ಕೊವ್ಯಾಕ್ಸಿನ್

ಕೊವ್ಯಾಕ್ಸಿನ್ (ಅಧಿಕೃತ ಹೆಸರು: ಬಿಬಿವಿ೧೫೨) ಕೊರೊನಾ ವೈರಸ್ ಖಾಯಿಲೆಯ ಉಪಶಮನಕ್ಕಾಗಿ ನೀಡಲಾಗುವ ಒಂದು ಲಸಿಕೆ.

ಇದನ್ನು, ನಿಷ್ಕ್ರಿಯಗೊಳಿಸಿದ ವೈರಸ್ಸಿನ ಸಹಾಯದಿಂದ ತಯಾರಿಸಲಾಗಿದ್ದು, ಭಾರತ್ ಬಯೋಟೆಕ್ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.

ಕೊವ್ಯಾಕ್ಸಿನ್
ಕೊವ್ಯಾಕ್ಸಿನ್
ಕೊವ್ಯಾಕ್ಸಿನ್
ಲಸಿಕೆಯ ಬಾಟಲಿ
Clinical data
Trade namesಕೊವ್ಯಾಕ್ಸಿನ್
Routes of
administration
ಸ್ನಾಯು
ATC code
Identifiers
DrugBank
UNII

ಸಿದ್ಧತೆ

ಕೊರೊನಾ ವೈರಸ್ ಖಾಯಿಲೆಯ ಉಪಶಮನಕ್ಕಾಗಿ ಭಾರತದಲ್ಲಿಯೇ ಲಸಿಕೆ ತಯಾರಿಸಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯ ಅಂಗಸಂಸ್ಥೆಯಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯು, ಮೇ ೨೦೨೦ರಂದು ಭಾರತ್ ಬಯೋಟೆಕ್ ಸಂಸ್ಥೆಗೆ ಲಸಿಕೆಯನ್ನು ತಯಾರಿಸಲು ಅನುಮತಿ ನೀಡಿತು ಮತ್ತು ಕೊರೊನಾ ವೈರಸ್ಸಿನ ತಳಿಗಳನ್ನು ಆ ಸಂಸ್ಥೆಗೆ ಒದಗಿಸಿತು. ಜೂನ್ ೨೦೨೦ರ ಹೊತ್ತಿಗೆ, ಭಾರತ ಸರ್ಕಾರದ ಔಷಧ ನಿಯಂತ್ರಣ ಪ್ರಾಧಿಕಾರದಿಂದ, ಲಸಿಕೆಯ ೧ನೇ ಹಂತದ ಮತ್ತು ೨ನೇ ಹಂತದ ಪ್ರಯೋಗಗಳನ್ನು ಮಾನವರ ಮೇಲೆ ನಡೆಸಲು ಭಾರತ್ ಬಯೋಟೆಕ್ ಸಂಸ್ಥೆಗೆ ಅನುಮತಿ ನೀಡಲಾಯಿತು. ಅಖಿಲ ಭಾರತ ವೈದ್ಯಕೀಯ ಸಂಸ್ಥೆಯೂ ಸೇರಿದಂತೆ ಒಟ್ಟು ೧೨ ತಾಣಗಳನ್ನು ಲಸಿಕೆಯ ಪ್ರಯೋಗಕ್ಕಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಗುರುತಿಸಿತು.

ವೈದ್ಯಕೀಯ ಪ್ರಯೋಗಗಳು

೧ನೇ ಹಂತದ ವೈದ್ಯಕೀಯ ಪ್ರಯೋಗ

೧ನೇ ಹಂತದಲ್ಲಿ ಒಟ್ಟು ೩೭೫ ಮಂದಿಗೆ ಲಸಿಕೆಯನ್ನು ಚುಚ್ಚುಮದ್ದಿನ ಮೂಲಕ ನೀಡಲಾಯಿತು. ೧೪ ದಿನಗಳ ಅಂತರದಲ್ಲಿ ಒಟ್ಟು ಎರಡು ಡೋಸುಗಳನ್ನು ಪರೀಕ್ಷಾರ್ಥಿಗಳಿಗೆ ನೀಡಲಾಯಿತು. ೨ನೇ ಲಸಿಕೆಯನ್ನು ಕೊಟ್ಟ ೧೪ ದಿನಗಳ ನಂತರ ಪರೀಕ್ಷಿಸಿದಾಗ ಕೊರೊನಾ ವೈರಸ್ ಪ್ರತಿಕಾಯಗಳು ಪರೀಕ್ಷಾರ್ಥಿಗಳ ದೇಹದಲ್ಲಿ ಗಮನಾರ್ಹವಾಗಿ ಹೆಚ್ಚಾದುದನ್ನು ಕಂಡುಕೊಳ್ಳಲಾಯಿತು. ಮತ್ತು ಈ ಪ್ರತಿಕಾಯಗಳು ಪ್ರಸ್ತುತ ಇರುವ ಕೊರೊನಾ ವೈರಾಣು ಮಾತ್ರವಲ್ಲ, ಇತ್ತೀಚೆಗೆ ಕಂಡುಬಂದಿರುವ ರೂಪಾಂತರಿ ಕೊರೊನಾ ವೈರಾಣುವಿನ ವಿರುದ್ಧವೂ ಸಹ ಯಶಸ್ವಿಯಾಗಿ ಹೋರಾಡಬಲ್ಲವು ಎಂದು ತಿಳಿದು ಬಂತು. ಲಸಿಕೆ ಪಡೆದ ನಂತರ ಕಂಡುಬರುವ ಅಡ್ಡಪರಿಣಾಮಗಳು ಗಂಭೀರವಾದುದಲ್ಲ ಮತ್ತು ಕೂಡಲೇ ಗುಣಪಡಿಸಬಹುದಾದ ಲಕ್ಷಣಗಳಾಗಿರುತ್ತವೆ.

೨ನೇ ಹಂತದ ವೈದ್ಯಕೀಯ ಪ್ರಯೋಗ

೨ನೇ ಹಂತದ ಲಸಿಕೆಯ ಪರೀಕ್ಷಾರ್ಥ ಪ್ರಯೋಗದಲ್ಲಿ ಮಕ್ಕಳು ಮತ್ತು ವಯಸ್ಕರೂ ಸೇರಿದಂತೆ ಒಟ್ಟು ೩೮೦ ಮಂದಿಗೆ ಲಸಿಕೆಯನ್ನು ಚುಚ್ಚುಮದ್ದಿನ ಮೂಲಕ ನೀಡಲಾಯಿತು. ಒಟ್ಟು ಎರಡು ಡೋಸುಗಳನ್ನು ೪ ವಾರಗಳ ಅಂತರದಲ್ಲಿ ಕೊಡಲಾಯಿತು. ೧ನೇ ಹಂತದ ಪ್ರಯೋಗಗಳಲ್ಲಿ ಕಂಡುಬಂದ ಉತ್ತಮ ಫಲಿತಾಂಶಗಳು ಇಲ್ಲೂ ಕಂಡುಬಂದವು. ಈ ಫಲಿತಾಂಶಗಳ ಆಧಾರದ ಮೇಲೆ ಕೊವ್ಯಾಕ್ಸಿನ್ ಲಸಿಕೆಯನ್ನು ಪಡೆದ ನಂತರ, ಪ್ರತಿಕಾಯಗಳು ರೋಗಿಯ ದೇಹದಲ್ಲಿ ೬ರಿಂದ ೧೨ ತಿಂಗಳುಗಳವರೆಗೆ ಕೊರೊನಾ ವೈರಸ್ ವಿರುದ್ಧ ರಕ್ಷಣೆಯನ್ನು ಒದಗಿಸುತ್ತವೆ ಎಂದು ಕಂಡುಕೊಳ್ಳಲಾಯಿತು.

೩ನೇ ಹಂತದ ವೈದ್ಯಕೀಯ ಪ್ರಯೋಗ

ನವಂಬರ್ ೨೦೨೦ರಂದು ೩ನೇ ಹಂತದ ಮಾನವ ಪ್ರಯೋಗಗಳನ್ನು ನಡೆಸಲು ಭಾರತ್ ಬಯೋಟೆಕ್ ಸಂಸ್ಥೆಗೆ ಭಾರತ ಸರ್ಕಾರದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್)ಯ ಅಂಗಸಂಸ್ಥೆಯಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯು ಅನುಮತಿ ನೀಡಿತು. ಲಸಿಕೆಯ ೩ನೇ ಹಂತದ ಪ್ರಯೋಗಕ್ಕಾಗಿ, ಕರ್ನಾಟಕವೂ ಸೇರಿದಂತೆ ದೆಹಲಿ, ಪ.ಬಂಗಾಳ ಮತ್ತಿತರ ರಾಜ್ಯಗಳಿಂದ ೧೮ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ೨೫,೦೦೦ದಷ್ಟು ಮಂದಿಯನ್ನು ಗುರುತಿಸಿ ಆಯ್ಕೆಮಾಡಲಾಯಿತು. ಕೊನೆಯ ಕ್ಷಣದಲ್ಲಿ ಗೈರುಹಾಜರಾದವರನ್ನು ಬಿಟ್ಟು, ಡಿಸೆಂಬರ್ ೨೨ರ ಹೊತ್ತಿಗೆ ಒಟ್ಟು ೧೩,೦೦೦ ಮಂದಿ ಮತ್ತು ಜನವರಿ ೫ರ ಹೊತ್ತಿಗೆ ಒಟ್ಟು ೨೩,೦೦೦ ಮಂದಿ ಲಸಿಕೆಯ ವೈದ್ಯಕೀಯ ಪ್ರಯೋಗದಲ್ಲಿ ಪಾಲ್ಗೊಂಡಿದ್ದರು.

೩ನೇ ಹಂತದ ಪ್ರಯೋಗದ ವಿವರಗಳು ಸದ್ಯಕ್ಕೆ ತಿಳಿದುಬಂದಿಲ್ಲ.

ಡಿಸೆಂಬರ್ ೨೦೨೦ರಲ್ಲಿ, ಭಾರತ್ ಬಯೋಟೆಕ್ ಸಂಸ್ಥೆಯು, ತಾನು ಅಭಿವೃದ್ಧಿಪಡಿಸಿದ ಲಸಿಕೆಯ ಪ್ರಯೋಗಗಳ ವರದಿಯನ್ನು ಅಧೀಕೃತವಾಗಿ ಘೋಷಿಸಿತು ಮತ್ತು ವಿವರಗಳನ್ನು medRxiv ಜಾಲತಾಣದ ಮೂಲಕ ಪ್ರಕಟಿಸಿತು.

ತಯಾರಿಕೆ

ಭಾರತ್ ಬಯೋಟೆಕ್ ಸಂಸ್ಥೆಯು ಕೊವ್ಯಾಕ್ಸಿನ್ ಲಸಿಕೆಯನ್ನು ಸದ್ಯಕ್ಕೆ ವೆರೊ ಸೆಲ್ ತಯಾರಿಕಾ ಘಟಕದಲ್ಲಿ ಉತ್ಪಾದಿಸುತ್ತಿದೆ. ಈ ಘಟಕ ಒಮ್ಮೆಗೆ ಸುಮಾರು ೩೦೦ ಮಿಲಿಯನ್ ಡೋಸ್‌ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ, ಸಂಸ್ಥೆಯು ಹೈದರಾಬಾದಿನಲ್ಲಿನ ಜಿನೋಮ್ ವ್ಯಾಲಿಯಲ್ಲಿಯೂ ಲಸಿಕೆಯನ್ನು ತಯಾರಿಸುವ ಸ್ಥಾವರವನ್ನು ತೆರೆಯುವ ಪ್ರಕ್ರಿಯೆ ಜಾರಿಯಲ್ಲಿದೆ. ಇನ್ನು, ದೇಶದ ಇತರ ಭಾಗಗಳಲ್ಲಿ ಸಹ ಕೊವ್ಯಾಕ್ಸಿನ್ ತಯಾರಿಸುವ ಘಟಕ ಸ್ಥಾಪನೆಗಾಗಿ ಸೂಕ್ತ ಸ್ಥಳವನ್ನು ಹುಡುಕುತ್ತಿದೆ. ಜೊತೆಗೆ, ಲಸಿಕೆಯ ತಯಾರಿಕೆ ಮಾರಾಟ ಸಂಬಂಧವಾಗಿ ಜಾಗತಿಕ ಮಟ್ಟದ ಸಂಸ್ಥೆಗಳನ್ನು ಸಂಪರ್ಕಿಸುವ ಪ್ರಯತ್ನಗಳೂ ಜಾರಿಯಲ್ಲಿವೆ.

ಡಿಸೆಂಬರ್ ೨೦೨೦ರಲ್ಲಿ, ಆಕ್ಯುಜೆನ್ ಇಂಕ್ ಎಂಬ ಸಂಸ್ಥೆಯು ಭಾರತ್ ಬಯೋಟೆಕ್ ಜೊತೆ ಸೇರಿ, ಕೊವಾಕ್ಸಿನ್ ಲಸಿಕೆ ತಯಾರಿಸಿ ಅಮೇರಿಕನ್ ಮಾರುಕಟ್ಟೆಗೆ ಪೂರೈಸುವ ಸಲುವಾಗಿ ಒಂದು ಒಪ್ಪಂದವನ್ನು ಮಾಡಿಕೊಂಡಿತು. ಅದೇ ರೀತಿ, ಜನವರಿ ೨೦೨೧ರಲ್ಲಿ ಪ್ರಿಸಿಸಾ ಮೆಡ್ ಎಂಬ ಸಂಸ್ಥೆಯು ಬ್ರೆಜಿಲ್ ದೇಶದಲ್ಲಿ ಕೊವಾಕ್ಸಿನ್ ಲಸಿಕೆಯನ್ನು ಪೂರೈಸಲು ಭಾರತ್ ಬಯೋಟೆಕ್ ಸಂಸ್ಥೆಯ ಜೊತೆಗೆ ಒಪ್ಪಂದವನ್ನು ಮಾಡಿಕೊಂಡಿತು.

ಭಾರತದಲ್ಲಿ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಯ ಅನುಮತಿಯನ್ನು ಪಡೆಯುವ ಸಲುವಾಗಿ ಭಾರತ್ ಬಯೋಟೆಕ್, ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಡಿಸೆಂಬರ್ ೭ರಂದು ಅರ್ಜಿ ಸಲ್ಲಿಸಿತು. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಫಿಜರ್ ನಂತರ ತುರ್ತು ಬಳಕೆಯ ಅನುಮೋದನೆಗೆ ಅರ್ಜಿ ಸಲ್ಲಿಸಿದ ಮೂರನೇ ಸಂಸ್ಥೆ ಭಾರತ್ ಬಯೋಟೆಕ್ ಆಗಿದೆ.

ಜನವರಿ ೨, ೨೦೨೧ರಂದು, ಕೇಂದ್ರ ಔಷಧ ಮಾನದಂಡ ನಿಯಂತ್ರಣ ಸಂಸ್ಥೆ(ಸಿಡಿಎಸ್ಕೊ)ಯು ತುರ್ತು ಬಳಕೆಯ ಅನುಮತಿ ನೀಡುವಂತೆ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಶಿಫಾರಸು ಮಾಡಿತು. ಅಂತಿಮವಾಗಿ ಜನವರಿ ೩ರಂದು ಪ್ರಾಧಿಕಾರವು ಭಾರತ್ ಬಯೋಟೆಕ್ ಸಂಸ್ಥೆಗೆ ಕೊವ್ಯಾಕ್ಸಿನ್ ಲಸಿಕೆಯನ್ನು ಸಾರ್ವಜನಿಕ ವಲಯದಲ್ಲಿ ಬಳಸಲು ಅನುಮತಿಯನ್ನು ನೀಡಿತು. ಲಸಿಕೆಯ ೩ನೇ ಹಂತದ ವೈದ್ಯಕೀಯ ಪ್ರಯೋಗದ ಅಂತಿಮ ಫಲಿತಾಂಶಗಳು ಬರುವ ಮುನ್ನವೇ ಲಸಿಕೆಯ ಬಳಕೆಗೆ ಅನುಮತಿಯನ್ನು ನೀಡಿದ್ದು ಮಾಧ್ಯಮ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಯಿತು.

ಕೋವ್ಯಾಕ್ಸಿನ ಲಸಿಕೆ

  • ಗವಿ’ ಮೂಲಕ ಲಸಿಕೆ ಪೂರೈಕೆ
  • ‘ಗವಿ’ ಎಂಬುದು ಒಂದು ಅಂತರರಾಷ್ಟ್ರೀಯ ಲಸಿಕೆ ಮೈತ್ರಿಕೂಟ. ಮಾರಣಾಂತಿಕ ರೋಗಗಳಿಂದ, ಬಡರಾಷ್ಟ್ರಗಳ ಮಕ್ಕಳನ್ನು ರಕ್ಷಿಸಲು ಲಸಿಕೆ ನೀಡುವ ಕಾರ್ಯಕ್ರಮವೇ ಗವಿ. ಗವಿ ಮೂಲತಃ ಒಂದು ಸ್ವಯಂಸೇವಾ ಸಂಸ್ಥೆ. ಆದರೆ, ಇದು ವಿಶ್ವ ಆರೋಗ್ಯ ಸಂಸ್ಥೆಯ ಜತೆಗೆ ಕಾರ್ಯನಿರ್ವಹಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ಬ್ಯಾಂಕ್, ಯುನಿಸೆಫ್, ಲಸಿಕೆ ತಯಾರಿಕಾ ಕಂಪನಿಗಳು, ಲಸಿಕೆ ಅಭಿವೃದ್ಧಿ ಸಂಸ್ಥೆಗಳು, ಲಸಿಕೆ ದಾನ ನೀಡುವ ದೇಶಗಳು, ಬಿಲ್‌ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನ ಹಾಗೂ ಹಲವು ಎನ್‌ಜಿಒಗಳ ಸಹಯೋಗದಲ್ಲಿ ಗವಿ ಕಾರ್ಯನಿರ್ವಹಿಸುತ್ತಿದೆ. ಗವಿ ಸಂಸ್ಥೆಯು ಈವರೆಗೆ ವಿಶ್ವದಾದ್ಯಂತ ವಿವಿಧ ಕಾಯಿಲೆಗಳನ್ನು ತಡೆಯುವ ಲಸಿಕೆಗಳನ್ನು ೮೨.೨ ಕೋಟಿ ಮಕ್ಕಳಿಗೆ ನೀಡಿದೆ

ಭಾರತ ಸಾಮರ್ಥ್ಯ

ಭಾರತವು ಈವರೆಗೆ ಸುಮಾರು ೫.೮ ಕೋಟಿ ಕೋವಿಡ್ ಲಸಿಕೆಯ ಡೋಸ್‌ಗಳನ್ನು ೧೦೦ ಕ್ಕೂ ಹೆಚ್ಚು ದೇಶಗಳಿಗೆ ವಿತರಣೆ ಮಾಡಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಕೆಲವು ದೇಶಗಳಿಗೆ ಉಚಿತವಾಗಿ ನೆರವಿನ ರೂಪದಲ್ಲಿ ನೀಡಿದರೆ, ಅಂತರರಾಷ್ಟ್ರೀಯ ಲಸಿಕೆ ಒಕ್ಕೂಟಕ್ಕೆ ಒಂದಿಷ್ಟು ಲಸಿಕೆ ನೀಡಲಾಗುತ್ತಿದೆ. ಉಳಿದವನ್ನು ವಿವಿಧ ದೇಶಗಳಿಗೆ ಮಾರಾಟ ಮಾಡಲಾಗುತ್ತಿದೆ.

ಯಾವ ದೇಶಗಳಿಗೆ ನೆರವಿನ ಲಸಿಕೆ

ಬ್ರೆಜಿಲ್, ಮೊರಾಕ್ಕೊ, ಈಜಿಪ್ಟ್, ಅಲ್ಜೀರಿಯಾ, ದಕ್ಷಿಣ ಆಫ್ರಿಕಾ, ಕುವೈತ್, ಯುಎಇ .

ಟೀಕೆ

ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ವ್ಯಾಪಿ ಬಳಕೆಗೆ ಅನುಮತಿಯನ್ನು ಭಾರತ್ ಬಯೋಟೆಕ್ ತಯಾರಿಕಾ ಘಟಕಗಳಿಗೆ ಭೇಟಿ ನೀಡಿದ ನಂತರ ನಿರಾಕರಿಸಿತು.

ಹೆಚ್ಚಿನ ಓದಿಗೆ

ಉಲ್ಲೇಖಗಳು

Tags:

ಕೊವ್ಯಾಕ್ಸಿನ್ ಸಿದ್ಧತೆಕೊವ್ಯಾಕ್ಸಿನ್ ವೈದ್ಯಕೀಯ ಪ್ರಯೋಗಗಳುಕೊವ್ಯಾಕ್ಸಿನ್ ತಯಾರಿಕೆಕೊವ್ಯಾಕ್ಸಿನ್ ಟೀಕೆಕೊವ್ಯಾಕ್ಸಿನ್ ಹೆಚ್ಚಿನ ಓದಿಗೆಕೊವ್ಯಾಕ್ಸಿನ್ ಉಲ್ಲೇಖಗಳುಕೊವ್ಯಾಕ್ಸಿನ್ಕೊರೋನಾವೈರಸ್ ಕಾಯಿಲೆ ೨೦೧೯ಲಸಿಕೆ

🔥 Trending searches on Wiki ಕನ್ನಡ:

ಬಾಬು ಜಗಜೀವನ ರಾಮ್ಗಜ್ಜರಿಗ್ರಂಥಾಲಯಗಳುಪಂಚಾಂಗಇಸ್ರೇಲ್ಭತ್ತಪುನೀತ್ ರಾಜ್‍ಕುಮಾರ್ಸಂಸದೀಯ ವ್ಯವಸ್ಥೆಸಾಮ್ರಾಟ್ ಅಶೋಕಹಿಂದೂ ಮದುವೆಸಮಾಸಬೌದ್ಧ ಧರ್ಮಮಲ್ಪೆಕನ್ನಡ ಅಕ್ಷರಮಾಲೆಮೈಸೂರು ಸಂಸ್ಥಾನಜಾಹೀರಾತುತುಂಗಭದ್ರ ನದಿಶಬ್ದ ಮಾಲಿನ್ಯಮಳೆಕ್ರಿಕೆಟ್ಜಾಗತಿಕ ತಾಪಮಾನ ಏರಿಕೆಜಗನ್ನಾಥ ದೇವಾಲಯಅವರ್ಗೀಯ ವ್ಯಂಜನಚಂಪೂಭಾರತದ ಸ್ವಾತಂತ್ರ್ಯ ದಿನಾಚರಣೆಮ್ಯಾಥ್ಯೂ ಕ್ರಾಸ್ಮಂತ್ರಾಲಯಕಡಲತೀರರಗಳೆಉಳ್ಳಾಲಶ್ಚುತ್ವ ಸಂಧಿಅಲಂಕಾರಪಿ.ಲಂಕೇಶ್ಪಿತ್ತಕೋಶಕಾಲಾಯ ತಸ್ಮೈ ನಮಃ (ಚಲನಚಿತ್ರ)ಗುರುರಾಜ ಕರಜಗಿಸ್ವರಎಂ. ಎಂ. ಕಲಬುರ್ಗಿಕೀರ್ತಿನಾಥ ಕುರ್ತಕೋಟಿಮಾಹಿತಿ ತಂತ್ರಜ್ಞಾನಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಕರ್ನಾಟಕದ ಪ್ರಸಿದ್ಧ ದೇವಾಲಯಗಳುಕರ್ನಾಟಕದ ತಾಲೂಕುಗಳುಜಾತ್ರೆಕಾಮಸೂತ್ರಭಾರತೀಯ ಭಾಷೆಗಳುಶಿಕ್ಷಣ ಮಾಧ್ಯಮಸಂಸ್ಕೃತಕನ್ನಡದಲ್ಲಿ ಸಣ್ಣ ಕಥೆಗಳುಬೇಲೂರುಅಡೋಲ್ಫ್ ಹಿಟ್ಲರ್ಭಾರತೀಯ ಮೂಲಭೂತ ಹಕ್ಕುಗಳುಭಾರತದ ಚಲನಚಿತ್ರೋದ್ಯಮಋಗ್ವೇದಯೋಗಭಾರತದ ರಾಷ್ಟ್ರಪತಿಗಳ ಪಟ್ಟಿಭಾರತದ ಹಣಕಾಸಿನ ಪದ್ಧತಿಕರ್ನಾಟಕದಲ್ಲಿ ಸಹಕಾರ ಚಳವಳಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕರ್ನಾಟಕದಲ್ಲಿ ವನ್ಯಜೀವಿಧಾಮಗಳುಆದಿ ಶಂಕರರು ಮತ್ತು ಅದ್ವೈತಆಟಇಬ್ಬನಿಜಲ ಮಾಲಿನ್ಯಕರ್ನಾಟಕದ ಬಂದರುಗಳುಶಿವಶುಂಠಿಭಾರತಸಂಯುಕ್ತ ರಾಷ್ಟ್ರ ಸಂಸ್ಥೆಭಗತ್ ಸಿಂಗ್ಕೆ. ಎಸ್. ನಿಸಾರ್ ಅಹಮದ್ಬ್ಯಾಂಕ್ಕರ್ನಾಟಕದ ಹಬ್ಬಗಳುಬಾದಾಮಿಭೂತಾರಾಧನೆತುಳು ನಾಡುಛಂದಸ್ಸುಕಳಿಂಗ ಯುದ್ಧ🡆 More