ಕೋಟಿಲಿಂಗೇಶ್ವರ: ಶಿವಾಲಯ

ಕೋಲಾರ ಜಿಲ್ಲೆ ಯ ಬಂಗಾರಪೇಟೆ ಗೆ ೧೨ ಕಿಲೋ ಮೀಟರ್ ದೂರದಲ್ಲಿರುವ ಕಮ್ಮಸಂದ್ರ ಇಂದು ಪವಿತ್ರ ಪುಣ್ಯಕ್ಷೇತ್ರವಾಗಿ ಕೋಟಿಲಿಂಗಗಳ ನಾಡಾಗಿದೆ.೧೦೮ ಅಡಿಗಳ ಬೃಹತ್ ಶಿವಲಿಂಗ ಹಾಗೂ ೩೨ ಅಡಿ ಎತ್ತರದ ಅತಿ ದೊಡ್ಡ ಬಸವಣ್ಣನನನ್ನು ಹೊಂದಿದ ಇಲ್ಲಿ ಭಕ್ತರು ನಿತ್ಯವೂ ಶಿವಲಿಂಗ ಸ್ಥಾಪನೆ ಮಾಡುತ್ತಿದ್ದು, ಈ ಕ್ಷೇತ್ರದಲ್ಲಿ ಮುಂದಿನ ಕೆಲವು ದಶಕಗಳಲ್ಲಿ ಕೋಟಿ ಲಿಂಗ ಸ್ಥಾಪನೆಯಾಗುವ ಸಾಧ್ಯತೆ ಇದೆ.

Kotilingeshwara Swamy
ಕೋಟಿಲಿಂಗೇಶ್ವರ: ಶಿವಾಲಯ
ಹೆಸರು: Kotilingeshwara Swamy
ಪ್ರಮುಖ ದೇವತೆ: ಶಿವ
ಸ್ಥಳ: ಕಮ್ಮಸಂದ್ರ, ಕೋಲಾರ
ರೇಖಾಂಶ: 12°59′42.6114″N 78°17′41.2542″E / 12.995169833°N 78.294792833°E / 12.995169833; 78.294792833

ತ್ರೇತಾಯುಗದ ಕಾಲದಿಂದಲೂ ಪವಿತ್ರ ಕ್ಷೇತ್ರವೆಂದೇ ಪರಿಗಣಿತವಾಗಿರುವ ಕಮ್ಮಸಂದ್ರದಲ್ಲಿ ಶ್ರೀಸಾಂಬಶಿವಮೂರ್ತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ಈ ಕ್ಷೇತ್ರದಲ್ಲಿರುವ ವಿಶಾಲ ಪ್ರಕಾರದ ಮೊದಲ ಮುಖ್ಯದ್ವಾರದಲ್ಲಿ ಶಿವಲಿಂಗ ಮತ್ತು ಬಸವೇಶ್ವರರ ದರ್ಶನ ಪಡೆದು, ಎರಡನೇ ದ್ವಾರಕ್ಕೆ ಬಂದರೆ ಆಕಾಶ ಶಿವಲಿಂಗ ಮತ್ತು ಅನೇಕ ದೇವತೆಗಳ ದರ್ಶನವಾಗುತ್ತದೆ. ಮುಂದೆ ಸಾಗುತ್ತಿದ್ದಂತೆ ವಿಶಾಲ ಪ್ರಕಾರದಲ್ಲಿ ಭಕ್ತರು ಸ್ಥಾಪಿಸಿರುವ ಸಾವಿರಾರು ಶಿವಲಿಂಗಗಳನ್ನು ನೋಡಬಹುದು.

ದೇವಾಲಯದ ಪ್ರಾಂಗಣ ಪ್ರವೇಶಿಸಿದ ಬಳಿಕ ಪ್ರಧಾನ ಶಿವದೇವಾಲಯ, ಬ್ರಹ್ಮ, ವಿಷ್ಣು, ಮಹೇಶ್ವರ, ವಿನಾಯಕ, ಅಯ್ಯಪ್ಪ, ಆಂಜನೇಯ, ಕನಿಕಾ ಪರಮೇಶ್ವರಿ, ಪಾರ್ವತಿ, ಲಕ್ಷ್ಮೀ, ನವಗ್ರಹ, ಸತ್ಯನಾರಾಯಣಸ್ವಾಮಿ, ಸುಬ್ರಹ್ಮಣ್ಯ, ವೆಂಕಟೇಶ್ವರ, ಪಂಚಮುಖಿ ಆಂಜನೇಯ, ಸಂತೋಷಿಮಾತಾ, ಮಂಜುನಾಥೇಶ್ವರ ಸ್ವಾಮಿ ದರ್ಶನಭಾಗ್ಯ ಲಭಿಸುತ್ತದೆ. ಪಕ್ಕದಲ್ಲೇ ಸುಂದರವಾದ ಬೃಂದಾವನವೂ ಇದೆ.

ಆಲಯದಲ್ಲಿರುವ ಗಣೇಶ ದೇವಾಲಯದ ಎದುರು ಹರಕೆಯ ಬಿಲ್ವಪತ್ರೆ ಮರ ಹಾಗೂ ನಾಗಲಿಂದ ವೃಕ್ಷಗಳಿವೆ. ದೇವಾಲಯದಲ್ಲಿ ಪೂಜಿಸಿದ ಪವಿತ್ರ ದಾರವನ್ನು ಈ ಮರಗಳಿಗೆ ಕಟ್ಟಿದರೆ ಇಷ್ಟಾರ್ಥ ಈಡೇರುತ್ತದೆ ಎಂಬುದು ಜನರ ನಂಬಿಕೆ.

ನಿತ್ಯವೂ ಇಲ್ಲಿಗೆ ನೂರಾರು ಭಕ್ತರು ಆಗಮಿಸುತ್ತಾರೆ. ದೇವಾಲಯಗಳಲ್ಲಿ ನಿತ್ಯಸೇವೆ, ಅನ್ನದಾನ, ಬಡವರಿಗೆ ವಸ್ತ್ರದಾನ ನಡೆಯುತ್ತದೆ. ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ ಮಹೋತ್ಸವವೂ ಜರುಗುತ್ತದೆ. ಬರುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ವಸತಿ ಸೌಕರ್ಯವನ್ನೂ ಕಲ್ಪಿಸಲಾಗಿದೆ.

ಪ್ರತಿವರ್ಷ ಆಶ್ವಯುಜ ಮಾಸದಲ್ಲಿ ದಸರೆಯ ಸಂದರ್ಭದಲ್ಲಿ ಇಲ್ಲಿ ರಥೋತ್ಸವ ಹಾಗೂ ಜಾತ್ರೆ ನಡೆಯುತ್ತದೆ.

ಉಲ್ಲೇಖಗಳು

Tags:

ಕೋಲಾರ ಜಿಲ್ಲೆಬಂಗಾರಪೇಟೆ

🔥 Trending searches on Wiki ಕನ್ನಡ:

ಬಾದಾಮಿ ಗುಹಾಲಯಗಳುಎಸ್.ಎಲ್. ಭೈರಪ್ಪಕರ್ನಾಟಕ ಜನಪದ ನೃತ್ಯಋಗ್ವೇದಸಂಯುಕ್ತ ರಾಷ್ಟ್ರ ಸಂಸ್ಥೆರಾಜ್ಯಸಭೆರಾಜಸ್ಥಾನ್ ರಾಯಲ್ಸ್ಚಂದ್ರಗುಪ್ತ ಮೌರ್ಯಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಬೆಂಗಳೂರು ಕೋಟೆಹಾಸನ ಜಿಲ್ಲೆಕೆ. ಅಣ್ಣಾಮಲೈಹುಣಸೆಶಂ.ಬಾ. ಜೋಷಿಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಭೂಮಿಯುಗಾದಿಸಂವಹನಶಾಸನಗಳುಕರ್ಣಾಟಕ ಸಂಗೀತಕಾರ್ಮಿಕರ ದಿನಾಚರಣೆಹಸ್ತ ಮೈಥುನಬೇಡಿಕೆಸೋಮನಾಥಪುರಸುಗ್ಗಿ ಕುಣಿತಜ್ಞಾನಪೀಠ ಪ್ರಶಸ್ತಿಜಗನ್ನಾಥ ದೇವಾಲಯಶುಕ್ರಹೊಂಗೆ ಮರಧಾರವಾಡದಲಿತವಿಷ್ಣುವರ್ಧನ್ (ನಟ)ಪುಟ್ಟರಾಜ ಗವಾಯಿವೃದ್ಧಿ ಸಂಧಿವಿನಾಯಕ ಕೃಷ್ಣ ಗೋಕಾಕಗ್ರಂಥಾಲಯಗಳುವಸಾಹತುಗ್ರಾಮಗಳುಅಶೋಕ್ಸವದತ್ತಿರಾಘವಾಂಕಬ್ಯಾಂಕ್ ಖಾತೆಗಳುಮಲ್ಲಿಗೆಬಾರ್ಲಿಸೆಸ್ (ಮೇಲ್ತೆರಿಗೆ)ಅಕ್ಕಮಹಾದೇವಿಸುಧಾರಾಣಿಹಲ್ಮಿಡಿಕಾವೇರಿ ನದಿಬಿ.ಎಫ್. ಸ್ಕಿನ್ನರ್ಆಯುರ್ವೇದಕೊಲೆಸ್ಟರಾಲ್‌ಭಾಷೆದೇವನೂರು ಮಹಾದೇವಪ್ರಚಂಡ ಕುಳ್ಳಪ್ರಾಥಮಿಕ ಶಿಕ್ಷಣಆರೋಗ್ಯವಿಜಯವಾಣಿಮೈಸೂರು ಸಂಸ್ಥಾನಕನ್ನಡ ವ್ಯಾಕರಣಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಬಹುಸಾಂಸ್ಕೃತಿಕತೆಅರ್ಜುನಕರ್ನಾಟಕ ವಿದ್ಯಾವರ್ಧಕ ಸಂಘಒಡೆಯರ್ಕರ್ನಾಟಕ ವಿಧಾನ ಸಭೆಕರ್ನಾಟಕದ ಕಲೆ ಮತ್ತು ಸಂಸ್ಕೃತಿಹುಬ್ಬಳ್ಳಿಗೊರೂರು ರಾಮಸ್ವಾಮಿ ಅಯ್ಯಂಗಾರ್ಜಂತುಹುಳುಇಮ್ಮಡಿ ಪುಲಿಕೇಶಿಗೌತಮ ಬುದ್ಧವಿಹಾರಛಂದಸ್ಸುಬಂಡವಾಳಶಾಹಿರಾಮ್ ಮೋಹನ್ ರಾಯ್🡆 More