ತಿರುಮಕೂಡಲು ಚೌಡಯ್ಯ

ಮೈಸೂರ್ ಪಿಟೀಲು ಚೌಡಯ್ಯ, (ಜನವರಿ ೧.೧೮೯೫ - ಜನವರಿ ೧೯, ೧೯೬೭) ಖ್ಯಾತರಾಗಿರುವ ಪಿಟೀಲ್ ವಾದಕರು, ಶಾಸ್ತ್ರೀಯ ಸಂಗೀತ ವಲಯದಲ್ಲಿ ಚಿರಸ್ಮರಣೀಯವಾಗಿದೆ.

ತಮ್ಮ ಸಂಗೀತ ಪಾಂಡಿತ್ಯ ಮತ್ತು ಹೆಚ್ಚುಗಾರಿಕೆಯಿಂದ ಹೆಸರಾದವರು. ಇಂದಿಗೂ ಕರ್ನಾಟಕದಲ್ಲಿ ಪಿಟೀಲಿನೊಂದಿಗೆ ಜೋಡಿಸಿದ ಹೆಸರೆಂದರೆ ಚೌಡಯ್ಯನವರದ್ದೇ.'ಬೆಂಗಳೂರಿನ ವೈಯಾಲಿಕಾವಲ್‌'ನಲ್ಲಿರುವ ಚೌಡಯ್ಯ ಸ್ಮಾರಕ ಭವನ “ಪಿಟೀಲಿನ’ ಆಕಾರದಲ್ಲೇ ಇದೆ.

ಚಿತ್ರ:T-chowdiah.gif
'ತಿರುಮಕೂಡಲು ಚೌಡಯ್ಯ'
ತಿರುಮಕೂಡಲು ಚೌಡಯ್ಯ
ಮೂಲಸ್ಥಳತಿರುಮಕೂಡಲು ನರಸೀಪುರ, ಮೈಸೂರು ಜಿಲ್ಲೆ, ಕರ್ನಾಟಕ
ಸಂಗೀತ ಶೈಲಿಕರ್ನಾಟಕ ಸಂಗೀತ
ವೃತ್ತಿಪಿಟೀಲು ವಾದಕ
ಚಿತ್ರ:ChoudayaSmarkBhvnEntce.jpg
'ಚೌಡಯ್ಯ ಸ್ಮಾರಕ ಭವನದ ಪ್ರಮುಖ ದ್ವಾರ'

ಜನನ, ಬಾಲ್ಯ

'ತಿರುಮಕೂಡಲು ಚೌಡಯ್ಯ' ಆಗತ್ಸ್ಯ ಗೌಡ, ಹಾಗೂ ಸುಂದರಮ್ಮ ದಂಪತಿಗಳ ಮಗನಾಗಿ ಜನಿಸಿದರು. ಚಿಕ್ಕವಯಸ್ಸಿನಿಂದಲೇ ಬಾಲಕ ಚೌಡಯ್ಯನಿಗೆ ಸಂಗೀತದಲ್ಲಿ ಸಂಗೀತ ವಾದ್ಯಗಳನ್ನು ನುಡಿಸುವುದರಲ್ಲಿ ಅಪರಿಮಿತ ಆಸಕ್ತಿಯಿತ್ತು.ಬಿಡಾರಮ್ ಕೃಷ್ಣಪ್ಪನವರಲ್ಲಿ ಹದಿನೆಂಟು ವರ್ಷ ಸಂಗೀತಾಬ್ಯಾಸ ಮಾಡಿದ ಚೌಡಯ್ಯನವರು ಅಸಾಧಾರಣ ಪಾಂಡಿತ್ಯ ಪಡೆದರು. ತಿರುಚಿ ಗೋವಿಂದ ಸ್ವಾಮಿಗಳಿಂದ ಹೆಚ್ಹಿನ ಪರಿಣತಿ ಪಡೆದರು.ಕರ್ನಾಟಕ ಸಂಗೀತ ಪ್ರಕಾರದ ಒಬ್ಬ ಪ್ರಮುಖ ಪಿಟೀಲು ವಾದಕರಾಗಿದ್ದವರು. ಪಿಟೀಲು ಟಿ.ಚೌಡಯ್ಯನವರು ಅಭಿನಯಿಸಿದ ಚಿತ್ರದ ಹೆಸರು “ವಾಣಿ”. ಅದರಲ್ಲಿ ಅವರೇ ನಾಯಕ. ವಿಶೇಷವೆಂದರೆ ಪಂಡರೀಬಾಯಿ ಮತ್ತು ಮುಸುರಿ ಕೃಷ್ಣಮೂರ್ತಿಯವರ ಮೊದಲ ಚಿತ್ರವೂ ಅದೇ.

ವಾಣಿ ಚಿತ್ರದಲ್ಲಿ ಅಭಿನಯಿಸಿದ್ದರು

ಇಂಥ ಸಂಗೀತ ವಿದ್ವಾಂಸ ನಾಯಕ ನಟನಾಗಿ ಚಿತ್ರದಲ್ಲಿ ಅಭಿನಯಿಸಿದ್ದರು. 'ನಟ ಅಂಬರೀಷನ ತಾತ'ನವರಾದ ಚೌಡಯ್ಯನವರು ೧೯೪೩ ರಲ್ಲಿ ಬಿಡುಗಡೆಯಾದ “ವಾಣಿ’ ಚಿತ್ರದಲ್ಲಿ ತಂದೆ ಮತ್ತು ಮಗನಾಗಿ ದ್ವಿಪಾತ್ರದಲ್ಲಿ ಅಭಿನಯಿಸಿದ್ದರು, ಅದರ ಇಂಗ್ಲಿಷ್ ನ ಟೈಟಲ್ “violinist’. ಸಂಗೀತ ಪ್ರಧಾನವಾದ ಚಿತ್ರ. ಇದರಲ್ಲಿನ ಹಾಡಿಗೆ ಸ್ವತಃ ಅವರೇ ಸಂಗೀತ ಸಂಯೋಜಿಸಿದ್ದರು. ಇಡೀ ಚಿತ್ರದ ಸಂಗೀತ ನಿರ್ದೇಶನವನ್ನು ಮತ್ತೊಬ್ಬ ಸಹಾಯಕನೊಂದಿಗೆ ಪೂರೈಸಿದ್ದರು. ಚೌಡಯ್ಯನವರು, ೧೯೫೨-೧೯೫೮ ರವರೆಗೆ 'ವಿದಾನ ಪರಿಷತ್ ಸದಸ್ಯ'ರಾಗಿದ್ದರು.

ಪ್ರಶಸ್ತಿ ಪುರಸ್ಕಾರಗಳು

  • ಚೌಡಯ್ಯನವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ನೀಡಿದ "ಸಂಗೀತ ರತ್ನ'(೧೯೪೧)
  • ಮದ್ರಾಸ್ ಸಂಗೀತ ಅಕಾಡೆಮಿ ನೀಡಿದ "ಸಂಗೀತ ಕಲಾನಿದಿ"
  • ಮೈಸೂರ್ ಸಂಗೀತ ಪರಿಷತ್ ನೀಡಿದ "ಗಾನ ಕಲಾ ಸಿಂಧು" ಮುಂತಾದ ಅನೇಕ ಪ್ರಶಸ್ತಿಗಳು ಲಭಿಸಿವೆ.

[ಶಾಶ್ವತವಾಗಿ ಮಡಿದ ಕೊಂಡಿ][ಶಾಶ್ವತವಾಗಿ ಮಡಿದ ಕೊಂಡಿ]

Tags:

ಚೌಡಯ್ಯ ಸ್ಮಾರಕ ಭವನಜನವರಿ ೧೯೧೯೬೭

🔥 Trending searches on Wiki ಕನ್ನಡ:

ಹಂಪೆಎಸ್. ಎಂ. ಪಂಡಿತ್ದಿನೇಶ್ ಕಾರ್ತಿಕ್ಸ್ನೇಹಿತರು (ಚಲನಚಿತ್ರ)ರಗಳೆಡೈಸಿ ಬೋಪಣ್ಣಸಂಸ್ಕಾರಕನ್ನಡ ಸಾಹಿತ್ಯ ಪರಿಷತ್ತುಪ್ರಬಂಧ ರಚನೆಕಬಡ್ಡಿವೀರೇಂದ್ರ ಹೆಗ್ಗಡೆಉಪನಯನನಾಮಪದಭೂತಾರಾಧನೆಎಲ್.ಎಸ್. ಬೆವಿಂಗ್ಟನ್ಹದಿಹರೆಯಅಟಲ್ ಬಿಹಾರಿ ವಾಜಪೇಯಿಜನಪದ ಕಲೆಗಳುಎಸ್.ಎಲ್. ಭೈರಪ್ಪಚಂದ್ರಯಾನ-೩ಭಾರತದ ಇತಿಹಾಸಬಂಡಾಯ ಸಾಹಿತ್ಯರಕ್ತಪಿಶಾಚಿಸೈನ್ಯಅಳಿಲುಕ್ರಿಯಾಪದಕನ್ನಡದಲ್ಲಿ ಮಹಿಳಾ ಸಾಹಿತ್ಯಉಳ್ಳಾಲಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಪುಸ್ತಕಅಲಂಕಾರಕರ್ನಾಟಕದ ವಾಸ್ತುಶಿಲ್ಪಹಳೇಬೀಡುವ್ಯಂಜನವಡ್ಡಾರಾಧನೆಡಿ.ಕೆ ಶಿವಕುಮಾರ್ಬ್ರಾಹ್ಮಣಭಾರತ ಸಂವಿಧಾನದ ಪೀಠಿಕೆಪಂಚಾಂಗಶಿಶುನಾಳ ಶರೀಫರುಭಾರತದ ಜನಸಂಖ್ಯೆಯ ಬೆಳವಣಿಗೆಕಾಂತಾರ (ಚಲನಚಿತ್ರ)ಅರಿಸ್ಟಾಟಲ್‌ಭಾರತೀಯ ಸಂವಿಧಾನದ ತಿದ್ದುಪಡಿಯೋಗವಾಹವಾಲಿಬಾಲ್ಹೆಸರುಇರಾನ್ಭಾರತೀಯ ಕಾವ್ಯ ಮೀಮಾಂಸೆಟಿಪ್ಪು ಸುಲ್ತಾನ್ಉಡುಪಿ ಜಿಲ್ಲೆಕನ್ನಡ ರಂಗಭೂಮಿಗ್ರಾಮ ಪಂಚಾಯತಿಭೌಗೋಳಿಕ ಲಕ್ಷಣಗಳುಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಕರ್ನಾಟಕದ ಶಾಸನಗಳುಪು. ತಿ. ನರಸಿಂಹಾಚಾರ್ಭಾಷೆಅಲ್ಲಮ ಪ್ರಭುಚಿತ್ರದುರ್ಗಭಾರತದ ಸಂಸತ್ತುಮೊದಲನೆಯ ಕೆಂಪೇಗೌಡಮಂತ್ರಾಲಯಶ್ವೇತ ಪತ್ರಬುಡಕಟ್ಟುನಾಗಚಂದ್ರಜೋಳಕಲ್ಯಾಣಿಕನ್ನಡ ಕಾವ್ಯಭಾರತೀಯ ಭಾಷೆಗಳುವ್ಯವಸಾಯಗೂಗಲ್ಆಂಡಯ್ಯಲೋಕಸಭೆಶಬರಿಕೋಳಿ🡆 More