ಗೋಕಾಕ

ಗೋಕಾಕ್ ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ.

ಈ ಜಿಲ್ಲೆಯಲ್ಲಿ ಸುಪ್ರಸಿದ್ಧ ಗೋಕಾಕ ಜಲಪಾತವಿದೆ. ಈ ಜಲಪಾತದಡಿಯಲ್ಲಿ ವಿದ್ಯುತ್ಚಕ್ತಿಯನ್ನು ಉತ್ಪಾದಿಸಲಾಗುತ್ತದೆ.ಗೋಕಾಕ ನಗರವು ಮೂಲತ: ಒಂದು ವಾಣಿಜ್ಯ ನಗರವಾಗಿದೆ. ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯು ಬೆಲ್ಲ , ಗೋವಿನ ಜೊಳ ಮತ್ತು ಹತ್ತಿಯ ವ್ಯಾಪಾರಕ್ಕೆ ಹೆಸರುವಾಸಿಯಾಗಿದೆ. ಇತ್ತಿಚಿಗೆ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಕೈಗಾರಿಕಾ ನಗರವಾಗಿಯೂ ಗುರುತಿಸಿಕೊಂಡಿದೆ. ಇಲ್ಲಿ ಮುಖ್ಯವಾಗಿ ಜವಳಿ, ಸಕ್ಕರೆ, ಮತ್ತು ಗೊವಿನ ಜೊಳ ಸಂಸ್ಕರಣೆ, ಮತ್ತು ಸಿಮೆಂಟ್ ಕೈಗಾರಿಕೆಗಳು ನೆಲೆಗೊಂಡಿವೆ. ಬೆಳಗಾವಿ ಜಿಲ್ಲೆಯಲ್ಲಿ ಬೆಳಗಾವಿ ನಗರವನ್ನು ಹೊರತುಪಡಿಸಿ ಇದೆ ಅತ್ಯಂತ ಜನನಿಬಿಡ ಹಾಗೂ ದೊಡ್ಡ ನಗರವಾಗಿದೆ.

ಗೋಕಾಕ
ಗೋಕಾಕ
ಗೋಕಾಕ
ಗೋಕಾಕ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬೆಳಗಾವಿ
ನಿರ್ದೇಶಾಂಕಗಳು 16.1667° N 74.8333° E
ವಿಸ್ತಾರ 33.05 km²
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
67170
 - 2032.38/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 591 307
 - +08332
 - ಕೆಎ ೪೯

ಇತಿಹಾಸ

ಗೋಕಾಕ್ ನಗರವು ಐತಿಹಾಸಿಕವಾಗಿಯೂ ಪ್ರಾಮುಖ್ಯತೆ ಪಡೆದ ಸ್ಥಳವಾಗಿದೆ. ಬಾದಾಮಿ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು ಈ ಪ್ರದೇಶವನ್ನು ಆಳಿದ್ದಾರೆ. ತದನಂತರ ಮೊಘಲರ್ ಆಡಳಿತದಲ್ಲಿ ಬಿಜಾಪುರ ಸುಲ್ತಾನರು ಗೋಕಾಕ್ ಕೋಟೆಯನ್ನು ವಶಪಡಿಸಿಕೊಂಡರು. ಬಳಿಕ ಸವಣೂರಿನ ನವಾಬರು ಇದನ್ನು ಜಹಗೀರಾಗಿ ಪಡೆದುಕೊಂಡರು. ಇದಲ್ಲದೆ ಆಯಕಟ್ಟಿನ ಸ್ಥಳವಾಗಿದ್ದ ಹಿನ್ನೆಲೆಯಲ್ಲಿ ಈ ಪ್ರದೇಶ ಕೆಲಕಾಲ ಜಮಖಂಡಿ ಸಂಸ್ಥಾನ, ಕಿತ್ತೂರು ಸಂಸ್ಥಾನ ಹಾಗೂ ಮರಾಠಾ ಪೆಶ್ವೆಗಳ ಆಡಳಿತಕ್ಕೂ ಒಳಪಟ್ಟಿತ್ತು. ನಂತರದ ಬ್ರಿಟಿಷ್ ಆಡಳಿತಾವಧಿಯಲ್ಲಿ ಬೆಳಗಾವಿ ಜಿಲ್ಲೆಯ ಉಪವಿಭಾಗದ ಕೇಂದ್ರವಾಗಿತ್ತು. 1956 ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಮುಂಬಯಿ ಸರ್ಕಾರದಿಂದ ಬೇರ್ಪಟ್ಟು ಕರ್ನಾಟಕದೊಂದಿಗೆ ಸೇರಿಸಲ್ಪಟ್ಟಿತು.ಮತ್ತು ಸಮಿಪದ ಕಲ್ಲೋಳಿ ಗ್ರಾಮವು 1000 ಸಾವಿರ ಶತಮಾನದ ಇತಿಹಾಸ ಹೊಂದಿದೆ ಇಲ್ಲಿ 10ಕ್ಕು ಹೆಚ್ಚಿನ 1000 ಸಾವಿರ ಶತಮಾನದ ಜೈನರ ಶಾಸನಗಳು ದೊರೆತಿವೆ 100ಕ್ಕೂ ಹೆಚ್ಚು ಜೈನ ಬಸೀದಿಗಳನ್ನು ಹೊಂದಿದೆ ಎನ್ನುವ ಖ್ಯಾತಿಯನ್ನು ಈ ಗ್ರಾಮ ಪಡೆದಿದೆ. ಅದೆ ರಿತಿಯಾಗಿ ಯಾದವಾಡ ಗ್ರಾಮವು ಸುಮಾರು 5 ಶತಮಾನಗಳ ಇತಿಹಾಸ ಹೊಂದಿದೆ.....

ನಗರಾಡಳಿತ

ಗೋಕಾಕ್ ನಗರಸಭೆಯು ೧೮೫೩ ರಲ್ಲಿ ಸ್ಥಾಪನೆಗೊಂಡಿದೆ. ಆಗಿನ ಮುಂಬಯಿ ಸರ್ಕಾರ ( ಸದರ್ನ ಪಾಟ್ ಅಫ್ ಮಹಾರಾಷ್ಟ್ರ)ದಲ್ಲಿ ಪುಣೆ ಹಾಗು ಗೋಕಾಕ್ ದಲ್ಲಿ ಎಕಕಾಲಕ್ಕೆ ಈ ಮುನ್ಸಿಪಾಲ್ಟಿಗಳು ಅಸ್ತಿತ್ವಕ್ಕೆ ಬಂದಿವೆ. ಹೀಗಾಗಿ ಇದು ಕರ್ನಾಟಕದ ಹಳೆಯ ಮುನ್ಸಿಪಾಲ್ಟಿಗಳ ಪೈಕಿ ಒಂದೆನಿಸಿದೆ. ಈ ಹಿಂದೆ ಪುರಸಭೆ ಸ್ಥಾನ ಹೊಂದಿದ್ದ ಈ ಸ್ಥಳೀಯಾಡಳಿತವನ್ನು ಕರ್ನಾಟಕ ರಾಜ್ಯ ಸರ್ಕಾರ ೧೯೯೫ ರಲ್ಲಿ ನಗರಸಭೆಯಾಗಿ ಪರಿವರ್ತಿಸಿದೆ. ಒಟ್ಟು ೩೧ ಸದಸ್ಯರು ನಗರದ ವಿವಿಧ ವಾರ್ಡಗಳನ್ನು ಪ್ರತಿನಿಧಿಸುತ್ತಾರೆ.

ಗೋಕಾಕ್ ವಿಶೇಷತೆ

ಗೋಕಾಕ್ ಪಟ್ಟಣವು ಹಲವಾರು ವೈವಿದ್ಯಮಯ ವಿಷಯಗಳಿಗಾಗಿ ನಾಡಿನಲ್ಲಿ ಹೆಸರು ಮಾಡಿದೆ. ಕಟ್ಟಿಗೆಯ ಹಣ್ಣಿನ ಫಲಕ, ಗೊಂಬೆ ಮುಂತಾದ ಕರಕುಶಲ ವಸ್ತುಗಳು ಇಲ್ಲಿ ತಯಾರಾಗುತ್ತವೆ. ಇನ್ನು ಪ್ರಸಿದ್ದ ಸಿಹಿ ತಿನಿಸು 'ಕರದಂಟು' ಸಹ ಇಲ್ಲಿಯೇ ತಯಾರಾಗುತ್ತದೆ. ಜೊತೆಗೆ ಇತ್ತಿಚಿಗೆ ಲಡಗಿ ಲಾಡು (ಉಂಡಿ) ಸಹ ತಯಾರಿಸಲಾಗುತ್ತಿದ್ದು ಈ ಎರಡು ಸಿಹಿ ತಿನಿಸುಗಳು ಲೋಕ ಪ್ರಸಿದ್ದವಾಗಿವೆ. ಸಾಗರದಾಚೆಗೂ ಇವು ತಮ್ಮ ಕಂಪನ್ನು ಬೀರಿವೆ. ಇನ್ನು ಪಟ್ಟಣ ಜಿಲ್ಲಾ ಕೇಂದ್ರವಾಗುವತ್ತ ದಾಪುಗಾಲಿಟ್ಟಿದೆ. ಈ ಹಿಂದೆ ಸರ್ಕಾರ ನೇಮಿಸಿದ್ದ ಹುಂಡೇಕಾರ್ ಸಮಿತಿ , ಗದ್ದಿಗೌಡರ ಸಮಿತಿಗಳು ನಗರವನ್ನು ಜಿಲ್ಲಾ ಕೇಂದ್ರಕ್ಕೆ ಶಿಫಾರಸ್ಸು ಮಾಡಿವೆ. ಆದ್ರೆ ಬೆಳಗಾವಿ ಗಡಿ ವಿವಾದ ಇದಕ್ಕೆ ಅಡ್ಡಿಯಾಗಿದೆ. ವಿಚಿತ್ರ ಅಂದ್ರೆ ಗೋಕಾಕ್ ನಗರ ಆಯಕಟ್ಟಿನ ಸ್ಥಾನದಲ್ಲಿದ್ದರೂ ಸರ್ಕಾರ ಜಿಲ್ಲಾ ವಿಂಗಡನೆಗೆ ಮೀನಮೇಷ ಎಣಿಸುತ್ತಿದೆ. ಇನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಇಲ್ಲಿಯ ಕೊಡುಗೆ ಅಪಾರ. ಕನ್ನಡದ ಖ್ಯಾತ ಸಾಹಿತಿಗಳಾದ, ಕೃಷ್ಣಮೂರ್ತಿ ಪುರಾಣಿಕ, ಬೇಟಗೇರಿ ಕೃಷ್ಣಶರ್ಮ, ಬಸವರಾಜ್‌ ಕಟ್ಟಿಮನಿ, ಪ್ರೊ.ಕೆ.ಜಿ.ಕುಂದಣಗಾರ್, ಮುಂತಾದ ಹಿರಿಕರು ಈ ಗೋಕಾವಿ ನಾಡಿಗೆ ಸೇರಿದವರಾಗಿದ್ದಾರೆ.

ಅಖಿಲ ಭಾರತ ಕನ್ನಡ ಸಾಹಿತ್ಯ ಪರೀಷತ್

ತಾಲ್ಲೂಕು ಘಟಕ ಗೋಕಾಕ

ಗೌರವಾಧ್ಯಕ್ಷರು ಪ್ರೊ. ಚಂದ್ರಶೇಖರ ಅಕ್ಕಿ, ಅಧ್ಯಕ್ಷರು ಶ್ರೀ ಮಹಾಂತೇಶ ತಾಂವಶಿ, ನಿಕಟಪೂರ್ವ ಅಧ್ಯಕ್ಷರು ಶ್ರೀ ಬಾಲಶೇಖರ ಬಂದಿ, ಕಾರ್ಯದರ್ಶಿಗಳು ಸಿದ್ರಾಮ ದ್ಯಾಗಾನಟ್ಟಿ ಮತ್ತು ಶ್ರೀಮತಿ ರಜನಿ ಜಿರಗ್ಯಾಳ, ಕೋಶಾಧ್ಯಕ್ಷರು ಆನಂದ ಗೋಟಡಕಿ.

ಸದಸ್ಯರು

ಈಶ್ವರ ಬೆಟಗೇರಿ, ಪ್ರೊ. ಶಂಕರ ನಿಂಗನೂರ, ಬಸವರಾಜ ಮುರಗೋಡ, ಎಸ್.ಆರ್.ಮುದ್ದಾರ,ಸಚಿನ್ ಕಡಬಡಿ, ಡಾ. ಎಸ್.ಬಿ.ಹೊಸಮನಿ, ಬಿ.ಬಿ.ಇಟ್ಟನ್ನವರ, ಬಸವರಾಜ ಹಣಮಂತಗೋಳ, ಶೈಲಾ ಕೊಕರಿ, ಮಹಾದೇವ ಮಲಗೌಡ, ಎಸ್.ಎಸ್.ಪಾಟೀಲ,ಎಸ್.ಕೆ.ಮಠದ, ಶ್ರೀಮತಿ ರಾಜೇಶ್ವರಿ ವಡೆಯರ.

ರೈಲು ನಿಲ್ದಾಣ

ಗೊಕಾಕ್ ರೈಲು ನಿಲ್ದಾಣವು ಪಟ್ಟಣ ದಿಂದ ೧೦ ಕಿ.ಮಿ ಅಂತರದಲ್ಲಿ ಇದೆ...ಇದು ಬೆಳಗಾವಿ ಜಿಲ್ಲೆಯ ೫ನೇ ದೊಡ್ಡ ನಿಲ್ದ್ದಾಣ. ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗದಲ್ಲಿ ಈ ರೈಲು ನಿಲ್ದಾಣವು ಬರುತ್ತದೆ. ಈ ನಿಲ್ದಾಣದ ಪಕ್ಕದಲ್ಲಿ ಕೊಣ್ಣೂರು ಎಂಬ ಉಪ ನಗರವು ಬರುತ್ತದೆ. ಸಾಕಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರು ಇರುವುದರಿಂದ ಸದಾ ಜನಜಂಗುಳಿಯಿಂದ ತುಂಬಿರುತ್ತದೆ.ನಿಲ್ದಾಣದ ಉತ್ತರಕ್ಕೆ ಘಟಪ್ರಭಾ ಮತ್ತು ದಕ್ಶಿಣಕ್ಕೆ ಪಾಶ್ಚಪೂರ ರೈಲು ನಿಲ್ದಾಣಗಳು ಬರುತ್ತವೆ.ಇದನ್ನು ಗೋಕಾಕ್ ರೋಡ್ ನಿಲ್ದಾಣವೆಂದು ಕರೆಯುತ್ತಾರೆ.ಪ್ರೆಕ್ಶಣಿಯ ಸ್ಥಳಗಳಾದ ಗೊಕಾಕ್ ಜಲಪಾತ, ಗೊಡಚನಮಲ್ಕಿ ಜಲಪಾತ, ಘಟಪ್ರಭಾ ಪಕ್ಶಿದಾಮ, ದುಪದಾಳ ಹಾಗು ಹಿಡಕಲ್ ಜಲಾಶಯ, ಯೊಗಿಕೊಳ್ಳ ನಿಸರ್ಗದಾಮ ( ಗೊಕಾಕ್ ನವಿಲುದಾಮ) ಕಲ್ಲೋಳಿಯ ಹನುಮಂತ ದೇವರ ದೇವಸ್ಥಾನ ಮತ್ತು ಕಲ್ಲೋಳಿಯ ಪಾರ್ಶ್ವಾನಾಥ ಜೈನ್ ಬಸಿದಿ ಹಾಗೂ 1000 ಶತಮಾನದ ಶಾಸನಗಳು ಇಲ್ಲಿ ಸಿಗುತ್ತವೆ, ಮುಂತಾದ ಸ್ಥಳಗಳಿಗೆ ಹೋಗುವವರು ಇಲ್ಲಿ ಇಳಿಯಬಹುದಾಗಿದೆ.

ನಿಲುಗಡೆ ಇರುವ ರೈಲುಗಳು

  • ಮಿರಜ್ - ಬೆಳಗಾವಿವ ( ಪ್ಯಾಸೆಂಜರ್)
  • ಮಿರಜ್ - ಕ್ಯಾಸಲರಾಕ್ " "
  • ಮಿರಜ್ - ಲೋಂಡಾ " "
  • ಮಿರಜ್ - ಬಳ್ಳಾರಿ " "
  • ಕೊಲ್ಹಾಪುರ - ಬೆಂಗಳೂರು ( ರಾಣಿ ಚೆನ್ನಮಾ ಎಕ್ಸ್ ಪ್ರೆಕ್ಸ)
  • ಯಶವಂತಪುರ - ದಾದರ ( ಚಾಲುಕ್ಯ ಎಕ್ಸ್ ಪ್ರೆಕ್ಸ)ಸದ್ಯಕ್ಕೆ ನಿಲುಗಡೆ ಇಲ್ಲ.
  • ಕ್ಯಾಸಲರಾಕ್ - ಮಿರಜ್ ( ಪ್ಯಾಸೆಂಜರ್)
  • ಲೋಂಡಾ - ಮಿರಜ್ " "
  • ಬೆಳಗಾವಿವ - ಮಿರಜ್ " "
  • ಬೆಳಗಾವಿವ - ಮಿರಜ್ ಪುಶ ಪುಲ್
  • ಬೆಂಗಳೂರು - ಕೊಲ್ಹಾಪುರ( ರಾಣಿ ಚೆನ್ನಮಾ ಎಕ್ಸ್ ಪ್ರೆಕ್ಸ)
  • ದಾದರ - ಯಶವಂತಪುರ ( ಚಾಲುಕ್ಯ ಎಕ್ಸ್ ಪ್ರೆಕ್ಸ)

ರಾಜಕೀಯ

ರಮೇಶ ಜಾರಕಿಹೊಳಿ,ಸತೀಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಡಾ. ಮಹಾಂತೇಶ ಕಡಾಡಿ ಇಲ್ಲಿನ ರಾಜಕಾರಣಿಗಳು.

ಉಲ್ಲೇಖಗಳು

ಉಲ್ಲೇಖಗಳು

Tags:

ಗೋಕಾಕ ಇತಿಹಾಸಗೋಕಾಕ ನಗರಾಡಳಿತಗೋಕಾಕ ್ ವಿಶೇಷತೆಗೋಕಾಕ ರೈಲು ನಿಲ್ದಾಣಗೋಕಾಕ ನಿಲುಗಡೆ ಇರುವ ರೈಲುಗಳುಗೋಕಾಕ ರಾಜಕೀಯಗೋಕಾಕ ಉಲ್ಲೇಖಗಳುಗೋಕಾಕ ಉಲ್ಲೇಖಗಳುಗೋಕಾಕಗೋಕಾಕ ಜಲಪಾತಬೆಳಗಾವಿ

🔥 Trending searches on Wiki ಕನ್ನಡ:

ಮೊಹೆಂಜೊ-ದಾರೋಮೈಸೂರು ದಸರಾಪೆಟ್ರೋಮ್ಯಾಕ್ಸ್ (ಚಲನಚಿತ್ರ)ಭಾರತದ ಬ್ಯಾಂಕುಗಳ ಪಟ್ಟಿಸರ್ವಜ್ಞಕೂಡಲ ಸಂಗಮಸ್ತ್ರೀಬೌದ್ಧ ಧರ್ಮಕನ್ನಡ ಬರಹಗಾರ್ತಿಯರುಭಾರತೀಯ ಸಂವಿಧಾನದ ತಿದ್ದುಪಡಿಭರತೇಶ ವೈಭವಪ್ರೇಮಾಕಪ್ಪೆಚಿಪ್ಪುಭಗವದ್ಗೀತೆಶಾಸ್ತ್ರೀಯ ಭಾಷೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಸ್ವಾತಂತ್ರ್ಯಕಥೆವಿರೂಪಾಕ್ಷ ದೇವಾಲಯಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಸುಧಾ ಮೂರ್ತಿಕೊ. ಚನ್ನಬಸಪ್ಪಪ್ರಬಂಧ ರಚನೆಕರ್ನಾಟಕದ ಶಾಸನಗಳುವೇದವೀರಗಾಸೆಶಬ್ದಸವರ್ಣದೀರ್ಘ ಸಂಧಿವಚನಕಾರರ ಅಂಕಿತ ನಾಮಗಳುರಸ(ಕಾವ್ಯಮೀಮಾಂಸೆ)ಸಮಾಜಶಾಸ್ತ್ರಭಾರತ ಸರ್ಕಾರಗೋಪಾಲಕೃಷ್ಣ ಅಡಿಗಭಾರತದ ಬುಡಕಟ್ಟು ಜನಾಂಗಗಳುಮುಹಮ್ಮದ್ತಮಿಳುನಾಡುಕನ್ನಡ ಕಾವ್ಯಬಸವೇಶ್ವರಭತ್ತಬಾವಲಿಕಲಿಯುಗಕರ್ನಾಟಕದ ಕಲೆ ಮತ್ತು ಸಂಸ್ಕೃತಿಮಹಾಭಾರತಕೈಗಾರಿಕೆಗಳುಬೆಳ್ಳುಳ್ಳಿಮಾವುಎ.ಎನ್.ಮೂರ್ತಿರಾವ್ಸಂಖ್ಯಾಶಾಸ್ತ್ರಜಾಗತೀಕರಣಕರ್ನಾಟಕ ಪೊಲೀಸ್ಹೊಂಗೆ ಮರಮೂಢನಂಬಿಕೆಗಳುಕನ್ನಡಆಯುರ್ವೇದಕೆ. ಎಸ್. ನರಸಿಂಹಸ್ವಾಮಿಮೂಲಭೂತ ಕರ್ತವ್ಯಗಳುಗಾದೆ ಮಾತುತಮ್ಮಟ ಕಲ್ಲು ಶಾಸನಮೋಕ್ಷಗುಂಡಂ ವಿಶ್ವೇಶ್ವರಯ್ಯಮಧುಮೇಹಒಗಟುಹೊಯ್ಸಳೇಶ್ವರ ದೇವಸ್ಥಾನಅಂತರಜಾಲವಿಜಯಪುರಕಲಬುರಗಿಅರ್ಥಶಾಸ್ತ್ರಪ್ರೀತಿಕೋಟ ಶ್ರೀನಿವಾಸ ಪೂಜಾರಿಗ್ರಂಥ ಸಂಪಾದನೆರಾಮಹನುಮಾನ್ ಚಾಲೀಸಸಾಮ್ರಾಟ್ ಅಶೋಕಪಂಜೆ ಮಂಗೇಶರಾಯ್ಹಾ.ಮಾ.ನಾಯಕವ್ಯಕ್ತಿತ್ವಜಾತ್ರೆಸಾರ್ವಭೌಮತ್ವ🡆 More