ಗುಡಿ ಪಾಡ್ವ

ಗುಡಿ ಪಾಡ್ವ ಅಥವಾ ಗುಢಿ ಪಾಡ್ವ (ಮರಾಠಿ:गुढी पाडवाಇದನ್ನು ಸಾಮಾನ್ಯವಾಗಿ ಹೇಳುವಾಗ ಡಿ ಮತ್ತು ಢಿ ಅಕ್ಷರಗಳಿಂದಾಗಿ ವ್ಯತ್ಯಾಸ ಉಂಟಾಗುತ್ತದೆ) ಎಂಬುದು ಹಿಂದೂಗಳ ಪವಿತ್ರ ದಿನವಾದ ಚೈತ್ರ ಮಾಸದ ಶುಕ್ಲ ಪ್ರತಿಪದ ದ ಮರಾಠಿ ಹೆಸರು.

ಇದನ್ನು ಚಾಂದ್ರಸೌರ ಹಿಂದೂ ಕ್ಯಾಲೆಂಡರ್‌ನ ಚೈತ್ರ ಮಾಸದ ಪ್ರಾರಂಭವನ್ನು ಸೂಚಿಸುವುದಕ್ಕಾಗಿ ಆಚರಿಸಲಾಗುತ್ತದೆ.

Gudhi Padwa or Samvatsar Padvo
ಗುಡಿ ಪಾಡ್ವ
A Gudhi is erected on Gudhi Padwa
ಆಚರಿಸಲಾಗುತ್ತದೆMarathi Hindus, Konkanis
ರೀತಿHindu lunar new year's Day
ಆಚರಣೆಗಳು1 day
ಆರಂಭChaitra
ದಿನಾಂಕMarch 22
೨೦೨೪ datedate missing (please add)
Related toHindu calendar

ಬೇರೆ ಭಾಷೆಗಳು, ರಾಜ್ಯಗಳು ಮತ್ತು ಜನರಲ್ಲಿ ಗುಡಿ ಪಾಡ್ವ

ಮಹಾರಾಷ್ಟ್ರದಲ್ಲಿ ಇದನ್ನು ಗುಡಿ ಪಾಡ್ವ ಎಂದು ಕರೆಯಲಾಗುತ್ತದೆ. ಈ ಹಬ್ಬವನ್ನು ಹಿಂದುಜಾಗೃತಿ ಎಂದು ಕೂಡಾ ಹೇಳುತ್ತಾರೆ.

ಭಾರತದ ಇತರೆ ಪ್ರದೇಶಗಳಲ್ಲಿ ಹಬ್ಬವನ್ನು ಆಚರಿಸುವ ಸಮಯಗಳು

ವ್ಯುತ್ಪತ್ತಿ

ಪಾಡ್ವ ಎಂಬ ಶಬ್ಧವು ಸಂಸ್ಕೃತದ ಸೂರ್ಯಮಾನ ತಿಂಗಳಿನ ಮೊದಲನೆ ದಿನ ಪ್ರತಿಪದದಿಂದ ಬಂದದ್ದು[ಸೂಕ್ತ ಉಲ್ಲೇಖನ ಬೇಕು] ಅಂದರೆ ಅಮವಾಸ್ಯೆಯ ದಿನದ ನಂತರದ ಮೊದಲ ದಿನ. ಹಬ್ಬಕ್ಕೆ ಗುಢಿ ಎನ್ನುವ ಹೆಸರು ನೀಡಿ ಅದನ್ನು ಸೂಚಿಸಲಾಗಿದೆ. ಪಾಡ್ವ ಅಥವಾ ಪಡವೊ ಎಂಬ ಶಬ್ಧವು ದೀಪಾವಳಿಯ ಮೂರನೆಯ ದಿನವಾದ ಬಲಿಪ್ರತಿಪದವನ್ನು ಸೂಚಿಸುತ್ತದೆ [ಸೂಕ್ತ ಉಲ್ಲೇಖನ ಬೇಕು], ಇದು ಸುಗ್ಗಿ ಕಾಲದ ಕೊನೆಯಲ್ಲಿ ಬರುವ ಹಬ್ಬವಾಗಿದೆ.

ಮಹತ್ವ

ಹಬ್ಬದ ಸಮಯ

ವರ್ಷದ ಮೊದಲ ತಿಂಗಳ ಮೊದಲ ದಿನವಾಗಿದ್ದು, ಗುಡಿ ಪಾಡ್ವವು ಮರಾಠಿ ಜನರ ಹೊಸವರ್ಷವೂ ಆಗಿದೆ.[ಸೂಕ್ತ ಉಲ್ಲೇಖನ ಬೇಕು]

ಕೃಷಿಗೆ ಸಂಬಂಧಿಸಿದಂತೆ

ಭಾರತವು ಹೆಚ್ಚಾಗಿ ರೈತಾಪಿ ಸಮಾಜವಿರುವ ದೇಶವಾಗಿದೆ. ಇದರಿಂದಾಗಿ ಹಬ್ಬಗಳನ್ನು ಹೆಚ್ಚಾಗಿ ಬೆಳೆಯ ಕೊಯ್ಲು ಹಾಗೂ ಬಿತ್ತನೆ ಸಮಯದಲ್ಲಿ ಆಚರಿಸಲಾಗುತ್ತದೆ.of crops. ಈ ದಿನವು ವ್ಯವಸಾಯದ ಸುಗ್ಗಿಯ ಕೊನೆಯ ದಿನ ಹಾಗೂ ಹೊಸದರ ಪ್ರಾರಂಭದ ದಿನವಾಗಿರುತ್ತದೆ. ಸೂರ್ಯ ಕಾಲದ ಕೊನೆಯಲ್ಲಿ ಗುಡಿ ಪಾಡ್ವವನ್ನು ಆಚರಿಸಲಾಗುತ್ತದೆ.

ಜ್ಯೋತಿಷ್ಯಶಾಸ್ತ್ರ

ಗಿಡಿ ಪಾಡ್ವವು ಸೇಡ್-ಟೀನ್ ಮಹೂರ್ತಗಳಲ್ಲಿ ಒಂದಾಗಿದೆ (ಮರಾಠಿಯಿಂದ ಭಾಷಾಂತರವಾಗಿದೆ: ಭಾರತದ ಸೂರ್ಯಮಾನ ಕ್ಯಾಲೆಂಡರ್‌ನ 3 ಹಾಗೂ ಅರ್ಧ ಶುಭಕರವಾದ ದಿನವಾಗಿದೆ). ಪೂರ್ಣ ಪಟ್ಟಿಯು ಕೆಳಕಂಡಂತಿದೆ

  • ಗುಡಿ ಪಾಡ್ವ - ಚೈತ್ರ ಮಾಸ (ಶುಕ್ಲ ಪಕ್ಷ) ದ 1ನೆಯ ತಿಥಿ
  • ವಿಜಯದಶಮಿ - ಅಶ್ವಿನಿ ನಕ್ಷತ್ರದ 10ನೆಯ ತಿಥಿ
  • ಬಲಿಪ್ರತಿಪದ - ಕಾರ್ತೀಕ ಮಾಸದ (ಶುಕ್ಲ ಪಕ್ಷ) 1ನೆಯ ತಿಥಿ
  • ಅಕ್ಷಯ ತೃತೀಯಾ

ಐತಿಹಾಸಿಕ

ಯುದ್ಧದಲ್ಲಿ ಹುನಾರರನ್ನು ಸೋಲಿಸಿದ ನಂತರದ ಶಾಲಿವಾಹನ ಕ್ಯಾಲೆಂಡರ್‌ನ ಪ್ರಾರಂಭವನ್ನು ಕೂಡ ಇದು ನೆನಪಿಸುತ್ತದೆ.

ಧಾರ್ಮಿಕ

ಬ್ರಹ್ಮ ಪುರಾಣದ ಪ್ರಕಾರ ಮಹಾ ಜಲಪ್ರಳಯದ ನಂತರ ಪ್ರಪಂಚವನ್ನು ಸೃಷ್ಟಿಸಿದ ಬ್ರಹ್ಮ ಪ್ರಾರಂಭದ ದಿನವನ್ನು ಸೂಚಿಸುವುದಕ್ಕಾಗಿ ಇದನ್ನು ಸೃಷ್ಟಿಸಿದನೆನ್ನಲಾಗಿದೆ.

ಕಾಲಿಕ

ಈ ದಿನದಂದು ಸೂರ್ಯನು ಭೂಮಧ್ಯರೇಖೆ ಹಾಗೂ ನಡು ಹಗಲಿನ ರೇಖೆಗಳ ಮಧ್ಯದಲ್ಲಿರುತ್ತಾನೆ. ಹಿಂದೂ ಕ್ಯಾಲೆಂಡರ್‌ನ ಪ್ರಕಾರ ವಸಂತ ಋತು ಅಥವಾ ಸುಗ್ಗಿ ಕಾಲದ ಪ್ರಾರಂಭವಾಗಿದೆ.

ಗುಡಿ

ಗುಡಿ ಪಾಡ್ವ 
ಗುಡಿ

ಗುಡಿ ಪಾಡ್ವದಂದು ಸಾಂಪ್ರದಾಯಿಕ ಮಹಾರಾಷ್ಟ್ರ ಜನರ ಮನೆಗಳಲ್ಲಿ ಕಿಟಕಿಗಳ ಹೊರತೆ ನೇತು ಹಾಕಿರುವ ಗುಡಿಗಳನ್ನು ಕಾಣಬಹುದು. ಗುಡಿ ಎಂದರೆ ಹಸಿರು ಅಥವಾ ಹಳದಿ ಬಣ್ಣದ ಜರಿ ಹೊಂದಿರುವ ಬಟ್ಟೆಯನ್ನು ಉದ್ದನೆಯ ಕೋಲಿಗೆ ಸಿಕ್ಕಿಸಿ ಅದಕ್ಕೆ ಕಬ್ಬು , ಹಾಗೂ ಬೇವಿನ ಎಲೆಗಳನ್ನು ಸಿಕ್ಕಿಸಲಾಗುತ್ತದೆ[ಸೂಕ್ತ ಉಲ್ಲೇಖನ ಬೇಕು], ಮಾವಿನ ತಳಿರನ್ನು ಹಾಕಿ ಕೆಂಪು ಹೂವುಗಳ ಹಾರವನ್ನೂ ಹಾಕಲಾಗುತ್ತದೆ. ಬೆಳ್ಳಿಯ ಅಥವಾ ತಾಮ್ರದ ಬಿಂದಿಗೆಯನ್ನು ಬೋರಲು ಮಾಡಿ ಅದರ ಮೇಲೆ ಹಾಕಲಾಗುತ್ತದೆ. ಈ ಗುಡಿಯನ್ನು ಮನೆಯ ಹೊರಗೆ ಕಿಟಕಿಯ ಮೇಲೆ ಅಥವಾ ಮನೆಯ ಮೇಲ್ಭಾಗದಲ್ಲಿ ಎಲ್ಲರಿಗೂ ಕಾಣಿಸುವಂತೆ ಹಾಕಲಾಗುತ್ತದೆ.

ಗುಡಿಯನ್ನು ಹೀಗೆ ಹಾಕುವುದರ ಹಿಂದೆ ಕೆಲವು ಮಹತ್ವಗಳಿವೆ, ಅವೆಂದರೆ

  • ಗುಡಿಯು ಬ್ರಹ್ಮ ಧ್ವಜ ವನ್ನು ಬಿಂಬಿಸುತ್ತದೆ (ಭಾಷಾಂತರ: ಬ್ರಹ್ಮನ ಬಾವುಟ) ಇದನ್ನು ಬ್ರಹ್ಮ ಪುರಾಣದಲ್ಲಿ ಉಲ್ಲೇಖಿಸಲಾಗಿದೆ, ಏಕೆಂದರೆ ಭಗವಾನ್ ಬ್ರಹ್ಮನು ವಿಶ್ವವನ್ನು ರೂಪಿಸಿದ್ದು ಈ ದಿನವೇ. ಇದು ಇಂದ್ರಧ್ವಜ ವನ್ನು ಬಿಂಬಿಸುತ್ತದೆ. (ಭಾಷಾಂತರ: ಇಂದ್ರನ ಬಾವುಟ).
  • ಪುರಾಣದ ಪ್ರಕಾರ, ಗುಡಿಯು ರಾಮನ ವಿಜಯದ ಸಂಕೇತವಾಗಿದೆ, ರಾವಣನನ್ನು ಸಂಹಾರಮಾಡಿ ವಿಜಯ ಹಾಗೂ ಸಡಾಗರದಿಂದ ಅಯೋಧ್ಯೆಗೆ ಹಿಂತಿರುಗಿದ ದಿನವಾಗಿದೆ. ವಿಜಯದ ಸಂಕೇತವನ್ನು ಎಂದಿಗೂ ಎತ್ತರದಲ್ಲಿ ಹಿಡಿಯಲಾಗುತ್ತದೆ ಹಾಗೆಯೇ ಈ ಗುಡಿ (ಧ್ವಜ). ಈ ಹಬ್ಬವನ್ನು ರಾಮನು 14 ವರ್ಷಗಳ ವನವಾಸವನ್ನು ಮುಗಿಸಿ ಹಿಂದಿರುಗಿದ ಸಂಭ್ರಮಾಚರಣೆಯ ಸಂಕೇತವೆಂದು ಕೂಡಾ ಹೇಳಲಾಗಿದೆ.
  • ಮಹಾರಾಷ್ಟ್ರಿಗರು ಈ ದಿನವನ್ನು ಮರಾಠಾ ಸೇನೆಯ ಮುಖ್ಯಸ್ಥ ಛತ್ರಪತಿ ಶಿವಾಜಿಯ ವಿಜಯದ ಸಂಕೇತವೆಂದು ಹೇಳುತ್ತಾರೆ. ಇದು ಸಕರ ಮೇಲೆ ಯುದ್ಧ ಮಾಡಿ ಗೆದ್ದ ರಾಜ ಶಾಲಿವಾಹನನು ಪೈತಾನಕ್ಕೆ ಹಿಂದಿರುಗಿದ ದಿನವಾಗಿಯೂ ಆಚರಿಸುತ್ತಾರೆ.
  • ಕೇಡನ್ನು ಕೊನೆಗೊಳಿಸಿ ಸಮೃದ್ಧಿ ಹಾಗೂ ಶುಭಯೋಗವನ್ನು ಮನೆಯೊಳಗೆ ಆಹ್ವಾನಿಸುವುದಕ್ಕಾಗಿ ಗುಡಿಯನ್ನು ಸ್ಥಾಪಿಸುವುದೆಂದು ನಂಬಲಾಗಿದೆ.

ಗುಡಿಯನ್ನು ಮನೆಯ ಮುಖ್ಯದ್ವಾರದ ಬಲಭಾಗದಲ್ಲಿ ಸ್ಥಾಪಿಸಲಾಗುತ್ತದೆ. ಬಲಭಾಗವು ಚೈತನ್ಯದ ಸಂಕೇತವಾಗಿರುತ್ತದೆ.

  • ದೊಂಬಿವಿಲಿ ನಗರವು 13 ವರ್ಷಗಳ ಹಿಂದೆ ಗುಡಿ ಪಾಡ್ವದಲ್ಲಿ ಸಾಮಾಜಿಕ-ಸಾಂಸ್ಕೃತಿಕ ಅರ್ಥದಲ್ಲಿ "ಶೋಭ ಯಾತ್ರೆ ಯನ್ನು ಕೈಗೊಂಡಿತ್ತು."

ಆಚರಣೆಗಳು

ಗುಡಿ ಪಾಡ್ವ 
ರಂಗೋಲಿ

ಹಬ್ಬದ ದಿನದಂದು, ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ಹಸುವಿನ ಸಗಣಿಯಿಂದ ಸಾರಿಸಲಾಗುತ್ತದೆ. ನಗರಗಳಲ್ಲಿಯೂ ಕೂಡಾ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಹೆಂಗಸರು ಮತ್ತು ಮಕ್ಕಳು ರಂಗೋಲಿ ಚಿತ್ತಾರಗಳನ್ನು ಮನೆಯ ಮುಂಭಾಗದಲ್ಲಿ ಬಿಡಿಸಿ ಬಣ್ಣಗಳನ್ನು ತುಂಬುತ್ತಾರೆ. ಹಬ್ಬದ ಎಲ್ಲರೂ ಹೊಸಬಟ್ಟೆಗಳನ್ನು ಧರಿಸಿ ಕುಟುಂಬದವರೆಲ್ಲಾ ಒಟ್ಟಾಗಿ ಸೇರುತ್ತಾರೆ.

ಸಾಂಪ್ರದಾಯಿಕವಾಗಿ, ಕುಟುಂಬಗಳು ಬೇವಿನ ಮರದ ಎಲೆಗಳನ್ನು ತಿನ್ನುವುದರ ಮೂಲಕ ಹಬ್ಬದ ಆಚರಣೆಯನ್ನು ಪ್ರಾರಂಭಿಸಬೇಕಾಗುತ್ತದೆ. ಕೆಲವುಬಾರಿ, ಬೇವಿನ ಎಲೆಯನ್ನು ಬೆಲ್ಲದೊಂದಿಂಗೆ ಹಾಗೂ ಹುಣಸೆ ಹಣ್ಣಿನೊಂದಿಗೆ ಬೆರೆಸಿ ತಿನ್ನುವ ಆಚರಣೆ ಇದೆ. ಕುಟುಂಬದ ಎಲ್ಲಾ ಸದಸ್ಯರುಗಳು ಮೊದಲಿಗೆ ಈ ಮಿಶ್ರಣವನ್ನು ತಿಂದರೆ ದೇಹದ ರೋಗ ನಿರೋಧಕ ವ್ಯವಸ್ಥೆಯು ಸುಧಾರಿಸಿ ಖಾಯಿಲೆಗಳೊಂದಿಗೆ ಹೋರಾಡುವುದೆಂಬ ನಂಬಿಕೆ ಇದೆ.

ಮಹಾರಾಷ್ಟ್ರದ ಕುಟುಂಬಗಳು ಶ್ರೀಖಂಡ ಹಾಗೂ ಪೂರಿಯನ್ನು ಈ ದಿನದಂದು ತಯಾರಿಸುತ್ತಾರೆ. ಕೊಂಕಣಿ ಜನರು ಕನಾಂಗಚಿ ಖೀರ್ ತಯಾರಿಸುತ್ತಾರೆ, ಇದು ಸಿಹಿ ಗೆಣಸು, ತೆಂಗಿನಕಾಯಿ ಹಾಲು, ಬೆಲ್ಲ, ಅಕ್ಕಿ ಹಿಟ್ಟು ಇತ್ಯಾದಿಗಳು ಹಾಗೂ ಸಣ್ಣಗಳಿಂದ ತಯಾರಿಸುವ ಪಾಯಸ ವಾಗಿದೆ.

ಇವನ್ನೂ ಗಮನಿಸಿ

  • ಅಳತೆಯ ಹಿಂದೂ ಮಾನಗಳು
  • ಪಂಚಾಂಗ
  • ಶೋಭ ಯಾತ್ರೆ

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಗುಡಿ ಪಾಡ್ವ ಬೇರೆ ಭಾಷೆಗಳು, ರಾಜ್ಯಗಳು ಮತ್ತು ಜನರಲ್ಲಿ ಗುಡಿ ಪಾಡ್ವ ವ್ಯುತ್ಪತ್ತಿಗುಡಿ ಪಾಡ್ವ ಮಹತ್ವಗುಡಿ ಪಾಡ್ವ ಗುಡಿಗುಡಿ ಪಾಡ್ವ ಆಚರಣೆಗಳುಗುಡಿ ಪಾಡ್ವ ಇವನ್ನೂ ಗಮನಿಸಿಗುಡಿ ಪಾಡ್ವ ಉಲ್ಲೇಖಗಳುಗುಡಿ ಪಾಡ್ವ ಬಾಹ್ಯ ಕೊಂಡಿಗಳುಗುಡಿ ಪಾಡ್ವಮರಾಠಿ ಭಾಷೆಹಿಂದೂ ಧರ್ಮಹಿಂದೂ ಮಾಸಗಳು

🔥 Trending searches on Wiki ಕನ್ನಡ:

ಉಪನಯನಸಮಾಜಶಾಸ್ತ್ರಉತ್ಪಲ ಮಾಲಾ ವೃತ್ತಯುಗಾದಿಪುರಂದರದಾಸಕುವೆಂಪುಕನ್ನಡದಲ್ಲಿ ನವ್ಯಕಾವ್ಯಕ್ರಿಕೆಟ್ಗ್ರಂಥಾಲಯಗಳುಅಂತರರಾಷ್ಟ್ರೀಯ ಸಂಘಟನೆಗಳುಚನ್ನವೀರ ಕಣವಿಸೋಮನಾಥಪುರಭಾರತದ ಸ್ವಾತಂತ್ರ್ಯ ದಿನಾಚರಣೆಮುಪ್ಪಿನ ಷಡಕ್ಷರಿಕನ್ನಡಕನ್ನಡದಲ್ಲಿ ಪ್ರವಾಸ ಸಾಹಿತ್ಯಖ್ಯಾತ ಕರ್ನಾಟಕ ವೃತ್ತರೋಮನ್ ಸಾಮ್ರಾಜ್ಯಮಾಹಿತಿ ತಂತ್ರಜ್ಞಾನಗೋತ್ರ ಮತ್ತು ಪ್ರವರಕರ್ನಾಟಕದ ಜಿಲ್ಲೆಗಳುದೀಪಾವಳಿಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಕುಮಾರವ್ಯಾಸನೈಸರ್ಗಿಕ ಸಂಪನ್ಮೂಲಜಪಾನ್ತಿರುಪತಿಕನ್ನಡ ಅಭಿವೃದ್ಧಿ ಪ್ರಾಧಿಕಾರತುಳಸಿಇನ್ಸ್ಟಾಗ್ರಾಮ್ಸರ್ಪ ಸುತ್ತುಪ್ರಾಥಮಿಕ ಶಿಕ್ಷಣಚ.ಸರ್ವಮಂಗಳವ್ಯಾಪಾರಕರ್ನಾಟಕದ ಶಾಸನಗಳುಮಂಜುಳಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಭಾರತದ ಜನಸಂಖ್ಯೆಯ ಬೆಳವಣಿಗೆನಂಜನಗೂಡುಹಿರಿಯಡ್ಕಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕುರುಬವಲ್ಲಭ್‌ಭಾಯಿ ಪಟೇಲ್ಹಲ್ಮಿಡಿ ಶಾಸನಭಾರತೀಯ ಮೂಲಭೂತ ಹಕ್ಕುಗಳುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆರಾಮ ಮಂದಿರ, ಅಯೋಧ್ಯೆಪರಿಸರ ಕಾನೂನುಚಂದ್ರಸಮಾಸಚಾಣಕ್ಯವಿಜಯಪುರಕನ್ನಡದಲ್ಲಿ ಗದ್ಯ ಸಾಹಿತ್ಯಕರ್ನಾಟಕಪಂಜುರ್ಲಿಮುಖ್ಯ ಪುಟಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬಸವೇಶ್ವರಸುಮಲತಾಅಂಶಗಣಲಕ್ಷ್ಮೀಶಶ್ರೀ ರಾಮಾಯಣ ದರ್ಶನಂರಾಜಕೀಯ ವಿಜ್ಞಾನಅಂತಿಮ ಸಂಸ್ಕಾರಕೃಷ್ಣದಿವ್ಯಾಂಕಾ ತ್ರಿಪಾಠಿಭಾರತದಲ್ಲಿನ ಜಾತಿ ಪದ್ದತಿಸಾಲ್ಮನ್‌ಮಂತ್ರಾಲಯಗುರುರಾಜ ಕರಜಗಿಕವನಅಶೋಕನ ಶಾಸನಗಳುಪ್ಯಾರಾಸಿಟಮಾಲ್ಕರ್ನಾಟಕ ಪೊಲೀಸ್ಬೇವುಸೆಸ್ (ಮೇಲ್ತೆರಿಗೆ)🡆 More