ತಂಬಾಕು ಸೇವನೆಧೂಮಪಾನ

ತಂಬಾಕು ಉರಿಸಿ ಅದರ ಹೊಗೆಯ ರುಚಿ ತೆಗೆದುಕೊಳ್ಳುವ ಅಥವಾ ಉಸಿರಿನ ಮೂಲಕ ಒಳತೆಗೆದುಕೊಳ್ಳುವುದನ್ನು ತಂಬಾಕು ಸೇವನೆ ಯೆಂದು ಕರೆಯಲಾಗುತ್ತದೆ.

ಈ ಅಭ್ಯಾಸವು ಕ್ರಿ.ಪೂ 5000–3000ದಷ್ಟು ಹಿಂದೆಯೇ ರೂಢಿಯಲ್ಲಿತ್ತು BC. ಹಲವಾರು ನಾಗರೀಕತೆಗಳ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಧೂಪವುರಿಸುತ್ತಿದ್ದು, ಇದು ಮುಂದೆ ಉಪಭೋಗದ ಅಥವಾ ಸಾಮಾಜಿಕ ಸಾಧನವಾಗಿ ಬಳಕೆಯಾಗತೊಡಗಿತು. ಪ್ರಾಚೀನ ವಿಶ್ವದಲ್ಲಿ ತಂಬಾಕನ್ನು 1500ರ ಅಂತ್ಯಭಾಗದ ವೇಳೆಗೆ ಪರಿಚಯಿಸಲಾಯಿತು ಮತ್ತು ಇದು ವ್ಯಾಪಾರ ಮಾರ್ಗಗಳ ಮುಖಾಂತರ ಬೇರೆ ಸ್ಥಳಗಳನ್ನು ತಲುಪತೊಡಗಿತು. ಈ ವಸ್ತುವು ಆಗಾಗ್ಗೆ ಟೀಕೆಗೆ ಒಳಗಾದರೂ ಕೂಡ ಅದರ ಜನಪ್ರಿಯತೆ ಹೆಚ್ಚುತ್ತಲೇ ಹೋಯಿತು. ಜರ್ಮನ್ ವಿಜ್ಞಾನಿಗಳು 1920ರ ದಶಕದ ಅಂತ್ಯಭಾಗದಲ್ಲಿ ಧೂಮಪಾನ ಮತ್ತು ಶ್ವಾಸಕೋಶದ ಕ್ಯಾನ್ಸರ್ ನಡುವಿನ ಸಂಬಂಧವನ್ನು ಪತ್ತೆಹಚ್ಚಿದ್ದರಿಂದ ಆಧುನಿಕ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಧೂಮಪಾನ-ವಿರೋಧೀ ಚಳುವಳಿ ಆರಂಭವಾಯಿತು. ಆದರೆ, ಈ ಚಳುವಳಿಯು ಎರಡನೇ ವಿಶ್ವಯುದ್ಧದ ಸಮಯದಲ್ಲಿ ವಿರೋಧಪಕ್ಷಗಳನ್ನು ತಲುಪದೇ ಹೋದ ಕಾರಣದಿಂದಾಗಿ ದುರ್ಬಲಗೊಂಡು ಬಹುಬೇಗನೆ ಜನಪ್ರಿಯತೆ ಕಳೆದುಕೊಂಡಿತು. 1950ರಲ್ಲಿ ಮತ್ತೆ ಆರೋಗ್ಯ ಪರಿಣತರು ಧೂಮಪಾನ ಮತ್ತು ಶ್ವಾಸಕೋಶದ ಕ್ಯಾನ್ಸರ್ ನಡುವೆ ಸಂಬಂಧವಿದೆಯೆಂದು ಸೂಚಿಸತೊಡಗಿದರು. 1980ರ ದಶಕದಲ್ಲಿ ದೊರಕಿದ ವೈಜ್ಞಾನಿಕ ಸುಳಿವಿನಿಂದ ಈ ರೂಢಿಯ ವಿರುದ್ಧ ರಾಜಕೀಯ ಕ್ರಮಗಳನ್ನು ಕೈಗೊಳ್ಳುವಂತಾಯಿತು. 1965ರ ನಂತರ ತಂಬಾಕು ಸೇವನೆಯು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಏರಿಕೆಯಾಗಿವೆ ಇಲ್ಲವೇ ಇಳಿಕೆಯಾಗಿವೆ. ಆದರೆ ಅಭಿವೃದ್ಧಿಶೀಲ ಪ್ರಪಂಚದಲ್ಲಿ ಈ ಸಂಖ್ಯೆಯು ಏರಿಕೆಯಾಗುತ್ತಲೆ ಇದೆ. ಧೂಮಪಾನವು ತಂಬಾಕನ್ನು ಸೇವಿಸುವ ಅತ್ಯಂತ ಪ್ರಚಲಿತ ವಿಧಾನವಾಗಿದೆ ಮತ್ತು ಧೂಮಪಾನದ ಮೂಲಕ ಸೇವಿಸಲ್ಪಡುವ ಪದಾರ್ಥಗಳಲ್ಲಿ ತಂಬಾಕು ಅತ್ಯಂತ ಪ್ರಚಲಿತ ಪದಾರ್ಥವಾಗಿದೆ. ಈ ಕೃಷಿ ಉತ್ಪನ್ನವನ್ನು ಸಾಧಾರಣವಾಗಿ ಇತರ ಪದಾರ್ಥಗಳೊಂದಿಗೆ ಮಿಶ್ರ ಮಾಡಿ ನಂತರ ಅದನ್ನು ಪೈರೋಲೈಜ್ (ಅಗ್ನಿಯ ಸಂಪರ್ಕ ನೀಡುವುದು) ಮಾಡಲಾಗುವುದು. ಇದರಿಂದ ಹೊರಡುವ ಹೊಗೆಯನ್ನು ಉಚ್ಛ್ವಾಸದ ಮೂಲಕ ಒಳತೆಗೆದುಕೊಂಡಾಗ ಇದರ ಸಕ್ರಿಯ ವಸ್ತುಸಾರಗಳು ಆಲ್ವಿಯೋಲೈ ಮೂಲಕ ಶ್ವಾಸಕೋಶದಲ್ಲಿ ಹೀರಲ್ಪಡುತ್ತವೆ. ಈ ಸಕ್ರಿಯ ವಸ್ತುಸಾರಗಳು ನರಗಳ ತುದಿಗಳಲ್ಲಿ ರಾಸಾಯನಿಕ ಕ್ರಿಯೆಗಳನ್ನುಂಟುಮಾಡಿ ಹೃದಯ ಬಡಿತದ ವೇಗ, ನೆನಪಿನ ಶಕ್ತಿ, ಸಕ್ರಿಯತೆ, ಹಾಗೂ ಪ್ರತಿಕ್ರಿಯಿಸುವ ಸಮಯದಲ್ಲಿ ಏರಿಕೆಯನ್ನುಂಟುಮಾಡುತ್ತವೆ. ಡೋಪಾಮೈನ್ ಮತ್ತು ಇದಾದ ನಂತರ ಎಂಡಾರ್ಫಿನ್ಗಳು ಬಿಡುಗಡೆಯಾಗುತ್ತವೆ ಮತ್ತು ಇವನ್ನು ಹೆಚ್ಚಾಗಿ ಸುಮ್ಮಾನವನ್ನುಂಟುಮಾಡುವ ಪದಾರ್ಥಗಳೆಂದು ಹೇಳಲಾಗುತ್ತದೆ. 2000ದ ಅಂಕಿ ಅಂಶಗಳ ಪ್ರಕಾರ ಸುಮಾರು 1.22 ಬಿಲಿಯನ್ ಜನರು ಧೂಮಪಾನದ ರೂಢಿಯನ್ನಿಟ್ಟುಕೊಂಡಿದ್ದರು. ಹೆಂಗಸರಿಗಿಂತ ಗಂಡಸರು ಧೂಮಪಾನ ಮಾಡುವ ಸಾಧ್ಯತೆಗಳು ಜಾಸ್ತಿ, ಆದರೂ ವಯಸ್ಸು ಕಡಿಮೆಯಾದಂತೆಯೇ ಈ ಅಂತರವು ಸಹ ಕಡಿಮೆಯಾಗುತ್ತದೆ. ಧೂಮಪಾನ ಮಾಡುವ ಸಾಧ್ಯತೆಗಳು ಶ್ರೀಮಂತವರ್ಗಕ್ಕಿಂತ ಬಡವರ್ಗದಲ್ಲಿ ಹೆಚ್ಚು, ಹಾಗೂ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಅಭಿವೃದ್ಧಿಶೀಲ ದೇಶಗಳ ಜನರು ಹೆಚ್ಚು ಧೂಮಪಾನ ಮಾಡುತ್ತಾರೆ. ಹೆಚ್ಚಿನ ಧೂಮಪಾನಿಗಳು ಹದಿಹರೆಯ ಅಥವಾ ತರುಣಾವಸ್ಥೆಯಲ್ಲಿ ಆರಂಭ ಮಾಡುತ್ತಾರೆ. ಸಾಧಾರಣವಾಗಿ ಮೊದಮೊದಲ ಹಂತಗಳಲ್ಲಿ ಧೂಮಪಾನದಿಂದ ಆಹ್ಲಾದದ ಭಾವನೆಗಳು ಉಂಟಾಗಿ ಧನಾತ್ಮಕ ಮರುಪಯೋಗಕ್ಕೆ ಕಾರಣವಾಗುತ್ತವೆ. ಕೆಲವು ವ್ಯಕ್ತಿಗಳು ಹಲವು ವರ್ಷಗಳ ಕಾಲ ಧೂಮಪಾನ ಮಾಡುತ್ತ ಹೋದಹಾಗೇ ಉಪಸಂಹರಣದ ಲಕ್ಷಣಗಳಿಂದ ತಪ್ಪಿಸಿಕೊಳ್ಳುವುದು ಮತ್ತು ಋಣಾತ್ಮಕ ಮರುಪಯೋಗಗಳು ಮುಖ್ಯವಾದ ಪ್ರೇರಕಗಳಾಗುತ್ತವೆ

ಇತಿಹಾಸ

ಮೊದಲ ಬಳಕೆ

ತಂಬಾಕು ಸೇವನೆಧೂಮಪಾನ 
ಅಜ್‌ಟೆಕ್ ಮಹಿಳೆಯರಿಗೆ ಔತಣಕೂಟವೊಂದರಲ್ಲಿ ಭೋಜನಕ್ಕೆ ಮೊದಲು ಹೂವುಗಳು ಮತ್ತು ಧೂಮಪಾನದ ನಳಿಕೆಗಳನ್ನು ನೀಡಲಾಗುತ್ತಿರುವುದು, ಫ್ಲೋರೆಂಟೈನ್ ಕೋಡೆಕ್ಸ್, 16ನೇ ಶತಮಾನ.

ಧೂಮಪಾನದ ಇತಿಹಾಸವು ಕ್ರಿಸ್ತಪೂರ್ವ 5000–3000ದಷ್ಟು ಹಿಂದಕ್ಕೆ ದಕ್ಷಿಣ ಅಮೆರಿಕಾದಲ್ಲಿ ತಂಬಾಕನ್ನು ಕೃಷಿ ಉತ್ಪನ್ನದಂತೆ ಬೆಳೆಯುತ್ತಿದ್ದಾಗಿನ ದಿನಗಳಿಗೆ ಹೋಗುತ್ತದೆ; ಅನಂತರ ಅಕಸ್ಮಾತ್ತಾಗಿ ಬೆಂಕಿ ತಗುಲಿದ್ದರಿಂದಲೋ ಅಥವಾ ಇದರ ಸೇವನೆಯನ್ನು ಕಂಡುಹಿಡಿಯುವ ಹಲವು ಪ್ರಯತ್ನಗಳಲ್ಲೊಂದಾಗಿಯೋ ಇದನ್ನು ಹೊತ್ತಿಸುವ ಮೂಲಕ ಸೇವಿಸುವುದು ಆರಂಭವಾಯಿತು. ಈ ರೂಢಿಯು ಶಾಮನಿಸ್ಟಿಕ್ ಆಚರಣೆಗಳಲ್ಲಿ ಸ್ಥಾನವನ್ನು ಪಡೆದುಕೊಂಡಿತು.[page needed] ಬ್ಯಾಬಿಲೋನಿಯನ್ನರು, ಭಾರತೀಯರು ಮತ್ತು ಚೀನೀಯರೇ ಮುಂತಾದ ಹಲವಾರು ನಾಗರೀಕತೆಗಳ ಧಾರ್ಮಿಕ ಆಚರಣೆಗಳ ಅಂಗವಾಗಿ ಧೂಪ ಹಾಕಲಾಗುತ್ತಿತ್ತು ಮತ್ತು ಈ ಆಚರಣೆಯು ಇಸ್ರೇಲೀಯರು ಮತ್ತು ನಂತರದ ಕ್ಯಾಥೊಲಿಕ್ ಮತ್ತು ಆರ್ಥೋಡಾಕ್ಸ್ ಕ್ರಿಶ್ಚಿಯನ್ ಚರ್ಚುಗಳಲ್ಲಿಯೂ ರೂಢಿಗೆ ಬಂದಿತು. ಅಮೆರಿಕಾದಲ್ಲಿ ಧೂಮಪಾನದ ಪದ್ಧತಿಯು ಬಹುಶಃ ಶಾಮನ್ಗಳ ಧೂಪಹಾಕುವ ಆಚರಣೆಗಳಿಂದ ಆರಂಭವಾಗಿರಬಹುದಾದರೂ ನಂತರ ಇದನ್ನು ಉಪಭೋಗದ ಅಥವಾ ಸಾಮಾಜಿಕ ಸಾಧನದ ರೂಪದಲ್ಲಿ ಬಳಸುವುದು ಆರಂಭವಾಯಿತು. ತಂಬಾಕು ಮತ್ತು ಹಲವಾರು ಭ್ರಾಮಕ ಮಾದಕವಸ್ತುಗಳ ಧೂಮಪಾನವನ್ನು ಸಮಾಧಿಸ್ಥಿತಿಗೆ ಹೋಗಿ ಆತ್ಮಗಳ ಪ್ರಪಂಚದೊಡನೆ ಸಂಪರ್ಕ ಸಾಧಿಸಲು ಬಳಕೆ ಮಾಡಲಾಗುತ್ತಿತ್ತು. ಉತ್ತರ ಅಮೆರಿಕದ ಪೂರ್ವಭಾಗದ ಬುಡಕಟ್ಟುಗಳ ಜನರು ತಂಬಾಕನ್ನು ಯಾವಾಗಲು ದೊಡ್ಡ ಗಂಟುಗಳಲ್ಲಿ ಕಟ್ಟಿಕೊಂಡು ವ್ಯಾಪಾರವಿನಿಮಯಕ್ಕಾಗಿ ಇಟ್ಟುಕೊಳ್ಳುತ್ತಿದ್ದುದಲ್ಲದೆ ಪವಿತ್ರವೆಂದು ಪರಿಗಣಿಸಲಾಗುವ ಸಮಾರಂಭಗಳಲ್ಲಿ, ಮತ್ತು ವ್ಯಾಪಾರವೊಂದನ್ನು ಮುಗಿಸಿದ ಸಂಕೇತವಾಗಿ ಆಗಾಗ ಕೊಳವೆಗಳ ಮೂಲಕ ಅದರ ಧೂಮಪಾನವನ್ನೂ ಮಾಡುತ್ತಿದ್ದರು; ಮತ್ತು ಧೂಮಪಾನವು ಬಾಲ್ಯವನ್ನೂ ಒಳಗೊಂಡಂತೆ ಜೀವನದ ಎಲ್ಲಾ ಹಂತಗಳಲ್ಲಿಯೂ ಬಳಸಲ್ಪಡುತ್ತಿತ್ತು.[page needed] ತಂಬಾಕು ಸೃಷ್ಟಿಕರ್ತನ ಕೊಡುಗೆಯೆಂದೂ, ಸೇದಿ ಹೊರಬಿಡಲಾದ ತಂಬಾಕಿನ ಹೊಗೆಯು ಮನಸ್ಸಿನ ಯೋಚನೆಗಳು ಮತ್ತು ಪ್ರಾರ್ಥನೆಗಳನ್ನು ಸ್ವರ್ಗಕ್ಕೆ ಒಯ್ಯುವ ಸಾಮರ್ಥ್ಯವನ್ನು ಹೊಂದಿದೆಯೆಂದೂ ನಂಬಲಾಗುತ್ತಿತ್ತು. ಧೂಮಪಾನಕ್ಕೆ ಮಾತ್ರವಲ್ಲದೆ ತಂಬಾಕಿನಿಂದ ಹಲವಾರು ಔಷಧೀಯ ಉಪಯೋಗಗಳೂ ಇದ್ದವು. ನೋವು ನಿವಾರಣೆಯಲ್ಲಿ ಇದನ್ನು ಕಿವಿನೋವು ಮತ್ತು ಹಲ್ಲುನೋವುಗಳ ಉಪಶಮನಕ್ಕೆ ಮತ್ತು ಗಾಯಗಳ ಮೇಲೆ ಸವರುವ ಮುಲಾಮುಗಳಲ್ಲಿ ಬಳಸಲಾಗುತ್ತಿತ್ತು. ಮರುಭೂಮಿಯ ಇಂಡಿಯನರಲ್ಲಿ ತಂಬಾಕನ್ನು ಶೀತವನ್ನು ಗುಣಪಡಿಸಲು, ವಿಶೇಷವಾಗಿ ಮರುಭೂಮಿಯ ಸೇಜ್ ಸಸ್ಯವಾದ Salvia Dorrii ಯ ಎಲೆಗಳ ಜತೆಗೆ ಮಿಶ್ರ ಮಾಡಿ ಬಳಸಲಾಗುತ್ತಿತ್ತು, ಇಲ್ಲವೇ ಇಂಡಿಯನ್ ಬಾಲ್ಸಾಮ್‌ನ ಬೇರು ಅಥವಾ ಕಾಫ್ ರೂಟ್‌ ಎಂದು ಕರೆಯಲಾಗುವ Leptotaenia multifida ಜತೆಗೆ ತಂಬಾಕನ್ನು ಬೆರೆಸಿದಲ್ಲಿ ಅಸ್ತಮಾ ಮತ್ತು ಟ್ಯೂಬರ್‌ಕ್ಯುಲೋಸಿಸ್ ಕಾಯಿಲೆಯುಳ್ಳವರಿಗೆ ಬಹಳ ಒಳ್ಳೆಯದೆಂದು ಹೇಳಲಾಗುತ್ತಿತ್ತು.

ಜನಪ್ರಿಯತೆ

ತಂಬಾಕು ಸೇವನೆಧೂಮಪಾನ 
ಮುಹಮ್ಮದ್ ಕಾಸಿಮ್ ವಿರಚಿತ ಧೂಮಪಾನ ಮಾಡುತ್ತಿರುವ ಒಬ್ಬ ಪರ್ಷಿಯನ್ ಹುಡುಗಿಯ ಚಿತ್ರ.ಇಸ್‌ಫಹಾನ್, 1600ರ ಸುತ್ತಮುತ್ತ

1612ರಲ್ಲಿ, ಜೇಮ್ಸ್‌ಟೌನ್ ವಸಾಹತನ್ನು ನೆಲೆಗೊಳಿಸಿದ ಆರು ವರ್ಷಗಳ ನಂತರ, ತಂಬಾಕನ್ನು ಯಶಸ್ವಿಯಾಗಿ ಆರ್ಥಿಕ ಬೆಳೆಯ ರೂಪದಲ್ಲಿ ಬೆಳೆದ ಹೆಗ್ಗಳಿಕೆ ಜಾನ್ ರೋಲ್ಫ್ ಎಂಬ ಸೆಟ್ಲರ್‌ನಿಗೆ ಸಲ್ಲುತ್ತದೆ. ಇದರ ಜನಪ್ರಿಯತೆ ಬಹಳ ಬೇಗ ಹರಡಿ ಇದನ್ನು "ಕಂದು ಚಿನ್ನ"ವೆಂದು ಕರೆಯಲಾಯಿತು ಮತ್ತು ತನ್ನ ಚಿನ್ನದ ಯಾತ್ರೆಗಳಿಂದ ಸಂಪೂರ್ಣವಾಗಿ ಬಸವಳಿದುಹೋಗಿದ್ದ ವರ್ಜೀನಿಯಾ ಜಾಯ್ನ್ ಸ್ಟಾಕ್ ಕಂಪೆನಿಯು ಚೇತರಿಸಿಕೊಳ್ಳಲು ಕಾರಣವಾಯಿತು. ಪ್ರಾಚೀನ ವಿಶ್ವದ ಬೇಡಿಕೆಯನ್ನು ಪೂರೈಸುವ ಸಲುವಾಗಿ ತಂಬಾಕನ್ನು ಮತ್ತೆಮತ್ತೆ ಬೆಳೆಯತೊಡಗಿದ್ದರಿಂದಾಗಿ ಮಣ್ಣಿನ ಸಾರವು ಬರಿದಾಗುವಂತಾಯಿತು. ಇದು ಭೂಖಂಡದ ಅಪರಿಚಿತ ಪೂರ್ವಭಾಗದೆಡೆ ನೆಲೆಯನ್ನು ವಿಸ್ತರಿಸಲು ಕಾರಣವಾಯಿತು ಮತ್ತು ಇದರಿಂದಾಗಿ ತಂಬಾಕಿನ ಉತ್ಪಾದನೆಯಲ್ಲಿ ವಿಸ್ತರಣೆಯುಂಟಾಯಿತು. ಬೇಕನ್ಸ್ ಕ್ರಾಂತಿಯವರೆಗೂ ಕರಾರಿನ ಗುಲಾಮಗಿರಿಯು ಪ್ರಧಾನ ಕಾರ್ಮಿಕ ವ್ಯವಸ್ಥೆಯಾಗಿದ್ದಿತು ಮತ್ತು ನಂತರ ಗಮನವು ಗುಲಾಮಗಿರಿಯೆಡೆಗೆ ಹೊರಳಿತು. ಅಮೆರಿಕನ್ ಕ್ರಾಂತಿಯ ನಂತರ ಗುಲಾಮಗಿರಿಯು ಲಾಭದಾಯಕವಲ್ಲ ಎಂದು ಭಾವಿಸಲಾದ್ದರಿಂದಾಗಿ ಈ ಪ್ರವೃತ್ತಿಯು ಕ್ರಮೇಣ ಕಡಿಮೆಯಾಯಿತು. ಆದರೆ 1794ರಲ್ಲಿ ಕಾಟನ್ ಜಿನ್‍ನ ಸಂಶೋಧನೆಯಾದ ನಂತರ ಗುಲಾಮಗಿರಿಯು ಮತ್ತೆ ಆರಂಭವಾಯಿತು.[page needed] ಫ್ರೆಂಚ್ ನಾಗರಿಕ ಜಾನ್ ನಿಕೋಟ್ (ಈತನ ಹೆಸರಿನಿಂದ ನಿಕೋಟಿನ್ ಎಂಬ ಪದ ಅಸ್ತಿತ್ವಕ್ಕೆ ಬಂದಿತು) 1560ರಲ್ಲಿ ತಂಬಾಕನ್ನು ಫ್ರಾನ್ಸ್‌ಗೆ ಪರಿಚಯಿಸಿದನು ಮತ್ತು ಇದರ ನಂತರ ತಂಬಾಕು ಇಂಗ್ಲೆಂಡ್‌ ಅನ್ನು ತಲುಪಿತು. ಆಂಗ್ಲ ನಾಗರಿಕನೊಬ್ಬನು ಧೂಮಪಾನ ಮಾಡುವ ಬಗೆಗಿನ ಮೊದಲ ವರದಿಯು 1556ರಲ್ಲಿ ಬ್ರಿಸ್ಟಲ್‌ನ ನಾವಿಕನೊಬ್ಬನ ಬಗ್ಗೆಯಾಗಿದೆ ಮತ್ತು ಅದರ ಪ್ರಕಾರ ಆತ "ಮೂಗಿನ ಹೊಳ್ಳೆಗಳಿಂದ ಹೊಗೆಯನ್ನು ಹೊರಗೆ ಬಿಡುತ್ತಿದ್ದನು." ಟೀ, ಕಾಫಿ ಮತ್ತು ಅಫೀಮುಗಳಂತೆಯೇ ತಂಬಾಕು ಕೂಡ ಮೊದಲು ಔಷಧೀಯವಾಗಿದ್ದು ನಂತರ ಅಮಲು ಬರಿಸುವ ಪದಾರ್ಥವಾಗಿ ಬಳಸಲ್ಪಡಲಾರಂಭಿಸಿತು. ತಂಬಾಕನ್ನು 1600ರ ಹೊತ್ತಿಗೆ ಫ್ರೆಂಚ್ ವರ್ತಕರು ಇಂದಿನ ಗ್ಯಾಂಬಿಯಾ ಮತ್ತು ಸೆನೆಗಲ್ಗಳಲ್ಲಿ ಪರಿಚಯಿಸಿದರು. ಇದೇ ಹೊತ್ತಿಗೆ ಮೊರೋಕ್ಕೋದಿಂದ ಟಿಂಬಕ್ಟುನ ಸುತ್ತಮುತ್ತಲ ಪ್ರದೇಶಗಳಿಗೆ ಬಂದ ಕ್ಯಾರವಾನ್‌ಗಳು ಮತ್ತು ಪೋರ್ಚುಗೀಸರು ಉತ್ಪನ್ನವನ್ನು (ಮತ್ತು ಸಸ್ಯವನ್ನು) ದಕ್ಷಿಣ ಆಫ್ರಿಕಾಗೆ ತಂದರು ಮತ್ತು 1650ರ ಹೊತ್ತಿಗೆ ಇದು ಆಫ್ರಿಕಾದ ಎಲ್ಲೆಡೆ ಬಹಳ ಜನಪ್ರಿಯವಾಗುವಂತೆ ಮಾಡಿದರು. ತಂಬಾಕು ಪ್ರಾಚೀನ ವಿಶ್ವಕ್ಕೆ ಪರಿಚಯವಾದ ಕೆಲವೇ ಸಮಯದಲ್ಲಿ ರಾಜಕೀಯ ಮತ್ತು ಧಾರ್ಮಿಕ ನಾಯಕರಿಂದ ಆಗಾಗ ತೀವ್ರ ಟೀಕೆಗೊಳಗಾಯಿತು. 1623-40ರ ಅವಧಿಯಲ್ಲಿ ಓಟೋಮನ್ ಸಾಮ್ರಾಜ್ಯದ ಸುಲ್ತಾನನಾಗಿದ್ದ ಮುರಾದ್ IV ಧೂಮಪಾನವು ಸಾರ್ವಜನಿಕರ ನೈತಿಕಪ್ರಜ್ಞೆ ಮತ್ತು ಆರೋಗ್ಯಕ್ಕೆ ಅಪಾಯಕಾರಿಯೆಂದು ಘೋಷಿಸಿ ಅದನ್ನು ನಿರ್ಬಂಧಿಸಿದವರಲ್ಲಿ ಮೊದಲಿಗನಾದನು. ಚೀನೀ ಚಕ್ರವರ್ತಿ ಚಾಂಗ್‌ಜೆನ್ ತನ್ನ ಸಾವು ಮತ್ತು ಮಿಂಗ್ ಮಿಂಗ್ ವಂಶದ ಪರಾಭವಗೊಳ್ಳುವುದಕ್ಕೆ ಎರಡು ವರ್ಷಗಳಿಗೆ ಮೊದಲು ಧೂಮಪಾನವನ್ನು ಪ್ರತಿಬಂಧಿಸುವ ಶಾಸನವೊಂದನ್ನು ಜಾರಿಗೆ ತಂದನು. ನಂತರ, ಮೂಲತಃ ಅಲೆಮಾರಿ ಕುದುರೆಸವಾರ ಯೋಧರ ಬುಡಕಟ್ಟಿನವರಾಗಿದ್ದ ಕಿಂಗ್ ವಂಶದ ಮಂಚುಗಳು ಧೂಮಪಾನವು "ಬಿಲ್ಲುಗಾರಿಕೆಯನ್ನು ಕಡೆಗಣಿಸುವುದಕ್ಕಿಂತಲೂ ಹೆಚ್ಚು ಹೇಯವಾದ್ದು" ಎಂದು ಘೋಷಿಸಿದರು. ಜಪಾನಿನಲ್ಲಿ ಈಡೋ ಅವಧಿಯಲ್ಲಿ ಮೊತ್ತಮೊದಲ ಕೆಲವು ತಂಬಾಕು ಪ್ಲಾಂಟೇಶನ್ನುಗಳು ಆಹಾರಧಾನ್ಯಗಳನ್ನು ಬೆಳೆಸುವ ಬದಲು ಉತ್ತಮ ಹೊಲಗದ್ದೆಗಳು ಮನರಂಜನೆಗಾಗಿ ಬಳಸಲ್ಪಡುವ ಮಾದಕವಸ್ತುವಿನ ಉತ್ಪಾದನೆಗೆ ಬಳಕೆಯಾಗುವುದರಿಂದ ಮಿಲಿಟರಿ ಆರ್ಥವ್ಯವಸ್ಥೆಗೆ ಧಕ್ಕೆಯುಂಟುಮಾಡುವುದೆಂಬ ಕಾರಣದಿಂದಾಗಿ ಶೋಗನೇಟ್ ಜನಗಳ ಕೆಂಗಣ್ಣಿಗೆ ಗುರಿಯಾಗಿದ್ದವು.

ತಂಬಾಕು ಸೇವನೆಧೂಮಪಾನ 
ಬಾನ್‌ಸ್ಯಾಕ್‌ನ ಸಿಗರೆಟ್ ಸುತ್ತುವ ಯಂತ್ರ, ಯು.ಎಸ್ ಪೇಟೆಂಟ್ 238,640ರಲ್ಲಿ ತೋರಿಸಿರುವಂತೆ.

ತಂಬಾಕು ಧೂಮಪಾನವನ್ನು ಅನೈತಿಕ ಅಥವಾ ದೈವದ್ರೋಹವೆಂದು ಬಗೆದವರಲ್ಲಿ ಆಗಾಗ್ಗೆ ಧಾರ್ಮಿಕ ನಾಯಕರು ಪ್ರಮುಖವಾಗಿದ್ದಾರೆ. 1634ರಲ್ಲಿ ಮಾಸ್ಕೋನ ಪ್ಯಾಟ್ರಿಯಾರ್ಕ್ ತಂಬಾಕಿನ ಮಾರಾಟವನ್ನು ನಿಷೇಧಿಸಿದ್ದೇ ಅಲ್ಲದೆ ಈ ನಿಷೇಧವನ್ನು ಉಲ್ಲಂಘಿಸಿದ ಗಂಡಸರು ಮತ್ತು ಹೆಂಗಸರ ಮೂಗಿನ ಹೊಳ್ಳೆಗಳನ್ನು ಕತ್ತರಿಸಿ ಅವರ ಬೆನ್ನಿನ ಚರ್ಮ ಕಿತ್ತುಬರುವ ತನಕ ಚಾಟಿಯೇಟಿನ ಶಿಕ್ಷೆಯನ್ನೂ ವಿಧಿಸಿದರು. ವೆಸ್ಟರ್ನ್ ಚರ್ಚ್‌ನ ಮುಂದಾಳುವಾಗಿದ್ದ ಅರ್ಬನ್ VII 1642ರ ಪೇಪಲ್ ಬುಲ್‌ನಲ್ಲಿ ಧೂಮಪಾನವನ್ನು ಖಂಡಿಸಿದರು. ಹಲವಾರು ಸತತ ಪ್ರಯತ್ನಗಳು, ನಿರ್ಬಂಧಗಳು ಮತ್ತು ನಿಷೇಧಗಳ ಹೊರತಾಗಿಯೂ ಜಾಗತಿಕವಾಗಿ ಇವನ್ನೆಲ್ಲ ನಿರ್ಲಕ್ಷಿಸಲಾಯಿತು. ಜೇಮ್ಸ್ I ಆಫ್ ಇಂಗ್ಲೆಂಡ್ ಒಬ್ಬ ಕಟ್ಟಾ ಧೂಮಪಾನ ವಿರೋಧಿಯಾಗಿದ್ದನು ಮತ್ತು ಎ ಕೌಂಟರ್‌ಬ್ಲಾಸ್ಟ್ ಟು ಟೊಬ್ಯಾಕೋ ಎಂಬ ಕೃತಿಯ ಕರ್ತೃವೂ ಆಗಿದ್ದನು; ಆತನು ಈ ಹೊಸ ಪ್ರವೃತ್ತಿಯನ್ನು 1604ರಲ್ಲಿ ತಂಬಾಕಿನ ಮೇಲೆ ಶೇಕಡಾ 4000ದಷ್ಟು ಕರವಿಧಿಸುವ ಮೂಲಕ ದಮನ ಮಾಡಲು ಪ್ರಯತ್ನಿಸಿದನಾದರೂ 1600ರ ಆದಿಯ ಲಂಡನ್‌ನಲ್ಲಿ ಆಗಲೇ ಸುಮಾರು 7,000 ತಂಬಾಕು ವ್ಯಾಪಾರಿಗಳಿದ್ದುದರಿಂದಾಗಿ ಅದು ವಿಫಲವಾಯಿತು. ಅನಂತರ, ಚಾಕಚಕ್ಯತೆಯುಳ್ಳ ರಾಜರು ಧೂಮಪಾನ ನಿಷೇಧದ ನಿಷ್ಫಲತೆಯನ್ನು ಮನಗಂಡು ತಂಬಾಕಿನ ವ್ಯಾಪಾರವ್ಯವಹಾರಗಳು ಹಾಗೂ ಕೃಷಿಯನ್ನು ಲಾಭದಾಯಕ ಸರ್ಕಾರೀ ಏಕಸ್ವಾಮ್ಯಗಳನ್ನಾಗಿ ಮಾಡಿಕೊಂಡರು. 1600ರ ಮಧ್ಯಭಾಗದ ಹೊತ್ತಿಗೆ ಎಲ್ಲಾ ಪ್ರಮುಖ ನಾಗರೀಕತೆಗಳಲ್ಲೂ ತಂಬಾಕಿನ ಧೂಮಪಾನದ ಪರಿಚಯವಾಗಿತ್ತು ಮತ್ತು ಹಲವಾರು ಕಡೆಗಳಲ್ಲಂತೂ ಆಳುವ ರಾಜರು ತೀವ್ರ ಶಿಕ್ಷೆಗಳು ಮತ್ತು ಕರಗಳನ್ನು ವಿಧಿಸಿದ್ದರೂ ಕೂಡ ಧೂಮಪಾನವು ಸ್ಥಳೀಯ ಸಂಸ್ಕೃತಿಯಲ್ಲಿ ಆಗಲೇ ಸೇರಿಕೊಂಡುಬಿಟ್ಟಾಗಿತ್ತು. ತಂಬಾಕು ಸಸ್ಯ ಮತ್ತು ಉತ್ಪನ್ನದ ರೂಪದಲ್ಲಿ ಎಲ್ಲಾ ಪ್ರಮುಖ ವ್ಯಾಪಾರದ ಹಾದಿಗಳು, ಬಂದರುಗಳು ಹಾಗೂ ಮಾರುಕಟ್ಟೆಗಳಲ್ಲಿ ಪ್ರಚಲಿತವಾದ ನಂತರ ಹಿನ್ನಾಡುಗಳನ್ನೂ ತಲುಪಿತು. ಆಂಗ್ಲಭಾಷೆಯಲ್ಲಿ ಧೂಮಪಾನವನ್ನು ಸೂಚಿಸಲು ಸ್ಮೋಕಿಂಗ್ ಎಂಬ ಪದವನ್ನು 1700ರ ಅಂತ್ಯಭಾಗದಲ್ಲಿ ಬಳಕೆಗೆ ತರಲಾಯಿತು; ಇದಕ್ಕೂ ಮುಂಚೆ ಧೂಮಪಾನವನ್ನು ಡ್ರಿಂಕಿಂಗ್ ಸ್ಮೋಕ್ ಎಂದು ಕರೆಯಲಾಗುತ್ತಿತ್ತು.[page needed] ಈ ಬೆಳವಣಿಗೆಯು 1860ರ ದಶಕದ ಅಮೆರಿಕನ್ ಅಂತರ್ಯುದ್ಧದವರೆಗೂ ಸ್ಥಾಯಿಯಾಗಿದ್ದಿತಾದರೂ ಆನಂತರ ಪ್ರಾಥಮಿಕ ಕಾರ್ಮಿಕ ಬಲವು ಗುಲಾಮಗಿರಿಯೆಡೆಯಿಂದ ಭಾಗೀದಾರಿಕೆ ಕೃಷಿಯೆಡೆಗೆ ಸ್ಥಿತ್ಯಂತರಗೊಂಡಿತು. ಇದರ ಜತೆಗೇ ಬೇಡಿಕೆಯಲ್ಲಿ ಉಂಟಾದ ಬದಲಾವಣೆಗಳು ಸಿಗರೇಟ್‌ಗೆ ಸಂಬಂಧಿಸಿದ ತಂಬಾಕು ಉತ್ಪಾದನೆಯ ಔದ್ಯಮೀಕರಣಕ್ಕೆ ಕಾರಣವಾದವು. 1881ರಲ್ಲಿ ಜೇಮ್ಸ್ ಬೋನ್‌ಸ್ಯಾಕ್ ಎಂಬ ಕುಶಲಕರ್ಮಿಯು ಸಿಗರೆಟ್ ತಯಾರಿಕೆಯು ಹೆಚ್ಚಿನ ವೇಗದಲ್ಲಿ ನಡೆಯುವಂತೆ ಮಾಡುವ ಯಂತ್ರವೊಂದನ್ನು ತಯಾರಿಸಿದನು.

ಸಾಮಾಜಿಕ ಅಪವಾದಗಳು

ಚಿತ್ರ:German anti-smoking ad.jpeg
"ದ ಚೇನ್ ಸ್ಮೋಕರ್" ಎಂಬ ಶೀರ್ಷಿಕೆಯ ನಾಜೀ ಧೂಮಪಾನ-ವಿರೋಧೀ ಜಾಹೀರಾತು; ಇದರ ಘೋಷಣೆಯು "ಆತ ಅದನ್ನು ನುಂಗುವುದಿಲ್ಲ (ಸಿಗರೆಟ್) ಅದು ಆತನನ್ನು ನುಂಗುತ್ತದೆ" ಎಂದು ಹೇಳುತ್ತಿತ್ತು.

ಜರ್ಮನಿಯಲ್ಲಿ ಧೂಮಪಾನ ವಿರೋಧೀ ಸಂಘಗಳು ಸಾಧಾರಣವಾಗಿ ಮದ್ಯಪಾನ ವಿರೋಧೀ ಸಂಘಟನೆಗಳೊಂದಿಗೆ ಸೇರಿಕೊಂಡಿದ್ದು, ಮೊತ್ತಮೊದಲ ಬಾರಿಗೆ ತಂಬಾಕಿನ ಬಳಕೆಯ ವಿರುದ್ಧದ ಪ್ರಚಾರವನ್ನು 1912 ಮತ್ತು 1932ರಲ್ಲಿ Der Tabakgegner (ತಂಬಾಕಿನ ವಿರೋಧಿ) ಎಂಬ ಪತ್ರಿಕೆಯಲ್ಲಿ ಪ್ರಕಟಿಸಿತು. 1929ರಲ್ಲಿ ಡ್ರೆಸ್‌ಡೆನ್, ಜರ್ಮನಿಯ ಫ್ರಿಟ್ಜ್ ಲಿಕಿಂಟ್ ಶ್ವಾಸಕೋಶದ ಕ್ಯಾನ್ಸರ್ ಮತ್ತು ತಂಬಾಕಿನ ಸಂಬಂಧದ ಬಗೆಗಿನ ವಿಧ್ಯುಕ್ತ, ಅಂಕಿಅಂಶಗಳನ್ನುಳ್ಳ ಬರಹವೊಂದನ್ನು ಪ್ರಕಟಿಸಿದನು. ಮಹಾ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಅಡಾಲ್ಫ್ ಹಿಟ್ಲರ್ ತನ್ನ ಮುಂಚಿನ ಧೂಮಪಾನದ ಅಭ್ಯಾಸವನ್ನು ವ್ಯರ್ಥ ವೆಚ್ಚವೆಂದು ಖಂಡಿಸಿದನು, ಹಾಗು ಮುಂದೆ ಇದನ್ನು ಪ್ರಬಲವಾಗಿ ಸಮರ್ಥಿಸಿಕೊಂಡನು. ಈ ಚಳುವಳಿಗೆ ನಾಜೀ ಪ್ರಜನನ ನೀತಿಯಿಂದ ಇನ್ನೂ ಬಲಗೊಂಡಿತು; ಈ ನೀತಿಯ ಪ್ರಕಾರ ಧೂಮಪಾನ ಮಾಡುವ ಮಹಿಳೆಯರು ಜರ್ಮನ್ ಕುಟುಂಬದಲ್ಲಿ ಹೆಂಡತಿಯರು ಹಾಗೂ ತಾಯಂದಿರಾಗಿರಲು ತಕ್ಕವರಲ್ಲ ಎಂದು ಪರಿಗಣಿಸುವುದಾಗಿತ್ತು. ನಾಜೀ ಜರ್ಮನಿಯ ಧೂಮಪಾನ-ವಿರೊಧಿ ಚಳುವಳಿಯು ಎರಡನೇ ವಿಶ್ವಯುದ್ಧದ ಸಮಯದಲ್ಲಿ ವಿರೋಧಪಕ್ಷವನ್ನು ತಲುಪಲಿಲ್ಲ, ಹೀಗಾಗಿ ಧೂಮಪಾನ-ವಿರೋಧೀ ಸಂಘಟನೆಗಳ ಜನಪ್ರಿಯತೆ ಬಲುಬೇಗನೆ ತಗ್ಗಿಹೋಯಿತು. ಎರಡನೇ ವಿಶ್ವಯುದ್ಧದ ಅಂತ್ಯದ ವೇಳೆಗೆ ಅಮೆರಿಕನ್ ಸಿಗರೆಟ್ ತಯಾರಕರು ಬಲುಬೇಗನೆ ಜರ್ಮನಿಯ ಕಪ್ಪು ಮಾರುಕಟ್ಟೆಯನ್ನು ಮತ್ತೆ ಪ್ರವೇಶಿಸಿದರು. ತಂಬಾಕಿನ ಅಕ್ರಮ ಕಳ್ಳಸಾಗಾಣಿಕೆಗಳು ಹೆಚ್ಚಾದವು, ಮತ್ತು ನಾಜೀ ಧೂಮಪಾನ ವಿರೋಧಿ ಚಳುವಳಿಯ ನೇತಾರರು ಮೌನ ತಾಳುವಂತಾಯಿತು. ಮಾರ್ಷಲ್ ಯೋಜನೆಯ ಪ್ರಕಾರ ಯುನೈಟೆಡ್ ಸ್ಟೇಟ್ಸ್ ಜರ್ಮನಿಗೆ ತಂಬಾಕನ್ನು ಉಚಿತವಾಗಿ ನೌಕಾಮಾರ್ಗದ ಮೂಲಕ 1948ರಲ್ಲಿ 24,000 ಟನ್‌ಗಳಂತೆ ಹಾಗೂ 1949ರಲ್ಲಿ 69,000 ಟನ್‌ಗಳಂತೆ ಸಾಗಿಸಿತು. ಯುದ್ಧನಂತರದ ಜರ್ಮನಿಯ ತಲಾ ವಾರ್ಷಿಕ ಸಿಗರೆಟ್ ಬಳಕೆಯು 1950ರಲ್ಲಿ 460ರಿಂದ ಏರಿ 1963ರಲ್ಲಿ 1,523ರಷ್ಟಾಯಿತು. 1900ರ ಕೊನೆಯ ವೇಳೆಗೆ ಜರ್ಮನಿಯ ಧೂಮಪಾನ ವಿರೋಧಿ ಚಳುವಳಿಗಳು 1939–41ರ ನಾಜೀ ಯುಗದಲ್ಲಿ ಕಂಡ ಯಶಸ್ಸನ್ನು ಮೀರಲಾರದೇ ಹೋದವು ಮತ್ತು ಜರ್ಮನ್ ತಂಬಾಕು ಆರೋಗ್ಯ ಸಂಶೋಧನೆಯನ್ನು ರಾಬರ್ಟ್ ಎನ್. ಪ್ರಾಕ್ಟರ್ "ಮೂಕವಾಗಿದೆ" ಎಂದು ಬಣ್ಣಿಸಿದರು.

ತಂಬಾಕು ಸೇವನೆಧೂಮಪಾನ 
ಕಾನೂನು ಕ್ರಮ ಜರುಗಿಸಲು ಅವಶ್ಯಕವಾದ ಬಲವಾದ ಸಂಬಂಧವನ್ನು ಕಲ್ಪಿಸಲು ನಡೆಸಲಾದ ದೀರ್ಘ ಅಧ್ಯಯನ.

1950ರಲ್ಲಿ ರಿಚರ್ಡ್ ಡಾಲ್ British Medical Journalನಲ್ಲಿ ಪ್ರಕಟಿಸಿದ ಸಂಶೋಧನೆಯು ಧೂಮಪಾನ ಹಾಗೂ ಶ್ವಾಸಕೋಶದ ಕ್ಯಾನ್ಸರ್ ನಡುವಿನ ಹತ್ತಿರದ ಸಂಬಂಧವನ್ನು ಸ್ಪಷ್ಟಪಡಿಸಿತು. ನಾಲ್ಕು ವರ್ಷಗಳ ನಂತರ, 1954ರಲ್ಲಿ ಹೊರಬಂದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಸುಮಾರು ನಲವತ್ತು ಸಾವಿರ ವೈದ್ಯರನ್ನು ಅಭ್ಯಸಿಸಿದ British Doctors Study ಎಂಬ ಅಧ್ಯಯನವು ಈ ಸೂಚನೆಯನ್ನು ಅನುಮೋದಿಸಿತು, ಮತ್ತು ಇದನ್ನು ಆಧರಿಸಿ ಸರ್ಕಾರವು ಧೂಮಪಾನ ಹಾಗೂ ಶ್ವಾಸಕೋಶದ ಕ್ಯಾನ್ಸರ್‌ನ ಪ್ರಮಾಣಗಳು ಒಂದಕ್ಕೋಂದು ತಳುಕುಹಾಕಿಕೊಂಡಿವೆ ಎಂಬ ಸೂಚನೆಯನ್ನು ಜಾರಿಗೆ ತಂದಿತು. 1964ರಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಸರ್ಜನ್ ಜನರಲ್ರವರ ಧೂಮಪಾನ ಮತ್ತು ಆರೋಗ್ಯದ ಬಗೆಗಿನ ವರದಿಯು ಇದೇ ರೀತಿಯಲ್ಲಿ ಧೂಮಪಾನ ಮತ್ತು ಶ್ವಾಸಕೋಶದ ಕ್ಯಾನ್ಸರ್ ನಡುವೆ ಸಂಬಂಧವನ್ನು ಸೂಚಿಸುವುದರೊಂದಿಗೆ ಆರಂಭವಾಗಿತ್ತು. 1980ರ ದಶಕದಲ್ಲಿ ವೈಜ್ಞಾನಿಕ ರುಜುವಾತುಗಳು ಹೆಚ್ಚುಹೆಚ್ಚಾಗಿ ದೊರಕುತ್ತ ಹೋದಂತೆಯೇ ತಂಬಾಕು ಕಂಪೆನಿಗಳು ಈ ಹಿಂದೆ ಇದರ ಆರೋಗ್ಯದ ಮೇಲಿನ ದುಷ್ಪರಿಣಾಮಗಳ ಬಗ್ಗೆ ಅರಿವಿಲ್ಲದಿದ್ದರಿಂದ ಮತ್ತು ಇದಕ್ಕೆ ಸರಿಯಾದ ರುಜುವಾತುಗಳಿಲ್ಲದ್ದರಿಂದ ಇದನ್ನು ಸಹಾಯಕ ಅಜಾಗ್ರತೆಯೆಂದು ಪರಿಗಣಿಸಬೇಕಾಗಿ ಒತ್ತಾಯಿಸಿದವು. 1998ರವರೆಗೂ ಆರೋಗ್ಯ ಅಧಿಕಾರಿಗಳು ಈ ವಾದದ ಪರ ವಹಿಸುತ್ತಲೇ ಇದ್ದರು, ನಂತರ ಇದಕ್ಕೆ ವಿರುದ್ಧವಾದ ಸ್ಥಾನವನ್ನು ತೆಗೆದುಕೊಂಡರು. ಮೂಲವಾಗಿ ಯು.ಎಸ್‌ನ ನಾಲ್ಕು ಅತಿದೊಡ್ಡ ತಂಬಾಕು ಕಂಪೆನಿಗಳು 46 ರಾಜ್ಯಗಳ ಅಟಾರ್ನಿ ಜನರಲ್‌ಗಳ ನಡುವೆ ಮಾಡಿಕೊಳ್ಳಲಾದ Tobacco Master Settlement Agreementನ ಪ್ರಕಾರ ಕೆಲವು ರೀತಿಯ ತಂಬಾಕಿನ ಜಾಹೀರಾತುಗಳನ್ನು ನಿಷೇಧಿಸಲಾಯಿತು ಹಾಗೂ ಆರೋಗ್ಯ ಪರಿಹಾರವಾಗಿ ಹಣಪಾವತಿ ಮಾಡಬೇಕಿತ್ತು; ಹಾಗೂ ಇದು ಯುನೈಟೆಡ್ ಸ್ಟೇಟ್ಸ್‌ನ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಪೌರ ಕೇಸಿನ ಇತ್ಯರ್ಥವಾಗಿ ಉಳಿದುಕೊಂಡಿತು. 1965ರಿಂದ 2006ರವರೆಗೆ, ಯುನೈಟೆಡ್ ಸ್ಟೇಟ್ಸ್‌ನ ನ ಧೂಮಪಾನದ ಮಟ್ಟವು 42%ರಿಂದ 20.8%ಕ್ಕೆ ಇಳಿದಿದೆ. ಧೂಮಪಾನವನ್ನು ಬಿಟ್ಟವರಲ್ಲಿ ಹೆಚ್ಚಿನಪಾಲು ಜನರು ಯಶಸ್ವೀ, ವೃತ್ತಿಪರ, ಶ್ರೀಮಂತ ಕುಟೂಂಬಗಳಿಂದ ಬಂದವರಾಗಿದ್ದರು. ಬಳಕೆಯಲ್ಲಿನ ಈ ಇಳಿಕೆಯ ಹೊರತಾಗಿಯೂ ಕೂಡ, ಪ್ರತಿದಿನದ ತಲಾ ಸಿಗರೆಟ್ ಬಳಕೆಯು 1954ರಲ್ಲಿ 22 ಇದ್ದುದು 1978ರ ವೇಳೆಗೆ 30ಕ್ಕೆ ಏರಿತು. ಈ ವಿರೋಧಾಭಾಸವು ಧೂಮಪಾನವನ್ನು ಬಿಟ್ಟವರು ಅದನ್ನು ಕಡಿಮೆ ಮಾಡಿದರೆಂದೂ, ಧೂಮಪಾನವನ್ನು ಮುಂದುವರಿಸಿದವರು ಕಡಿಮೆ ಪರಿಣಾಮವನ್ನುಂಟುಮಾಡುವ ಸಿಗರೆಟ್‌ಗಳನ್ನು ಹೆಚ್ಚಾಗಿ ಬಳಸಲಾರಂಭಿಸಿದರೆಂದೂ ಸೂಚಿಸಿತು. ಈ ಪ್ರವೃತ್ತಿಯು ಹಲವಾರು ಔದ್ಯಮೀಕರಣಗೊಂಡ ರಾಷ್ಟ್ರಗಳಲ್ಲಿ ಕಂಡುಬಂದಿದೆ ಮತ್ತು ಇಲ್ಲಿ ಧೂಮಪಾನದ ಮಟ್ಟವು ಸಮತೋಲನದಲ್ಲಿದೆ ಅಥವಾ ಇಳಿಕೆಯಾಗಿದೆ. ಆದರೆ ಅಭಿವೃದ್ಧಿಶೀಲ ಪ್ರಪಂಚದಲ್ಲಿ ಮಾತ್ರ ತಂಬಾಕಿನ ಬಳಕೆಯು 2002ರ ಅಂಕಿ ಅಂಶಗಳ ಪ್ರಕಾರ ಶೇಕಡಾ 3.4ರಷ್ಟು ಏರಿಕೆಯಾಗುತ್ತಲೇ ಇದೆ. ಆಫ್ರಿಕಾದ ಹೆಚ್ಚಿನ ಭಾಗಗಳಲ್ಲಿ ಧೂಮಪಾನವನ್ನು ಆಧುನಿಕವೆಂದು ಭಾವಿಸಲಾಗುತ್ತದೆ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇದರ ಬಗ್ಗೆ ವ್ಯಕ್ತವಾಗುವ ಬಲವಾದ ವಿರೋಧಗಳನ್ನು ಇಲ್ಲಿ ಗಣನೆಗೇ ತೆಗೆದುಕೊಳ್ಳಲಾಗುವುದಿಲ್ಲ. ಇಂದು ತಂಬಾಕಿನ ಬಳಕೆಯಲ್ಲಿ ರಷ್ಯಾ ಪ್ರಥಮ ಸ್ಥಾನದಲ್ಲಿದೆ ಮತ್ತು ಇದರ ನಂತರದ ಸ್ಥಾನಗಳಲ್ಲಿ ಇಂಡೋನೇಶಿಯಾ, ಲಾವೋಸ್, ಉಕ್ರೇನ್, ಬೆಲಾರುಸ್, ಗ್ರೀಸ್, ಜೋರ್ಡಾನ್, ಮತ್ತು ಚೀನಾ ಇವೆ.

ಬಳಕೆ

ವಿಧಾನಗಳು

ತಂಬಾಕು ನಿಕೋಟಿಯಾನಾ ಕುಟುಂಬದ ಸಸ್ಯಗಳ ತಾಜಾ ಎಲೆಗಳಿಂದ ತಯಾರಿಸಲ್ಪಡುವ ಒಂದು ಕೃಷಿ ಉತ್ಪನ್ನವಾಗಿದೆ. ಈ ಕುಟುಂಬವು ಹಲವಾರು ಜಾತಿಗಳನ್ನು ಹೊಂದಿದ್ದು ಇವುಗಳಲ್ಲಿ ನಿಕೋಟಿಯಾನಾ ಟಬಾಕಮ್ ಜಾತಿಯ ಸಸ್ಯವನ್ನು ಸಾಮಾನ್ಯವಾಗಿ ಬೆಳೆಯಲಾಗುವುದು. ನಿಕೋಟಿಯಾನಾ ರಸ್ಟಿಕಾ ಎರಡನೇ ಸ್ಥಾನದಲ್ಲಿದ್ದು ಇದರಲ್ಲಿನ ನಿಕೋಟಿನ್ ಪ್ರಮಾಣವು ಅತಿಹೆಚ್ಚಿನ ಮಟ್ಟದಲ್ಲಿರುತ್ತದೆ. ಈ ಎಲೆಗಳನ್ನು ಕಟಾವು ಮಾಡಿ ಸಂಸ್ಕರಿಸುವುದರ ಮೂಲಕ ಮೆಲ್ಲನೆ ಉತ್ಕರ್ಷಣೆಯುಂಟಾಗಲು ಮತ್ತು ತಂಬಾಕಿನ ಎಲೆಯಲ್ಲಿರುವ ಕ್ಯಾರೊಟಿನಾಯ್ಡ್ಗಳು ನಶಿಸಲು ಅನುವು ಮಾಡಲಾಗುತ್ತದೆ. ಈ ಕ್ರಿಯೆಯು ತಂಬಾಕಿನಲ್ಲಿ ಕೆಲವು ಸಮ್ಮಿಶ್ರಣಗಳ ಉತ್ಪಾದನೆಗೆ ಕಾರಣವಾಗುತ್ತದೆ ಮತ್ತು ಇದರಿಂದಾಗಿ ಎಲೆಗಳಲ್ಲಿ ಸಿಹಿ ಹುಲ್ಲು, ಟೀ, ಗುಲಾಬಿಯೆಣ್ಣೆ ಅಥವಾ ಹಣ್ಣಿನ ಪರಿಮಳಗಳ ರುಚಿ ಕಂಡುಬರುತ್ತದೆ. ಪ್ಯಾಕೇಜಿಂಗ್ ಮಾಡುವ ಮುನ್ನ ತಂಬಾಕನ್ನು ವ್ಯಸನದ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ, pHನ ಮಟ್ಟವನ್ನು ಬದಲಾಯಿಸಲು ಅಥವಾ ಹೊಗೆಯ ಗುಣಮಟ್ಟವನ್ನು ಬದಲಿಸಿ ಹೆಚ್ಚು ರುಚಿಕರವನ್ನಾಗಿ ಮಾಡುವ ಸಲುವಾಗಿ ಸಾಮಾನ್ಯವಾಗಿ ಇತರ ಪದಾರ್ಥಗಳ ಜತೆ ಬೆರಕೆ ಮಾಡಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಈ ಸಮ್ಮಿಶ್ರಣಗಳಲ್ಲಿ 599 ಪದಾರ್ಥಗಳನ್ನು ಮಾತ್ರ ಬಳಸುವಂತೆ ನಿಯಮಿತಗೊಳಿಸಲಾಗಿದೆ. ಇದರ ನಂತರದ ಉತ್ಪನ್ನವನ್ನು ವಿಂಗಡಿಸಿ, ಪ್ಯಾಕೇಜಿಂಗ್ ಮಾಡಿ ಬಳಕೆದಾರ ಮಾರುಕಟ್ಟೆಗಳಿಗೆ ರಫ್ತುಮಾಡಲಾಗುವುದು. ಆದಷ್ಟು ಕಡಿಮೆ ಉಪ-ಪದಾರ್ಥಗಳನ್ನುಳ್ಳ ಸಕ್ರಿಯ ಪದಾರ್ಥಗಳನ್ನು ಬಳಕೆದಾರರಿಗೆ ತಲುಪಿಸಲು ನೂತನ ವಿಧಾನಗಳ ಬಳಕೆ ಮಾಡುತ್ತಿರುವುದರಿಂದ ಅಥವಾ ಬಳಕೆ ಮಾಡಲು ಆರಂಭಿಸಿರುವುದರಿಂದಾಗಿ ಬಳಕೆಯ ರೀತಿಗಳು ಗಣನೀಯವಾಗಿ ವಿಸ್ತರಿಸಿವೆ:

Tobacco field in Intercourse, Pennsylvania.
Basma leaves curing in the sun at Pomak village of Xanthi, Thrace, Greece.
Processed tobacco pressed into long strips for shipping.
    ಬೀಡಿ
    ಬೀಡಿಗಳು ತೆಳ್ಳಗಿದ್ದು, ಸಾಮಾನ್ಯವಾಗಿ ಪರಿಮಳಭರಿತವಾಗಿರುವ ದಕ್ಷಿಣ ಏಷ್ಯಾದ ಸಿಗರೆಟ್‌ಗಳಾಗಿದ್ದು ಇವನ್ನು ತೇಂದು ಎಲೆಯಲ್ಲಿ ಸುರುಳಿಸುತ್ತಲ್ಪಟ್ಟ ತಂಬಾಕಿನಿಂದ ತಯಾರಿಸಲಾಗುವುದು ಮತ್ತು ಒಂದು ತುದಿಯಲ್ಲಿ ದಾರವೊಂದರಿಂದ ಸುತ್ತಿ ಕಟ್ಟಲಾಗುವುದು.[ಸೂಕ್ತ ಉಲ್ಲೇಖನ ಬೇಕು] ಬೀಡಿಗಳ ಹೊಗೆಯು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಾಮಾನ್ಯವಾಗಿ ದೊರೆಯುವ ಸಿಗರೇಟ್‌ಗಳಿಗಿಂತ ಹೆಚ್ಚಿನ ಮಟ್ಟದ ಕಾರ್ಬನ್ ಮಾನಾಕ್ಸೈಡ್, ನಿಕೋಟೀನ್ ಮತ್ತು ಟಾರ್ ಅನ್ನು ಉತ್ಪಾದಿಸುತ್ತದೆ. ಸಾಧಾರಣ ಸಿಗರೇಟ್‌ಗಳಿಗೆ ಹೋಲಿಸಿದರೆ ಬೀಡಿಗಳು ಕಡಿಮೆ ಬೆಲೆಯುಳ್ಳವಾದ್ದರಿಂದ, ಇವು ಬಹಳ ಹಿಂದಿನಿಂದಲೂ ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಕಾಂಬೋಡಿಯಾ ಮತ್ತು ಭಾರತಗಳ ಬಡವರಲ್ಲಿ ಜನಪ್ರಿಯವಾಗಿವೆ.[ಸೂಕ್ತ ಉಲ್ಲೇಖನ ಬೇಕು]
    ಸಿಗಾರ್ಗಳು
    ಸಿಗಾರ್‌ಗಳು ಒಣಗಿದ ಮತ್ತು ಹುದುಗು ಬರಿಸಿ ಗಟ್ಟಿಯಾಗಿ ಸುತ್ತಲಾದ ತಂಬಾಕಿನ ಗಂಟಾಗಿದ್ದು, ಇದರ ಹೊಗೆಯು ಧೂಮಪಾನ ಮಾಡುವವರ ಬಾಯಿಯನ್ನು ಪ್ರವೇಶಿಸಲು ಅನುವಾಗುವಂತೆ ಇದನ್ನು ಹೊತ್ತಿಸಲಾಗುತ್ತದೆ. ಈ ಹೊಗೆಯನ್ನು ಸಾಮಾನ್ಯವಾಗಿ ಉಸಿರಿನ ಮೂಲಕ ಒಳಗೆಳೆದುಕೊಳ್ಳಲಾಗುವುದಿಲ್ಲ, ಏಕೆಂದರೆ ಹೊಗೆಯಲ್ಲಿ ಅತಿ ಹೆಚ್ಚಿನ ಮಟ್ಟದ ಕ್ಷಾರದ ಗುಣವಿರುವುದರಿಂದ ಇದು ಬಹಳ ಬೇಗನೆ ಗಂಟಲ ನಾಳ ಮತ್ತು ಶ್ವಾಸಕೋಶಗಳು ಕೆರಳುವ ಸಾಧ್ಯತೆಯಿದೆ. ಇದರಿಂದಾಗಿ ಈ ಹೊಗೆಯನ್ನು ಸಾಮಾನ್ಯವಾಗಿ ಬಾಯಿಗೆ ತೆಗೆದುಕೊಳ್ಳಲಾಗುವುದು.[ಸೂಕ್ತ ಉಲ್ಲೇಖನ ಬೇಕು] ಸಿಗಾರ್ ಸೇವನೆಯ ವಾಡಿಕೆಯು ಸ್ಥಳ, ಐತಿಹಾಸಿಕ ಅವಧಿ ಮತ್ತು ಸಮೀಕ್ಷಿಸಲಾದ ಜನಸಂಖ್ಯೆಯನ್ನು ಅವಲಂಬಿಸಿದೆ, ಹಾಗೂ ಈ ವಾಡಿಕೆಯ ಊಹೆಗಳು ಸಮೀಕ್ಷೆಯ ವಿಧಾನಗಳಿಗನುಗುಣವಾಗಿ ಕೊಂಚ ಬದಲಾಗುತ್ತವೆ. ಈಗ ಅತಿಹೆಚ್ಚಿನ ಬಳಕೆಯು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಆಗುತ್ತದೆ, ಜರ್ಮನಿ ಮತ್ತು ಯುನೈಟೆಡ್ ಕಿಂಗ್‍ಡಮ್ ನಂತರದ ಸ್ಥಾನಗಳಲ್ಲಿವೆ; ಯುಎಸ್ ಮತ್ತು ಪಶ್ಚಿಮ ಯುರೋಪ್ ಪ್ರಪಂಚದ ಒಟ್ಟು ಸಿಗಾರ್ ಮಾರಾಟದ ಶೇಕಡಾ 75ರಷ್ಟನ್ನು ಬಳಸುತ್ತವೆ. 2005ರ ಅಂಕಿ ಅಂಶಗಳ ಪ್ರಕಾರ ಶೇಕಡಾ 4.3ರಷ್ಟು ಪುರುಷರು ಹಾಗೂ 0.3% ರಷ್ಟು ಮಹಿಳೆಯರು ಸಿಗಾರ್ ಸೇವನೆ ಮಾಡುತ್ತಾರೆಂದು ಎಣಿಕೆ ಹಾಕಲಾಗಿದೆ.
    ಸಿಗರೇಟುಗಳು
    ಫ್ರೆಂಚ್ ಭಾಷೆಯಲ್ಲಿ ಸಿಗರೇಟ್‌ಗಳೆಂದರೆ "ಸಣ್ಣ ಸಿಗಾರ್"ಗಳೆಂದು ಅರ್ಥ, ಈ ಉತ್ಪನ್ನವನ್ನು ಧೂಮಪಾನದ ಮೂಲಕ ಸೇವಿಸಲಾಗುತ್ತದೆ ಹಾಗೂ ಇವನ್ನು ಸಂಸ್ಕರಿಸಲಾದ ಮತ್ತು ಉತ್ತಮವಾಗಿ ಕತ್ತರಿಸಲಾದ ತಂಬಾಕಿನ ಎಲೆಗಳು ಮತ್ತು ಪುನರ್ರಚಿಸಲಾದ ತಂಬಾಕು ಮತ್ತು ಇದರ ಜತೆಗೇ ಇತರ ವಸ್ತುಗಳನ್ನು ಸೇರಿಸಿ ಸುತ್ತಲಾಗುತ್ತದೆ ಇಲ್ಲವೇ ಕಾಗದ ಸುತ್ತಿದ ಕೊಳವೆಯೊಂದಕ್ಕೆ ತುಂಬಿಸಲಾಗುತ್ತದೆ. ಸಿಗರೆಟ್‌ಗಳನ್ನು ಹೊತ್ತಿಸಿ ಸೇದಲಾಗುತ್ತದೆ, ಸಾಮಾನ್ಯವಾಗಿ ಇದಕ್ಕಾಗಿ ಒಂದು ಸೆಲ್ಯುಕೋಸ್ ಅಸಿಟೇಟ್ ಫಿಲ್ಟರ್ ಇದ್ದು ಇದರ ಮೂಲಕ ಹೊಗೆಯನ್ನು ಬಾಯಿ ಮತ್ತು ಶ್ವಾಸಕೋಶಕ್ಕೆ ತೆಗೆದುಕೊಳ್ಳಲಾಗುವುದು. ಸಿಗರೆಟ್ ಸೇವನೆಯು ತಂಬಾಕನ್ನು ಸೇವಿಸುವ ಅತ್ಯಂತ ಪ್ರಚಲಿತ ವಿಧಾನವಾಗಿದೆ.[ಸೂಕ್ತ ಉಲ್ಲೇಖನ ಬೇಕು]
    ಎಲೆಕ್ಟ್ರಾನಿಕ್ ಸಿಗರೇಟ್‌ಗಳು
    ಎಲೆಕ್ಟ್ರಾನಿಕ್ ಸಿಗರೇಟ್‌ಗಳು ತಂಬಾಕು ಧೂಮಪಾನಕ್ಕೆ ಪರ್ಯಾಯವಾಗಿವೆಯಾದರೂ ಇಲ್ಲಿ ತಂಬಾಕು ಸೇವನೆ ಇರುವುದಿಲ್ಲ. ಇದು ಬ್ಯಾಟರಿ-ಚಾಲಿತ ಸಾಧನವಾಗಿದ್ದು, ಇದರಲ್ಲಿರುವ ಆವೀಕೃತ ಪ್ರೊಪೈಲೀನ್ ಗ್ಲೈಕಾಲ್/ನಿಕೋಟಿನ್ ದ್ರಾವಣದ ಮೂಲಕ ನಿಕೋಟಿನ್ ಡೋಸ್‌ಗಳನ್ನು ಸೇವಿಸಬಹುದು. ಇದು ಇತ್ತೀಚೆಗೆ ಹೊಸದಾಗಿ ಬಂದ ಉತ್ಪನ್ನವಾದ್ದರಿಂದ, ಇದರ ಬಗೆಗಿನ ಹಲವಾರು ಕಾನೂನುಗಳು ಮತ್ತು ಸಾರ್ವಜನಿಕ ಆರೋಗ್ಯ ತನಿಖೆಗಳು ಇನ್ನೂ ಪೂರ್ಣಗೊಂಡಿಲ್ಲ.
    ಹುಕ್ಕಾ
    ಹುಕ್ಕಾವು ಧೂಮಪಾನ ಮಾಡಲು ಬಳಸುವ ಸಾಧಾರಣವಾಗಿ ಒಂದು ಅಥವಾ ಹಲವು ಶಾಖೆಗಳನ್ನುಳ್ಳ (ಸಾಮಾನ್ಯವಾಗಿ ಗಾಜಿನದಾದ) ನೀರಿನ ಕೊಳವೆಯಾಗಿದೆ. ಇದು ಮೂಲತಃ ಭಾರತದ್ದಾಗಿದ್ದು, ಈಗ ಹುಕ್ಕಾ ಪ್ರಪಂಚದೆಲ್ಲೆಡೆಗೆ, ವಿಶೇಷವಾಗಿ ಮಧ್ಯಪೂರ್ವ ದೇಶಗಳಲ್ಲಿ ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಹುಕ್ಕಾವು ನೀರಿನ ಶೋಧನೆ ಮತ್ತು ಪರೋಕ್ಷವಾದ ಉಷ್ಣತೆಯನ್ನು ಬಳಸಿಕೊಳ್ಳುತ್ತದೆ. ಇದನ್ನು ಗಿಡಮೂಲಿಕೆಗಳ ಹಣ್ಣುಗಳು, ತಂಬಾಕು ಅಥವಾ ಕ್ಯಾನಾಬಿಸ್ ಅನ್ನು ಧೂಮಪಾನದ ಮೂಲಕ ಸೇವಿಸಲು ಬಳಸಬಹುದು.
    ಕ್ರೆಟೆಕ್‌ಗಳು
    ಕ್ರೆಟೆಕ್‌ಗಳು ತಂಬಾಕು, ಲವಂಗ ಮತ್ತು ಒಂದು ರೀತಿಯ ರುಚಿ-ಪರಿಮಳಗಳನ್ನುಳ್ಳ ’ಸಾಸ್’ನ ಸಂಕೀರ್ಣ ಮಿಶ್ರಣದಿಂದ ತಯಾರಿಸಲಾದ ಸಿಗರೆಟ್‌ಗಳಾಗಿವೆ. ಇವುಗಳನ್ನು ಮೊದಲ ಬಾರಿಗೆ 1880ರ ದಶಕದಲ್ಲಿ ಕುಡುಸ್, ಜಾವಾದಲ್ಲಿ ಲವಂಗಗಳಲ್ಲಿರುವ ಔಷಧೀಯ ಅಂಶವಾದ ಯೂಜಿನಾಲ್ ಅನ್ನು ಶ್ವಾಸಕೋಶಗಳಿಗೆ ತಲುಪಿಸುವ ಸಲುವಾಗಿ ಬಳಸಲಾಯಿತು. ತಂಬಾಕಿನ ಗುಣಮಟ್ಟ ಮತ್ತು ವೈವಿಧ್ಯತೆಗಳು ಕ್ರೆಟೆಕ್ ಉತ್ಪಾದನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ, ಹಾಗೂ ಇದರಿಂದಾಗಿ ಕ್ರೆಟೆಕ್‍ಗಳು 30ಕ್ಕಿಂತ ಹೆಚ್ಚಿನ ರೀತಿಯ ತಂಬಾಕನ್ನು ಒಳಗೊಂಡಿರುವಂತಹ ಸಾಧ್ಯತೆಗಳೂ ಇರುತ್ತವೆ.. ಇದಕ್ಕೆ ವಿಶಿಷ್ಟವಾದ ರುಚಿಯನ್ನು ನೀಡುವ ಸಲುವಾಗಿ ತಂಬಾಕಿನ ಮಿಶ್ರಣದ 1/3 ಭಾಗದಷ್ಟು ಚೂರುಮಾಡಿ ಒಣಗಿಸಿದ ಲವಂಗದ ಮೊಗ್ಗುಗಳನ್ನು ಸೇರಿಸಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್‌ನ ಹಲವಾರು ರಾಜ್ಯಗಳು ಕ್ರೆಟೆಕ್‌ಅನ್ನು ನಿಷೇಧಿಸಿವೆ,[ಸೂಕ್ತ ಉಲ್ಲೇಖನ ಬೇಕು] ಮತ್ತು 2004ರಲ್ಲಿ ಯುನೈಟೆಡ್ ಸ್ಟೇಟ್ಸ್ ತಂಬಾಕು ಮತ್ತು ಮೆಂಥಾಲ್‌ಗಳನ್ನು ಹೊರತುಪಡಿಸಿ ಸಿಗರೆಟ್‌ಗಳು ಇನ್ನಾವುದೇ "ವಿಶೇಷ ಫ್ಲೇವರ್" ಅನ್ನು ಹೊಂದಿರುವುದನ್ನು ನಿಷೇಧಿಸಿತು, ಹಾಗೂ ಇದರಿಂದಾಗಿ ಕ್ರೆಟೆಕ್‌ಗಳನ್ನು ಸಿಗರೆಟ್‌ಗಳ ಪಟ್ಟಿಯಿಂದ ಹೊರತುಪಡಿಸಿದಂತಾಯಿತು.
    ಪರೋಕ್ಷ ಧೂಮಪಾನ
    ಸೇವಿಸಿ ಹೊರಬಿಟ್ಟ ತಂಬಾಕಿನ ಹೊಗೆಯನ್ನು ಅನೈಚ್ಛಿಕವಾಗಿ ಸೇವಿಸುವುದನ್ನು ಪರೋಕ್ಷ ಧೂಮಪಾನ ಎನ್ನಲಾಗುತ್ತದೆ. ಉರಿಯುತ್ತಿರುವ ತುದಿಯಿಂದ ಹೊರಡುವ ಹೊಗೆಯನ್ನು ಸೇವಿಸುವುದನ್ನು ಸೆಕೆಂಡ್-ಹ್ಯಾಂಡ್ ಸ್ಮೋಕಿಂಗ್(SHS) ಎನ್ನಲಾಗುತ್ತದೆ ಮತ್ತು ಉರಿಯುತ್ತಿರುವ ತುದಿಯನ್ನು ನಮ್ದಿಸಲಾದ ನಂತರ ಉಳಿದುಕೊಳ್ಳುವ ಹೊಗೆಯನ್ನು ಸೇವಿಸುವುದನ್ನು ಎನ್‌ವೈರ್ನಮೆಂಟಲ್ ಟೊಬ್ಯಾಕೋ ಸ್ಮೋಕ್ (ETS) ಅಥವಾ ಥರ್ಡ್ ಹ್ಯಾಂಡ್ ಸ್ಮೋಕ್ ಎನ್ನಲಾಗುತ್ತದೆ. ಇದರಿಂದುಂಟಾಗುವ ದುಷ್ಪರಿಣಾಮಗಳ ಕಾರಣದಿಂದ ಈ ರೀತಿಯ ಸೇವನೆಯು ತಂಬಾಕು ಉತ್ಪನ್ನಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ.
    ಕೊಳವೆಯ ಮೂಲಕ ಧೂಮಪಾನ
    ಕೊಳವೆ ಧೂಮಪಾನವು ಸಾಮಾನ್ಯವಾಗಿ ಸೇವಿಸಲಾಗುವ ತಂಬಾಕನ್ನು ಹೊತ್ತಿಸಲು ಒಂದು ಸಣ್ಣ ಕಕ್ಷೆ (ದ ಬೌಲ್), ಒಂದು ಸಣ್ಣ ಕಾಂಡ (ಶ್ಯಾಂಕ್) ಮತ್ತು ಕೊನೆಗೆ ಬಾಯಿಡಲು ಜಾಗ (ದ ಬಿಟ್) ಅನ್ನು ಹೊಂದಿರುತ್ತದೆ. ತಂಬಾಕಿನ ಚೂರುಗಳನ್ನು ಕಕ್ಷೆಯಲ್ಲಿಟ್ತು ಹೊತ್ತಿಸಲಾಗುತ್ತದೆ. ಕೊಳವೆ ಮೂಲಕ ಸೇವಿಸಲು ಬಳಸಲಾಗುವ ತಂಬಾಕುಗಳನ್ನು ಅತ್ಯಂತ ಎಚ್ಚರಿಕೆಯಿಂದ ಸಂಸ್ಕರಿಸಿ ಮಿಶ್ರ ಮಾಡಲಾಗುತ್ತದೆ ಹಾಗೂ ಇದರಿಂದ ಒದಗುವ ರುಚಿ-ಪರಿಮಳಗಳ ಸೂಕ್ಷ್ಮಗುಣಗಳು ಇನ್ನಾವುದೇ ತಂಬಾಕು ಉತ್ಪನ್ನಗಳಲ್ಲಿ ದೊರೆಯುವುದಿಲ್ಲ.
    ರೋಲ್-ಯುವರ್-ಓನ್
    ರೋಲ್-ಯುವರ್-ಓನ್ ಅಥವಾ ಕೈಯಿಂದ ಸುತ್ತಲಾಗುವ ಸಿಗರೆಟ್‌ಗಳನ್ನು ಸಾಧಾರಣವಾಗಿ ’ರೋಲೀಸ್’ ಎಂದು ಕರೆಯಲಾಗುತ್ತದೆ, ಮತ್ತು ಇವು ವಿಶೇಷವಾಗಿ ಯುರೋಪಿಯನ್ ದೇಶಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ. ಇವನ್ನು ಬಿಡಿ ತಂಬಾಕು, ಸಿಗರೆಟ್ ಕಾಗದ ಮತ್ತು ಫಿಲ್ಟರ್‌ಗಳನ್ನು ಬೇರೆಬೇರೆಯಾಗಿ ಕೊಂಡುಕೊಂಡು ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಇವುಗಳನ್ನು ತಯಾರಿಸಲು ಕಡಿಮೆ ವೆಚ್ಚ ತಗಲುತ್ತದೆ.
    ವೇಪರೈಸರ್
    ಸಸ್ಯಜನ್ಯ ಪದಾರ್ಥಗಳ ಸಕ್ರಿಯ ಪದಾರ್ಥಗಳನ್ನು ಪರಿಷ್ಕರಿಸಲು ಬಳಸುವ ಸಾಧನವನ್ನು ವೇಪರೈಸರ್ ಎನ್ನಲಾಗುತ್ತದೆ. ಸಸ್ಯವನ್ನು ಸುಟ್ಟು ಅದರ ಕೆರಳಿಸುವ, ವಿಷಮಯ, ಕಾರಿನೋಜೆನಿಕ್ ಪದಾರ್ಥಗಳನ್ನುಳ್ಳ ಹೊಗೆಯನ್ನು ಸೇವಿಸುವುದಕ್ಕೆ ಬದಲಾಗಿ ವೇಪರೈಸರ್ ಒಂದು ಪದಾರ್ಥವನ್ನು ಅರೆ ನಿರ್ವಾತದಲ್ಲಿ ಬಿಸಿಮಾಡುವುದರ ಮೂಲಕ ಸಸ್ಯದಲ್ಲಿರುವ ಸಕ್ರಿಯ ಪದಾರ್ಥವು ಬೆಂದು ಆವಿಯಾಗುವುದು. ಸಸ್ಯ ಪದಾರ್ಥಕ್ಕೆ ನೇರವಾಗಿ ಬೆಂಕಿಹಾಕಿ ಸುಡುವುದಕ್ಕೆ ಬದಲಾಗಿ ಬಳಸಲಾಗುವ ಈ ವಿಧಾನವನ್ನು ಔಷಧೀಯ ಧೂಮಪಾನಕ್ಕಾಗಿ ಅತ್ಯಂತ ಪರಿಣಾಮಕಾರೀ ವಿಧಾನವೆಂದು ಬಳಶಲಾಗುತ್ತದೆ.

ಶರೀರ ವಿಜ್ಞಾನ

ತಂಬಾಕು ಸೇವನೆಧೂಮಪಾನ 
ಇತರ ವಿಧಾನಗಳಿಗೆ ಹೋಲಿಸಿದರೆ ನಿಕೋಟಿನ್ ಅನ್ನು ಹೀರಿಕೊಳ್ಳಲು ಧೂಮಪಾನವನ್ನು ಅತ್ಯಂತ ಪರಿಣಾಮಕಾರೀ ವಿಧಾನವನ್ನಾಗಿ ತೋರಿಸುವ ಒಂದು ಗ್ರ್ಯಾಫ್.

ತಂಬಾಕಿನಲ್ಲಿರುವ, ಅದರಲ್ಲೂ ವಿಶೇಷವಾಗಿ ಸಿಗರೆಟ್‌ನಲ್ಲಿರುವ ಸಕ್ರಿಯ ಪದಾರ್ಥಗಳನ್ನು ಆ ಎಲೆಗಳನ್ನು ಹೊತ್ತಿಸಿ ಅದರಿಂದ ಹೊರಬರುವ ಆವಿರೂಪದ ಅನಿಲವನ್ನು ಸೇವಿಸುವುದರ ಮೂಲಕ ಪಡೆದುಕೊಳ್ಳಲಾಗುತ್ತದೆ. ಇದು ಶ್ವಾಸಕೋಶದಲ್ಲಿರುವ ಆಲ್ವಿಯೋಲೈ ಮೂಲಕ ಹೀರಲ್ಪಟ್ಟು ರಕ್ತಸಂಚಲನೆಗೆ ಅತಿಬೇಗನೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಸೇರಿಕೊಳ್ಳುತ್ತದೆ. ಶ್ವಾಸಕೋಶವು ಸುಮಾರು 300 ಮಿಲಿಯನ್ ಅಲ್ವಿಯೋಲೈಗಳನ್ನು ಹೊಂದಿದೆ ಮತ್ತು ಇದು 70 m2(ಒಂದು ಟೆನಿಸ್ ಕೋರ್ಟ್‌ನಷ್ಟು)ನಷ್ಟು ಮೇಲ್ಮೈ ಆವರಣದಷ್ಟಾಗುತ್ತವೆ. ಈ ವಿಧಾನದಲ್ಲಿ ಎಲ್ಲಾ ಹೊಗೆಯನ್ನೂ ಸೇವನೆ ಮಾಡಲಾಗುವುದಿಲ್ಲವಾದ್ದರಿಂದ ಇದು ಸಂಪೂರ್ಣವಾಗಿ ಸಕ್ಷಮವಾದ ವಿಧಾನವಲ್ಲವೆಂದು ಹೇಳಬಹುದು, ಏಕೆಂದರೆ ಬೆಂಕಿಯನ್ನು ಹೊತ್ತಿಸುವ ಪೈರೋಲಿಸಿಸ್ ಪ್ರಕ್ರಿಯೆಯ ಸಮಯದಲ್ಲಿ ಕೆಲವು ಸಕ್ರಿಯ ಪದಾರ್ಥಗಳು ಕಳೆದುಹೋಗಿಬಿಡುತ್ತವೆ. ಪೈಪ್ ಮತ್ತು ಸಿಗಾರ್‌ನ ಹೊಗೆಗಳನ್ನು ಅವುಗಳ ಅತಿಹೆಚ್ಚು ಕ್ಷಾರಗುಣದಿಂದ ಗಂಟಲ ನಾಳ ಮತ್ತು ಶ್ವಾಸಕೋಶಗಳನ್ನು ಕೆರಳಿಸುವುದೆಂಬ ಕಾರಣದಿಂದ ಒಳಗೆಳೆದುಕೊಳ್ಳಲಾಗುವುದಿಲ್ಲ. ಆದರೆ ಸಿಗರೆಟ್ ಹೊಗೆ(pH 5.3)ಗಿಂತಲೂ ಹೆಚ್ಚಿನ ತನ್ನ ಕ್ಷಾರಗುಣದಿಂದಾಗಿ(pH 8.5), ಯೂನಿಯನೈಸ್ಡ್ ನಿಕೋಟಿನ್ ಬಾಯಿಯ ಮ್ಯೂಕಸ್ ಮೆಂಬ್ರೇನ್ಗಳ ಮೂಲಕವೂ ಹೀರಿಕೊಳ್ಳಲ್ಪಡುತ್ತದೆ. ಹೀಗಿದ್ದಾಗ್ಯೂ ಸಿಗಾರ್ ಮತ್ತು ಪೈಪ್‌ನ ಮೂಲಕ ಹೀರಲ್ಪಡುವ ನಿಕೋಟಿನ್‌ನ ಪ್ರಮಾಣವು ಸಿಗರೆಟ್ ಹೊಗೆಯಿಂದ ಹೀರಲ್ಪಡುವ ಪ್ರಮಾಣಕ್ಕಿಂತ ಬಹಳ ಕಡಿಮೆಯಾಗಿದೆ. ಹೀಗೆ ಹೀರಿಕೊಳ್ಳಲಾದ ವಸ್ತುಸಾರಗಳು ನರಗಳ ತುದಿಗಳಲ್ಲಿ ರಾಸಾಯನಿಕ ಪ್ರತಿಕ್ರಿಯೆಗಳನ್ನುಂಟುಮಾಡುತ್ತವೆ. ಕಾಲಿನೆರ್ಜಿಕ್ ರಿಸೆಪ್ಟರ್ಗಳು ಆಗಾಗ್ಗೆ ನೈಸರ್ಗಿಕವಾಗಿರುವ ನ್ಯೂರೋಟ್ರಾನ್ಸ್‌ಮಿಟರ್ ಅಸಿಟೈಲ್‌ಕಾಲೈನ್ನಿಂದ ಉದ್ರೇಕಗೊಳ್ಳುತ್ತವೆ. ಅಸೆಟೈಲ್‌ಕಾಲೈನ್ ಮತ್ತು ನಿಕೋಟಿನ್ ರಾಸಾಯನಿಕವಾಗಿ ಒಂದೇ ರೀತಿಯಾಗಿರುವುದರಿಂದ ನಿಕೋಟಿನ್ ಕೂಡ ಈ ರಿಸೆಪ್ಟರ್ ಅನ್ನು ಉದ್ರೇಕಿಸಲು ಸಾಧ್ಯವಾಗುತ್ತದೆ. ಈ ನಿಕೋಟಿನಿಕ್ ಅಸಿಟೈಲ್‌ಕಾಲೈನ್ ರಿಸೆಪ್ಟರ್ಗಳ ಮೂಲವು ಸೆಂಟ್ರಲ್ ನರ್ವಸ್ ಸಿಸ್ಟಮ್ ಹಾಗೂ ಸ್ಕೆಲಿಟಲ್ ಮಾಂಸಖಂಡಗಳ ನರ್-ಮಾಂಸಖಂಡಗಳ ಕೂಡಿಕೆಯಾಗುವ ಜಾಗದಲ್ಲಿ ಸ್ಥಿತವಾಗಿರುತ್ತದೆ ಹಾಗೂ ಇವುಗಳ ಚಟುವಟಿಕೆಯಿಂದಾಗಿ ಹೃದಯದ ಬಡಿತ, ಸಾವಧಾನ, ಮತ್ತು ಪ್ರತಿಕ್ರಿಯೆಯ ವೇಗಗಳು ಹೆಚ್ಚಾಗುತ್ತವೆ. ನಿಕೋಟಿನ್ ಅಸಿಟೈಲ್‍ಕಾಲೈನ್ ಉದ್ದೀಪನವು ನೇರವಾಗಿ ವ್ಯಸನವನ್ನುಂಟುಮಾಡುವುದಿಲ್ಲ. ಆದರೆ, ನಿಕೋಟಿನ್ ರಿಸೆಪ್ಟರ್‌ಗಳಲ್ಲಿ ಡೋಪಾಮಿನ್ ಅನ್ನು ಬಿಡುಗಡೆಮಾಡಬಲ್ಲ ನ್ಯೂರಾನ್‌ಗಳು ಹೇರಳವಾಗಿರುವುದರಿಂದ ಡೋಪಾಮಿನ್ ಬಿಡುಗಡೆಯಾಗುತ್ತದೆ. ಡೋಪಾಮಿನ್‌ನ ಬಿಡುಗಡೆಯು ಆಹ್ಲಾದವನ್ನುಂಟುಮಾಡುತ್ತದೆ, ಮರುಪಯೋಗವನ್ನು ಉತ್ತೇಜಿಸುತ್ತದೆ ಮತ್ತು ಸಕ್ರಿಯ ಜ್ಞಾಪಕಶಕ್ತಿಯನ್ನೂ ಕೂಡ ಒಮ್ಮೊಮ್ಮೆ ಹೆಚ್ಚಿಸುತ್ತದೆ. ನಿಕೋಟಿನ್ ಮತ್ತು ಕೊಕೇನ್ ಒಂಡೇ ರೀತಿಯ ವಿನ್ಯಾಸದ ನ್ಯೂರಾನ್‌ಗಳನ್ನು ಉತ್ತೇಜಿಸುತ್ತವೆ ಮತ್ತು ಇದರಿಂದಾಗಿ ಈ ಮಾದಕವಸ್ತುಗಳಲ್ಲಿ ಸಾಮಾನ್ಯವಾಗಿರುವ ಸಬ್‌ಸ್ಟ್ರೇಟ್ಗಳಿವೆ ಎಂಬ ವಿಚಾರಕ್ಕೆ ಪುಷ್ಟಿ ದೊರೆಯುತ್ತದೆ. ತಂಬಾಕನ್ನು ಧೂಮಪಾನ ಮಾಡುವ ಸಂದರ್ಭದಲ್ಲಿ ಹೆಚ್ಚಿನ ನಿಕೋಟಿನ್ ಅನ್ನು ಹೊತ್ತಿಸಲಾಗುತ್ತದೆ. ಆದರೆ, ಇದರ ಹೊರತಾಗಿಯೂ ಕೂಡ ದೈಹಿಕ ಅವಲಂಬನೆಯನ್ನುಂಟುಮಾಡುವಷ್ಟು ವಸ್ತುಸಾರವು ಉಳಿದುಕೊಳ್ಳುತ್ತದೆ ಮತ್ತು ಇದರಿಂದಾಗಿ ಕಡಿಮೆಯಿಂದ ಜಾಸ್ತಿಮಟ್ಟದ ಮಾನಸಿಕ ಅವಲಂಬನೆ ಉಳಿದುಕೊಳ್ಳುತ್ತದೆ. ಇದಲ್ಲದೇ ತಂಬಾಕಿನ ಹೊಗೆಯಲ್ಲಿರುವ ಅಸಿಟಾಲ್ಡಿಹೈಡ್‌ನಿಂದಾಗಿ ಹಾರ್ಮೇನ್(ಒಂದು MAO ಇನ್‌ಹಿಬಿಟರ್)ನ ಸೃಷ್ಟಿಯಾಗುತ್ತದೆ. ನಿಕೋಟಿನ್ ಉತ್ತೇಜನಕ್ಕೆ ಪ್ರತಿಕ್ರಿಯೆಯಾಗಿ ನ್ಯೂಕ್ಲಿಯಸ್ ಅಕ್ಕಂಬೆನ್ಸ್ನಲ್ಲಿ ಡೋಪಾಮಿನ್ ಅನ್ನು ಬಿಡುಗಡೆ ಮಾಡುವುದಕ್ಕೆ ಕಾರಣವಾಗುವುದರ ಮೂಲಕ ಇದು ನಿಕೋಟಿನ್ ವ್ಯಸನವನ್ನುಂಟುಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವಂತೆ ಕಂಡುಬರುತ್ತದೆ. ಇಲಿಗಳ ಮೇಲೆ ನಡೆಸಲಾದ ಪ್ರಯೋಗಗಳಲ್ಲಿ ಆಗಾಗ್ಗೆ ನಿಕೋಟಿನ್ ಬಳಕೆ ಮಾಡಿದ ನಂತರ ಮರುಕಳಿಕೆಯನ್ನುಂಟುಮಾಡುವ ನ್ಯೂಕ್ಲಿಯಸ್ ಅಕ್ಕಂಬೆನ್ಸ್ ಜೀವಕೋಶಗಳಲ್ಲಿ ಕಡಿಮೆ ಪ್ರತಿಕ್ರಿಯೆ ಕಂಡುಬಂದಿದ್ದು, ಇದರಿಂದಾಗಿ ನಿಕೋಟಿನ್ ಮಾತ್ರವಲ್ಲದೆ ಇತರ ಪ್ರತಿಕ್ರಿಯೆಗಳು ಕೂಡಾ ಕಡಿಮೆಮಟ್ಟದಲ್ಲಿ ಮರುಕಳಿಸುತ್ತವೆ ಎಂಬ ಉತ್ತರ ದೊರಕುತ್ತದೆ.

ಜನಸಾಂದ್ರತೆ

ಟೆಂಪ್ಲೇಟು:Double image stack 2000ನೇ ಇಸವಿಯ ಹೊತ್ತಿಗೆ ಸುಮಾರು 1.22 ಬಿಲಿಯನ್ ಜನರು ಧೂಮಪಾನದ ಅಭ್ಯಾಸವನ್ನಿಟ್ಟುಕೊಂಡಿದ್ದರು. ಇದರಲ್ಲಿ ಯಾವುದೇ ಬದಲಾವಣೆಯಾಗಿರುವುದಿಲ್ಲವೆಂದು ಭಾವಿಸಿಕೊಂಡು ಸುಮಾರು 1.45 ಬಿಲಿಯನ್ ಜನರು 2010ರ ಹೊತ್ತಿಗೆ ಹಾಗೂ 1.5ರಿಂದ 1.9 ಬಿಲಿಯನ್ ಜನರು 2025ರ ಹೊತ್ತಿಗೆ ಧೂಮಪಾನ ಮಾಡುತ್ತಿರುವರೆಂದು ಊಹಿಸಲಾಗಿದೆ. ಧೂಮಪಾನ ಮಾಡುವವರ ಸಂಖ್ಯೆಯಲ್ಲಿ ಅಕಸ್ಮಾತ್ ಪ್ರತಿ ವರ್ಷವೂ ಶೇಕಡಾ 1ರಷ್ಟು ಘಟಿಸಿ ಸಂಪಾದನೆಯಲ್ಲಿ ಕನಿಷ್ಟ ಶೇಕಡಾ 2ರಷ್ಟು ಏರಿಕೆಯುಂಟಾದಲ್ಲಿ, ಧೂಮಪಾನ ಮಾಡುವವರ ಸಂಖ್ಯೆಯು 2010 ಮತ್ತು 2025ರ ವೇಳೆಗೆ ಸುಮಾರು 1.3 ಬಿಲಿಯನ್‌ನಷ್ಟಿರುವುದೆಂದು ಅಂದಾಜು ಹಾಕಲಾಗಿದೆ. ಧೂಮಪಾನವು ಸಾಮಾನ್ಯವಾಗಿ ಪುರುಷರಲ್ಲಿ ಮಹಿಳೆಯರಿಗಿಂತ ಐದುಪಟ್ಟು ಹೆಚ್ಚಾಗಿ ಕಂಡುಬರುತ್ತದೆ, ಆದರೆ ವಯೋಮಾನ ಕಡಿಮೆಯಾಗುತ್ತ ಹೋಗುತ್ತಿದ್ದಂತೆಯೇ ಈ ಅಂತರವೂ ಕಡಿಮೆಯಾಗುತ್ತ ಹೋಗುತ್ತದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಧೂಮಪಾನದ ಮಟ್ಟವು ಪುರುಷರಲ್ಲಿ ಶಿಖರವನ್ನು ತಲುಪಿ ಕಡಿಮೆಯಾಗಲು ಆರಂಭವಾಗಿದೆ, ಅದರೆ ಮಹಿಳೆಯರಲ್ಲಿ ಈ ಸಂಖ್ಯೆ ಹೆಚ್ಚಾಗುತ್ತಲೆ ಇದೆ. 2002ರ ಅಂಕಿ ಅಂಶಗಳ ಪ್ರಕಾರ, ಶೇಕಡಾ ಇಪ್ಪತ್ತರಷ್ಟು ಹದಿವಯಸ್ಸಿನ ಎಳೆಯರು (13–15) ಪ್ರಪಂಚದಾದ್ಯಂತ ಧೂಮಪಾನ ಮಾಡುತ್ತಾರೆ. ಇವರಲ್ಲಿ 80,000ದಿಂದ 100,000 ಮಕ್ಕಳು ಪ್ರತಿದಿನವೂ ಹೊಸತಾಗಿ ಧೂಮಪಾನ ಆರಂಭಿಸುತ್ತಾರೆ - ಇವರಲ್ಲಿ ಏಷ್ಯಾದಲ್ಲಿ ಜೀವಿಸುವ ಮಕ್ಕಳ ಸಂಖ್ಯೆಯ ಸುಮಾರು ಅರ್ಧದಷ್ಟಾಗಿದೆ. ತರುಣಾವಸ್ಥೆಯ ವರ್ಷಗಳಲ್ಲಿ ಧೂಮಪಾನ ಮಾಡಲು ಆರಂಭಿಸಿದ ಅರ್ಧದಷ್ಟು ಜನರು ಮುಂದಿನ 15ರಿಂದ 20 ವರ್ಷಗಳವರೆಗೆ ಅದನ್ನು ಮುಂದುವರೆಸುವ ಸಾಧ್ಯತೆಗಳು ಹೆಚ್ಚೆಂದು ಗುರುತಿಸಲಾಗಿದೆ. The World Health Organization (WHO) ಪ್ರಕಾರ "ಹೆಚ್ಚಿನ ರೋಗಗಳಿಂದುಂಟಾಗುವ ತೊಂದರೆಗಳು ಮತ್ತು ಅಕಾಲಿಕ ಸಾವುಗಳಿಗೆ ಬಡವರು ಸರಿಯಾದ ಪ್ರಮಾಣದಲ್ಲಿ ತಂಬಾಕನ್ನು ಬಳಸದೇ ಇರುವುದು ಪ್ರಮುಖ ಕಾರಣವಾಗಿದೆ". 1.22 ಬಿಲಿಯನ್ ಧೂಮಪಾನ ಮಾಡುವವರ ಪೈಕಿ, 1 ಬಿಲಿಯನ್ ಜನರು ಅಭಿವೃದ್ಧಿಶೀಲ ಅಥವಾ ಸ್ಥಿತ್ಯಂತರಗೊಳ್ಳುತ್ತಿರುವ ಅರ್ಥವ್ಯವಸ್ಥೆಗಳಲ್ಲಿ ಬದುಕುವವರಾಗಿದ್ದಾರೆ. ಅಭಿವೃದ್ಧಿ ಹೊಂದಿರುವ ಪ್ರಪಂಚದಲ್ಲಿ ಧೂಮಪಾನದ ಮಟ್ಟವು ಕಡಿಮೆಯಾಗಿದೆ ಅಥವಾ ಸಮತೋಲನಗೊಂಡಿದೆ. ಆದರೆ, ಅಭಿವೃದ್ಧಿಶೀಲ ಪ್ರಪಂಚದಲ್ಲಿ, ತಂಬಾಕಿನ ಸೇವನೆಯು 2002ರ ಅಂಕಿಅಂಶಗಳ ಪ್ರಕಾರ ಪ್ರತಿ ವರ್ಷಕ್ಕೆ ಶೇಕಡಾ 3.4ರಂತೆ ಏರಿಕೆಯಾಗುತ್ತಿದೆ . 2004ರಲ್ಲಿ WHOವು ಜಾಗತಿಕವಾಗಿ ಆಗುವ 58.8 ಮಿಲಿಯನ್ ಸಾವುಗಳಲ್ಲಿ, 5.4 ಮಿಲಿಯನ್ ತಂಬಾಕಿಗೆ ಸಂಬಂಧಿಸಿದವಾಗಿವೆ, ಮತ್ತು ಈ ಸಂಖ್ಯೆಯು 2007ರ ಪ್ರಕಾರ 4.9 ಮಿಲಿಯನ್‌ನಷ್ಟಿದ್ದಿತು. 2002ರ ಪ್ರಕಾರ, ಶೇಕಡಾ 70ರಷ್ಟು ಸಾವುಗಳು ಅಭಿವೃದ್ಧಿಶೀಲ ದೇಶಗಳಲ್ಲಿ ಉಂಟಾಗಿವೆ.

ಮನೋವಿಜ್ಞಾನ

ಆರಂಭ

ಹೆಚ್ಚಿನ ಧೂಮಪಾನಿಗಳು ಹರೆಯದಲ್ಲಿ ಅಥವಾ ತರುಣಾವಸ್ಥೆಯಲ್ಲಿ ಆರಂಭ ಮಾಡುತ್ತಾರೆ. ಧೂಮಪಾನವನ್ನು ಅಪಾಯಕರ ಹಾಗೂ ಬಂಡಾಯದ ಅಂಶಗಳನ್ನು ಹೊಂದಿರುವುದೆಂದು ಭಾವಿಸಲಾಗುವುದರಿಂದ ಇದು ಯುವಜನಾಂಗಕ್ಕೆ ಹೆಚ್ಚಾಗಿ ಹಿಡಿಸುತ್ತದೆ. ಉಚ್ಛವರ್ಗದ ಮಾದರಿಗಳು ಮತ್ತು ಜತೆಯವರು ಕೂಡ ಧೂಮಪಾನಕ್ಕೆ ಪ್ರೋತ್ಸಾಹ ನೀಡುತ್ತವೆ. ಹದಿಹರೆಯದವರು ತಮ್ಮ ಹಿರಿಯರಿಗಿಂತ ಹೆಚ್ಚಾಗಿ ಜತೆಯವರ ಪ್ರಭಾವಕ್ಕೊಳಗಾಗುವುದರಿಂದ ಸಿಗರೆಟ್‌ಗಳ ಸೇವನೆಯನ್ನು ಆರಂಭಿಸದಂತೆ ತಡೆಯುವ ಹಿರಿಯರ, ಶಾಲೆಗಳ ಮತ್ತು ಆರೋಗ್ಯ ಅಧಿಕಾರಿಗಳ ಪ್ರಯತ್ನಗಳು ಸಾಮಾನ್ಯವಾಗಿ ಯಶಸ್ವಿಯಾಗುವುದಿಲ್ಲ. ಧೂಮಪಾನ ಮಾಡಿರುವ ತಂದೆತಾಯಂದಿರ ಮಕ್ಕಳಿಗಿಂತ ಧೂಮಪಾನ ಮಾಡುವ ತಂದೆತಾಯಂದಿರಿರುವ ಮಕ್ಕಳು ಧೂಮಪಾನ ಮಾಡುವ ಸಾಧ್ಯತೆಗಳು ಜಾಸ್ತಿ. ಒಂದು ಅಧ್ಯಯನದ ಪ್ರಕಾರ, ತಂದೆತಾಯಂದಿರ ಧೂಮಪಾನದ ನಿಲುಗಡೆಯಿಂದ ಹರೆಯದಲ್ಲಿ ಧೂಮಪಾನ ಮಾಡುವುದು ಗಣನೀಯವಾಗಿ ಕಡಿಮೆಯಾಗುತ್ತದೆ, ಆದರೆ ಇಬ್ಬರಲ್ಲಿ ಓರ್ವ ಪೋಷಕರು ಧೂಮಪಾನ ಮಾಡುತ್ತಿದ್ದರೆ ಇದು ಕಡಿಮೆಯಾಗದು. ಒಂದು ಅಧ್ಯಯನವು ಹರೆಯದ ಧೂಮಪಾನಕ್ಕೂ ಮನೆಯಲ್ಲಿ ಹಿರಿಯರು ಮಾತ್ರ ಧೂಮಪಾನ ಮಾಡಬಹುದೆಂಬ ನಿಯಮ ವಿಧಿಸುವುದಕ್ಕೂ ಇರಬಹುದಾದ ಸಂಬಂಧದ ಕುರಿತು ಸಂಶೋಧನೆ ನಡೆಸಿತು. ಇದರ ಫಲಿತಾಂಶಗಳು ಮನೆಯಲ್ಲಿ ಧೂಮಪಾನದ ವಿರುದ್ಧ ಪ್ರತಿಬಂಧಗಳಿದ್ದಾಗ ಅದನ್ನು ಪ್ರಯತ್ನಿಸುವ ಸಾಧ್ಯತೆಗಳು ಮಾಧ್ಯಮಿಕ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳಲ್ಲಿ ಬಹಳ ಕಡಿಮೆಯೆಂದು ತೋರಿಸಿತು. ಹಲವಾರು ಧೂಮಪಾನ-ವಿರೋಧೀ ಸಂಘಟನೆಗಳು ಹದಿಹರೆಯದವರು ಧೂಮಪಾನವನ್ನು ಜತೆಯವರ ಒತ್ತಡ ಮತ್ತು ಸ್ನೇಹಿತರು ಬಿಂಬಿಸುವ ಸಾಂಸ್ಕೃತಿಕ ಚಿತ್ರಣದಿಂದಾಗಿ ಆರಂಭಿಸುತ್ತಾರೆ ಎಂದು ಪ್ರತಿಪಾದಿಸುತ್ತವೆ. ಆದರೆ ಒಂದು ಅಧ್ಯಯನವು ಧೂಮಪಾನ ಮಾಡಲು ನೇರವಾಗಿ ಒತ್ತಡ ಹೇರುವುದು ಹದಿಹರೆಯದವರ ಧೂಮಪಾನದ ಮೇಲೆ ಗಣನೀಯ ಪರಿಣಾಮ ಬೀರದಿದ್ದುದನ್ನು ಕಂಡುಕೊಂಡಿತು. ಆ ಅಧ್ಯಯನದ ಪ್ರಕಾರ ಹದಿಹರೆಯದವರಲ್ಲಿ ಧೂಮಪಾನ ಮಾಡಲು ಸಾಮಾನ್ಯ ಪ್ರಮಾಣಕ್ಕೆ ತಕ್ಕದಾದ ಮತ್ತು ನೇರವಾದ ಒತ್ತಡಗಳೆರಡೂ ಕಡಿಮೆ ಪ್ರಮಾಣದಲ್ಲಿರುವುದು ಕಂಡುಬಂದಿತು. ಇದೇ ರೀತಿಯ ಇನ್ನೊಂದು ಅಧ್ಯಯನವು ಧೂಮಪಾನವನ್ನು ಆರಂಭಿಸುವುದರಲ್ಲಿ ವ್ಯಕ್ತಿಗಳ ಪಾತ್ರವು ಈ ಹಿಂದೆ ಅಂಗೀಕರಿಸಲಾಗಿರುವುದಕ್ಕಿಂತ ಹೆಚ್ಚಿನದಾಗಿದೆಯೆಂದೂ, ಜತೆಯವರ ಒತ್ತಡವನ್ನು ಹೊರತುಪಡಿಸಿ ಇತರ ಸಾಮಾಜಿಕ ಪ್ರಕ್ರಿಯೆಗಳನ್ನೂ ಪರಿಗಣನೆಗೆ ತೆಗೆದುಕೊಳ್ಳುವ ಅವಶ್ಯಕತೆ ಇದೆಯೆಂದೂ ತೋರಿಸಿಕೊಟ್ಟಿತು. ಇನ್ನೊಂದು ಅಧ್ಯಯನವು ಎಲ್ಲಾ ವಯೋಮಾನ ಮತ್ತು ಲಿಂಗಗಳನ್ನೊಳಗೊಂಡ ವರ್ಗಗಳಲ್ಲಿಯೂ ಸಮೀಪವರ್ತಿಗಳ ಒತ್ತಡವು ಗಣನೀಯವಾಗಿ ಧೂಮಪಾನದ ನಡವಳಿಕೆಯೊಂದಿಗೆ ಸಂಬಂಧ ಹೊಂದಿರುವುದನ್ನು ಕಂಡುಕೊಂಡಿತಾದರೂ 12–13 ವಯಸ್ಸಿನ ಬಾಲಕಿಯರಲ್ಲಿ ಧೂಮಪಾನದ ನಡವಳಿಕೆಯಲ್ಲಿ ಆಂತರಿಕ ವೈಯುಕ್ತಿಕ ಅಂಶಗಳು ಅದೇ ವಯಸ್ಸಿನ ಬಾಲಕರಿಗಿಂತ ಹೆಚ್ಚು ಗಣನೀಯ ಪ್ರಭಾವ ಬೀರುವುದಾಗಿ ಕಂಡುಬಂದವು. 14–15 ವಯೋಮಾನದ ಗುಂಪಿನಲ್ಲಿ ಒಂದು ಸಮೀಪವರ್ತಿಗಳ ಒತ್ತಡದ ಮಾರ್ಪಾಟು ಹುಡುಗರಿಗಿಂತ ಹೆಚ್ಚಾಗಿ ಹುಡುಗಿಯರ ಧೂಮಪಾನದ ಬಗ್ಗೆ ವಿಷಯಗಳನ್ನು ತಿಳಿಸಿತು. ಹದಿಹರೆಯದವರ ಧೂಮಪಾನಕ್ಕೆ ಸಮೀಪವರ್ತಿಗಳ ಒತ್ತಡ ಕಾರಣವೋ ಅಥವಾ ವೈಯುಕ್ತಿಕ ಆಯ್ಕೆಯೋ ಎಂಬುದು ಚರ್ಚಾಸ್ಪದ ವಿಷಯವಾಗಿದೆ. ಸಮೀಪವರ್ತಿಗಳ ಒತ್ತಡ ವಿರುದ್ಧದಿಕ್ಕಿಗೆ ತಿರುಗುವುದೂ ಕೂಡ ನಿಜ ಎಂದು ವಾದ ಮಾಡಬಹುದು; ಎಂದರೆ ಹೆಚ್ಚಿನ ಸಮೀಪವರ್ತಿಗಳು ಧೂಮಪಾನ ಮಾಡದಿರುವವರಾಗಿದ್ದು ಧೂಮಪಾನ ಮಾಡುವವರನ್ನು ಬಹಿಷ್ಕರಿಸುವವರಾಗಿರಬಹುದು.[ಸೂಕ್ತ ಉಲ್ಲೇಖನ ಬೇಕು] ಹಾನ್ಸ್ ಐಸೆಂಕ್ ಮತ್ತಿತರ ಮನಶಾಸ್ತ್ರಜ್ಞರೊಬ್ಬನಿಗಿರಬಹುದಾದ ಸಾಂಕೇತಿಕ ಗುಣಲಕ್ಷಣಗಳ ಧೂಮಪಾನಿಯ ಚಿತ್ರಣವನ್ನು ಅಭಿವೃದ್ಧಿಪಡಿಸಿದ್ದಾರೆ. ಬಹಿರ್ಮುಖೀ ವ್ಯಕ್ತಿತ್ವವು ಧೂಮಪಾನದೊಂದಿಗೆ ಅತಿ ಹೆಚ್ಚಾಗಿ ಕಂಡುಬರುವ ನಡವಳಿಕೆಯಾಗಿದೆ, ಮತ್ತು ಧೂಮಪಾನಿಗಳು ಸಾಮಾನ್ಯವಾಗಿ ಸ್ನೇಹಪರರೂ, ಕ್ಷಣಿಕ ಬುದ್ಧಿಯವರೂ, ಅಪಾಯಗಳನ್ನು ಲೆಕ್ಕಿಸದಿರುವವರೂ, ಉದ್ದೀಪನವನ್ನು ಬಯಸುವವರೂ ಆಗಿರುತ್ತಾರೆ. ವ್ಯಕ್ತಿತ್ವ ಮತ್ತು ಸಾಮಾಜಿಕ ಅಂಶಗಳು ಜನರನ್ನು ಧೂಮಪಾನ ಮಾಡಲು ಪ್ರೇರೇಪಿಸಿದರೂ ಕೂಡ, ನಿಜವಾಗಿ ಈ ಅಭ್ಯಾಸವು ಆಪರೆಂಟ್ ಕಂಡಿಶನಿಂಗ್ ಎಂದು ಕರೆಯಲಾಗುವ ವ್ಯಕ್ತಿತ್ವದ ನಿಯಮಬದ್ಧತೆಯ ಕಾರ್ಯಕ್ಕೆ ಸಂಬಂಧಿಸಿದ್ದಾಗಿದೆ. ಮೊದಮೊದಲ ಹಂತಗಳಲ್ಲಿ ಧೂಮಪಾನವು ಆಹ್ಲಾದಕರ ಭಾವನೆಯನ್ನುಂಟುಮಾಡುತ್ತದೆ (ಡೋಪಾಮಿನ್ ವ್ಯವಸ್ಥೆಯ ಮೇಲೆ ಬೀರುವ ಪರಿಣಾಮದಿಂದಾಗಿ) ಮತ್ತು ಇದರಿಂದಾಗಿ ಧನಾತ್ಮಕ ಮರುಪಯೋಗಕ್ಕೆ ಕಾರಣವಾಗುತ್ತದೆ. ಕೆಲವು ವ್ಯಕ್ತಿಗಳು ಹಲವು ವರ್ಷಗಳ ಕಾಲ ಧೂಮಪಾನ ಮಾಡುತ್ತ ಹೋದಹಾಗೇ ಉಪಸಂಹರಣದ ಲಕ್ಷಣಗಳಿಂದ ತಪ್ಪಿಸಿಕೊಳ್ಳುವುದು ಮತ್ತು ಋಣಾತ್ಮಕ ಮರುಪಯೋಗಗಳು ಮುಖ್ಯವಾದ ಪ್ರೇರಕಗಳಾಗುತ್ತವೆ.[ಸೂಕ್ತ ಉಲ್ಲೇಖನ ಬೇಕು]

ದೀರ್ಘ ಪ್ರಯತ್ನ

ತಮ್ಮ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುವ ಚಟುವಟಿಕೆಯಲ್ಲಿ ತೊಡಗಿರುವ ಕಾರಣದಿಂದಾಗಿ ಧೂಮಪಾನಿಗಳು ತಮ್ಮ ನಡವಳಿಕೆಯನ್ನು ಸಾಮಾನ್ಯವಾಗಿ ವಿಚಾರವಾದದ ರೂಪದಲ್ಲಿ ಸಮರ್ಥಿಸಿಕೊಳ್ಳುತ್ತಾರೆ. ಬೇರೆ ರೀತಿಯಲ್ಲಿ ಹೇಳಬೇಕೆಂದರೆ, ಅವರು ತಮಗೆ ಧೂಮಪಾನವು ಏಕೆ ಸಮ್ಮತವೆಂದು ತಿಳಿಸಲು ಅತಾರ್ಕಿಕವಾದ ಆದರೆ ಸಮಜಾಯಿಶಿ ನೀಡುವಂತಹ ಕಾರಣಗಳನ್ನು ನೀಡತೊಡಗುತ್ತಾರೆ. ಉದಾಹರಣೆಗೆ, ಧೂಮಪಾನಿಯಾಗಿರುವ ವ್ಯಕ್ತಿಯೊಬ್ಬರು ಎಲ್ಲರೂ ಸತ್ತೇ ಸಾಯುತ್ತಾರೆ, ಆದ್ದರಿಂದ ಧೂಮಪಾನದಿಂದ ಏನೂ ಬದಲಾಗದು ಎಂದು ತಮ್ಮ ವ್ಯಸನವನ್ನು ಸಮರ್ಥಿಸಿಕೊಳ್ಳಬಹುದು. ಅಥವಾ ಒಬ್ಬ ವ್ಯಕ್ತಿಯು ಧೂಮಪಾನವು ಒತ್ತಡವನ್ನು ಶಮನ ಮಾಡುವುದೆಂದೋ ಅಥವಾ ಅದರ ಬಳಕೆಯ ಅಪಾಯವನ್ನು ಸಮರ್ಥಿಸುವ ಉಪಯೋಗಗಳಿವೆಯೆಂದೋ ನಂಬಿಕೊಳ್ಳಬಹುದು. ಈ ರೀತಿಯ ನಂಬಿಕೆಗಳು ದುಮ್ಮಾನವನ್ನು ಕಡಿಮೆಮಾಡಿ ಜನರು ಧೂಮಪಾನವನ್ನು ಮುಂದುವರಿಸಲು ಪ್ರೇರೇಪಿಸುತ್ತವೆ.[ಸೂಕ್ತ ಉಲ್ಲೇಖನ ಬೇಕು] ಧೂಮಪಾನಿಗಳು ತಮ್ಮ ಈ ಚಟುವಟಿಕೆಗೆ ನೀಡುವ ಕಾರಣಗಳನ್ನು ವಿಸ್ತೃತವಾಗಿ ವ್ಯಸನದ ಧೂಮಪಾನ , ಆಹ್ಲಾದಕ್ಕಾಗಿ ಧೂಮಪಾನ , ಒತ್ತಡವನ್ನು ಕಡಿಮೆಮಾಡುವುದು/ಆರಾಮ , ಸಾಮಾಜಿಕ ಧೂಮಪಾನ , ಉದ್ದೀಪನ , ಅಭ್ಯಾಸ/ಚಾಳಿ , ಮತ್ತು ವ್ಯಾವಹಾರಿಕ ಎಂದು ವಿಭಾಗಿಸಲಾಗಿದೆ. ಪ್ರತಿಯೊಂದು ಕಾರಣಗಳಲ್ಲಿಯೂ ಲೈಂಗಿಕವಾದ ವ್ಯತ್ಯಾಸಗಳಿವೆ, ಉದಾಹರಣೆಗೆ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಧೂಮಪಾನಕ್ಕೆ ಒತ್ತಡ ಕಡಿಮೆ ಮಾಡುವುದು/ಆರಾಮ ನೀಡುವುದು , ಉದ್ದೀಪನ ಮತ್ತು ಸಾಮಾಜಿಕ ಧೂಮಪಾನ ದ ಕಾರಣಗಳನ್ನು ನೀಡುತ್ತಾರೆ. ಕೆಲವು ಧೂಮಪಾನಿಗಳು ಧೂಮಪಾನದ ಖಿನ್ನತೆಯ ಪರಿಣಾಮವು ಅವರಿಗೆ ಸಾಂತ್ವನ ನೀಡುತ್ತದೆಂದೂ, ಹೆಚ್ಚಿನ ಸಾರೆ ಅದು ಅವರ ಏಕಾಗ್ರತೆಯನ್ನು ಹೆಚ್ಚಿಸುತ್ತದೆಯೆಂದೂ ವಾದಿಸುತ್ತಾರೆ. ಆದರೆ, ಇಂಪೀರಿಯಲ್ ಕಾಲೇಜ್ ಆಫ್ ಲಂಡನ್ನ ಪ್ರಕಾರ, "ನಿಕೋಟಿನ್ ಉದ್ದೀಪನ ಮತ್ತು ಖಿನ್ನತೆ - ಈ ಎರಡೂ ರೀತಿಯ ಪರಿಣಾಮಗಳನ್ನು ಬೀರುವಂತೆ ತೋರುತ್ತದೆ, ಮತ್ತು ಅದರ ಪರಿಣಾಮವು ಬಳಸುವವರ ಮನೋಸ್ಥಿತಿ, ಪರಿಸರ ಮತ್ತು ಸಂದರ್ಭಗಳನ್ನು ಅವಲಂಬಿಸಿರುವ ಸಾಧ್ಯತೆಗಳು ಜಾಸ್ತಿ. ಅಧ್ಯಯನಗಳು ಸೂಚಿಸುವ ಪ್ರಕಾರ ಕಡಿಮೆ ಪ್ರಮಾಣದ ಬಳಕೆಯಿಂದ ಖಿನ್ನತೆಯುಂಟಾದರೆ ಹೆಚ್ಚಿನ ಪ್ರಮಾಣದಲ್ಲಿ ಬಳಸಿದಾಗ ಉದ್ದೀಪನವನ್ನುಂಟುಮಾಡುತ್ತದೆ." ಆದರೆ ನಿಕೋಟಿನ್ ಬಳಸುವಾಗಿನ ಮತ್ತು ಬಳಸುವುದನ್ನು ನಿಲ್ಲಿಸಿದಾಗ ಉಂಟಾಗುವ ಮಾದಕವಸ್ತು ಪರಿಣಾಮಗಳ ನಡುವೆ ವ್ಯತ್ಯಾಸವನ್ನರಿಯಲು ಸಾಧ್ಯವೇ ಇಲ್ಲ.[ಸೂಕ್ತ ಉಲ್ಲೇಖನ ಬೇಕು] ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ಹಾನಿಕರ ಪರಿಣಾಮಗಳಿಗೆ ತಡೆಯೊಡ್ಡುವ ಸಾಮರ್ಥ್ಯವಿಲ್ಲದಂತೆ ಮಾಡುವುದು ಆಶಾವಾದದ ಪಕ್ಷಪಾತಕ್ಕೆ ಒಂದು ಪಕ್ಕಾ ಉದಾಹರಣೆಯಾಗಿದೆ. ಇದಕ್ಕೆ ಇನ್ನೊಂದು ಕಾರಣ ಮುಂದಾಗಬಹುದಾದ್ದರ ಬಗ್ಗೆ ಅರಿವಿಲ್ಲದಿರುವುದು, ಎಂದರೆ ಇದರ ಪರಿಣಾಮಗಳು ಸಾಧಾರಣವಾಗಿ ಮುಪ್ಪಿನಲ್ಲಿ ಕಂಡುಬರುತ್ತವೆಂದು ಗೊತ್ತಿಲ್ಲದಿರುವುದು, ಹಾಗೂ ಇದರಿಂದ ವ್ಯಕ್ತಿತ್ವದ ಮೇಲೆ ಮತ್ತು ನಡವಳಿಕೆಯ ಮೇಲೆ ಪರಿಣಾಮವಾಗಿ ಅಪಾಯಕ್ಕೆ ಒಡ್ಡಿಕೊಳ್ಲುವ ಅಥವಾ ಸ್ವ-ವಿನಾಶದ ಪ್ರವೃತ್ತಿ ಬೆಳೆಯುತ್ತದೆಂದು ತಿಳಿಯದಿರುವುದು.[ಸೂಕ್ತ ಉಲ್ಲೇಖನ ಬೇಕು]

ನಮೂನೆಗಳು

ಹಲವಾರು ಅಧ್ಯಯನಗಳು ಸಿಗರೇಟ್ ಮಾರಾಟ ಮತ್ತು ಧೂಮಪಾನಗಳು ಸ್ಪಷ್ಟವಾದ ಕಾಲ-ಸಂಬಂಧಿತ ನಮೂನೆಗಳನ್ನು ಹೊಂದಿವೆ ಎನ್ನುವುದನ್ನು ಸ್ಪಷ್ಟಪಡಿಸುತ್ತವೆ. ಉದಾಹರಣೆಗೆ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಿಗರೇಟ್ ಮಾರಾಟವು ಬಲವಾಗಿ ಋತುಮಾನದ ನಮೂನೆಯನ್ನು ಅನುಸರಿಸುತ್ತದೆ, ಇದು ಹೇಗೆಂದರೆ ಸಿಗರೇಟ್‌ಗಳ ಮಾರಾಟವು ಬೇಸಿಗೆಯ ತಿಂಗಳುಗಳಲ್ಲಿ ಅತಿ ಹೆಚ್ಚಾಗಿಯೂ, ಚಳಿಗಾಲದ ತಿಂಗಳುಗಳಲ್ಲಿ ಅತಿ ಕಡಿಮೆಯಾಗಿಯೂ ಇರುವುದು ಕಂಡುಬಂದಿದೆ. ಇದರೊಂದಿಗೇ, ಧೂಮಪಾನವು ಕೂಡ ಸುಮಾರು 24ಗಂಟೆಗಳ ಸರ್ಕೇಡಿಯನ್ ವಿನ್ಯಾಸವನ್ನು ತೋರುತ್ತದೆ; ಇದರಲ್ಲಿ ಅತ್ಯಂತ ಉನ್ನತ ಮಟ್ಟವು ಬೆಳಜಾವದಲ್ಲಿ ಎಚ್ಚರವಾದಾಗ ಮತ್ತು ರಾತ್ರೆ ಮಲಗುವುದಕ್ಕೆ ಕೊಂಚ ಸಮಯ ಮೊದಲು ಕಂಡುಬರುತ್ತದೆ.

ಪ್ರಭಾವ

ಆರ್ಥಿಕ

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹೊಂದಿರುವ ದೇಶಗಳಲ್ಲಿ ಸಮಾಜವು ರೋಗಗ್ರಸ್ತರಾಗುವ ಧೂಮಪಾನಿಗಳ ವೈದ್ಯಕೀಯ ನೆರವಿನ ವೆಚ್ಚವನ್ನು ಹೆಚ್ಚಿದ ತೆರಿಗೆಗಳ ಮೂಲಕ ಭರಿಸುತ್ತದೆ. ಈ ವಿಷಯವಾಗಿ ಎರಡು ರೀತಿಯ ವಾದಗಳಿವೆ, "ಧೂಮಪಾನ-ಪರ" ವಾದವು ಧೂಮಪಾನದ ಅತಿವ್ಯಸನಿಗಳು ಮುಪ್ಪಡರಿದವರಿಗೆ ತಗುಲಬಹುದಾದ ಹೆಚ್ಚು ವೆಚ್ಚದ, ತೀವ್ರಮಟ್ಟದ ಕಾಯಿಲೆಗಳು ತಗುಲುವವರೆಗೂ ಬದುಕಿರುವುದಿಲ್ಲವಾದ್ದರಿಂದ ಸಮಾಜದ ಆರೋಗ್ಯಕ್ಷೇಮದ ಹೊರೆಯು ತಗ್ಗುತ್ತದೆ. "ಧೂಮಪಾನ-ವಿರೋಧೀ" ವಾದವು ಆರೋಗ್ಯಕ್ಷೇಮದ ಹೊರೆ ಹೆಚ್ಚಾಗುತ್ತದೆ, ಏಕೆಂದರೆ ಧೂಮಪಾನದ ಅತಿವ್ಯಸನಿಗಳು ಸಾಮಾನ್ಯ ಜನತೆಗಿಂತ ಸಣ್ಣವಯಸ್ಸಿನಲ್ಲಿಯೇ ತೀವ್ರಮಟ್ಟದ ರೋಗಗಳಿಗೆ ತುತ್ತಾಗುತ್ತಾರೆ ಎಂದು ಸೂಚಿಸುತ್ತದೆ. ಎರಡೂ ಕಡೆಗಳ ದತ್ತಾಂಶಗಳು ಸೀಮಿತವಾಗಿವೆ. Centers for Disease Control and Prevention 2002ರಲ್ಲಿ ಪ್ರಕಟಿಸಿದ ಸಂಶೋಧನೆಯ ಪ್ರಕಾರ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಾರಾಟವಾಗುವ ಪ್ರತಿಯೊಂದು ಪ್ಯಾಕ್ ಸಿಗರೆಟ್‌ನಿಂದ ದೇಶಕ್ಕೆ $7ಕ್ಕಿಂತ ಹೆಚ್ಚು ವೈದ್ಯಕೀಯ ವೆಚ್ಚವಾಗುವುದು ಮತ್ತು ಉತ್ಪಾದನಾ ಸಾಮರ್ಥ್ಯದ ನಷ್ಟವುಂಟಾಗುವುದು. ಇನ್ನೊಂದು ಅಧ್ಯಯನದ ಪ್ರಕಾರ ಈ ವೆಚ್ಚವೂ ಇನ್ನೂ ಹೆಚ್ಚು ಎಂದರೆ ಪ್ರತಿ ಪ್ಯಾಕ್‌ಗೆ ಸುಮಾರು $41ರಷ್ಟು ಇದೆಯಾದರೂ ಇದು ವೈಯುಕ್ತಿಕ ಮತ್ತು ಕುಟೂಂಬಕ್ಕೆ ಸಂಬಂಧಿಸಿದ ವೆಚ್ಚವಾಗಿದೆ. ಈ ಅಧ್ಯಯನದ ಕರ್ತೃವೊಬ್ಬರು ಸಮಾಜಕ್ಕೆ ಅತಿಕಡಿಮೆ ವೆಚ್ಚವಾಗುವುದರ ಕಾರಣವನ್ನು ಈ ರೀತಿಯಾಗಿ ವಿವರಿಸುತ್ತಾರೆ "ಈ ಸಂಖ್ಯೆ ಕಡಿಮೆಯಾಗಿರಲು ಕಾರಣವೆಂದರೆ ವೈಯುಕ್ತಿಕ ಪೆನ್ಷನ್‌ಗಳು, ಸೋಶಿಯಲ್ ಸೆಕ್ಯುರಿಟಿ ಮತ್ತು ಮೆಡಿಕೇರ್ - ಇವು ವೆಚ್ಚವನ್ನು ನಿರ್ಧರಿಸುವಲ್ಲಿ ಪ್ರಮುಖ ಅಂಶಗಳಾಗಿವೆ, ಮತ್ತು ಇವುಗಳಿಂದ ತಿಳಿದುಬರುವುದೇನೆಂದರೆ ಧೂಮಪಾನವು ನಿಜವಾಗಿ ಹಣ ಉಳಿಸುತ್ತದೆ ಎಂಬುದು. ಧೂಮಪಾನಿಗಳು ಸಣ್ಣ ವಯಸ್ಸಿನಲ್ಲಿಯೇ ಮರಣ ಹೊಂದುವುದರಿಂದ ತಾವು ಈ ಇಲಾಖೆಗಳಲ್ಲಿ ಹುಡಿದ ಹಣವನ್ನು ಹಿಂತೆಗೆದುಕೊಳ್ಳುವದು ಅವರಿಗೆ ಸಾಧ್ಯವಾಗುವುದಿಲ್ಲ." ಇದಕ್ಕೆ ಪ್ರತಿಕೂಲವಾಗಿ, ಕೆಲವು ಅವೈಜ್ಞಾನಿಕ ಅಧ್ಯಯನಗಳು, ಉದಾಹರಣೆಗೆ ಫಿಲಿಪ್ ಮೊರಿಸ್ ಜೆಕ್ ಗಣರಾಜ್ಯದಲ್ಲಿ ನಡೆಸಿದ ಅಧ್ಯಯನ ಮತ್ತು ಕ್ಯಾಟೋ ಇನ್ಸ್‌ಸ್ಟಿಟ್ಯೂಟ್ ನಡೆಸಿದ ಇನ್ನೊಂದು ಅಧ್ಯಯನ, ಈ ವಾದದ ವಿರುದ್ಧಸ್ಥಾನದಲ್ಲಿ ನಿಲ್ಲುತ್ತವೆ. ಯಾವುದೇ ಅಧ್ಯಯನವನ್ನು ಸಮೀಪವರ್ತಿಗಳು ಪರಾಮರ್ಶೆ ಮಾಡಿಲ್ಲ ಅಥವಾ ವೈಜ್ಞಾನಿಕ ನಿಯತಕಾಲಿಕದಲ್ಲಿ ಮುದ್ರಿಸಿಲ್ಲ ಮತ್ತು ಕ್ಯಾಟೋ ಇನ್ಸ್‌ಟಿಟ್ಯೂಟ್ ಇದಕ್ಕೂ ಮೊದಲು ತಂಬಾಕು ಕಂಪೆನಿಗಳಿಂದ ಧನಸಹಾಯವನ್ನೂ ಕೂಡ ಪಡೆದುಕೊಂಡಿತ್ತು.[ಸೂಕ್ತ ಉಲ್ಲೇಖನ ಬೇಕು] ಈ ಅಧ್ಯಯನಕ್ಕಾಗಿ ವಿಶೇಷವಾಗಿ ಕ್ಷಮಾಪಣೆಯನ್ನು ಕೇಳಿರುವ ಫಿಲಿಪ್ ಮೊರಿಸ್, "ಈ ಅಧ್ಯಯನದ ಧನಸಹಾಯ ಮತ್ತು ಸಾರ್ವಜನಿಕ ಬಿಡುಗಡೆಯು ಇತರ ವಿಷಯಗಳ ಜತೆಗೇ ಧೂಮಪಾನಿಗಳ ಅಕಾಲಿಕ ಸಾವಿನಿಂದ ಜೆಕ್ ಗಣರಾಜ್ಯಕ್ಕೆ ಲಾಭವುಂಟಾಗಿದೆಯೆಂದು ಹೇಳುವುದರ ಮೂಲಕ ಪ್ರಾಥಮಿಕ ಮಾನವ ಮೌಲ್ಯಗಳನ್ನು ಸಂಪೂರ್ಣವಾಗಿ ಕಡೆಗಣಿಸುವುದರ ಜತೆಗೇ ಕೆಟ್ಟ ತೀರ್ಮಾನಕ್ಕೆ ಬಂದಿತು. ಈ ಅಧ್ಯಯನವನ್ನು ನಮ್ಮ ಒಂದು ತಂಬಾಕು ಕಂಪನಿಯು ಪ್ರಾಯೋಜಿಸಿದ್ದು ಕೇವಲ ಒಂದು ಅಚಾತುರ್ಯವಷ್ಟೇ ಅಲ್ಲ ಅದು ಒಂದು ದೊಡ್ಡ ತಪ್ಪು. ಫಿಲಿಪ್ ಮೊರಿಸ್‌ನ ನಾವೆಲ್ಲರೂ, ಎಲ್ಲಿ ಕೆಲಸ ಮಾಡುತ್ತಿದ್ದರೂ ಪರವಾಗಿಲ್ಲ, ಇದಕ್ಕಾಗಿ ಕ್ಷಮೆಯಾಚಿಸುತ್ತೇವೆ. ಧೂಮಪಾನ ಉಂಟುಮಾಡುವ ನಿಜವಾದ, ತೀವ್ರವಾದ ಮತ್ತು ಪ್ರಮುಖವಾದ ಖಾಯಿಲೆಗಳಿಂದ ಯಾರಿಗೂ ಲಾಭವುಂಟಾಗಲು ಸಾಧ್ಯವಿಲ್ಲ." ಎಂದು ಹೇಳಿಕೆ ನೀಡಿತು. 1970 ಮತ್ತು 1995ರ ನಡುವೆ ಬಡ, ಅಭಿವೃದ್ಧಿಶೀಲ ರಾಷ್ಟ್ರಗಳ ತಲಾ ವಾರ್ಷಿಕ ಸಿಗರೆಟ್ ಬಳಕೆಯಲ್ಲಿ ಶೇಕಡಾ 67ರಷ್ಟು ಏರಿಕೆಯುಂಟಾಯಿತು ಮತ್ತು ಶ್ರೀಮಂತ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಇದು ಶೇಕಡಾ 10ರಷ್ಟು ಇಳಿಕೆಯನ್ನು ತೋರಿಸಿತು. ಶೇಕಡಾ ಎಂಭತ್ತರಷ್ಟು ಧೂಮಪಾನಿಗಳು ಇಂದು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ವಾಸಿಸುತ್ತಾರೆ. 2030ರ ಹೊತ್ತಿಗೆ World Health Organization (WHO)ರ ಊಹೆಯ ಪ್ರಕಾರ ಪ್ರತಿವರ್ಷವೂ 10 ಮಿಲಿಯನ್ ಜನರು ಧೂಮಪಾನಕ್ಕೆ ಸಂಬಂಧಿಸಿದ ಕಾಯಿಲೆಗಳಿಂದಾಗಿ ಮರಣಹೊಂದುವರೆಂದೂ, ಇದರಿಂದ ಧೂಮಪಾನವು ಜಾಗತಿಕವಾಗಿ ಸಾವಿಗೆ ಅತಿದೊಡ್ಡ ಕಾರಣವಾಗುವುದೆಂದೂ, ಇದರಲ್ಲಿ ಮಹಿಳೆಯರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಿರುವುದೆಂದೂ ಸೂಚಿಸಲಾಗಿದೆ. 20ನೇ ಶತಮಾನದ ಧೂಮಪಾನದಿಂದುಂಟಾದ ಸಾವುಗಳ ಮಟ್ಟಕ್ಕಿಂತ 21ನೇ ಶತಮಾನದ ಧೂಮಪಾನದ ಸಾವುಗಳ ಮಟ್ಟವು ಹತ್ತು ಪಟ್ಟು ಹೆಚ್ಚಾಗಿರುವುದೆಂದು WHO ಭವಿಷ್ಯ ಸಾರಿದೆ. ("Washingtonian" ಮ್ಯಾಗಜೀನ್, ಡಿಸೆಂಬರ್ 2007).

ಆರೋಗ್ಯ

ತಂಬಾಕು ಸೇವನೆಧೂಮಪಾನ 
ತಂಬಾಕು ಧೂಮಪಾನದ ಸಾಮಾನ್ಯವಾದ ದುಷ್ಪರಿಣಾಮಗಳು.ಹೆಚ್ಚು ಸಾಮಾನ್ಯವಾದ ಪರಿಣಾಮಗಳನ್ನು ಬೋಲ್ಡ್ ಫೇಸ್‌ನಲ್ಲಿ ನೀಡಲಾಗಿದೆ.

ತಂಬಾಕಿನ ಬಳಕೆಯಿಂದ ಉಂಟಾಗುವ ಪ್ರಮುಖ ಕಾಯಿಲೆಗಳು ಹೃದಯ ಮತ್ತು ಶ್ವಾಸಕೋಶಗಳಿಗೆ ಘಾಸಿಯನ್ನುಂಟುಮಾಡುತ್ತವೆ ಮತ್ತು ಧೂಮಪಾನದಿಂದ ಉಂಟಾಗುವ ಪ್ರಮುಖ ಅಪಾಯಗಳೆಂದರೆ ಹೃದಯಾಘಾತಗಳು, ಪಾರ್ಶ್ವವಾಯು, ಕ್ರಾನಿಕ್ ಅಬ್ಸ್‌ಟ್ರಕ್ಟಿವ್ ಪಲ್ಮನರಿ ಡಿಸೀಸ್ (COPD-ಶ್ವಾಸಕೋಶದ ತೊಂದರೆ), ಎಂಫಿಸಿಮಾ, ಮತ್ತು ಕ್ಯಾನ್ಸರ್ (ವಿಶೇಶವಾಗಿ ಶ್ವಾಸಕೋಶದ ಕ್ಯಾನ್ಸರ್, ಲ್ಯಾರಿಂಕ್ಸ್ ಮತ್ತು ಬಾಯಿಯ ಕ್ಯಾನ್ಸರ್, ಹಾಗೂ ಪ್ಯಾನ್‌ಕ್ರಿಯಾಟಿಕ್ ಕ್ಯಾನ್ಸರ್). World Health Organizationನ ಪ್ರಕಾರ ತಂಬಾಕು 2004ರಲ್ಲಿ ಸುಮಾರು 5.4 ಮಿಲಿಯನ್ ಸಾವುಗಳಿಗೆ ಮತ್ತು ಇಪ್ಪತ್ತನೇ ಶತಮಾನದ ವೇಳೆಯಲ್ಲಿ ಸುಮಾರು 100 ಮಿಲಿಯನ್ ಸಾವುಗಳಿಗೆ ಕಾರಣವಾಯಿತೆಂದು ಊಹಿಸಲಾಗಿದೆ. ಇದೇ ರೀತಿಯಲ್ಲಿ ಯುನೈಟೆಡ್ ಸ್ಟೇಟ್ಸ್‌ನ Centers for Disease Control and Prevention ತಂಬಾಕಿನ ಬಳಕೆಯನ್ನು "ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ತಡೆಗಟ್ಟಬಹುದಾದ, ಮನುಷ್ಯ ಆರೋಗ್ಯಕ್ಕೆ ಒಡ್ಡಿರುವ ಏಕೈಕ ಅಪಾಯ ಹಾಗೂ ಜಾಗತಿಕವಾಗಿ ಅಕಾಲಿಕ ಸಾವುಗಳಿಗೆ ಕಾರಣವಾಗಿರುವ ಪ್ರಮುಖ ಕಾರಣಗಳಲ್ಲೊಂದು" ಎಂದು ವರ್ಣಿಸಿದೆ. ಅಭಿವೃದ್ಧಿ ಹೊಂದಿದ ವಿಶ್ವದಲ್ಲಿ ಧೂಮಪಾನದ ಮಟ್ಟವು ಸಮತೋಲನ ಸಾಧಿಸಿದ ಇಲ್ಲವೇ ಇಳಿಕೆಯಾಗಿದೆ. ಯುನೈಟೆಡ್ ಸ್ತೇಟ್ಸ್‌ನ ವಯಸ್ಕರ ಧೂಮಪಾನದ ಮಟ್ಟವು 1965ರಿಂದ 2006ರವರೆಗೆ ಶೇಕಡಾ 42ರಿಂದ ಇಳಿಕೆಯಾಗಿ ಶೇಕಡಾ 20.8ರಷ್ಟು ಎಂದರೆ ಸುಮಾರು ಅರ್ಧದಷ್ಟಾಗಿದೆ. ಅಭಿವೃದ್ಧಿಶೀಲ ವಿಶ್ವದಲ್ಲಿ ತಂಬಾಕು ಬಳಕೆಯು ಪ್ರತಿ ವರ್ಷವೂ ಶೇಕಡಾ 3.4ರಷ್ಟು ಏರಿಕೆಯಾಗುತ್ತಿದೆ.

ಸಾಮಾಜಿಕ ಕಾರಣ

ಹಿಂದಿನ ಕಾಲದ ಜನಪ್ರಿಯ ಧೂಮಪಾನಿಗಳು ಸಿಗರೆಟ್ ಮತ್ತು ಪೈಪ್‌ಗಳನ್ನು ತಮ್ಮ ವ್ಯಕ್ತಿತ್ವದ ಭಾಗಗಳಂತೆ ಬಳಸಿಕೊಂಡರು, ಉದಾಹರಣೆಗೆ ಜಾನ್ ಪಾಲ್ ಸಾರ್ತ್ರೆಯ ಗಾಲೋಯ್ಸ್-ಬ್ರ್ಯಾಂಡ್ ಸಿಗರೆಟ್‌ಗಳು, ಆಲ್ಬರ್ಟ್ ಐನ್‌ಸ್ಟೀನ್, ಜೋಸೆಫ್ ಸ್ಟಾಲಿನ್, ಡಗ್ಲಸ್ ಮ್ಯಾಕ್‌ಆರ್ಥರ್, ಬರ್ಟ್ರಂಡ್ ರಸೆಲ್, ಮತ್ತು ಬಿಂಗ್ ಕ್ರಾಸ್‌ಬೀ ಉಪಯೋಗಿಸುತ್ತಿದ್ದ ಪೈಪ್‌ಗಳು ಅಥವಾ ವಾರ್ತಾವಾಚಕ ಎಡ್ವರ್ಡ್ ಆರ್. ಮರ್ರೋನ ಸಿಗರೆಟ್‌ಗಳು. ವಿಶೇಶವಾಗಿ ಲೇಖಕರು ಧೂಮಪಾನ ಮಾಡುವುದರಿಂದ ಪ್ರಖ್ಯಾತರಾಗಿದ್ದರು; ನೋಡಿ, ಉದಾಹರಣೆಗೆ, ಕಾರ್ನೆಲ್‌ನ ಫ್ರೆಂಚ್ ಸಾಹಿತ್ಯದ ಪ್ರೊಫೆಸರ್ ರಿಚರ್ಡ್ ಕ್ಲೈನ್ನ ಪುಸ್ತಕ ಸಿಗರೆಟ್ಸ್ ಆರ್ ಸಬ್‌ಲೈಮ್ ಅನ್ನು 19ನೇ ಮತ್ತು 20ನೇ ಶತಮಾನದ ಪತ್ರಗಳಲ್ಲಿ ಧೂಮಪಾನದ ಪಾತ್ರದ ಬಗೆಗಿನ ವಿಶ್ಲೇಷಣೆಗಾಗಿ ನೋಡಿ. ಜನಪ್ರಿಯ ಲೇಖಕ ಕರ್ಟ್ ವಾನ್‌ಗುಟ್ ತನ್ನ ಸಿಗರೆಟ್ ವ್ಯಸನದ ಬಗ್ಗೆ ತನ್ನ ಕಾದಂಬರಿಗಳಲ್ಲಿ ಬರೆದುಕೊಂಡಿದ್ದರು. ಬ್ರಿಟಿಷ್ ಪ್ರಧಾನಮಂತ್ರಿ ಹ್ಯಾರಲ್ಡ್ ವಿಲ್ಸನ್ ಸಾರ್ವಜನಿಕವಾಗಿ ತನ್ನ ಪೈಪ್ ಸೇದುತ್ತಿದ್ದಿದ್ದಕ್ಕೆ ಖ್ಯಾತರಾಗಿದ್ದರೆ ವಿನ್‌ಸ್ಟನ್ ಚರ್ಚಿಲ್ ತಮ್ಮ ಸಿಗಾರ್ ಸೇವನೆಗಾಗಿ ಪ್ರಖ್ಯಾತರಾಗಿದ್ದರು. ಸರ್ ಆರ್ಥರ್ ಕಾನನ್ ಡಾಯ್ಲ್ರ ಕಾಲ್ಪನಿಕ ಪಾತ್ರವಾಗಿದ್ದ ಪತ್ತೇದಾರ ಶೆರ್ಲಾಕ್ ಹೋಮ್ಸ್ ಪೈಪ್, ಸಿಗಾರ್ ಮತ್ತು ಸಿಗರೆಟ್‌ಗಳನ್ನು ಸೇದುತ್ತಿದ್ದಿದ್ದು ಮಾತ್ರವಲ್ಲ, ಕೊಕೇನ್ ಅನ್ನು ಕೂಡ ಇಂಜೆಕ್ಷನ್ ಮೂಲಕ ತೆಗೆದುಕೊಳ್ಳುತ್ತಿದ್ದನು, ಕಾರಣ, "ಲಂಡನ್‍ನ ಬೇಸರದ ದಿನಗಳಲ್ಲಿ, ಏನೂ ನಡೆಯದಿದ್ದಾಗ, ತನ್ನ ಅತಿಚಟುವಟಿಕೆಯ ಮೆದುಳಿಗೆ ಕೆಲಸ ನೀಡುವ ಸಲುವಾಗಿ". DC Vertigoದ ಅಲನ್ ಮೂರ್ ರೂಪಿಸಿದ ಕಾಮಿಕ್ ಬುಕ್ ಪಾತ್ರವಾದ ಜಾನ್ ಕಾನ್‌ಸ್ಟಂಟೈನ್ನ ಧೂಮಪಾನದ ವ್ಯಸನವು ಎಷ್ಟು ವ್ಯಾಪಕವೆಂದರೆ ಈ ಸರಣಿಯ ಪ್ರೀಚರ್ ಸೃಷ್ಟಿಕರ್ತ, ಗಾರ್ಥ್ ಎನ್ನಿಸ್ ನಿರೂಪಿಸುವ ಮೊದಲ ಕಥಾನಕವು ಜಾನ್ ಕಾನ್‍ಸ್ಟಂಟೈನ್‌ಗೆ ಶ್ವಾಸಕೋಶದ ಕ್ಯಾನ್ಸರ್ ತಗುಲುವುದರ ಸುತ್ತ ಸುತ್ತುತ್ತದೆ. ವೃತ್ತಿಪರ ಕುಸ್ತಿಪಟು ಜೇಮ್ಸ್ ಫುಲ್ಲಿಂಗ್‌ಟನ್, ಸ್ಯಾಂಡ್‌ಮ್ಯಾನ್‌ನ ಪಾತ್ರವನ್ನು ನಿಭಾಯಿಸುವಾಗ "ಗಡಸಾಗಿ" ಕಂಡುಬರುವ ಸಲುವಾಗಿ ಧೂಮಪಾನದ ಅತಿವ್ಯಸನಿಯಾಗಿರುವಂತೆ ಕಾಣಿಸಿಕೊಂಡಿದ್ದಾರೆ. ಸಮಾರಂಭಗಳಲ್ಲಿ ತಂಬಾಕಿನ ಧೂಮಪಾನ ಮಾಡುವುದು ಮತ್ತು ಪವಿತ್ರ ಪೈಪ್ನ ಜತೆಗೆ ಪ್ರಾರ್ಥನೆ ಸಲ್ಲಿಸುವುದು ಹಲವಾರು ಅಮೆರಿಕನ್ ಮೂಲನಿವಾಸಿ ದೇಶಗಳ ಪ್ರಮುಖ ಧಾರ್ಮಿಕ ಆಚರಣೆಗಳಲ್ಲೊಂದಾಗಿದೆ. ಸೆಮಾ ಎಂಬ ಹೆಸರಿನಿಂದ ಅನಿಶಿನಾಬೆಯಲ್ಲಿ ಕರೆಯಲಾಗುವ ತಂಬಾಕನ್ನು ಧಾರ್ಮಿಕ ಆಚರಣೆಗಳಲ್ಲಿ ಬಳಸುವುದಕ್ಕಾಗಿ ಬೆಳೆಯಲಾಗುವುದು ಮತ್ತು ಈ ತಂಬಾಕಿನ ಹೊಗೆಯು ತನ್ನೊಡನೆ ಸ್ವರ್ಗಕ್ಕೆ ಪ್ರಾರ್ಥನೆಗಳನ್ನು ಕೊಂಡೊಯ್ಯುವುದರಿಂದಾಗಿ ಇದನ್ನು ಅತ್ಯಂತ ಪವಿತ್ರವಾದ ಸಸ್ಯವಾಗಿ ಪರಿಗಣಿಸಲಾಗುತ್ತದೆ. ಹೆಚ್ಚಿನ ಪ್ರಮುಖ ಧರ್ಮಗಳಲ್ಲಿ ತಂಬಾಕು ಸೇವನೆಯನ್ನು ವಿಶೇಷವಾಗಿ ನಿರ್ಬಂಧಿಸಲಾಗಿಲ್ಲವಾದರೂ ಅದನ್ನು ಅನೈತಿಕ ಅಭ್ಯಾಸವೆಂದು ಪರಿಗಣಿಸುವ ಸಾಧ್ಯತೆಗಳೂ ಹೆಚ್ಚಾಗಿವೆ. ಧೂಮಪಾನವು ಆರೋಗ್ಯಕ್ಕೆ ಅಪಾಯಕರವೆಂದು ಪರಿಗಣಿಸಲಾಗುವುದಕ್ಕೂ ಮುನ್ನವೇ ಕೆಲವು ಕ್ರಿಶ್ಚಿಯನ್ ಬೋಧಕರು ಮತ್ತು ಸಮಾಜ ಸುಧಾರಕರು ಇದನ್ನು ಒಂದು ಅನಿತಿಕ ಚಟವೆಮ್ದು ಪರಿಗಣಿಸಿದ್ದರು. ಲೇಟರ್ ಡೇ ಸೆಯಿಂಟ್ ಮೂವ್‌ಮೆಂಟ್ನ ನೇತಾರರಾದ ಜೋಸೆಫ್ ಸ್ಮಿಥ್, ಜ್ಯೂನಿಯರ್ ಫೆಬ್ರುವರಿ 27, 1833ರಂದು ತನಗೆ ದೊರಕಿದ ಜ್ಞಾನೋದಯದಲ್ಲಿ ತಂಬಾಕಿನ ಬಳಕೆಯನ್ನು ತಡೆಗಟ್ಟುವಂತೆ ತಿಳಿಸಲಾಯಿತು ಎಂದು ದಾಖಲಿಸಿದ್ದಾರೆ. ಈ "ಜ್ಞಾನದ ಮಾತುಗಳು" ಮುಂದೆ ಪವಿತ್ರ ಆದೇಶದ ರೂಪದಲ್ಲಿ ಸ್ವೀಕೃತವಾದವು ಮತ್ತು ನಿಷ್ಟ ಲೇಟರ್ ಡೇ ಸೇಯಿಂಟ್‌ಗಳಿಗೆ ತಂಬಾಕು ವರ್ಜ್ಯವಾಗಿದೆ. ಯೆಹೋವನ ಸಾಕ್ಷಿಗಳು ಧೂಮಪಾನದ ವಿರುದ್ಧದ ತಮ್ಮ ನಿಲುವಿಗೆ ಬೈಬಲ್‌ನ ಆದೇಶವಾದ "clean ourselves of every defilement of flesh" (2 Corinthians 7:1) ಎಂಬುದನ್ನು ಆಧಾರವಾಗಿಟ್ಟುಕೊಂಡಿದ್ದಾರೆ. ಯಹೂದಿ ರಬ್ಬೈ ಯಿಸ್ರೇಲ್ ಮೀರ್ ಕಾಗನ್ (1838–1933) ಧೂಮಪಾನದ ಬಗ್ಗೆ ಮಾತನಾಡಿದ ಪ್ರಥಮ ಯಹೂದಿ ನಾಯಕರಾಗಿದ್ದರು. ಸಿಖ್ ಧರ್ಮದಲ್ಲಿ ತಂಬಾಕಿನ ಸೇವನೆಯನ್ನು ಕಡುವಾಗಿ ನಿರ್ಬಂಧಿಸಲಾಗಿದೆ.[ಸೂಕ್ತ ಉಲ್ಲೇಖನ ಬೇಕು] ಬಹಾಯಿ ನಿಷ್ಟೆಯಲ್ಲಿ ತಂಬಾಕು ಸೇವನೆಯನ್ನು ನಿಷೇಧಿಸಲಾಗಿಲ್ಲವಾದರೂ ಅದಕ್ಕೆ ಉತ್ತೇಜನವನ್ನು ಕೂಡ ನೀಡಲಾಗಿಲ್ಲ.

ಸಾರ್ವಜನಿಕ ನಿಯಮಗಳು

ಫೆಬ್ರುವರಿ 27, 2005ರಂದು WHO Framework Convention on Tobacco Control ಅಸ್ತಿತ್ವಕ್ಕೆ ಬಂದಿತು. FCTCಯು ಪ್ರಪಂಚದ ಮೊದಲನೇ ಸಾರ್ವಜನಿಕ ಆರೋಗ್ಯ ಒಪ್ಪಂದವಾಗಿದೆ. ಇದಕ್ಕೆ ಪಕ್ಷವಾಗಿ ಸಹಿ ಮಾಡುವ ರಾಷ್ಟ್ರಗಳು ಕೆಲವು ಸಾಮಾನ್ಯ ಗುರಿಗಳನ್ನಿಟ್ಟುಕೊಳ್ಳುವ ಬಗ್ಗೆ ಒಪ್ಪಿಕೊಳ್ಳುತ್ತವೆ, ತಂಬಾಕು ನಿರ್ಬಂಧ ನೀತಿಯ ಕನಿಷ್ಟ ಮಟ್ಟವನ್ನು ಜಾರಿಗೊಳಿಸುವುದು, ಹಾಗೂ ಸಿಗರೆಟ್ ಕಳ್ಳಸಾಗಾಣಿಕೆಯಂತಹ ಸೀಮಾರೇಖೆಯ ಆಚೀಚಿನ ವ್ಯಾಪ್ತಿಗೊಳಪಟ್ಟ ಸವಾಲುಗಳನ್ನು ಎದುರಿಸುವುದೇ ಮೊದಲಾದ ವಿಷಯಗಳಲ್ಲಿ ಸಹಕಾರ ನೀಡುವುದು ಕೂಡ ಇದರಲ್ಲಿ ಒಳಗೊಂಡಿವೆ. ಸದ್ಯಕ್ಕೆ WHO ಘೋಷಿಸಿರುವ ಪ್ರಕಾರ ಸುಮಾರು 4 ಬಿಲಿಯನ್ ಜನರು ಈ ಒಪ್ಪಂದದ ವ್ಯಾಪ್ತಿಗೆ ಒಳಪಡುತ್ತಾರೆ ಮತ್ತು ಇದು ಸುಮಾರು 168 ಸಹಿ ಮಾಡಿರುವ ಅಧಿಕಾರಿಗಳನ್ನೊಳಗೊಂಡಿರುತ್ತದೆ. ಈ ನಿಟ್ಟಿನ ಇತರ ಹೆಜ್ಜೆಗಳಾಗಿ ಸಹಿಹಾಕಿದ ಅಧಿಕಾರಿಗಳು ಹೊರತರಬೇಕಿರುವ ಕಾನೂನುಗಳಲ್ಲಿ ಕೆಲಸದ ಜಾಗಗಳ ಆವೃತ ಪರಿಸರಗಳಲ್ಲಿ, ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ, ಸಾರ್ವಜನಿಕ ಸ್ಥಳಗಳ ಒಳಾಂಗಣಗಳಲ್ಲಿ ಹಾಗೂ ಪರಿಸ್ಥಿತಿಗೆ ತಕ್ಕಂತೆ ಸಿಗರಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲು ಕ್ರಮಗಳನ್ನು ರೂಪಿಸಬೇಕಿದೆ.

ತೆರಿಗೆಗಳು

ಹಲವಾರು ಸರ್ಕಾರಗಳು ಸಿಗರೇಟ್ ಬಳಕೆಯನ್ನು ನಿಯಂತ್ರಿಸುವ ಸಲುವಾಗಿ ಅವುಗಳ ಮೇಲೆ ಅಬಕಾರಿ ತೆರಿಗೆಗಳನ್ನು ವಿಧಿಸಿವೆ. ಸಿಗರೇಟ್ ಮೇಲಿನ ತೆರಿಗೆಯಿಂದ ಸಂಗ್ರಹಿಸಲಾಗುವ ಹಣವನ್ನು ಸಾಮಾನ್ಯವಾಗಿ ತಂಬಾಕು ಬಳಕೆ ತಡೆಯುವ ಕಾರ್ಯಕ್ರಮಗಳ ವೆಚ್ಚಗಳಿಗಾಗಿ ಬಳಸಲಾಗುತ್ತದೆ ಮತ್ತು ಇದು ಹೊರಗಿನ ಖರ್ಚುಗಳನ್ನು ಆಂತರಿಕವಾಗಿಸುವ ವಿಧಾನವಾಗಿದೆ.[ಸೂಕ್ತ ಉಲ್ಲೇಖನ ಬೇಕು] 2002ರಲ್ಲಿ Centers for Disease Control and Prevention ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಾರಾಟವಾಗುವ ಪ್ರತಿಯೊಂದು ಪ್ಯಾಕ್ ಸಿಗರೇಟ್‌ನಿಂದ ದೇಶಕ್ಕೆ $7 ವೈದ್ಯಕೀಯ ವೆಚ್ಚವಾಗುವುದು ಮತ್ತು ಪ್ರತಿಯೊಬ್ಬ ಧೂಮಪಾನಿಯಿಂದಲೂ ವಾರ್ಷಿಕವಾಗಿ $2000ರಷ್ಟು ಉತ್ಪಾದನಾ ಸಾಮರ್ಥ್ಯದ ನಷ್ಟವುಂಟಾಗುವುದು ಎಂದು ಮಾಹಿತಿ ಒದಗಿಸಿತು. ಆರೋಗ್ಯ ಅರ್ಥಶಾಸ್ತ್ರಜ್ಞರ ಗುಂಪೊಂದು ನಡೆಸಿದ ಅಧ್ಯಯನವೊಂದರಲ್ಲಿ ಪ್ರತಿಯೊಂದು ಸಿಗರೇಟ್ ಪ್ಯಾಕಿಗೆ ಧೂಮಪಾನಿಗಳ ಕುಟುಂಬ ಮತ್ತು ಸಮಾಜ ತೆರಬೇಕಾದ ಒಟ್ಟು ಬೆಲೆ $41 ಎಂದು ಲೆಕ್ಕಹಾಕಲಾಯಿತು. ಮಹತ್ವದ ವೈಜ್ಞಾನಿಕ ಅಧ್ಯಯನವೊಂದರ ಪ್ರಕಾರ ಸಿಗರೇಟ್ ಬೆಲೆಯಲ್ಲಿ ಏರಿಕೆಯುಂಟಾದಲ್ಲಿ ಸಿಗರೇಟ್ ಬಳಕೆಯ ಒಟ್ಟು ಪ್ರಮಾಣದಲ್ಲಿ ಇಳಿಕೆಯುಂಟಾಗುವುದೆಂದು ಕಂಡುಕೊಳ್ಳಲಾಯಿತು. ಹೆಚ್ಚಿನ ಅಧ್ಯಯನಗಳ ಪ್ರಕಾರ ಸಿಗರೆಟ್ ಬೆಲೆಯಲ್ಲಿ ಶೇಕಡಾ ಹತ್ತರಷ್ಟು ಏರಿಕೆಯುಂಟಾದಲ್ಲಿ ಒಟ್ಟು ಸಿಗರೆಟ್ ಬಳಕೆಯಲ್ಲಿ ಮೂರರಿಂದ ನಾಲ್ಕು ಶೇಕಡಾ ಇಳಿಕೆಯುಂಟಾಗುವುದೆಂದು ಸ್ಪಷ್ಟಪಡಿಸಲಾಗಿದೆ. ಯುವಕರು, ಅಲ್ಪಸಂಖ್ಯಾತರು ಮತ್ತು ಕಡಿಮೆ ಆದಾಯವುಳ್ಳ ಧೂಮಪಾನಿಗಳು ಬೆಲೆ ಏರಿಕೆಗೆ ಪ್ರತಿಕ್ರಿಯೆಯಾಗಿ ಧೂಮಪಾನವನ್ನು ಕಡಿಮೆ ಮಾಡುವ ಇಲ್ಲವೇ ತ್ಯಜಿಸುವ ಸಾಧ್ಯತೆಗಳು ಜಾಸ್ತಿ. ಧೂಮಪಾನವನ್ನು ಆಗಾಗ್ಗೆ ಇನ್‌ಎಲಾಸ್ಟಿಕ್ ಸರಕು ಎಂಬುದಕ್ಕೆ ಉದಾಹರಣೆಯಾಗಿ ನೀಡಲಾಗುತ್ತದೆ, ಎಂದರೆ, ಅದರ ಬೆಲೆಯಲ್ಲಿ ಭಾರೀ ಏರಿಕೆಯುಂಟಾದಾಗಲೂ ಅದರ ಬಳಕೆಯಲ್ಲಿ ಸಣ್ಣ ಪ್ರಮಾಣದ ಇಳಿಕೆಯುಂಟಾಗುವುದು. ಹಲವಾರು ದೇಶಗಳು ಒಂದಲ್ಲ ಒಂದು ರೀತಿಯ ತಂಬಾಕು ತೆರಿಗೆಯನ್ನು ಜಾರಿಗೆ ತಂದಿವೆ. 1997ರ ಅಂಕಿ ಅಂಶಗಳ ಪ್ರಕಾರ ಡೆನ್ಮಾರ್ಕ್ ಪ್ರತಿ ಸಿಗರೇಟ್ ಪ್ಯಾಕಿನ ಮೇಲೆ $4.02ರಷ್ಟು ಕರವನ್ನು ವಿಧಿಸಿ ಅತ್ಯಂತ ಹೆಚ್ಚು ಮೊತ್ತದ ಸಿಗರೇಟ್ ತೆರಿಗೆಯನ್ನು ಹೊಂದಿದ್ದಿತು. ತೈವಾನ್ ಪ್ರತಿಯೊಂದು ಪ್ಯಾಕ್‌ನ ಮೇಲೆ ಕೇವಲ $0.62 ರಷ್ಟು ತೆರಿಗೆಯನ್ನು ವಿಧಿಸಿತ್ತು. ಈಗ ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಸಿಗರೇಟ್‌ನ ಸರಾಸರಿ ಬೆಲೆ ಮತ್ತು ಅಬಕಾರಿ ತೆರಿಗೆಗಳು ಹಲವಾರು ಔದ್ಯಮಿಕ ರಾಷ್ಟ್ರಗಳಲ್ಲಿರುವುದಕ್ಕಿಂತ ಕಡಿಮೆಯಿವೆ. ಯುನೈಟೆಡ್ ಸ್ಟೇಟ್ಸ್‌ನ ಸಿಗರೇಟ್ ತೆರಿಗೆಗಳು ಪ್ರತಿಯೊಂದು ರಾಜ್ಯದಲ್ಲಿಯೂ ಬೇರೆಬೇರೆ ಇವೆ. ಉದಾಹರಣೆಗೆ, ಸೌಥ್ ಕೆರೊಲಿನಾದಲ್ಲಿ ಸಿಗರೆಟ್ ಪ್ಯಾಕಿನ ಮೇಲೆ ತಲಾ ತೆರಿಗೆಯು ಕೇವಲ 7 ಸೆಂಟ್‌ಗಳಾಗಿದ್ದು ಅತ್ಯಂತ ಕಡಿಮೆ ಸ್ಥಾನದಲ್ಲಿದ್ದರೆ, ರೋಡ್ ಐಲೆಂಡ್‌ನಲ್ಲಿ ಸಿಗರೇಟ್ ಪ್ಯಾಕಿನ ಮೇಲೆ ಯುಎಸ್‌ನಲ್ಲಿಯೇ ಅತ್ಯಧಿಕ ಮೊತ್ತವಾದ $3.46ರಷ್ಟು ತೆರಿಗೆಯನ್ನು ನಿಗದಿಪಡಿಸಲಾಗಿದೆ. ಅಲಬಾಮಾ, ಇಲಿನಾಯ್ಸ್, ಮಿಸ್ಸೌರಿ, ನ್ಯೂಯಾರ್ಕ್ ನಗರ, ಟೆನಿಸ್ಸೀ ಮತ್ತು ವರ್ಜೀನಿಯಾಗಳಲ್ಲಿ ಕೌಂಟಿಗಳು ಮತ್ತು ನಗರಗಳು ಸಿಗರೇಟ್ ಬೆಲೆಯ ಮೇಲೆ ಹೆಚ್ಚಿನ ಸೀಮಿತ ಕರಶುಲ್ಕವನ್ನು ವಿಧಿಸಬಹುದಾಗಿದೆ. ಹೆಚ್ಚು ತೆರಿಗೆಯ ಕಾರಣದಿಂದ ನ್ಯೂಜರ್ಸಿಯಲ್ಲಿ ಒಂದು ಪ್ಯಾಕೆಟ್ ಸಿಗರೇಟ್‌‌ನ ಸರಾಸರಿ ಬೆಲೆ $6.45ರಷ್ಟಿದೆ, ಹಾಗೂ ಇದು ಒಂದು ಪ್ಯಾಕ್ ಸಿಗರ ಟ್‌ನ ಹೊರಗಿನ ವೆಚ್ಚಕ್ಕಿಂತ ಹೆಚ್ಚಿನ ಮೊತ್ತವಾಗಿದೆ.ಕೆನಡಾದಲ್ಲಿ ಸಿಗರೆಟ್ ತೆರಿಗೆಗಳಿಂದಾಗಿ ದುಬಾರಿ ಬ್ರ್ಯಾಂಡ್‌ಗಳ ಬೆಲೆಯಲ್ಲಿ CAD$10ರಷ್ಟು ಏರಿಕೆಯುಂಟಾಗಿದೆ.[ಸೂಕ್ತ ಉಲ್ಲೇಖನ ಬೇಕು] ಯುನೈಟೇಡ್ ಕಿಂಗ್‌ಡಮ್ನಲ್ಲಿ ೨೦ ಸಿಗರೆಟ್‌ಗಳ ಒಂದು ಪ್ಯಾಕ್‌ನ ಬೆಲೆ cigarettes typically costs between £4.25ರಿಂದ £5.50ರ ಒಳಗಿದ್ದು ಯಾವ ಬ್ರಾಂಡ್ ಅನ್ನು ಎಲ್ಲಿ ಕೊಳ್ಳಲಾಗಿದೆ ಎಂಬುದನ್ನು ಅವಲಂಬಿಸಿದೆ. ಯುಕೆನಲ್ಲಿ ಅತ್ಯಧಿಕ ತೆರಿಗೆಗಳಿಂದಾಗಿ ಸಿಗರೆಟ್‌ಗಳ ಬಲಶಾಲಿಯಾದ ಕಪ್ಪು ಮಾರುಕಟ್ಟೆ ಅಸ್ತಿತ್ವದಲ್ಲಿದೆ, ಮತ್ತು ಎಣಿಕೆಯೊಂದರ ಪ್ರಕಾರ ಶೇಕಡಾ 27ರಷ್ಟು ಸಿಗರೆಟ್‌ಗಳು ಮತ್ತು ಶೇಕಡಾ 68ರಷ್ಟು ಕೈಯಿಂದ ಸುತ್ತಲಾದ ತಂಬಾಕಿನ ಬಳಕೆಯು ಯುಕೆಯ ತೆರಿಗೆಯನ್ನು ನೀಡದೆ ಇರುವಂತಹದ್ದು (NUKDP-non-UK duty paid).

ನಿರ್ಬಂಧನೆಗಳು

ತಂಬಾಕು ಸೇವನೆಧೂಮಪಾನ 
ಜಪಾನಿನ ಟ್ರೇನ್ ಸ್ಟೇಶನ್ನೊಂದರ ಆವೃತಗೊಂಡ ಧೂಮಪಾನ ವಲಯ.ಹವೆಯ ವಾತಾಯನವನ್ನು ಗಮನಿಸಿ.

1967ರ ಜೂನ್ ತಿಂಗಳಲ್ಲಿ Federal Communications Commission ಜಾರಿಗೆ ತಂದ ಸೂಚನೆಯ ಪ್ರಕಾರ ಒಂದು ದೂರದರ್ಶನ ಕೇಂದ್ರದ ಮೂಲಕ ಧೂಮಪಾನ ಮತ್ತು ಆರೋಗ್ಯದ ಬಗ್ಗೆ ಚರ್ಚಿಸುವ ಕಾರ್ಯಕ್ರಮಗಳು ಪ್ರತಿ ದಿನವೂ ಹಣಪಾವತಿಸಿ ಐದು-ಹತ್ತು ನಿಮಿಷಗಳ ಕಾಲ ಪ್ರಸಾರಮಾಡಲಾಗುವ ಜಾಹೀರಾತುಗಳ ಪರಿಣಾಮವನ್ನು ತಗ್ಗಿಸಲು ಸಾಧ್ಯವಾಗಿಲ್ಲ. ಏಪ್ರಿಲ್ 1970ರಲ್ಲಿ ಕಾಂಗ್ರೆಸ್ ಜನವರಿ 2, 1971ರಿಂದ ದೂರದರ್ಶನ ಮತ್ತು ರೇಡಿಯೋದಲ್ಲಿ ಸಿಗರೆಟ್ ಜಾಹೀರಾತುಗಳನ್ನು ನಿಷೇಧಿಸುವ ಕಾನೂನಾದ Public Health Cigarette Smoking Act ಅನ್ನು ಜಾರಿಗೆ ತಂದಿತು. The Tobacco Advertising Prohibition Act 1992 ಸುಸ್ಪಷ್ಟವಾಗಿ ಆಸ್ಟ್ರೇಲಿಯಾದಲ್ಲಿ ಕ್ರೀಡೆಗಳನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಾಯೋಜಿಸುವುದನ್ನೂ ಒಳಗೊಂಡಂತೆ ಸಿಗರೆಟ್ ಕಂಪೆನಿಗಳು ಎಲ್ಲಾ ರೀತಿಯ ಜಾಹೀರಾತುಗಳನ್ನು ಪ್ರದರ್ಶನ ಮಾಡುವುದನ್ನು ನಿಷೇಧಿಸಿತು.1991ರಿಂದೀಚೆಗೆ Television Without Frontiers Directive (1989) ಯುರೋಪಿಯನ್ ಯೂನಿಯನ್ ವ್ಯಾಪ್ತಿಯಲ್ಲಿ ಬರುವ ದೂರದರ್ಶನಗಳಲ್ಲಿ ಎಲ್ಲಾ ತಂಬಾಕು ಜಾಹೀರಾತುಗಳು ಮತ್ತು ಪ್ರಾಯೋಜನಗಳನ್ನು ನಿಷೇಧಿಸಲಾಗಿದ್ದು, ಇದು ಜುಲೈ 2005ರಲ್ಲಿ ಕೈಗೊಳ್ಳಲಾದ Tobacco Advertising Directive ಮೂಲಕ ವಿಸ್ತೃತಗೊಂಡಿತು ಮಾತ್ರವಲ್ಲದೆ ಇತರ ಮಾಧ್ಯಮಗಳಾದ ಇಂಟರ್ನೆಟ್, ಮುದ್ರಣ ಮತ್ತು ರೇಡಿಯೋಗಳನ್ನೂ ಒಳಗೊಂಡಿತು. ಈ ನಿರ್ದೇಶವು ಸಿನೆಮಾಗಳ ಜಾಹೀರಾತುಗಳನ್ನಾಗಲೀ, ಬಿಲ್‌ಬೋರ್ಡುಗಳನ್ನಾಗಲೀ, ವ್ಯಾಪಾರದ ಸರಕುಗಳನ್ನು ಬಳಸುವ ಜಾಹೀರಾತುಗಳನ್ನಾಗಲೀ, ಸಂಪೂರ್ಣವಾಗಿ ಸ್ಥಳೀಯವಾದ, ಒಂದೇ ಸದಸ್ಯ ರಾಜ್ಯದವರನ್ನು ಮಾತ್ರ ಒಳಗೊಂಡ ಸಾಂಸ್ಕೃತಿಕ ಮತ್ತು ಕ್ರೀಡಾ ಸಮಾರಂಭಗಳನ್ನು ಪ್ರಾಯೋಜಿಸುವುದನ್ನಾಗಲೀ ಒಳಗೊಂಡಿಲ್ಲ, ಏಕೆಂದರೆ ಇದು ಯುರೊಪಿಯನ್ ಕಮಿಶನ್ನ ವ್ಯಾಪ್ತಿಯಲ್ಲಿ ಬರುವುದಿಲ್ಲ. ಹೀಗಿದ್ದರೂ, ಹೆಚ್ಚಿನ ಸದಸ್ಯ ರಾಜ್ಯಗಳು ಈ ನಿರ್ದೇಶದ ಜತೆಗೇ ಅದಕ್ಕಿಂತ ಹೆಚ್ಚು ವಿಸ್ತೃತವಾಗಿರುವ ಮತ್ತು ಸ್ಥಳೀಯ ಜಾಹೀರಾತುಗಳನ್ನು ಕೂಡ ಒಳಗೊಳ್ಳುವಂತಹ ರಾಷ್ಟ್ರೀಯ ಕಾನೂನುಗಳನ್ನು ಜಾರಿಗೆ ತಂದಿವೆ. 2008ರಲ್ಲಿ ನೀಡಲಾದ ಯುರೋಪಿಯನ್ ಕಮಿಶನ್ ವರದಿಯೊಂದರ ಪ್ರಕಾರ ನಿರ್ದೇಶವು ಯಶಸ್ವಿಯಾಗಿ ರಾಷ್ಟ್ರೀಯ ಕಾನೂನುಗಳ ರೂಪದಲ್ಲಿ ಸ್ಥಿತ್ಯಂತರ ಮಾಡಿ ಎಲ್ಲಾ EU ಸದಸ್ಯರಾಜ್ಯಗಳಲ್ಲಿ ಜಾರಿಗೆ ತರಲಾಗಿದೆ ಮತ್ತು ಈ ಕಾನೂನುಗಳನ್ನು ಚೆನ್ನಾಗಿ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಲಾಯಿತು. ಕೆಲವು ರಾಷ್ಟ್ರಗಳು ತಂಬಾಕು ಉತ್ಪನ್ನಗಳ ಪ್ಯಾಕೀಜಿಂಗ್‌ನ ಮೇಲೆ ಕಾನೂನುಬದ್ಧ ಅವಶ್ಯಕತೆಗಳನ್ನು ಹೇರಿವೆ. ಉದಾಹರಣೆಗೆ, ಯುರೋಪಿಯನ್ ಒಕ್ಕೂಟ, ಟರ್ಕಿ, ಆಸ್ಟ್ರೇಲಿಯಾ ಮತ್ತು ಸೌಥ್ ಆಫ್ರಿಕಾಗಳಲ್ಲಿ ಸಿಗರೆಟ್ ಪ್ಯಾಕ್‌ಗಳ ಮೇಲೆ ಧೂಮಪಾನಕ್ಕೆ ಸಂಬಂಧಿಸಿದ ಆರೋಗ್ಯದ ಹಾನಿಗಳ ಬಗ್ಗೆ ದೊಡ್ಡದಾಗಿ, ಸ್ಪಷ್ಟವಾಗಿ ಘೋಷಣೆಗಳನ್ನು ಲಗತ್ತಿಸಿರಬೇಕು. ಕೆನಡಾ, ಆಸ್ಟ್ರೇಲಿಯಾ, ಥೈಲ್ಯಾಂಡ್, ಐಸ್‌ಲ್ಯಾಂಡ್ ಮತ್ತು ಬ್ರೆಜಿಲ್‌ಗಳಲ್ಲಿಯೂ ಕೂಡ ಸಿಗರೆಟ್ ಪ್ಯಾಕ್‌ಗಳ ಮೇಲೆ ಧೂಮಪಾನದ ದುಷ್ಪರಿಣಾಮಗಳ ಬಗ್ಗೆಗೆ ಎಚ್ಚರಿಕೆಯನ್ನು ಲಗತ್ತಿಸುವುದಷ್ಟೇ ಅಲ್ಲ, ಧೂಮಪಾನದಿಂದುಂಟಾಗುವ ಹಾನಿಗಳ ಬಗೆಗಿನ ಚಿತ್ರಗಳನ್ನೂ ಕೂಡ ಮುದ್ರಿಸಬೇಕಾಗುತ್ತದೆ. ಕೆನಡಾದ ಸಿಗರೆಟ್ ಪ್ಯಾಕ್‌ಗಳಲ್ಲಿ ಕಾರ್ಡುಗಳನ್ನು ಇಡಲಾಗುತ್ತದೆ. ಈ ರಿತಿಯ ಹದಿನಾರು ಕಾರ್ಡುಗಳಿದ್ದು, ಒಂದು ಪ್ಯಾಕ್‌ನಲ್ಲಿ ಒಂದು ಕಾರ್ಡ್ ಮಾತ್ರವಿರುತ್ತದೆ. ಇವುಗಳು ಧೂಮಪಾನವನ್ನು ತ್ಯಜಿಸುವ ವಿವಿಧ ವಿಧಾನಗಳನ್ನು ವಿವರಿಸುತ್ತವೆ. ಇದಲ್ಲದೇ, ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಪ್ರದರ್ಶಿತವಾಗುವ ಹಲವಾರು ಚಿತ್ರರೂಪದ NHS ಜಾಹೀರಾತುಗಳಿವೆ, ಮತ್ತು ಇದರಲ್ಲೊಂದು ಜಾಹೀರಾತು ಸಿಗರೆಟ್ ಕೊಳವೆಯಲ್ಲಿ ಕೊಬ್ಬು ತುಂಬಿರುವಂತೆ ತೋರಿಸಲಾಗಿದೆ, ಈ ಸಿಗರೆಟ್ ಧೂಮಪಾನಿಯೊಬ್ಬನ ರಕ್ತನಾಳವನ್ನು ಸಂಕೇತಿಸುತ್ತದೆ. ಹಲವಾರು ದೇಶಗಳಲ್ಲಿ ನಿರ್ದಿಷ್ಟವಾದ ಧೂಮಪಾನದ ವಯೋಮಿತಿ ಇದೆ, ಹಲವಾರು ದೇಶಗಳಲ್ಲಿ, ಉದಾಹರಣೆಗೆ, ಯುನೈಟೆಡ್ ಸ್ಟೇಟ್ಸ್, ಯುರೋಪಿಯನ್ ಒಕ್ಕೂಟದ ಸದಸ್ಯ ರಾಜ್ಯಗಳು, ನ್ಯೂಜಿಲ್ಯಾಂಡ್, ಕೆನಡಾ, ಸೌಥ್ ಆಫ್ರಿಕಾ, ಇಸ್ರೇಲ್, ಭಾರತ, ಬ್ರೆಜಿಲ್, ಚಿಲಿ, ಕೊಸ್ಟಾ ರಿಕಾ ಮತ್ತು ಆಸ್ಟ್ರೇಲಿಯಾಗಳಲ್ಲಿ ವಯಸ್ಕರಲ್ಲದವರಿಗೆ ತಂಬಾಕು ಉತ್ಪನ್ನಗಳನ್ನು ಮಾರುವುದು ಕಾನೂನುಬಾಹಿರ ಮತ್ತು ನೆದರ್ಲೆಂಡ್ಸ್, ಆಸ್ಟ್ರಿಯಾ, ಬೆಲ್ಜಿಯಮ್, ಡೆನ್ಮಾರ್ಕ್ ಮತ್ತು ಸೌಥ್ ಆಫ್ರಿಕಾಗಳಲ್ಲಿ ಹದಿನಾರು ವಯಸ್ಸಿಗಿಂತ ಕಡಿಮೆ ವಯಸ್ಸಿನವರಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಕಾನೂನುಬಾಹಿರವೆಂದು ಪರಿಗಣಿಸಲಾಗುತ್ತದೆ. ಸೆಪ್ಟೆಂಬರ್ 1, 2007ರಂದು ಜರ್ಮನಿಯಲ್ಲಿ ಮತ್ತು ಅಕ್ಟೋಬರ್ 1, 2007ರಂದು ಗ್ರೇಟ್ ಬ್ರಿಟನ್ನಲ್ಲಿ ತಂಬಾಕು ಉತ್ಪನ್ನಗಳನ್ನು ಕೊಂಡುಕೊಳ್ಳುವ ವಯೋಮಿತಿಯನ್ನು 16ರಿಂದ 18ಕ್ಕೆ ಏರಿಸಲಾಯಿತು. ಯುನೈಟೆಡ್ ಸ್ಟೇಟ್ಸ್‌ನ ಒಟ್ಟು 50ರ ಪೈಕಿ 46 ರಾಜ್ಯಗಳಲ್ಲಿ ಧೂಮಪಾನದ ವಯೋಮಿತಿಯು 18 ವರ್ಷಗಳು ಮತ್ತು ಅಲಬಾಮಾ, ಅಲಾಸ್ಕಾ, ನ್ಯೂ ಜರ್ಸಿ ಹಾಗೂ ಯೂಟಾಗಳಲ್ಲಿ ಇದು 19 ವರ್ಷಗಳೆಂದು ನಿಗದಿಪಡಿಸಲಾಗಿದೆ (ಅಪ್‌ಸ್ಟೇಟ್ ನ್ಯೂಯಾರ್ಕ್‌ನ ಓನೊನ್‌ಡಾಗಾ ಕೌಂಟಿ ಹಾಗೂ ಲಾಂಗ್ ಐಲಂಡ್, ನ್ಯೂಯಾರ್ಕ್‌ನ ಸಫೋಕ್ ಮತ್ತು ನಸ್ಸಾಉ ಕೌಂಟಿಗಳಲ್ಲಿಯೂ ಕೂಡ).[ಸೂಕ್ತ ಉಲ್ಲೇಖನ ಬೇಕು] ಕೆಲವು ದೇಶಗಳಲ್ಲಿ ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳನ್ನು ನೀಡುವುದನ್ನು (ಎಂದರೆ ಅವರಿಗಾಗಿ ಕೊಂಡುಕೊಳ್ಳುವುದನ್ನು) ಮತ್ತು ಧೂಮಪಾನದಲ್ಲಿ ತೊಡಗಿದ ಅಪ್ರಾಪ್ತ ವಯಸ್ಕರ ವಿರುದ್ಧವೂ ಕೂಡ ಕಾನೂನುಪ್ರಕಾರ ಕ್ರಮಜರುಗಿಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಈ ಕಾನೂನುಗಳು ಜಾರಿಗೆ ಬರುವುದರ ಹಿಂದೆ ಜನರು ತಂಬಾಕು ಬಳಕೆಯ ಬಗ್ಗೆ ಸರಿಯಾದ ಮಾಹಿತಿ ಪಡೆದ ನಂತರವೇ ತೀರ್ಮಾನ ತೆಗೆದುಕೊಳ್ಳಬೇಕೆಂಬ ಉದ್ದೇಶ ಅಡಗಿದೆ. ಈ ಕಾನೂನುಗಳನ್ನು ಕೆಲವು ದೇಶಗಳು ಮತ್ತು ರಾಜ್ಯಗಳಲ್ಲಿ ಸರಿಯಾದ ರೀತಿಯಲ್ಲಿ ಜಾರಿಗೆ ತರಲಾಗಿಲ್ಲ. ಕೆಲವೊಂದು ಪ್ರದೇಶಗಳಲ್ಲಿ ಇನ್ನೂ ಅಪ್ರಾಪ್ತವಯಸ್ಕರಿಗೆ ಸಿಗರೆಟ್‌ಗಳನ್ನು ಮಾರಾಟ ಮಾಡಲಾಗುತ್ತದೆ, ಏಕೆಂದರೆ ಇದನ್ನು ಉಲ್ಲಂಘಿಸಿದರೆ ವಿಧಿಸಲಾಗುವ ದಂಡದ ಮೊತ್ತವು ಅಪ್ರಾಪ್ತವಯಸ್ಕರಿಗೆ ಸಿಗರೆಟ್ ಮಾರಿದರೆ ದೊರಕುವ ಲಾಭಕ್ಕಿಂತ ಬಹಳ ಕಡಿಮೆಯಾಗಿದೆ.[ಸೂಕ್ತ ಉಲ್ಲೇಖನ ಬೇಕು] ಆದರೆ ಚೀನಾ, ಟರ್ಕಿ ಮತ್ತು ಇನ್ನೂ ಹಲವಾರು ದೇಶಗಳಲ್ಲಿ ಸಾಧಾರಣವಾಗಿ ಮಕ್ಕಳಿಗೆ ತಂಬಾಕು ಉತ್ಪನ್ನಗಳನ್ನು ಕೊಂಡುಕೊಳ್ಳಲು ಯಾವುದೇ ತೊಂದರೆಗಳಿಲ್ಲ, ಏಕೆಂದರೆ ಮಕ್ಕಳಿಗೆ ಅವರ ತಂದೆತಾಯಂದಿರೇ ಆಗಾಗ ತಂಬಾಕು ತರಲು ಅಂಗಡಿಗೆ ಕಳುಹಿಸುವ ವಾಡಿಕೆಯಿದೆ. ಐರ್ಲೆಂಡ್, ಲಾತ್ವಿಯಾ, ಈಸ್ಟೋನಿಯಾ, ದ ನೆದರ್ಲಂಡ್ಸ್, ಫ್ರಾನ್ಸ್, ಫಿನ್ಲಂಡ್, ನಾರ್ವೇ, ಕೆನಡಾ, ಆಸ್ಟ್ರೇಲಿಯಾ, ಸ್ವೀಡನ್, ಪೋರ್ಚುಗಲ್, ಸಿಂಗಪೂರ್, ಇಟಲಿ, ಇಂಡೋನೇಶಿಯಾ, ಭಾರತ, ಲಿಥುವೇನಿಯಾ, ಚಿಲಿ, ಸ್ಪೇನ್, ಐಸ್ಲಂಡ್, ಯುನೈಟೆಡ್ ಕಿಂಗ್‌ಡಮ್, ಸ್ಲೊವೇನಿಯಾ ಮತ್ತು ಮಾಲ್ಟಾದಂತಹ ಹಲವಾರು ರಾಷ್ಟ್ರಗಳಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನವನ್ನು, ಕೆಲವೊಮ್ಮೆ ಬಾರ್ ಮತ್ತು ರೆಸ್ಟೊರೆಂಟ್‌ಗಳನ್ನು ಕೂಡ ಒಳಗೊಂಡಂತೆ, ನಿಷೇಧಿಸಲಾಗಿದೆ. ಕೆಲವೊಂದು ಪ್ರದೇಶಗಳಲ್ಲಿ ಮಾತ್ರ ರೆಸ್ಟೊರೆಂಟ್ ಮಾಲೀಕರು ವಿಶೇಷ ಧೂಮಪಾನ ಪ್ರದೇಶಗಳನ್ನು ಕಟ್ಟಲು (ಅಥವಾ ಧೂಮಪಾನವನ್ನು ನಿಷೇಧಿಸಲು) ಅನುಮತಿ ನೀಡಲಾಗಿದೆ. ಯುನೈಟೆಡ್ ಸ್ಟೇಟ್ಸ್ನಲ್ಲಿ ಹಲವಾರು ರಾಜ್ಯಗಳು ತಮ್ಮ ರೆಸ್ಟೊರೆಂಟ್ ಮಾತ್ತು ಬಾರ್‌ಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಿವೆ. ಕೆನಡಾದ ಪ್ರಾಂತ್ಯಗಳಲ್ಲಿ ಕೆಲಸದ ಸ್ಥಳಗಳಲ್ಲಿ ಮತ್ತು ಬಾರ್ ಹಾಗೂ ರೆಸ್ಟೊರೆಂಟ್‌ಗಳನ್ನೂ ಒಳಗೊಂಡಂತೆ ಎಲ್ಲಾ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಮಾರ್ಚ್ 31, 2008ರಲ್ಲಿ ಕೆನಡಾ ತನ್ನ ಎಲ್ಲಾ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನವನ್ನು ನಿಷೇಧಿಸಿದ್ದು ಮಾತ್ರವಲ್ಲದೆ ಯಾವುದೇ ಸಾರ್ವಜನಿಕ ಪ್ರದೇಶದ ಸುತ್ತಮುತ್ತಲ ಹತ್ತು ಮೀಟರುಗಳ ವ್ಯಾಪ್ತಿಯಲ್ಲಿಯೂ ಧೂಮಪಾನ ನಿಷೇಧವನ್ನು ಜಾರಿಗೆ ತಂದಿತು. ಆಸ್ಟ್ರೇಲಿಯಾದಲ್ಲಿ ಧೂಮಪಾನ ನಿಷೇಧವು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಈಗ ಕ್ವೀನ್ಸ್‌ಲ್ಯಾಂಡ್ೆಲ್ಲಾ ಸಾರ್ವಜನಿಕ ಆವರಣಗಳಲ್ಲಿ ಧೂಮಪಾನ ನಿಷೇಧವನ್ನು ಹೊಂದಿದೆ (ಕೆಲಸದ ಸ್ಥಳಗಳು, ಬಾರ್‌ಗಳು, ಪಬ್‌ಗಳು ಮತ್ತು ಈಟರಿಗಳನ್ನು ಒಳಗೊಂಡು) ಮಾತ್ರವಲ್ಲದೆ ಗಸ್ತುವಿಧಿಸಲಾಗಿರುವ ಸಮುದ್ರತೀರಗಳು ಮತ್ತು ಕೆಲವು ಹೊರಾಂಗಣ ಸಾರ್ವಜನಿಕ ಪ್ರದೇಶಗಳಲ್ಲಿಯೂ ಇದು ಅನ್ವಯವಾಗುತ್ತದೆ. ಆದರೆ, ಧೂಮಪಾನ ಮಾಡಬಹುದಾದ ಸ್ಥಳಗಳ ಬಗ್ಗೆ ಕೆಲವು ವಿನಾಯಿತಿಗಳಿವೆ. ವಿಕ್ಟೋರಿಯಾದಲ್ಲಿ, ಪರೋಕ್ಷ ಧೂಮಪಾನವು ಧೂಮಪಾನಿಗಳಲ್ಲದ ಪ್ರಯಾಣಿಕರಿಗೆ ತೊಂದರೆಯನ್ನುಂಟುಮಾಡಬಹುದಾದ ಸ್ಥಳಗಳಾದ ಟ್ರೇನ್ ನಿಲ್ದಾಣಗಳು, ಬಸ್ ಮತ್ತು ಟ್ರ್ಯಾಮ್ ನಿಲ್ದಾಣಗಳಲ್ಲಿ ಧೂಮಪಾನವನ್ನು ನಿಷೇಧಿಸಿದ್ದು, ಜುಲೈ 1, 2007ರಿಮ್ದ ಇದು ಎಲ್ಲಾ ಒಳಾಂಗಣ ಸಾರ್ವಜನಿಕ ಪ್ರದೇಶಗಳಿಗೂ ಅನ್ವಯವಾಗುತ್ತದೆ. ನ್ಯೂಜಿಲ್ಯಾಂಡ್ ಮತ್ತು ಬ್ರೆಜಿಲ್ಗಳಲ್ಲಿ, ಧೂಮಪಾನವನ್ನು ಮುಖ್ಯವಾಗಿ ಒಳಾಂಗಣ ಸಾರ್ವಜನಿಕ ಪ್ರದೇಶಗಳಲ್ಲಿ ಎಂದರೆ ಬಾರ್, ರೆಸ್ಟೊರೆಂಟ್ ಮತ್ತು ಪಬ್‌ಗಳಲ್ಲಿ ನಿಷೇಧಿಸಲಾಗಿದೆ. ಹಾಂಗ್ ಕಾಂಗ್ನಲ್ಲಿ ಜನವರಿ 1, 2007ರಿಂದ ಕೆಲಸದ ಸ್ಥಳ, ರೆಸ್ಟೊರೆಂಟ್, ಕ್ಯಾರಿಯೋಕೆ ರೂಮ್‌ಗಳು, ಕಟ್ಟಡಗಳು ಮತ್ತು ಸಾರ್ವಜನಿಕ ಉದ್ಯಾನವನಗಳೇ ಮೊದಲದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಯಿತು. ಹದಿನೆಂಟು ವರ್ಷದ ಕೆಳಗಿನವರಿಗೆ ಮದ್ಯವನ್ನು ಒದಗಿಸದ ಬಾರ್‌ಗಳಿಗೆ 2009ರವರೆಗೆ ವಿನಾಯಿತಿ ನೀಡಲಾಯಿತು. ರೊಮೇನಿಯಾದಲ್ಲು ಧೂಮಪಾನವನ್ನು ಟ್ರೇನುಗಳು, ಮೆಟ್ರೋಸ್ಟೇಶನ್‌ಗಳು, ಸಾರ್ವಜನಿಕ ಇಲಾಖೆಗಳು (ಇದಕ್ಕಾಗಿ ನಿಗದಿಪಡಿಸಲಾದ ಜಾಗಗಳನ್ನು ಹೊರತುಪಡಿಸಿ, ಸಾಮಾನ್ಯವಾಗಿ ಹೊರಗೆ) ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ನಿಷೇಧಿಸಲಾಗಿದೆ.

ಉತ್ಪನ್ನ ಸುರಕ್ಷತೆ

ಸಿಗರೆಟ್‌ಗಳಿಂದ ಪರೋಕ್ಷವಾಗಿ ಉಂಟಾಗಬಹುದಾದ ಸಾರ್ವಜನಿಕ ಆರೋಗ್ಯದ ಮೇಲಿನ ದುಷ್ಪರಿಣಾಮವೆಂದರೆ, ಬೆಂಕಿಯ ಅಪಘಾತಗಳು ಮತ್ತು ಇದು ಸಾಮಾನ್ಯವಾಗಿ ಮದ್ಯಸೇವನೆಗೆ ಸಂಬಂಧಿಸಿದವಾಗಿರುತ್ತವೆ. ಒಂದು ಸಿಗರೆಟ್ ಒಂದು ನಿಮಿಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯದವರೆಗೂ ಸೇದದೆ ಹೊತ್ತಿಕೊಂಡಿದ್ದಲ್ಲಿ ತಂತಾನೇ ಆರಿಹೋಗುವಂತಹ, ಆ ಮೂಲಕ ಅಗ್ನಿಸಂಬಂಧಿತ ಅವಘಡಗಳ ಸಂಖ್ಯೆಯನ್ನು ಕಡಿಮೆ ಮಾಡುವಂತಹ ಹಲವಾರು ಸಿಗರೆಟ್ ವಿನ್ಯಾಸಗಳನ್ನು ಹೊರತರಲಾಗಿದೆ ಮತ್ತು ಇವುಗಳಲ್ಲಿ ಕೆಲವನ್ನು ತಂಬಾಕು ಕಂಪನಿಗಳೇ ತಯಾರಿಸಿವೆ. ಅಮೆರಿಕನ್ ತಂಬಾಕು ಕಂಪೆನಿಗಳಲ್ಲಿ ಕೆಲವು ಇದನ್ನು ಪ್ರತಿರೋಧಿಸಿದರೆ, ಇನ್ನು ಕೆಲವು ಇದಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಆರ್‌ಜೆ ರೆನಾಲ್ಡ್ಸ್ ಈ ರೀತಿಯ ಸಿಗರೆಟ್‌ಗಳ ಮೂಲಮಾದರಿಗಳ ತಯಾರಿಕೆಯಲ್ಲಿ 1983ರಲ್ಲಿ ಮುಂದಾಳತ್ವ ವಹಿಸಿದರು ಮತ್ತು 2010ರ ಹೊತ್ತಿಗೆ ಅವರ ಎಲ್ಲಾ ಯು.ಎಸ್ ಸಿಗರೆಟ್‌ಗಳನ್ನು ಅಗ್ನಿಮುಕ್ತವನ್ನಾಗಿ ಮಾಡುವರು. ಫಿಲಿಪ್ ಮೊರಿಸ್ ಇದನ್ನು ನೇರವಾಗಿ ಬೆಂಬಲಿಸುತ್ತಿಲ್ಲ. ಲೋರಿಲ್ಲಾರ್ಡ್, ದೇಶದ ಮೂರನೇ ಅತಿ ದೊಡ್ಡ ತಂಬಾಕು ಕಂಪೆನಿಯು ಇದರ ಬಗ್ಗೆ ದ್ವಂದ್ವ ಮನೋಭಾವವನ್ನು ಹೊಂದಿದೆ.

ಗೇಟ್ವೇ ಡ್ರಗ್ ಸಿದ್ಧಾಂತ

ತಂಬಾಕು ಮತ್ತು ಇತರ ಮಾದಕ ವಸ್ತುಗಳ ಸೇವನೆಯ ನಡುವಣ ಸಂಬಂಧವು ಸ್ಪಷ್ಟವಾಗಿದೆ, ಆದರೆ ಈ ಸಂಬಂಧದ ಸ್ವರೂಪವು ಇನ್ನೂ ಅಸ್ಪಷ್ಟವಾಗುಳಿದಿದೆ. ಇದರ ಎರಡು ಪ್ರಮುಖ ಸಿದ್ಧಾಂತಗಳೆಂದರೆ ಫೀನೋಟೈಪಿಕ್ ಕಾಸೇಶನ್ (ಗೇಟ್‌ವೇ) ಮಾದರಿ ಮತ್ತು ಕೋರಿಲೇಟೆದ್ ಲಯೆಬಿಲಿಟೀಸ್ ಮಾದರಿ. ಕಾಸೇಶನ್ ಮಾದರಿಯು ಧೂಮಪಾನವು ಭವಿಷ್ಯದಲ್ಲಿ ಮಾದಕವಸ್ತುಗಳ ಬಳಕೆಗೆ ಕಾರಣವಾಗುವುದೆಂದು ವಾದಿಸುತ್ತದೆ, ಮತ್ತು ಕೋರಿಲೇಟೆಡ್ ಲಯೆಬಿಲಿಟೀಸ್ ಮಾದರಿಯು ಧೂಮಪಾನ ಮತ್ತು ಇತರ ಮಾದಕವಸ್ತುಗಳ ಬಳಕೆಯು ಅನುವಂಶಿಕ ಅಥವಾ ಪರಿಸರದ ಅಂಶಗಳಿಂದ ದೃಢೀಕರಿಸಲ್ಪಡುವುದೆಂದು ಪ್ರತಿಪಾದಿಸುತ್ತದೆ.

ನಿಲುಗಡೆ

ಧೂಮಪಾನದ ನಿಲುಗಡೆಯನ್ನು ಸಾಧಾರಣವಾಗಿ "ಬಿಡುವುದು" ಎಂದು ಕರೆಯಲಾಗುತ್ತದೆ ಮತ್ತು ಇದು ತಂಬಾಕು ಧೂಮಪಾನವನ್ನು ಪೂರ್ಣವಾಗಿ ತ್ಯಜಿಸಲು ಮಾಡುವ ಕಾರ್ಯವಾಗಿದೆ. ಇದಕ್ಕಾಗಿ ಹಲವಾರು ವಿಧಾನಗಳಿವೆ, ಉದಾಹರಣೆಗೆ, ಕೋಲ್ಡ್ ಟರ್ಕಿ, ನಿಕೋಟಿನ್ ರೀಪ್ಲೇಸ್‌ಮೆಂಟ್ ಥೆರಪಿ, ಆಂಟಿಡಿಪ್ರೆಸೆಂಟ್‌ಗಳು, ಹಿಪ್ನಾಸಿಸ್, ಸ್ವಸಹಾಯ, ಮತ್ತು ಸಪೋರ್ಟ್ ಗ್ರೂಪ್‌ಗಳು.

ಆಕರಗಳು

ಹೊರಗಿನ ಕೊಂಡಿಗಳು

Tags:

ತಂಬಾಕು ಸೇವನೆಧೂಮಪಾನ ಇತಿಹಾಸತಂಬಾಕು ಸೇವನೆಧೂಮಪಾನ ಬಳಕೆತಂಬಾಕು ಸೇವನೆಧೂಮಪಾನ ಮನೋವಿಜ್ಞಾನತಂಬಾಕು ಸೇವನೆಧೂಮಪಾನ ಪ್ರಭಾವತಂಬಾಕು ಸೇವನೆಧೂಮಪಾನ ಸಾರ್ವಜನಿಕ ನಿಯಮಗಳುತಂಬಾಕು ಸೇವನೆಧೂಮಪಾನ ಗೇಟ್ವೇ ಡ್ರಗ್ ಸಿದ್ಧಾಂತತಂಬಾಕು ಸೇವನೆಧೂಮಪಾನ ನಿಲುಗಡೆತಂಬಾಕು ಸೇವನೆಧೂಮಪಾನ ಆಕರಗಳುತಂಬಾಕು ಸೇವನೆಧೂಮಪಾನ ಗ್ರಂಥಸೂಚಿತಂಬಾಕು ಸೇವನೆಧೂಮಪಾನ ಹೊರಗಿನ ಕೊಂಡಿಗಳುತಂಬಾಕು ಸೇವನೆಧೂಮಪಾನಅಭಿವೃದ್ಧಿ ಹೊಂದಿದ ರಾಷ್ಟ್ರಎರಡನೇ ವಿಶ್ವಯುದ್ಧತಂಬಾಕುಹದಿಹರೆಯ

🔥 Trending searches on Wiki ಕನ್ನಡ:

ರಾಷ್ಟ್ರೀಯ ಸೇವಾ ಯೋಜನೆಮೈಸೂರು ಸಂಸ್ಥಾನಸಮಾಜಅಸಹಕಾರ ಚಳುವಳಿವಾಟ್ಸ್ ಆಪ್ ಮೆಸ್ಸೆಂಜರ್ಇತಿಹಾಸಆಧುನಿಕ ಮಾಧ್ಯಮಗಳುಪುರೂರವಸ್ಜಗನ್ನಾಥ ದೇವಾಲಯಕಲಿಕೆವಿಹಾರಗರ್ಭಧಾರಣೆಮುದ್ದಣಭಾರತದಲ್ಲಿ ಬಡತನಚಿದಂಬರ ರಹಸ್ಯಮದಕರಿ ನಾಯಕಮಧ್ವಾಚಾರ್ಯಒಡೆಯರ್ಹೂಡಿಕೆಸಂಗೊಳ್ಳಿ ರಾಯಣ್ಣಮ್ಯಾಸ್ಲೊ ರವರ ಅಗತ್ಯ ವರ್ಗಶ್ರೇಣಿಸೀಮೆ ಹುಣಸೆಪಂಚತಂತ್ರಜೈಮಿನಿ ಭಾರತಗ್ರಂಥ ಸಂಪಾದನೆಕುರುಬಜೈನ ಧರ್ಮವೀರಗಾಸೆಕುಟುಂಬಕಾಂತಾರ (ಚಲನಚಿತ್ರ)ಭಾರತೀಯ ನದಿಗಳ ಪಟ್ಟಿಸೋಮನಾಥಪುರಮಳೆನೀರು ಕೊಯ್ಲುರಾವಣಭಾರತೀಯ ಶಾಸ್ತ್ರೀಯ ಸಂಗೀತಉದಾರವಾದಹಲ್ಮಿಡಿವಿಶ್ವ ಪರಿಸರ ದಿನಚರ್ಚೆವಿಶ್ವಕರ್ಮಆದಿಲ್ ಶಾಹಿ ವಂಶಪ್ಯಾರಾಸಿಟಮಾಲ್ಮುಟ್ಟುಅಕ್ಕಮಹಾದೇವಿರನ್ನಬೆಂಗಳೂರುಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಬಹಮನಿ ಸುಲ್ತಾನರುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಭಾರತೀಯ ಆಡಳಿತಾತ್ಮಕ ಸೇವೆಗಳುಮೂತ್ರಪಿಂಡವ್ಯಾಪಾರಷಟ್ಪದಿಹಡಪದ ಅಪ್ಪಣ್ಣಚಾಣಕ್ಯಚಂದ್ರಶೇಖರ ಕಂಬಾರಮಂಡ್ಯಕನ್ನಡ ರಾಜ್ಯೋತ್ಸವಯೋಗವಾಹಎಸ್.ಎಲ್. ಭೈರಪ್ಪರಹಮತ್ ತರೀಕೆರೆಮಂಜಮ್ಮ ಜೋಗತಿಪಟ್ಟದಕಲ್ಲುಕನ್ನಡ ಗುಣಿತಾಕ್ಷರಗಳುಶಿವಸಂವಹನಪು. ತಿ. ನರಸಿಂಹಾಚಾರ್ಕನ್ನಡ ರಂಗಭೂಮಿಮಾನವ ಸಂಪನ್ಮೂಲ ನಿರ್ವಹಣೆಭಾರತ ಸಂವಿಧಾನದ ಪೀಠಿಕೆಯೋಜಿಸುವಿಕೆಕೆ. ಎಸ್. ನಿಸಾರ್ ಅಹಮದ್ಋಗ್ವೇದನೇಮಿಚಂದ್ರ (ಲೇಖಕಿ)ಭಾರತದ ರಾಷ್ಟ್ರಪತಿಬಹುಸಾಂಸ್ಕೃತಿಕತೆಅಗಸ್ಟ ಕಾಂಟ್🡆 More