ಕೃಷ್ಣಾನಂದ ಕಾಮತ್

ಡಾ.

ಕೃಷ್ಣಾನಂದ ಕಾಮತ್ (೧೯೩೪ - ೨೦೦೨) ಖ್ಯಾತ ಸಾಹಿತಿ ಹಾಗೂ ವಿಜ್ಞಾನಿ. ಕನ್ನಡದಲ್ಲಿ ಅನೇಕ ವೈಜ್ಞಾನಿಕ ಮತ್ತು ಇತರ ಕೃತಿಗಳನ್ನು ರಚಿಸಿದ್ದಾರೆ.

ಪರಿಚಯ, ಶಿಕ್ಷಣ, ವೃತ್ತಿಜೀವನ

  • ಕಾಮತರು ಮೂಲತಃ ಉತ್ತರಕನ್ನಡ ಜಿಲ್ಲೆಹೊನ್ನಾವರದವರು. ಜನನ ೧೯೩೪ ಇಸವಿ, ಸೆಪ್ಟೆಂಬರ್ ೨೯. ತಂದೆ ಲಕ್ಷ್ಮಣ ವಾಸುದೇವ ಕಾಮತ್, ತಾಯಿ ರಮಾಬಾಯಿ.
  • ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೀಟ ವಿಜ್ಞಾನದಲ್ಲಿ ಎಂಎಸ್ಸಿ ಪದವಿ, ಅಮೇರಿಕಾದ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (೧೯೬೫, ವಿಷಯ: ಪರಿಸರ ಮತ್ತು ಅರಣ್ಯ ವಿಜ್ಞಾನ)
  • ರಾಜಸ್ಥಾನಉದಯಪುರ ವಿಶ್ವವಿದ್ಯಾಲಯ್ದ ಜಾಬ್ನೇರ ಕೃಷಿ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಸೇವೆ.
  • ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್ ವೆಲ್ತ್ ಇನ್‌ಸ್ಟಿಟ್ಯೂಟ್ ಆಫ್ ಬಯಾಲಜಿಕಲ್ ಕಂಟ್ರೋಲ್ ಸಂಸ್ಥೆಯಲ್ಲಿ ಶಾಖೆಯ ಮೇಲ್ವಿಚಾರಕರಾಗಿ ಎರಡು ವರ್ಷ ಸೇವೆ.
  • ೧೯೭೧ ರಿಂದ ನೌಕರಿಗೆ ರಾಜೀನಾಮೆ ನೀಡಿ ವೈಜ್ಞಾನಿಕ ಛಾಯಾಚಿತ್ರಗ್ರಾಹಕರಾಗಿ ಸ್ವತಂತ್ರ ಜೀವನ.

ಕೃಷ್ಣಾನಂದ ಕಾಮತರು ಪ್ರವಾಸಕಥನ, ವಿಜ್ಞಾನ, ಜನಾಂಗೀಯ ಅಧ್ಯಯನ, ಕಲೆ, ಪರಿಸರ ಮೊದಲಾದ ವಿಷಯಗಳ ಬಗ್ಗೆ ಪುಸ್ತಕಗಳನ್ನೂ, ನೂರಾರು ಲೇಖನಗಳನ್ನೂ ಪ್ರಕಟಿಸಿದ್ದಾರೆ. ಕೃಷ್ಣಾನಂದ ಕಾಮತರ ಪತ್ನಿ ಶ್ರೀಮತಿ ಜ್ಯೋತ್ಸ್ನಾ ಕಾಮತ್ ಸಂಶೋಧಕಿ ಹಾಗು ಲೇಖಕಿ.

ಕೃತಿಗಳು

  • ವಂಗದರ್ಶನ (ಬಂಗಾಲದ ಕುರಿತು)
  • ಪ್ರೇಯಸಿಗೆ ಪತ್ರಗಳು
  • ಮರುಪಯಣ
  • ಪತ್ರ-ಪರಾಚಿ
  • ಭಗ್ನಸ್ವಪ್ನ (ಕಾದಂಬರಿ)
  • ನಾ ರಾಜಸ್ಥಾನದಲ್ಲಿ
  • ಕಲೆ-ಕಾವಿಕಲೆ
  • ಅಕ್ಷತ
  • ಇರುವೆಯ ಇರುವು
  • The Timeless Theater
  • ಕಾಗೆಯ ಕಾಯಕ
  • ಪ್ರವಾಸಿಯ ಪ್ರಬಂಧಗಳು
  • ಕೊಂಕಣ್ಯಾಲಿ ಕಾವಿಕಲಾ (ಕೊಂಕಣಿ ಭಾಷೆ)


೧೯೭೬ ಒಂದು ವರ್ಷಕಾಲ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಶಿಷ್ಯವೇತನ ಪಡೆದು ಮಧ್ಯಪ್ರದೇಶದಲ್ಲಿ ಗಿರಿವಾಸಿ ಜನಾಂಗಗಳ ಅಧ್ಯಯನ ಮಾಡಿ ಅಲ್ಲಿನ ಬಗ್ಗೆ ಮೂರು ಕೃತಿಗಳನ್ನು ರಚಿಸಿದ್ದಾರೆ.

  • ಕಾಲರಂಗ
  • ಬಸ್ತರ ಪ್ರವಾಸ (ಗಿರಿಜನರ ಪರಿಚಯ)
  • ಮಧ್ಯಪ್ರದೇಶದ ಮಡಿಲಲ್ಲಿ


ಪರಿಸರ, ಪ್ರಾಣಿ, ಸಸ್ಯ ವಿಜ್ಞಾನದ ಕೃತಿಗಳನ್ನು ರಚಿಸಿದ್ದಾರೆ.

  • ಪ್ರಾಣಿಪ್ರಪಂಚ
  • ಪಶುಪಕ್ಷಿ ಪ್ರಪಂಚ
  • ಕೀಟ ಜಗತ್ತು
  • ಸಸ್ಯಪ್ರಪಂಚ
  • ಸಸ್ಯ ಪರಿಸರ
  • ಪ್ರಾಣಿ ಪರಿಸರ
  • ಸರ್ಪಸಂಕುಲ
  • ನಾನೂ ಅಮೆರಿಕೆಗೆ ಹೋಗಿದ್ದೆ (ಪ್ರವಾಸಕಥನ,೧೯೬೯)

ಪ್ರಶಸ್ತಿ ಮತ್ತು ಗೌರವಗಳು

  • ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ನಾನೂ ಅಮೆರಿಕೆಗೆ ಹೋಗಿದ್ದೆ, ಪ್ರಾಣಿಪರಿಸರ, ಬಸ್ತರ ಪ್ರವಾಸ ಕೃತಿಗಳಿಗೆ)
  • ಗೌರೀಶ ಕಾಯ್ಕಿಣಿ ಪ್ರತಿಷ್ಠಾನದ ಪ್ರಶಸ್ತಿ (೧೯೯೪)
  • ಟಿ.ಎಂ.ಎ. ಪೈ ಪ್ರತಿಷ್ಠಾನ ವಿಶೇಷ ಬಹುಮಾನ
  • ಉತ್ತರ ಕನ್ನಡ ಜಿಲ್ಲಾ ಒಂಬತ್ತನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ (೧೯೯೭)
  • ಕೆಲವು ಕೃತಿಗಳು ಬೆಂಗಳೂರು, ಕರ್ನಾಟಕ ವಿ.ವಿ.ದ ತರಗತಿಗಳಿಗೆ ಪಠ್ಯಗಳಾಗಿ ಆಯ್ಕೆ.

ನಿಧನ

ಕೃಷ್ಣಾನಂದ ಕಾಮತರು ೨೦೦೨ ಫೆಬ್ರುವರಿ ೨೦ರಂದು ನಿಧನರಾದರು.

ಉಲ್ಲೇಖಗಳು

ಹೊರಕೊಂಡಿಗಳು

Tags:

ಕೃಷ್ಣಾನಂದ ಕಾಮತ್ ಪರಿಚಯ, ಶಿಕ್ಷಣ, ವೃತ್ತಿಜೀವನಕೃಷ್ಣಾನಂದ ಕಾಮತ್ ಕೃತಿಗಳುಕೃಷ್ಣಾನಂದ ಕಾಮತ್ ಪ್ರಶಸ್ತಿ ಮತ್ತು ಗೌರವಗಳುಕೃಷ್ಣಾನಂದ ಕಾಮತ್ ನಿಧನಕೃಷ್ಣಾನಂದ ಕಾಮತ್ ಉಲ್ಲೇಖಗಳುಕೃಷ್ಣಾನಂದ ಕಾಮತ್ ಹೊರಕೊಂಡಿಗಳುಕೃಷ್ಣಾನಂದ ಕಾಮತ್೧೯೩೪೨೦೦೨

🔥 Trending searches on Wiki ಕನ್ನಡ:

ಜಾತ್ರೆಭಾರತೀಯ ನೌಕಾಪಡೆಸೀತಾ ರಾಮರಾಜ್ಯಗಳ ಪುನರ್ ವಿಂಗಡಣಾ ಆಯೋಗರಾಷ್ಟ್ರೀಯ ಸ್ವಯಂಸೇವಕ ಸಂಘಉಪ್ಪಿನ ಸತ್ಯಾಗ್ರಹಝಾನ್ಸಿಯೇಸು ಕ್ರಿಸ್ತಕಂಬಳರಾಮ್ ಮೋಹನ್ ರಾಯ್ರಾಷ್ಟ್ರಕವಿನಗರೀಕರಣಅಜಂತಾಡಾ ಬ್ರೋಭಾರತೀಯ ಧರ್ಮಗಳುಜಂತುಹುಳುಕರ್ನಾಟಕ ವಿಧಾನ ಸಭೆದೇವತಾರ್ಚನ ವಿಧಿಹಡಪದ ಅಪ್ಪಣ್ಣಹಾ.ಮಾ.ನಾಯಕಶಾತವಾಹನರುಬಹಮನಿ ಸುಲ್ತಾನರುಸೂರ್ಯ ವಂಶಪಂಚ ವಾರ್ಷಿಕ ಯೋಜನೆಗಳುಮಾನವ ಸಂಪನ್ಮೂಲಗಳುಅಂಬರೀಶ್ಮುಪ್ಪಿನ ಷಡಕ್ಷರಿಭಾರತೀಯ ಜನತಾ ಪಕ್ಷಸಾರಾ ಅಬೂಬಕ್ಕರ್ಕ್ರಿಯಾಪದಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಸೌಂದರ್ಯ (ಚಿತ್ರನಟಿ)ಕನ್ನಡದಲ್ಲಿ ಮಹಿಳಾ ಸಾಹಿತ್ಯಮಂಡ್ಯರಾಮಾಚಾರಿ (ಕನ್ನಡ ಧಾರಾವಾಹಿ)ಶನಿಶ್ರೀ ರಾಮಾಯಣ ದರ್ಶನಂಆಮ್ಲಗಳು ಮತ್ತು ಪ್ರತ್ಯಾಮ್ಲಗಳುಪುರಂದರದಾಸದೇವನೂರು ಮಹಾದೇವರಾಘವನ್ (ನಟ)ಯೋಜಿಸುವಿಕೆಪುಟ್ಟರಾಜ ಗವಾಯಿಜಿಪುಣಗೋತ್ರ ಮತ್ತು ಪ್ರವರವ್ಯವಸಾಯಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ವಿಶ್ವ ಪರಂಪರೆಯ ತಾಣಭಾರತದಲ್ಲಿ ಬಡತನಹುರುಳಿಕನ್ನಡ ಪತ್ರಿಕೆಗಳುಮಲೈ ಮಹದೇಶ್ವರ ಬೆಟ್ಟಜನ್ನಯೋಗ ಮತ್ತು ಅಧ್ಯಾತ್ಮಕನ್ನಡ ರಾಜ್ಯೋತ್ಸವಎ.ಎನ್.ಮೂರ್ತಿರಾವ್ಕರ್ನಾಟಕಹನುಮಂತಹರಿಹರ (ಕವಿ)ಯಣ್ ಸಂಧಿನಾಗವರ್ಮ-೧ಸೋಮನಾಥಪುರಯೂಟ್ಯೂಬ್‌ಕರ್ನಾಟಕದ ಏಕೀಕರಣಪ್ರೀತಿಕರ್ನಾಟಕದ ಕಲೆ ಮತ್ತು ಸಂಸ್ಕೃತಿಶಿವಕುಮಾರ ಸ್ವಾಮಿಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಮೇಘಾ ಶೆಟ್ಟಿಜೋಗಿ (ಚಲನಚಿತ್ರ)ಶೂದ್ರಡೊಳ್ಳು ಕುಣಿತಸುಭಾಷ್ ಚಂದ್ರ ಬೋಸ್ವಿಧಾನಸೌಧಗ್ರಂಥ ಸಂಪಾದನೆಗಾಂಧಿ ಜಯಂತಿಹಾಸನ ಜಿಲ್ಲೆ🡆 More