ಕನ್ನಡ ರಾಜ್ಯೋತ್ಸವ: ನವೆಂಬರ್ ೧

ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ.

ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ರಜಾದಿನವೆಂದು ಪಟ್ಟಿ ಮಾಡಲಾಗಿದೆ ಮತ್ತು ವಿಶ್ವದಾದ್ಯಂತ ಕನ್ನಡಿಗರು ಇದನ್ನು ಆಚರಿಸುತ್ತಾರೆ. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ನಮ್ಮ ಕರ್ನಾಟಕ ರಾಜ್ಯೋತ್ಸವ
Karnataka Rajyotsava
ಕನ್ನಡ ರಾಜ್ಯೋತ್ಸವ: ಇತಿಹಾಸ, ಆಚರಣೆಗಳು, ಆಚರಣೆಯ ತಿಂಗಳು
ರಾಜ್ಯೋತ್ಸವದ ಭಾಗವಾಗಿ ಡೊಳ್ಳು
ಕುಣಿತ ಸಾಂಪ್ರದಾಯಿಕ ನೃತ್ಯ
ಪರ್ಯಾಯ ಹೆಸರುಗಳುಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ರಚನೆ ದಿನ
ಆಚರಿಸಲಾಗುತ್ತದೆಕನ್ನಡಿಗರು ಭಾರತದಲ್ಲಿ ವಿದೇಶಗಳಲ್ಲಿ
ರೀತಿರಾಜ್ಯ
ಮಹತ್ವಕರ್ನಾಟಕ ರಾಜ್ಯದ ದಕ್ಷಿಣ ಭಾರತದ ಕನ್ನಡ-ಮಾತನಾಡುವ ಪ್ರದೇಶಗಳ ಏಕೀಕರಣ
ಆಚರಣೆಗಳುಕರ್ನಾಟಕ ಧ್ವಜಾರೋಹಣ, ಮೆರವಣಿಗೆಗಳು,
ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ
ದಿನಾಂಕನವೆಂಬರ್ ೧

ಇತಿಹಾಸ

  • ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾಯರು, ಕರ್ನಾಟಕ ಏಕೀಕರಣ ಚಳುವಳಿಯನ್ನು ೧೯೦೫ ರಲ್ಲಿ ಪ್ರಾರಂಭಿಸಿದರು. ೧೯೫೦ರಲ್ಲಿ, ಭಾರತವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪ ಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು.
ಕನ್ನಡ ರಾಜ್ಯೋತ್ಸವ: ಇತಿಹಾಸ, ಆಚರಣೆಗಳು, ಆಚರಣೆಯ ತಿಂಗಳು 
ಕನ್ನಡ ಧ್ಜವ
  • ೧೯೫೬ ರ ನವೆಂಬರ್ ೧ ರಂದು, ಮದ್ರಾಸ್, ಮುಂಬಯಿ, ಹೈದರಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು ಹಾಗೂ ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪು ಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.
ಕನ್ನಡ ರಾಜ್ಯೋತ್ಸವ: ಇತಿಹಾಸ, ಆಚರಣೆಗಳು, ಆಚರಣೆಯ ತಿಂಗಳು 
ಆಟೋರಿಕ್ಷದ ಮೇಲೆ ಕನ್ನಡದ ಧ್ವಜ
  • ಹೊಸದಾಗಿ ಏಕೀಕೃತಗೊಂಡ ರಾಜ್ಯದ ಆರಂಭದಲ್ಲಿ ಹೊಸ ಘಟಕದ ಕೋರ್ ರೂಪುಗೊಂಡು ಮುಂಚಿನ ರಾಜ್ಯದ ಹೆಸರು ಇರಲೆಂದು "ಮೈಸೂರು" ಹೆಸರನ್ನು ಉಳಿಸಿಕೊಂಡರು. ಆದರೆ ಉತ್ತರ ಕರ್ನಾಟಕದ ಜನರ ತರ್ಕ ಮಾನ್ಯತೆಗಾಗಿ, ರಾಜ್ಯದ ಹೆಸರು ನವೆಂಬರ್ ೧, ೧೯೭೩ ರಂದು "ಕರ್ನಾಟಕ" ಎಂದು ಬದಲಾಯಿತು.
  • ಈ ಸಂದರ್ಭದಲ್ಲಿ ದೇವರಾಜ ಅರಸ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಕರ್ನಾಟಕ ಏಕೀಕರಣದ ಮನ್ನಣೆ ಇತರ ವ್ಯಕ್ತಿಗಳಿಗೂ ಸೇರುತ್ತದೆ. ಅವರೆಂದರೆ ಅನಕೃ, ಕೆ. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಕೃಷ್ಣರಾವ್ ಮತ್ತು ಬಿ.ಎಂ.ಶ್ರೀಕಂಠಯ್ಯ
  • ನಮಗೆಲ್ಲಾ ತಿಳಿದಿರುವಂತೆ ಭಾರತ ಸ್ವಾತಂತ್ರ್ಯಗೊಂಡ ನಂತರ ಕನ್ನಡ ಭಾಷಿಕರಿರುವ ವಿವಿಧ ಪ್ರದೇಶಗಳನ್ನು ಒಂದುಗೂಡಿಸಿ “ಮೈಸೂರು ರಾಜ್ಯʼʼವನ್ನು ರಚಿಸಲಾಗಿತ್ತು. ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ (ಈಗಿನ ಕಲ್ಯಾಣ ಕರ್ನಾಟಕ) ಪ್ರದೇಶಗಳು ಈ ರಾಜ್ಯದಲ್ಲಿ ವಿಲೀನವಾಗಿದ್ದವು. ಆದರೆ ಈ ಪ್ರದೇಶದ ಜನರಿಗೆ ರಾಜ್ಯಕ್ಕೆ “ಮೈಸೂರು ರಾಜ್ಯʼʼ ಎಂದು ನಾಮಕರಣ ಮಾಡಿರುವುದು ಇಷ್ಟವಾಗಿರಲಿಲ್ಲ. ಈ ಹೆಸರಲ್ಲಿ ಬದಲಾವಣೆ ಮಾಡಬೇಕೆಂದು ಒತ್ತಾಯಿಸುತ್ತಿದ್ದರು.
  • ಈ ಕುರಿತು ಆಗ ರಾಜ್ಯದಲ್ಲಿ ಸುದೀರ್ಘ ಚರ್ಚೆಯ ಬಳಿಕ ೧೯೭೩ರ ನವೆಂಬರ್ ೧ರಂದು ರಾಜ್ಯಕ್ಕೆ “ಕರ್ನಾಟಕʼʼವೆಂದು ಪುನರ್ ನಾಮಕರಣ ಮಾಡಲಾಯಿತು. ಆಗಿನ ಮುಖ್ಯಮಂತ್ರಿಯಾಗಿದ್ದ ದೇವರಾಜ್ ಅರಸು ಅವರು ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದರು.
  • ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಿದ ಶುಭದಿನದಂದು ರಾಜ್ಯವನ್ನು ಉದ್ದೇಶಿಸಿದ ಮಾತನಾಡಿದ ಅರಸರು ಈ ಬೆಳವಣಿಗೆಯನ್ನು ಹೀಗೆ ವಿವರಿಸಿದ್ದರು; ಕರ್ನಾಟಕದ ಏಕೀಕರಣದ ಹಂಬಲಕ್ಕೆ ಸ್ಫುಟವಾದ ರೂಪು ದೊರೆಕಿದ್ದು ೧೯೧೬ರಲ್ಲೇ. ಧಾರವಾಡದಲ್ಲಿ ಕರ್ನಾಟಕ ಸಭೆ ಸ್ಥಾಪನೆಯಾದಾಗ, ಏಕೀಕರಣ ಸಮ್ಮೇಳನವು ಧಾರವಾಡದಲ್ಲಿ ಮೊಟ್ಟ ಮೊದಲಿಗೆ ನಡೆಯಿತು. ೧೯೨೦ರಲ್ಲಿ ನಾಗಪುರ ಕಾಂಗ್ರೆಸ್ಸಿನ ಅಧಿವೇಶನದಲ್ಲಿ ಭಾಷಾವಾರು ಪ್ರಾಂತ್ಯರಚನೆ ಸ್ಪಷ್ಟವಾದ ರೂಪುರೇಷೆ ಪಡೆಯಿತು. ಆದರೆ ಕನ್ನಡಿಗರ ಕನಸು ನನಸಾಗಲು ಮುವತ್ತಾರು ವರ್ಷಗಳೇ ಬೇಕಾಯಿತು.
  • ೧೯೫೬ರ ನವೆಂಬರ್ ಒಂದರಂದು ಕನ್ನಡನಾಡು ಉದಯಿಸಿತು. ಆದರೆ ಈ ನಾಡಿನ ಹಿರಿಮೆ, ಸಂಸ್ಕೃತಿ ಮತ್ತು ಒಗ್ಗಟ್ಟಿನ ಸಂಕೇತವಾದ ಹೆಸರು ಇರದೇ ಇದ್ದುದು ಜನಮನದ ಅಂತರಾಳವನ್ನು ಕಲಕಿತ್ತು. ಮತ್ತೆ ೧೭ ವರ್ಷಗಳ ನಂತರ ಕಾಲಮಾನ ಪರಿಸ್ಥಿತಿಗೆ ಅನುಗುಣವಾಗಿ ನಡೆದ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಈಗ ಜನತೆಯ ಮಹತ್ವಾಕಾಂಕ್ಷೆ ಈಡೇರಿದೆ. ಹಲವಾರು ದಶಕಗಳ ಕಾಲ ನಾಡು-ನುಡಿಯ ಉತ್ಕಟ ಪ್ರೇಮಿಗಳ ತ್ಯಾಗ ಶ್ರಮದ ಸಾಕ್ಷಾತ್ಕಾರ ಈ ನಾಮಕರಣ. ಆ ಪ್ರಾತಃಸ್ಮರಣೀಯರಿಗೆಲ್ಲ ರಾಜ್ಯದ ಜನತೆಯ ಪರವಾಗಿ ಕೃತಜ್ಞತೆಗಳು ಎಂದು ಹೇಳಿದ್ದರು.
  • ರಾಜ್ಯದ ಹೆಸರನ್ನು ‘ಕರ್ನಾಟಕ’ ಎಂದು ಮಾರ್ಪಡಿಸುವ ಕುರಿತು ಸರ್ಕಾರದ ತೀರ್ಮಾನವನ್ನು ವಿಧಾನಸಭೆಯಲ್ಲಿ ಸ್ವತಃ ಮುಖ್ಯಮಂತ್ರಿ ದೇವರಾಜ ಅರಸು ಅವರೇ ಮಂಡಿಸಿದ್ದರು. ಆ ದಿನವನ್ನು ಅವರು ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯದ ದಿವಸ ಎಂದು ಬಣ್ಣಿಸಿದ್ದರಲ್ಲದೆ, ‘ಕರ್ನಾಟಕ’ ಎನ್ನುವ ಹೆಸರನ್ನು ಹಿಂದೆ ರಾಜ್ಯ ಗುರುಗಳು ಉಪಯೋಗಿಸುತ್ತಿದ್ದರು. ಕರ್ನಾಟಕ ಸಿಂಹಾಸನಾಧೀಶ್ವರ ಎಂದು ಒಂದು ಕಾಲದಲ್ಲಿ ಮೈಸೂರು ರಾಜರು ಹೆಸರು ಇಟ್ಟುಕೊಂಡಿದ್ದರು. ಹೊಯ್ಸಳರು, ಕದಂಬರರೂ ಇಟ್ಟುಕೊಂಡಿದ್ದರು. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಈ ಹೆಸರು ಬರುತ್ತಲೇ ಇತ್ತು. ಸಾಹಿತಿಗಳು ಸಾಹಿತ್ಯದಲ್ಲಿ ‘ಕರ್ನಾಟಕ’ ಎಂಬ ಹೆಸರನ್ನು ಇಡಬಹುದು ಎಂದು ಹೇಳಿದ್ದಾರೆ. ಅದರಂತೆ ಇಲ್ಲಿ ನಿರ್ಣಯವನ್ನು ಮಂಡಿಸಿದ್ದೇನೆ ಎಂದು ವಿವರಣೆಯನ್ನೂ ನೀಡಿದ್ದರು.

ಆಚರಣೆಗಳು

  • ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯಾದ್ಯ೦ತ ಮಹದಾನ೦ದ ಮತ್ತು ಚಟುವಟಿಕೆಯಿಂದ ಆಚರಿಸಲಾಗುತ್ತದೆ. ಕೆಂಪು ಮತ್ತು ಹಳದಿ ಕನ್ನಡ ಧ್ವಜಗಳು ರಾಜ್ಯದ ಎಲ್ಲೆಡೆ ಹಾರಿಸಲ್ಪಡುತ್ತವೆ. ಕನ್ನಡ ನಾಡಗೀತೆ ("ಜಯ ಭಾರತ ಜನನಿಯ ತನುಜಾತೆ")ಯನ್ನು ಹಾಡಲಾಗುತ್ತದೆ. ಸರ್ಕಾರಿ ಕಚೇರಿ ಮತ್ತು ಹಲವಾರು ಪ್ರಮುಖ ಪ್ರದೇಶಗಳಲ್ಲಿ ವಾಹನಗಳ ಮೇಲೆ ಭುವನೇಶ್ವರಿ ಚಿತ್ರವನ್ನಿಟ್ಟು ಮೆರವಣಿಗೆ ನಡೆಸಲಾಗುತ್ತದೆ.
  • ರಾಜ್ಯೋತ್ಸವವನ್ನು ಕರ್ನಾಟಕದಲ್ಲಿರುವ ಬಹುತೇಕ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಧರ್ಮಬೇಧವಿಲ್ಲದೆ ಆಚರಿಸುತ್ತಾರೆ ಹಾಗೂ ಸರ್ಕಾರ ಮೆರವಣಿಗೆ ಆಟೋ ರಿಕ್ಷಾಗಳು ಮತ್ತು ಇತರೆ ವಾಹನಗಳು ಕನ್ನಡ ಧ್ವಜದ ಬಣ್ಣಗಳಾದ ಕೆಂಪು ಮತ್ತು ಹಳದಿ ವರ್ಣಗಳ ಬಾವುಟ ದೊಂದಿಗೆ ಅಲಂಕರಿಸಲಾಗಿರುತ್ತವೆ. ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವದ ದಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರಕಟ ಪಡಿಸಲಾಗುತ್ತದೆ.
  • ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸರ್ಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಸಾಧಕರಿಗೆ ಈ ಪ್ರಶಸ್ತಿಯನ್ನು ವಿತರಿಸುತ್ತಾರೆ.
  • ಭಾರತ ಇನ್ನಿತರ ಪ್ರದೇಶಗಳಾದ ಮುಂಬಯಿ, ದೆಹಲಿ ಮುಂತಾದ ಕಡೆಯು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತದೆ. ಇದಲ್ಲದೆ ಗುರಗಾಂವ್ ಮತ್ತು ಚೆನೈ, ಸಾಗರೋತ್ತರದಲ್ಲಿ ಕನ್ನಡ ಸಂಸ್ಥೆ, ಅಮೇರಿಕಾ, ಸಿಂಗಾಪುರ್, ದುಬೈ , ಮಸ್ಕಟ್, ದಕ್ಷಿಣ ಕೊರಿಯಾ , ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಮೊದಲಾದ ಕಡೆಗಳಲ್ಲಿ ನೆಲೆಸಿರುವ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಾರೆ.

ಆಚರಣೆಯ ತಿಂಗಳು

ನವೆಂಬರ್ ೧ ರಂದು ಅಧಿಕೃತವಾಗಿ ರಾಜ್ಯೋತ್ಸವವು ಆಚರಣೆ. ನವಂಬರ್ ತಿಂಗಳ ಪೂರ್ತಿ ರಾಜ್ಯೋತ್ಸವವನ್ನು ಹಲವು ಕಡೆ ಆಚರಿಸಲಾಗುತ್ತದೆ. ನವೆಂಬರ್ ೧ ಕರ್ನಾಟಕದಲ್ಲಿ ಸಾರ್ವಜನಿಕ ರಜೆ ಇರುತ್ತದೆ. ಈ ದಿನಗಳಲ್ಲಿ ಕರ್ನಾಟಕದ ಧ್ವಜ(ಹಳದಿ-ಕೆಂಪು) ಹಲವು ಕಡೆ ಹಾರಾಡುತ್ತಿರುತ್ತದೆ.

ಬಾಹ್ಯ ಸಂಪರ್ಕ

ಉಲ್ಲೇಖ

Tags:

ಕನ್ನಡ ರಾಜ್ಯೋತ್ಸವ ಇತಿಹಾಸಕನ್ನಡ ರಾಜ್ಯೋತ್ಸವ ಆಚರಣೆಗಳುಕನ್ನಡ ರಾಜ್ಯೋತ್ಸವ ಆಚರಣೆಯ ತಿಂಗಳುಕನ್ನಡ ರಾಜ್ಯೋತ್ಸವ ಬಾಹ್ಯ ಸಂಪರ್ಕಕನ್ನಡ ರಾಜ್ಯೋತ್ಸವ ಉಲ್ಲೇಖಕನ್ನಡ ರಾಜ್ಯೋತ್ಸವಕನ್ನಡಕರ್ನಾಟಕದಕ್ಷಿಣ ಭಾರತನವೆಂಬರ್ ೧ಮೈಸೂರು ರಾಜ್ಯ೧೯೫೬

🔥 Trending searches on Wiki ಕನ್ನಡ:

ಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಜಯಚಾಮರಾಜ ಒಡೆಯರ್ಅದ್ವೈತಕರ್ನಾಟಕದಲ್ಲಿ ಪಂಚಾಯತ್ ರಾಜ್ಬೆಸಗರಹಳ್ಳಿ ರಾಮಣ್ಣತೆಲುಗುದೆಹಲಿಎಚ್.ಎಸ್.ಶಿವಪ್ರಕಾಶ್ಗದ್ಯಭಾರತದ ಚುನಾವಣಾ ಆಯೋಗಚದುರಂಗಹೊಯ್ಸಳ ವಾಸ್ತುಶಿಲ್ಪಯೂಟ್ಯೂಬ್‌ಕನ್ನಡ ಜಾನಪದಪ್ರೀತಿಹಸ್ತ ಮೈಥುನಷಟ್ಪದಿಇಸ್ಲಾಂ ಧರ್ಮಚಿಕ್ಕಮಗಳೂರುಇಂಡಿಯನ್ ಪ್ರೀಮಿಯರ್ ಲೀಗ್ಮಂಟೇಸ್ವಾಮಿನಿರ್ವಹಣೆ ಪರಿಚಯವಿಭಕ್ತಿ ಪ್ರತ್ಯಯಗಳುಅರಿಸ್ಟಾಟಲ್‌ಎಂ. ಕೆ. ಇಂದಿರಕರ್ನಾಟಕದ ನದಿಗಳುಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಚೋಳ ವಂಶನಾಲ್ವಡಿ ಕೃಷ್ಣರಾಜ ಒಡೆಯರುಭಾರತದ್ರಾವಿಡ ಭಾಷೆಗಳುರಾಹುಬಾಲಕಾಂಡಫ.ಗು.ಹಳಕಟ್ಟಿಜನ್ನರಾಷ್ಟ್ರೀಯ ಸೇವಾ ಯೋಜನೆಯಶವಂತ ಚಿತ್ತಾಲಕೃಷ್ಣಾ ನದಿಹಳೆಗನ್ನಡಮಂಗಳ (ಗ್ರಹ)ಸಂಸ್ಕೃತ ಸಂಧಿಹನುಮಾನ್ ಚಾಲೀಸಕೇಂದ್ರ ಲೋಕ ಸೇವಾ ಆಯೋಗಅಂತಾರಾಷ್ಟ್ರೀಯ ಸಂಬಂಧಗಳುಹೊಂಗೆ ಮರಪುಸ್ತಕಪಂಪ ಪ್ರಶಸ್ತಿಬೌದ್ಧ ಧರ್ಮಬಿಗ್ ಬಾಸ್ ಕನ್ನಡಕರಗಅಲ್ಲಮ ಪ್ರಭುಕರ್ನಾಟಕ ಐತಿಹಾಸಿಕ ಸ್ಥಳಗಳುಗೂಗಲ್ಕನ್ನಡದಲ್ಲಿ ಕಾದಂಬರಿ ಸಾಹಿತ್ಯನಾಟಕಕನ್ನಡ ಚಿತ್ರರಂಗವ್ಯವಸಾಯಭಾರತೀಯ ಆಡಳಿತಾತ್ಮಕ ಸೇವೆಗಳುಹನುಮಂತರಾಶಿಗಣೇಶದಾಸ ಸಾಹಿತ್ಯದಾಸವಾಳಸಮಾಸಕುಂದಾಪುರಬೆಂಗಳೂರುಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆಕಲಿಯುಗರನ್ನಶೈಕ್ಷಣಿಕ ಮನೋವಿಜ್ಞಾನಊಳಿಗಮಾನ ಪದ್ಧತಿಸೀತೆಯೋನಿಗೋಕರ್ಣಅರ್ಥ ವ್ಯತ್ಯಾಸಟೈಗರ್ ಪ್ರಭಾಕರ್🡆 More