ದಖ್ಖನ್ ಪೀಠಭೂಮಿ

ದಖ್ಖನ್ ಪೀಠಭೂಮಿ ಅಥವಾ ದಖ್ಖನ್ ಪ್ರಸ್ಥಭೂಮಿ ಭಾರತದ ಒಂದು ವಿಶಾಲವಾದ ಪೀಠಭೂಮಿಯಾಗಿದೆ.

ಈ ಪ್ರದೇಶದ ಹೆಸರನ್ನು ಹಲವಾರು ರೀತಿಯಲ್ಲಿ ಬರೆಯಲಾಗುತ್ತದೆ; ಅವು ದಕ್ಕಿನ-ದಕ್ಕಿನ್, ದಕ್ಖಿನ್-ದಕ್ಖನ್, ದಖನ್-ದಖಿನ್ ಇತ್ಯಾದಿ. ದಖ್ಖನ್ ಪೀಠಭೂಮಿಯು ಭಾರತ ಜಂಬೂದ್ವೀಪದ ಬಹುಪಾಲು ಪ್ರದೇಶವನ್ನು ಆವರಿಸಿದೆ. ರಾಷ್ಟ್ರದ ಮೂರು ಪರ್ವತ ಶ್ರೇಣಿಗಳ ನಡುವೆ ವ್ಯಾಪಿಸಿರುವ ಈ ಪೀಠಭೂಮಿಯು ಎಂಟು ರಾಜ್ಯಗಳಲ್ಲಿ ಹರಡಿದೆ. ಮಧ್ಯಭಾರತದ ಸಾತ್ಪುರ ಪರ್ವತಗಳು, ಪಶ್ಚಿಮ ಘಟ್ಟಗಳು ಹಾಗೂ ಪೂರ್ವ ಘಟ್ಟಗಳನ್ನು ಗಡಿಯಾಗಿ ಹೊಂದಿರುವ ದಖ್ಖನ್ ಪೀಠಭೂಮಿಯು ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಬಹಳಷ್ಟು ಭಾಗ ಮತ್ತು ಆಂಧ್ರಪ್ರದೇಶದ ಕೆಲಭಾಗಗಳನ್ನು ವ್ಯಾಪಿಸಿದೆ. ದಖ್ಖನ್ ಪೀಠಭೂಮಿಯ ಸರಾಸರಿ ಎತ್ತರ ಉತ್ತರದ ಭಾಗಗಳಲ್ಲಿ ೧೦೦ ಮೀ. ಗಳಷ್ಟಿದ್ದರೆ ದಕ್ಷಿಣದ ಭಾಗಗಳಲ್ಲಿ ೧೦೦೦ ಮೀ. ಗಳಷ್ಟು. ಈ ಪ್ರದೇಶವು ಜಗತ್ತಿನಲ್ಲಿ ಭೂಗರ್ಭಶಾಸ್ತ್ರದ ಪ್ರಕಾರ ಅತಿ ಸ್ಥಿರವಾದ ಭೂ ಪ್ರದೇಶಗಳಲ್ಲಿ ಒಂದಾಗಿದೆ. ಭಾರತದ ಹಲವು ಮಹಾನದಿಗಳ ಜಲಾನಯನ ಪ್ರದೇಶಗಳು ದಖ್ಖನ್ ಪೀಠಭೂಮಿಯಲ್ಲಿವೆ. ಗೋದಾವರಿ ನದಿಯು ದಖ್ಖನ್ ಪೀಠಭೂಮಿಯ ಉತ್ತರದಲ್ಲಿ ಹರಿದರೆ ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ಮಧ್ಯಭಾಗದಲ್ಲಿ ಹಾಗೂ ಕಾವೇರಿ ನದಿಯು ದಖ್ಖನ್ ಪೀಠಭೂಮಿಯ ದಕ್ಷಿಣಭಾಗದ ಪ್ರದೇಶಗಳಿಗೆ ನೀರುಣಿಸುತ್ತವೆ. ಈ ಪ್ರದೇಶದಲ್ಲಿ ಇಂಡೋ-ಆರ್ಯನ್ ಮತ್ತು ದ್ರಾವಿಡ ಭಾಷಾ ಸಂಸ್ಕೃತಿಗಳೆರಡರ ಜನರೂ ನೆಲೆಸಿದ್ದಾರೆ. ದಖ್ಖನ್ ಪೀಠಭೂಮಿ ಪ್ರದೇಶದ ಮುಖ್ಯ ಬೆಳೆ ಹತ್ತಿ. ಉಳಿದಂತೆ ಕಬ್ಬು ಹಾಗೂ ಭತ್ತವನ್ನು ಸಹ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಈ ಪ್ರದೇಶದ ಪ್ರಮುಖ ನಗರಗಳೆಂದರೆ - ಬೆಂಗಳೂರು, ಹೈದರಾಬಾದ್, ತಿರುಪತಿ,ಪುಣೆ, ನಾಗಪುರ, ಔರಂಗಾಬಾದ್ ಮತ್ತು ಮೈಸೂರು.

ದಖ್ಖನ್ ಪೀಠಭೂಮಿ
ಭಾರತದ ದಕ್ಷಿಣದಲ್ಲಿ ದಖ್ಖನ್ ಪೀಠಭೂಮಿ

Tags:

ಆಂಧ್ರಪ್ರದೇಶಕಬ್ಬುಕರ್ನಾಟಕಕಾವೇರಿ ನದಿಕೃಷ್ಣಾಜಲಾನಯನ ಪ್ರದೇಶತಿರುಪತಿತುಂಗಭದ್ರಾ ನದಿದ್ರಾವಿಡನಾಗಪುರಪಶ್ಚಿಮ ಘಟ್ಟಗಳುಪುಣೆಬೆಂಗಳೂರುಭತ್ತಭಾರತಮಹಾರಾಷ್ಟ್ರಮೈಸೂರುಸಾತ್ಪುರ ಪರ್ವತಗಳುಹತ್ತಿಹೈದರಾಬಾದ್

🔥 Trending searches on Wiki ಕನ್ನಡ:

ಒಂದನೆಯ ಮಹಾಯುದ್ಧಕನ್ನಡ ಕಾಗುಣಿತಭಾರತದಲ್ಲಿನ ಚುನಾವಣೆಗಳುಮಂಗಳೂರುಹುಲಿಅಂತರರಾಷ್ಟ್ರೀಯ ಸಂಘಟನೆಗಳುಉದಯವಾಣಿದೂರದರ್ಶನರಾಷ್ಟ್ರೀಯ ಜನತಾ ದಳವಿರೂಪಾಕ್ಷ ದೇವಾಲಯಬಿ. ಎಂ. ಶ್ರೀಕಂಠಯ್ಯಪಶ್ಚಿಮ ಘಟ್ಟಗಳುವ್ಯಾಪಾರಬಸವೇಶ್ವರಮನಮೋಹನ್ ಸಿಂಗ್ಸಿಗ್ಮಂಡ್‌ ಫ್ರಾಯ್ಡ್‌ಇತಿಹಾಸಕಬಡ್ಡಿಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಕುಮಾರವ್ಯಾಸಊಳಿಗಮಾನ ಪದ್ಧತಿಕೊಡಗಿನ ಗೌರಮ್ಮಆಯುರ್ವೇದಗ್ರಾಮ ದೇವತೆರಕ್ತಪರಿಸರ ಕಾನೂನುಆದಿಪುರಾಣಉಡುಪಿ ಜಿಲ್ಲೆಶಿಶುನಾಳ ಶರೀಫರುಜವಾಹರ‌ಲಾಲ್ ನೆಹರುಮಧ್ಯಕಾಲೀನ ಭಾರತಸಂಖ್ಯಾಶಾಸ್ತ್ರದೇವನೂರು ಮಹಾದೇವಅಮ್ಮಪಾರಿಜಾತಮಹಾಕವಿ ರನ್ನನ ಗದಾಯುದ್ಧಕನ್ನಡದಲ್ಲಿ ಪ್ರವಾಸ ಸಾಹಿತ್ಯಚ.ಸರ್ವಮಂಗಳವಿಜಯದಾಸರುಅಕ್ಕಮಹಾದೇವಿಶನಿ (ಗ್ರಹ)ಕನ್ನಡದಲ್ಲಿ ನವ್ಯಕಾವ್ಯಸುಧಾ ಚಂದ್ರನ್ಶ್ಯೆಕ್ಷಣಿಕ ತಂತ್ರಜ್ಞಾನಚನ್ನವೀರ ಕಣವಿವಿಶ್ವ ಪರಿಸರ ದಿನಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ವಾಲಿಬಾಲ್ಹೆಚ್.ಡಿ.ಕುಮಾರಸ್ವಾಮಿದ್ವಿಗು ಸಮಾಸಭಾರತೀಯ ಸ್ಟೇಟ್ ಬ್ಯಾಂಕ್ಡೊಳ್ಳು ಕುಣಿತಹಳೆಗನ್ನಡಕೆಂಪುಕನ್ನಡದ ಉಪಭಾಷೆಗಳುವಾಣಿಜ್ಯ(ವ್ಯಾಪಾರ)ವರ್ಗೀಯ ವ್ಯಂಜನಜಾಗತೀಕರಣಕ್ಯಾರಿಕೇಚರುಗಳು, ಕಾರ್ಟೂನುಗಳುಮೈಸೂರು ಅರಮನೆಕೇಸರಿಹಲ್ಮಿಡಿಮುಪ್ಪಿನ ಷಡಕ್ಷರಿಕನ್ನಡದಲ್ಲಿ ಸಾಂಗತ್ಯಕಾವ್ಯಕರ್ಬೂಜಭಾರತದ ಪ್ರಧಾನ ಮಂತ್ರಿಮಾವುಕುಕ್ಕೆ ಸುಬ್ರಹ್ಮಣ್ಯ ದೇವಾಲಯಸಾವಿತ್ರಿಬಾಯಿ ಫುಲೆಜೋಳಸಮುದ್ರಕನ್ನಡ ವ್ಯಾಕರಣಕೈಗಾರಿಕೆಗಳುಗೋಲ ಗುಮ್ಮಟಮದ್ಯದ ಗೀಳುಭಾರತದ ಮುಖ್ಯಮಂತ್ರಿಗಳುಕರ್ಣ🡆 More