ಜಲಜನಕ

1 ಇಲ್ಲಜಲಜನಕಹೀಲಿಯಮ್
ಇಲ್ಲ

H

ಲಿಥಿಯಮ್
ಜಲಜನಕ
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಜಲಜನಕ, H, 1
ರಾಸಾಯನಿಕ ಸರಣಿ[[ಅಲೋಹಗಳು]]
ಗುಂಪು, ಆವರ್ತ, ಖಂಡ 1, 1, s
ಸ್ವರೂಪ
ಅಣುವಿನ ತೂಕ 1.00794(7) g·mol−1 g·mol−1
ಋಣವಿದ್ಯುತ್ಕಣ ಜೋಡಣೆ 1s¹
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು 1
ಭೌತಿಕ ಗುಣಗಳು
ಹಂತಅನಿಲ
ಸಾಂದ್ರತೆ(0 °C, 101.325 kPa)
(0 °C, 101.325 kPa) 0.08988 g/L g/L
ಕರಗುವ ತಾಪಮಾನ14.01 K (−259.14 °C, −434.45 °F) K
( °C,  °ಎಫ್)
ಕುದಿಯುವ ತಾಪಮಾನ20.28 K (−252.87 °C, −423.17 °F) K
( °C, °F)
ತ್ರಿಗುಣ ಬಿಂದು13.8033 K (-259°C), 7.042 kPa K,  kPa
ಕ್ರಾಂತಿಬಿಂದು32.97 K, 1.293 MPa K, MPa
ಸಮ್ಮಿಲನದ ಉಷ್ಣಾಂಶ(H2) 0.117 kJ·mol−1 kJ·mol−1
ಭಾಷ್ಪೀಕರಣ ಉಷ್ಣಾಂಶ(H2) 0.904 kJ·mol−1 kJ·mol−1
ಉಷ್ಣ ಸಾಮರ್ಥ್ಯ(25 °C) (25 °C)(H2)28.836 J·mol−1·K−1 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 15 20
ಅಣುವಿನ ಗುಣಗಳು
ಸ್ಪಟಿಕ ಸ್ವರೂಪhexagonal
ಆಕ್ಸಿಡೀಕರಣ ಸ್ಥಿತಿಗಳು1, −1 (amphoteric oxide)
ವಿದ್ಯುದೃಣತ್ವ2.20 (Pauling scale) (Pauling scale)
ಅಣುವಿನ ತ್ರಿಜ್ಯ25pm pm
ಅಣುವಿನ ತ್ರಿಜ್ಯ (ಲೆಖ್ಕಿತ)53 pm pm
ತ್ರಿಜ್ಯ ಸಹಾಂಕ37pm pm
ವಾನ್ ಡೆರ್ ವಾಲ್ಸ್ ತ್ರಿಜ್ಯ120pm pm
ಇತರೆ ಗುಣಗಳು
ಉಷ್ಣ ವಾಹಕತೆ(300 K) (300 K) 180.5 m W·m−1·K−1 W·m−1·K−1
ಉಷ್ಣ ವ್ಯಾಕೋಚನ(25 °C) 8.8 µm·m−1·K−1
ಶಬ್ದದ ವೇಗ(gas, 27 °C) 1310 m/s m/s
ಸಿಎಎಸ್ ನೋಂದಾವಣೆ ಸಂಖ್ಯೆ1333-74-0
ಉಲ್ಲೇಖನೆಗಳು

ಜಲಜನಕ (Hydrogen - ಹೈಡ್ರೋಜನ್)ವು ಒಂದು ರಾಸಯನಿಕ ಮೂಲಧಾತು. ಇದು ವಿಶ್ವದಲ್ಲಿ ಅತ್ಯಂತ ಹೇರಳವಾಗಿರುವ ಮೂಲಧಾತು. ಇದು ಅತ್ಯಂತ ಸರಳ, ಹಗುರವಾದ ಮೂಲಧಾತು. ಇದಕ್ಕೆ ಬಣ್ಣ, ರುಚಿ, ವಾಸನೆ ಇಲ್ಲ. ಇದರಲ್ಲಿ ಒಂದು ಪ್ರೋಟಾನ್ ಹಾಗೂ ಒಂದು ಎಲೆಕ್ಟ್ರಾನ್ ಮಾತ್ರವಿರುತ್ತದೆ. ಇದರ ಹೆಸರು ಗ್ರೀಕ್ ಭಾಷೆಯ 'ಜಲಜನಕ' ಎಂಬ ಅರ್ಥ ಕೊಡುವ ಎರಡು ಶಬ್ದಗಳಿಂದ ಬಂದಿದೆ.

ಇದು ಆವರ್ತಕೋಷ್ಟಕದ ೧ಎ ಗುಂಪಿನ ೧ನೆಯ ಆವರ್ತದ  ಮೊದಲನೆಯ ಧಾತು. ಪ್ರತೀಕ H. ಪರಮಾಣು ಸಂಖ್ಯೆ ೧. ಪರಮಾಣು ತೂಕ ೧.೦೦೭೯೭. ದ್ರವನಬಿಂದು -೨೫೯0 ಸೆ. ಕುದಿಬಿಂದು -೨೫೨.೬ ಸೆ. ಸಾಪೇಕ್ಷ ಸಾಂದ್ರತೆ (೦ಸೆಲ್ಷಿಯಸಿನಲ್ಲಿ)  ೦.೦೮೯೮೭. ಎಲೆಕ್ಟ್ರಾನ್ ವಿನ್ಯಾಸ 1s2. ವೇಲೆನ್ಸಿ ೧. ಹೈಡ್ರೊಜನ್-೧, ಹೈಡ್ರೊಜನ್-೨ (ಡ್ಯುಟೀರಿಯಮ್), ಹೈಡ್ರೊಜನ್-೩ (ಟ್ರೈಟಿಯಮ್) ಇವು ನೈಸರ್ಗಿಕ ಸಮಸ್ಥಾನಿಗಳು. ಇವುಗಳ ಪೈಕಿ ಕೊನೆಯದು ೧೨.೫ ವರ್ಷ ಅರ್ಧಾಯು ಇರುವ ವಿಕಿರಣಪಟು ಹಾಗೂ ಅಸ್ಥಿರ ಸಮಸ್ಥಾನಿ. ನೈಸರ್ಗಿಕ ಹೈಡ್ರೊಜನ್ ಈ ಮೂರೂ ಸಮಸ್ಥಾನಿಗಳ ಮಿಶ್ರಣ (ಸರಿಸುಮಾರು ಪ್ರಮಾಣ: ೯೯.೯೮೫%, ೦.೦೧೫%, ಶೇಷ).

ಗುಣಗಳು

ಇದು ದಹ್ಯ ಅನಿಲ. ಗಿರಕಿ ಹೊಡೆಯುತ್ತಿರುವ ಎರಡು ಪರಮಾಣುಗಳಿರುವ ಬಲು ಸ್ಥಿರವಾದ ಅಣು ರೂಪದಲ್ಲಿರುವುದು ಸಾಮಾನ್ಯ. ಈ ಪರಮಾಣುಗಳ ಬೈಜಿಕ ಗಿರಕಿ (ನ್ಯೂಕ್ಲಿಯರ್ ಸ್ಪಿನ್) ಒಂದೇ ದಿಕ್ಕಿನಲ್ಲಿ ಇದ್ದರೆ ಆರ್ತೊಹೈಡ್ರೊಜನ್ ಎಂದು, ವಿರುದ್ಧ ದಿಕ್ಕುಗಳಲ್ಲಿದ್ದರೆ ಪ್ಯಾರಹೈಡ್ರೊಜನ್ ಎಂದು ಹೆಸರು. ಸಾಮಾನ್ಯ ಹೈಡ್ರೊಜನ್ ಇವೆರಡು ಸಮಾಂಗಿಗಳ(ಐಸೊಮರ್ಸ್) ಮಿಶ್ರಣ. ಅಣುವಿನ ಪರಮಾಣುಗಳನ್ನು ಪ್ರತ್ಯೇಕಿಸಲು ಅಗಾಧ ಪ್ರಮಾಣದ ಶಕ್ತಿ ಬೇಕು. ಅತ್ಯಂತ ಸರಳ ಪರಮಾಣು ಸಂರಚನೆಯುಳ್ಳ ಹೈಡ್ರೊಜನಿಗೆ ಅನೇಕ ವಿಶಿಷ್ಟ ಗುಣಗಳಿವೆ. ಇದು ಉತ್ತಮ ಅಪಕರ್ಷಣಕಾರಕ. ಅಸಾಮಾನ್ಯ ಕ್ರಿಯಾಶೀಲ ಧಾತು ಇದಲ್ಲವಾದರೂ ಇತರ ಧಾತುಗಳಿಗಿಂತ ಹೆಚ್ಚು ಸಂಯುಕ್ತಗಳನ್ನು ರೂಪಿಸುತ್ತದೆ. ಸಾಪೇಕ್ಷವಾಗಿ ಇದರ ಅಯಾನೀಕರಣ ಸಾಮರ್ಥ್ಯವೂ ಉಳಿದವುಗಳದ್ದಕ್ಕಿಂತ ಹೆಚ್ಚು. ಆದ್ದರಿಂದ ಇದರ ಬಹುತೇಕ ಸಂಯುಕ್ತಗಳು ಸಹವೇಲೆನ್ಸೀಯ ಬಂಧಗಳಿಂದ (ಕೊವೇಲೆಂಟ್ ಬಾಂಡ್) ಆಗಿವೆ. ಹೈಡ್ರೊಜನ್ ಅಯಾನಿನ ಆವೇಶ (ಚಾರ್ಜ್) ಮತ್ತು ತ್ರಿಜ್ಯ ನಿಷ್ಪತ್ತಿ ಬಲು ಹೆಚ್ಚು. ಎಂದೇ, ಅದು ಇತರ ಪದಾರ್ಥಗಳ ಸಂಯೋಗದಲ್ಲಿ ಮಾತ್ರ ಲಭ್ಯ. ಹೈಡ್ರೊಜನ್ ಅಣು ಹೈಡ್ರೈಡ್ ಅಯಾನುಗಳನ್ನೂ ಸಹವೇಲೆನ್ಸೀಯ ಹೈಡ್ರೈಡುಗಳನ್ನೂ ರೂಪಿಸಬಲ್ಲದು.

ಇತಿಹಾಸ

ಜಲಜನಕವನ್ನು ೧೬ನೇ ಶತಮಾನದಲ್ಲಿ ಕೃತಕವಾಗಿ ಅಮ್ಲ ಮತ್ತು ಲೋಹದ ಮಿಶ್ರಣದಿಂದ ತಯಾರಿಸಲಾಯಿತು. ಇದು ಆ ಶತಮಾನದ ವಿಜ್ಞಾನಿಗಳಿಗೆ ತಿಳಿದಿತ್ತು. ಆ ಮೊದಲೇ ಆವಿಷ್ಕರಿಸಿದ್ದ ದಹ್ಯ ಅನಿಲಗಳ ಪೈಕಿ ಇದೂ ಒಂದೆಂದು ಭಾವಿಸಿ ನಿರ್ಲಕ್ಷಿಸಿದ್ದರು. 1766-81 ರಲ್ಲಿ, ಹೆನ್ರಿ ಕ್ಯಾವೆಂಡಿಶ್ ಹೈಡ್ರೋಜನ್ ಒಂದು ಪ್ರತ್ಯೇಕ ಪದಾರ್ಥ ಎಂದು ಗುರುತಿಸುವುದರಲ್ಲಿ ಮೊದಲಿಗರಾಗಿದ್ದರು. ಇವನು ಹೈಡ್ರೊಜನ್ ಮತ್ತು ಆಕ್ಸಿಜನ್‌ಗಳ ಸಂಯುಕ್ತ ನೀರು ಎಂಬುದನ್ನೂ ಪತ್ತೆಹಚ್ಚಿದ (೧೭೮೧). ಈ ಅನಿಲಕ್ಕೆ ಹೈಡ್ರೊಜನ್ ಎಂದು ನಾಮಕರಣ ಮಾಡಿದವ ಆಂತ್ವಾನ್ ಲೊರಾನ್ ಲೆವಾಸ್ಯೇ (೧೭೪೩-೯೪). ಇದು ಬಣ್ಣವಿಲ್ಲದ ಅನಿಲವಾಗಿದೆ. ಸ್ವತಂತ್ರ ಹೈಡ್ರೊಜನ್ ಭೂಮಿಯಲ್ಲಿ ವಿರಳವಾಗಿದ್ದರೂ ತಾರಾದ್ರವ್ಯದಲ್ಲಿ ಸಮೃದ್ಧವಾಗಿದೆ. ಹೈಡ್ರೊಜನ್ನಿನ ಸಂಯುಕ್ತಗಳು ಭೂಮಿಯಲ್ಲಿ ಹೇರಳವಾಗಿರುವುದರಿಂದ ಧಾತುಲಭ್ಯತೆಯ ಸಮೃದ್ಧಿ ಆಧಾರಿತ ಸರಣಿಯಲ್ಲಿ ಇದರ ಕ್ರಮಾಂಕ ೯.

ದೊರೆಯುವಿಕೆ

ವಿಶ್ವದಲ್ಲಿ ಸುಮಾರು ಶೇಕಡಾ ೭೫ ರಷ್ಟು ಜಲಜನಕವೇ ತುಂಬಿಕೊಂಡಿದೆ. ನಕ್ಷತ್ರಗಳಲ್ಲಿ ಪ್ಲಾಸ್ಮಾರೂಪದಲ್ಲಿ ಜಲಜನಕವಿದೆ. ಭೂಮಿಯಲ್ಲಿ ದೊರೆಯುವ ಮೂಲಧಾತುಗಳಲ್ಲಿ ಜಲಜನಕ ೯ನೇ ಅತೀ ಹೆಚ್ಚು ದೊರೆಯುವ ಮೂಲಧಾತುವಾಗಿದೆ. ಭೂ ಪದರದಲ್ಲಿ ಬೇರೆ ಮೂಲಧಾತುಗಳೊಂದಿಗೆ ಬೆರೆತು ರಾಸಾಯನಿಕ ಸಂಯುಕ್ತಗಳಾಗಿ ಸುಮಾರು ಶೇಕಡಾ ಒಂದರಷ್ಟಿದೆ. ಆದರೆ ಪರಮಾಣು ರೂಪದಲ್ಲಿ ಭೂಮಿಯಲ್ಲಿ ಜಲಜನಕವು ಅತ್ಯಲ್ಪ ಪ್ರಮಾಣದಲ್ಲಷ್ಟೇ ಇದೆ.

ಉಪಯೋಗಗಳು

ಅಮೋನಿಯ ಸಂಶ್ಲೇಷಣೆ, ಘನಮೇದಸ್ಸಾಗಿ ಸಸ್ಯತೈಲಗಳ ಪರಿವರ್ತನೆ ಹಾಗೂ ಕೆಲವು ಕಾರ್ಬನಿಕ ಸಂಯುಕ್ತಗಳ ಉತ್ಪಾದನೆಗೆ ಹೈಡ್ರೊಜನೀಕರಣ, ಮೆತನೋಲ್ ಸಂಶ್ಲೇಷಣೆ, ಹೈಡ್ರೊಕ್ಲೋರಿಕಾಮ್ಲ ತಯಾರಿ, ಪೆಟ್ರೋಲಿಯಮ್ ಸಂಸ್ಕರಣೆ, ಆಕ್ಸಿಹೈಡ್ರೊಜನ್ ಹಾಗೂ ಪರಮಾಣು ಟಾರ್ಚ್, ಲೋಹೀಯ ಆಕ್ಸೈಡುಗಳ ಅಪಕರ್ಷಣೆ, ಲೋಹೀಯ ಹೈಡ್ರೈಡುಗಳ ತಯಾರಿ ಮುಂತಾದ ಅನೇಕ ಕಾರ್ಯಗಳಿಗೆ ಹೈಡ್ರೊಜನ್ ಬಳಕೆ ಇದೆ.

ಉಲ್ಲೇಖಗಳು

ಹೊರಗಿನ ಕೊಂಡಿಗಳು

Tags:

ಜಲಜನಕ ಗುಣಗಳುಜಲಜನಕ ಇತಿಹಾಸಜಲಜನಕ ದೊರೆಯುವಿಕೆಜಲಜನಕ ಉಪಯೋಗಗಳುಜಲಜನಕ ಉಲ್ಲೇಖಗಳುಜಲಜನಕ ಹೊರಗಿನ ಕೊಂಡಿಗಳುಜಲಜನಕ

🔥 Trending searches on Wiki ಕನ್ನಡ:

ಹಳೇಬೀಡುಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಮಹಾವೀರಜಾನಪದವಿಶ್ವ ಪರಿಸರ ದಿನಯೋಗಜಾಗತೀಕರಣಕರ್ನಾಟಕದ ಇತಿಹಾಸಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುರಾಯಲ್ ಚಾಲೆಂಜರ್ಸ್ ಬೆಂಗಳೂರುಬೆಳಗಾವಿಗದ್ಯಭಾರತದಲ್ಲಿ ಪಂಚಾಯತ್ ರಾಜ್ಮಂಗಳೂರುಮಲ್ಟಿಮೀಡಿಯಾಬಿ.ಎಫ್. ಸ್ಕಿನ್ನರ್ಮುಳ್ಳುಹಂದಿಸೆಸ್ (ಮೇಲ್ತೆರಿಗೆ)ಭಾರತದ ಸಂಯುಕ್ತ ಪದ್ಧತಿಕರ್ನಾಟಕದ ಜಾನಪದ ಕಲೆಗಳುಗೋಪಾಲಕೃಷ್ಣ ಅಡಿಗಬೆಳಗಾವಿ ಜಿಲ್ಲೆಭಗವದ್ಗೀತೆಭಾರತೀಯ ಜ್ಞಾನಪೀಠಸಿಗ್ಮಂಡ್‌ ಫ್ರಾಯ್ಡ್‌ಭಾರತಖ್ಯಾತ ಕರ್ನಾಟಕ ವೃತ್ತನಗರತಾಲ್ಲೂಕುಶ್ರೀವಿಜಯಅಸ್ಪೃಶ್ಯತೆಉದಯವಾಣಿವಿಜಯ ರಾಘವೇಂದ್ರ (ನಟ)ಪಾಂಡವರುಅಂತರಜಾಲಕೇಶಿರಾಜಅಶೋಕನ ಶಾಸನಗಳುದ್ವಾರಕೀಶ್ರವೀಂದ್ರನಾಥ ಠಾಗೋರ್ಕರ್ಣಾಟ ಭಾರತ ಕಥಾಮಂಜರಿಗುಪ್ತ ಸಾಮ್ರಾಜ್ಯಮಂಜುಮ್ಮೆಲ್ ಬಾಯ್ಸ್ಮಲೆನಾಡುಚಿತ್ರದುರ್ಗ ಜಿಲ್ಲೆತೀ. ನಂ. ಶ್ರೀಕಂಠಯ್ಯಸೀತೆವೈಷ್ಣವ ಪಂಥಕೇಂದ್ರ ಲೋಕ ಸೇವಾ ಆಯೋಗಮೈಸೂರುಮಾರಣಕಟ್ಟೆ - ಬ್ರಹ್ಮಲಿಂಗೇಶ್ವರಯಕ್ಷಗಾನಚಂದ್ರಗುಪ್ತ ಮೌರ್ಯಮಾನವನ ವಿಕಾಸಧಾರವಾಡಯಣ್ ಸಂಧಿಸೂರ್ಯ (ದೇವ)ಕಾಫಿಮೂಲವ್ಯಾಧಿಅಕ್ಕಮಹಾದೇವಿಭಾರತದ ರಾಷ್ಟ್ರೀಯ ಉದ್ಯಾನಗಳುಹನುಮ ಜಯಂತಿಅಳಿಲುಭೋವಿಹಲಸಿನ ಹಣ್ಣುಭಾರತದ ಉಪ ರಾಷ್ಟ್ರಪತಿಜಪಾನ್ಶಾಸನಗಳುಮಡಿವಾಳ ಮಾಚಿದೇವಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭ಜಯಪ್ರಕಾಶ್ ಹೆಗ್ಡೆಸವರ್ಣದೀರ್ಘ ಸಂಧಿವಿಷ್ಣುವರ್ಧನ್ (ನಟ)ಸರ್ವಜ್ಞಮಧ್ಯಕಾಲೀನ ಭಾರತತಾರನಾಲ್ವಡಿ ಕೃಷ್ಣರಾಜ ಒಡೆಯರುಜವಹರ್ ನವೋದಯ ವಿದ್ಯಾಲಯ🡆 More