ಚಂದ್ರಕಾಂತ ಕರದಳ್ಳಿ

ಚಂದ್ರಕಾಂತ ಕರದಳ್ಳಿಯವರು (೨೫ ಆಗಸ್ಟ್ ೧೯೫೨ - ೧೯ ಡಿಸೆಂಬರ್ ೨೦೧೯) ಕನ್ನಡದ ಒಬ್ಬರು ಬರಹಗಾರರು.

ವಿಶೇಷವಾಗಿ ಮಕ್ಕಳ ಸಾಹಿತ್ಯವನ್ನು ಹೆಚ್ಚು ರಚಿಸಿದ್ದಾರೆ.

ಜೀವನ

ಕರದಳ್ಳಿಯವರು ಯಾದಗಿರಿ ಜಿಲ್ಲೆಯ ಶಹಾಪುರದವರು. ವೃತ್ತಿಯಿದ ಶಿಕ್ಷಕರಾಗಿದ್ದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಡ್. ಪದವಿ ಗಳಿಸಿದರು. ಮೂವತ್ತಮೂರು ವರ್ಷ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.

ಸಾಹಿತ್ಯ ಜೀವನ

ಕರದಳ್ಳಿಯವರು ಸುಮಾರು ೫೦ ಪುಸ್ತಕಗಳನ್ನು ರಚಿಸಿದ್ದಾರೆ. ಅದರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಕ್ಕಳ ಸಾಹಿತ್ಯ ಎನ್ನುವುದು ವಿಶೇಷ. ಮಕ್ಕಳ ಸಾಹಿತ್ಯದಲ್ಲಿ ಇವರು 5 ಕಥಾ ಸಂಕಲನ, 6 ಕವನ ಸಂಕಲನ, 6 ಮಕ್ಕಳ ಕಾದಂಬರಿ, ಎರಡು ಶಿಶುಪ್ರಾಸಗಳು, ಸಾಹಿತ್ಯ ಅಕಾಡೆಮಿ ಸಂಪಾದನೆ ಸೇರಿದಂತೆ ಒಟ್ಟು ೫೦ ಕೃತಿಗಳು ಹೊರಬಂದಿವೆ. ಇದರಲ್ಲಿ ಹಾಡು, ಕಥೆ, ಜೀವನಗಾಥೆಗಳು, ಒಗಟುಗಳ ಸಂಗ್ರಹ ಎಲ್ಲಾ ಸೇರಿವೆ.

ಅವರ ಕೆಲ ಜನಪ್ರಿಯ ಕೃತಿಗಳೆಂದರೆ,

  • ನಲಿದಾಡು ಬಾ ನವಿಲೆ
  • ಚಂದಮಾಮ ಒಬ್ಬನೆ ಇದ್ದೀಯಾ?
  • ಉಪ್ಪಿನಗೊಂಬೆಯ ಹುಟ್ಟೂರು
  • ಆಕಾಶವೇಕೆ ಮೇಲಿದೆ?
  • ಉಪ್ಪಿನ ಗೊಂಬೆ
  • ಮಾಯದ ಗಂಟೆ
  • ಕಾಡು ಕನಸಿನ ಬೀಡಿಗೆ
  • ಬಯಲು ಸೀಮೆಯಿಂದ ಕರಾವಳಿಗೆ
  • ಮಹಾಜಿಪುಣ ಮೈದಾಸ
  • ಸಗರಾದ್ರಿ ಚಾರಣ
  • ಸೋಲೇ ಇಲ್ಲ ಗೆಲುವೇ ಎಲ್ಲ
  • ಗಿರಿಸಿರಿ
  • ಮನದಮಾತು

ಪ್ರಶಸ್ತಿ, ಗೌರವಗಳು

  • ರಾಜ್ಯ ಹಾಗೂ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
  • ಕೇಂದ್ರ ಸಾಹಿತ್ಯ ಅಕಾಡೆಮಿಯ 'ಬಾಲ ಸಾಹಿತ್ಯ ಪುರಸ್ಕಾರ' (೨೦೧೯)
  • ಸುರಪುರದಲ್ಲಿ ನಡೆದ ಮೊದಲ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು (೨೦೧೦)
  • ಯಾದಗಿರಿ ಜಿಲ್ಲಾ ಎರಡನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷ (೨೦೧೫)
  • ರಾಜ್ಯೋತ್ಸವ ಪ್ರಶಸ್ತಿ (೨೦೧೯)
  • ಸಂಕ್ರಮಣ ಸಾಹಿತ್ಯ, ಶಿಕ್ಷಣ ಸಿರಿ, ಸಾಕ್ಷಿ ಮಕ್ಕಳ ಸಾಹಿತ್ಯ, ಸಿಶು ಸಂಗಮೇಶ ದತ್ತಿ, ಸಿದ್ಧಾರ್ಥ ಮಕ್ಕಳ ಸಾಹಿತ್ಯ, ಮಕ್ಕಳ ಚಂದಿರ, ಅಕ್ಷರಲೋಕದ ನಕ್ಷತ್ರ ಹೀಗೆ ಹಲವು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಗೌರವವಗಳು

ಉಲ್ಲೇಖಗಳು

ಹೊರಸಂಪರ್ಕ ಕೊಂಡಿಗಳು

Tags:

ಚಂದ್ರಕಾಂತ ಕರದಳ್ಳಿ ಜೀವನಚಂದ್ರಕಾಂತ ಕರದಳ್ಳಿ ಸಾಹಿತ್ಯ ಜೀವನಚಂದ್ರಕಾಂತ ಕರದಳ್ಳಿ ಪ್ರಶಸ್ತಿ, ಗೌರವಗಳುಚಂದ್ರಕಾಂತ ಕರದಳ್ಳಿ ಉಲ್ಲೇಖಗಳುಚಂದ್ರಕಾಂತ ಕರದಳ್ಳಿ ಹೊರಸಂಪರ್ಕ ಕೊಂಡಿಗಳುಚಂದ್ರಕಾಂತ ಕರದಳ್ಳಿ

🔥 Trending searches on Wiki ಕನ್ನಡ:

ರನ್ನಧಾರವಾಡನುಡಿ (ತಂತ್ರಾಂಶ)ಕುಟುಂಬಮುಟ್ಟುಯಕೃತ್ತುಭಾರತದ ಪಂಚಾಯತ್ ರಾಜ್ ವ್ಯವಸ್ಥೆಭಾರತದ ರಾಜ್ಯಗಳ ಜನಸಂಖ್ಯೆಶಕುನಪಾಂಡವರುನವೋದಯಆದಿಲ್ ಶಾಹಿ ವಂಶಅಂಬರೀಶ್ಜಿ.ಎಚ್.ನಾಯಕಬಹಮನಿ ಸುಲ್ತಾನರುಭರತೇಶ ವೈಭವತ್ರಿಪದಿಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆಪ್ರಚಂಡ ಕುಳ್ಳಭಾರತೀಯ ಸಂವಿಧಾನದ ತಿದ್ದುಪಡಿಕಲ್ಯಾಣ ಕರ್ನಾಟಕಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಸಂಖ್ಯಾಶಾಸ್ತ್ರನಾಗರೀಕತೆಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಪ್ರೀತಿಖ್ಯಾತ ಕರ್ನಾಟಕ ವೃತ್ತಕನ್ನಡ ಸಾಹಿತ್ಯ ಸಮ್ಮೇಳನಭಾರತದ ಸಂಸ್ಕ್ರತಿಬುಡಕಟ್ಟುಅಂತರರಾಷ್ಟ್ರೀಯ ವ್ಯಾಪಾರತೋಟಗಾರಿಕೆಶ್ರೀಶೈಕ್ಷಣಿಕ ಮನೋವಿಜ್ಞಾನಹಸ್ತಸಾಮುದ್ರಿಕ ಶಾಸ್ತ್ರನಿರ್ವಹಣೆ ಪರಿಚಯದೆಹಲಿಪಂಚಾಂಗಸೂರ್ಯಕರ್ಣಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಅಸಹಕಾರ ಚಳುವಳಿಉತ್ತರ ಕನ್ನಡಕರಗಸರ್ವಜ್ಞಕರ್ನಾಟಕದ ಇತಿಹಾಸಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಮೋಡ ಬಿತ್ತನೆಬಾಲ ಗಂಗಾಧರ ತಿಲಕವ್ಯವಸಾಯಲಕ್ಷ್ಮೀಶಗ್ರಹಭಾರತದ ಸಂವಿಧಾನಮಳೆನೀರು ಕೊಯ್ಲುಭಾರತೀಯ ಶಾಸ್ತ್ರೀಯ ನೃತ್ಯಜನಪದ ನೃತ್ಯಗಳುಮೈಸೂರು ದಸರಾಅಂತರ್ಜಾಲ ಹುಡುಕಾಟ ಯಂತ್ರಕಾವ್ಯಮೀಮಾಂಸೆರವೀಂದ್ರನಾಥ ಠಾಗೋರ್ಸಹಕಾರಿ ಸಂಘಗಳುಶಿಕ್ಷಕಹರಕೆರಾಜ್ಯಸಭೆಕರ್ನಾಟಕದ ಸಂಸ್ಕೃತಿರಕ್ತಪಿಶಾಚಿಕದಂಬ ರಾಜವಂಶಆತ್ಮಹತ್ಯೆಪರೀಕ್ಷೆಬಿ.ಜಯಶ್ರೀಭಾರತದಲ್ಲಿ ಮೀಸಲಾತಿಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಹುರುಳಿಕೆ.ವಿ.ಸುಬ್ಬಣ್ಣಪುರಂದರದಾಸಎಕರೆಕರ್ಮಧಾರಯ ಸಮಾಸಆರೋಗ್ಯ🡆 More