ಗೊಂಡಿ ಭಾಷೆ

ಗೊಂಡಿ ಇಂದು ಗೊಂಡರು ಜನಾಂಗದ ಭಾಷೆ.

ಗೊಂಡರು ಭಾರತದ ಬುಡಕಟ್ಟು ಜನರಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದಾರೆ. ೧೯೯೯ ರ ಜನಗಣತಿಯ ಪ್ರಕಾರ ಗೊಂಡರು ೯,೩೧,೯೦೦೦ ಜನಸಂಖ್ಯೆಯನ್ನು ಹೊಂದಿರುವುದನ್ನು ನಾವು ಕಾಣಬಹುದು. ಈ ಜನಾಂಗ ಗಣನೀಯವಾಗಿ ಮಹಾರಾಷ್ಟ್ರ, ಛತ್ತೀಸಗಡ, ಆಂಧ್ರಪ್ರದೇಶ, ಒರಿಸ್ಸಾ, ಗುಜರಾತ್, ಪಶ್ಚಿಮ ಬಂಗಾಳ, ಕರ್ನಾಟಕದ ಉತ್ತರದಲ್ಲಿ ಕಾಣಸಿಗುತ್ತಾರೆ. ಈ ಎಲ್ಲಾ ಕಡೆಯಲ್ಲೂ ಗೊಂಡಿ ಭಾಷೆಯು ಹೇರಳವಾಗಿ ಬಳಕೆಯಲ್ಲಿದೆ. ಗೊಂಡಿ ಭಾಷೆಯು ದ್ರಾವಿಡ ಭಾಷಾ ಗುಂಪಿಗೆ ಸೇರಿದ್ದಾಗಿದೆ. ಈ ಭಾಷೆಯು ತೆಲುಗು ಹಾಗೂ ತಮಿಳು ಭಾಷೆಗೆ ತುಂಬಾ ಹೋಲುವ ಭಾಷೆಯಾಗಿದೆ.

ಗೊಂಡಿಭಾಷೆಯ ಇತಿಹಾಸ

ಕ್ರಿ.ಶ ೩೫೮ರಲ್ಲಿ ಗೊಂಡಿ ಸಮುದಾಯದ ಅರಸರು ಕರ್ನಾಟಕ ಉತ್ತರವನ್ನು ಆಳ್ವಿಕೆ ನಡೆಸಿದ್ದರು ಎಂದು ಶಾಸನಗಳ ಮೂಲಕ ತಿಳಿದುಬರುತ್ತದೆ. ನಾಲ್ಕು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಗೊಂಡಿ ಭಾಷೆ ತನ್ನದೇ ಆದ ಪರಂಪರೆ ಹೊಂದಿದೆ.ಈ ಭಾಷೆಗೆ ರಾಷ್ಟ್ರೀಯ ಮಾನ್ಯತೆ ದೊರಕಿಸಬೇಕಾದ ಅರ್ಹತೆಯೂ ಇದೆ.ಈ ಭಾಷೆಯ ಬಗ್ಗೆ ಅನೇಕ ಭಾಷಾತಜ್ಞರು ಸಂಶೋಧನೆಯನ್ನು ನಡೆಸಿದ್ದಾರೆ. ಗೊಂಡರ ಭಾಷೆಯು ಎಲ್ಲಾ ಸ್ಥಳಗಳಲ್ಲಿಯೂ ಒಂದೇ ರೀತಿ ಇಲ್ಲ.ಅದು ಪ್ರದೇಶದಿಂದ ಪ್ರದೇಶಕ್ಕೆ ವ್ಯಾತ್ಯಾಸಗೊಂಡಿದೆ.ಬದಲಾವಣೆ ಜೀವಂತ ಭಾಷೆಯ ಮುಖ್ಯಲಕ್ಷಣ. ಸಹಜವಾಗಿಯೇ ನೆರೆಹೊರೆಯ ಭಾಷೆಗಳ ಪ್ರಭಾವ ಜೀವಂತ ಭಾಷೆಯ ಮೇಲೆ ಉಂಟಾಗುತ್ತದೆಯಾದರೂ ಗೊಂಡರ ಭಾಷೆ ತನ್ನ ವೈಶಿಷ್ಟ್ಯತೆಯನ್ನೂ ಇಂದಿಗೂ ಉಳಿಸಿಕೊಂಡಿದೆ.

ಗೊಂಡಿಭಾಷೆಯ ಸಾಹಿತ್ಯ

ಗೊಂಡರ ಸಾಹಿತ್ಯ ಸಮೃದ್ಧವಾಗಿದೆ. ಕಾವ್ಯ,ಕಥೆ,ಪುರಾಣ, ಐತಿಹ್ಯ,ಗಾದೆ ಮತ್ತು ಒಗಟು ಈ ಪ್ರಕಾರಗಳ ಸಾಹಿತ್ಯವನ್ನು ಗೊಂಡರು ಸೃಷ್ಟಿಸಿದ್ದಾರೆ. ಆದರೆ ಪುರಾಣಗಳನ್ನು ಅವರು ಹೆಚ್ಚಾಗಿ ಸೃಷ್ಟಿಮಾಡಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಯಾವುದೇ ಒಂದು ಜನಾಂಗದ ಪುರಾಣಗಳು ಆಯಾ ಜನಾಂಗವು ತನ್ನ ಬಗ್ಗೆ ತಾನು ಇಟ್ಟಿಕೊಂಡಿರುವ ಕಲ್ಪನೆಗಳನ್ನು ವ್ಯಕ್ತಪಡಿಸುತ್ತದೆ. ತಾವು ಯಾರು,ಯಾಕೆ ಹೀಗಿದ್ದೇವೆ ಎಂಬುದನ್ನು ಕಂಡುಕೊಳ್ಳಲು ಪ್ರತಿಯೊಂದು ಜನಾಂಗವು ಪುರಾಣಗಳ ರಚನೆಯನ್ನು ಕೈಗೊಳ್ಳುತ್ತದೆ. ಈ ಜಾಗತಿಕ ತಿಳುವಳಿಕೆಯ ಹಿನ್ನೆಲೆಯಲ್ಲಿ ಗೊಂಡರ ಪುರಾಣ ರಚನೆ ಆಶ್ಚರ್ಯಕರ ಏನೂ ಕಾಣುವುದಿಲ್ಲ.

ಛತ್ತೀಸಗಡದ ಗೊಂಡಾ ಗುಂಪಿನ ಬುಡಕಟ್ಟು ಜನರು ತೀರಾ ಇತ್ತೀಚಿಗೆ ಮೊಬೈಲ್ ಅಪ್ಲಿಕೇಶನ್ ಸಹಾಯದೊಂದಿಗೆ ತಮ್ಮ ಮಾತೃಭಾಶ್ರಯಲ್ಲೇ ಸುದ್ದಿಗಳನ್ನು ಆಲಿಸುತ್ತಿದ್ದಾರೆ. ಟೆಕ್ಸ್ಟ್ ಟು ಸ್ಪಿಚ್ ತಂತ್ರಜ್ಞಾನವನ್ನು ಹೊಂದಿರುವ ಆದಿವಾಸಿ ರೇಡಿಯೋ ಅಪ್ಲಿಕೇಶನ್ ಗೊಂಡಿ ಭಾಷೆಯಲ್ಲಿ ವರದಿಗಳನ್ನು ಒದಲಿದೆ. ಇದು ವಿವಿಧ ಬಾಹ್ಯ ಮೂಲಗಳಿಂದ ಗೊಂಡಿ ಭಾಷೆಯಲ್ಲಿ ವಿಷಯಗಳ ಭಂಡಾರವನ್ನು ಲಭ್ಯವಿರುವಂತೆ ಮಾಡುತ್ತಿದೆ. ಒಟ್ಟಾರೆ "ಗೊಂಡಿ" ಭಾಷೆ ಈ ಡಿಜಿಟಲ್ ಯುಗಕ್ಕೂ ಹೊಂದಿಕೊಂಡು ತನ್ನ ಭಾಷೆಯ ಪ್ರಸರತೆ ಹಾಗೂ ಪ್ರಸಿದ್ಧತೆ ಹೆಚ್ಚಿಸಿಕೊಳ್ಳುವತ್ತಾ ಹೆಜ್ಜೆ ಇಟ್ಟಿದೆ

ಗೊಂಡಿ ಭಾಷೆಬಳಕೆಯಲ್ಲಿರುವ ಪ್ರದೇಶಗಳು:

  1. ಮಹಾರಾಷ್ಟ್ರ
  2. ಛತ್ತೀಸಗಡ,
  3. ಆಂಧ್ರಪ್ರದೇಶ
  4. ಒರಿಸ್ಸಾ
  5. ಗುಜರಾತ್
  6. ಪಶ್ಚಿಮ ಬಂಗಾಳ
  7. ಕರ್ನಾಟಕ

ಗೊಂಡಿ ಭಾಷೆಯ ಉಪಭಾಷೆಗಳು

  • ಡೋರ್ಲಾ
  • ಮಡಿಯಾ
  • ಮುರಿಯಾ
  • ರಾಜ್ ಗೊಂಡ್

ಒಟ್ಟು ಮಾತನಾಡುವವರು:೨೦೧೧ರ ಜನಗಣತಿಯ ಪ್ರಕಾರ ೧೧ ಮಿಲಿಯನ್ ಅಷ್ಟು ಜನರು ಮಾತನಾಡುತ್ತಾರೆ.

ಗೊಂಡಿಬರವಣಿಗೆ

ಉಲ್ಲೇಖಗಳು

Tags:

ಗೊಂಡಿ ಭಾಷೆ ಗೊಂಡಿಭಾಷೆಯ ಇತಿಹಾಸಗೊಂಡಿ ಭಾಷೆ ಗೊಂಡಿಭಾಷೆಯ ಸಾಹಿತ್ಯ[೩]ಗೊಂಡಿ ಭಾಷೆ ಯ ಉಪಭಾಷೆಗಳುಗೊಂಡಿ ಭಾಷೆ ಗೊಂಡಿಬರವಣಿಗೆಗೊಂಡಿ ಭಾಷೆ ಉಲ್ಲೇಖಗಳುಗೊಂಡಿ ಭಾಷೆಒರಿಸ್ಸಾಕರ್ನಾಟಕಗುಜರಾತ್ಗೊಂಡರುಛತ್ತೀಸಗಡತಮಿಳುತೆಲುಗುದ್ರಾವಿಡಪಶ್ಚಿಮ ಬಂಗಾಳಭಾರತ

🔥 Trending searches on Wiki ಕನ್ನಡ:

ರವಿಚಂದ್ರನ್ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುರಾಶಿಕರಗಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಕನ್ನಡಕಾಂಕ್ರೀಟ್ಚಾಣಕ್ಯಕರ್ನಾಟಕದ ಇತಿಹಾಸಅರವಿಂದ ಘೋಷ್ಇದ್ದಿಲುಶ್ರೀಕೃಷ್ಣದೇವರಾಯಹಣ್ಣುಅಕ್ಬರ್ಉತ್ತರ ಕರ್ನಾಟಕಚಿದಾನಂದ ಮೂರ್ತಿಛತ್ರಪತಿ ಶಿವಾಜಿಮಲೇರಿಯಾಇನ್ಸ್ಟಾಗ್ರಾಮ್ಭಾಷಾ ವಿಜ್ಞಾನಮಧುಮೇಹಸಂಖ್ಯೆವೃತ್ತಪತ್ರಿಕೆನಗರೀಕರಣರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣವ್ಯವಸಾಯವಾಲಿಬಾಲ್ಯಕ್ಷಗಾನಸವರ್ಣದೀರ್ಘ ಸಂಧಿಜನ್ನಅಲೆಕ್ಸಾಂಡರ್ಕರ್ನಾಟಕ ವಿಧಾನ ಪರಿಷತ್ಪರಿಸರ ರಕ್ಷಣೆಕರ್ನಾಟಕದ ಅಣೆಕಟ್ಟುಗಳುಜಯಮಾಲಾವಾಲ್ಮೀಕಿಸಿದ್ದರಾಮಯ್ಯಕರ್ನಾಟಕದಲ್ಲಿ ಪಂಚಾಯತ್ ರಾಜ್ಕಬಡ್ಡಿಜಯಚಾಮರಾಜ ಒಡೆಯರ್ಬಿ.ಎಫ್. ಸ್ಕಿನ್ನರ್ಚಿನ್ನಬೇಸಿಗೆಗೋಕರ್ಣಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣವಸ್ತುಸಂಗ್ರಹಾಲಯಹಾಗಲಕಾಯಿಭಾರತದ ಉಪ ರಾಷ್ಟ್ರಪತಿಕಿತ್ತಳೆನಯನತಾರಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಜ್ಯೋತಿಷ ಶಾಸ್ತ್ರಜಿಪುಣದೇವರ/ಜೇಡರ ದಾಸಿಮಯ್ಯತಂತ್ರಜ್ಞಾನಹಸಿರುಮನೆ ಪರಿಣಾಮಬ್ಲಾಗ್ವಿರಾಟ್ ಕೊಹ್ಲಿಪ್ಯಾರಾಸಿಟಮಾಲ್ಪ್ರಿಯಾಂಕ ಗಾಂಧಿಅಲ್-ಬಿರುನಿಹೊಸ ಆರ್ಥಿಕ ನೀತಿ ೧೯೯೧ಧೃತರಾಷ್ಟ್ರಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಅಕ್ಕಮಹಾದೇವಿಭಗತ್ ಸಿಂಗ್ಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಫಿರೋಝ್ ಗಾಂಧಿಭಾರತೀಯ ಸಂವಿಧಾನದ ತಿದ್ದುಪಡಿಕನ್ನಡ ಬರಹಗಾರ್ತಿಯರುಕರ್ನಾಟಕ ಸರ್ಕಾರಪಂಚತಂತ್ರಲೋಕಸಭೆಗ್ರಂಥ ಸಂಪಾದನೆಚಿಕ್ಕಬಳ್ಳಾಪುರಭಾರತೀಯ ಶಾಸ್ತ್ರೀಯ ನೃತ್ಯಕರ್ನಾಟಕ ಹೈ ಕೋರ್ಟ್🡆 More