ಡೆಮಿ ಮೂರ್

ಡೆಮಿ ಗೈನೆಸ್, ವೃತ್ತಿಯಿಂದ ಡೆಮಿ ಮೂರ್ ಎಂದು (ನವೆಂಬರ್ ೧೧,೧೯೬೨ರಲ್ಲಿ ಜನನ)ಪ್ರಸಿದ್ದರಾಗಿರುವ ಅಮೆರಿಕಾದ ನಟಿ.

ಚಿತ್ರಗಳಲ್ಲಿ ಸಣ್ಣ ಪಾತ್ರಗಳು ಹಾಗು ದೂರದರ್ಶನದ ಜನರಲ್ ಹಾಸ್ಪಿಟಲ್ ಧಾರಾವಾಹಿಯಲ್ಲಿ ಒಂದು ಪಾತ್ರದ ನಂತರ, ಮೂರ್ ಅವರು ಸೈಂಟ್.ಎಲ್ಮೊಸ್ ಫಯರ್ (೧೯೮೫)ಹಾಗು ಘೋಸ್ಟ್ (೧೯೯೦) ಚಿತ್ರಗಳಲ್ಲಿ ತಮ್ಮ ವೃತ್ತಿ ಜೀವನವನ್ನು ಸ್ಥಾಪಿಸಿದರು, ೧೯೯೦ರ ದಶಕದ ಆರಂಭದಲ್ಲಿ, ಎ ಫಿಯು ಗುಡ್ ಮೆನ್ (೧೯೯೨),ಇನ್ಡೀಸೆಂಟ್ ಪ್ರೊಪೋಸಲ್ (೧೯೯೩), ದೀಸ್ಕ್ಲೋಸರ್ (೧೯೯೪) ಚಿತ್ರಗಳ ಯಶ್ಶಸ್ಸಿನ ನಂತರ ಹಾಲಿವುಡ್ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆಪಡೆಯುವ ನಟಿಯೆನಿಸಿದರು. ೯೦ರ ದಶಕದ ಕೊನೆಯಲ್ಲಿ ಅವರ ಚಿತ್ರಗಳು ಕಡಿಮೆ ಯಶ್ಶಸ್ಸನ್ನು ಕಂಡರೂ,Charlie's Angels: Full Throttle ೨೦೦೩ ಅವರ ಪಾತ್ರದಿಂದ ಮರಳಿ ಪ್ರಾಮುಖ್ಯತೆಯನ್ನು ಪಡೆದರು.ತಮ್ಮ ವೃತಿಪರ ಹೆಸರನ್ನು ,ಅವರ ಮೂದಲ ಪತಿ ಫ್ರೆಡ್ಡಿ ಮೂರ್ ಅವರಿಂದ ಪಡೆದರು. ಬ್ರೂಸ್ ವಿಲ್ಲಿಸ್ ಅವರನ್ನು ಮದುವೆಯಾಗಿ,ಮುರೂ ಹೆಣ್ಣುಮಕ್ಕಳ ತಾಯಿಯಾದರು. ೨೦೦೫ರಲ್ಲಿ ಆಷ್ಟನ್ ಕಚೆರ್ ಅವರನ್ನು ಮದುವೆಯಾಗಿ ನಂತರ ಅವರ ಕಡೆಯ ಹೆಸರನ್ನು ೨೦೦೯ರಲ್ಲಿ ಪಡೆದರು.

ಡೆಮಿ ಮೂರ್
ಡೆಮಿ ಮೂರ್
Moore at TechCrunch50 2008
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
Demi Gene Guynes
(1962-11-11) ನವೆಂಬರ್ ೧೧, ೧೯೬೨ (ವಯಸ್ಸು ೬೧)
, U.S.
ವೃತ್ತಿ Actress
ವರ್ಷಗಳು ಸಕ್ರಿಯ ೧೯೮೨–present
ಪತಿ/ಪತ್ನಿ Freddy Moore (೧೯೮೨–೧೯೮೫)
Bruce Willis (೧೯೮೭–೨೦೦೦)
Ashton Kutcher (೨೦೦೫–೨೦೧೨)

ಬಾಲ್ಯ

ಮೂರ್ ಅವರು ನ್ಯೂ ಮೆಕ್ಸಿಕೋದ ರೋಸ್ವೆಲ್ನಲ್ಲಿರುವ ಡಿಮಿತ್ರಿಯ ಜೀನ್ ಗಯ್ನೆಸ್ ನಲ್ಲಿ ಜನಿಸಿದರು. ಅವರ ತಾಯಿ ಸೌನ್ಧರ್ಯೋತ್ಪನ್ನಗಳ ef>http://www.people.com/people/demi_moore ನಿಯತಕಾಲಿಕ ಪುಸ್ತಕವನ್ನು ನೋಡಿದ ನಂತರ ಅವಳು ದಿಮಿತ್ರಿಯ ಎಂದೂ ಹೆಸರಾದಳು. ಬಾಲ್ಯದಲ್ಲಿರುವಾಗ ಅವಳ ಮನೆಜೀವನ ಕಷ್ಟ ಮತ್ತು ಅಸ್ಥಿರವಾಗಿತ್ತು. ಅವಳ ಹೆತ್ತ ತಂದೆ ಚಾರ್ಲ್ಸ್ ಹಾರ್ಮೋನ್, ಅವಳ ತಾಯಿಯಾದ ವಿರ್ಜಿನಿಯ ಕಿಂಗನ್ನು(ನವೆಂಬರ್ ೨೭,೧೯೪೩ - ಜುಲೈ ೨,೧೯೯೮) ಮದುವೆಯಾದ ಎರಡು ತಿಂಗಳಲ್ಲೇ, ಮೂರ್ ಜನಿಸುವ ಮೊದಲೇ ತ್ಯಜಿಸಿದನು. ಇದರ ಪರಿಣಾಮವಾಗಿ ಮೂರ್ ಅವಳ ಜನನ ಪ್ರಮಾಣ ಪತ್ರದಲ್ಲಿ ತನ್ನ ಮಲತಂದೆ ಡ್ಯಾನ್ನಿ ಗಯ್ನೆಸ್(ಮಾರ್ಚ್ ೧೯೪೩ - ಅಕ್ಟೋಬರ್ ೧೯೮೦) ಅವರ ಹೆಸರನ್ನು ಸರ್-ನೇಮ್ ಆಗಿ ಪಡೆದಳು. ಆಗಾಗ್ಗೆ ಕೆಲಸವನ್ನು ಬದಲಾಯಿಸುತಿದ್ದ ಡ್ಯಾನ್ನಿ ಗಯ್ನೆಸ್ ೧೯೮೦ರಲ್ಲಿ ಆತ್ಮಹತ್ಯೆ ಮಾಡಿಕೊಂಡರು; ಪರಿಣಾಮವಾಗಿ ಅವರ ಸಂಸಾರ ನಲವತ್ತು ಬಾರಿ ಸ್ಥಳಾಂತರಗೊಂಡಿತು, ಈ ಸಮಯದಲ್ಲಿ ಅವರು ಪೆನ್ನ್ಸಿಲ್ವನಿಯಾದ ರೋಜೆರ್ಸ್ ಮೇನರ್ ಎಂಬ ಸಣ್ಣ ಹಳ್ಳಿಯಲ್ಲಿ ವಾಸವಾಗಿದ್ದರು. ಮೂರ್ ಅವಳ ತಂದೆ-ತಾಯಿ ಕುಡಿತದವರಾಗಿದ್ದು ಆಗಾಗ್ಗೆ ಪರಸ್ಪರ ಹೊಡೆದಾಡಿ ಜಗಳವಾಡುತ್ತಿದ್ದರು. ಮೂರ್ ಚಿಕ್ಕಂದಿನಲ್ಲಿ ಓರೆಗಣ್ಣವಳಾಗಿದ್ದು, ಕಣ್ಣಿನ ತೊಂದರೆಯಿಂದಾಗಿ ಆ ಕಣ್ಣನ್ನು ಪಟ್ಟಿಯಿಂದ ಮುಚ್ಚಲಾಗಿತ್ತು ನಂತರ ತೊಂದರೆಯನ್ನು ಸರಿಪಡಿಸಿಕೊಳ್ಳಲು ಎರಡು ಶಸ್ತ್ರ ಚಿಕಿತ್ಸೆಗೆ ಒಳಗಾದಳು. ಮೂತ್ರಕೋಶದ ಕಾರ್ಯವೈಫಲ್ಯದಿಂದಲೂ ಬಳಲುತ್ತಿದ್ದಳು. ಮೋರಿಗೆ ಹೇಟೆರೋಕ್ರೋಮಿಯಾ ಇದ್ದು, ಅವಳ ಒಂದು ಕಣ್ಣು ಹಸಿರು ಹಾಗು ಮತ್ತೊಂದು ಹಳದಿ ಮಿಶ್ರಿತ ಕಂದು ಬಣ್ಣದಿಂದ ಕೂಡಿದೆ.ಮೂರ್ ಅವಳ ಸಂಸಾರ ೧೯೭೬ರಲ್ಲಿ ಲಾಸ್ ಏನ್ಜೆಲೆಸ್ನಲ್ಲಿ ತಳವೂರಿತು. ಮೂರ್ ಹಾಲಿವುಡ್ಡಿನ ಫೈರ್ಫಕ್ಷ್ ಪ್ರೌಡ ಶಾಲೆಗೆ ಸೇರಿದಳು. ಅವಳ ಶಾಲೆಯ ಸಹಪಾಟಿಗಳಲ್ಲಿ ರೆಡ್ ಹಾಟ್ ಚಿಲ್ಲಿ ಪೆಪ್ಪೆರ್ಸಿನ ಪ್ರಧಾನ ಗಾಯಕನಾದ ಆಂತೋನಿ ಕೀದಿಸ್, ಬ್ಯಾಸ್ಸಿಸ್ಟ್ ಮೈಕಲ್ ಬಾಲ್ಜಾರಿ ಹಾಗು ನಟ ತಿಮೋತಿ ಹಟ್ಟನ್ ಕೂಡ ಇದ್ದರು. ಮೂರ್ ತನ್ನ ಹದಿನಾರನೇ ವಯಸ್ಸಿನಲ್ಲಿದ್ಧಾಗ, ಅವಳ ಗೆಳತಿಯಾದ ನಟಿ ನಸ್ತಾಸ್ಜ ಕಿನ್ಸ್ಕಿ, ಶಾಲೆ ಬಿಟ್ಟು ನಟಿಯಾಗಲು ಅವಳನ್ನು ಪ್ರೆರೆಪಿಸಿದಳು. ಮೂರ್ ಇಬ್ಬರು ಮಲ ತಮ್ಮಂದಿರನ್ನು ಹೊಂದಿದ್ದಾಳೆ: ಜೇಮ್ಸ್ ಕ್ರೈಗ್ ಹರ್ಮನ್(ತಂದೆಯಿಂದ) ಹಾಗು ಮೋರ್ಗನ್ ಗಯ್ನೆಸ್(ತಾಯಿಯಂದ, ಜನನ ೧೯೬೭). ಮೂರ್ ಮಾಜಿ ಸೈನ್ಟೋಲಜಿಸ್ಟ್[7].

ಸಾಗಿ ಬಂದ ವೃತ್ತಿ ಮಾರ್ಗ

೧೯೮೨ರಲ್ಲಿ ಡೆಮಿ ಮೂರ್ ಅವರ ಮೊದಲ ಚಿತ್ರ 3-D ಸೈನ್ಸ್ ಫಿಕ್ಷ್ಚನ್/ಹಾರರ್ಚಿತ್ರ, ಪಾರಸೈಟ್ , ಡ್ರೈವ್-ಇನ್ ಸರ್ಕ್ಯೂಟ್ನಲ್ಲಿ ಯಶಸ್ವಿಯಾಗಿ, ಕಡೆಯಲ್ಲಿ $೭ ಮಿಲಿಯನ್ ಡಾಲರ್ ಹಣ ಗಳಿಸಿತು. ಆದಾಗ್ಯೂ, ಮೂರ್ ೧೯೮೨-೧೯೮೩ರಲ್ಲಿ ಎಬಿಸಿ ಚಾನೆಲ್ ನ ಸೋಪ್ ಒಪೇರ ಜನರಲ್ ಹಾಸ್ಪಿಟಲ್ ಧಾರಾವಾಹಿಯ ಜಾಕೀ ಟೆಂಪಲ್ಟನ್ ನ ಪಾತ್ರ ನಿರ್ವಹಿಸುವವರೆಗೂ ಹೆಚ್ಚು ಪರಿಚಿತಳಾಗಿರಲ್ಲಿಲ್ಲ. ೧೯೮೨ರಲ್ಲಿ ಯಂಗ್ ಡಾಕ್ಟರ್ಸ್ ಇನ್ ಲವ್ ಅಣುಕು ಚಿತ್ರದ ಕೊನೆಯಲ್ಲಿ ಮೂರ್ ಒಂದು ಸಣ್ಣ ಪಾತ್ರವನ್ನು ನಿರ್ವಹಿಸಿದಳು.

ಡೆಮಿ ಮೂರ್ 
ಡೆಮಿ ಮೂರ್ (1990)

೧೯೮೦ರ ದಶಕದ ಮಧ್ಯದಲ್ಲಿ, ಮೂರ್ ಯವ್ವೌನಾವಸ್ಥೆಯ ಸೈಂಟ್.ಎಲ್ಮೊಸ್ ಫಯರ್ ಮತ್ತು ಎಬೌಟ್ ಲಾಸ್ಟ್ ನೈಟ್ ಚಿತ್ರಗಳಲ್ಲಿ ಕಾಣಿಸಿಕೊಂಡಳು. ಆಗಾಗ್ಗೆ, ಬ್ರಾಟ್ ಪ್ಯಾಕ್ನ ಪಟ್ಟಿಯಲ್ಲಿ ಅವಳೂ ಒಬ್ಬಳಾಗಿದ್ದಳು, ಇದು ಮಾಧ್ಯಮದವರು ಅಗ್ರಸ್ಥಾನದಲ್ಲಿದ್ದ ಕೆಲವು ಯುವ ನಟರಿಗೆ ಕೊಟ್ಟ ಹೆಸರು. ೧೯೮೮ರಲ್ಲಿ ಕಾರ್ಲ್ ಸ್ಕ್ಹಲ್ಟಜ್ ನಿರ್ದೇಶಿಸಿದ ದ ಸೆವೆನ್ತ್ ಸೈನ್ ಚಿತ್ರದಲ್ಲಿ ಡೆಮಿ ನಟಿಸಿದಳು. ಹೆಚ್ಚು ಹಣ ಗಳಿಸಿದ ಘೋಸ್ಟ್ ಚಿತ್ರದ ಯಶಸ್ಸಿನ ನಂತರ, ಮೂರ್ ಎ ಫ್ಯೂ ಗುಡ್ ಮೆನ್ , ಇನ್ಡೀಸೆಂಟ್ ಪ್ರೊಪೋಸಲ್ , ಡಿಸ್ಕ್ಲೊಸರ್ ಹಾಗು ದ ಹಂಚ್ ಬ್ಯಾಕ್ ಆಫ್ ನೋಟ್ರೆ ಡೆಮ್ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ $೧೦ ಮಿಲಿಯನ್ ಡಾಲರ್ ಸಂಭಾವನೆ ಪಡೆಯುವ ಮೊದಲ ನಟಿಯನಿಸಿದಳು. ೧೯೯೦ರ ದಶಕದ ಆರಂಭದ ವೇಳೆಗೆ, ಹಾಲಿವುಡ್ ನ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯಾದಳು. ಅವಳು ತನ್ನ ಘೋಸ್ಟ್ ಚಿತ್ರಕ್ಕಾಗಿ ಪಡೆದ ಯಶಸ್ಸನ್ನು ಮತ್ತ್ಯಾವ ಚಿತ್ರದಲ್ಲೂ ಕಾಣಲಿಲ್ಲ, ಆದರೂ ದ ಸ್ಕಾರ್ಲೆಟ್ ಲೆಟರ್ , ದ ಜೂರರ್ , ಸ್ಟ್ರಿಪ್ಟೀಸ್ , ಜಿ.ಐ ಜೇನ್ ಮೊದಲಾದ ಚಿತ್ರಗಳಲ್ಲಿ ತಕ್ಕಮಟ್ಟಿನ ಯಶಸ್ಸನ್ನು ಕಂಡಳು. ಇದರ ಮಧ್ಯದಲ್ಲಿ, ಮೂರ್ ಅವರ ಪ್ಯಾಶನ್ ಆಫ್ ಮೈಂಡ್ ಚಿತ್ರದಲ್ಲಿನ ಸಹನಟ ಜಾಸ್ ಆಕ್ಲ್ಯಾಂಡ್ ಮೂರ್ ಅವಳನ್ನು "ಹೆಚ್ಚು ಪ್ರತಿಭಾವಂತಳಲ್ಲ" ಎಂದು ಖಂಡಿಸಿದನು. ಆದರೂ ೨೦೦೮ರಲ್ಲಿ ಫ್ಲಾಲೆಸ್ ಚಿತ್ರದಲ್ಲಿ ಮತ್ತೆ ಅವಳೊಂದಿಗೆ ನಟಿಸಿದನು. ಅದೇ ವೇಳೆಯಲ್ಲಿ ಮೂರ್, ನ್ಯಾನ್ಸಿ ಸವೋಕ ರಚಿಸಿದ ಇಫ್ ದೀಸ್ ವಾಲ್ಸ್ ಕುಡ್ ಟಾಕ್ ಎಂಬ ದೂರದರ್ಶನದ ಚಿಕ್ಕ ಧಾರವಾಹಿಯನ್ನು ನಿರ್ಮಿಸಿ ನಟಿಸಿದಳು. ಗರ್ಭಪಾತದ ಬಗ್ಗೆ ಮೂರು ಕಂತಿನ ಧಾರಾವಾಹಿಯ ಎರಡು ಭಾಗಗಳನ್ನು ಸವೋಕ ನಿರ್ದೇಶಿಸಿದಳು. ಈ ಧಾರಾವಾಹಿಯ ಒಂದು ಭಾಗದಲ್ಲಿ, ೧೯೫೦ರ ದಶಕದಲ್ಲಿ ಕಾನೂನುಬಾಹಿರವಾಗಿ ಗರ್ಭಪಾತ ಮಾಡಿಸಿಕೊಳ್ಳುವ ಕನ್ಯೆಯ ಪಾತ್ರವನ್ನು ಮೂರ್ ನಿರ್ವಹಿಸಿದಳು. ಈ ಪಾತ್ರಕ್ಕೆ ಅವಳು ಗೋಲ್ಡನ್ ಗ್ಲೋಬ್ನ ಅತ್ಯುತ್ತಮ ನಟಿಯ ಪ್ರಶಸ್ತಿಗಾಗಿ ನೇಮಕಗೊಂಡಳು. ಮೂರ್ ಳು ಪ್ಲಾನೆಟ್ ಹಾಲಿವುಡ್ಎಂಬ ಅಂತರರಾಷ್ಟ್ರೀಯ ನೀತಿಯುಳ್ಳ ಹೋಟೆಲ್ಗಳ ಸರಣಿಯೊಂದನ್ನು(ಹಾರ್ಡ್ ರಾಕ್ ಕಫೆ ಹೋಟೆಲ್ಲನ್ನು ಮಾದರಿಯಾಗಿಟ್ಟುಕೊಂಡು, ಅಕ್ಟೋಬರ್ ೨೨ ೧೯೯೧ರಂದು ನ್ಯೂಯಾರ್ಕಿನಲ್ಲಿ ಪ್ರಾರಂಭಿಸಲಾಯಿತು),ಸಿಲ್ವೆಸ್ಟರ್ ಸ್ಟಾಲ್ಲೊನ್,ಅರ್ನಾಲ್ಡ್ ಸ್ಕ್ವಾರ್ಜೆನೆಗ್ಗೆರ್ಮತ್ತು ಮಾಜಿ ಪತಿ ಬ್ರೂಸ್ ವಿಲ್ಲಿಸ್ನ ಜೊತೆಗೂಡಿ ಸ್ಥಾಪಿಸಿದ "ಪ್ರಖ್ಯಾತ ನಿಯೋಜಕಳೂ" ಆದಳು. ವೃತ್ತಿ ಜೀವನದ ವಿರಾಮದ ನಂತರ, ಮೂರ್ ೨೦೦೩ರಲ್ಲಿCharlie's Angels: Full Throttle ವಿಫಲಗೊಂಡ ಚಿತ್ರವಾದ ಚಾರ್ಲೀಸ್ ಏನ್ಜಲ್ಸ್ನ ಮಾಜಿ ಸದಸ್ಯೆಯಾಗಿ ತೆರೆಗೆ ಹಿಂದಿರುಗಿದಳು. ೨೦೦೬ರಲ್ಲಿ ಅವಳು ಹೆಚ್ಚು ತಾರಾಗಣಗಳೊಂದಿಗೆ ಅವಳ ಪತಿ ಆಸ್ಟನ್ ಕಚ್ಚರ್ಸಹ ನಟಿಸಿರುವ ಬಾಬೀ ಚಿತ್ರದಲ್ಲಿ ನಟಿಸಿದಳಾದರೂ ಅವಳ ಪತಿಯೊಂದಿಗೆ ಒಂದು ದೃಶ್ಯವೂ ಇರಲ್ಲಿಲ್ಲ. ನಂತರ ಅವಳು ಜೂನ್ ೧, ೨೦೦೭ರಂದು ತೆರೆಕಂಡ ಮಿಸ್ಟರ್.ಬ್ರೂಕ್ಸ್ ಎಂಬ ರೋಮಾಂಚಕಾರಿ ಚಿತ್ರದಲ್ಲಿ ನಟಿಸಿದಳು. ಜಾನ್ ಬಾನ್ ಜೋವಿಯವರ ವಿಸ್ತೃತಗೊಂಡ ದೃಶ್ಯ ಮಾಧ್ಯಮದ "ಡೆಸ್ತಿನೇಶನ್ ಎನಿವೇರ್"ನಲ್ಲಿ ಜೇನ್ ಆಗಿ ಕಾಣಿಸಿಕೊಂಡಳು. ೨೦೦೬ರಲ್ಲಿ, ಹೆಲೆನಾ ರುಬಿನ್ಸ್ತೈನ್ ಬ್ರ್ಯಾಂಡ್ ನ ಸೌನ್ದರ್ಯೋತ್ಪನ್ನಗಳಿಗೆ ಹೊಸಮುಖವಾಗಿ ಮೂರ್ ಕಾಣಿಸಿಕೊಂಡಳು.

ವ್ಯಾನಿಟೀ ಫೇರ್ ವಿವಾದ

ಆಗಸ್ಟ್ ೧೯೯೧ರಲ್ಲಿ, ವ್ಯಾನಿಟೀ ಫೇರ್ ನ ಮುಖಪುಟದಲ್ಲಿ ಮೋರ್ ಡೆಮಿ ಮೂರ್ ಎಂಬ ತಲೆಬರಹದಲ್ಲಿ, ಮೂರ್ ನಗ್ನವಾಗಿ ಕಾಣಿಸಿಕೊಂಡಳು. ಮೂರಳು ಸ್ಕೌಟ್ ಲಾರು ಮಗಳ ಏಳನೇ ತಿಂಗಳ ಗರ್ಭವತಿಯಾಗಿದ್ದಾಗ, "ಹಾಲಿವುಡ್ಗೆ-ವಿರೋಧವಾದ, ಐಶರಾಮಿಗೆ-ವಿರೋಧವಾದ" ನಡವಳಿಕೆಗಳನ್ನು ತೋರಿಸಲು ಆನ್ನಿ ಲೆಬೋವಿತ್ಜ್ ಮೂರಳನ್ನು ಚಿತ್ರೀಕರಿಸಿದಳು. ಈ ಮುಖಪುಟವು ವ್ಯಾನಿಟೀ ಫೇರ್ ಮತ್ತು ಡೆಮಿ ಮೂರನ್ನು ಅತೀವ ವಿವಾದಕ್ಕೆ ಒಳಪಡಿಸಿತು. ಇದು ಆಕಾಶವಾಣಿ, ದೂರದರ್ಶನ ಮತ್ತು ದಿನಪತ್ರಿಕೆಗಳ ಬರಹಗಳಲ್ಲಿ ಭಾರಿ ಚರ್ಚೆಗೊಳಗಾಯಿತು. ಗರ್ಭವತಿಯನ್ನು ಕಾಮದ ಸಂಕೇತವಾಗಿ ಲೆಬೋವಿತ್ಜ್ ಬಿಚ್ಚು ಮನಸ್ಸಿನಿಂದ ತೋರಿಸಿದ್ದರಿಂದ ಮಿಶ್ರ ಅಭಿಪ್ರಾಯಗಳು ಹುಟ್ಟಿಕೊಂಡವು, ಇದರಲ್ಲಿ ಸೆಕ್ಷುಯಲ್ ಆಬ್ಜೆಕ್ಟಿಫಿಕೇಶನ್ ಬಗ್ಗೆ ವಿರೋಧವಾದ ಹೇಳಿಕೆಗಳಲ್ಲದೆ, ಮತ್ತು ಕೆಲವರಲ್ಲಿ ಈ ಛಾಯಾಚಿತ್ರ ಎಂಪವರ್ಮೆಂಟ್ನ ಸಂಕೇತವಾಗಿ ಹೊರಹೊಮ್ಮಿ ಸಂತೋಷದ ಆಚರಣೆಗೆ ಕಾರಣವಾಯಿತು.ಈ ಛಾಯಚಿತ್ರವು ಹಲವಾರು ವ್ಯಂಗ್ಯಗಳಿಗೆ ಒಳಗಾಯಿತು, ಇವುಗಳಲ್ಲಿ ಸ್ಪಯ್ ನಿಯತಕಾಲಿಕದಲ್ಲಿ ಮೂರಳ ದೇಹಕ್ಕೆ ಅವಳ ಪತಿಯಾದ ಬ್ರೂಸ್ ವಿಲ್ಲಿಸ್ನ ತಲೆಯನ್ನಿಟ್ಟು ತೋರಿಸಿದ್ದೂ ಒಂದು. ೧೯೯೪ರ ಚಲನಚಿತ್ರವೊಂದನ್ನುNaked Gun 33⅓: The Final Insult ಪ್ರಚೋದಿಸಲು ಲೆಸ್ಲೀ ನೀಲ್ಸೇನ್ ಒಳಗೊಂಡ ಪ್ಯಾರೋಡಿಯೊಂದರ ಮೇಲೆ ಲೆಬೋವಿತ್ಜ್ ಲೆಬೋವಿತ್ಜ್ ವಿ. ಪಾರಾಮೌಂಟ್ ಪಿಕ್ಚೆರ್ಸ್ ಕಾರ್ಪ್.ನಲ್ಲಿ ದಾವೆ ಹಾಕಿದರು. ಈ ವ್ಯಂಗ್ಯದಲ್ಲಿ, ಮಿಸ್ಟರ್.ನೀಲ್ಸೇನ್ ಅವರ "ಕೀಳರಿಮೆ ಮತ್ತು ಅಣುಕು ಮುಖ"ವನ್ನು ರೂಪದರ್ಶಿಯ ದೇಹಕ್ಕೆ ಸೇರಿಸಲಾಗಿತ್ತು. ಈ ಟೀಸರ್ "ಮಾರ್ಚಿನಲ್ಲಿ ಬರುವುದು" ಎಂದು ಹೇಳಿತು. ಈ ವ್ಯಂಗ್ಯವು "ಅಸಲುಪ್ರತಿಗಿಂತ ಹಾಸ್ಯಾಸ್ಪದವಾಗಿ ಭಿನ್ನವಾಗಿದ್ದರಿಂದ", ದಾವೆಯನ್ನು ೧೯೯೬ರಲ್ಲಿ ವಜಾ ಮಾಡಲಾಯಿತು. ೨೦೦೯ರ ನವೆಂಬರ್ ನಲ್ಲಿ, ಮೊರೋಕ್ಕನ್ ಫೆಮ್ಮೆಸ್ ಡು ಮರೋಕ್ ನಿಯತಕಾಲಿಕವು ಈ ಅಸಭ್ಯವಾದ ನಿಲುವನ್ನು ಮೊರೋಕ್ಕನ್ ವರದಿಗಾರಿಣಿಯಾದ ನಾದಿಯ ಲರ್ಗೆತ್ನಿಂದ ಪುನರ್ ಬಿತ್ತರಿಸಲು, ಹೆಚ್ಚು ಮುಸ್ಲಿಂಮರು ವಾಸವಾಗಿರುವ ರಾಷ್ಟ್ರವಾದ ಮೊರೋಕ್ಕೊದಲ್ಲಿ ವಿವಾದವನ್ನೆಬ್ಬಿಸಿತು. ೧೯೯೨ರ ಆಗಸ್ಟ್ ನಲ್ಲಿ, ಮೂರ್ ಪುನಃ ವ್ಯಾನಿಟಿ ಫೇರ್ ನ ಮುಖಪುಟದಲ್ಲಿ ನಗ್ನಳಾಗಿ ಕಾಣಿಸಿಕೊಂಡಳು, ಈ ಭಾರಿ ಅವಳು ಡೆಮಿಸ್ ಬರ್ತಡೆ ಸ್ಯೂಟ್ ಗೆ ವಿಶ್ವದ ಅಗ್ರಗಣ್ಯ ಬಾಡಿ ಪೇಂಟಿಂಗ್ ಕಲಾವಿದರಾದ ಜೋಆನ್ ಗೈರ್ಗೆ ರೂಪದರ್ಶಿನಿಯಾದಳು. ಈ ಚಿತ್ರಕಲೆಯನ್ನು ಆಧುನಿಕ ಬಾಡಿ ಪೇಂಟಿಂಗ್ ಚಿತ್ರಕಲೆಯ ಅತ್ಯುತ್ತಮ ಉದಾಹರಣೆಯನ್ನಾಗಿ ಹಲವಾರು ಜನರಿಂದ ಗುರುತಿಸಲಾಯಿತು.

ವೈಯಕ್ತಿಕ ಜೀವನ

ಡೆಮಿ ಮೂರ್ 
ಕಚ್ಚರ್ ಮತ್ತು ಮೂರ್,ಸೆಪ್ಟಂಬರ್ 2008

ಮೂರ್ ೧೯೭೯ರಲ್ಲಿ ಗಾಯಕ ಫ್ರೆಡ್ಡಿ ಮೂರ್ನನ್ನು ವಿವಾಹವಾಗಿ ೧೯೮೫ರಲ್ಲಿ ವಿಚ್ಚೇದನವನ್ನು ಪಡೆದಳು. ೧೯೮೭ರಲ್ಲಿ ಮೂರ್ ಮೂನ್ ಲೈಟಿಂಗ್ ಚಿತ್ರದ ನಟ ಬ್ರೂಸ್ ವಿಲ್ಲಿಸ್ನನ್ನು ಭೇಟಿಯಾಗಿ ಮುಂದಿನ ಎರಡು ತಿಂಗಳಲ್ಲಿ ಅವರಿಬ್ಬರು ಮದುವೆಯಾದರು. ಈ ತಾರಾ ದಂಪತಿಗಳು ಮೂರು ಹೆಣ್ಣು ಮಕ್ಕಳನ್ನು ಪಡೆದರು:ರುಮೆರ್ ಗ್ಲೆನ್ನ್ ವಿಲ್ಲಿಸ್(ಜನನ ೧೬ ಆಗಸ್ಟ್ ೧೯೮೮) ,ಸ್ಕೌಟ್ ಲಾರು ವಿಲ್ಲಿಸ್ (ಜನನ ೨೦ ಜುಲೈ ೧೯೯೧), ಮತ್ತು ತಲ್ಲುಲ ಬೆಲ್ ವಿಲ್ಲಿಸ್ (ಜನನ ೩ ಫೆಬ್ರವರಿ ೧೯೯೪).ಡೆಮಿ ಮತ್ತು ಬ್ರೂಸ್ ೧೯೯೮ರಲ್ಲಿ ಬೇರ್ಪಡೆಯಾಗಿ ೨೦೦೦ರಲ್ಲಿ ವಿಚ್ಚೇದನವನ್ನು ಪಡೆದರಾದರೂ, ಇಂದಿಗೂ ಅವರು ಸ್ನೇಹಿತರಾಗಿದ್ದಾರೆ. ೨೦೦೩ರಲ್ಲಿ, ಮೂರ್ ನಟ ಆಷ್ಟನ್ ಕಚ್ಚರ್ನ ಜೊತೆಯಲ್ಲಿ ಸುತ್ತಾಡಲು ಪ್ರಾರಂಭಿಸಿದಳು. ಡೆಮಿ ಆಷ್ಟನ್ ನನ್ನು ೨೦೦೫ರಲ್ಲಿ ವಿವಾಹವಾದಳು.ಮೂರಳ ಪ್ರಧಾನ ವಾಸಸ್ಥಾನ ಪ್ರಸಿದ್ದ ಸನ್ ವ್ಯಾಲಿವಿಶ್ರಾಂತಿ ಧಾಮದ ಸಮೀಪ ಇರುವ ಹೈಲಿ, ಇದಾಹೊ ಆಗಿದ್ದರೂ, ಅವಳು ಹೆಚ್ಚು ಸಮಯವನ್ನು ಲಾಸ್ ಏನ್ಜೆಲೀಸ್ನಲ್ಲಿ ಪತಿ ಕಚ್ಚರ್ ನೊಂದಿಗೆ ಕಳೆಯುತ್ತಾಳೆ.ಅವಳು ಮೇನ್ನ ಸೇಬಾಗೋ ಲೇಕ್ ದಡದಲ್ಲಿ ಒಂದು ಬಂಗಲೆಯನ್ನು ಹೊಂದಿದ್ದಾಳೆ. ಅವಳು ಫಿಲಿಪ್ ಬರ್ಗ್ನ ಕಬ್ಬಲ ಸೆಂಟರ್ ಧರ್ಮವನ್ನು ಅಬ್ಯಾಸ ಮಾಡುತ್ತಿರುವ ಅನುಯಾಯಿಯಾಗಿದ್ದು ಪತಿ ಕಚ್ಚರನ್ನು ಈ ಧರ್ಮದಲ್ಲಿ ನಂಬಿಕೆ ಇಡಲು ಪ್ರೇರೇಪಿಸಿದಳು.ಈ ಧರ್ಮದ ಅನುಯಾಯಿ ಆಗಿರುವುದರಿಂದ, "ಮೂರಳು ಜುಇಶ್ ಧರ್ಮವನ್ನು ಅನುಸರಿಸಿ ಬೆಳೆಯದಿದ್ದರೂ... ಆ ಧರ್ಮ ಅನುಸರಿಸಿ ಬೆಳೆದ ಅವಳ ಗೆಳೆತಿಯರಿಗಿಂತ ಜುಇಶ್ ಸಂಸ್ಕಾರಗಳ ಒಳಾರ್ಥಗಳನ್ನು ಹೆಚ್ಚು ಹೊರಗೆಡುವವಲಾಗಿದ್ದಾಳೆ" ಎಂದು ಹೇಳ ಬಹುದು. ಜನಸಾಮಾನ್ಯರ ನಂಬಿಕೆಯಂತೆ ,ಅವಳೆಂದೂ ರಾ ಫುಡ್ಡಿಸ್ಟ್ ಆಗಿರದೆ, ಇತ್ತೀಚೆಗಿನ ಮಾರಿಯೋ ಟೆಸ್ಟೀನೋ ಛಾಯಾಚಿತ್ರದ ಚಿತ್ರೀಕರಣದ ವೇಳೆಗೆ ಹ್ಯಾಂಬರ್ಗರ್ ತಿನ್ನುವ ಮೂಲಕ ಅವಳು ವೇಗನ್ ಎಂಬ ವದಂತಿಯನ್ನು ತಳ್ಳಿಹಾಕಿದಳು. ಮೂರ್ ಆಸ್ಟನ್ ಕಚ್ಚರ್ನನ್ನು ಮದುವೆಯಾದ ಎರಡು ವರ್ಷಗಳ ನಂತರ ಕಾನೂನು ಬದ್ಧವಾಗಿ ಅವಳ ಕಡೆಯ ಹೆಸರನ್ನು ಕಚ್ಚರ್ ಎಂದು ಬದಲಾಯಿಸಿಕೊಂಡಳು. ಆದಾಗ್ಯೂ, ಅವಳು ತನ್ನ ವೃತ್ತಿ ಜೀವನ ಮತ್ತು ನಟನಾ ಪಾತ್ರಗಳಲ್ಲಿ ಮೂರ್ ಹೆಸರನ್ನೇ ಮುಂದವರಿಸುತ್ತಿದ್ದಾಳೆ.ನ್ಯೂ ಯಾರ್ಕ್ ಟೈಮ್ಸ್ ನ ವರದಿಯಂತೆ, ಮೂರ್ "ವಿಶ್ವದ ಅತಿ ಹೆಚ್ಚು ಬೆಲೆಬಾಳುವ ಡಾಲ್ ಸಂಗ್ರಹಿಸುವವಳು", ಮತ್ತು ಅವುಗಳಲ್ಲಿ ಜೀನ್ ಮಾರ್ಷಲ್ ಫಾಶನ್ ಡಾಲ್ ಅವಳಿಗೆ ಹೆಚ್ಚು ಪ್ರಿಯವಾದದ್ದು.

ಚಲನಚಿತ್ರಗಳ ಪಟ್ಟಿ

ವರ್ಷ ಚಲನಚಿತ್ರ ಪಾತ್ರ ಟಿಪ್ಪಣಿಗಳು
1982 ಆಯ್ಕೆಗಳು ಕೊರ್ರಿ
ಪರಾವಲಂಬಿ ಜೀವಿ ಪಾಟ್ರಿಸಿಯ ವೆಲ್ಲೆಸ್
೧೯೮೩ ಯಂಗ್ ಡಾಕ್ಟರ್ಸ್ ಇನ್ ಲವ್ ಹೊಸ ಇಂಟರ್ನ್
೧೯೮೪ ನೋ ಸ್ಮಾಲ್ ಅಫ್ಫೇರ್ ಲೌರಾ ವಿಕ್ಟರ್
ಬ್ಲೇಮ್ ಇಟ್ ಆನ್ ರಿಯೋ ನಿಕೊಲ್ "ನಿಕ್ಕಿ" ಹಾಲ್ಲಿಸ್
೧೯೮೫ ಸೈಂಟ್.ಎಲ್ಮೊಸ್ ಫೈರ್ ಜೂಲ್ಸ್
೧೯೮೬ ವಿಸ್ಡಮ್ ಕಾರೆನ್ ಸಿಮ್ಮನ್ಸ್
ಒನ್ ಕ್ರೇಜೀ ಸಮ್ಮರ್ ಕಸ್ಸಂದ್ರ ಎಲ್ರಿಡ್ಜ್
ಎಬೌಟ್ ಲಾಸ್ಟ್ ನೈಟ್... ಡೆಬ್ಬೀ
೧೯೮೮ ದ ಸೆವೆಂತ್ ಸೈನ್ ಆಬ್ಬೀ ಕ್ವಿನ್ನ್
ದ ನ್ಯೂ ಹೊಮೊನರ್ಸ್ ಗೈಡ್ ಟು ಹ್ಯಾಪಿನೆಸ್ಸ್ ಸಣ್ಣ ಚಲನಚಿತ್ರಗಳು
೧೯೮೯ ವೀಆರ್ ನೋ ಏಂಜೆಲ್ಸ್ ಮೊಲೀ
೧೯೯೦ ಘೋಸ್ಟ್ ಮೊಲೀ ಜೆನ್ಸನ್ ನಾಮನಿರ್ದೇಶನ - "ಕಾಮೆಡಿ/ಮ್ಯೂಸಿಕಲ್ - ನಟಿಯ ಅತ್ಯುತ್ತಮ ಅಭಿನಯ" ಅಟ್ 48ತ್ ಗೋಲ್ಡನ್ ಗ್ಲೋಬ್ ಪ್ರಶಸ್ತಿ
೧೯೯೧ ದ ಬುಚ್ಚರ್ಸ್ ವೈಫ್ ಮಾರಿನ ಲೆಮ್ಕೆ
ಮಾರ್ಟಲ್ ಥಾಟ್ಸ್ ಸಿಂಥಿಯಾ ಕೆಲ್ಲಾಗ್ಸ್
ನಥಿಂಗ್ ಬಟ್ ಟ್ರಬಲ್ ಡಯೇನ್ ಲೈತ್ಸನ್
೧೯೯೨ ಎ ಫ್ಯೂ ಗುಡ್‌ ಮೆನ್‌ ಎಲ್ಸಿಡಿಆರ್ ಜೋಆನ್ನ್ ಗ್ಯಾಲ್ಲೋವೆ ನಾಮನಿರ್ದೇಶನ - ಅತ್ಯುತ್ತಮ ಸ್ತ್ರೀ ಅಭಿನಯಕ್ಕಾಗಿ ಎಂಟೀವಿ ಚಲ್ಚ್ನಚಿತ್ರ ಪ್ರಶಸ್ತಿ
೧೯೯೩ ಇನ್ಡೀಸೆಂಟ್ ಪ್ರೊಪೋಸಲ್ ಡಯಾನ ಮರ್ಫಿ [[ಅತ್ಯುತ್ತಮ ಚುಂಬನಕ್ಕಾಗಿ ವೂಡೀ ಹಾರಲ್ಸನ್ನೊಂದಿಗೆ ಎಂಟೀವೀ ಚಲನಚಿತ್ರ ಪ್ರಶಸ್ತಿ|ಅತ್ಯುತ್ತಮ ಚುಂಬನಕ್ಕಾಗಿ ವೂಡೀ ಹಾರಲ್ಸನ್ನೊಂದಿಗೆ ಎಂಟೀವೀ ಚಲನಚಿತ್ರ ಪ್ರಶಸ್ತಿ]]
| ನಾಮನಿರ್ದೇಶನ - ಅತ್ಯುತ್ತಮ ಸ್ತ್ರೀ ಅಭಿನಯಕ್ಕಾಗಿ ಎಂಟೀವಿ ಚಲ್ಚ್ನಚಿತ್ರ ಪ್ರಶಸ್ತಿ
| ನಾಮನಿರ್ದೇಶನ — ಹೆಚ್ಚು ಅಪೇಕ್ಷಣೀಯ ನಟಿ - ಎಮ್‌ಟಿವಿ ಚಲನಚಿತ್ರ ಪ್ರಶಸ್ತಿ .
೧೯೯೪ ಡಿಸ್ಕ್ಲೋಸರ್ ಮೆರೆಡಿತ್ ಜಾನ್ಸನ್ ನಾಮನಿರ್ದೇಶನ — ಹೆಚ್ಚು ಅಪೇಕ್ಷಣೀಯ ನಟಿ - ಎಮ್‌ಟಿವಿ ಚಲನಚಿತ್ರ ಪ್ರಶಸ್ತಿ
| ನಾಮನಿರ್ದೇಶನ - ಅತ್ಯುತ್ತಮ ಖಳನಾಯಕಿಗೆ ಎಮ್‌ಟಿವಿ ಚಲನಚಿತ್ರ ಪ್ರಶಸ್ತಿ
೧೯೯೫ ನೌ ಅಂಡ್ ದೆನ್ ಓಲ್ದರ್ ಸಮಂತ
ದ ಸ್ಕಾರ್ಲೆಟ್ ಲೆಟರ್ ಹೆಸ್ಟರ್ ಪ್ರೈನ್ನ್ ನಾಮನಿರ್ದೇಶನ - ಹೆಚ್ಚು ಅಪೇಕ್ಷಣೀಯ ನಟಿ - ಎಮ್‌ಟಿವಿ ಚಲನಚಿತ್ರ ಪ್ರಶಸ್ತಿ
೧೯೯೬ ಬೀವಿಸ್ ಅಂಡ್ ಬಟ್ಟ್-ಹೆಡ್ ಡು ಅಮೇರಿಕಾ ಡಲ್ಲಾಸ್ ಗ್ರೈಮಸ್ (ಧ್ವನಿ)
ಸ್ಟ್ರಿಪ್ಟೀಸ್ ಎರಿನ್ ಗ್ರಾಂಟ್
ದ ಹಂಚ್ ಬ್ಯಾಕ್ ಆಫ್ ನೋಟ್ರೆ ಡೆಮ್ ಎಸ್ಮೆರಾಲ್ಡ (ಧ್ವನಿ)
ದ ಜೂರರ್ ಆನ್ನೀ ಲೈರ್ಡ್
೧೯೯೭ ಡೀಕನ್ಸ್ಟ್ರಕ್ಟಿಂಗ್ ಹ್ಯಾರಿ ಹೆಲೆನ್/ಹ್ಯಾರ್ರಿಸ್ ಪಾತ್ರ
ಜಿ.ಐ ಜೇನ್ ಎಲ್ಟಿ ಜಾರ್ಡನ್ ಓ'ನೀಲ್ ನಾಮನಿರ್ದೇಶನ - ವಿಗ್ಗೋ ಮಾರ್ಟೆನ್ಸನ್ನೊಂದಿಗೆ ಅತ್ಯುತ್ತಮ ಹೊಡೆದಾಟಕ್ಕೆ ಎಮ್‌ಟಿವಿ ಚಲನಚಿತ್ರ ಪ್ರಶಸ್ತಿ
Destination Anywhere: The Film ಜೆನ್ನಿ ಸಣ್ಣ ಚಲನಚಿತ್ರ
೨೦೦೦ ಪ್ಯಾಸ್ಸನ್ ಆಫ್ ಮೈಂಡ್ ಮಾರ್ಥ ಮಾರಿ/'ಮಾರ್ಟಿ' ತಾಲ್ರಿಡ್ಜ್
೨೦೦೨ ದ ಹಂಚ್ ಬ್ಯಾಕ್ ಆಫ್ ನೋಟ್ರೆ ಡೆಮ್ II ಎಸ್ಮೆರಾಲ್ಡ (ಧ್ವನಿ) ನಾಮನಿರ್ದೇಶನ — "ಅತ್ಯುತ್ತಮ ಅನಿಮೇಟೆಡ್ ಕ್ಯಾರಕ್ಟರ್ ಅಭಿನಯ" ಡಿವಿಡಿ ಎಕ್ಷ್ಲೂಸಿವ್ ಪ್ರಶಸ್ತಿ
೨೦೦೩ Charlie's Angels: Full Throttle ಮಾಡಿಸನ್ ಲೀ ನಾಮನಿರ್ದೇಶನ — "ಸೆಕ್ಷೀಯಸ್ಟ್ ಶೀ-ವಿಲ್ಲನ್" (ವಿಲ್ಲನ ಮಾಸ್ ಸೆಕ್ಸಿ) ಎಂಟೀವೀ ಚಲನಚಿತ್ರ ಪ್ರಶಸ್ತಿ ಮೆಕ್ಸಿಕೋ
೨೦೦೬ ಹಾಫ್ ಲೈಟ್ ರೇಚಲ್ ಕಾರ್ಲ್ಸನ್ ನಿಯಮಿತ ಬಿಡುಗಡೆ, ಹೆಚ್ಚು ಪ್ರಾಂಥ್ಯಗಳಲ್ಲಿ ಸ್ಟ್ರೈಟ್-ಟು-ಡಿವಿಡಿ ಬಿಡುಗಡೆ.
ಬಾಬ್ಬಿ ವರ್ಜಿನಿಯಾ ಫಾಲನ್ ಹಾಲಿವುಡ್ ಚಲನಚಿತ್ರೋತ್ಸವದಲ್ಲಿ "ಎನ್ಸೆಮ್ಬಲ್ ಆಫ್ ದ ಇಯರ್"ಗಾಗಿ ಹಾಲಿವುಡ್ ಚಲನಚಿತ್ರ ಪ್ರಶಸ್ತಿ
| ನಾಮನಿರ್ದೇಶನ — "ಚಲನಚಿತ್ರದಲ್ಲಿ ನಟನ ಸಮೂಹದಿಂದ ಅತ್ಯುತ್ತಮ ಅಭಿನಯ"ಕ್ಕಾಗಿ 13ನೆ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ
೨೦೦೭ ಫ್ಲಾಲೆಸ್ ಲೌರಾ ಕ್ವಿನ್ನ್ ನಿಯಮಿತ ಬಿಡುಗಡೆ
ಮಿಸ್ಟರ್.ಬ್ರೂಕ್ಸ್ ಡಿಟೆಕ್ಟಿವ್ ಟ್ರೇಸಿ ಅಟ್ವುಡ್
೨೦೦೯ ಬನ್ರಾಕು ಅಲೆಕ್ಜಾನ್ಡ್ರಾ ನಿರ್ಮಾಣ-ನಂತರದ ಹಂತ
ಹಾಪ್ಪಿ ಟಿಯರ್ಸ್ ಲೌರ ನಿರ್ಮಾಣ-ನಂತರದ ಹಂತ
ದ ಜೋನೆಸಸ್ ಕೇಟ್ ಚಿತ್ರೀಕರಣ

ದೂರದರ್ಶನ

ದೂರದರ್ಶನ

ವರ್ಷ ಶಿರೋನಾಮ ಪಾತ್ರ ಟಿಪ್ಪಣಿಗಳು
1982-83 ಜೆನರಲ್ ಹಾಸ್ಪಿಟಲ್ ಜಾಕೀ ಟೆಂಪೆಲ್ಟನ್
೧೯೮೪ ದ ಮಾಸ್ತರ್ ಹಾಲಿ ಟ್ರಾಮ್ಬುಲ್ ೧ ಕಂತು
ಬೆಡ್ರೂಮ್ ನ್ಯಾನ್ಸಿ ಕಾಮೆಡಿ ಧಾರವಾಹಿ
೧೯೮೯ ಮೂನ್ ಲೈಟಿಂಗ್ (ದೂರದರ್ಶನ ಧಾರವಾಹಿ) ವುಮನ್ ಇನ್ ಎಲಿವೇಟರ್
೧೯೯೦ ಟೇಲ್ಸ್ ಫ್ರಂ ದ ಕ್ರಿಪ್ಟ್ ಕೇಥಿ ಮಾರ್ನೊ ೧ ಕಂತು, "ಡೆಡ್ ರೈಟ್"
೧೯೯೧ ಮಾಸ್ಟರ್ ನಿನ್ಜ ಹಾಲಿ ಟ್ರಾಮ್ಬುಲ್ ದೂರದರ್ಶನ ಚಲನಚಿತ್ರ
೧೯೯೬ ಇಫ್ ದೀಸ್ ವಾಲ್ಸ್ ಕುಡ ಟಾಕ್ ದೂರದರ್ಶನ ಚಲನಚಿತ್ರ
| ನಾಮನಿರ್ದೇಶನ - "ದೂರದರ್ಶನಕ್ಕಾಗಿ ಮಾಡಿರುವ ಅತ್ಯುತ್ತಮ ಚಲನಚಿತ್ರ"ಕ್ಕೆ 49ನೇ ಪ್ರೈಮ್ ಟೈಮ್ ಎಮ್ಮಿ ಪ್ರಶಸ್ತಿ
| ನಾಮನಿರ್ದೇಶನ - "ದೂರದರ್ಶನಕ್ಕಾಗಿ ಮಾಡಿರುವ ಸಣ್ಣ-ಧಾರವಾಹಿ/ಚಲನಚಿತ್ರಗಳಲ್ಲಿ ನಟಿಯರ ಅತ್ಯುತ್ತಮ ಅಭಿನಯ"ಕ್ಕಾಗಿ 54ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ
೧೯೯೭ ಎಲ್ಲೆನ್ ದ ಸಾಂಪಲ್ ಲೇಡಿ ೧ ಕಂತು "ದ ಪಪ್ಪಿ ಎಪಿಸೋಡ್: ಪಾರ್ಟ್ ೨"
೨೦೦೪ ವಿಲ್ ಅಂಡ್ ಗ್ರೇಸ್ ದ ಬೇಬಿಸಿಟ್ಟರ್ ಸಿಟ್-ಕಾಂ
೨೦೦೯ ದ ಮ್ಯಾಜಿಕ್ 7 ಯು-ಝೆಡ್-ಒನೆಸ (ಧ್ವನಿ) ದೂರದರ್ಶನದ ಅನಿಮೇಟೆಡ್ ಚಲನಚಿತ್ರ

ಉಲ್ಲೇಖಗಳು

ಬಾಹ್ಯ ಕೊಂಡಿಗಳು

  1. REDIRECT Template:Iobdb name

Tags:

ಡೆಮಿ ಮೂರ್ ಬಾಲ್ಯಡೆಮಿ ಮೂರ್ ಸಾಗಿ ಬಂದ ವೃತ್ತಿ ಮಾರ್ಗಡೆಮಿ ಮೂರ್ ವ್ಯಾನಿಟೀ ಫೇರ್ ವಿವಾದಡೆಮಿ ಮೂರ್ ವೈಯಕ್ತಿಕ ಜೀವನಡೆಮಿ ಮೂರ್ ಚಲನಚಿತ್ರಗಳ ಪಟ್ಟಿಡೆಮಿ ಮೂರ್ ಉಲ್ಲೇಖಗಳುಡೆಮಿ ಮೂರ್ ಬಾಹ್ಯ ಕೊಂಡಿಗಳುಡೆಮಿ ಮೂರ್ಅಮೆರಿಕಾಹಾಲಿವುಡ್

🔥 Trending searches on Wiki ಕನ್ನಡ:

ಕಾಳಿಕನ್ನಡ ಗುಣಿತಾಕ್ಷರಗಳುಶಿವಕುಮಾರ ಸ್ವಾಮಿಪರಿಸರ ವ್ಯವಸ್ಥೆನೀರುಕರ್ನಾಟಕದ ವಾಸ್ತುಶಿಲ್ಪಪ್ರಸ್ಥಭೂಮಿಕರ್ನಾಟಕ ಸ್ವಾತಂತ್ರ್ಯ ಚಳವಳಿಕಾಲಾಯ ತಸ್ಮೈ ನಮಃ (ಚಲನಚಿತ್ರ)ಜಾಗತೀಕರಣಚಿಪ್ಕೊ ಚಳುವಳಿಕರ್ನಾಟಕದ ಹಬ್ಬಗಳುಸಂಶೋಧನೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಲೆಕ್ಕ ಪರಿಶೋಧನೆಸೀಮೆನ್ಸ್ ಎಜಿಪುಸ್ತಕಒಂದನೆಯ ಮಹಾಯುದ್ಧಕೈಗಾರಿಕಾ ಕ್ರಾಂತಿಪೆರಿಯಾರ್ ರಾಮಸ್ವಾಮಿಮೈಗ್ರೇನ್‌ (ಅರೆತಲೆ ನೋವು)ಪ್ರವಾಹಗುರುರಾಜ ಕರಜಗಿಭಾರತೀಯ ೫೦೦ ಮತ್ತು ೧೦೦೦ ರೂಪಾಯಿ ನೋಟುಗಳ ಚಲಾವಣೆ ರದ್ದತಿಎಚ್ ೧.ಎನ್ ೧. ಜ್ವರಮೆಂತೆಅಕ್ಷಾಂಶ ಮತ್ತು ರೇಖಾಂಶಬರಗೂರು ರಾಮಚಂದ್ರಪ್ಪರೆವರೆಂಡ್ ಎಫ್ ಕಿಟ್ಟೆಲ್ಕರ್ನಾಟಕ ಲೋಕಸೇವಾ ಆಯೋಗಧರ್ಮ (ಭಾರತೀಯ ಪರಿಕಲ್ಪನೆ)ಸಂಖ್ಯಾಶಾಸ್ತ್ರಅತೀಶ ದೀಪಂಕರಜೈನ ಧರ್ಮಕಾಳಿದಾಸವಿಷುವತ್ ಸಂಕ್ರಾಂತಿಕರ್ನಾಟಕದ ಕಲೆ ಮತ್ತು ಸಂಸ್ಕೃತಿಜಾತ್ಯತೀತತೆಹನುಮಾನ್ ಚಾಲೀಸಪಟ್ಟದಕಲ್ಲುಭಾರತದ ರಾಷ್ಟ್ರೀಯ ಚಿನ್ಹೆಗಳುಅನಂತ್ ಕುಮಾರ್ ಹೆಗಡೆವೇದಮೂಢನಂಬಿಕೆಗಳುಭಾರತೀಯ ನಾಗರಿಕ ಸೇವೆಗಳುಭಾರತದಲ್ಲಿ ಬಡತನಬಡತನಬಂಡಾಯ ಸಾಹಿತ್ಯಮಲೇರಿಯಾಸಾರಾ ಅಬೂಬಕ್ಕರ್ವ್ಯಾಸರಾಯರುಹಸಿರು ಕ್ರಾಂತಿರಾಜ್ಯಸಭೆಕನಕದಾಸರುಬುಡಕಟ್ಟುಕಪಾಲ ನರಶೂಲೆಆರ್ಯ ಸಮಾಜದರ್ಶನ್ ತೂಗುದೀಪ್ಕನ್ನಡ ಕಾಗುಣಿತಸ್ವಾತಂತ್ರ್ಯಪೊನ್ನಮಹಾಭಾರತರವೀಂದ್ರನಾಥ ಠಾಗೋರ್ಅಡಿಕೆಶಬ್ದಮಣಿದರ್ಪಣಭಗವದ್ಗೀತೆಬುದ್ಧಪಂಪಅಂಬಿಕಾ (ಜೈನ ಧರ್ಮ)ಭಾರತ ರತ್ನಶ್ರೀ ರಾಘವೇಂದ್ರ ಸ್ವಾಮಿಗಳುಭೂಕಂಪಭಾರತೀಯ ಸ್ಟೇಟ್ ಬ್ಯಾಂಕ್ಕನ್ನಡದಲ್ಲಿ ವಚನ ಸಾಹಿತ್ಯಗಗನಯಾತ್ರಿತಾಳೀಕೋಟೆಯ ಯುದ್ಧಚಂದ್ರಗುಪ್ತ ಮೌರ್ಯ🡆 More