ತಾರತಮ್ಯ

ಮಾನವ ಸಾಮಾಜಿಕ ವ್ಯವಹಾರಗಳಲ್ಲಿ, ತಾರತಮ್ಯ ಎಂದರೆ ಒಬ್ಬ ವ್ಯಕ್ತಿಯು ಯಾವ ಗುಂಪು, ವರ್ಗ, ಅಥವಾ ಶ್ರೇಣಿಗೆ ಸೇರಿದ್ದಾನೊ ಎಂದು ಗ್ರಹಿಸಿಲಾಗುತ್ತದೆಯೊ ಅದನ್ನು ಆಧರಿಸಿ ಆ ವ್ಯಕ್ತಿಯ ಕಡೆಗೆ ಮಾಡುವ ವ್ಯವಹಾರ ಅಥವಾ ಅದರ ಆಲೋಚನೆ ಅಥವಾ ಅವನ ಪರವಾಗಿ ಮಾಡುವ ವ್ಯತ್ಯಾಸ.

ಇವುಗಳಲ್ಲಿ ವಯಸ್ಸು, ಬಣ್ಣ, ಕ್ಷಮೆ ನೀಡಲಾದ ಅಥವಾ ದಾಖಲೆ ತಡೆಹಿಡಿಯಲಾದ ದೋಷ ನಿರ್ಣಯಗಳು, ಅಂಗವೈಕಲ್ಯ, ಜನಾಂಗೀಯತೆ, ಕುಟುಂಬದ ಸ್ಥಾನಮಾನ, ಲಿಂಗ ಗುರುತು, ಆನುವಂಶಿಕ ಗುಣಲಕ್ಷಣಗಳು, ವೈವಾಹಿಕ ಸ್ಥಿತಿ, ರಾಷ್ಟ್ರೀಯತೆ, ಜನಾಂಗ, ಧರ್ಮ, ಲಿಂಗ ಮತ್ತು ಲೈಂಗಿಕ ದೃಷ್ಟಿಕೋನ ಸೇರಿವೆ. ತಾರತಮ್ಯವು ಒಂದು ನಿರ್ದಿಷ್ಟ ಗುಂಪು ಅಥವಾ ಸಾಮಾಜಿಕ ವರ್ಗದಲ್ಲಿ ಅವರುಗಳ ವಾಸ್ತವಿಕ ಅಥವಾ ಗ್ರಹಿಸಿದ ಸದಸ್ಯತ್ವವನ್ನು ಆಧರಿಸಿ "ಜನರನ್ನು ಸಾಮಾನ್ಯವಾಗಿ ನಡೆಸಿಕೊಳ್ಳುವ ರೀತಿಗಿಂತ ಹೆಚ್ಚು ಕೆಟ್ಟದಾದ ರೀತಿಯಲ್ಲಿ" ಒಬ್ಬ ವ್ಯಕ್ತಿ ಅಥವಾ ಗುಂಪಿನತ್ತ ವ್ಯವಹಾರವನ್ನು ಒಳಗೊಂಡಿರುತ್ತದೆ. ಇದು ಗುಂಪಿನ ಆರಂಭಿಕ ಪ್ರತಿಕ್ರಿಯೆ ಅಥವಾ ಗುಂಪಿನ ನಾಯಕ ಅಥವಾ ಗುಂಪಿನ ಕಡೆಗೆ ವ್ಯಕ್ತಿಯ ವಾಸ್ತವಿಕ ವರ್ತನೆ ಮೇಲೆ ಪ್ರಭಾವ ಬೀರುವತ್ತ ಹೋಗುವ ಪರಸ್ಪರ ಕ್ರಿಯೆ, ಮತ್ತೊಂದು ಗುಂಪಿಗೆ ಲಭ್ಯವಿರುವ ಅವಕಾಶಗಳು ಅಥವಾ ಸವಲತ್ತುಗಳಿಂದ ಒಂದು ಗುಂಪಿನ ಸದಸ್ಯರನ್ನು ನಿರ್ಬಂಧಿಸುವುದು ಒಳಗೊಂಡಿರುತ್ತದೆ. ಇದರಿಂದ ತರ್ಕಬದ್ಧವಲ್ಲದ ಅಥವಾ ವಿಚಾರಹೀನ ತೀರ್ಮಾನ ಮಾಡುವಿಕೆಯನ್ನು ಆಧರಿಸಿ ವ್ಯಕ್ತಿ ಅಥವಾ ವಸ್ತುಗಳ ಬಹಿಷ್ಕರಣಕ್ಕೆ ಕಾರಣವಾಗುತ್ತದೆ.

ತಾರತಮ್ಯಯುಕ್ತ ಸಂಪ್ರದಾಯಗಳು, ನೀತಿಗಳು, ವಿಚಾರಗಳು, ಅಭ್ಯಾಸಗಳು ಮತ್ತು ಕಾನೂನುಗಳು ಅನೇಕ ದೇಶಗಳು ಮತ್ತು ವಿಶ್ವದ ಪ್ರತಿಯೊಂದು ಭಾಗದಲ್ಲಿನ ಸಂಸ್ಥೆಗಳಲ್ಲಿ ಉಪಸ್ಥಿತವಿವೆ, ತಾರತಮ್ಯವನ್ನು ಸಾಮಾನ್ಯವಾಗಿ ಕೀಳೆಂದು ಕಾಣಲಾಗುವಂಥ ಪ್ರಾಂತ್ಯಗಳನ್ನು ಒಳಗೊಂಡು. ಕೆಲವು ಸ್ಥಳಗಳಲ್ಲಿ, ತಾರತಮ್ಯದ ಪ್ರಸಕ್ತ ಅಥವಾ ಹಿಂದಿನ ಬಲಿಪಶುಗಳು ಆಗಿದ್ದವರು ಎಂದು ನಂಬಲಾದವರಿಗೆ ಪ್ರಯೋಜನ ನೀಡಲು ಪಾಲಿನಂತಹ/ದೇಯಾಂಶಗಳಂತಹ ವಿವಾದಾತ್ಮಕ ಪ್ರಯತ್ನಗಳನ್ನು ಬಳಸಲಾಗಿದೆ—ಆದರೆ ಇವನ್ನು ಕೆಲವೊಮ್ಮೆ ವಿಪರ್ಯಯ ತಾರತಮ್ಯ ಎಂದು ಕರೆಯಲಾಗಿದೆ.

ಯಾರಾದರೂ ಅನಾಥ ಮಕ್ಕಳಿಗೆ ನೆರವಾಗಲು ಕೊಡುಗೆ ನೀಡಲು ತೀರ್ಮಾನಿಸಿದರೆ, ಆದರೆ ಜನಾಂಗೀಯ ದೃಷ್ಟಿಕೋನ ಹೊಂದಿ ಕರಿಯ ಮಕ್ಕಳಿಗೆ ಕಡಿಮೆ ಕೊಡುಗೆ ನೀಡಲು ತೀರ್ಮಾನಿಸಿದರೆ, ಯಾವ ಜನರ ವಿರುದ್ಧ ಅವರು ತಾರತಮ್ಯ ನಡೆಸುತ್ತಿದ್ದಾರೊ ಅವರು ವಾಸ್ತವಿಕವಾಗಿ ಕೊಡುಗೆ ಪಡೆಯುವುದರಿಂದ ಪ್ರಯೋಜನ ಹೊಂದುತ್ತಿದ್ದಾರೆ ಎಂಬುದರ ಹೊರತಾಗಿಯೂ ಅಂಥವರು ತಾರತಮ್ಯಯುಕ್ತ ರೀತಿಯಲ್ಲಿ ಕಾರ್ಯನಡೆಸುತ್ತಿರುವರು. ಇದರ ಜೊತೆಗೆ ತಾರತಮ್ಯವು ದಬ್ಬಾಳಿಕೆಯ ಮೂಲವಾಗಿ ಬೆಳೆಯುತ್ತದೆ. ಇದು ಯಾರನ್ನಾದರೂ ಅಮಾನವೀಯವಾಗಿ ನಡೆಸಿಕೊಳ್ಳುವಷ್ಟು ಮತ್ತು ಕೀಳಾಗಿ ಕಾಣುವಷ್ಟು ಭಿನ್ನ ಎಂದು ಗುರುತಿಸುವ ಕ್ರಿಯೆಗೆ ಸಮಾನವಾಗಿದೆ.

ಉಲ್ಲೇಖಗಳು

Tags:

ಲಿಂಗ

🔥 Trending searches on Wiki ಕನ್ನಡ:

ಬಾಬರ್ಶಾಂತಲಾ ದೇವಿಎಕರೆಟಿಪ್ಪು ಸುಲ್ತಾನ್ರಕ್ತಪಿಶಾಚಿಚಾಣಕ್ಯಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಒಗಟುಹಳೇಬೀಡುಬೆಂಗಳೂರುಮಯೂರಶರ್ಮಸತ್ಯ (ಕನ್ನಡ ಧಾರಾವಾಹಿ)ಪರಿಸರ ರಕ್ಷಣೆಸಮುಚ್ಚಯ ಪದಗಳುಹೈನುಗಾರಿಕೆಭಾರತ ಸಂವಿಧಾನದ ಪೀಠಿಕೆಮಾನವನ ವಿಕಾಸಕೇಸರಿ (ಬಣ್ಣ)ಕದಂಬ ಮನೆತನಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಹಂಸಲೇಖಭರತೇಶ ವೈಭವಧಾರವಾಡಚಂಪಕ ಮಾಲಾ ವೃತ್ತರಾವಣದೀಪಾವಳಿಹಸ್ತ ಮೈಥುನಭಾರತ ಬಿಟ್ಟು ತೊಲಗಿ ಚಳುವಳಿಮೊದಲನೆಯ ಕೆಂಪೇಗೌಡರಾಮಾಚಾರಿ (ಕನ್ನಡ ಧಾರಾವಾಹಿ)ನುಗ್ಗೆಕಾಯಿಗಣರಾಜ್ಯೋತ್ಸವ (ಭಾರತ)ಕನಕದಾಸರುರಕ್ತವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಜಾಗತಿಕ ತಾಪಮಾನಶ್ಯೆಕ್ಷಣಿಕ ತಂತ್ರಜ್ಞಾನಭಾರತೀಯ ಭೂಸೇನೆನಾಡ ಗೀತೆವಿನಾಯಕ ಕೃಷ್ಣ ಗೋಕಾಕಕರ್ನಾಟಕ ಸಂಗೀತತೀ. ನಂ. ಶ್ರೀಕಂಠಯ್ಯಜಾನಪದಹಿರಿಯಡ್ಕಭಾವನಾ(ನಟಿ-ಭಾವನಾ ರಾಮಣ್ಣ)ಜ್ಯೋತಿಬಾ ಫುಲೆಬ್ಲಾಗ್ಪಂಜೆ ಮಂಗೇಶರಾಯ್ಮಾಧ್ಯಮಭಾರತದ ಬುಡಕಟ್ಟು ಜನಾಂಗಗಳುಕನಕಪುರದೇವರ/ಜೇಡರ ದಾಸಿಮಯ್ಯಗಿಡಮೂಲಿಕೆಗಳ ಔಷಧಿಪರೀಕ್ಷೆಉಗ್ರಾಣಶಬ್ದಭದ್ರಾವತಿಕೋಲಾರಶನಿತಾಳೆಮರಪಾಲಕ್ಭಾಷೆಗದ್ಯಊಟಭಾರತದ ಪಂಚಾಯತ್ ರಾಜ್ ವ್ಯವಸ್ಥೆಬಾಲ್ಯ ವಿವಾಹಕರ್ನಾಟಕಕಾಫಿರ್ರಾಷ್ಟ್ರೀಯ ಶಿಕ್ಷಣ ನೀತಿನಯಸೇನಯಜಮಾನ (ಚಲನಚಿತ್ರ)ಧರ್ಮಕರ್ನಾಟಕದಲ್ಲಿ ಪಂಚಾಯತ್ ರಾಜ್ಶ್ರವಣಬೆಳಗೊಳಯೋಗ ಮತ್ತು ಅಧ್ಯಾತ್ಮವಿಶ್ವ ಪರಿಸರ ದಿನಕನ್ನಡದಲ್ಲಿ ಕಾದಂಬರಿ ಸಾಹಿತ್ಯಸಂಶೋಧನೆದರ್ಶನ್ ತೂಗುದೀಪ್🡆 More