅನುವಾದಿಸಲಾಗಿದೆ, ಅಸ್ಸಾಮಿ, ಬೆಂಗಾಲಿ, ಮೈಥಿಲಿ, ನೇಪಾಳಿ, ಗುಜರಾತಿ, ಮರಾಠಿ, ಸಿಂಧಿ, ಪಂಜಾಬಿ, ತಮಿಳು, ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಮತ್ತು ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಸುನಾಮಿ ಸೈಮನ್ ಕಾದಂಬರಿಯನ್ನು ಇಂಗ್ಲಿಷ್‌ಗೆ ಅನುವಾದಿಸಲಾಗಿದ್ದು ಪೋನಿಟೇಲ್ ಬುಕ್ಸ್ ಪ್ರಕಟಿಸಿದೆ. ದೀಸ್ ಆರ್ ಮೈ ಚಿಲ್ಡ್ರನ್ ಸಣ್ಣ ಕಥೆಗಳ ಸಂಗ್ರಹವನ್ನು ಇಂಗ್ಲಿಷ್‌ಗೆ ಅನುವಾದಿಸಲಾಗಿದ್ದು ಕಥಾ ಪಬ್ಲಿಕೇಷನ್ಸ್ ಪ್ರಕಟಿಸಿದೆ. ತೆರೇಸಾ ಅವರ ಮ್ಯಾನ್ ಆಂಡ್ ಗೋವಾಸ್ ಅದರ್ ಸ್ಟೋರೀಸ್ ಅನ್ನು ರೂಪಾ ಪಬ್ಲಿಕೇಷನ್ಸ್ ಪ್ರಕಟಿಸಿದರೆ, ರುಮಾದ್‌ಫುಲ್ ಅನ್ನು ಮಿರಾಜ್ ಎಂದು ಅನುವಾದಿಸಲಾಗಿದೆ, ಅಂಡರ್ ದಿ ಪೀಪಲ್ ಟ್ರೀ ಪ್ರಕಟಿಸಿದೆ. ಅದೇ ಪುಸ್ತಕವನ್ನು ಸೃಷ್ಟಿ ಪ್ರಕಾಶನದಿಂದ ಪ್ರಕಟಿಸಲಾದ ಶಾಂತತೆರ್ಚೆ ಘಾನ್ ಎಂದು ಮರಾಠಿಗೆ ಅನುವಾದಿಸಲಾಗಿದೆ. ಅವರ ಕಥೆಗಳು ಪೋರ್ಚುಗೀಸ್, ಫ್ರೆಂಚ್, ಇಂಗ್ಲಿಷ್ ಜೊತೆಗೆ ಹಲವಾರು ಭಾರತೀಯ ಭಾಷೆಗಳಲ್ಲಿ ಕಾಣಿಸಿಕೊಂಡಿವೆ.

ಪ್ರಶಸ್ತಿಗಳು

1973 ಕೊಂಕಣಿ ಭಾಷಾ ಮಂಡಲ್ ಸಾಹಿತ್ಯ ಪ್ರಶಸ್ತಿ -ಗಂಥೋನ್‌ಗೆ

1973 ಗೋವಾ ಕಲಾ ಅಕಾಡೆಮಿ ಸಾಹಿತ್ಯ ಪ್ರಶಸ್ತಿ -ಗಂಥೋನ್‌ಗೆ

1976 ಕೊಂಕಣಿ ಬಾಷಾ ಮಂಡಲ್ ಸಾಹಿತ್ಯ ಪ್ರಶಸ್ತಿ - ಝಾಗ್ರಣ್ಣಗೆ

1977 ಕೊಂಕಣಿ ಬಾಷಾ ಮಂಡಲ್ ಅತ್ಯುತ್ತಮ ನಾಟಕ ಹಸ್ತಪ್ರತಿ ಪ್ರಶಸ್ತಿ- ನಿಲ್ಲೆಂ ನಿಲ್ಲೆಂ ಸೊವ್ಣೆ ಏಕ್ ಗೆ

1978 ಗೋವಾ ಕಲಾ ಅಕಾಡೆಮಿ ಸಾಹಿತ್ಯ ಪ್ರಶಸ್ತಿ -ಕನ್ನಿ ಏಕಾ ಖೋಮ್ಸಾಚಿಗೆ

1983 ಸಾಹಿತ್ಯ ಅಕಾಡೆಮಿ ಪ್ರಶಸ್ತಿ -ಕಾರ್ಮೆಲಿಮ್ ಗೆ

1997 ಗೋವಾ ರಾಜ್ಯ ಚಲನಚಿತ್ರೋತ್ಸವದಲ್ಲಿ ಶಿಟೂ ಚಿತ್ರಕ್ಕಾಗಿ ಅತ್ಯುತ್ತಮ ಸಂಭಾಷಣೆ ಪ್ರಶಸ್ತಿ

1998 ರ ಕಥಾ ಪ್ರಶಸ್ತಿಯು ಮಿಂಗುಯೆಲ್ಸ್ ಕಿನ್ ಗೆ

2003 ಜನಗಂಗಾ ಪುರಸ್ಕಾರ್ - ಭುರ್ಗಿಂ ಮ್ಹುಗೆಲಿಂ ತಿಂ ಗೆ

2005 ಗೋವಾ ರಾಜ್ಯ ಚಲನಚಿತ್ರೋತ್ಸವದಲ್ಲಿ ಅಲೀಶಾ ಚಿತ್ರಕ್ಕಾಗಿ ಅತ್ಯುತ್ತಮ ಚಿತ್ರಕತೆಯ ಪ್ರಶಸ್ತಿ

2006 ಗೋವಾ ಸರ್ಕಾರದ ಕಲೆ ಮತ್ತು ಸಂಸ್ಕೃತಿ ನಿರ್ದೇಶನಾಲಯದಿಂದ ರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಕೃತಿಕ ಶ್ರೇಷ್ಠತೆಗಾಗಿ ಗೋವಾ ರಾಜ್ಯ ಬಹುಮಾನ.

ಗೋವಾ ಸರ್ಕಾರದ ಕಲೆ ಮತ್ತು ಸಂಸ್ಕೃತಿ ನಿರ್ದೇಶನಾಲಯದಿಂದ 2007 ಗೋವಾ ರಾಜ್ಯ ಸಾಂಸ್ಕೃತಿಕ ಪ್ರಶಸ್ತಿ.

2011 ರ ವಿಶ್ವ ಕೊಂಕಣಿ ಕೇಂದ್ರದ ವಿಮಲಾ ವಿ ಪೈ ಸಾಹಿತ್ಯ ಪುರಸ್ಕಾರ - ಸುನಾಮಿ ಸೈಮನ್ ಗೆ

2013 ರ ಗೋವಾ ಅಚೀವರ್ಸ್ ಪ್ರಶಸ್ತಿಯನ್ನು ದಿ ನವಹಿಂದ್ ಟೈಮ್ಸ್ ಮತ್ತು ವಿವಾ ಗೋವಾದಿಂದ ನೀಡಲಾಯಿತು.

ಗೋವಾ ರಾಜ್ಯ ಚಲನಚಿತ್ರೋತ್ಸವದಲ್ಲಿ ಓ ಮರಿಯಾ ಚಿತ್ರಕ್ಕಾಗಿ 2014 ರ ಅತ್ಯುತ್ತಮ ಸಂಭಾಷಣೆ ಪ್ರಶಸ್ತಿ.

2016 ರ ಪೋದರ್ ರತ್ನ ಪ್ರಶಸ್ತಿಯನ್ನು ರಾಪೋದರ್ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್, ಮುಂಬೈ ಕೊಟ್ಟಿತು

ವೈಯಕ್ತಿಕ ಜೀವನ

ದಾಮೋದರ್ ಮೌಜೊ ಅವರು ತಮ್ಮ ಪತ್ನಿ ಶೈಲಾ ಅವರೊಂದಿಗೆ ಗೋವಾದ ಮಜೋರ್ಡಾದಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ರೂಪಾಲಿ, ಮೇಘನಾ ಮತ್ತು ಸೋಬಿತಾ ಎಂಬ ಮೂವರು ಪುತ್ರಿಯರಿದ್ದಾರೆ. ಅವರಲ್ಲಿ ರೂಪಾಲಿ ಮೌಜೊ ಕೀರ್ತಾನಿ ಅವರು ಬರವಣಿಗೆಯಲ್ಲಿ ತೊಡಗಿದ್ದು ಇದುವರೆಗೆ ಮೂರು ಪುಸ್ತಕಗಳನ್ನು ಬರೆದಿದ್ದಾರೆ.

ಕನ್ನಡ ಕರ್ನಾಟಕದೊಂದಿಗಿನ ಸಂಬಂಧ (ಹೆಚ್ಚಿನ ಮಾಹಿತಿ)

ಮೌಜೋ ಅವರು ಜಿ.ಎನ್.ದೇವಿ ಮತ್ತು ಎಂ.ಎಂ.ಕಲಬುರ್ಗಿ ಮೊದಲಾದವರೊಡನೆ ಕೆಲಸ ಮಾಡಿದ್ದಾರೆ. ಕಲಬುರ್ಗಿ ಅವರ ಸಂಪಾದಕತ್ವದ "ವಚನ ಸಂಪುಟ"ವನ್ನು ಕೊಂಕಣಿ ಭಾಷೆಗೆ ಅನುವಾದ ಮಾಡಿದ ತಂಡದ ಮುಖ್ಯಸ್ಥರಾಗಿದ್ದರು . ಜಿ.ಎನ್.ದೇವಿ ಅವರ ಜತೆ ಭಾಷಾಶಾಸ್ತ್ರಕ್ಕೆ ಸಂಬಂಧಿಸಿ ಕೆಲಸ ಮಾಡಿದ್ದಾರೆ.


ಉಲ್ಲೇಖಗಳು

Tags:

ದಾಮೋದರ ಮೌಜೊ ಆರಂಭಿಕ ಜೀವನದಾಮೋದರ ಮೌಜೊ ವೃತ್ತಿದಾಮೋದರ ಮೌಜೊ ಕ್ರಿಯಾಶೀಲತೆದಾಮೋದರ ಮೌಜೊ ತಿಷ್ಟಾವ್ನಿ ಬಿಡುಗಡೆ :2020ದಾಮೋದರ ಮೌಜೊ ಕೃತಿಗಳುದಾಮೋದರ ಮೌಜೊ ಪ್ರಶಸ್ತಿಗಳುದಾಮೋದರ ಮೌಜೊ ವೈಯಕ್ತಿಕ ಜೀವನದಾಮೋದರ ಮೌಜೊ ಕನ್ನಡ ಕರ್ನಾಟಕದೊಂದಿಗಿನ ಸಂಬಂಧ (ಹೆಚ್ಚಿನ ಮಾಹಿತಿ)ದಾಮೋದರ ಮೌಜೊ ಉಲ್ಲೇಖಗಳುದಾಮೋದರ ಮೌಜೊಕೇಂದ್ರ ಸಾಹಿತ್ಯ ಅಕಾಡೆಮಿಕೊಂಕಣಿಗೋವಜ್ಞಾನಪೀಠ ಪ್ರಶಸ್ತಿ

🔥 Trending searches on Wiki ಕನ್ನಡ:

ಯಮರಾಶಿಕಾದಂಬರಿಸಮುಚ್ಚಯ ಪದಗಳುಸೀತೆಝೊಮ್ಯಾಟೊಭಾಮಿನೀ ಷಟ್ಪದಿಯುಗಾದಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಮಹಿಳೆ ಮತ್ತು ಭಾರತಮಾದಿಗಸಹಕಾರಿ ಸಂಘಗಳುಕರ್ಮಧಾರಯ ಸಮಾಸಪಶ್ಚಿಮ ಬಂಗಾಳಕರ್ನಾಟಕದ ಅಣೆಕಟ್ಟುಗಳುಗ್ರಂಥ ಸಂಪಾದನೆಲೋಹಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಭಾರತದ ರಾಷ್ಟ್ರಪತಿಬಿ.ಎಲ್.ರೈಸ್ಇಂದಿರಾ ಗಾಂಧಿತಿಂಗಳುಭಾರತದ ಸ್ವಾತಂತ್ರ್ಯ ದಿನಾಚರಣೆಜಾಗತಿಕ ತಾಪಮಾನಕರಗಭಾರತೀಯ ನೌಕಾಪಡೆಭಾರತದ ಆರ್ಥಿಕ ವ್ಯವಸ್ಥೆಭಾರತ ರತ್ನನಾಯಿಚಂದ್ರಜಯಮಾಲಾಕನ್ನಡ ರಂಗಭೂಮಿಪ್ರೇಮಾಶಾಸ್ತ್ರೀಯ ಭಾಷೆಗರ್ಭಪಾತದಿವ್ಯಾಂಕಾ ತ್ರಿಪಾಠಿಭಾರತದಲ್ಲಿ ತುರ್ತು ಪರಿಸ್ಥಿತಿಕರ್ನಾಟಕ ಸಂಗೀತಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಆದಿವಾಸಿಗಳುಧರ್ಮಋಗ್ವೇದತತ್ಸಮ-ತದ್ಭವಶ್ರೀಲಂಕಾ ಕ್ರಿಕೆಟ್ ತಂಡಸಿದ್ದರಾಮಯ್ಯಉಪನಯನಚಿತ್ರದುರ್ಗ ಕೋಟೆರೈತಮಹಾಭಾರತಭಾರತದ ಬ್ಯಾಂಕುಗಳ ಪಟ್ಟಿನಂಜನಗೂಡುರಕ್ತಬಸವಲಿಂಗ ಪಟ್ಟದೇವರುಶ್ರೀಶೈಲಕಪ್ಪೆಚಿಪ್ಪುಆದಿಪುರಾಣಪಂಚ ವಾರ್ಷಿಕ ಯೋಜನೆಗಳುಚನ್ನವೀರ ಕಣವಿದಾಸವಾಳರಕ್ತಪಿಶಾಚಿಕ್ರೈಸ್ತ ಧರ್ಮಮಹಾವೀರ ಜಯಂತಿತೀ. ನಂ. ಶ್ರೀಕಂಠಯ್ಯಬೆಂಗಳೂರುಸಂಖ್ಯಾಶಾಸ್ತ್ರಜೀವಸತ್ವಗಳುಜಲ ಮಾಲಿನ್ಯಚಂಪೂಅನುನಾಸಿಕ ಸಂಧಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಗಣೇಶ ಚತುರ್ಥಿಸಾರ್ವಭೌಮತ್ವದೇವತಾರ್ಚನ ವಿಧಿಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಚದುರಂಗಇಮ್ಮಡಿ ಪುಲಕೇಶಿ🡆 More