ತಂತ್ರ

ತಂತ್ರ ಸಂಸ್ಕೃತ:तन्त्र; ನಿರಂತರತೆ ಯನ್ನು ಸೂಚಿಸುವ ಜಾಲ; ಆಂಗ್ಲದಲ್ಲಿ ತಾಂತ್ರಿಸಿಸಂ ಅಥವಾ ತಂತ್ರಿಸಂ ಅಥವಾ ತಂತ್ರಂ ಸಂಸ್ಕೃತ:तन्त्र ಎಂದು ಕರೆಯಲ್ಪಡುವ ತಂತ್ರವು ಒಂದು ತತ್ವಶಾಸ್ತ್ರವಾಗಿದ್ದು, ಇದರಲ್ಲಿ ಶಕ್ತಿಯು ಮುಖ್ಯದೇವತೆಯಾಗಿ ಪೂಜಿಸಲ್ಪಡುವುದಾಗಿದ್ದು ಇಡೀ ಜಗತ್ತು ಶಕ್ತಿ ಮತ್ತು ಶಿವ ನ ದಿವ್ಯಲೀಲೆಗೆ ಒಳಪಟ್ಟದ್ದೆಂದು ಸಾರುತ್ತದೆ; ಸಾಮಾನ್ಯವಾಗಿ ಶಕ್ತಿಪೂಜೆಗೆ ಸಂಬಂಧಿತವಾದ ಯಾವುದೇ ಧಾರ್ಮಿಕಗ್ರಂಥ(ತಂತ್ರಗಳು ಎಂದು ಕರೆಯಲ್ಪಡುವ)ವನ್ನೂ ಸಹ ತಂತ್ರ ಎಂಬ ಪದದಿಂದಲೇ ಗುರುತಿಸಲಾಗುತ್ತದೆ.

ತಂತ್ರವು ಮೂಲತಃ ಆಧ್ಯಾತ್ಮಿಕ ವಿಧಿವಿಧಾನಗಳು ಮತ್ತು ಪೂಜಾ ಆಚರಣೆಯ ಕ್ರಮಗಳನ್ನು ಅರುಹುತ್ತಾ ಮೌಢ್ಯ ಮತ್ತು ಪುನರ್ಜನ್ಮದಿಂದ ಮುಕ್ತಿ ಪಡೆಯಲು ಸಹಾಯಕವಾಗುತ್ತದೆ. ತಂತ್ರಿಸಂ ಹಿಂದೂ, ಸಿಖ್, ಬಾನ್, ಬೌದ್ಧ, ಮತ್ತು ಜೈನ ಮತಗಳ ಆಚರಣೆಗಳ ಮೇಲೆ ಪ್ರಭಾವ ಬೀರಿದೆ. ತಂತ್ರವು ತನ್ನ ವಿವಿಧ ವಿಧಗಳಲ್ಲಿ ಭಾರತ, ನೇಪಾಳ, ಚೀನಾ, ಜಪಾನ್, ಟಿಬೆಟ್, ಕೊರಿಯಾ, ಕಾಂಬೋಡಿಯಾ, ಬರ್ಮಾ, ಇಂಡೋನೇಷಿಯಾ ಮತ್ತು ಮಂಗೋಲಿಯಾಗಳಲ್ಲಿ ಆಚರಿಸಲಾಗುತ್ತಿದೆ. ತಂತ್ರವೆಂದರೇನೆಂಬುದಕ್ಕೆ ತೀವ್ರತರವಾದ ಅರ್ಥ ನೀಡಲು ಹಿಂದುಮುಂದು ನೋಡಿದರೂ, ಡೇವಿಡ್ ವೈಟ್ ರವರು ಈ ಕೆಳಗಿನ ವಿವರಣೆಯನ್ನು ಮುಂದೊಡ್ಡಿದ್ದಾರೆ:

ತಂತ್ರ
ಶ್ರೀ ಯಂತ್ರ

ತಂತ್ರ ಎಂದರೆ ಏಷ್ಯಾದ ಒಂದು ನಂಬಿಕೆಗಳ ಹಾಗೂ ಆಚಾರಗಳ ವ್ಯವಸ್ಥೆಯಾಗಿದ್ದು, ನಾವಿರುವ ಹಾಗೂ ಅನುಭವಿಸುತ್ತಿರುವ ಜಗತ್ತು ದೇವದೇವನ ದೈವೀಕ ಶಕ್ತಿಯ ದೃಢವಾದ ಸ್ವರೂಪವಲ್ಲದೆ ಮತ್ತೇನೂ ಅಲ್ಲವೆಂಬ ತತ್ತ್ವದ ಮೇಲೆ ಆಧಾರಿತವಾಗಿದ್ದು, ಆ ಶಕ್ತಿಯೇ ಜಗದ ಸೃಷ್ಟಿ ಮತ್ತು ಸ್ಥಿತಿಯನ್ನು ನೋಡಿಕೊಳ್ಳುವುದೆಂಬ ನೀತಿಯನ್ನು ಹೊಂದಿದ್ದು, ಆ ಶಕ್ತಿಯನ್ನು ಆಚಾರಬದ್ಧವಾಗಿ ಸಂಪ್ರೀತಗೊಳಿಸಿ ಮಾನವನ ಪಿಂಡಾಂಡದಲ್ಲಿ ಆ ಶಕ್ತಿಯನ್ನು ಸೃಷ್ಟಿ ಮತ್ತು ವಿಮೋಚನಾ ವಿಧಿಗಳಲ್ಲಿ ಹರಿಯಬಿಡುವ ಯತ್ನದ ಕ್ರಮವಾಗಿದೆ.

ಸ್ಥೂಲ ಅವಲೋಕನ

ತಂತ್ರದ ಬಗ್ಗೆ ಹಲವಾರು ಅರ್ಥಗಳನ್ನು ಹಾಗೂ ವಿವರಣೆಗಳನ್ನು ಹಲವಾರು ದೃಷ್ಟಿಕೋನಗಳಿಂದ ನೀಡಲಾಗಿದ್ದು, ಎಲ್ಲವೂ ಒಂದೇ ವಿಧವಲ್ಲದೆ ವಿಭಿನ್ನವಾಗಿವೆ. ತಂತ್ರಿಸಂ ಎಂಬ ಪದವು ಪಾಶ್ಚಿಮಾತ್ಯ ಪಾಂಡಿತ್ಯದ ರಚನೆಯೆಂಬ ಅಂಶದ ಮೇಲೆ ಗಮನ ಹರಿಸುತ್ತಾ ರಾಬರ್ಟ್ ಬ್ರೌನ್ ಹೀಗೆ ಹೇಳುತ್ತಾರೆ:

ತಂತ್ರವನ್ನು ವೈದಿಕ ಸಂಪ್ರದಾಯದಿಂದ ಹೊರತಾದುದೆಂದು ಸಾಮಾನ್ಯವಾಗಿ ಅಂತರಂಗದಲ್ಲಿ ಗುರುತಿಸಲ್ಪಟ್ಟಿದ್ದಾಗ್ಯೂ, ಅದು ಕೇವಲ ಧಾರ್ಮಿಕ ವ್ಯವಸ್ಥೆಯೊಳಗಿಂದ ಬರುವ ವಿಚಾರವಲ್ಲ. ಹೀಗೆಂದಾಕ್ಷಣ ಇದೊಂದು ಸ್ವತಂತ್ರ ವರ್ಗವೇನೋ ಎಂಬ ಶಂಕೆ ಉದ್ಭವಿಸುತ್ತದೆ.

ತಂತ್ರವು ಒಂದು ಸಮನ್ವಿತ ವ್ಯವಸ್ಥೆಗೆ ಒಳಪಡದೆ, ಹಲವಾರು ಆಚರಣೆಗಳ ಮತ್ತು ಆಲೋಚನೆಗಳ ಸಂಯುಕ್ತ ಕ್ರಮವಾಗಿದ್ದು ಅದರ ಆಚರಣೆಯ ಮೂಲಕ ವಿಶೇಷತೆಯನ್ನು ಹೊಂದುವಂತಾಗಿದ್ದು, ಲೌಕಿಕವನ್ನು ಬಳಸಿ ಅಗಾಧ-ಲೌಕಿಕತೆ(ಅಲೌಕಿಕತೆ)ಯನ್ನು ಪಡೆಯಲು, ಮತ್ತು ಅಂಡಾಂಡವನ್ನು ಬ್ರಹ್ಮಾಂಡದೊಂದಿಗೆ ಸಮನ್ವಯಿಸಲು ಬಳಸುವ ವಿಧವಾಗಿದೆ. ತಂತ್ರವನ್ನು ಆಚರಿಸುವವನು ವಿಶ್ವದಲ್ಲಿ (ವ್ಯಕ್ತಿಯ ದೇಹದಲ್ಲಿರುವುದನ್ನೂ ಸೇರಿದಂತೆ)ಸಂಚರಿಸುವ ಪ್ರಾಣ (ದೈವಿಕ ಶಕ್ತಿ)ವನ್ನು ಉಪಯೋಗಿಸಿ ಉದ್ದೇಶಿತ ಗುರಿಗಳನ್ನು ತಲುಪಲು ಯತ್ನಿಸುತ್ತಾನೆ. ಈ ಗುರಿಗಳು ಆಧ್ಯಾತ್ಮಿಕ, ವಸ್ತುನಿಷ್ಠ ಅಥವಾ ಎರಡೂ ಆಗಿರಬಹುದು. ಬಹಳಷ್ಟು ತಂತ್ರದ ಆಚರಣಕಾರರು ನಿಗೂಢವಾದ ಅನುಭವಗಳು ಅತ್ಯವಶ್ಯವೆನ್ನುತ್ತಾರೆ. ತಂತ್ರದ ಕೆಲವು ವಿಧಿಗಳನ್ನು ಅರಿಯಲು ಗುರುವಿನ ಮಾರ್ಗದರ್ಶನ ಅಗತ್ಯವಾಗುತ್ತದೆ.

ಶಕ್ತಿಯೊಂದಿಗೆ ಕಾರ್ಯವೆಸಗುವ ಕ್ರಮದಲ್ಲಿ ತಾಂತ್ರಿಕ ಅಥವಾ ತಂತ್ರದ ಆಚರಣಕಾರನು ಹಲವಾರು ಸಾಧನಗಳನ್ನು ಹೊಂದಿರುತ್ತಾನೆ. ಇವುಗಳಲ್ಲಿ ಯೋಗ ವೂ ಒಂದಾಗಿದ್ದು, ಇದು ಆಚರಣಕಾರನನ್ನು ದೈವೀಕಕ್ಕೆ "ನೊಗ"ದಂತೆ ಸೇರಿಸಲು ಉಪಯುಕ್ತವಾಗುತ್ತದೆ. ದೇವತೆಯನ್ನು ಕಲ್ಪಿಸಿಕೊಳ್ಳುವಿಕೆ, ಮಂತ್ರಗಳ ಮೂಲಕ ಕಂಠೋಕ್ತಗೊಳಿಸುವಿಕೆ ಅಥವಾ ಜಾಗೃತಗೊಳಿಸುವಿಕೆ ಗಳನ್ನು ದರ್ಶನ, ಆಂತರಿಕ ಆಲಿಸುವಿಕೆಗಳೆಂದು ತಿಳಿದುಕೊಳ್ಳಬಹುದು ಹಾಗೂ ವ್ಯಕ್ತಿಯಲ್ಲಿನ ಸ್ಥಿತಿಯನ್ನು ಉಚ್ಛ್ರಾಯಕ್ಕೆ ತಲುಪಿಸಲು ಹಾಡಿನ ಶಕ್ತಿಯನ್ನು ಉಪಯೋಗಿಸಬಹುದು ಮತ್ತು ತನ್ಮೂಲಕ ಅನವರತ ವೃದ್ಧಿಸುವ ಜಾಗತಿಕ ಸ್ಪಂದನವನ್ನು ದೈನಂದಿನ ಅಚರಣೆಗಳ ಮೂಲಕ ಅರಿತುಕೊಳ್ಳಬಹುದು. ದೈವವನ್ನು ಅಂತರ್ಗತವಾಗಿಸುವಿಕೆ ಮತ್ತು ಅದರೊಂದಿಗೆ ಗುರುತಿಸಿಕೊಳ್ಳುವಿಕೆಯ ಪ್ರಕ್ರಿಯೆಯು ದೇವತೆಯೊಂದಿಗೆ ಸಂಪೂರ್ಣವಾಗಿ ಗುರುತಿಸಿಕೊಳ್ಳುವುದರ ಮೂಲಕ ನಡೆಯುವುದಾಗಿದ್ದು, ಕಡೆಗೆ ಉದ್ದೇಶ ಹೊಂದಿದವನು ಇಷ್ಟ-ದೇವತೆ ಅಥವಾ ಧ್ಯಾನ ದೇವತೆಯಾಗುತ್ತಾನೆ.

ತಂತ್ರಿಸಂ ಆಧ್ಯಾತ್ಮಿಕ ಪರಿಪೂರ್ಣತೆ ಮತ್ತು ಮಾಂತ್ರಿಕ ಶಕ್ತಿಯ ಒಂದು ಅನ್ವೇಷಣಾ ಪರಿ. ಅದರ ಗುರಿಯು ವ್ಯಕ್ತಿಯು ತನ್ನ ಮೇಲೆ ಸಂಪೂರ್ಣ ಹತೋಟಿ ಹೊಂದುವುದನ್ನು ಸಾಧಿಸುವುದು ಮತ್ತು ಪ್ರಕೃತಿಯ ಎಲ್ಲಾ ಶಕ್ತಿಗಳ ಮೇಲೆ ಹಿಡಿತ ಹೊಂದುವಂತಹುದಾಗಿದ್ದು, ಪ್ರಪಂಚ ಮತ್ತು ದೈವೀಕತೆಯ ಸಂಯುಕ್ತತೆಯನ್ನು ಹೊಂದುವುದೇ ಇದರ ಪರಮ ಉದ್ದೇಶವಾಗಿದೆ. ಸಾಮಾನ್ಯವಾಗಿ ತಂತ್ರದ ವಿಧಿಗಳನ್ನು ಅರಿಯಲು ದೀರ್ಘಕಾಲಿಕ ತರಬೇತಿಯ ಅವಶ್ಯಕತೆಯಿದ್ದು, ಗುರುಗಳು ಶಿಷ್ಯರಿಗೆ ಈ ಕ್ರಮದಲ್ಲಿ ದೀಕ್ಷೆ ನೀಡುತ್ತಾರೆ. ದೇಹವನ್ನು ಮನಸ್ಸಿನ ಹತೋಟಿಗೆ ತರುವ ಸಲುವಾಗಿ ಉಸಿರಾಟದ ವಿಧಾನಗಳು ಮತ್ತು ಭಂಗಿ(ಆಸನ )ಗಳನ್ನೊಳಗೊಂಡ ಯೋಗ ವನ್ನು ಬಳಸಲಾಗುತ್ತದೆ. ಮುದ್ರೆಗಳು ಅಥವಾ ಸಂಜ್ಞೆಗಳು; ಮಂತ್ರಗಳು ಅಥವಾ ಉಚ್ಚಾರಗಳು, ಪದಗಳು ಮತ್ತು ನುಡಿಗಟ್ಟುಗಳು; ಮಂಡಲಗಳು ಮತ್ತು ಯಂತ್ರಗಳು - ವಿಶ್ವದಲ್ಲಿ ತೊಡಗಿರುವ ಶಕ್ತಿಗಳ ಸಾಂಕೇತಿಕ ಚಿತ್ರಗಳು - ಇವೆಲ್ಲವನ್ನೂ ಧ್ಯಾನದ ಮತ್ತು ಆಧ್ಯಾತ್ಮಿಕ ಹಾಗೂ ಮಾಂತ್ರಿಕ ಶಕ್ತಿಯನ್ನು ಪಡೆಯುವುದಕ್ಕಾಗಿ ಪರಿಕರಗಳಾಗಿ ಬಳಸಲಾಗುತ್ತದೆ.

ಧ್ಯಾನದ ಸಮಯದಲ್ಲಿ ಆಚರಣಕಾರಳು/ನು ತನ್ನನ್ನು ವಿಶ್ವದ ಶಕ್ತಿಯನ್ನು ಪ್ರತಿನಿದಿಸುವ ಹಲವಾರು ಹಿಂದೂ ದೇವ-ದೇವಿಯರಲ್ಲಿ ಒಂದಾಗಿ ಭಾವಿಸಿಕೊಳ್ಳುತ್ತಾರೆ. ಆಚರಣಕಾರನು/ಳು ಆ ದೈವೀರೂಪವನ್ನೇ ಕಲ್ಪಿಸಿಕೊಳ್ಳುತ್ತಾ, ಅದನ್ನೇ ಮನನ ಮಾಡುತ್ತಾ, ಆ ಕಲ್ಪಿತ ರೂಪದೊಂದಿಗೆ ತನ್ನನ್ನು ತಾನು ಐಕ್ಯಗೊಳಿಸಿಕೊಳ್ಳುವ ವಿಧಾನವನ್ನು ಲೈಂಗಿಕ ಚೇಷ್ಟೆಗಳು ಮತ್ತು ಸಂಭೋಗಕ್ಕೆ ಹೋಲಿಸಲಾಗುತ್ತದೆ. ವಾಸ್ತವವಾಗಿ, ಕೆಲವು ತಾಂತ್ರಿಕ ಮಾಂಕ್ ಗಳು ದೇವಿಯನ್ನು ಪ್ರತಿನಿಧಿಸುವುದಕ್ಕಾಗಿ ಸ್ತ್ರೀಯರನ್ನು ಜೊತೆಗಾರರಾಗಿ ಬಳಸುತ್ತಾರೆ. ಅಲ್ಲದೆ, ಎಡಗೈ ತಂತ್ರ (ವಾಮಾಚಾರ )ದ ಆಚರಣೆಯಲ್ಲಿ ಲೈಂಗಿಕ ಸಂಭೋಗವನ್ನು ಬಳಸಲಾಗುತ್ತದೆ - ಸಂತೋಷಕ್ಕಾಗಿ ಅಲ್ಲ - ವಿಶ್ವದ ಅಂತರ್ಗತ ಕ್ರಮಗಳು ಮತ್ತು ರಚನೆಗಳನ್ನು ಪ್ರವೇಶಿಸುವುದಕ್ಕೆ ಒಂದು ಸಾಧನವಾಗಿ.

ವೈದಿಕ ಸಂಪ್ರದಾಯದೊಂದಿಗಿರುವ ಸಂಬಂಧ

ತಂತ್ರಸಂಪ್ರದಾಯವನ್ನು ವೈದಿಕ ಸಂಪ್ರದಾಯದೊಂದಿಗೆ ಬೆಸೆದುಕೊಂಡಿರುವಂತಹ ಅಥವಾ ಸಮಾನಾಂತರದಲ್ಲಿರುವಂತಹ ಸಂಪ್ರದಾಯವೆಂದು ಹೇಳಬಹುದು. ತಂತ್ರದ ಬಗ್ಗೆ ಬರೆದಂತಹ ಮೂಲ ವಿಷಯಗಳಲ್ಲಿ ಆಗಮ ವು ಸಾಮಾನ್ಯವಾಗಿ ಭೌತಿಕ ಅರಿವನ್ನು ನೀಡುವಂತಹ ಜ್ಞಾನ , ಧ್ಯಾನದ ವಿಧಿಗಳುಳ್ಳ ಯೋಗ , ಆಚರಣೆಯ ನಿಯಮಗಳುಳ್ಳ ಕ್ರಿಯೆ ಮತ್ತು ನೈತಿಕ ಹಾಗೂ ಧಾರ್ಮಿಕ ಆದೇಶಗಳುಳ್ಳ ಚರ್ಯೆ ಎಂಬ ನಾಲ್ಕು ಭಾಗಗಳನ್ನು ಹೊಂದಿರುತ್ತದೆ. ಶಾಲೆಗಳು ಮತ್ತು ಪರಂಪರೆಗಳು ನಿರ್ದಿಷ್ಟವಾದ ಆಗಮದ ಸಂಪ್ರದಾಯಗಳೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತವೆ.

ಭಾರತದಲ್ಲಿ ತಂತ್ರವನ್ನು ಸಾಂಪ್ರದಾಯಿಕ ವೈದಿಕ ವಿಧಿಗಳನ್ನು ತಿರಸ್ಕರಿಸುವುದರ ಮೂಲಕ ಗುರುತಿಸಲಾಗುತ್ತದೆ ಎಂದು ಆಂಡ್ರೆ ಪಡೌ ಗಮನಿಸಿದ್ದಾರೆ. ಮಾರಿಸ್ ವಿನೆರ್ ನಿಟ್ಝ್ ರವರು ತಂತ್ರ ಸಾಹಿತ್ಯವನ್ನು ವಿಮರ್ಶಿಸುತ್ತಾ ತಾಂತ್ರಿಕ ಪಠ್ಯಗಳು ವೇದಗಳ ಬಗ್ಗೆ ನಿರ್ದಿಷ್ಟವಾಗಿ ಉಗ್ರತೆಯನ್ನೇನೂ ತೋರಿಸುವುದಿಲ್ಲ, ಅವು ವೇದಗಳಲ್ಲಿನ ಕಟ್ಟುಪಾಡುಗಳು ಈಗಿನ ಕಾಲಕ್ಕೆ ಬಹಳ ತ್ರಾಸಕರ, ಅದ್ದರಿಂದ, ಒಂದು ಸುಲಭವಾದ ಪೂಜಾವಿಧಿ ಮತ್ತು ಸರಳವಾದ ಉಪದೇಶಗಳನ್ನು ತೋರಿಸಿಕೊಡುತ್ತವೆ ಎಂದು ಸೂಚಿಸಿದ್ದಾರೆ. ವೇದಗಳ ಶ್ರೇಷ್ಠತೆಯನ್ನು ಒಪ್ಪುವ ಕೆಲವು ಸಂಪ್ರದಾಯಸ್ಥ ಬ್ರಾಹ್ಮಣರು ತಂತ್ರಗಳ ಶ್ರೇಷ್ಠತೆಯನ್ನು ತಿರಸ್ಕರಿಸುತ್ತಾರೆ. ಎನ್. ಎನ್. ಭಟ್ಟಾಚಾರ್ಯರು ವಿವರಿಸುತ್ತಾರೆ:

ನಾವು ಗಮನಿಸಬೇಕಾದ ಅಂಶವೆಂದರೆ ನಂತರದ ದಿನಗಳ ತಾಂತ್ರಿಕ ಬರಹಗಾರರು ವೇದಗಳನ್ನಾಧರಿಸಿಯೇ ತಮ್ಮ ಬೋಧನೆಗಳನ್ನು ಇರಿಸಲಿಚ್ಛಿಸಿದರೂ, ವೈದಿಕ ಧರ್ಮದ ಸಾಂಪ್ರದಾಯಿಕ ಆಚರಣಕಾರರು ತಂತ್ರವನ್ನು ಅವಹೇಳನದಿಂದಲೇ ಕಂಡರು ಮತ್ತು ಅದರಲ್ಲಿನ ವೈದಿಕ ವಿರೋಧಿ ಗುಣಗಳನ್ನೇ ಎತ್ತಾಡಿದರು.

ತಂತ್ರವು ಶೈವ , ವೈಷ್ಣವ , ಗಾಣಪತ್ಯ , ಸೌರ್ಯ ಮತ್ತು ಶಕ್ತ ರೂಪಗಳಲ್ಲಿ ಇರುತ್ತದೆ; ಇತರೆ ಕೆಲವು ಸ್ವರೂಪಗಳೂ ಇವೆ. ನಿಖರವಾಗಿ ಹೇಳುವುದಾದರೆ, ವೈಯಕ್ತಿಕ ಆಚಾರಗಳ ಆಧಾರದ ಮೇರೆಗೆ, ತಂತ್ರದ ಪಠ್ಯಗಳನ್ನು ಶೈವ [[Āgamas]], ವೈಷ್ಣವ ,Pāñcarātra Saṃhitās, ಮತ್ತು ಶಕ್ತ ತಂತ್ರಗಳು ಎಂದು ವಿಂಗಡಿಸಬಹುದು, ಆದರೆ ಈ ಪಠ್ಯಗಳಲ್ಲಿ ನಿರ್ದಿಷ್ಟವಾಗಿ ಗೆರೆಕೊಯ್ದಂತೆ ಗುರುತಿಸಲಾಗುವ ವ್ಯತ್ಯಾಸಗಳಿಲ್ಲ, ಮತ್ತು ಅನುಷ್ಠಾನದ ರೀತ್ಯಾ ತಂತ್ರ ಎಂದರೆ ಸಾಮಾನ್ಯವಾಗಿ ಈ ಎಲ್ಲಾ ಪಠ್ಯಗಳೂ ಸೇರುತ್ತವೆ. ಅಧ್ಯೈತಾಚಾರ್ಯ ಜಗದ್ಗುರು ಶ್ರೀ ಶಂಕರಾಚಾರ್ಯರು ಆರು ಮತಗಳನ್ನೂ ಒಂದುಗೂಡಿಸಿ, ವೈದಿಕ ಮತ್ತು ತಾಂತ್ರಿಕ ಆಚರಣೆಗಳಲ್ಲಿ ಸಾಮರಸ್ಯತೆಯನ್ನು ತಂದು ಭರತವನ್ನು ತಾಂತ್ರಿಕವಾಗಿ ವೈದಿಕವಾಗಿ ಒಂದುಗೂಡಿಸಿದರು. ಇವರು ಪಂಚಾಯತನ ಪೂಜಾ ಪದ್ದತಿಯನ್ನು ಪ್ರಚಲಿತಕ್ಕೆ ತಂದು, ಗಣಪತಿ ಪಂಚಾಯತನ, ಸೂರ್ಯ ಪಂಚಾಯತನ, ವಿಷ್ಣು ಪಂಚಾಯತನ, ಶಿವ ಪಂಚಾಯತನ ಹಾಗೂ ಶಕ್ತಿ ಪಂಚಾಯತನಗಳೆಂದು ಪಂಚಾಯತನ ಪೂಜೆಯನ್ನು ಪ್ರಾರಂಬಿಸಿ, ಸಮಾಜದ ದಾರ್ಮಿಕ ಆಚರಣೆಗಳ ನಡುವಿನ ವೈರುದ್ಯಗಳ ನಡುವೆ ಸಾಮರಸ್ಯವನ್ನು ತಂದು ಭಾರತದ ಅಖಂಡೀಕರಣ ಹಾಗೂ ತಾಂತ್ರಿಕ ವೈದಿಕ ಏಕೀಕರಣಕ್ಕೆ ಕಾರಣೀಭೂತರಾದರು.

ಯೋಗಕ್ಕೆ ಸಂಬಂಧಿಸಿದಂತೆ

ತಂತ್ರ ಹಾಗೂ ಯೋಗದ ದಾರಿಗಳು ವಿರುದ್ಧವೇ ಆಗಿದ್ದರೂ, ಯಾವುದೋ ಒಂದು ಸಾಮಾನ್ಯ ತಾತ್ವಿಕತೆಯ ಹಾಗೂ ಉದ್ದೇಶದ ಬಿಂದುವಿನಲ್ಲಿ ಇವೆರಡೂ ಪರಸ್ಪರ ಅಡ್ಡ ಹಾಯುತ್ತವೆ. ವಿಜ್ಞಾನ ಭೈರವ ತಂತ್ರದ ಬಗ್ಗೆ ಉಪನ್ಯಾಸ ನೀಡುತ್ತಾ, ಓಷೋ ಈ ಎರಡು ಪಥಗಳಲ್ಲಿರುವ ವ್ಯತ್ಯಾಸವನ್ನು ಬಣ್ಣಿಸಲು ಯತ್ನಿಸುತ್ತಾ ಹೀಗೆ ನುಡಿದರು, "ಯೋಗವು ಅರಿವಿನೊಡನೆ ಸಂಕ್ಷೇಪಗೊಳಿಸುವಿಕೆ; ತಂತ್ರವು ಅರಿವಿನೊಡನೆ ತೊಡಗಿಕೊಳ್ಳುವಿಕೆ."

ತಂತ್ರವನ್ನು ಯೋಗದ ಸರಳೀಕರಣ ಎಂದು ಕರೆಯಬಹುದು. ಹಠಯೋಗಿಗಳು ಮಾಡುವ ಪ್ರಾಣಾಯಾಮ ಮುಂತಾದ ದೈಹಿಕ ಮತ್ತು ಮಾನಸಿಕ ಒಗ್ಗೂಡುವಿಕೆಯಿಂದ ಉಂಟಾಗುವ ವಿಶ್ವಶಕ್ತಿಯ ಅನುಭವವು ತಾಂತ್ರಿಕನಿಗೆ ದೇವತಾ ಉಪಾಸನೆಯನ್ನು ನಿರ್ದಿಷ್ಟ ತಂತ್ರದಲ್ಲಿ ಉದ್ದೇಶಿತ ಮಂತ್ರೋಪಾಸನೆಯಿಂದ ಶೀಘ್ರವಾಗಿ ಆಗುವುದಲ್ಲದೇ. ಯೋಗಿಗೆ ಆಗುವ ಅಪಾಯಗಳು ಇಲ್ಲಿ ಉಂಟಾಗದೇ ಸ್ವತಹ ಉಪಾಸಿತ ದೇವತೆಯೇ ತಾಂತ್ರಿಕನಿಗೆ ಸಹಾಯಮಾಡುತ್ತದೆ. ಇದಕ್ಕೆ ಹಲವಾರು ತಾಂತ್ರಿಕರ ಅನುಭವಗಳೇ ಸಾಕ್ಷಿ ಇದೆ. ಯೋಗಾಭ್ಯಾಸದಲ್ಲಿ ಎಚ್ಚರತಪ್ಪಿದರೆ ಅಪಾಯ ಬಹಳವಿದ್ದರೆ ತಂತ್ರದಲ್ಲಿ ಸ್ವತಃ ದೇವತೆಯೇ ತಾಂತ್ರಿಕನನ್ನು ಎಚ್ಚರಿಸಿ ಸರಿದಾರಿಗೆ ತರಲು ಪ್ರಯತ್ನಿಸುತ್ತದೆ. ಇಲ್ಲದಿದ್ದರೆ ತಾಂತ್ರಿಕ ಮಾರ್ಗದಿಂದಲೇ ಸಾದಕ ಪಾಠ ಕಲಿತು ಇನ್ನೊಬ್ಬರಿಗೆ ತೊಂದರೆಯಾಗದಹಾಗೆ ಮಾರ್ಪಾಡಾಗುತ್ತಾನೆ.

ರಾಬರ್ಟ್ ಸ್ವಬೋಧರು ವೈದಿಕ ಅರಿವಿನ ಈ ಮೂರು ಪ್ರಮುಖ ಪಥಗಳ ಸಾರಾಂಶ ಪಡೆಯುವ ಯತ್ನದಲ್ಲಿ ಹೀಗೆ ಉದ್ಗರಿಸುತ್ತಾರೆ:

Because every embodied individual is composed of a body, a mind and a spirit, the ancient Rishis of India who developed the Science of Life organized their wisdom into three bodies of knowledge: Ayurveda, which deals mainly with the physical body; Yoga, which deals mainly with spirit; and Tantra, which is mainly concerned with the mind. The philosophy of all three is identical; their manifestations differ because of their differing emphases. Ayurveda is most concerned with the physical basis of life, concentrating on its harmony of mind and spirit. Yoga controls body and mind to enable them to harmonize with spirit, and Tantra seeks to use the mind to balance the demands of body and spirit.

ಬೌದ್ಧ ತಂತ್ರ

ಟಿಬೆಟ್ ನ ಬೌದ್ಧ ತಾಂತ್ರಿಕ ಗುರು ಲಾಮಾ ಥುಬ್ ಟೆನ್ ಯೆಷೆಯವರ ಪ್ರಕಾರ:

...ಪ್ರತಿವ್ಯಕ್ತಿಯೂ ಜಗತ್ತಿನ ಸರ್ವಶಕ್ತಿಯ ಸಮಾಗಮವೇ. ನಾವು ಸಂಪೂರ್ಣರಾಗಬೇಕಾದರೆ ಬೇಕಾದಂತಹ ಸಕಲ ಅಂಶಗಳೂ ಈ ಕ್ಷಣದಲ್ಲೂ ನಮ್ಮಲ್ಲಿಯೇ ಇವೆ. ಅದನ್ನು ನಾವು ಗುರುತಿಸಿಕೊಳ್ಳಬೇಕಷ್ಟೆ. ಇದೇ ತಂತ್ರದ ಹಾದಿ.

ಜಾಗೃತಿ ಮತ್ತು ಸುಷುಪ್ತಿ

ಭಾಷಾರೀತ್ಯಾ ಮೂರು ಪದಗಳಾದ ಮಂತ್ರ , ತಂತ್ರ ಮತ್ತು ಯಂತ್ರ ಗಳು ಭಾರತದ ಪುರಾತನ ಸಂಪ್ರದಾಯಗಳಿಗೆ ಸಂಬಂಧಿಸಿದಂತಹವಾಗಿವೆ(ಉಚ್ಚಾರಣೆಯಲ್ಲೂ ಅಂತೆಯೇ). ಮಂತ್ರ ವು ಪಠಣ ಅಥವಾ "ಜ್ಞಾನ"ವನ್ನು ಸೂಚಿಸುತ್ತದೆ. ತಂತ್ರ ವು ತತ್ವಶಾಸ್ತ್ರ ಅಥವಾ ಆಚರಣೆಯ ಕ್ರಮಗಳನ್ನು ಸೂಚಿಸುತ್ತದೆ. ಯಂತ್ರ ವು ಮಾನವನು ಯಾವ ಸಾಧನ (ಅಥವಾ ಯಂತ್ರ)ಗಳ ಮೂಲಕ ತನ್ನ ಜೀವನವನ್ನು ಸಾಗಿಸಬೇಕೋ ಅದನ್ನು ಸೂಚಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು]

ತಂತ್ರದ ಪ್ರಕಾರ "ಇರುವಿಕೆ-ಅರಿವು-ಆನಂದ" ಅಥವಾ ಸಚ್ಚಿದಾನಂದ ಕ್ಕೆ ಸ್ವಯಂ-ಜಾಗೃತಿ ಮತ್ತು ಸ್ವಯಂ-ಸುಷುಪ್ತಿ ಎರಡೂ ಶಕ್ತಿಗಳಿವೆ. ಪ್ರಕೃತ್ ಇ (ತಿ) ಅಥವಾ "ನಿಜಸ್ಥಿತಿ"ಯು ಹಲವಾರು ಪ್ರಾಣಿಗಳು ಮತ್ತು ವಸ್ತುಗಳಾಗಿ ಉಗಮವಾಗುವುದಾದರೂ, ಸತ್ಸಮಯದಲ್ಲೇ ಅದು ನಿರಂತರವಾಗಿ ಶುದ್ಧ ಅರಿವು, ಶುದ್ಧ ಸ್ಥಿತಿ ಮತ್ತು ಶುದ್ಧ ಆನಂದವಾಗಿಯೂ ಇರುತ್ತದೆ. ಈ ಉಗಮವಾಗುವ ಪ್ರಕ್ರಿಯೆಯಲ್ಲಿ ಮಾಯೆ ಯು(ಭ್ರಮೆಯು) ನಿಜವನ್ನು ಮರೆಮಾಚುತ್ತದೆ ಮತ್ತು ಅದನ್ನು ವೈರುದ್ಧ್ಯಗಳಾಗಿ ವಿಂಗಡಿಸುತ್ತದೆ; ಅರಿವು ಮತ್ತು ಅರಿವಿಲ್ಲದಿರುವಿಕೆ, ಹಿತಕರ ಮತ್ತು ಅಹಿತಕರ, ಇತ್ಯಾದಿಯಾಗಿ. ಇದನ್ನು ಭ್ರಮೆಯೆಂದು ಅರಿಯದಿದ್ದರೆ ಈ ವೈರುದ್ಧ್ಯಗಳು ವೈಯಕ್ತಿಕ ಜೀವ ವನ್ನು ಕಟ್ಟಿ, ನಿಯಂತ್ರಿಸಿ, ಬಂಧನ(ಪಶು )ದಲ್ಲಿ ಇರಿಸುತ್ತವೆ.

ಸಾಮಾನ್ಯವಾಗಿ, ಹಿಂದೂ ದೇವತೆಗಳಾದ ಶಿವ ಮತ್ತು ಶಕ್ತಿಯನ್ನು ಪ್ರತ್ಯೇಕ ಮತ್ತು ವಿಶಿಷ್ಟವೆಂದು ಪರಿಗಣಿಸಲಾಗುತ್ತದೆ. ತಂತ್ರದಲ್ಲಿ, ಉಗಮವಾಗುವ ಸಂದರ್ಭದಲ್ಲಿಯೂ. ನಿಜಸ್ಥಿತಿಯು ಶುದ್ಧ ಅರಿವಾಗಿಯೇ, ಶುದ್ಧ ಸ್ಥಿತಿಯಾಗಿಯೇ ಹಾಗೂ ಶುದ್ಧ ಆನಂದವಾಗಿಯೇ ಇರುತ್ತದೆ ಮತ್ತು ತಂತ್ರವು ಈ ಅಂಶಗಳನ್ನು ಅಲ್ಲಗಳೆಯುವುದೂ ಇಲ್ಲ, ಪುಷ್ಟೀಕರಿಸುವುದೂ ಇಲ್ಲ. ವಾಸ್ತವವಾಗಿ, ತಂತ್ರವು ಸ್ವಯಂ ವಿಶ್ವ-ಕ್ರಿಯೆ ಮತ್ತು ಪ್ರತ್ಯೇಕ ಜೀವ ಎರಡೂ ಸತ್ಯವೇ ಎಂದು ದೃಢೀಕರಿಸುತ್ತದೆ. ಈ ವಿಧದಲ್ಲಿ ತಂತ್ರವು ವೇದಾಂತದ ಪ್ರಕಾರಗಳಾದ ಶುದ್ಧ ದ್ವೈತ ಮತ್ತು ಪರಿಪೂರ್ಣ ಅದ್ವೈತ ಎರಡರಿಂದಲೂ ಭಿನ್ನವಾಗಿದೆ.

ಜಾಗೃತಿ ಅಥವಾ "ಹೊರಹೊಮ್ಮುವ ಅಲೆ"ಯು ಮಾಯೆ ಯ ಅರ್ಧ ಚಟುವಟಿಕೆ ಮಾತ್ರವಾಗಿದೆ. ಸುಷುಪ್ತಿ ಅಥವಾ "ಮರಳುವ ಅಲೆ" ಜೀವ ವನ್ನು ಮೂಲದತ್ತ ಕೊಂಡೊಯ್ಯುತ್ತದೆ ಅಥವಾ ಸತ್ಯದ ಬೇರುಗಳತ್ತ ಒಯ್ದು ಅನಂತತೆಯನ್ನು ಬಹಿರಂಗಪಡಿಸುತ್ತದೆ. ತಂತ್ರವು "ಹೊರಹೊಮ್ಮುವ ಅಲೆ"ಯನ್ನು "ಮರಳುವ ಅಲೆ"ಯಾಗಿ ಪರಿವರ್ತಿಸುವ ಕಲೆಯನ್ನು ಬೋಧಿಸುವುದೆಂದು ತಿಳಿಯಲಾಗಿದ್ದು, ಮಾಯೆ ಯ ಬಂಧನದಿಂದ "ಮೋಕ್ಷಕಾರಕ" ಅಥವಾ "ಮುಕ್ತಿದಾಯಕ"ದತ್ತ ಕೊಂಡೊಯ್ಯುತ್ತದೆ ಎಂದು ನಂಬಲಾಗಿದೆ. ಈ ದೃಷ್ಟಿಕೋನವು ಎರಡು ತಂತ್ರದ ಸಿದ್ಧಾಂತಗಳನ್ನು ದೃಢೀಕರಿಸುತ್ತದೆ: "ಯಾವುದರಿಂದ ಒಬ್ಬನು ಬೀಳುತ್ತಾನೋ ಅದರಿಂದಲೇ ಅವನು ಏಳಬೇಕು," ಮತ್ತು "ಕೊಲ್ಲುವ ವಿಷವೇ ಜಾಣನ ಕೈಯಲ್ಲಿ ಅಮೃತವಾಗುವುದು."

ಕ್ರಮ

ತಂತ್ರದ ಗುರಿಯು ವಿಷಯಕ ಸತ್ಯವನ್ನು ಉದಾತ್ತಗೊಳಿಸುವದೇ ವಿನಹ ಅಲ್ಲಗಳೆಯುವುದಲ್ಲ. ಉದಾತ್ತಗೊಳಿಸುವ ಪ್ರಕ್ರಿಯೆಯು ಮೂರು ಘಟ್ಟಗಳನ್ನು ಹೊಂದಿರುತ್ತದೆ: ಶುದ್ಧೀಕರಣ, ಉನ್ನತೀಕರಣ ಮತ್ತು "ಶುದ್ಧ ಜ್ಞಾನದ ವಿಸ್ತಾರದ ಮೇಲೆ ತನ್ನತನವನ್ನು ದೃಢೀಕರಿಸುವುದು." ದಕ್ಷಿಣಾಚಾರ ಇದನ್ನು ಸಮಯಾಚಾರ ಎಂದೂ ಕರೆಯುತ್ತಾರೆ. ಅಂದರೆ ಸಾತ್ವಿಕ ಪೂಜೆ. ಇಲ್ಲಿ ಪ್ರಾಣಿಭಲಿ ಮುಂತಾದ ಕ್ರೂರ ಪದ್ದತಿಗಳಿಲ್ಲ. ದಲ್ಲಿ (ಬಲಗೈ ಪಥ)ಬಳಸುವ ತಂತ್ರಗಳ ಕ್ರಮಗಳ ಆಚರಣವಿಧಿಯು ವಾಮಾಚಾರ ಈ ಪದ್ದತಿಯು ಪ್ರಾಣಿ ಭಲಿ ಮುಂತಾದ ಪದ್ದತಿಯನ್ನು ಹೊಂದಿದ್ದು ಗುಪ್ತ ಸಿದ್ದಿಗಳನ್ನು ಹೊಂದಲು ಪ್ರಯೋಗಿಸಲಾಗುತ್ತದೆ. (ಎಡಗೈ ಪಥ)ದಲ್ಲಿ ಕೈಗೊಳ್ಳುವ ವಿಧಿಗಳಿಗಿಂತಲೂ ಬಹಳ ವಿಭಿನ್ನವಾದುದಾಗಿರುತ್ತವೆ.

ಆಚರಣ ವಿಧಿಗಳು

ಚಿತ್ರ:Kali Dakshineswar.jpg
ತಂತ್ರದ ದೇವಿಯಾದ ಭಾರತದ ಪಶ್ಚಿಮ ಬಂಗಾಳದಲ್ಲಿರುವ ದಕ್ಷಿಣೇಶ್ವರದ ಕಾಳಿಯ ಪ್ರತಿಮೆ; ದೇವಿಯ ಯಂತ್ರದ ಸಹಿತ.

ತಂತ್ರ ಎಂಬ ಪದಕ್ಕೆ ವಿಸ್ತೃತವಾದ ಪಂಗಡಗಳು ಸೇರುವುದರಿಂದ ತಾಂತ್ರಿಕ ಆಚರಣೆಗಳನ್ನು ಇದಮಿತ್ಥಂ ಎಂದು ಹೇಳುವುದು ಕ್ಲಿಷ್ಟವೂ ಸಮಸ್ಯಾಭರಿತವೂ ಆಗಿದೆ. ಆವಲಾನ್ (1918)"ಮಾಮೂಲಿ ಆಚರಣೆ" ಮತ್ತು "ಗುಪ್ತ ಆಚರಣೆ" ಎಂಬ ಎರಡು ಉಪಯುಕ್ತ ಟಿಸಿಲುಗಳನ್ನಂತೂ ಇತ್ತಿದ್ದಾರೆ.

ಮಾಮೂಲು ಆಚಾರ

ಮಾಮೂಲು ಆಚಾರ ಅಥವಾ ಪೂಜೆ ಯು ಈ ಕೆಳಕಂಡ ಯಾವುದೇ ಅಂಶಗಳನ್ನು ಒಳಗೊಂಡಿರಬಹುದು;

ಮಂತ್ರ ಮತ್ತು ಯಂತ್ರ

ಇತರ ಹಿಂದೂ ಮತ್ತು ಬೌದ್ಧ ಯೋಗ ಆಚರಣೆಗಳಲ್ಲಿರುವಂತೆಯೇ ಮಂತ್ರ ಮತ್ತು ಯಂತ್ರ ಗಳು ತಂತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಂತ್ರ ಮತ್ತು ಯಂತ್ರ ಗಳು ಹಿಂದೂ ದೇವತೆಗಳಲ್ಲಿ ನಿರ್ದಿಷ್ಟವಾದ ದೇವರನ್ನು - ಶಿವ, ಶಕ್ತಿ ಅಥವಾ ಕಾಳಿಯನ್ನು - ಆವಾಹಿಸಲು ಅವಶ್ಯವಾದ ಸಾಧನಗಳು. ಅಂತೆಯೇ ಪೂಜೆಯು ಒಂದು ದೇವತೆಗೆ ಸಂಬಂಧಿಸಿದ ಯಂತ್ರ ಅಥವಾ ಮಂಡಲ ದ ಕುರಿತಂತೆಯೇ ಮಾಡುವ ಪೂಜೆ ಯಾಗಬಹುದು.

ದೇವತೆಗಳೊಂದಿಗೆ ಗುರುತಿಸಿಕೊಳ್ಳುವಿಕೆ

ಮೊದಮೊದಲ ಹಿಂದೂ-ವೈದಿಕ ಆಲೋಚನೆಗಳ ವೃದ್ಧಿಯಿಂದ ಹೊಮ್ಮಿದ ತಂತ್ರವು ಹಿಂದೂ ದೇವ, ದೇವತೆಗಳನ್ನು ಒಳಗೊಂಡಿತ್ತು, ವಿಶೇಷವಾಗಿ ಶಿವ ಮತ್ತು ಶಕ್ತಿಯನ್ನು, ಮತ್ತು ಅದರೊಡನೆ ಅದ್ವೈತ ತತ್ತ್ವವನ್ನು ಒಳಗೊಂಡಿದ್ದು ಆ ತತ್ತ್ವವು ಪ್ರತಿಯೊಬ್ಬನೂ ಅದ್ವಿತೀಯವಾದ ಪರಶಿವ ಅಥವಾ ಬ್ರಹ್ಮನ ಸ್ವರೂಪ ವನ್ನು ಪ್ರತಿನಿಧಿಸುವನೆನ್ನುತ್ತದೆ. ಈ ದೇವತೆಗಳನ್ನು ಹೂಗಳು, ಗಂಧದ ಕಡ್ಡಿ ಮತ್ತು ಇತರ ನೈವೇದ್ಯಗಳನ್ನು ನೀಡುವುದರ ಮೂಲಕ ಹಾಗೂ ಹಾಡು ಮತ್ತು ನೃತ್ಯಗಳ ಮೂಲಕ ಬಾಹ್ಯರೂಪದಲ್ಲಿ ಪೂಜಿಸಬಹುದು. ಆದರೆ, ಪ್ರಮುಖವಾಗಿ, ಈ ದೇವತೆಗಳನ್ನು ಇಷ್ಟದೇವತೆ ಯ ಧ್ಯಾನಗಳ ಗುಣಧರ್ಮಗಳ ಸ್ವರೂಪವಾಗಿ ತೊಡಗಿಸಿಕೊಳ್ಳಲಾಗುವುದು; ಆಚರಣಕಾರರು ತಮ್ಮನ್ನೇ ಈ ದೇವತೆಗಳ ಹಾಗೆ ಕಲ್ಪಿಸಿಕೊಳ್ಳುವರು ಅಥವಾ ದೇವತೆಯ ದರ್ಶನ (ಕಾಣ್ಕೆ)ಯ ಅನುಭವವನ್ನು ಹೊಂದುವರು. ಈ ತಾಂತ್ರಿಕ ಆಚರಣೆಗಳು ದೇವದಾಸಿಯರು' ದೇಗುಲಗಳಲ್ಲಿ ಮಾಡುವ ನರ್ತನದ ಆಚರಣೆಗೆ ಬುನಾದಿಯಾದವು ಮತ್ತು ಈ ಆಚರಣೆಗಳನ್ನು ಮೇಲತ್ತೂರ್ ಶೈಲಿಯ ಭರತನಾಟ್ಯ ದಲ್ಲಿ ಗುರು ಮಾಂಗುಡಿ ದೊರೈರಾಜ ಐಯರ್ ಅವರು ಚಿರಸ್ಥಾಯಿಯಾಗಿಸಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]

ಗುಪ್ತ ಆಚರಣೆ

ಗುಪ್ತ ಆಚರಣೆಗಳು ಮಾಮೂಲಾದ ಕೆಲವು ಅಥವಾ ಎಲ್ಲಾ ಆಚರಣೆಗಳ ವಸ್ತು, ಕ್ರಮಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಹೊಂದಿರಬಹುದಾಗಿದ್ದು, ಅದರೊಡನೆ ಇತರ ಸಂವೇದನಾರ್ಹ ಆಚರಣೆಗಳು ಮತ್ತು ಸಿದ್ಧಾಂತಗಳಾದ ಹಬ್ಬದೂಟ(ಆಹಾರ ಅಥವಾ ಸಂರಕ್ಷಣೆಯ ಪ್ರತೀಕ), ಸಂಭೋಗ(ಲೈಂಗಿಕತೆ ಮತ್ತು ಸಂತಾನೋತ್ಪತ್ತಿಯ ಪ್ರತೀಕ), ಸ್ಮಶಾನ(ಸಾವು ಮತ್ತು ಬದಲಾವಣೆಯ ಪ್ರತೀಕ)ಮತ್ತು ಮಲವಿಸರ್ಜನೆ, ಮೂತ್ರ ವಿಸರ್ಜನೆ ಹಾಗೂ ವಮನ(ತ್ಯಾಜ್ಯ, ಮರುಸೃಷ್ಟಿ ಮತ್ತು ಕೊಳಕುಗಳ ಪ್ರತೀಕ)ಗಳು ಸೇರುತ್ತವೆ.[ಸೂಕ್ತ ಉಲ್ಲೇಖನ ಬೇಕು] ಈ ಸಂವೇದನಾರ್ಹ ಜೋಡಣೆಯು ಝಿಮ್ಮರ್ ತಂತ್ರದ ಪ್ರಪಂಚದ ದೃಢೀಕರಣ ರೀತಿಯನ್ನು ಪ್ರಶಂಸಿಸುವಂತೆ ಮಾಡಿತು:

ತಂತ್ರದಲ್ಲಿ ಗಮಿಸುವ ಪದ್ಧತಿಯು ಅಲ್ಲ ಅಲ್ಲ, ಹೌದು ಎಂಬುದು. . . ಪ್ರಪಂಚದ ರೀತಿಯು ಸಕಾರಾತ್ಮಕ . . . ಮಾನವನು ಪ್ರಕೃತಿಯ ಹಾದಿಯಲ್ಲಿ ಮತ್ತು ಪ್ರಕೃತಿಯ ಮೂಲಕ ಗಮಿಸಬೇಕು, ಪ್ರಕೃತಿಯನ್ನು ಅಲ್ಲಗಳೆದಲ್ಲ.

ಆವಲಾನ್ ರ ಅಧ್ಯಾಯ 27ರಲ್ಲಿ: (ಗುಪ್ತ ಆಚರಣೆಯು) ಶಕ್ತಿ ಮತ್ತು ಶಕ್ತ (1918)ರ ಪಂಚತ್ವವು , ಅವರು ಹೇಳುವುದೇನೆಂದರೆ ಈ ಗುಪ್ತ ಆಚರಣೆಯು(ಅವರು ಅದನ್ನು ಪಂಚತ್ವ , ಚಕ್ರಪೂಜೆ ಮತ್ತು ಪಂಚಮಕರ ಎಂದು ಕರೆಯುತ್ತಾರೆ)ಈ ಕೆಳಕಂಡವನ್ನು ಒಳಗೊಂಡಿದೆ:

ಪಂಚತ್ವದ ಪೂಜೆಯು ಸಾಮಾನ್ಯವಾಗಿ ಪುರುಷ ಮತ್ತು ಸ್ತ್ರೀಯರಿಂದೊಡಗೂಡಿದ ಒಂದು ಚಕ್ರ ಅಥವಾ ವೃತ್ತದಲ್ಲಿ ನಡೆಯುತ್ತದೆ...ಒಂದು ವೃತ್ತದಲ್ಲಿ ಕುಳಿತು ಶಕ್ತಿ(ಅಥವಾ ಮಹಿಳಾ ಆಚರಣಕಾರ್ತಿ)ಯು ಸಾಧಕ(ಪುರುಷ ಆಚರಣಕಾರ)ನ ಎಡಭಾಗದಲ್ಲಿ ಕುಳಿತಿರುತ್ತಾಳೆ. ಆದ್ದರಿಂದ ಇದನ್ನು ಚಕ್ರಪೂಜೆ ಎಂದು ಕರೆಯುತ್ತಾರೆ...ಚಕ್ರಗಳಲ್ಲಿ ಹಲವಾರು ವಿಧಗಳಿವೆ - ಅದರಲ್ಲಿ ಭಾಗವಹಿಸುವವನಿಗೆ ವಿವಿಧ ಫಲಗಳನ್ನು ಉತ್ಪತ್ತಿ ಮಾಡಿಕೊಡುವುದೆಂದು ಹೇಳಲಾಗಿದೆ.

ಆವಲಾನ್ "ವಸ್ತುಗಳು" ಅಥವಾ ತತ್ವ ಗಳು ತಂತ್ರಗಳಲ್ಲಿ ಸಂಕೇತಗೊಳಿಸಲ್ಪಟ್ಟಿರುವುದು ಮತ್ತು ಇತರ ತಾಂತ್ರಿಕ ಸಂಪ್ರದಾಯಗಳ ಪಂಚತ್ವ ದ(ಪಂಚಮಕರ ದ) ಹಲವಾರು ವೈವಿಧ್ಯಗಳು ಮತ್ತು ಬದಲಿ ವ್ಯವಸ್ಥೆಗಳ ಸರಮಾಲೆಯನ್ನೇ ನೀಡುತ್ತಾರೆ ಹಾಗೂ ಮಹಾಭೂತ ಕ್ಕೂ ತಂತ್ರದಲ್ಲಿನ ಐದು ಅಮೃತಗಳಿಗೂ ನೇರವಾದ ಸಂಬಂಧವಿದೆಯೆಂದು ಅವರು ದೃಢಪಡಿಸುತ್ತಾರೆ.

ಲೈಂಗಿಕ ಆಚರಣೆಗಳು

ವಾಮಾಚಾರದಲ್ಲಿನ ಲೈಂಗಿಕ ಆಚರಣೆಗಳು ಪ್ರಾಯಶಃ ಮೊದಮೊದಲ ಹಿಂದೂ ತಂತ್ರಗಳಿಂದ ಜೈವಿಕ ರಾಸಾಯನಿಕಗಳನ್ನು ದೇಹದಲ್ಲಿ ಪರಿವರ್ತಿಸುವುದರ ಮೂಲಕ ಅರಿವಿನ ಪರಾಕಾಷ್ಠೆಯನ್ನು ತಲುಪುವ ಸಲುವಾಗಿ ನಿದರ್ದೇಶಿತ ಕಾರ್ಯಗಳಾಗಿ ಆರಂಭವಾಗಿದ್ದಿರಬಹುದು. ಈ ಆಚರಣೆಗಳಲ್ಲಿ ತಾಂತ್ರಿಕ ದೇವತೆಗಳಿಗೆ ಶ್ರೇಷ್ಠವಾದ ನ್ಯೆವೇದ್ಯಗಳನ್ನು ಅರ್ಪಿಸುವುದೂ ಸೇರಿದೆ. ಲೈಂಗಿಕ ಆಚರಣೆಗಳು ಪಂಗಡಕ್ಕೆ ಸೇರಿಸಿಕೊಳ್ಳುವ ವಿಧಿಯಿಂದಲೂ ಉಗಮವಾಗಿರಬಹುದಾಗಿದ್ದು ಇದರಲ್ಲಿ ಲೈಂಗಿಕ ದ್ರವಗಳ ವಿನಿಮಯವೂ ಸೇರಿದುದಾಗಿತ್ತು. ಇಲ್ಲಿ ಪುರುಷ ಆಗಮಿಕನಿಗೆ ಸ್ತ್ರೀಯ ಯೋನಿಯಿಂದ ಬಂದ ದ್ರವವು ವೀರ್ಯದೊಂದಿಗೆ ಸೇರಿಸಲ್ಪಡುವುದಾಗಿದ್ದು, ಕೆಲವೊಮ್ಮೆ ಗುರುವಿನ ವೀರ್ಯವೂ ಅವುಗಳೊಡನೆ ಸೇರಿಸಲ್ಪಡುತ್ತದೆ. ತನ್ನ ಸಹಗಾಮಿನಿಯ ವತಿಯಿಂದ ಈ ಪರಿಯಲ್ಲಿ ತಾಂತ್ರಿಕ ನು ಕುಲದ ಮಗ ಅಥವಾ ಕುಲಪುತ್ರ ನಾಗಿ ಪರಿವರ್ತಿತನಾಗುತ್ತಾನೆ. ಆ ಪಂಗಡದ ದ್ರವವಾದ ಕುಲದ್ರವ್ಯ ಅಥವಾ ಪಂಗಡದ ಅಮೃತವಾದ ಕುಲಾಮೃತ ವು ಅವಳ ಗರ್ಭದಿಂದ ನೈಸರ್ಗಿಕವಾಗಿ ಹರಿಯುವ ದ್ರವವೆಂದು ತಿಳಿಯಲಾಗುತ್ತದೆ. ಮುಂದಿನ ದಿನಗಳಲ್ಲಿ, ಈ ಆಚರಣೆಯು ಮೊದಲ ದಿನಗಳಲ್ಲಿ ದೈಹಿಕ ಗೂಡಾರ್ಥಗಳಿಗೆ ಒತ್ತು ಕೊಡುತ್ತಿದ್ದುದನ್ನು ಹೊರತಾಗಿಸಿ, ಆನಂದದ ಸ್ಥಿತಿಯನ್ನು ತಲುಪುವುದು ಮತ್ತು ದೈವಿಕ ಸಂಯೋಗದ ಬಗ್ಗೆ ಹೆಚ್ಚು ಪ್ರಾಶಸ್ತ್ಯ ನೀಡುವುದಕ್ಕೆ ಸೀಮಿತವಾಯಿತು. ಪಶ್ಚಿಮದೇಶಗಳಲ್ಲಿ ನಡೆಯುವ ತಂತ್ರವಿಧಿಗಳಿಗೆ ಇದನ್ನು ಸಾಮಾನ್ಯವಾಗಿ ಹೋಲಿಸುವುದು ದಿಟವಾದರೂ, ಈ ಬಗೆಯ ಲೈಂಗಿಕ ಆಚರಣೆಗಳನ್ನು ಕೆಲವು ಸಣ್ಣ ಪುಟ್ಟ ಪಂಗಡಗಳು ಅನುಷ್ಠಾನದಲ್ಲಿರಿಸಿಕೊಂಡಿದ್ದುದು ಇತಿಹಾಸದ ಪುಟಗಳಲ್ಲಿ ಉಲ್ಲೇಖವಾಗಿದೆ. ಹಲವಾರು ಆಚರಣಬದ್ಧ ಪೀಳಿಗೆಗಳಿಗೆ ಈ ಮೈಥುನ ಕ್ರಿಯೆಗಳು ಮಾನಸಿಕ ಲಾಂಛನಗಳಾಗಿ ಸ್ಥಾಪಿತವಾದವು.

ತಂತ್ರಗಳಲ್ಲಿ ಹೇಳಿದ ರೀತಿಯಲ್ಲಿ ಈ ಆಚರಣೆಯನ್ನು ಕೈಗೊಂಡರೆ, ಈ ಆಚರಣೆಯು ಅಪರಿಮಿತವಾದ ಅರಿವಿನ ಒಂದು ಅಲೌಕಿಕ ಅನುಭವವನ್ನು ಪಾಲ್ಗೊಂಡ ಇಬ್ಬರಲ್ಲೂ ಉಂಟುಮಾಡುತ್ತದೆ. ತಾಂತ್ರಿಕ ಗ್ರಂಥಗಳು ಲೈಂಗಿಕ ಕ್ರಿಯೆಗೆ ಮೂರು ವಿಶೇಷ ಹಾಗೂ ಪ್ರತ್ಯೇಕ ಉದ್ದೇಶಗಳಿವೆ ಎಂದು ಸಾರುತ್ತವೆ - ಸಂತಾನೋತ್ಪತ್ತಿ, ಆನಂದ ಮತ್ತು ಮುಕ್ತಿ. ಮುಕ್ತಿಯನ್ನು ಹೊಂದಲು ಬಯಸುವವರು ತಿಕ್ಕಾಟದಿಂದ ಉಂಟಾಗುವ ಲೈಂಗಿಕ ಪರಾಕಾಷ್ಠೆಯನ್ನು ಬದಿಗೊತ್ತಿ ಅದಕ್ಕಿಂತಲೂ ಉನ್ನತವಾದ ಹರ್ಷೋನ್ಮಾದವನ್ನು ಹೊಂದಲು ಬಯಸುತ್ತಾರೆ; ಈ ಆಚರಣೆಯಲ್ಲಿ ತೊಡಗುವ ಸ್ತ್ರೀ-ಪುರುಷರು ಒಂದು ಸ್ಥಾಯಿ ಸ್ಥಿತಿಯ ಆಲಿಂಗನದಲ್ಲಿ ಬಂಧಿತರಾಗಿರುತ್ತಾರೆ. ಹಲವಾರು ಲೈಂಗಿಕ ಆಚರಣೆಗಳನ್ನು ಸೂಚಿಸಲಾಗುತ್ತದೆ ಮತ್ತು ಅನುಷ್ಠಾನಗೊಳಿಸಲಾಗುತ್ತದೆ. ಇವುಗಳು ವಿಸ್ತೃತವಾದ ಹಾಗೂ ಕರಾರುವಾಕ್ಕಾದ ತಯಾರಾಗುವಿಕೆ ಮತ್ತು ಶುದ್ಧೀಕರಣದ ಆಚರಣೆಗಳನ್ನೂ ಒಳಗೊಂಡಿರುತ್ತವೆ. ಲೈಂಗಿಕ ಕ್ರಿಯೆಯೇ ಭಾಗವಹಿಸುವ ಇಬ್ಬರ ಸೂಕ್ಷ್ಮದೇಹಗಳಲ್ಲಿನ ಪ್ರಾಣಿಕ್ , ಇಡಾ' ಮತ್ತು ಪಿಂಗಳ ನಾಡಿಗಳಲ್ಲಿ ಹರಿಯುತ್ತಿರುವ ಶಕ್ತಿಯನ್ನು ಸಮತೋಲಿತವಾಗಿಸುತ್ತದೆ. ಸುಷುಮ್ನ ನಾಡಿ ಯು ಜಾಗೃತಗೊಳ್ಳುತ್ತದೆ ಮತ್ತು ಅದರೊಂದಿಗೆ ಕುಂಡಲಿನಿ ಯು ಮೇಲಕ್ಕೇರುತ್ತದೆ. ಇದು ಕಡೆಗೆ ಸಮಾಧಿ ಸ್ಥಿತಿಯನ್ನು ತಲುಪುತ್ತದೆ ಹಾಗೂ ಈ ಸ್ಥಿತಿಯಲ್ಲಿ ಎರಡೂ ಭಾಗವಹಿಸುವ ವ್ಯಕ್ತಿಗಳ ಲಕ್ಷಣಗಳು ಮತ್ತು ವ್ಯಕ್ತಿತ್ವವು ವಿಶ್ವಜ್ಞಾನದ ಸಂಯುಕ್ತತೆಯಲ್ಲಿ ಲೀನವಾಗುತ್ತದೆ. ತಾಂತ್ರಿಕರು ಈ ಕ್ರಿಯೆಗಳನ್ನು ವಿವಿಧ ಸ್ತರಗಳಲ್ಲಿ ಅರ್ಥೈಸಿಕೊಳ್ಳುತ್ತಾರೆ. ಭಾಗವಹಿಸುವ ಪುರುಷ ಮತ್ತು ಸ್ತ್ರೀ ದೈಹಿಕವಾಗಿ ಒಂದಾಗುತ್ತಾರೆ ಮತ್ತು ಆ ಸ್ಥಿತಿಯಲ್ಲಿ ಪುರುಷ ಮತ್ತು ಸ್ತ್ರೀಯ ಮೂಲಗಳಾದ ಶಿವ ಮತ್ತು ಶಕ್ತಿ ಯನ್ನು ಪ್ರತಿನಿಧಿಸುತ್ತಾರೆ. ದೈಹಿಕ ಬೆಸುಗೆಯಾಚೆ, ಒಂದು ಸೂಕ್ಷ್ಮವಾದ ಶಿವ ಮತ್ತು ಶಕ್ತಿ ಯ ಚೈತನ್ಯಗಳ ಸಮಾಗಮವು ಜರುಗುತ್ತದೆ ಮತ್ತು ಒಂದು ಸಂಯುಕ್ತ ಚೈತನ್ಯದ ಕ್ಷೇತ್ರವು ಉಂಟಾಗುತ್ತದೆ. ವೈಯಕ್ತಿಕ ಮಟ್ಟದಲ್ಲಿ, ಭಾಗವಹಿಸಿದ ಇಬ್ಬರೂ ತಮ್ಮತಮ್ಮಲ್ಲಿ ಅಡಕವಾಗಿರುವ ಶಿವ ಮತ್ತು ಶಕ್ತಿ ಯ ಚೈತನ್ಯಗಳ ಬೆಸುಗೆಯಿಂದ ದೊರೆಯುವ ಅನುಭವವನ್ನು ಹೊಂದುತ್ತಾರೆ.

ಪಾಶ್ಚಿಮಾತ್ಯರ ಅಭಿಪ್ರಾಯಗಳು

ತಂತ್ರ 
ಶ್ರೀಯಂತ್ರ (ಇಲ್ಲಿ ಮೂರು ಆಯಾಮಗಳಾದ ಶ್ರೀ ಮೇರು ಅಥವಾ ಮಹಾಮೇರುವಿನ ವಿಸ್ತಾರದಲ್ಲಿ ತೋರಿಸಲ್ಪಟ್ಟಿದ್ದು ಇದು ಸಾಮಾನ್ಯವಾಗಿ ಪ್ರಮುಖ ಶ್ರೀವಿದ್ಯಾ ಶಕ್ತ ಪಂಗಡಗಳಲ್ಲಿ ಬಳಸಲಾಗುತ್ತದೆ)ವು ಶಕ್ತಿಸಂನ ಬಹುತೇಕ ತಾಂತ್ರಿಕ ಸ್ವರೂಪಗಳಿಗೆ ಕೇಂದ್ರಸ್ವರೂಪವಾಗಿದೆ.

ಸರ್ ಜಾನ್ ವುಡ್ರೋಫ್

ತಂತ್ರವನ್ನು ಗಂಭೀರವಾಗಿ ಪರಿಗಣಿಸಿ ಅದರ ಬಗ್ಗೆ ಆರ್ಥರ್ ಆವಲಾನ್ ಎಂಬ ಅಂಕಿತ ದಲ್ಲಿ ಬರೆದಂತಹ ಮೊಟ್ಟಮೊದಲ ಪಾಶ್ಚಾತ್ಯ ಪಂಡಿತರೆಂದರೆ ಸರ್ ಜಾನ್ ವುಡ್ರೋಫ್(1865–1936). ಅವರನ್ನು ಸಾಮಾನ್ಯವಾಗಿ "ತಾಂತ್ರಿಕ ಅಧ್ಯಯನದ ಸ್ಥಾಪಕ ಜನಕ"ನೆಂದು ಪರಿಗಣಿಸಲಾಗುತ್ತದೆ. ಹಿಂದಿನ ಪಾಶ್ಚಿಮಾತ್ಯ ಪಂಡಿತರಂತಲ್ಲದೆ ವುಡ್ರೋಫ್ ತಂತ್ರದ ಪರವಾಗಿ ಬಹಳವೇ ವಾದಿಸುವವರಾಗಿದ್ದರು ಮತ್ತು ತಂತ್ರವನ್ನು ಅದರ ವಿರೋಧಿಗಳೊಡನೆ ಚರ್ಚಿಸಿ ಸಮರ್ಥಿಸಿಕೊಳ್ಳುತ್ತಿದ್ದರು ಮತ್ತು ತಂತ್ರವನ್ನು ನೈತಿಕ ತಾತ್ವಿಕ ವ್ಯವಸ್ಥೆಯೆಂದೂ, ವೇದಗಳು ಮತ್ತು, ವೇದಾಂತಗಳಿಗೆ ಸಮವೆಂದೂ ಸಾರುತ್ತಿದ್ದರು. ವುಡ್ರೋಫ್ ಸ್ವತಃ ತಂತ್ರವನ್ನು ತಾವು ಕಂಡ ಹಾಗೂ ಅರಿತ ರೀತಿಯಲ್ಲಿ ಅಭ್ಯಸಿಸುತ್ತಿದ್ದರು ಮತ್ತು ತಮ್ಮ ಪಾಂಡಿತ್ಯದ ಗುರಿಯನ್ನು ಗಮನದಲ್ಲಿರಿಸಿಕೊಂಡಿದ್ದೂ, ಹಿಂದೂ ತಂತ್ರದ (ವಿಶೇಷವಾಗಿ ಶಿವ-ಶಕ್ತಿ ಯ)ಸಂಪ್ರದಾಯದ ಶಿಷ್ಯರಾಗಿ ಪರಿಗಣಿಸಲ್ಪಟ್ಟಿದ್ದರು.

ಮುಂದುವರಿದ ಬೆಳವಣಿಗೆಗಳು

ಸರ್ ಜಾನ್ ವುಡ್ರೋಫ್ ರ ಪಥದಲ್ಲಿಯೇ ಹಲವಾರು ಪಂಡಿತರು ತಾಂತ್ರಿಕ ಬೋಧನೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸಿ, ಸಂಶೋಧನಕ್ರಿಯೆಯಲ್ಲಿ ತೊಡಗಿದರು. ಇವರ ಪೈಕಿ ಹಲವಾರು ಸಾದೃಶ ಧರ್ಮ ಮತ್ತು ಇಂಡಾಲಜಿಯ ಪಂಡಿತರಿದ್ದು, ಅವರಲ್ಲಿ ಪ್ರಮುಖರಾದವರೆಂದರೆ: ಅಗೆಹಾನಂದ ಭಾರತಿ, ಮಿರ್ಸಿಯಾ ಎಲಿಯೇಡ್, ಜೂಲಿಯಸ್ ಎವೋಲಾ, ಕಾರ್ಲ್ ಜಂಗ್, ಗಿಯುಸೆಪ್ಪೆ ಟಕ್ಸಿ ಮತ್ತು ಹೀನ್ರಿಕ್ ಝಿಮ್ಮರ್.

ಹಗ್ ಅರ್ಬನ್ ರ ಪ್ರಕಾರ, ಝಿಮ್ಮರ್ ಮತ್ತು ಎಲಿಯೇಡ್ ತಂತ್ರವನ್ನು "ಭಾರತದ ಸಕಲ ಚಿಂತನೆಗಳ ಮೊತ್ತ: ಆಧ್ಯಾತ್ಮದ ಅತ್ಯಂತ ಮೂಲ ಸ್ವರೂಪ ಮತ್ತು ಭಾರತದ ಮೂಲನಿವಾಸಿಗಳ ಆರ್ಷೇಯ ಹೃದಯ"ವೆಂದು ಪರಗಣಿಸಿರುವರು ಮತ್ತು ಆಧುನಿಕ ಯುಗಕ್ಕೆ ಬಲು ಸೂಕ್ತವಾದ ಧರ್ಮಪ್ರಕಾರವೆಂದು ಅಭಿಪ್ರಾಯಪಟ್ಟರು. ಮೂರೂ ಜನರು ತಂತ್ರವು "ಅತ್ಯಂತ ಅತಿಕ್ರಮಣದ ಮತ್ತು ಉಗ್ರವಾದ ಪಥದಲ್ಲಿ ಪರಿಶುದ್ಧತೆಯನ್ನು ಪಡೆಯುವ ಮಾರ್ಗ"ವೆಂಬ ದೃಷ್ಟಿಕೋನದವರಾಗಿದ್ದರು.

ಆಧುನಿಕ ಜಗತ್ತಿನಲ್ಲಿ

ತಂತ್ರದ ಈ ಮೊದಲ ಪ್ರಸ್ತುತಿಗಳ ನಂತರ, ಇತರ ಹೆಚ್ಚು ಜನಪ್ರಿಯ ಲೇಖಕರಾದ ಜೋಸೆಫ್ ಕ್ಯಾಂಪ್ ಬೆಲ್ ನಂತಹವರು ತಂತ್ರವನ್ನು ಪಾಶ್ಚಿಮಾತ್ಯರ ಕಲ್ಪನೆಗಳಿಗೆ ತಲುಪುವಲ್ಲಿ ಸಹಾಯಕರಾದರು. ಕೆಲವರು ತಂತ್ರವನ್ನು "ಹರ್ಷೋನ್ಮಾದದ ಉಪಾಸನೆ" ಎಂದರು, ಪಾಶ್ಚಿಮಾತ್ಯರ ಲೈಂಗಿಕತೆಯ ಬಗ್ಗೆ ಇರುವ ಹತ್ತಿಕ್ಕುವ ಮನೋಭಾವವನ್ನು ಸರಿಯಾದ ಮಾರ್ಗಕ್ಕೆ ತರಲು ಲೈಂಗಿಕತೆ ಮತ್ತು ಆಧ್ಯಾತ್ಮದ ಸಮ್ಮಿಲನವಾದ ತಂತ್ರವು ಬಹಳ ಸಹಕಾರಿಯಾಯಿತು.

ತಂತ್ರವು ಪಶ್ಚಿಮದೇಶಗಳಲ್ಲಿ ಹೆಚ್ಚು ಜನಪ್ರಿಯವಾದಂತೆ ಅದು ಪ್ರಮುಖವಾದ ಬದಲಾವಣೆಗಳನ್ನು ಹೊಂದಿತು. ಹಲವಾರು ಆಧುನಿಕ ಓದುಗರಿಗೆ "ತಂತ್ರ" "ಆಧ್ಯಾತ್ಮಿಕ ಸಂಭೋಗ" ಅಥವಾ "ಪೂಜ್ಯವಾದ ಲೈಂಗಿಕತೆ"ಯ ಪರ್ಯಾಯಪದವಾಗಿದೆ. ಲೈಂಗಿಕಕ್ರಿಯೆಯನ್ನೇ ಒಂದು ಪೂಜ್ಯವಾದ ಕ್ರಿಯೆಯನ್ನಾಗಿ ಕಾಣಬೇಕೆಂಬ ಅಭಿಪ್ರಾಯ ಮೂಡಿದ್ದು ಅಂತಹ ಕ್ರಿಯೆಯು ಅದರಲ್ಲಿ ಭಾಗವಹಿಸುವವರನ್ನು ಇನ್ನೂ ಸೂಕ್ಷ್ಮತರವಾದ ಆಧ್ಯಾತ್ಮಿಕ ನೆಲೆಗೆ ಏರಿಸುತ್ತದೆಯೆಂದು ನಂಬಲಾಗಿದೆ. ಪಾಪ್-ತಂತ್ರವು ಭಾರತದ ತಂತ್ರದ ಹಲವಾರು ನುಡಿಗಟ್ಟುಗಳನ್ನು ಮತ್ತು ಚಿಂತನೆಗಳನ್ನು ಒಳಗೊಂಡಿದ್ದರೂ, ಅದು ಸಾಮಾನ್ಯವಾಗಿ ಈ ಕೆಳಕಂಡ ಅಂಶಗಳಲ್ಲಿ ಒಂದು ಅಥವಾ ಹೆಚ್ಚು ಅಂಶಗಳನ್ನು ಕೈಬಿಡುತ್ತದೆ: ಗುರುಪರಂಪರೆ (ಗುರುವಿನ ಮಾರ್ಗದರ್ಶನ)ಯ ಮೇಲಿನ ಅವಲಂಬನ, ಹೆಚ್ಚುವರಿ ಧ್ಯಾನಾಭ್ಯಾಸ ಮತ್ತು ಸಾಂಪ್ರದಾಯಿಕ ಆಚರಣಾ ವಿಧಿಗಳು - ನೈತಿಕ ಮತ್ತು ಆಚರಣಾತ್ಮಕ.

ಧರ್ಮ ಮತ್ತು ರಾಜಕಾರಣದ ಒಬ್ಬ ಲೇಖಕ ಮತ್ತು ವಿಮರ್ಶಕರಾದ ಹಗ್ ಅರ್ಬನ್ ಪ್ರಕಾರ:

ಕಡಿಮೆಯೆಂದರೆ ಅಗೆಹಾನಂದ ಭಾರತಿಯವರ ಕಾಲದಿಂದಲೂ ಬಹುತೇಕ ಪಾಶ್ಚಿಮಾತ್ಯ ಪಂಡಿತರು ಆಧುನಿಕ ಹಾಗೂ ನವೀನ ಪಾಪ್ ತಂತ್ರದ ಬಗ್ಗೆ ಬಹಳ ಉಗ್ರವಾಗಿ ಟೀಕಿಸಿಕೊಂದು ಬಂದಿದ್ದಾರೆ. ಈ "ಕ್ಯಾಲಿಫೋರ್ನಿಯಾ ತಂತ್ರ", ಜಾರ್ಜ್ ಫ್ಯೂಯೆರ್ಸ್ಟೀನ್ ಕೂಗುವಂತೆ, "ತಾಂತ್ರಿಕ ಪಥದ ಮಹಾನ್ ತಪ್ಪು ತಿಳುವಳಿಕೆಯ ಮೇಲೆ ಆಧಾರವಾಗಿದೆ. ಅವರ ಮುಖ್ಯ ತಪ್ಪೆಂದರೆ ತಾಂತ್ರಿಕ ಆನಂದದ ಬಗ್ಗೆ ಗಲಿಬಿಲಿ ಹೊಂದಿರುವುದು... ಅದನ್ನು ಮಾಮೂಲು ಉನ್ನತ್ತತೆಯ ಸಂತೋಷಕ್ಕೆ ಹೋಲಿಸಿರುವುದು"ಎನ್ನುವರವರು.

ಅರ್ಬನ್ ಮುಂದುವರಿಯುತ್ತಾ ಅವರು ಆ ವಿಧವನ್ನು "ತಪ್ಪು" ಅಧವಾ "ಸುಳ್ಳು" ಎಂದು ಹೇಳಲಾರರು, ಆದರೆ "ಸರಳವಾಗಿ ವಿಭಿನ್ನವಾಗಿ ಅರ್ಥೈಸಿಕೊಳ್ಳುವಿಕೆ, ವಿಭಿನ್ನ ಐತಿಹಾಸಿಕ ಪರಿಸ್ಥಿತಿಗಳಲ್ಲಿ" ಎನ್ನುತ್ತಾರೆ.

ಹಿಂದೂ ತಾಂತ್ರಿಕ ಆಚರಣಕಾರರು

  • ರಾಮಕೃಷ್ಣ
  • ಸ್ವಾಮಿ ಸತ್ಯಾನಂದ ಸರಸ್ವತಿ
  • ಶ್ರೀ ಗುರುದೇವ್ ಮಹೇಂದ್ರನಾಥ್[ಸೂಕ್ತ ಉಲ್ಲೇಖನ ಬೇಕು]
  • ಸ್ವಾಮಿ ರಾಮ
  • ಶ್ರೀ ಅಕ್ಷುಣ್ಣನಾಥ್ ಮಹಾಪ್ರಭು (ಲಾರ್ಡ್(ದೇವ) ಶ್ರೀ ಅಕ್ಷುಣ್ಣ)
  • ಬ್ರಹ್ಮಶ್ರೀ ಮೇಲನಾತೂರು ವೆಂಕಟ ಸುಬ್ರಮಣ್ಯಮ್ (ಚಂಡಿ ಮತ್ತು ಶ್ರೀಚಕ್ರ ಉಪಾಸನೆ)

ಇವನ್ನೂ ಗಮನಿಸಿ

    ಹಿಂದೂ ತಂತ್ರ
  • ದಕ್ಷಿಣಾಚಾರ
  • ಕಾಶ್ಮೀರದ ಶೈವತಂತ್ರ
  • ಪಂಚಮಕರ
  • ಶಕ್ತಿ
  • ಶ್ರೀಚಕ್ರ
  • ವಾಮಾಚಾರ
  • ವಸುಗುಪ್ತ
    ಬೌದ್ಧ ತಂತ್ರ
  • ಅನುತ್ತರಯೋಗ ತಂತ್ರ
  • ಡಾಕಿನಿ
  • ಗುಹ್ಯಸಮಾಜ ತಂತ್ರ
  • ಶಿಂಗಾನ್ ಬೌದ್ಧಧರ್ಮ
  • ತಂತ್ರ ಕೌಶಲಗಳು (ವಜ್ರಾಯನ)
  • ಟಿಬೆಟ್ ನ ಬೌದ್ಧಧರ್ಮ
  • ವಜ್ರಾಯನ
    ಇತರ ಸಂಬಂಧಿತ ವಿಷಯಗಳು
  • ಆನಂದ ಮಾರ್ಗ
  • ಗಣಚಕ್ರ
  • ಬೃಹದಾಚರಣೆ
  • ಜಾನ್ ವುಡ್ ರೋಫ್
  • ಕಾರೇಝಾ
  • ನವೀನ ತಂತ್ರ
  • [[Sex ಮ್ಯಾಜಿಕ್

ಲೈಂಗಿಕ ಲೀಲೆ]]

  • ತಾವೋ ಮಾರ್ಗದ ಲೈಂಗಿಕ ಆಚರಣೆಗಳು
  • ಯೋಗ

ಟಿಪ್ಪಣಿಗಳು

ಆಕರಗಳು

  • Avalon, Arthur (1918). Sakti and Sakta. Ganesh and Co.
  • Avalon, Arthur (1972). Tantra of the great liberation – Mahanirvana Tantra. New York: Dover publications. ISBN 0-486-20150-3.
  • Bhattacharyya, N. N. (1999). History of the Tantric Religion. New Delhi: Manohar. ISBN 81-7304-025-7.ಎರಡನೆಯ ಪರಿಷ್ಕೃತ ಆವೃತ್ತಿ
  • Bühnemann, Gudrun (1988). The Worship of Mahāgaṇapati According to the Nityotsava. Institut für Indologie. ISBN 81-86218-12-2.ಮೊದಲನೆಯ ಭಾರತೀಯ ಆವೃತ್ತಿ, ಕ್ಯಾಂಟ್ ಪಬ್ಲಿಕೇಷನ್ಸ್, 2003 .
  • Harper, Katherine Anne (ed.) (2002). The Roots of Tantra. State University of New York Press. ISBN 0-7914-5306-5. ;
  • Norbu, Chögyal Namkhai (1999). The Crystal and The Way of Light: Sutra, Tantra and Dzogchen. Snow Lion Publications. ISBN 1559391359.
  • Saraswati, Swami Satyananda (2000). Sure Ways to Self Realization. Yoga Publications Trust. ISBN 8185787417.
  • Urban, Hugh (2003). Tantra: Sex, Secrecy, Politics, and Power in the Study of Religions. University of California Press. ISBN 0520236564.
  • Wangyal Rinpoche, Tenzin (1998). The Tibetan Yogas of Dream and Sleep. N.Y.: Snow Lion Publications. ISBN 1559391014.
  • White, David Gordon (ed.) (2000). Tantra in Practice. Princeton University Press. ISBN 0-691-05779-6.
  • Winternitz, Maurice (1972). History of Indian Literature. New Delhi: Oriental Books Reprint Corporation. ಎರಡನೆಯ ಪರಿಷ್ಕೃತ ಆವೃತ್ತಿ. ಎರಡು ಸಂಪುಟಗಳು. ಮೊದಲ ಪ್ರಕಾಶನ 1927ರಲ್ಲಿ ಯೂನಿವರ್ಸಿಟಿ ಆಫ್ ಕಲ್ಕತ್ತಾದಿಂದ.
  • Yeshe, Lama Thubten (1987). Introduction to Tantra:The Transformation of Desire (2001, revised ed.). Boston: Wisdom Publications. ISBN 0-86171-162-9.

ಹೆಚ್ಚಿನ ಮಾಹಿತಿಗಾಗಿ

  • Arnold, Edward A., ed. (2009). As Long As Space Endures: Essays on the Kalacakra Tantra in Honor of H.H. the Dalai Lama. Ithaca, NY: Snow Lion Publications. ISBN 978-1-559393-0-34.
  • Avalon, Arthur (1928). The Serpent Power. Ganesh & Co. ISBN 81-85988-05-6.
  • Bagchi, P.C. (1986). Kaulajnana-nirnaya of the School of Matsyendranath Varanasi: Prachya Prakashan. Michael Magee, transl.
  • Davidson, Ronald M. (2003). Indian Esoteric Buddhism: A Social History of the Tantric Movement. New York: Columbia University Press. ISBN 81-208-1991-8.
  • Davidson, Ronald M. (2005). Tibetan Renaissance: Tantric Buddhism in the Rebirth of Tibetan Culture. New York: Columbia University Press. ISBN 0-231-13471-1.
  • Feuerstein, Georg (1998). Tantra: The Path of Ecstasy. Boston: Shambhala. ISBN 1-57062-304-X.
  • Guenon, Rene (2004). Studies in Hinduism: Collected Works (2nd ed.). Sophia Perennis. ISBN 978-0900588693.
  • Gyatso, Geshe Kelsang (2003). Tantric Grounds and Paths. Tharpa Publications. ISBN 978-0-948006-33-3.
  • Gyatso, Geshe Kelsang (2005). Mahamudra Tantra. Tharpa Publications. ISBN 978-0-948006-93-7.
  • Gyatso, Tenzin (1987). Deity Yoga. Ithaca, NY: Snow Lion Publications. ISBN 0-937938-50-5.
  • Kane, Pandurang Vaman. History of Dharmashastra. Pune: Bhandarkar Oriental Research Institute.
  • Magee, Michael, tr. (1984). Yoni Tantra.{{cite book}}: CS1 maint: multiple names: authors list (link)
  • Mahendranath, Shri Gurudev (1990). The Scrolls of Mahendranath. Seattle: International Nath Order.
  • McDaniel, June (2004). Offering Flowers, Feeding Skulls: Popular Goddess Worship in West Bengal. New York: Oxford University Press.
  • Mookerji, Ajit (1997). The Tantric Way: Art, Science, Ritual. London: Thames & Hudson.
  • Rao, T. A. Gopinatha (1981). Elements in Hindu Iconography. Vol. 1. Madras: Law Printing House.
  • Urban, Hugh (2002). "The Conservative Character of Tantra: Secrecy, Sacrifice and This-Worldly Power in Bengali Śākta Tantra". International Journal of Tantric Studies. 6 (1).
  • Walker, Benjamin (1982). Tantrism: Its Secret Principles and Practices. London: Acquarian Press. ISBN 0-85030-272-2.
  • White, David Gordon (2003). Kiss of the Yogini: "Tantric Sex" in its South Asian Contexts. Chicago: University of Chicago Press.
  • White, David Gordon (1998). The Alchemical Body: Siddha Traditions in Medieval India. Chicago: University of Chicago Press.
  • Woodroffe, John (1913). Mahanirvana Tantra: Tantra of the Great Liberation. Arthur Avalon, transl. Retrieved January 13, 2010.

ಬಾಹ್ಯ ಕೊಂಡಿಗಳು

  • Tantra ಓಪನ್ ಡೈರೆಕ್ಟರಿ ಪ್ರಾಜೆಕ್ಟ್

Tags:

ತಂತ್ರ ಸ್ಥೂಲ ಅವಲೋಕನತಂತ್ರ ವೈದಿಕ ಸಂಪ್ರದಾಯದೊಂದಿಗಿರುವ ಸಂಬಂಧತಂತ್ರ ಬೌದ್ಧ ತಂತ್ರ ಜಾಗೃತಿ ಮತ್ತು ಸುಷುಪ್ತಿತಂತ್ರ ಆಚರಣ ವಿಧಿಗಳುತಂತ್ರ ಪಾಶ್ಚಿಮಾತ್ಯರ ಅಭಿಪ್ರಾಯಗಳುತಂತ್ರ ಹಿಂದೂ ತಾಂತ್ರಿಕ ಆಚರಣಕಾರರುತಂತ್ರ ಇವನ್ನೂ ಗಮನಿಸಿತಂತ್ರ ಟಿಪ್ಪಣಿಗಳುತಂತ್ರ ಆಕರಗಳುತಂತ್ರ ಹೆಚ್ಚಿನ ಮಾಹಿತಿಗಾಗಿತಂತ್ರ ಬಾಹ್ಯ ಕೊಂಡಿಗಳುತಂತ್ರಕಾಂಬೋಡಿಯಾಚೀನಾಜಪಾನ್ಜಾಲಜೈನಟಿಬೆಟ್ತಂತ್ರಗಳುದೇವತೆನೇಪಾಳಬರ್ಮಾಬೌದ್ಧಭಾರತಮಂಗೋಲಿಯಾಶಕ್ತಿಶಿವಸಂಸ್ಕೃತ ಭಾಷೆಸಿಖ್ಹಿಂದೂ

🔥 Trending searches on Wiki ಕನ್ನಡ:

ಬ್ರಾಹ್ಮಿ ಲಿಪಿವಿರಾಮ ಚಿಹ್ನೆಕೆಂಬೂತ-ಘನಕಬ್ಬುಬೈಗುಳಪುರೂರವಸ್ಮಧ್ಯಕಾಲೀನ ಭಾರತಕೆ. ಅಣ್ಣಾಮಲೈಸಂವಹನಕಾಗೋಡು ಸತ್ಯಾಗ್ರಹಕರ್ನಾಟಕ ಸ್ವಾತಂತ್ರ್ಯ ಚಳವಳಿಬೆಂಗಳೂರು ಗ್ರಾಮಾಂತರ ಜಿಲ್ಲೆಹರ್ಡೇಕರ ಮಂಜಪ್ಪಕೇಶಿರಾಜವೀಣೆಕರ್ನಾಟಕ ವಿಶ್ವವಿದ್ಯಾಲಯಶಕುನಒಂದನೆಯ ಮಹಾಯುದ್ಧಗೋಲ ಗುಮ್ಮಟಒಕ್ಕಲಿಗಕುಂಬಳಕಾಯಿಎಚ್.ಎಸ್.ಶಿವಪ್ರಕಾಶ್ಗಣೇಶಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಓಂ ನಮಃ ಶಿವಾಯಏಲಕ್ಕಿವೀರಗಾಸೆಮಹೇಂದ್ರ ಸಿಂಗ್ ಧೋನಿಚಿಕ್ಕಮಗಳೂರುಅಮೇರಿಕ ಸಂಯುಕ್ತ ಸಂಸ್ಥಾನಶಾಸನಗಳುಭಾರತದ ಸ್ವಾತಂತ್ರ್ಯ ದಿನಾಚರಣೆನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಜ್ಯೋತಿಬಾ ಫುಲೆಕಲ್ಯಾಣಿಸನ್ನತಿರಾಘವನ್ (ನಟ)ನುಡಿ (ತಂತ್ರಾಂಶ)ಜಾನ್ ಸ್ಟೂವರ್ಟ್ ಮಿಲ್ಅಮ್ಮದಕ್ಷಿಣ ಕನ್ನಡಜನಪದ ನೃತ್ಯಗಳುಸುಗ್ಗಿ ಕುಣಿತಸ್ವಾಮಿ ವಿವೇಕಾನಂದಕರ್ನಾಟಕದ ಹಬ್ಬಗಳುರವೀಂದ್ರನಾಥ ಠಾಗೋರ್ದೇವತಾರ್ಚನ ವಿಧಿವೃತ್ತಪತ್ರಿಕೆಕಾದಂಬರಿಡಾ. ಎಚ್ ಎಲ್ ಪುಷ್ಪಹುಬ್ಬಳ್ಳಿಕೇರಳಸಮುಚ್ಚಯ ಪದಗಳುಬಿ.ಎಸ್. ಯಡಿಯೂರಪ್ಪಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಅಂಬಿಗರ ಚೌಡಯ್ಯರತ್ನತ್ರಯರುಚುನಾವಣೆಮಂಡಲ ಹಾವುಇಮ್ಮಡಿ ಪುಲಕೇಶಿಕರ್ನಾಟಕ ಹೈ ಕೋರ್ಟ್ಇತಿಹಾಸವಿಜ್ಞಾನಪಾಲಕ್ತುಮಕೂರುಕಂಪ್ಯೂಟರ್ಬಾರ್ಲಿದಾನ ಶಾಸನಸಾರ್ವಜನಿಕ ಆಡಳಿತಸಂವತ್ಸರಗಳುಗಂಗ (ರಾಜಮನೆತನ)ಶ್ರೀ ರಾಘವೇಂದ್ರ ಸ್ವಾಮಿಗಳುದಿನೇಶ್ ಕಾರ್ತಿಕ್ಕವಿಗಳ ಕಾವ್ಯನಾಮಕರ್ನಾಟಕದ ಇತಿಹಾಸಹೂವು🡆 More