ಕೊಯಂಬತ್ತೂರು

ಕೊಯಂಬತ್ತೂರು , ಅಥವಾ ಕೋವೈ (ಸಹಾಯ·ಮಾಹಿತಿ) ಜನಸಂಖ್ಯಾ ಪ್ರಕಾರ ದಕ್ಷಿಣ ಭಾರತದ ತಮಿಳು ನಾಡು ರಾಜ್ಯದ ಎರಡನೆಯ ದೊಡ್ಡ ನಗರ , ಒಂದು ಜಿಲ್ಲೆ ಮತ್ತು ಆ ಜಿಲ್ಲೆಯ ಮುಖ್ಯಪಟ್ಟಣ,

ಕೊಯಂಬತ್ತೂರು (கோயம்புத்தூர்)
ಕೊಯಂಬತ್ತೂರು (கோயம்புத்தூர்) ನಗರದ ಪಕ್ಷಿನೋಟ
ಕೊಯಂಬತ್ತೂರು (கோயம்புத்தூர்) ನಗರದ ಪಕ್ಷಿನೋಟ
ಗಾಂಧಿಪುರಂ ಬಸ್ ನಿಲ್ದಾಣದ ಎದುರಿನ ಡಾ. ನಂಜಪ್ಪ ರಸ್ತೆ
ಕೊಯಂಬತ್ತೂರು
ಕೊಯಂಬತ್ತೂರು
ಕೊಯಂಬತ್ತೂರು (கோயம்புத்தூர்)
ರಾಜ್ಯ
 - ಜಿಲ್ಲೆ
ತಮಿಳುನಾಡು
 - ಕೊಯಂಬತ್ತೂರು
ನಿರ್ದೇಶಾಂಕಗಳು 11° N 76° E
ವಿಸ್ತಾರ
 - ಎತ್ತರ
105.5 km²
 - 411.2 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
930882
 - 17779/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 6410(xx)
 - +91-(0)422
 - TN 37, TN 38 and TN 66
ಅಂತರ್ಜಾಲ ತಾಣ: www.coimbatore.tn.nic.in

ಕೊಯಂಬತ್ತೂರು ನಗರವು ದಕ್ಷಿಣ ಭಾರತದ ಮುಖ್ಯ ಕೈಗಾರಿಕಾ ಮತ್ತು ವ್ಯಾಪಾರ ಕೇಂದ್ರಗಳಲ್ಲೊಂದು.

ಕೊಯಂಬತ್ತೂರು, ಉತ್ತರದ ನೀಲಗಿರಿ ಮತ್ತು ದಕ್ಷಿಣದ ಅಣ್ಣಾಮಲೈಗಳ ನಡುವೆ, ಪಾಲಕ್ಕಾಡ್ ಕಣಿವೆಯ ಮುಖದ ಬಳಿಯಲ್ಲಿ, ಹತ್ತಿ ಬೆಳೆಯುವ ಪ್ರದೇಶದ ಅಂಚಿನಲ್ಲಿ ನೆಲೆಸಿರುವ ಜವಳಿ ಕೈಗಾರಿಕೆಯ ಕೇಂದ್ರವಾಗಿದೆ. ಚರ್ಮ ಹದ ಮಾಡುವುದು, ಸಾಬೂನು ಮತ್ತು ವ್ಯವಸಾಯೋಪಕರಣಗಳ ತಯಾರಿಕೆ, ಕಾಫಿ ಸಂಸ್ಕರಣೆ ಮತ್ತು ಸಕ್ಕರೆ ಕೈಗಾರಿಕೆಗಳೂ ಇಲ್ಲಿವೆ. ಇದೊಂದು ಶಿಕ್ಷಣ ಕೇಂದ್ರ ಕೂಡ. ಇಲ್ಲಿ ಮದ್ರಾಸು ವಿಶ್ವವಿದ್ಯಾಲಯಕ್ಕೆ ಸೇರಿದ ಒಂದು ಕಾಲೇಜು, ಕೃಷಿ ಕಾಲೇಜು ಮತ್ತು ಅರಣ್ಯಶಾಸ್ತ್ರ ಶಿಕ್ಷಣ ಶಾಲೆಗಳಿವೆ. ಇದು ದಕ್ಷಿಣ ರೈಲ್ವೆಯ ಒಂದು ಮುಖ್ಯ ಜಂಕ್ಷನ್. ಹಲವು ರಸ್ತೆಗಳು ಇಲ್ಲಿ ಕೂಡುತ್ತವೆ. ಕೊಯಂಬತ್ತೂರು ನಗರಕ್ಕೆ ಮೂರು ಮೈಲಿ ದೂರದಲ್ಲಿರುವ ಪೇರೂರಿನಲ್ಲಿ ಒಂದು ದೇವಾಲಯವಿದೆ. ಇದರ ಒಂದು ಭಾಗ ಚೋಳರ ಕಾಲದಲ್ಲಿ ನಿರ್ಮಿತವಾದ್ದು.ಇಲ್ಲಿಂದ ಇದು ಕಾಮನಾಯಕನ್‍ಪಾಳ್ಯಂ ಜಿಲ್ಲೆಯ ಗಡಿಯಲ್ಲಿದೆ.

ಕೊಯಂಬತ್ತೂರು ಜಿಲ್ಲೆಯ ವಿಸ್ತೀರ್ಣ 6,018 ಚ.ಮೈ. ಜನಸಂಖ್ಯೆ 43,57,373 (1971). ಇದರ ಪಶ್ಚಿಮ, ಉತ್ತರ ಮತ್ತು ದಕ್ಷಿಣದ ಭಾಗಗಳು ಬೆಟ್ಟಗಳಿಂದ ಕೂಡಿವೆ. ಪೂರ್ವಭಾಗದ ನೆಲ ಫಲವತ್ತದ್ದು. ಇದರ ಎತ್ತರ ಸಮುದ್ರಮಟ್ಟದಿಂದ 900'. ಇಲ್ಲಿ ಮಳೆ ಕಡಿಮೆ. ವಾತಾವರಣದಲ್ಲಿ ಹೆಚ್ಚು ತೇವ ಇರುವುದಿಲ್ಲ. ಸೆಖೆ ಹೆಚ್ಚು. ಬೇಸಿಗೆ ತೀವ್ರವಾದಾಗ ಜಿಲ್ಲೆಯ ಸಣ್ಣ ನದಿಗಳು ಬತ್ತಿ ಹೋಗುತ್ತವೆ. ಪಶ್ಚಿಮ ಮತ್ತು ಉತ್ತರದ ಬೆಟ್ಟಗಳಲ್ಲಿ ಕಾಫಿ ಮತ್ತು ಚಹಾ ತೋಟಗಳಿವೆ. ಮೈದಾನ ಪ್ರದೇಶದಲ್ಲಿ ಭತ್ತ ಮತ್ತು ಹತ್ತಿ ಮುಖ್ಯ ಬೆಳೆಗಳು.

ಇತಿಹಾಸ

ಹಿಂದೆ ಈ ಜಿಲ್ಲೆ ಈಗಿನ ಸೇಲಂ ಜಿಲ್ಲೆಯ ಭಾಗಗಳೊಡನೆ ಕೂಡಿ ಕೊಂಗುನಾಡು ಎಂದು ಪ್ರಸಿದ್ಧವಾಗಿತ್ತು. 9ನೆಯ ಶತಮಾನದಲ್ಲಿ ಈ ಜಿಲ್ಲೆಯ ಭಾಗಗಳು ಚೋಳರಿಗೆ ಸೇರಿದ್ದವು; 11ನೆಯ ಶತಮಾನದಲ್ಲಿ ಈ ಭಾಗ ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿತ್ತು. ತರುವಾಯ 14ನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಅಧೀನವಾಯಿತು. ಹೈದರ್ ಆಲಿ 1761ರಲ್ಲಿ ಈ ನಾಡನ್ನು ಗೆದ್ದುಕೊಂಡ, ಅವನ ಮಗ ಟಿಪ್ಪುಸುಲ್ತಾನ 4ನೆಯ ಮೈಸೂರು ಯುದ್ಧದಲ್ಲಿ (1799) ಮಡಿದ ಮೇಲೆ ಕೊಯಂಬತ್ತೂರು ಬ್ರಿಟಿಷರ ವಶವಾಗಿ ಮದ್ರಾಸು ಪ್ರಾಂತ್ಯಕ್ಕೆ ಸೇರಿತು. 1956ರಲ್ಲಿ ರಾಜ್ಯಗಳ ಪುನರ್ವಿಂಗಡಣೆಯಾದಾಗ ಕೊಯಂಬತ್ತೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕನ್ನು ಮೈಸೂರು ರಾಜ್ಯಕ್ಕೆ ವರ್ಗಾಯಿಸಲಾಯಿತು‌

ವ್ಯುತ್ಪತ್ತಿ

ಕೊಯಂಬತ್ತೂರು ಹೆಸರಿನ ಮೂಲದ ಬಗ್ಗೆ ಹಲವಾರು ಸಿದ್ಧಾಂತಗಳಿವೆ. ಒಂದು ಸಿದ್ಧಾಂತದ ಪ್ರಕಾರ, "ಕೊಯಂಬತ್ತೂರು" ಎಂಬುದು ಕೋವನ್‌ಪುದೂರ್‌ನ (ಅಕ್ಷರಶಃ 'ಕೋವನ್‌ನ ಹೊಸ ಪಟ್ಟಣ') ವ್ಯುತ್ಪನ್ನವಾಗಿದೆ,ಮುಖ್ಯಸ್ಥ ಕೋವನ್ ಅಥವಾ ಕೋಯನ್‍ನ ನಂತರ ಕೊಯಂಪುತ್ತೂರ್ ಆಗಿ ವಿಕಸನಗೊಂಡಿತು ಮತ್ತು ನಂತರ ಕೊಯಂಬತ್ತೂರು ಎಂದು ಆಂಗ್ಲೀಕರಣಗೊಂಡಿತು. ಕೋಯಮ್ಮ, ಕೋಯನ್ ಪೂಜಿಸುವ ದೇವತೆಯು ನಂತರ ಕೋನಿಯಮ್ಮ ಮತ್ತು ತದನಂತರ ಕೋವೈಯಮ್ಮ ಆಗಿ ವಿಕಸನಗೊಂಡಿತು. ಇನ್ನೊಂದು ಸಿದ್ಧಾಂತವು ಈ ಹೆಸರನ್ನು ಕೋವೈಯಮ್ಮನಿಂದ ಪಡೆದಿರಬಹುದೆಂದು ಹೇಳುತ್ತದೆ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

ಕೊಯಂಬತ್ತೂರು 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಕೊಯಂಬತ್ತೂರು ಇತಿಹಾಸಕೊಯಂಬತ್ತೂರು ವ್ಯುತ್ಪತ್ತಿಕೊಯಂಬತ್ತೂರು ಉಲ್ಲೇಖಗಳುಕೊಯಂಬತ್ತೂರು ಬಾಹ್ಯ ಸಂಪರ್ಕಗಳುಕೊಯಂಬತ್ತೂರುKovai.oggw:Wikipedia:Media helpಈ ಧ್ವನಿಯ ಬಗ್ಗೆಚಿತ್ರ:Kovai.oggತಮಿಳು ನಾಡು

🔥 Trending searches on Wiki ಕನ್ನಡ:

ಕನ್ನಡದಲ್ಲಿ ಗದ್ಯ ಸಾಹಿತ್ಯಶಕುನನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಹವಾಮಾನದಾನ ಶಾಸನಕರ್ಬೂಜಭಾರತ ಬಿಟ್ಟು ತೊಲಗಿ ಚಳುವಳಿಸತ್ಯಂನಾಗವರ್ಮ-೧ವಿಕ್ರಮಾರ್ಜುನ ವಿಜಯಮತದಾನಭಾರತದ ಮಾನವ ಹಕ್ಕುಗಳುಹಿ. ಚಿ. ಬೋರಲಿಂಗಯ್ಯಹನುಮ ಜಯಂತಿಕರ್ನಾಟಕದಲ್ಲಿ ಪಂಚಾಯತ್ ರಾಜ್ಕಾವೇರಿ ನದಿಒಲಂಪಿಕ್ ಕ್ರೀಡಾಕೂಟಆಯ್ಕಕ್ಕಿ ಮಾರಯ್ಯಜೀವವೈವಿಧ್ಯಭಾರತೀಯ ಶಾಸ್ತ್ರೀಯ ಸಂಗೀತಮಂಟೇಸ್ವಾಮಿಪದಬಂಧಭಾರತದ ಜನಸಂಖ್ಯೆಯ ಬೆಳವಣಿಗೆಕಲಿಯುಗವೇಗೋತ್ಕರ್ಷಕನ್ನಡ ಕಾಗುಣಿತಶೂದ್ರಯುಗಾದಿಕನಕದಾಸರುಮೂಲಧಾತುಗಳ ಪಟ್ಟಿಜಾಹೀರಾತುಕನ್ನಡ ಬರಹಗಾರ್ತಿಯರುರಾಮ ಮಂದಿರ, ಅಯೋಧ್ಯೆಭಾರತದಲ್ಲಿ ಮೀಸಲಾತಿನಿರ್ವಹಣೆ ಪರಿಚಯದೇವಸ್ಥಾನಈರುಳ್ಳಿಭಾರತದ ತ್ರಿವರ್ಣ ಧ್ವಜಕನ್ನಡ ಚಿತ್ರರಂಗಬಿ.ಎಫ್. ಸ್ಕಿನ್ನರ್ಕುಂಬಳಕಾಯಿಬಿ.ಎಲ್.ರೈಸ್ಎಂ. ಕೆ. ಇಂದಿರಮಹಾವೀರಕರ್ನಾಟಕ ವಿಧಾನ ಪರಿಷತ್ಭೂಕಂಪಕರಡಿವಿನಾಯಕ ಕೃಷ್ಣ ಗೋಕಾಕಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಬೆಲ್ಲಬೆಳಗಾವಿಮೂಲಭೂತ ಕರ್ತವ್ಯಗಳುತಾಪಮಾನರಾಯಲ್ ಚಾಲೆಂಜರ್ಸ್ ಬೆಂಗಳೂರುಇಮ್ಮಡಿ ಪುಲಿಕೇಶಿಗೋವಿಂದ ಪೈಜನಪದ ಕ್ರೀಡೆಗಳುಅಕ್ಕಮಹಾದೇವಿಪ್ಯಾರಾಸಿಟಮಾಲ್ಮಡಿವಾಳ ಮಾಚಿದೇವಕಾಮಸೂತ್ರಉಪ್ಪಿನ ಸತ್ಯಾಗ್ರಹಚೋಳ ವಂಶಭಾಷಾ ವಿಜ್ಞಾನಸಂಸ್ಕೃತಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿನರೇಂದ್ರ ಮೋದಿಬಾಹುಬಲಿಬೆಳಕುವಿರೂಪಾಕ್ಷ ದೇವಾಲಯಸೋಮನಾಥಪುರಕೃಷ್ಣಾ ನದಿಕರ್ನಾಟಕಕೊಪ್ಪಳಆಮ್ಲಗಳು ಮತ್ತು ಪ್ರತ್ಯಾಮ್ಲಗಳುಪ್ರಚಂಡ ಕುಳ್ಳ🡆 More