ಗೌರವ:

ಗೌರವ ಯೋಗ್ಯತೆ ಮತ್ತು ಗೌರವಾರ್ಹತೆಯ ಗ್ರಹಿತ ಗುಣಮಟ್ಟವನ್ನು ಒಳಗೊಳ್ಳುವ ಒಂದು ಅಮೂರ್ತ ಪರಿಕಲ್ಪನೆಯಾಗಿದೆ.

ಇದು ಕುಟುಂಬ, ಶಾಲೆ, ಸೈನಿಕಪಡೆ ಅಥವಾ ರಾಷ್ಟ್ರದಂತಹ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಸಾಮಾಜಿಕ ಸ್ಥಾನಮಾನ ಮತ್ತು ಸ್ವಯಂ ಮೌಲ್ಯಮಾಪನ ಎರಡರ ಮೇಲೂ ಪ್ರಭಾವ ಬೀರುತ್ತದೆ. ಹೀಗೆ, ಅವರ ಕ್ರಿಯೆಗಳ ಸಾಮರಸ್ಯವನ್ನು ಆಧರಿಸಿ ನಿರ್ದಿಷ್ಟ ಗೌರವ ಸಂಕೇತ ಅಥವಾ ಒಟ್ಟಾರೆಯಾಗಿ ಸಮಾಜದ ನೀತಿಸಂಹಿತೆಯೊಂದಿಗೆ ವ್ಯಕ್ತಿಗಳಿಗೆ (ಅಥವಾ ಸಂಸ್ಥೆಗಳಿಗೆ) ಮೌಲ್ಯ ಮತ್ತು ಸ್ಥಾನಮಾನವನ್ನು ನಿಗದಿಮಾಡಲಾಗುತ್ತದೆ.

ಗೌರವವು ಹಲವಾರು ಅರ್ಥಗಳನ್ನು ಹೊಂದಿದೆ ಎಂದು ಸ್ಯಾಮುಯಲ್ ಜಾನ್ಸನ್ ವ್ಯಾಖ್ಯಾನಿಸಿದನು. ಮೊದಲನೆಯದೆಂದರೆ ಆತ್ಮದ ಉದಾತ್ತತೆ, ಉದಾರತೆ, ಮತ್ತು ಅಧಮತೆಯ ತಿರಸ್ಕಾರ. ಈ ಬಗೆಯ ಗೌರವವು ವ್ಯಕ್ತಿಯ ಗ್ರಹಿತ ಸದ್ಗುಣಶೀಲ ನಡತೆ ಮತ್ತು ವೈಯಕ್ತಿಕ ಸಮಗ್ರತೆಯಿಂದ ಹುಟ್ಟುತ್ತದೆ. ಮತ್ತೊಂದೆಡೆ, ಖ್ಯಾತಿ ಮತ್ತು ಪ್ರಸಿದ್ಧಿಯ ಸಂಬಂಧದಲ್ಲೂ ಜಾನ್ಸನ್ ಗೌರವವನ್ನು ವ್ಯಾಖ್ಯಾನಿಸಿದನು. ಇದರರ್ಥ ಶ್ರೇಣಿ ಅಥವಾ ಹುಟ್ಟಿನ ಸವಲತ್ತುಗಳು ಮತ್ತು ಒಬ್ಬ ವ್ಯಕ್ತಿಯನ್ನು ಸಾಮಾಜಿಕವಾಗಿ ಇರಿಸುವ ಮತ್ತು ಅವನ ಆದ್ಯತೆಯ ಹಕ್ಕನ್ನು ನಿರ್ಧರಿಸುವ ಬಗೆಯ ಗೌರವ. ಈ ಬಗೆಯ ಗೌರವವು ಹಲವುವೇಳೆ ಅಷ್ಟಾಗಿ ನೈತಿಕ ಶ್ರೇಷ್ಠತೆಯ ಕ್ರಿಯೆಯಾಗಿರುವುದಿಲ್ಲ, ಹೆಚ್ಚಾಗಿ ಅಧಿಕಾರದ ಪರಿಣಾಮವಾಗಿರುತ್ತದೆ. ಅಂತಿಮವಾಗಿ, ಲೈಂಗಿಕತೆಯ ಸಂಬಂಧದಲ್ಲಿ, ಗೌರವ ಪದವನ್ನು ಸಾಂಪ್ರದಾಯಿಕವಾಗಿ ಪವಿತ್ರತೆ ಅಥವಾ ಕನ್ಯತ್ವದೊಂದಿಗೆ ಸಂಬಂಧಿಸಲಾಗಿದೆ, ಅಥವಾ ವಿವಾಹಿತ ಸ್ತ್ರೀ ಮತ್ತು ಪುರುಷರ ವಿಷಯದಲ್ಲಿ ನಿಷ್ಠೆಯೊಂದಿಗೆ. ಗೌರವವನ್ನು ಸಂಹಿತೆಯ ಬದಲಾಗಿ ಹೆಚ್ಚಾಗಿ ವಾಕ್ಚಾತುರ್ಯ, ಅಥವಾ ಸಂಭಾವ್ಯ ಕ್ರಿಯೆಗಳ ಸಮೂಹವಾಗಿ ಕಾಣಬೇಕು ಎಂದು ಕೆಲವರು ವಾದಿಸಿದ್ದಾರೆ.

ವರ್ತನೆಯ ಸಂಹಿತೆಯಾಗಿ ಗೌರವವು ಒಂದು ಸಾಮಾಜಿಕ ಗುಂಪಿನೊಳಗೆ ಒಬ್ಬ ವ್ಯಕ್ತಿಯ ಕರ್ತವ್ಯಗಳನ್ನು ವ್ಯಾಖ್ಯಾನಿಸುತ್ತದೆ. ಗೌರವಾಧಾರಿತ ಸಮಾಜದಲ್ಲಿ ಒಬ್ಬ ವ್ಯಕ್ತಿ ಇರುವುದು ಅವನು ಅಥವಾ ಅವಳು ಇತರ ಜನರ ದೃಷ್ಟಿಯಲ್ಲಿ ಇರುವಂತೆ ಎಂದು ಮಾರ್ಗರೆಟ್ ವಿಸರ್ ಗಮನಿಸುತ್ತಾರೆ. ಗೌರವ ಸಂಹಿತೆಯು ನ್ಯಾಯಸಂಹಿತೆಯಿಂದ ಭಿನ್ನವಾಗಿದೆ, ಮತ್ತು ಸಾಮಾಜಿಕವಾಗಿ ವ್ಯಾಖ್ಯಾನಿತ ಮತ್ತು ನ್ಯಾಯದೊಂದಿಗೆ ಸಂಬಂಧಿತವಾಗಿದೆ. ಗೌರವವು ಸ್ಪಷ್ಟ ಹಾಗೂ ವಸ್ತುನಿಷ್ಠದ ಬದಲಾಗಿ ಸೂಚ್ಯವಾಗಿ ಉಳಿದಿರುತ್ತದೆ.

ಲೈಂಗಿಕತೆಯ ವಿಷಯದಲ್ಲಿ ಐತಿಹಾಸಿಕವಾಗಿ, ಗೌರವವು ಆಗಾಗ್ಗೆ ನಿಷ್ಠೆಗೆ ಸಂಬಂಧಿಸಿರುತ್ತದೆ: ಗೌರವವನ್ನು ಕಾಪಾಡಿಕೊಳ್ಳುವುದೆಂದರೆ ಮುಖ್ಯವಾಗಿ ಅವಿವಾಹಿತರು ಕನ್ಯತ್ವವನ್ನು ಕಾಪಾಡಿಕೊಳ್ಳುವುದು ಮತ್ತು ಉಳಿದವರು ಪ್ರತ್ಯೇಕ ಏಕಸಂಗಾತಿ ಹೊಂದಿರುವುದು. ಈ ಬಗೆಯ ಗೌರವದ ಹೆಚ್ಚಿನ ವಿಚಾರಗಳು ಸಂಸ್ಕೃತಿಗಳ ನಡುವೆ ವ್ಯಾಪಕವಾಗಿ ಬದಲಾಗುತ್ತವೆ; ವ್ಯಕ್ತಿಗಳು ಕುಟುಂಬದ ಗೌರವವನ್ನು ಅಪವಿತ್ರಗೊಳಿಸಿದರೆ ಗೌರವ ರಕ್ಷಣೆಗಾಗಿ ಒಬ್ಬರ ಸ್ವಂತ ಕುಟುಂಬದ ಸದಸ್ಯರ ಹತ್ಯೆಯು ನ್ಯಾಯಸಮ್ಮತ ಎಂದು ಕೆಲವು ಸಂಸ್ಕೃತಿಗಳು ಪರಿಗಣಿಸುತ್ತವೆ.

ಉಲ್ಲೇಖಗಳು

Tags:

ಕುಟುಂಬರಾಷ್ಟ್ರಶಾಲೆಸಮಾಜ

🔥 Trending searches on Wiki ಕನ್ನಡ:

ಜಾತಿರಕ್ತಪಿಶಾಚಿಚಂದ್ರಸುಭಾಷ್ ಚಂದ್ರ ಬೋಸ್ಕರ್ನಾಟಕದಲ್ಲಿ ಪಂಚಾಯತ್ ರಾಜ್ತತ್ತ್ವಶಾಸ್ತ್ರದಶಾವತಾರಮಿಂಚುಶಾತವಾಹನರುಕೃತಕ ಬುದ್ಧಿಮತ್ತೆಪರೀಕ್ಷೆಜಾಗತೀಕರಣಕಾನೂನುಕನ್ನಡದಲ್ಲಿ ನವ್ಯಕಾವ್ಯಒಡೆಯರ ಕಾಲದ ಕನ್ನಡ ಸಾಹಿತ್ಯಸುದೀಪ್ಕರ್ಣಭಾರತದ ಜನಸಂಖ್ಯೆಯ ಬೆಳವಣಿಗೆಅಂತಾರಾಷ್ಟ್ರೀಯ ಸಂಬಂಧಗಳುಧಾರವಾಡರಕ್ತಶಿವಬೇಬಿ ಶಾಮಿಲಿಹಸಿರುಕುಮಾರವ್ಯಾಸಕನ್ನಡ ಸಾಹಿತ್ಯ ಪರಿಷತ್ತುಕೇಸರಿ (ಬಣ್ಣ)ಕನ್ನಡದಲ್ಲಿ ವಚನ ಸಾಹಿತ್ಯಕ್ಯಾರಿಕೇಚರುಗಳು, ಕಾರ್ಟೂನುಗಳುಸ್ತ್ರೀವಾದಬಾಹುಬಲಿನೈಸರ್ಗಿಕ ಸಂಪನ್ಮೂಲಸರ್ಪ ಸುತ್ತುವಲ್ಲಭ್‌ಭಾಯಿ ಪಟೇಲ್ಭಾರತೀಯ ಮೂಲಭೂತ ಹಕ್ಕುಗಳುರಾಗಿಬುಡಕಟ್ಟುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಖಾಸಗೀಕರಣದ್ವಾರಕೀಶ್ಗುಪ್ತ ಸಾಮ್ರಾಜ್ಯಪಂಜುರ್ಲಿಗಣೇಶ೧೮೬೨ಮಲೈ ಮಹದೇಶ್ವರ ಬೆಟ್ಟಕೊಡಗುಷಟ್ಪದಿಟಿಪ್ಪು ಸುಲ್ತಾನ್ಭಾರತದಲ್ಲಿ ಕೃಷಿನಯಸೇನಚಿಲ್ಲರೆ ವ್ಯಾಪಾರಕರ್ನಾಟಕದ ಏಕೀಕರಣಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆಅರ್ಥ ವ್ಯವಸ್ಥೆಶೃಂಗೇರಿವಿಧಾನ ಪರಿಷತ್ತುಕರಗರಚಿತಾ ರಾಮ್ಗೋಕಾಕ್ ಚಳುವಳಿನಾಗರೀಕತೆಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಎಲಾನ್ ಮಸ್ಕ್1935ರ ಭಾರತ ಸರ್ಕಾರ ಕಾಯಿದೆಕೆ. ಎಸ್. ನಿಸಾರ್ ಅಹಮದ್ದೇವತಾರ್ಚನ ವಿಧಿನಾಟಕಗೋವಿಂದ ಪೈಲಕ್ಷ್ಮೀಶಬಿ.ಎಲ್.ರೈಸ್ನಿರುದ್ಯೋಗಶುಂಠಿಮಹಾವೀರ ಜಯಂತಿಭಾರತೀಯ ಕಾವ್ಯ ಮೀಮಾಂಸೆಕರ್ನಾಟಕದ ವಾಸ್ತುಶಿಲ್ಪಹೊಯ್ಸಳ ವಾಸ್ತುಶಿಲ್ಪ🡆 More