ಕೋಲಾರಮ್ಮ ದೇವಸ್ಥಾನ

ಕೋಲಾರಮ್ಮ ದೇವಾಲಯಗಂಗರ ಕಾಲದಲ್ಲೇ ನಿರ್ಮಾಣವಾಗಿದೆ ಎಂದು ಚರಿತ್ರೆ ಹೇಳುತ್ತದೆ.


ಕೋಲಾರಮ್ಮ ದೇವಸ್ಥಾನ ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಇದು ಅದ್ಭುತ ಶಿಲ್ಪಕಲೆಯಿಂದ ಕೂಡಿದೆ.

ಕೋಲಾರಮ್ಮ ದೇವಸ್ಥಾನ

ಪರಿಚಯ

  • ಇಲ್ಲಿ ಗಂಗರ ಕಾಲದಲ್ಲೇ ನಿರ್ಮಾಣವಾಗಿ, ಚೋಳರ ಕಾಲದಲ್ಲಿ ಜೀರ್ಣೋದ್ಧಾರಗೊಂಡ ಕೋಲಾರಮ್ಮ ದೇವಾಲಯ ವಾಸ್ತು ವೈಭವದಿಂದ ಕೂಡಿದೆ. ಪ್ರಧಾನ ದೇವಾಲಯ ಪೂರ್ವಾಭಿಮುಖವಾಗಿದೆ. ದೇವಾಲಯದ ವಿಸ್ತಾರವಾದ ಮಂಟಪವು ಉತ್ತರಾಭಿಮುಖವಾಗಿದೆ. ದೇವಾಲಯ ಸಾಮಾನ್ಯ ದ್ರಾವಿಡ ಶೈಲಿಯಲ್ಲಿದೆ. ದೇವಾಲಯದ ಪ್ರವೇಶ ದ್ವಾರವೇ ಆಕರ್ಷಣೀಯ. ಮಹಾದ್ವಾರ ಅದ್ಭುತ ಶಿಲ್ಪಕಲೆಯಿಂದ ಶ್ರೀಮಂತವಾಗಿದೆ.
  • ಸುರಳಿಯಾಕಾರದ ವರ್ತುಲಗಳಲ್ಲಿ ಮದನಿಕೆಯರ ಶಿಲ್ಪಗಳಿವೆ. ೨೦ ಅಡಿಗಳಿಗೂ ಹೆಚ್ಚು ಎತ್ತರ ಇರುವ ಈ ದ್ವಾರಗೋಪುರಗಳ ಕಲ್ಲುಕಂಬಗಳಲ್ಲಿ ಅಪರೂಪದ ಶಿಲ್ಪಾಲಂಕಾರಗಳಿವೆ. ಕೃಷ್ಣ, ಪರಶುರಾಮ, ಬಲರಾಮ, ಬಿಲ್ಲು ಹಿಡದ ಸ್ತ್ರೀವಿಗ್ರಹ, ಕುಂಭ, ಶುಕ, ಪ್ರಭಾವಳಿಗಳಲ್ಲಿ ಸೂಕ್ಷ್ಮ ಕೆತ್ತನೆಗಳಿವೆ. ಈ ಉಬ್ಬುಶಿಲ್ಪದಲ್ಲಿ ಶಿಲ್ಪಿ ಹೆಣೆದ ಜಡೆಯನ್ನು ಅತ್ಯಂತ ಮನಮೋಹಕವಾಗಿ ಕಡೆದಿದ್ದಾರೆ.
  • ಒಳ ಕಂಬಗಳಲ್ಲಿ ಮಿಥುನಶಿಲ್ಪಗಳನ್ನು ಹೋಲುವಂಥ ಕೆತ್ತನೆಗಳಿವೆ. ಗರ್ಭಗೃಹದಲ್ಲಿ ಸಪ್ತಮಾತೃಕೆಯರ ಮತ್ತು ಅಷ್ಟಭುಜಗಳ ಮಹಿಷಾಸುರಮರ್ದಿನಿಯ ರೂಪದಲ್ಲಿರುವ ಕೋಲಾರಮ್ಮ ತಾಯಿ ವಿಗ್ರಹವಿದೆ. ಇದರ ಬಲಭಾಗದಲ್ಲಿರುವ ಗುಡಿಯಲ್ಲಿ ಸಪ್ತಮಾತೃಕೆಯರ ಮೂರ್ತಿಗಳಿವೆ. ದೇವಿಯ ಮೇಲೆ ವೃಶ್ಚಿಕ ಶಿಲ್ಪವಿದೆ. ಕಾಲಭೈರವೇಶ್ವರನ ವಿಗ್ರಹವೂ ಇದೆ.
  • ವಿಗ್ರಹದ ಮೂಗು ವಿರೂಪವಾಗಿರುವ ಕಾರಣ ಇದನ್ನು 'ಮೂಕನಾಚ್ಚಾರಮ್ಮ' ಎಂದೂ ಸ್ಥಳೀಯರು ಕರೆಯುತ್ತಾರೆ. ದೇವಿಗೆ ಪೂಜೆ ಮಾಡಿಸಿ, ತಾಯಿತ ಕಟ್ಟಿಸಿಕೊಳ್ಳಲು ನಿತ್ಯ ಇಲ್ಲಿಗೆ ದೂರದೂರುಗಳಿಂದ ಭಕ್ತರು ಆಗಮಿಸುತ್ತಾರೆ. ಬೆಂಗಳೂರಿನಿಂದ ಕೋಲಾರಕ್ಕೆ ನೇರ ಬಸ್ ಸೌಕರ್ಯವಿದೆ. ರಸ್ತೆಯೂ ಉತ್ತಮವಾಗಿದೆ. ಜಿಲ್ಲಾ ಕೇಂದ್ರವಾದ ಕೋಲಾರದಲ್ಲಿ ಉಳಿಯಲು ಹೋಟೆಲ್ ವ್ಯವಸ್ಥೆ ಇದೆ.

ನೋಡಬೇಕಾದ ಸ್ಥಳಗಳು

ಕೋಲಾರ ಸುತ್ತಮುತ್ತ ನೋಡಬೇಕಾದ ಸ್ಥಳಗಳು -

  1. ಅಂತರಗಂಗೆ,
  2. ಕುರುಡುಮಲೆ,
  3. ಮಾರ್ಕಂಡೇಶ್ವರ ಬೆಟ್ಟ,
  4. ಆವನಿ,
  5. ಮುಳಬಾಗಿಲು,
  6. ಚಿಕ್ಕತಿರುಪತಿ,
  7. ಬಂಗಾರ ತಿರುಪತಿ ಹಾಗು
  8. ಕೋಟಿಲಿಂಗೇಶ್ವರ.

ಉಲ್ಲೇಖಗಳು

Tags:

ಕೋಲಾರಮ್ಮ

🔥 Trending searches on Wiki ಕನ್ನಡ:

ರಾಮ ಮಂದಿರ, ಅಯೋಧ್ಯೆಪರಿಣಾಮಮಹಾವೀರನರೇಂದ್ರ ಮೋದಿಭಾರತೀಯ ಸಂಸ್ಕೃತಿಕ್ಯಾನ್ಸರ್ಗೋತ್ರ ಮತ್ತು ಪ್ರವರವಿಷ್ಣು ಸಹಸ್ರನಾಮಬಾದಾಮಿ ಶಾಸನಗರ್ಭಧಾರಣೆಹೆಚ್.ಡಿ.ಕುಮಾರಸ್ವಾಮಿಏಡ್ಸ್ ರೋಗಕನಕದಾಸರುಮಳೆಗಾಲಸತ್ಯಂಶ್ರೀನಿವಾಸ ರಾಮಾನುಜನ್ಸರ್ವೆಪಲ್ಲಿ ರಾಧಾಕೃಷ್ಣನ್ಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಕರ್ನಾಟಕದ ಜಾನಪದ ಕಲೆಗಳುವೈದೇಹಿಕೊರೋನಾವೈರಸ್ಪೊನ್ನಭಾರತದ ಸಂಸತ್ತುಶ್ರೀರಂಗಪಟ್ಟಣನದಿಅಂತರರಾಷ್ಟ್ರೀಯ ವ್ಯಾಪಾರಕಿತ್ತೂರು ಚೆನ್ನಮ್ಮಚಿನ್ನಕರ್ನಾಟಕದ ಶಾಸನಗಳುಭಾರತೀಯ ಧರ್ಮಗಳುಅನುಪಮಾ ನಿರಂಜನಶಿಲೀಂಧ್ರತೀರ್ಥಕ್ಷೇತ್ರಯೇಸು ಕ್ರಿಸ್ತಮಹಿಳೆ ಮತ್ತು ಭಾರತಕನ್ನಡ ಚಿತ್ರರಂಗರಾಷ್ಟ್ರಕವಿಮೂಲಧಾತುಗಳ ಪಟ್ಟಿಭರತೇಶ ವೈಭವಬಸವೇಶ್ವರಜಯಮಾಲಾಮೂಲಭೂತ ಕರ್ತವ್ಯಗಳುರಹಮತ್ ತರೀಕೆರೆತಾಜ್ ಮಹಲ್ಬೆಂಗಳೂರು ಗ್ರಾಮಾಂತರ ಜಿಲ್ಲೆಹುಣಸೆಕರ್ನಾಟಕ ಹೈ ಕೋರ್ಟ್ಸಮಾಜಎಂ. ಕೆ. ಇಂದಿರಗೊರೂರು ರಾಮಸ್ವಾಮಿ ಅಯ್ಯಂಗಾರ್ವ್ಯಕ್ತಿತ್ವವಿನಾಯಕ ದಾಮೋದರ ಸಾವರ್ಕರ್ಬೆಳವಲರಸ(ಕಾವ್ಯಮೀಮಾಂಸೆ)ಮದಕರಿ ನಾಯಕಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಬಾಹುಬಲಿಜಾಗತಿಕ ತಾಪಮಾನ ಏರಿಕೆಆಟಹೀಮೊಫಿಲಿಯಭಾರತೀಯ ಭೂಸೇನೆದೂರದರ್ಶನಗೋಕರ್ಣಮಾಧ್ಯಮಎ.ಆರ್.ಕೃಷ್ಣಶಾಸ್ತ್ರಿಹೂಡಿಕೆಬೆಲ್ಲಆತ್ಮಹತ್ಯೆಪೂರ್ಣಚಂದ್ರ ತೇಜಸ್ವಿಪಂಪ ಪ್ರಶಸ್ತಿಶನಿಭಾರತದ ರಾಷ್ಟ್ರಪತಿಗಳ ಪಟ್ಟಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಸಮಾಸಕಲ್ಪನಾಮಂಗಳಮುಖಿಕೆ.ವಿ.ಸುಬ್ಬಣ್ಣ🡆 More