ಜ್ಯೋತ್ಸ್ನಾ ಕಾಮತ್

ಡಾ.ಜ್ಯೋತ್ಸ್ನಾ ಕಾಮತ್ (೧೯೩೭-೨೦೨೨) ಒಬ್ಬ ಹೆಸರಾಂತ ಸಂಶೋಧಕಿ, ದಕ್ಷ ಆಡಳಿತಗಾರ್ತಿ ಮತ್ತು ಕನ್ನಡ ಸಾಹಿತ್ಯಲೋಕದಲ್ಲಿ ಬರಹಗಾರ್ತಿ.

ಬೆಂಗಳೂರು ಆಕಾಶವಾಣಿಯಲ್ಲಿ ನಿರ್ದೇಶಕಿಯಾಗಿ ಕೆಲಸ ಮಾಡಿದವರು. ಪತಿ ಡಾ.ಕೃಷ್ಣಾನಂದ ಕಾಮತ, ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿತವಾದ ಹೆಸರು. ಮಗ ವಿಕಾಸ್ ಕಾಮತ್, ಸೊಸೆ ಕಿಮ್‌ ಕಾಮತ್,‌ ಹಾಗೂ ಮೊಮ್ಮಗಳು ಮೀನಾ ಕಾಮತ್.‌ಈ ಪರಿವಾರದವರ ಅಂತರ್ಜಾಲ ತಾಣವೊಂದಿದೆ.[೧]

ಜ್ಯೋತ್ಸ್ನಾ ಕಾಮತ್
ಡಾ.ಜ್ಯೋತ್ಸ್ನಾ ಕಾಮತ್

ಜನನ,ವಿದ್ಯಾಭ್ಯಾಸ

ಜ್ಯೋತ್ಸ್ನಾ ೧೯೩೭ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಜನಿಸಿದರು. ತಂದೆ ಗಣೇಶರಾವ್, ವೃತ್ತಿಯಲ್ಲಿ ಪೋಸ್ಟ್ ಮಾಸ್ಟರ್ ಮತ್ತು ತಾಯಿ ಶಾರದಾಬಾಯಿ. ಜ್ಯೋತ್ಸ್ನಾ ಅವರ ವಿದ್ಯಾಭ್ಯಾಸವೆಲ್ಲ ಉತ್ತರ ಕನ್ನಡದಲ್ಲಿ ಮತ್ತು ಧಾರವಾಡಜಿಲ್ಲೆಯಲ್ಲಿ ನಡೆಯಿತು. ಕುಮಟಾದ ಕೆನೆರಾ ಕಾಲೇಜಿನಲ್ಲಿ ೧೯೫೭ರಲ್ಲಿ ಬಿ.ಎ. ಪದವಿ ಪಡೆದರು. ಸಂಸ್ಕೃತ ಹಾಗೂ ಇತಿಹಾಸದಲ್ಲಿ ವಿಶೇಷ ಒಲವಿತ್ತು. ಬಿ.ಎ.ಪದವಿಯ ನಂತರ 'ಡಿಪ್ಲೊಮ ಇನ್ ಎಜುಕೇಷನ್' ನಲ್ಲಿ ಒಂದು ವರ್ಷ ಅಧ್ಯಯನ ಮಾಡಿ ಧಾರವಾಡದ ವನಿತಾ ಹೈಸ್ಕೂಲ್ ನಲ್ಲಿ ಅಧ್ಯಾಪಕಿಯಾಗಿ ಸೇರಿದರು. ಮುಂದೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಎಂ.ಎ.ಪದವಿ ಗಳಿಸಿದರು.

ವೃತ್ತಿಜೀವನ

ಡಾ.ಬಿ.ಎ.ಸಾಲೆತೊರೆ, ಡಾ.ಪಿ.ಬಿ.ದೇಸಾಯಿ ಮತ್ತು ಡಾ. ಜಿ ಎಸ್ ದೀಕ್ಷಿತ್ ರಂತಹ ಇತಿಹಾಸ ವಿದ್ವಾಂಸರ ಪ್ರಭಾವಕ್ಕೆ ಒಳಗಾಗಿದ್ದ ಜ್ಯೋತ್ಸ್ನಾ ಎರಡು ವರ್ಷ ಸಹಾಯಕ ಸಂಶೋಧಕಿಯಾಗಿ ಕೆಲಸ ನಿರ್ವಹಿಸಿದರು. ಯುಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಜ್ಯೋತ್ಸ್ನಾರವರು, ೧೯೬೪ ರಲ್ಲಿ ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕಿಯಾಗಿ ಸೇರಿದರು. ಮುಂದೆ ಕೋಲ್ಕತ, ಜೈಪುರ್, ಮುಂಬಯಿ, ಮೈಸೂರು ಮತ್ತು ಬೆಂಗಳೂರು ನಗರಗಳ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ ಕೊನೆಗೆ ಬೆಂಗಳೂರು ಆಕಾಶವಾಣಿಯಲ್ಲಿ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿ ೧೯೯೪ರಲ್ಲಿ ನಿವೃತ್ತಿ ಹೊಂದಿದರು. ಅವರು ಆಕಾಶವಾಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಬಿತ್ತರಗೊಂಡ ಎರಡು ಕಾರ್ಯಕ್ರಮಗಳನ್ನು- 'ಗಾಂಧಿ-ಒಂದು ಪುನರ್ದರ್ಶನ' ಮತ್ತು 'ಹಿರಿಯರ ಯುಗಾದಿ ಮೇಳ'- ಪುಸ್ತಕರೂಪದಲ್ಲೂ ಪ್ರಕಟಿಸಿದರು.

ಕೃತಿಗಳು

  • ಸಂಸಾರದಲ್ಲಿ ಸ್ವಾರಸ್ಯ (ಪ್ರಬಂಧಗಳ ಸಂಕಲನ)
  • ಕರ್ನಾಟಕ ಶಿಕ್ಷಣ ಪರಂಪರೆ (ಶಿಕ್ಷಣ)
  • ಹೀಗಿದ್ದೇವೆ ನಾವು (ಹಾಸ್ಯ)
  • ಮಹಿಳೆ 'ಅಂದು-ಇಂದು'
  • ನೆನಪಿನಲ್ಲಿ ನಿಂತವರು
  • ನಗೆ ಕೇದಿಗೆ
  • ನಗೆ ನವಿಲು

ಪ್ರಶಸ್ತಿಗಳು

೧೯೯೧ ರಲ್ಲಿ ಕರ್ನಾಟಕ ಸರ್ಕಾರವು ಜ್ಯೋತ್ಸ್ನಾ ಅವರಿಗೆ "ರಾಜ್ಯೋತ್ಸವ ಪ್ರಶಸ್ತಿ" ನೀಡಿ ಗೌರವಿಸಿದೆ. ಅವರ 'ಕರ್ನಾಟಕ ಶಿಕ್ಷಣ ಪರಂಪರೆ' ಕೃತಿಗೆ ಉತ್ತಮ ಸಂಶೋಧನಾ ಗ್ರಂಥವೆಂದು ಪರಿಗಣಿಸಿ ಕರ್ನಾಟಕ ಸಾಹಿತ್ಯ ಅಕೆಡಮಿಯಿಂದ ವಿಶೇಷ ಪುರಸ್ಕಾರ ದೊರೆತಿದೆ. ಕನ್ನಡ ಸಾಹಿತ್ಯ ಸಂಶೋದನೆಗಾಗಿ 'ಕಿಟ್ಟಲ್ ಪುರಸ್ಕಾರ' ದೊರೆತಿದೆ.

ನಿಧನ

೮೬ ವರ್ಷದ ಜೋತ್ಸ್ನ ಕಾಮತ್ ರವರು ಸುಮಾರು ಸಮಯದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಬೆಂಗಳೂರಿನಲ್ಲಿ ಅವರ ಮಲ್ಲೇಶ್ವರಂ ಬಡಾವಣೆಯ ಮನೆಯಲ್ಲಿ ೨೪,ಆಗಸ್ಟ್, ೨೦೨೨ ರಂದು ನಿಧನರಾದರು.

ಹೊರಗಿನ ಸಂಪರ್ಕಗಳು

Tags:

ಜ್ಯೋತ್ಸ್ನಾ ಕಾಮತ್ ಜನನ,ವಿದ್ಯಾಭ್ಯಾಸಜ್ಯೋತ್ಸ್ನಾ ಕಾಮತ್ ವೃತ್ತಿಜೀವನಜ್ಯೋತ್ಸ್ನಾ ಕಾಮತ್ ಕೃತಿಗಳುಜ್ಯೋತ್ಸ್ನಾ ಕಾಮತ್ ಪ್ರಶಸ್ತಿಗಳುಜ್ಯೋತ್ಸ್ನಾ ಕಾಮತ್ ನಿಧನಜ್ಯೋತ್ಸ್ನಾ ಕಾಮತ್ ಹೊರಗಿನ ಸಂಪರ್ಕಗಳುಜ್ಯೋತ್ಸ್ನಾ ಕಾಮತ್ಆಕಾಶವಾಣಿಕನ್ನಡಕೃಷ್ಣಾನಂದ ಕಾಮತಬೆಂಗಳೂರು

🔥 Trending searches on Wiki ಕನ್ನಡ:

ಯೋಗಹಸ್ತಪ್ರತಿಭಾರತದಲ್ಲಿನ ಶಿಕ್ಷಣಚಂಪೂಶಾಂತಲಾ ದೇವಿಸಂವತ್ಸರಗಳುಬಸವಲಿಂಗ ಪಟ್ಟದೇವರುಗೀತಾ ನಾಗಭೂಷಣಕ್ರೀಡೆಗಳುಕನ್ನಡ ಬರಹಗಾರ್ತಿಯರುದಿವ್ಯಾಂಕಾ ತ್ರಿಪಾಠಿಕರಗಕುರಿಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ಸ್ತ್ರೀಕರ್ನಾಟಕ ಸ್ವಾತಂತ್ರ್ಯ ಚಳವಳಿಸಂಸ್ಕೃತಿಕೇಶಿರಾಜಜಾಗತಿಕ ತಾಪಮಾನಕುರುಬಅವರ್ಗೀಯ ವ್ಯಂಜನಎರಡನೇ ಮಹಾಯುದ್ಧಹರಕೆಹರ್ಡೇಕರ ಮಂಜಪ್ಪಕನ್ನಡ ಸಾಹಿತ್ಯ ಪರಿಷತ್ತುಶ್ರೀ ರಾಮಾಯಣ ದರ್ಶನಂಕನ್ನಡ ಸಂಧಿಹಿಂದೂ ಮಾಸಗಳುಟಿ.ಪಿ.ಕೈಲಾಸಂಕಲಿಯುಗಸಮಾಜ ವಿಜ್ಞಾನಪು. ತಿ. ನರಸಿಂಹಾಚಾರ್ನವೋದಯಕ್ರಿಯಾಪದಉತ್ಪಲ ಮಾಲಾ ವೃತ್ತಪೊನ್ನಅಲಂಕಾರರೇಣುಕಭಾರತದ ಸ್ವಾತಂತ್ರ್ಯ ದಿನಾಚರಣೆಸಿಂಧೂತಟದ ನಾಗರೀಕತೆಸೂರ್ಯವಂಶ (ಚಲನಚಿತ್ರ)ಕೆರೆಗೆ ಹಾರ ಕಥನಗೀತೆಮಹಾವೀರ ಜಯಂತಿಗುಬ್ಬಚ್ಚಿಆಂಧ್ರ ಪ್ರದೇಶಸಂಸ್ಕೃತ ಸಂಧಿಹವಾಮಾನಮನಮೋಹನ್ ಸಿಂಗ್ವಿಜಯನಗರಕನ್ನಡದಲ್ಲಿ ಪ್ರವಾಸ ಸಾಹಿತ್ಯಕರ್ನಾಟಕ ಲೋಕಸೇವಾ ಆಯೋಗಗ್ರಾಮ ಪಂಚಾಯತಿಧರ್ಮಅಕ್ಷಾಂಶ ಮತ್ತು ರೇಖಾಂಶಕರ್ನಾಟಕ ವಿಧಾನ ಪರಿಷತ್ಕಬ್ಬುಡಿ. ದೇವರಾಜ ಅರಸ್ರಾಮಹೆಚ್.ಡಿ.ಕುಮಾರಸ್ವಾಮಿಮಾಟ - ಮಂತ್ರಲಕ್ಷ್ಮೀಶದ್ವಿರುಕ್ತಿಮಿಂಚುಬಹಮನಿ ಸುಲ್ತಾನರುಕೆ. ಎಸ್. ನಿಸಾರ್ ಅಹಮದ್ಸೂರ್ಯಆಲೂರು ವೆಂಕಟರಾಯರುಚಂದ್ರಯಾನ-೩ತೆನಾಲಿ ರಾಮಕೃಷ್ಣಕರ್ಕಾಟಕ ರಾಶಿಸರ್ವೆಪಲ್ಲಿ ರಾಧಾಕೃಷ್ಣನ್ಹಳೆಗನ್ನಡಮದ್ಯದ ಗೀಳು🡆 More