ಜೈಮಿನಿ

ಜೈಮಿನಿ ಭಾರತೀಯ ಋಷಿಗಳಲ್ಲಿ ಪ್ರಸಿದ್ಧನಾದವ.

ಈತ ವ್ಯಾಸ ಮಹರ್ಷಿಯ ನೇತೃತ್ವದಲ್ಲಿ ನಡೆಯಲಾದ್ದು ಎನ್ನಲಾದ ವೇದಗಳ ಸಂಪಾದನೆಯಲ್ಲಿ ಸಾಮವೇದವನ್ನು ಸಂಪಾದಿಸಿದನೆಂದು ಹೇಳಲಾಗಿದೆ. ಬುದ್ಧನ ತರುವಾಯ ಭಾರತೀಯ ತತ್ತ್ವ ಚಿಂತನೆಯಲ್ಲಿ ಆಂದೋಲನ ನಡೆದಾಗ ವೈದಿಕಧರ್ಮವನ್ನು ಸುಸ್ಥಿರಗೊಳಿಸುವ ಪ್ರಯತ್ನ ನಡೆಯಿತು. ಇದರ ಅಂಗಗಳೆಂಬಂತೆ ವೈದಿಕ ದರ್ಶನಗಳೆಲ್ಲ ಸೂತ್ರರೂಪದಲ್ಲಿ ಸಿದ್ಧವಾದವು. ಆಗ ಜೈಮಿನಿ ಮೀಮಾಂಸ ಸೂತ್ರಗಳನ್ನು ರಚಿಸಿದ. ಈ ಸೂತ್ರಗಳ ಕಾಲ ಖಚಿತವಾಗಿಲ್ಲ. ಆದರೆ. ಸೂತ್ರ-ಸಾಹಿತ್ಯದಲ್ಲೆಲ್ಲ ಮೀಮಾಂಸಗಳ ಸೂತ್ರಗಳೇ ಬಹು ಪ್ರಾಚೀನವಾದವು. ವಿದ್ವಾಂಸರ ಅಭಿಪ್ರಾಯದಂತೆ ಈತನ ಕಾಲ ಸುಮಾರು ಕ್ರಿ. ಶ. ಎರಡನೆಯ ಶತಮಾನ. ಸೂತ್ರ ಸಾಹಿತ್ಯದಲ್ಲೆಲ್ಲ ಜೈಮಿನಿಯಿಂದ ರಚಿತವಾದ ಮೀಮಾಂಸ ಸೂತ್ರಗಳೇ ಹೆಚ್ಚು ಸಂಖ್ಯೆಯಿಂದ (2500) ಕೂಡಿದವು. ಇವುಗಳ ಮೂಲಕ ಜೈಮಿನಿ ಸುಮಾರು ಸಾವಿರ ವಿಷಯಗಳನ್ನು ಮಂಡಿಸಿದ್ದಾನೆ. ಇವು ವೇದದ ಕರ್ಮವಿಭಾಗವನ್ನು ಹೆಚ್ಚು ಆಧರಿಸಿಕೊಂಡು ವೇದಧರ್ಮವನ್ನು ಪುಷ್ಟಿಗೊಳಿಸುತ್ತವೆ. (ಕೆ.ಬಿ.ಆರ್.)

ಮಹಾಭಾರತದ ಪ್ರಕಾರ ಈತ ಕುತ್ಸ ಮಹರ್ಷಿಯ ವಂಶದವನೆಂದೂ ಋಗ್ವೇದಾಧ್ಯಾಯಿ ಪೈಲಮುನಿ. ಯಜರ್ವೇದಾಧ್ಯಾಯಿ ವೈಶಂಪಾಯನ, ಅಥರ್ವವೇದಪಾರಂಗತ ಸುಮಂತು ಇವರುಗಳ ಸಹಪಾಠಿಯೆಂದೂ ಪಾಂಡವರ ಮರಿಮಗ ಜನಮೇಜಯ ಮಾಡಿದ ಸರ್ಪಯಾಗದಲ್ಲಿ ಸಾಮಮಂತ್ರ ಪಠಿಸುವ ಉದ್ಗಾತೃವಾಗಿದ್ದನೆಂದೂ ಸರ್ಪಯಾಗದಿಂದ ಪ್ರಾಪ್ತವಾದ ಕುಷ್ಠರೋಗವನ್ನು ಜನಮೇಜಯ ಭಾರತ ಶ್ರವಣದಿಂದ ಪರಿಹರಿಸಿಕೊಂಡನಾದರೂ ಉಳಿದ ಅತ್ಯಲ್ಪ ಕುಷ್ಠವನ್ನು ಜೈಮಿನಿಯಿಂದ ರಚಿತವಾದ ಅಶ್ವಮೇಧಿಕ ಪರ್ವಶ್ರವಣದಿಂದ ಪರಿಹರಿಸಿಕೊಂಡನೆಂದೂ ಹೇಳಲಾಗಿದೆ.

ಜೈಮಿನಿ
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

🔥 Trending searches on Wiki ಕನ್ನಡ:

ಜಾನಪದಕುರಿಮೊಹೆಂಜೊ-ದಾರೋಉದಯವಾಣಿಆಟಿಸಂಬರಗೂರು ರಾಮಚಂದ್ರಪ್ಪಭಾರತದಲ್ಲಿ ಕೃಷಿಅಕ್ಬರ್ಲಕ್ಷ್ಮೀಶಕವಲುಶ್ರೀ ರಾಘವೇಂದ್ರ ಸ್ವಾಮಿಗಳುಶ್ಚುತ್ವ ಸಂಧಿಸಾಲುಮರದ ತಿಮ್ಮಕ್ಕಸೋಮನಾಥಪುರಗಾದೆಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯತಾಜ್ ಮಹಲ್ಕೆರೆಗೆ ಹಾರ ಕಥನಗೀತೆಪಾಪಕ್ಯಾರಿಕೇಚರುಗಳು, ಕಾರ್ಟೂನುಗಳುಕರ್ನಾಟಕದ ಇತಿಹಾಸಮಹಮದ್ ಬಿನ್ ತುಘಲಕ್ಪಂಪಗ್ರಾಮ ಪಂಚಾಯತಿಪಾಂಡವರುನಾಟಕಸೌರಮಂಡಲನರೇಂದ್ರ ಮೋದಿದರ್ಶನ್ ತೂಗುದೀಪ್ಅಂಬಿಗರ ಚೌಡಯ್ಯಮಾರುಕಟ್ಟೆಗ್ರಾಮ ದೇವತೆದ್ರಾವಿಡ ಭಾಷೆಗಳುಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಅಮ್ಮಹೈದರಾಲಿಎ.ಪಿ.ಜೆ.ಅಬ್ದುಲ್ ಕಲಾಂಕೂಡಲ ಸಂಗಮರಾಶಿಬಾಲಕಾರ್ಮಿಕನವ್ಯಇಂದಿರಾ ಗಾಂಧಿಇಮ್ಮಡಿ ಪುಲಕೇಶಿಮೊದಲನೆಯ ಕೆಂಪೇಗೌಡರವಿಚಂದ್ರನ್ಆತ್ಮರತಿ (ನಾರ್ಸಿಸಿಸಮ್‌)ಗಣೇಶ ಚತುರ್ಥಿವೇದಭಾರತದ ಪ್ರಧಾನ ಮಂತ್ರಿಸೆಸ್ (ಮೇಲ್ತೆರಿಗೆ)ಶಿಕ್ಷಕಸಾಮಾಜಿಕ ಸಮಸ್ಯೆಗಳುಚದುರಂಗಮಾಹಿತಿ ತಂತ್ರಜ್ಞಾನಬಬಲಾದಿ ಶ್ರೀ ಸದಾಶಿವ ಮಠಹಿಂದುಸ್ತಾನಿ ಶಾಸ್ತ್ರೀಯ ಸಂಗೀತಬರವಣಿಗೆರಾಜಕೀಯ ವಿಜ್ಞಾನಶಿಶುನಾಳ ಶರೀಫರುಶ್ರೀರಂಗಪಟ್ಟಣಚೋಮನ ದುಡಿಕಾರವಾರವಿಧಾನ ಪರಿಷತ್ತುಭಾರತದ ಸ್ವಾತಂತ್ರ್ಯ ಚಳುವಳಿದೇವನೂರು ಮಹಾದೇವಪರಿಸರ ಕಾನೂನುಮಂಗಳೂರುಭಗವದ್ಗೀತೆಕರ್ನಾಟಕ ಲೋಕಸೇವಾ ಆಯೋಗಆರೋಗ್ಯಕೊಡಗುಹಯಗ್ರೀವಗಾದೆ ಮಾತುಭಾರತದ ರಾಷ್ಟ್ರಪತಿಗಳ ಪಟ್ಟಿವೃದ್ಧಿ ಸಂಧಿಪ್ಯಾರಾಸಿಟಮಾಲ್ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಭಾರತದ ಬುಡಕಟ್ಟು ಜನಾಂಗಗಳು🡆 More