ಕತ್ತೆಕಿರುಬ

ಕತ್ತೆಕಿರುಬವು ಕರ್ನಿವೋರಾದ ಫ಼ೆಲಿಫ಼ೋರ್ಮಿಯಾ ಉಪಗಣದ ಹಾಯೆನಡಿ ಕುಟುಂಬದ ಒಂದು ಪ್ರಾಣಿ.

Hyenas
Temporal range: 26–0 Ma
PreꞒ
O
S
D
C
P
T
J
K
Pg
N
Early Miocene-recent
ಕತ್ತೆಕಿರುಬ
All extant species of hyenas in descending order of size: spotted hyena, brown hyena, striped hyena and aardwolf.
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
Mammalia
ಗಣ:
Carnivora
ಉಪಗಣ:
Feliformia
ಕುಟುಂಬ:
Hyaenidae

Gray, 1821
Genera
  • Crocuta - (olive overlay on map)
  • Hyaena (blue on map)
  • Proteles - (magenta red on map)
  • Adcrocuta
  • Chasmaporthetes
  • Herpestides
  • Hyaenotherium
  • Ictitherium
  • Pachycrocuta
  • Pliocrocuta
  • Plioviverrops
  • Thalassictis
ಕತ್ತೆಕಿರುಬ
Synonyms
  • Protelidae Flower, 1869

ಕೇವಲ ನಾಲ್ಕು ಪ್ರಜಾತಿಗಳಿರುವ ಇದು ಕರ್ನಿವೋರಾದಲ್ಲಿ ನಾಲ್ಕನೇ ಅತಿ ಚಿಕ್ಕ ಜೀವಶಾಸ್ತ್ರೀಯ ಕುಟುಂಬ, ಮತ್ತು ಮಮ್ಮಾಲಿಯಾ ವರ್ಗದಲ್ಲಿನ ಅತಿ ಚಿಕ್ಕ ಕುಟುಂಬಗಳ ಪೈಕಿ ಒಂದು. ಅವುಗಳ ಅಲ್ಪ ವೈವಿಧ್ಯತೆಯ ಹೊರತಾಗಿಯೂ, ಕತ್ತೆಕಿರುಬಗಳು ಅನನ್ಯವಾಗಿವೆ ಮತ್ತು ಬಹುತೇಕ ಆಫ್ರಿಕಾದ ಹಾಗು ಕೆಲವು ಏಷ್ಯಾದ ಪರಿಸರ ವ್ಯವಸ್ಥೆಗಳಿಗೆ ಪ್ರಮುಖ ಘಟಕಗಳಾಗಿವೆ.

ವೈಜ್ಞಾನಿಕ ವರ್ಗೀಕರಣ

ಕತ್ತೆ ಕಿರುಬ : ಮಾಂಸಾಹಾರಿ ಸ್ತನಿಗಳ ಗುಂಪಿನ (ಕಾರ್ನಿವೊರ) ಹೈಯಿನಿಡೀ ಕುಟುಂಬಕ್ಕೆ ಸೇರಿದ ಕುರೂಪಿಯಾದ ವನ್ಯಪ್ರಾಣಿ. ಇದರ ವೈಜ್ಞಾನಿಕ ನಾಮ ಹೈಯೀನ.

ಪ್ರಭೇದಗಳು

ಇದರಲ್ಲಿ ಎರಡು ಪ್ರಭೇದಗಳಿವೆ. ಒಂದು ಹೈ.ಸ್ಟ್ರ ಯೇಟ (ಪಟ್ಟೆಗಳಿರುವ ಕತ್ತೆಕಿರುಬ). ಇದು ಭಾರತ, ಪರ್ಷಿಯ, ಏಷ್ಯಮೈನರ್ ಮತ್ತು ಉತ್ತರ ಹಾಗೂ ಪುರ್ವ ಆಫ್ರಿಕದ ಕಾಡುಗಳಲ್ಲಿ ಕಂಡುಬರುತ್ತದೆ. ಇನ್ನೊಂದು ಹೈ.ಬ್ರುನಿಯ (ಕಂದು ಕತ್ತೆಕಿರುಬ) ಎಂಬುದು. ಇದು ದಕ್ಷಿಣ ಆಫ್ರಿಕದ ನಿವಾಸಿ.

ಲಕ್ಷಣಗಳು

ನಾಯಿಗಳಲ್ಲಿರುವಂಥ ಹೆಜ್ಜೆ ಮತ್ತು ಕಾಲುಗಳು, ಬಹಳ ಬಲಿಷ್ಠವಾದ ಮತ್ತು ಉದ್ದವಾದ ಮುಂಗಾಲುಗಳು, ಮೋಟಾದ ಮತ್ತು ಒಂದಕ್ಕೊಂದು ತಾಕುವಂತಿರುವ ಹಿಂಗಾಲುಗಳು, ಚಿಕ್ಕದಾದ ಪೊದೆಯಂತಿರುವ ಬಾಲ. ಬಹುಬಲಿಷ್ಠವಾದ ದವಡೆಗಳು, ಹಿಂದಕ್ಕೆ ಸೆಳೆದುಕೊಳ್ಳಲಾಗದಂಥ ಉಗುರುಗಳು. ಇವು ಈ ಎರಡೂ ಬಗೆಯ ಕತ್ತೆಕಿರುಬಗಳ ಮುಖ್ಯಲಕ್ಷಣಗಳು.

ಭಾರತದಲ್ಲಿ ಕಾಣುವ ಕತ್ತೆಕಿರುಬ ಸುಮಾರು ತೋಳದ ಗಾತ್ರದ್ದು. ಬೂದು ಮಿಶ್ರಿತ ಕಂದುಬಣ್ಣದ ಇದರ ದೇಹದ ಮೇಲೆ ಅಸ್ಪಷ್ಟವಾದ ಉದ್ದುದ್ದ ಪಟ್ಟೆಗಳಿವೆ. ಕುತ್ತಿಗೆ ಮತ್ತು ಬೆನ್ನಿನ ಉದ್ದಕ್ಕೂ ಕೇಸರಗಳ ಸಾಲಿವೆ. ಇದರ ಕೂಗು ಬಲು ವಿಚಿತ್ರವಾದುದು. ಅಟ್ಟಹಾಸದಿಂದ ಕೇಕೆಹಾಕಿ ನಗುವಂತಿರುತ್ತದೆ, ನಿಶಾಚರಿಯಾದ ಇದು ಸಾಮಾನ್ಯವಾಗಿ ಒಂಟಿಯಾಗಿಯೇ ಜೀವಿಸುತ್ತದೆ. ತನ್ನ ಆಹಾರವನ್ನು ವಾಸನೆಯಿಂದ ಪತ್ತೆಹಚ್ಚುತ್ತದೆ.

ಆಹಾರ

ಬೇಟೆಯಾಡುವ ಪ್ರಾಣಿಯಲ್ಲದ್ದರಿಂದ ಇದರ ಆಹಾರದಲ್ಲಿ ವೈವಿಧ್ಯವಿಲ್ಲ. ಸತ್ತ ಪ್ರಾಣಿಗಳು ಇದರ ಮುಖ್ಯ ಆಹಾರ. ಹುಲಿ, ಚಿರತೆ ಮುಂತಾದ ಮಾಂಸಾಹಾರಿ ಪ್ರಾಣಿಗಳು ತಿಂದು ಮಿಗಿಸಿದುದು ಇದರ ಪಾಲಿಗೆ. ಕೆಲವೊಮ್ಮೆ ಕುರಿ, ಆಡು, ನಾಯಿ ಮುಂತಾದ ಸಾಕುಪ್ರಾಣಿಗಳನ್ನು ಕದ್ದೊಯ್ಯುವುದೂ ಉಂಟು. ಆದರೆ ಮನುಷ್ಯನನ್ನು ಕಂಡರೆ ಭಯಪಡುವ ಈ ಪ್ರಾಣಿ ಅವನು ವಾಸಿಸುವ ಸ್ಥಳಗಳಿಂದ ದೂರವೇ ಇರುತ್ತದೆ.

ಸಂತಾನಾಭಿವೃದ್ಧಿ

ಇವುಗಳ ಸಾಂಸಾರಿಕ ಜೀವನದ ಬಗ್ಗೆ ಹೆಚ್ಚು ತಿಳಿಯದು. ಹೆಣ್ಣು ಕತ್ತೆಕಿರುಬ ಒಂದು ಬಾರಿಗೆ 2-4 ಮರಿಗಳನ್ನು ಈಯುತ್ತದೆ. ತಾಯಿಯೇ ಮರಿಗಳನ್ನು ಹಾಲೂಣಿಸಿ ಸಾಕುವುದು ಸಾಮಾನ್ಯವಾದರೂ ಕೆಲವೊಮ್ಮೆ ಗಂಡು ಹೆಣ್ಣುಗಳೆರಡೂ ಮರಿಗಳಿಗೆ ಮೊಲೆಯೂಣಿಸುತ್ತವೆ ಎಂದು ಹೇಳಲಾಗುತ್ತದೆ.

ಕತ್ತೆಕಿರುಬಗಳನ್ನು ಪಳಗಿಸುವುದೂ ಉಂಟು. ಸಾಕಿದ ಪ್ರಾಣಿಗಳು ಸಾಧುವಾಗಿಯೂ ನಂಬಿಕೆಗೆ ಅರ್ಹವಾಗಿಯೂ ಇರುತ್ತವೆ.

ಬಾಹ್ಯ ಸಂಪರ್ಕಗಳು

* IUCN Conservation Union Hyaendiae Specialist Group 
ಕತ್ತೆಕಿರುಬ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಕತ್ತೆಕಿರುಬ ವೈಜ್ಞಾನಿಕ ವರ್ಗೀಕರಣಕತ್ತೆಕಿರುಬ ಪ್ರಭೇದಗಳುಕತ್ತೆಕಿರುಬ ಲಕ್ಷಣಗಳುಕತ್ತೆಕಿರುಬ ಆಹಾರಕತ್ತೆಕಿರುಬ ಸಂತಾನಾಭಿವೃದ್ಧಿಕತ್ತೆಕಿರುಬ ಬಾಹ್ಯ ಸಂಪರ್ಕಗಳುಕತ್ತೆಕಿರುಬಆಫ್ರಿಕಾಏಷ್ಯಾ

🔥 Trending searches on Wiki ಕನ್ನಡ:

ಖೊಖೊಗೋಲಗೇರಿಕನ್ನಡ ಗಣಕ ಪರಿಷತ್ತುಹೆಚ್.ಡಿ.ಕುಮಾರಸ್ವಾಮಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಹಳೆಗನ್ನಡತ್ರಿಶಾಹಾವುರಾಷ್ಟ್ರೀಯ ಸ್ವಯಂಸೇವಕ ಸಂಘಭಾರತದ ಸರ್ವೋಚ್ಛ ನ್ಯಾಯಾಲಯಮುರುಡೇಶ್ವರಶಿವಪ್ಪ ನಾಯಕಭಾರತ ಸಂವಿಧಾನದ ಪೀಠಿಕೆತತ್ಸಮ-ತದ್ಭವಜವಾಹರ‌ಲಾಲ್ ನೆಹರುಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಸಮಾಜ ವಿಜ್ಞಾನಬ್ಯಾಡ್ಮಿಂಟನ್‌ಪ್ರೇಮಾಕರ್ನಾಟಕದ ಮಹಾನಗರಪಾಲಿಕೆಗಳುವೇದಜರಾಸಂಧಎ.ಪಿ.ಜೆ.ಅಬ್ದುಲ್ ಕಲಾಂಸಮಾಸಉಡಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳುನೀರಿನ ಸಂರಕ್ಷಣೆಹೆಚ್.ಡಿ.ದೇವೇಗೌಡಕನ್ನಡದಲ್ಲಿ ಮಹಿಳಾ ಸಾಹಿತ್ಯರಾಯಚೂರು ಜಿಲ್ಲೆವೆಂಕಟೇಶ್ವರ ದೇವಸ್ಥಾನಆರ್ಯರುಸಿ. ಆರ್. ಚಂದ್ರಶೇಖರ್ರಾಶಿಭಾರತೀಯ ಕಾವ್ಯ ಮೀಮಾಂಸೆಮಳೆಗಾಲಗುರು (ಗ್ರಹ)ಹಲ್ಮಿಡಿಪೊನ್ನಗೋಕರ್ಣಗಣರಾಜ್ಯಬಾಬರ್ಭೋವಿಚಂದ್ರಶೇಖರ ವೆಂಕಟರಾಮನ್ಭಾಷಾ ವಿಜ್ಞಾನನಾಗವರ್ಮ-೧ಕನ್ನಡ ವ್ಯಾಕರಣದ್ವಿಗು ಸಮಾಸಮರರಾಷ್ಟ್ರಕೂಟರಾಗಿವಾಟ್ಸ್ ಆಪ್ ಮೆಸ್ಸೆಂಜರ್ಪಿ.ಲಂಕೇಶ್ಕೊಲ್ಲೂರು ಮೂಕಾಂಬಿಕಾ ದೇವಸ್ಥಾನನಾಯಿನೇರಳೆವಾಣಿವಿಲಾಸಸಾಗರ ಜಲಾಶಯಹಿಂದೂ ಧರ್ಮಅಮರೇಶ ನುಗಡೋಣಿಮಾನವ ಸಂಪನ್ಮೂಲ ನಿರ್ವಹಣೆಜ್ಯೋತಿಷ ಶಾಸ್ತ್ರನಾಗಚಂದ್ರರಾಷ್ಟ್ರೀಯತೆಸೂರ್ಯವ್ಯೂಹದ ಗ್ರಹಗಳುದೆಹಲಿ ಸುಲ್ತಾನರುತೆರಿಗೆಲೆಕ್ಕ ಪರಿಶೋಧನೆಧರ್ಮಸ್ಥಳಸವರ್ಣದೀರ್ಘ ಸಂಧಿಜಶ್ತ್ವ ಸಂಧಿತೆಂಗಿನಕಾಯಿ ಮರಗ್ರಾಮ ಪಂಚಾಯತಿಶಕುನಿಋತುಕ್ಯಾನ್ಸರ್ಡಾಪ್ಲರ್ ಪರಿಣಾಮ🡆 More