ಕುಂಡಲಿನಿ ಯೋಗ

ಕುಂಡಲಿನಿ ಯೋಗವು ಒಂದು ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಿಸ್ತು, ಇದು ರಾಜಯೋಗ, ಶಕ್ತಿ ಯೋಗ, ಭಕ್ತಿ ಯೋಗ, ತಂತ್ರ, ಕ್ರಿಯಾ ಯೋಗ, ಲಯ ಯೋಗ, ನಾದ ಯೋಗ ಮತ್ತು ಯೋಗದ ಬೆನ್ನೆಲುಬಾದ ಪತಂಜಲಿ ಯೋಗ ಸೂತ್ರದ ಶ್ರೇಷ್ಠವಾದ ಶಾರೀರಿಕ ಮತ್ತು ಧ್ಯಾನದ ತಂತ್ರಗಳ ಒಕ್ಕೂಟವಿದೆ.

ಕುಂಡಲಿನಿ ಯೋಗವನ್ನು ಜ್ಞಾನದ ಯೋಗ ಎಂದು ಕರೆಯಲಾಗುತ್ತದೆ, ಏಕೆಂದರೆ ಇದು ನೇರವಾಗಿ ಒಬ್ಬ ವ್ಯಕ್ತಿಯ ಮನಸ್ಸಾಕ್ಷಿಯ ಮೇಲೆ ಪ್ರಭಾವ ಬೀರುತ್ತದೆ, ಒಳ ದೃಷ್ಟಿಯನ್ನು ಬೆಳೆಸುತ್ತದೆ, ಆತ್ಮ ಜ್ಞಾನವನ್ನು ಹೆಚ್ಚಿಸುತ್ತದೆ ಮತ್ತು ಪ್ರತಿಯೊಬ್ಬ ಮನುಷ್ಯನಲ್ಲಿ ಹುದುಗಿರುವ ಅಗಾಧವಾದ ಸೃಜನಾತ್ಮಕ ಶಕ್ತಿಯನ್ನು ಬಿಡುಗಡೆಗೊಳಿಸಲು ಅನುವಾಗುತ್ತದೆ.

ಕುಂಡಲಿನಿ ಯೋಗ
ಕೆಳಗಿನಿಂದ ಮೇಲಕ್ಕೆ 1 ಮೂಲಾಧಾರ-: 2.ಸ್ವಾಧಿಸ್ಠಾನ, -: 3.ಮಣಿಪೂರ, 4.ಅನಾಹತ, - 5.ವಿಶುದ್ಧ- 6.ಅಜ್ಞಾ -: 7 ಸಹಸ್ರಾರ

ಕುಂಡಲಿನಿ ಯೋಗವು ವಿಶೇಷವಾಗಿ ಅಭಿವೃದ್ಧಿ ಹೊಂದಿದ ಆಧ್ಯಾತ್ಮ ವಿಜ್ಞಾನ, ಇದು ಅಸ್ಪಷ್ಟವಾದ ಮತ್ತು ಬಹುಸಂಸ್ಕೃತಿಯ ಇತಿಹಾಸವನ್ನು ಹೊಂದಿದೆ, ಹಿಂದು ಸಂಪ್ರದಾಯದ ಪ್ರಕಾರ ಆಧ್ಯಾತ್ಮಿಕ ಗುರುವಿನ ಮಾರ್ಗದರ್ಶನದಲ್ಲಿ ಮೋಕ್ಷವನ್ನು ಪಡೆಯಲು ನಂಬುವ ತಂತ್ರವಾದ ಶಕ್ತಿಪಥ ಇದಾಗಿದೆ. ಮುಖ್ಯವಾಹಿನಿಯ ಪದ್ಧತಿಗಳು ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸಬಹುದು ಎಂಬುದನ್ನು ತೋರಿಸಿವೆ ಅಲ್ಲದೆ ಮೋಕ್ಷವನ್ನು ಯೋಗ್ಯ ಗುರುವಿನ ಮಾರ್ಗದರ್ಶನವನ್ನು ಅನುಸರಿಸುವ ಮೂಲಕ ಮತ್ತು ಯೋಗದ ತಂತ್ರಗಳನ್ನು ಅಭ್ಯಸಿಸುವ ಮೂಲಕ ಹೊಂದಬಹುದು-ಇದರೊಂದಿಗೆ ಮಂತ್ರ, ಪ್ರಾಣ ಮತ್ತು ಉಸಿರಾಟದ ವಿಧಾನಗಳು, ಸಾಧನೆ, ಆಸನ, ಅಭ್ಯಾಸ, ಧ್ಯಾನ ಅಥವಾ ಬರಿಯ ಭಕ್ತಿ ಮತ್ತು ಪ್ರಾರ್ಥನೆಯ ಮೂಲಕವೂ ಮೋಕ್ಷವನ್ನು ಹೊಂದಬಹುದು.

ಮೂಲಭೂತ ಸಿದ್ಧಾಂತ

ಯೋಗ ಸಿದ್ಧಾಂತದ ಪ್ರಕಾರ ಕುಂಡಲಿನಿಯು ಒಂದು ಆಧ್ಯಾತ್ಮಕ ಶಕ್ತಿ ಅಥವಾ ಕಶೇರು ಮಣಿಗಳ ಮೂಲದಲ್ಲಿ ಗುರುತಿಸಲ್ಪಡುವ ಜೀವ ಶಕ್ತಿ. 'ಇದನ್ನು ಸುರುಳಿ ಸುತ್ತಿರುವ ಸರ್ಪ ಎಂದು ಕಲ್ಪಿಸಿಕೊಳ್ಳಬಹುದು (ಅಕ್ಷರಶಃ, ಕುಂಡಲಿನಿ ಎಂದರೆ ಸಂಸ್ಕೃತದಲ್ಲಿ ’ಸುರುಳಿ ಸುತ್ತಿರುವ’ ಸಂಸ್ಕೃತದ ಕುಂಡ್, "ಸುಡಲು": ಕುಂಡ ಎಂದರೆ "ಸುತ್ತುವುದು ಅಥವಾ ಸುರುಳಿ")

ಕಾಶ್ಮೀರದ ಶಾಸ್ತ್ರೀಯ ಸಾಹಿತ್ಯದಲ್ಲಿ ಶೈವ ಕುಂಡಲಿನಿಯನ್ನು ಮೂರು ವಿವಿಧ ಪ್ರಮಾಣಗಳಲ್ಲಿ ವಿವರಿಸಲಾಗಿದೆ. ಮೊದಲನೆಯದಾಗಿ ಇದನ್ನು ಸಾರ್ವತ್ರಿಕ ಶಕ್ತಿ ಅಥವಾ ಕುಂಡಲಿನಿಯ ಹೋಲಿಕೆ ಎನ್ನಲಾಗಿದೆ. ಎರಡನೆಯದಾಗಿ ಶರೀರ-ಮನಸ್ಸು ಎರಡಕ್ಕೂ ಸಮಷ್ಟಿಯಾಗಿ ಸಹಕರಿಸುವ ಶಕ್ತಿ ಅಥವಾ ಪ್ರಾಣ ಕುಂಡಲಿನಿ ಮೂರನೆಯದಾಗಿ ಆತ್ಮ ಸಾಕ್ಷಿ ಅಥವಾ ಶಕ್ತಿ ಕುಂಡಲಿನಿ, ಇದು ಮೇಲಿನೆರಡನ್ನೂ ಒಂದೇಕಾಲದಲ್ಲಿ ಒಂದು ನಿಯಮಕ್ಕೆ ಒಳಪಡಿಸುತ್ತದೆ ಮತ್ತು ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ. ಕೊನೆಯದಾಗಿ ಈ ಮೂರೂ ಬಗೆಗಳೂ ಒಂದೇ ಆಗಿವೆ ಆದರೆ ಈ ಮೂರೂ ವಿವಿಧ ಬಗೆಗಳನ್ನು ತಿಳಿದುಕೊಂಡರೆ ಅದು ಕುಂಡಲಿನಿಯ ವಿವಿಧ ಪ್ರಕಾರಗಳನ್ನು ತಿಳಿಯಲು ಸಹಾಯವಾಗುತ್ತದೆ.

ಕುಂಡಲಿನಿಯ ಮಾರ್ಗವು ಬೆನ್ನು ಮೂಳೆಯ ಕೆಳಭಾಗದ ಮೂಲಾಧಾರ ಚಕ್ರದಿಂದ ಶಿರದ ಮೇಲಿನ ಸಹಸ್ರಾರ ಚಕ್ರದವರೆಗೆ ಮುಂದುವರೆಯುತ್ತದೆ. ಇದನ್ನು ಜಾಗೃತಗೊಳಿಸುವುದು ಭೌತಿಕ ಸಂಭವಿಸುವಿಕೆ ಎಂದು ತಿಳಿಯುವಂತಿಲ್ಲ; ಇದು ಸಂಪೂರ್ಣವಾಗಿ ಆತ್ಮಜ್ಞಾನದ ವಿಕಾಸವಾಗಿದೆ. ಕೆಲವು ಮೂಲಗಳ ಪ್ರಕಾರ ಕುಂಡಲಿನಿಯ ಜಾಗೃತಿಯು ನಿರ್ಮಲವಾದ ಆನಂದ, ಪವಿತ್ರವಾದ ಜ್ಞಾನ ಮತ್ತು ನಿಷ್ಕಳಂಕ ಪ್ರೀತಿಯನ್ನು ತರುತ್ತದೆ.

ಕುಂಡಲಿನಿ ಪದವನ್ನು ಸಂಸ್ಕೃತದ ’ಕುಂಡಲ’ ಅಂದರೆ ’ಸುರುಳಿಯಾದ’ ಜಾಡಿನಲ್ಲಿ ಪಡೆಯಬಹುದು. ಆದ್ದರಿಂದ ಕುಂಡಲಿನಿಯನ್ನು ಮನುಷ್ಯನ ಶರೀರದಲ್ಲಿ ನಮ್ಮ ಅಂತಃದೃಷ್ಟಿ, ಶಕ್ತಿ ಮತ್ತು ಪರಮಸುಖವನ್ನು ಗಳಿಸಲು ಪಡುವ ನಿರಂತರ ಪ್ರಯತ್ನದ ಸುಪ್ತ ಶಕ್ತಿಯೆಂದು ಪರಿಗಣಿಸಲಾಗುತ್ತದೆ. ಒಂದು ಮೂಲದ ಪ್ರಕಾರ, ಕುಂಡಲಿನಿಯ ಅಕ್ಷರಶಃ ಅರ್ಥ "ಪ್ರಿಯತಮ/ಮೆಯ ಮುಂಗುರುಳು" ಇದೊಂದು ರೂಪಕಾಲಂಕಾರ, ಶಕ್ತಿಯ ಹರಿವನ್ನು ಕಾವ್ಯಮಯಾಗಿ ವರ್ಣಿಸುವ ವಿಧಾನವಾಗಿದೆ ಮತ್ತು ಮೊದಲೇ ಹೇಳಿದಂತೆ ಆತ್ಮ ಸಾಕ್ಷಿಯು ಪ್ರತಿಯೊಬ್ಬ ವ್ಯಕ್ತಿಯ ಅಂತರ್ಗತವಾಗಿರುತ್ತದೆ. ಇದರ ಅಭ್ಯಾಸವು, ವ್ಯಕ್ತಿಯನ್ನು ವಿಶ್ವದೊಂದಿಗೆ ವಿಲೀನಗೊಳಿಸಲು ಅಥವಾ ನೊಗಕೊಡಲು(ಬದುಕನ್ನು ಎಳೆಯಲು?) ಸಹಾಯಮಾಡುತ್ತದೆ ಎಂದು ಹೇಳಲಾಗಿದೆ. ವ್ಯಕ್ತಿಯ ಆತ್ಮಸಾಕ್ಷಿಯ ಜೊತೆಗೆ ಸಾರ್ವತ್ರಿಕ ಜ್ಞಾನದ ಈ ವಿಲೀನಗೊಳಿಸುವಿಕೆಯು "ಯೋಗ" ಎನ್ನುವ ಒಂದು "ದೈವಿಕ ಸಂಯೋಗ"ವನ್ನು ಸೃಷ್ಟಿಸುತ್ತದೆ ಎನ್ನಲಾಗಿದೆ.

ಏಳು ಮುಖ್ಯ ಚಕ್ರಗಳು

  • Chakra- ಚಕ್ರ
  • ಕುಂಡಲಿನಿಯೋಗದ ಮೂಲವಾದ ರಾಜಯೋಗದಲ್ಲಿ 16108 ನಾಡಿಗಳು, 108 ಚಕ್ರಗಳು ಮತ್ತು ಏಳು ಮುಖ್ಯ ಚಕ್ರಗಳನ್ನು ಹೇಳಿದೆ. ಈ ಚಕ್ರಗಳು ಮತ್ತು ನಾಡಿಗಳು ಭೌತಿಕವಲ್ಲ. ದೇಹವನ್ನು ಸೀಳಿನೋಡಿದರೆ ಕಾಣುವುದಿಲ್ಲ. ಇವು ಹೆಚ್ಚು ಮಾನಸಿಕವಾದವು. ಇವನ್ನು ಭಾವಿಸಿಕೊಂಡು ಮನಸ್ಸನ್ನು ಕೇಂದ್ರೀಕರಿಸುವ ಸ್ಥಾನಗಳು.. ಏಕಾಗ್ರತೆ ಸಾಧಿಸಿ ಮೂಲಾಧಾರದಿಂದ ಮೇಲುಮೇಲಕ್ಕೆ ಹೋದಂತೆ ಅದರ ಕೆಳಗನ ದೇಹದ ಭಾಗಗಳು ಸುಪ್ತ ಅಥವಾ ನಿದ್ರಾವಸ್ಥೆಗೆ ತಲುಪುತ್ತವೆ. ಹುಬ್ಬಿನ ನಡುವಿನ ಆಜ್ಞಾ ಚಕ್ರದಲ್ಲಿ ಮನಸ್ಸು ಕೇಂದ್ರಿಕೃತವಾದಾಗ ತಾನು ಮತ್ತು ಪರಮಾತ್ಮ - ಚೈತನ್ಯವು ಎಂಬ ಎರಡು ಭಾವ ಮಾತ್ರಾ ಇರುವುದಾಗಿ ಹೇಳಿದೆ. ಆಗ ಧ್ಯಾನಿಯು ಯಾವ ದೇವ- ದೇವತೆಯನ್ನ ಉಪಾಸಿಸುವನೋ ಆ ದೇವ ದೇವತೆ ಅವನ ಊಹೆಯಂತೆ ಕಾಣುವುದು. ಅದರಿಂದ ಸಂಕಲ್ಪ ಸಿದ್ಧಿಯೆಂಬ ಮನಸ್ಸಿನ ಅಪೇಕ್ಷೆ ಈಡೇರುವುದಾಗಿ ಹೇಳಿದೆ. ಆದರೆ ಅದಕ್ಕೆ ಅದರದೇ ಆದ ಮಿತಿ ಇದೆ. ನಂತರದ ಸಹಸ್ರಾರ ಚಕ್ರದಲ್ಲಿ ಮನಸ್ಸು ಪೂರ್ಣ ಸೇರಿದರೆ ಅವನಿಗೆ ಸಮಾಧಿಸ್ಥಿತಿ ಒದಗುವುದು. ಅಲ್ಲಿ 'ತಾನು ಆತ್ಮ'- 'ಅವನು ಪರಮಾತ್ಮ' ಎಂಬ ಭಾವ ಹೋಗಿ ಸಮಾಧಿ ಸ್ಥಿತಿಗೆ ಹೋಗಿ ಆನಂದ ಅಥವಾ 'ಶಾಂತ, ಶಾಂತಿ' ಎಂಬ 'ಒಂದೇ ಭಾವ' ಎಂಬ ಸ್ಥಿತಿಯನ್ನು ತಲುಪುವುದಾಗಿ ಹೇಳಿದೆ. ಆದೇ ರೀತಿ ಬೇರೆ ಬೇರೆ ಯೋಗಗಳಿಂದಲೂ ಅದೇ ಪರಿಣಾಮಗಳನ್ನು ಹೇಳಿದೆ. ಅಲ್ಲಿಯೂ - ಆ ಸಮಾಧಿಸ್ಥಿತಿಯಲ್ಲಿ ಯೋಗಿಗೆ 'ತಾನು ಪರಮಾತ್ಮನಿಂದ ಬೇರೆ' ಎಂಬ ಭಾವವಿದ್ದರೆ ಅದು 'ಸವಿಕಲ್ಪ ಸಮಾಧಿ'. ಆ ಬೇಧವು ಇಲ್ಲದಿದ್ದರೆ ಅದು 'ನಿರ್ವಿಕಲ್ಪ ಸಮಾಧಿ'. (ಹೀಗೆ ಸಮಾಧಿ ಸ್ಥಿತಿಗೆ ಹೋದವನು ಪುನಃ ಎಚ್ಚರಾಗಬಹುದು ಅಥವಾ ಎಚ್ಚರಾಗದೇ ಹಾಗೆಯೇ ಪ್ರಾಣತ್ಯಾಗವೂ ಆಗಬಹುದು. ಆದ್ದರಿಂದ ತಿಳಿದ ಯೋಗಿಗಳ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಲು ಹೇಳಿದೆ. ಉದ್ದೇಶಪೂರ್ವಕ ಸಮಾಧಿ ಸ್ಥಿತಿಗೆ ಹೊಗಿ ಪ್ರಾಣತ್ಯಾಗ ಮಾಡುವ ಯೋಗಿಗಳೂ ಇದ್ದಾರೆ. - ಇದರಿಂದ- ಎಂದರೆ ಸಮಾಧಿಸಿದ್ಧಿಯ ಸಾಧನೆಯಿಂದ ಬೇರೆಯವರಿಗೆ ಪ್ರಯೋಜನ ಅಷ್ಟಕ್ಕಷ್ಟೆ- 'ತಾನು ಆನಂದದ ಸ್ಥಿತಿಗೆ ತಲುಪಿದೆ' ಎಂಬುದೇ ಮುಖ್ಯ).

ವಿಕಾಸದ ದೃಷ್ಟಿಯಲ್ಲಿ

ಕುಂಡಲಿನಿಯನ್ನು ವೈಯಕ್ತಿಕ ಆಧ್ಯಾತ್ಮದ ಬೆಳವಣಿಗೆಗೆ ಅಲ್ಲದೆ ಮಾನಸಿಕ ಮತ್ತು ಶಾರೀರಿಕ ಸ್ವಾಸ್ಥ್ಯವನ್ನು ಉತ್ತಮಗೊಳಿಸಲು ಸಾಕಷ್ಟು ಅನುಕೂಲಗಳನ್ನು ಒದಗಿಸುವ ವ್ಯಾಯಾಮದ ಪದ್ಧತಿ ಮತ್ತು ಧ್ಯಾನ ಎಂದು ದಾಖಲಿಸಲಾಗಿದೆ. ಶಾರೀರಿಕ ಲಾಭಗಳು ಎಂದರೆ ಗುಣಪಡಿಸಲಾಗದ ರೋಗಗಳಾದ ಅಲ್ಜೀಮರ್ ಗುಣಪಡಿಸುವ ಚಿಕಿತ್ಸೆಗಳು (ಬುದ್ಧಿ ಮಾಂದ್ಯತೆ), ಉಬ್ಬಸ, ಸಕ್ಕರೆ ಕಾಯಿಲೆ, ನೋವು, ಒತ್ತಡಕ್ಕೆ ಸಂಬಂಧಿಸಿದ ಕಾಯಿಲೆ, ಚಟಕ್ಕೆ ಬಿದ್ದವರ ಪುನರ್ವಸತಿ ಮತ್ತು ಮಾನಸಿಕ ಅಸ್ವಸ್ಥತೆಯನ್ನು ಚಿಕಿತ್ಸೆಗೊಳಪಡಿಸುವುದು ಇವೆಲ್ಲ ಸೇರುತ್ತವೆ.

ಕೆಲವು ಸಂಪ್ರದಾಯದ ಪ್ರಕಾರ ಕುಂಡಲಿನಿ ಕಾರ್ಯವಿಧಾನವು, ಗುರುಗಳಿಂದ ತಮ್ಮ ಶಿಷ್ಯರಿಗೆ, ಅದೂ ಶಿಷ್ಯನ ಮೇಲೆ ಸಂಪೂರ್ಣ ಭರವಸೆ ಬಂದ ಮೇಲೆ ತಿಳಿಸುವಂತಹ ವಿದ್ಯೆ. Iಈ ನಿದರ್ಶನಗಳಲ್ಲಿ, ಯೋಗದ ಗುರುಗಳ ನಂಬಿಕೆಯೆಂದರೆ, ಶ್ಲೋಕಗಳ ಜೋಡಣೆಯ ಬಗೆಗಿನ ಅಜ್ಞಾನ ಅಥವಾ ಗುರುಗಳ ಆಜ್ಞೆಯನ್ನು ನಿರಾಕರಿಸುವ ಗುಣವು ಅಪಾಯಕಾರಿ ಪರಿಣಾಮವನ್ನು ಉಂಟು ಮಾಡುತ್ತದೆ. ಆದರೂ, ಕೆಲವು ಸನ್ನಿವೇಶಗಳಲ್ಲಿ ಭಾರತದ ಕೆಲವು ಗುರುಗಳು ಈ ಜ್ಞಾನವನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಹರಡಲು ಪ್ರೋತ್ಸಾಹಿಸಿದರು, ಅಲ್ಲಿಂದ ಈ ವಾದದ ಅಸ್ತಿತ್ವದ ಮೇಲೆ ಪ್ರಶ್ನೆಯೆದ್ದಿದೆ.

ಯೋಗ ಪಂಡಿತ, ಟ್ರಾನ್ಸ್‌ಪರ್ಸನಲ್ ಮನಶ್ಶಾಸ್ತ್ರಕ್ಕೆ ಸಂಬಂಧಿಸಿದವನಾಗಿದ್ದ ಸೊವಾಟ್ಸ್ಕಿ ಯು, ಕುಂಡಲಿನಿ ಯೋಗದ ಬಗ್ಗೆ ಅಭಿವೃದ್ಧಿ ಮತ್ತು ವಿಕಾಸವಾದದ ಒಳದೃಷ್ಟಿಯನ್ನು ಹೊಂದಿದ್ದ. ಅಂದರೆ, ಅವನ ಅಭಿಪ್ರಾಯದಂತೆ ಕುಂಡಲಿನಿ ಯೋಗವು ಮನಸ್ಸಿನ-ಆಧ್ಯಾತ್ಮಿಕ ಬೆಳವಣಿಗೆ ಮತ್ತು ದೇಹದ ಪಕ್ವತೆ ಒಂದು ವೇಗವರ್ಧಕದಂತೆ ಕೆಲಸ ಮಾಡುತ್ತದೆ. ಯೋಗದ ಈ ವ್ಯಾಖ್ಯಾನದಂತೆ, ಶರೀರವು ಚೆನ್ನಾಗಿ ಪಕ್ವಗೊಂಡು ತನ್ನಷ್ಟಕ್ಕೆ ತಾನೆ ಬಗ್ಗುತ್ತದೆ [...], ಇವುಗಳಲ್ಲಿ ಯಾವುದನ್ನೂ ಬರಿಯ ಹಿಗ್ಗಿಸುವ ವ್ಯಾಯಾಮವೆಂದು ಪರಿಗಣಿಸಬಾರದು .

ಜಾಗರೂಕತೆಯ ಅವಲೋಕನ

ಏಷ್ಯಾದ ಸಂಪ್ರದಾಯಕ್ಕೆ ಸಂಬಂಧಿಸಿದ ಎಲ್ಲ ತೀವ್ರತರವಾದ ರೂಢಿಗಳು ನಿರಂತರ ಅಭ್ಯಾಸಗಳನ್ನು ನಿರೀಕ್ಷಿಸುತ್ತವೆ. ಮನಶ್ಶಾಸ್ತ್ರದ ಸಾಹಿತ್ಯವು ತಿಳಿಸುತ್ತದೆ" ಪೌರಾತ್ಯ ಆಧ್ಯಾತ್ಮಿಕ ಆಚರಣೆಗಳ ಒಳಹರಿವು ಮತ್ತು 1960ರಲ್ಲಿ ಪ್ರಾರಂಭವಾಗಿ ಹೆಚ್ಚುತ್ತಿರುವ ಧ್ಯಾನದ ಪ್ರಸಿದ್ಧಿಯಿಂದ, ಅನೇಕ ಜನರು ತೀವ್ರತರವಾದ ಆಧ್ಯಾತ್ಮಿಕ ಆಚರಣೆಗಳಲ್ಲಿ ತೊಡಗಿರುವಾಗ ಅಥವಾ ಸಹಜ ಪ್ರವೃತ್ತಿಯಿಂದ ವಿಚಿತ್ರ ರೀತಿಯ ಮಾನಸಿಕ ತೊಂದರೆಗಳನ್ನು ಅನುಭವಿಸಿದ್ದಾರೆ, (೦/) ಗಾಢವಾದ ಆಧ್ಯಾತ್ಮಿಕ ಅಭ್ಯಾಸದ ಜೊತೆಗೆ ಸಂಬಂಧಿಸಿರುವ ಮಾನಸಿಕ ಬಿಕ್ಕಟ್ಟುಗಳಲ್ಲಿ "ಕುಂಡಲಿನಿ ಜಾಗೃತಿ" ಸೇರಿದೆ, "ಯೋಗ ಸಂಪ್ರದಾಯದಲ್ಲಿ ವಿವರಿಸಲಾದ ಒಂದು ಸಂಕೀರ್ಣ ದೈಹಿಕ-ಮಾನಸಿಕವಾದ ಆಧ್ಯಾತ್ಮಿಕ ಪರಿವರ್ತಕ ಕ್ರಿಯೆ".[47] ಕುಂಡಲಿನಿಯು ಕಲ್ಪನೆಯಲ್ಲಿ ಇಂದ್ರಿಯಗಳ, ಯಂತ್ರ, ಮಾನಸಿಕತೆಯ ಸಂಕೀರ್ಣ ರೋಗ ಚಿಹ್ನೆಗಳಿಗೆ ಸಂಬಂಧಿಸಿದ್ದಾಗಿದ್ದು ಇದನ್ನು ಕುಂಡಲಿನಿ ಸಿಂಡ್ರೋಂ ಎಂದು ಕರೆಯುವರು ಇದನ್ನು ಟ್ರಾನ್ಸ್‌ಪರ್ಸನಲ್ ಮನಶಾಸ್ತ್ರ ಕ್ಷೇತ್ರದ ಲೇಖಕರು ಮತ್ತು ಸಾವಿನ-ಸಮೀಪದ ಅಧ್ಯಯನಗಳು ವಿವರಣೆ ನೀಡಿವೆ. ಸರಿಯಾದ ನಿರ್ದೇಶನವಿಲ್ಲದೆ ಅಥವಾ ಸಲಹೆಗಳಿಲ್ಲದೆ ಇದನ್ನು ಮಾಡಿದವರಿಗೆ ಮಾತ್ರ ನಕಾರಾತ್ಮಕ ಅನುಭವಗಳಾಗುತ್ತವೆ ಎಂಬುದನ್ನು ಅಧ್ಯಯನಗಳಲ್ಲಿ ಕಂಡುಕೊಂಡಿದ್ದಾರೆ.

ವೈದ್ಯಕೀಯ ಸಂಶೋಧನೆ

  • ವೆಂಕಟೇಶ್ et al. ಇವರು ಇಂದ್ರಿಯ ಶಕ್ತಿಯ ವಿವರಗಳ ಫಿನಾಮಿನಾಲಜಿಯನ್ನು ಬಳಸಿಕೊಂಡು ಹನ್ನೆರಡು ಕುಂಡಲಿನಿ (ಚಕ್ರ) ಧ್ಯಾನಿಗಳ ಬಗ್ಗೆ ಅಧ್ಯಯನ ನಡೆಸಿದರು. ಅವರು ಧ್ಯಾನವನ್ನು ನಿತ್ಯ ಮಾಡುವುದರಿಂದ "ಇಂದ್ರಿಯ ಪ್ರಜ್ಞೆಯ ಅದ್ಭುತ ಅನುಭವಗಳ ತೀವ್ರತೆಯ ಜೊತೆಗೆ ರಾಚನಿಕ ಬದಲಾವಣೆಯನ್ನು ತರುತ್ತದೆ" ಎಂಬುದನ್ನು ಕಂಡುಕೊಂಡರು.
  • ನೆನಪಿನ ಶಕ್ತಿಯನ್ನು ಪಡೆಯಲು ಮತ್ತು ಯೋಚಿಸುವ ಕ್ರಿಯೆಯನ್ನು ಪ್ರೋತ್ಸಾಹಿಸುವಂತಹ ಯೋಗಿ ಭಜನ್ ಅವರು ಕಲಿಸಿದಂತಹ ಕುಂಡಲಿನೀ ಯೋಗದ ಪರಿಣಾಮಗಳ ಆರಂಭಿಕ ಸಂಶೋಧನೆ. ಈ ಸೀಮಿತ ಸಂಶೋಧನೆ ಮುಂದಿನ ವಿವರವಾದ ಅವಲೋಕನ ಹಾಗೂ ಅಧ್ಯಯನಕ್ಕೆ ನಾಂದಿಯಾಯಿತು.
  • ಮನೋಚಾ et al. ಕುಂಡಲಿನಿ ಧ್ಯಾನದ ಸಹಜ ಯೋಗ ತಂತ್ರದಲ್ಲಿ ಹಸ್ತಗಳ ಉಷ್ಣಾಂಶವು ಕಡಿಮೆಯಾಗುವುದನ್ನು ಮಾಡಿ ನೋಡಿದರು.

ಟಿಪ್ಪಣಿಗಳು

Tags:

ಕುಂಡಲಿನಿ ಯೋಗ ಮೂಲಭೂತ ಸಿದ್ಧಾಂತಕುಂಡಲಿನಿ ಯೋಗ ಏಳು ಮುಖ್ಯ ಚಕ್ರಗಳುಕುಂಡಲಿನಿ ಯೋಗ ವಿಕಾಸದ ದೃಷ್ಟಿಯಲ್ಲಿಕುಂಡಲಿನಿ ಯೋಗ ಜಾಗರೂಕತೆಯ ಅವಲೋಕನಕುಂಡಲಿನಿ ಯೋಗ ವೈದ್ಯಕೀಯ ಸಂಶೋಧನೆಕುಂಡಲಿನಿ ಯೋಗ ಟಿಪ್ಪಣಿಗಳುಕುಂಡಲಿನಿ ಯೋಗ ಉಲ್ಲೇಖಗಳುಕುಂಡಲಿನಿ ಯೋಗ ಬಾಹ್ಯ ಕೊಂಡಿಗಳುಕುಂಡಲಿನಿ ಯೋಗ

🔥 Trending searches on Wiki ಕನ್ನಡ:

ಹೃದಯಸಂಗೀತಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಕನ್ನಡದಲ್ಲಿ ಕಾದಂಬರಿ ಸಾಹಿತ್ಯಕನ್ನಡ ಸಾಹಿತ್ಯ ಪರಿಷತ್ತುಕರ್ನಾಟಕದ ಇತಿಹಾಸಭಾರತದ ಉಪ ರಾಷ್ಟ್ರಪತಿಅಗಸ್ತ್ಯಯೂಟ್ಯೂಬ್‌ಅದಿತಿದುರ್ಗಸಿಂಹಆಂಗ್ಲ ಭಾಷೆವಿಜಯನಗರ ಸಾಮ್ರಾಜ್ಯಬರಹುಲಿಹೊಂಗೆ ಮರಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಬಸವೇಶ್ವರಮೋಕ್ಷಗುಂಡಂ ವಿಶ್ವೇಶ್ವರಯ್ಯಶ್ರೀ ರಾಘವೇಂದ್ರ ಸ್ವಾಮಿಗಳುಮುದ್ದಣಪ್ರಬಂಧ ರಚನೆಬ್ರಹ್ಮದೆಹಲಿ ಸುಲ್ತಾನರುಅಸಹಕಾರ ಚಳುವಳಿಸಿಂಧನೂರುವಿಜ್ಞಾನಬ್ಯಾಂಕ್ ಖಾತೆಗಳುನವರತ್ನಗಳುಭೀಷ್ಮಕ್ರಿಕೆಟ್ಚನ್ನಬಸವೇಶ್ವರಪರೀಕ್ಷೆಅಂತಾರಾಷ್ಟ್ರೀಯ ಸಂಬಂಧಗಳುವಿರೂಪಾಕ್ಷ ದೇವಾಲಯಕಿರುಧಾನ್ಯಗಳುಕೋಲಾರಮ್ಮ ದೇವಸ್ಥಾನಕನ್ನಡದಲ್ಲಿ ಕಾವ್ಯ ಮಿಮಾಂಸೆಕನ್ನಡ ಅಭಿವೃದ್ಧಿ ಪ್ರಾಧಿಕಾರಭಾರತದ ಸ್ವಾತಂತ್ರ್ಯ ದಿನಾಚರಣೆಕ್ರೀಡೆಗಳುನರೇಂದ್ರ ಮೋದಿಬುಡಕಟ್ಟುನಂಜನಗೂಡುಬೆಂಗಳೂರುತೋಟಗಾರಿಕೆದಶಾವತಾರಯಣ್ ಸಂಧಿಶೇಷಾದ್ರಿ ಅಯ್ಯರ್ಗೋಕಾಕ್ ಚಳುವಳಿಕನ್ನಡ ವಿಶ್ವವಿದ್ಯಾಲಯಮಾಸಭಾರತೀಯ ನದಿಗಳ ಪಟ್ಟಿಲೋಕಸಭೆತಾಜ್ ಮಹಲ್ಕೇಂದ್ರಾಡಳಿತ ಪ್ರದೇಶಗಳುಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಗುಪ್ತರ ವಾಸ್ತು ಮತ್ತು ಶಿಲ್ಪಕಲೆನಯನತಾರಜಾತ್ರೆಉದಯವಾಣಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಹೂವುಮುಟ್ಟುಸಂಸ್ಕೃತ ಸಂಧಿವಿಜಯನಗರಸಾಮ್ರಾಟ್ ಅಶೋಕಸೆಸ್ (ಮೇಲ್ತೆರಿಗೆ)ಕನ್ನಡ ಗುಣಿತಾಕ್ಷರಗಳುಸಿದ್ಧಯ್ಯ ಪುರಾಣಿಕಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ನುಗ್ಗೆಕಾಯಿವಿಜಯಪುರಬಿ. ಆರ್. ಅಂಬೇಡ್ಕರ್ತಿರುಪತಿ🡆 More