ಟ್ರೂ ಜೀಸಸ್ ಚರ್ಚ್

ಟ್ರೂ ಜೀಸಸ್ ಚರ್ಚ್ (True Jesus Church) ಒಂದು ಸ್ವತಂತ್ರ ಕ್ರೈಸ್ತ ಧರ್ಮದ ಚರ್ಚಾಗಿದೆ.

ಇದು ಕ್ರಿ.ಶ.೧೯೧೭ ರಲ್ಲಿ ಚೀನಾದ ರಾಜಧಾನಿ ಬೀಜಿಂಗ್ ನಗರದಲ್ಲಿ ಸ್ಥಾಪಿತವಾಯಿತು. ಪ್ರಸ್ತುತ ನಲವತ್ತೈದು ದೇಶಗಳಲ್ಲಿ ಸುಮಾರು ೧೫ ಲಕ್ಷ ಸದಸ್ಯರಿದ್ದಾರೆ. ಭಾರತದಲ್ಲಿ ಸದರಿ ಚರ್ಚ್ ಕ್ರಿ.ಶ.೧೯೩೨ ರಲ್ಲಿ ಪ್ರಾರಂಭವಾಗಿದೆ. ಇದು ಕ್ರಿಶ್ಚಿಯನ್ ಧರ್ಮದ ಪ್ರೊಟಸ್ಟಂಟ್ ಗುಂಪಿಗೆ ಸೇರಿದ ಚರ್ಚಾಗಿದೆ. ಈ ಚರ್ಚಿನ ಸದಸ್ಯರು ಕ್ರಿಸ್ಮಸ್ ಮತ್ತು ಈಸ್ಟರ್ ಹಬ್ಬಗಳನ್ನು ಆಚರಿಸುವುದಿಲ್ಲ. ಭಾರತದ ಕರ್ನಾಟಕ ರಾಜ್ಯದ ರಾಜಧಾನಿ ನಗರವಾದ ಬೆಂಗಳೂರಿನಲ್ಲಿ ಸದರಿ ಚರ್ಚ್ ಕ್ರಿ.ಶ.೧೯೭೭ ರಿಂದ ಕಾರ್ಯಪ್ರವೃತ್ತವಾಗಿದೆ.

ಟ್ರೂ ಜೀಸಸ್ ಚರ್ಚಿನ ಹತ್ತು ಪ್ರಮುಖ ನಂಬಿಕೆಗಳು.

ಏಸು ಕ್ರಿಸ್ತ

“ಶಬ್ದ”ವೇ ಶರೀರರೂಪದಲ್ಲಿ ವ್ಯಕ್ತನಾದ ಯೇಸು ಕ್ರಿಸ್ತನು ಪಾಪಿಗಳ ಉದ್ಧಾರಕ್ಕಾಗಿ ಶಿಲುಬೆಯ ಮೇಲೆ ಮರಣಹೊಂದಿದನು; ಮೂರನೆಯ ದಿನ ಪುನರುತ್ಥಾನನಾಗಿ ಸ್ವರ್ಗಾರೋಹಣೆಯನ್ನು ಮಾಡಿದನು. ಅವನೊಬ್ಬನೇ ಮನುಕುಲದ ಏಕೈಕ ರಕ್ಷಕನು; ಸ್ವರ್ಗ ಮತ್ತು ಭೂಮಿಯ ಸೃಷ್ಟಿಕರ್ತನು; ಹಾಗು ಏಕೈಕ ನಿಜ ದೇವರು.

ಪವಿತ್ರ ಬೈಬಲ್

"ಹಳೆಯ ಹಾಗು ಹೊಸ ಒಡಂಬಡಿಕೆಗಳನ್ನು ಒಳಗೊಂಡ ಪವಿತ್ರ ಬೈಬಲ್ ದೇವರಿಂದ ಪ್ರೇರಿತವಾಗಿದೆ, ಇದು ಏಕೈಕವಾದ ಆಧ್ಯಾತ್ಮಿಕ ಸತ್ಯ ಮತ್ತು ಕ್ರಿಶ್ಚಿಯನ್ ಜೀವನಶೈಲಿಗೆ ಇದು ಪ್ರಮಾಣವಾಗಿರುತ್ತದೆ."

ಮೋಕ್ಷ

"ಶ್ರದ್ಧೆಯ ಮೂಲಕ ದೇವರ ಕರುಣೆಯಿಂದ ಮೋಕ್ಷವು ಲಭಿಸುವದು. ಶ್ರದ್ಧಾವಂತರು ಪವಿತ್ರತೆಯ ಸದೈವ ಆಚರಣೆಗಾಗಿ, ದೇವರನ್ನು ಗೌರವಿಸುವದಕ್ಕಾಗಿ ಹಾಗು ಮನುಕುಲವನ್ನು ಪ್ರೀತಿಸಲು ಪವಿತ್ರ ಆತ್ಮನನ್ನು ಆಧರಿಸಬೇಕು".

ಪವಿತ್ರ ಆತ್ಮ

"ನುಡಿಯು ಪವಿತ್ರ ಆತ್ಮದ ಆಗಮನದ ಕುರುಹು, ಸ್ವರ್ಗರಾಜ್ಯದ ನಮ್ಮ ಉತ್ತರಾಧಿಕಾರತ್ವಕ್ಕೆ ಪ್ರಮಾಣವಚನ".

ದೀಕ್ಷೆ

"ಪಾಪಕ್ಷಾಲನೆಗೆ ಹಾಗು ನವಜೀವನಕ್ಕೆ ಉದಕದೀಕ್ಷೆಯು ಪವಿತ್ರವಿಧಿಯಾಗಿದೆ. ಉದಕದೀಕ್ಷೆಯನ್ನು ನೈಸರ್ಗಿಕ ಸಜೀವ ಜಲದಲ್ಲಿ, ಅಂದರೆ ಹೊಳೆ,ಕಡಲು ಅಥವಾ ಝರಿಗಳಲ್ಲಿ ಕೊಡಲಾಗುವದು. ಪವಿತ್ರ ಆತ್ಮನಿಂದ ಈಗಾಗಲೆ ಉದಕದೀಕ್ಷೆಯನ್ನು ಪಡೆದ ದೀಕ್ಷಾಕಾರನು ಪ್ರಭು ಯೇಸು ಕ್ರಿಸ್ತನ ಹೆಸರಿನಲ್ಲಿ ಉದಕದೀಕ್ಷೆಯನ್ನು ಪ್ರದಾನಿಸುತ್ತಾನೆ. ದೀಕ್ಷಾಧಾರಕನು ಕೆಳಮುಖವಾಗಿ, ನತಮಸ್ತಕನಾಗಿ, ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿಕೊಂಡವನಾಗಿರಬೇಕು."

ಕಾಲು ತೊಳೆಯುವಿಕೆ

"ಪಾದಪ್ರಕ್ಷಾಲನೆಯಿಂದ ಪ್ರಭು ಯೇಸುವಿನೊಂದಿಗೆ ಭಾಗ ಪಡೆಯಲು ಸಾಧ್ಯವಾಗುವದು. ಇದು ಪ್ರೀತಿ, ಪಾವಿತ್ರ್ಯ, ವಿನಯ, ಕ್ಷಮಾಶೀಲತೆ ಮತ್ತು ಸೇವೆ ಇವನ್ನು ತಾದಾತ್ಮ್ಯಗೊಳಿಸಲು ಸದೈವ ಎಚ್ಚರಿಕೆಯಾಗುವುದು. ಉದಕದಿಕ್ಷೆಯನ್ನು ಪಡೆದ ಪ್ರತಿಯೋರ್ವನೂ ಪ್ರಭು ಯೇಸು ಕ್ರಿಸ್ತನ ಹೆಸರಿನಲ್ಲಿ ತನ್ನ ಕಾಲುಗಳನ್ನು ತೊಳೆದುಕೊಳ್ಳಬೇಕು. ಉಚಿತ ಸಂದರ್ಭಗಳಲ್ಲಿ ಪರಸ್ಪರ ಪಾದಪ್ರಕ್ಷಾಲನೆಯ ರೂಢಿ ಇದೆ".

ಸಬ್ಬತ್ ದಿನ

"ದೇವರಿಂದ ಹರಕೆಯನ್ನು ಪಡೆದ ಹಾಗು ಪವಿತ್ರಗೊಳಿಸಲ್ಪಟ್ಟ ಸಬ್ಬತ್ ದಿನ,- ವಾರದ ಏಳನೆಯ ದಿನ (ಶನಿವಾರ)-, ಪವಿತ್ರ ದಿನವಾಗಿರುತ್ತದೆ. ದೇವರ ಸೃಷ್ಟಿಯ ಸ್ಮರಣೆಯಲ್ಲಿ , ಮೋಕ್ಷಾರ್ಥವಾಗಿ ಮತ್ತು ಆಗಮಿಕ ಜೀವನದಲ್ಲಿ ಶಾಶ್ವತ ಶಾಂತಿಯನ್ನು ಪಡೆಯುವ ನಂಬಿಕೆಯಲ್ಲಿ ಇದನ್ನು ದೇವರ ಕರುಣೆಯಿಂದ ಆಚರಿಸಲಾಗುತ್ತದೆ".

ಚರ್ಚು

"‘ಉತ್ತರ ವರ್ಷಾ’ದ ಕಾಲದಲ್ಲಿ ಪವಿತ್ರ ಆತ್ಮನ ಮುಖಾಂತರ ಪ್ರಭು ಯೇಸು ಕ್ರಿಸ್ತನಿಂದ ಸ್ಥಾಪಿಸಲ್ಪಟ್ಟ ‘ಸತ್ಯ ಯೇಸು ಚರ್ಚ’ ಇದು ‘ದೇವದೂತನ ಕಾಲ’ದ ನಿಜವಾದ ಚರ್ಚಿನ ಪುನರುಜ್ಜೀವಿತ ಚರ್ಚ ಆಗಿರುತ್ತದೆ".

ಅಂತಿಮ ನಿರ್ಣಯದ ದಿನ

"ಮರ್ತ್ಯಲೋಕದ ನ್ಯಾಯನಿರ್ಣಯಕ್ಕಾಗಿ ಪ್ರಭುವು ಅಂತಿಮ ದಿನದಂದು ಆಗಮಿಸುವಾಗ, ಪ್ರಭುವಿನ ಎರಡನೆಯ ಆಗಮನವಾಗುವದು: ಸತ್ಯವಂತರಿಗೆ ಶಾಶ್ವತ ಜೀವನ ದೊರೆಯುವದು, ನೀಚಜೀವಿಗಳಿಗೆ ಕೊನೆಯಿಲ್ಲದ ದಂಡನೆ".

ಪವಿತ್ರ ಸಮ್ಮಿಲನ

“ಪ್ರಭು ಯೇಸುವಿನ ಮರಣದ ಸ್ಮರಣೆಯ ಪವಿತ್ರ ವಿಧಿಯೇ ‘ಪವಿತ್ರ ಸಮ್ಮಿಲನ’. ಇದರಿಂದ ನಮ್ಮ ಪ್ರಭುವಿನ ಶರೀರದ ಭೋಕ್ತರಾಗಲು ಹಾಗು ಅವನೊಡನೆ ಸಮ್ಮಿಲನದಲ್ಲಿರಲು ,ತತ್ಕಾರಣವಾಗಿ ಶಾಶ್ವತ ಜೀವನ ಪಡೆಯಲು ಮತ್ತು ಅಂತಿಮ ದಿನದಂದು ಮೇಲೇಳಲು ನಮಗೆ ಸಾಧ್ಯವಾಗುತ್ತದೆ. ಈ ಪವಿತ್ರ ವಿಧಿಯನ್ನು ಸಾಧ್ಯವಾದಷ್ಟು ಸಲ ಆಚರಿಸಬೇಕು. ಕೇವಲ ಒಂದೇ ಒಂದು ಕಚ್ಚಾ ರೊಟ್ಟಿ ಹಾಗು ದ್ರಾಕ್ಷಾರಸವನ್ನು ಉಪಯೋಗಿಸಬೇಕು.”

ಉಲೇಖಗಲಳು

Tags:

ಟ್ರೂ ಜೀಸಸ್ ಚರ್ಚ್ ಟ್ರೂ ಜೀಸಸ್ ಚರ್ಚಿನ ಹತ್ತು ಪ್ರಮುಖ ನಂಬಿಕೆಗಳು.ಟ್ರೂ ಜೀಸಸ್ ಚರ್ಚ್ ಉಲೇಖಗಲಳುಟ್ರೂ ಜೀಸಸ್ ಚರ್ಚ್ಈಸ್ಟರ್ಕರ್ನಾಟಕಕ್ರೈಸ್ತ ಧರ್ಮಚೀನಾಬೀಜಿಂಗ್ಬೆಂಗಳೂರುಭಾರತ

🔥 Trending searches on Wiki ಕನ್ನಡ:

ಆಸನ (ಯೋಗ)ವೈ ಎಸ್. ಜಗನ್ಮೋಹನ್ ರೆಡ್ಡಿಧರ್ಮಸ್ಥಳಫುಟ್ ಬಾಲ್ಜನಪದ ಕಲೆಗಳುನಕ್ಷತ್ರಕರ್ನಾಟಕ ಜನಪದ ನೃತ್ಯಉಳ್ಳಾಲಕಂಪ್ಯೂಟರ್ಉಡುಪಿ ಜಿಲ್ಲೆಯಕೃತ್ತುವೀರಗಾಸೆರಾಷ್ಟ್ರೀಯ ಸೇವಾ ಯೋಜನೆಅರಿಸ್ಟಾಟಲ್‌ಬೊಜ್ಜುಹೆಚ್.ಡಿ.ಕುಮಾರಸ್ವಾಮಿಶಬರಿಚೋಳ ವಂಶಉತ್ಪಾದನೆಗೋವಿಂದ III (ರಾಷ್ಟ್ರಕೂಟ)ಕಬ್ಬುಶಬ್ದಸಾರ್ವಜನಿಕ ಹಣಕಾಸುದಕ್ಷಿಣ ಕನ್ನಡಭಾರತದ ಆರ್ಥಿಕ ವ್ಯವಸ್ಥೆಜಾಗತೀಕರಣಆಟಿಸಂಬಾರ್ಲಿಕರ್ನಾಟಕದ ಶಾಸನಗಳುಜೀವಕೋಶಮುಂಡರಗಿಮಂಗರವಳ್ಳಿಭಾರತ ಸಂವಿಧಾನದ ಪೀಠಿಕೆಕಮಲಕೇಂದ್ರ ಸಾಹಿತ್ಯ ಅಕಾಡೆಮಿರಚಿತಾ ರಾಮ್ಭಾರತೀಯ ಸಂಸ್ಕೃತಿಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುದೇಶಗಳ ವಿಸ್ತೀರ್ಣ ಪಟ್ಟಿರಜಪೂತಕಂಸಾಳೆಪಂಚತಂತ್ರಪರಿಸರ ರಕ್ಷಣೆಅಗಸ್ಟ ಕಾಂಟ್ಬೃಂದಾವನ (ಕನ್ನಡ ಧಾರಾವಾಹಿ)ಕಲಿಯುಗಭಾರತದಲ್ಲಿ ಬಡತನಹಣದುಬ್ಬರಅಂಬಿಕಾ (ಚಿತ್ರನಟಿ)ಬಿ. ಎಂ. ಶ್ರೀಕಂಠಯ್ಯಹಿಂದೂ ಕೋಡ್ ಬಿಲ್ಗಾದೆಐಹೊಳೆ ಶಾಸನಸ್ತನ್ಯಪಾನಸಾಲುಮರದ ತಿಮ್ಮಕ್ಕಕದಂಬ ಮನೆತನಸಂಶೋಧನೆಯಕ್ಷಗಾನಕೆ.ವಿ.ಸುಬ್ಬಣ್ಣಬಾಲ್ಯದ ಸ್ಥೂಲಕಾಯಊಳಿಗಮಾನ ಪದ್ಧತಿಸಸ್ಯರೋಸ್‌ಮರಿರಾಜ್ಯಸಭೆಸಮಾಜಶಾಸ್ತ್ರಆತ್ಮಚರಿತ್ರೆವಾಲಿಬಾಲ್ದ. ರಾ. ಬೇಂದ್ರೆಮಾನವನಲ್ಲಿ ರಕ್ತ ಪರಿಚಲನೆಬೌದ್ಧ ಧರ್ಮಕರ್ನಾಟಕ ಪೊಲೀಸ್ಕುಟುಂಬರಾಜಕೀಯ ವಿಜ್ಞಾನಗೊರೂರು ರಾಮಸ್ವಾಮಿ ಅಯ್ಯಂಗಾರ್ದಿಕ್ಸೂಚಿಗೋವಿಂದ (ರಾಷ್ಟ್ರಕೂಟ)ತಾಜ್ ಮಹಲ್ಮಹಮದ್ ಬಿನ್ ತುಘಲಕ್🡆 More