ಒಲಂಪಿಕ್ ಕ್ರೀಡಾಕೂಟ

ಒಲಿಂಪಿಕ್ ಕ್ರೀಡಾಕೂಟ ಒಂದು ಅಂತರರಾಷ್ಟ್ರೀಯ ಕ್ರೀಡಾಕೂಟ.

ಇದು ಅನೇಕ ಕ್ರೀಡೆಗಳನ್ನು ಒಳಗೊಂಡಿದೆ. ಈ ಕ್ರೀಡಾಕೂಟವನ್ನು ಬೇಸಗೆಯ ಕ್ರೀಡಾಕೂಟ ಹಾಗೂ ಚಳಿಗಾಲದ ಕ್ರೀಡಾಕೂಟಗಳೆಂದು ವರ್ಗೀಕರಿಸಲಾಗಿದೆ. ಎರಡೂ ಕೂಟಗಳನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುವುದು. ೧೯೯೨ರವರೆಗೆ ಎರಡೂ ಕ್ರೀಡಾಕೂಟಗಳನ್ನು ಒಂದೇ ವರ್ಷದಲ್ಲಿ ನಡೆಸಲಾಗುತ್ತಿತ್ತು. ನಂತರ ಇವುಗಳ ಮಧ್ಯೆ ಎರಡು ವರ್ಷಗಳ ಅಂತರವಿರಿಸಲಾಗಿದೆ. ಕ್ರಿ.ಪೂ. ೭೭೬ರಲ್ಲಿ ಗ್ರೀಸ್ ದೇಶದ ಒಲಿಂಪಿಯಾದಲ್ಲಿ ಮೂಲ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ನಂತರ ಕ್ರಿ.ಶ. ೩೯೩ರವರೆಗೆ ಇದು ಮುಂದುವರೆಯಿತು. ಕಾರಣಾಂತರಗಳಿಂದ ನಿಂತುಹೋದ ಈ ಕ್ರೀಡಾಕೂಟವನ್ನು ಮತ್ತೆ ಪುನರಾರಂಭಿಸುವುದರಲ್ಲಿ ಆಸಕ್ತಿ ತೋರಿದವನು ಗ್ರೀಸ್ ದೇಶದ ಕವಿ ಹಾಗೂ ಪತ್ರಿಕಾ ಸಂಪಾದಕನಾಗಿದ್ದ ಪನಾಜಿಯೋಟಿಸ್ ಸೌಟ್ಸಾಸ್ ಎಂಬವನು. ಮುಂದೆ ೧೮೫೯ರಲ್ಲಿ ಇವಾಂಜೆಲಾಸ್ ಝಪ್ಪಾಸ್ ಎಂಬುವವನು ನವೀನಕಾಲದ ಪ್ರಪ್ರಥಮ ಅಂತರರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟ ವನ್ನು ಪ್ರಾಯೋಜಿಸಿದನು. ೧೮೯೪ರಲ್ಲಿ ಫ್ರಾನ್ಸ್ ದೇಶದ ಗಣ್ಯನಾದ ಬ್ಯಾರನ್ ಪಿಯರಿ ದ ಕೂಬರ್ತಿಯು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ಹುಟ್ಟುಹಾಕಿದನು. ಈ ಸಂಸ್ಥೆಯ ವತಿಯಿಂದ ಮೊದಲನೆಯ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ಗ್ರೀಸ್ ದೇಶದ ಅಥೆನ್ಸ್ ನಗರದಲ್ಲಿ ೧೮೯೬ರಲ್ಲಿ ನಡೆಸಲಾಯಿತು.https://www.penn.museum/sites/olympics/olympicorigins.shtml ಅಂದು ಕೆಲವೇ ರಾಷ್ಟ್ರಗಳು ಪಾಲ್ಗೊಂಡಿದ್ದ ಒಲಿಂಪಿಕ್ ಕ್ರೀಡಾಕೂಟ ಇಂದು ಹೆಚ್ಚೊಕಡಿಮೆ ವಿಶ್ವದ ಎಲ್ಲಾ ದೇಶಗಳೂ ಭಾಗವಹಿಸುವಷ್ಟರ ಮಟ್ಟಿಗೆ ಅಗಾಧವಾಗಿ ಬೆಳೆದಿದೆ. ಉಪಗ್ರಹ ಸಂಪರ್ಕದ ವ್ಯವಸ್ಥೆಯಿಂದಾಗಿ ಜಗತ್ತಿನ ಮೂಲೆಮೂಲೆಗಳಿಗೂ ಈ ಕೂಟದ ನೇರಪ್ರಸಾರ ಸಾಧ್ಯವಾಗಿದ್ದು ಒಲಿಂಪಿಕ್ ಕ್ರೀಡಾಕೂಟ ಇಂದು ಅಪಾರಪ್ರಮಾಣದ ಜನಪ್ರಿಯತೆ ಗಳಿಸಿಕೊಂಡಿದೆ. ಅತ್ಯಂತ ಇತ್ತೀಚಿನ ಬೇಸಗೆಯ ಒಲಿಂಪಿಕ್ ಕ್ರೀಡಾಕೂಟ ೨೦೧೨ರಲ್ಲಿ ಲಂಡನ್ ನಗರದಲ್ಲಿ ಹಾಗೂ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟ ೨೦೧೦ರಲ್ಲಿ ಕೆನಡಾ ದ ವೆನ್‌ಕೂವರ್ ನಗರದಲ್ಲಿ ಆಯೂಜಿಸಲ್ಪಟ್ಟಿದ್ದವು. ಮುಂದಿನ ಬೇಸಗೆ ಕ್ರೀಡಾಕೂಟ ೨೦೧೬ ರಲ್ಲಿ ಬ್ರೆಜಿಲ್ ದೇಶದ ರಿಯೊ ಡಿ ಜನೈರೊ ನಲ್ಲಿ ನಡೆಯಲಿದೆ. ಮುಂದಿನ ಚಳಿಗಾಲದ ಕ್ರೀಡಾಕೂಟ ರಷ್ಯಾ ದೇಶದ ಸೋಚಿ ಯಲ್ಲಿ ೨೦೧೪ ರಲ್ಲಿ ನಡೆಯಲಿದೆ.

ಒಲಂಪಿಕ್ ಕ್ರೀಡಾಕೂಟ
ಪ್ರಪಂಚದ ಐದು ಖಂಡಗಳನ್ನು ಬಿಂಬಿಸುವ ಒಲಂಪಿಕ್ ಚಕ್ರಗಳು
Añu Eventu See
Xuegos Olímpicos de Branu
1896 I edición Atenes Grecia
1900 II edición París Francia
1904 III edición Saint Louis Estaos Xuníos d'América
1906 Xuegos Intercalaos Atenes Grecia
1908 IV edición Londres Reinu Xuníu
1912 V edición Estocolmu Suecia
1916 VI edición Berlín Alemaña
Suspendíos pola Primer Guerra Mundial Añu Eventu See
1920 VII edición Amberes Bélxica Xuegos Olímpicos d'Iviernu
1924 VIII edición París Francia 1924 I edición Chamonix  Francia
1928 IX edición Ámsterdam Países Baxos 1928 II edición Sankt Moritz  Suiza
1932 X edición Los Angeles Estaos Xuníos d'América 1932 III edición Lake Placid  Estaos Xuníos d'América
1936 XI edición Berlín Alemaña 1936 IV edición Garmisch-Partenkirchen  Alemaña
1940 XII edición Ḥélsinki Finlandia 1940 V edición Garmisch-Partenkirchen  Alemaña
Suspendíos pola Segunda Guerra Mundial
1944 XIII edición Londres Reinu Xuníu 1944 VI edición Cortina d'Ampezzo  Italia
Suspendíos pola Segunda Guerra Mundial
1948 XIV edición Londres Reinu Xuníu 1948 VII edición Sankt Moritz  Suiza
1952 XV edición Ḥélsinki Finlandia 1952 VIII edición Oslu  Noruega
1956 XVI edición Melbourne Australia 1956 IX edición Cortina d'Ampezzo  Italia
1960 XVII edición Roma Italia 1960 X edición Squaw Valley  Estaos Xuníos d'América
1964 XVIII edición Tokiu Xapón 1964 XI edición Innsbruck  Austria
1968 XIX edición Ciudá de Méxicu Méxicu 1968 XII edición Grenoble  Francia
1972 XX edición Múnich Alemaña 1972 XIII edición Sapporo  Xapón
1976 XXI edición Montréal Canadá 1976 XIV edición Innsbruck  Austria
1980 XXII edición Moscú XRSS 1980 XV edición Lake Placid  Estaos Xuníos d'América
1984 XXIII edición Los Angeles Estaos Xuníos d'América 1984 XVI edición Sarayevu  Bosnia y Herzegovina
1988 XXIV edición Seúl Corea del Sur 1988 XVII edición Calgary  Canadá
1992 XXV edición Barcelona España 1992 XVIII edición Albertville  Francia
1996 XXVI edición Atlanta Estaos Xuníos d'América 1994 XIX edición Lillehammer  Noruega
2000 XXVII edición Sydney Australia 1998 XX edición Nagano  Xapón
2004 XXVIII edición Atenes Grecia 2002 XXI edición Salt Lake City  Estaos Xuníos d'América
2008 XXIX edición Beixín China 2006 XXII edición Torino  Italia
2012 XXX edición Londres Reinu Xuníu 2010 XXIII edición Vancouver  Canadá
2016 XXXI edición Rio de Janeiro Brasil 2014 XXIV edición Sochi  Rusia
2020 XXXII edición Tokiu Xapón

ಪ್ರಾಚೀನ ಒಲಿಂಪಿಕ್ಸ್

ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟದ ಬಗ್ಗೆ ಹಲವಷ್ಟು ದಂತಕಥೆಗಳು ಹಾಗೂ ಊಹಾಪೋಹಗಳಿವೆ. ಇವುಗಳ ಪೈಕಿ ಅತಿ ಜನಪ್ರಿಯವಾದ ಕತೆಯೊಂದರ ಪ್ರಕಾರ - ಹೆರಾಕ್ಲಿಸ್ ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟದ ಸೃಷ್ಟಿಕರ್ತನು. ಇವನು ತನ್ನ ತಂದೆ ಸ್ಯೂಸ್ ನ ಗೌರವಾರ್ಥವಾಗಿ ೧೨ ಕ್ರೀಡಾಂಗಣಗಳನ್ನು ನಿರ್ಮಿಸಿ ಕೂಟವನ್ನು ನಡೆಸಿದನು. ಈ ಕತೆಯ ಪ್ರಕಾರ ಈತನು ನೇರದಾರಿಯಲ್ಲಿ ೪೦೦ ಬಾರಿ ದಾಪುಗಾಲನ್ನಿಟ್ಟು ಕ್ರಮಿಸಿ ಆ ದೂರವನ್ನು ಒಂದು ಸ್ಟೇಡಿಯಸ್ ಎಂದು ಕರೆದನು. ಈ ದೂರವನ್ನೇ ರೋಮನ್ನರು ಸ್ಟೇಡಿಯಮ್ ಹಾಗೂ ಆಂಗ್ಲರು ಸ್ಟೇಜ್ ಎಂದು ಹೆಸರಿಸಿದರು. ಇಂದು ಕೂಡಾ ಆಧುನಿಕ ಕ್ರೀಡಾಂಗಣದ ಟ್ರ್ಯಾಕ್ ನ ಸುತ್ತಳತೆ ೪೦೦ ಮೀ. ಇರುವುದು. ಕ್ರಿ. ಪೂ. ೭೭೬ರ ಮೊದಲನೆಯ ಕ್ರೀಡಾಕೂಟದ ನಂತರ ಗ್ರೀಸ್ ದೇಶದಲ್ಲಿ ಒಲಿಂಪಿಕ್ಸ್ ಜನಪ್ರಿಯತೆ ಹೆಚ್ಚಿಸಿಕೊಂಡು ಕ್ರಿ.ಪೂ. ೬ ನೆಯ ಹಾಗೂ ೫ನೆಯ ಶತಮಾನದಲ್ಲಿ ಉಚ್ಛ್ರಾಯಸ್ಥಿತಿಯನ್ನು ತಲುಪಿದ್ದಿತು. ಮೊದಲಿಗೆ ಕೆಲವೇ ಕ್ರೀಡೆಗಳನ್ನೊಳಗೊಂಡು ಒಂದು ದಿನದಲ್ಲಿಯೇ ಮುಗಿಯುತ್ತಿದ್ದ ಕೂಟವು ಮುಂದೆ ೨೦ರಷ್ಟು ಸ್ಪರ್ಧೆಗಳೊಂದಿಗೆ ಹಲವು ದಿನಗಳವರೆಗೆ ನಡೆಯುತ್ತಿತ್ತು. ಕ್ರೀಡೆಗಳಲ್ಲಿ ವಿಜಯ ಸಾಧಿಸಿದ ಸ್ಪರ್ಧಾಳುಗಳನ್ನು ನಾಡು ಅತ್ಯಭಿಮಾನ ಹಾಗೂ ಆದರದಿಂದ ಕಾಣುತ್ತಿತ್ತು. ಕವನಗಳ ಮತ್ತು ಪ್ರತಿಮೆಗಳ ಮೂಲಕ ಇವರನ್ನು ಅಮರರನ್ನಾಗಿಸಲಾಗುತ್ತಿತ್ತು. ಕ್ರಿ.ಪೂ. ೬ನೆಯ ಶತಮಾನದಲ್ಲಿದ್ದ ಮಿಲೋ ಎಂಬ ಕುಸ್ತಿಪಟುವು ಸತತ ೬ ಒಲಿಂಪಿಕ್ ಕ್ರೀಡಾಕೂಟ ಗಳಲ್ಲಿ ವಿಜಯ ಸಾಧಿಸಿದ್ದನು. ಈ ದಾಖಲೆಯನ್ನು ಇಂದಿನವರೆಗೂ ಸರಿಗಟ್ಟಲಾಗಿಲ್ಲ. ಗ್ರೀಸ್ ದೇಶದ ಮೇಲೆ ರೋಮನ್ನರ ಅಧಿಪತ್ಯವುಂಟಾದ ಮೇಲೆ ಒಲಿಂಪಿಕ್ ಕ್ರೀಡಾಕೂಟವು ಕ್ರಮೇಣ ಅವನತಿಯತ್ತ ಸಾಗಲಾರಂಭಿಸಿತು. ಕ್ರಿಶ್ಚಿಯನ್ ಧರ್ಮವು ರೋಮ್ ಸಾಮ್ರಾಜ್ಯದ ಅಧಿಕೃತ ಧರ್ಮವೆಂದು ಘೋಷಿಸಲ್ಪಟ್ಟ ಮೇಲೆ ಒಲಿಂಪಿಕ್ ಕ್ರೀಡಾಕೂಟವು ಆ ಧರ್ಮದ ನಡವಳಿಕೆಗಳಿಗೆ ಅನುಗುಣವಾಗಿಲ್ಲವೆಂದು ಪರಿಗಣಿಸಲ್ಪಟ್ಟಿತು. ತರುವಾಯ ಕ್ರಿ.ಶ. ೩೯೩ರಲ್ಲಿ ರೋಮನ್ ಸಮ್ರಾಟ ಮೊದಲನೆಯ ಥಿಯೋಡೋರಸ್ ಒಲಿಂಪಿಕ್ ಕ್ರೀಡಾಕೂಟವನ್ನು ಧರ್ಮಬಾಹಿರವೆಂದು ಘೋಷಿಸಿದನು. ಹೀಗೆ ಸುಮಾರು ೧೦೦೦ ವರ್ಷಗಳ ಪರಂಪರೆಯೊಂದು ಕೊನೆಗೊಂಡಿತು. ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಕೇವಲ ಯುವಕರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶವಿದ್ದಿತು. ಕ್ರೀಡಾಕೂಟವು ಮಾನವಶರೀರದ ಸಾಧನೆಯ ದ್ಯೋತಕವೆಂದು ಪರಿಗಣಿಸಲಾಗುತ್ತಿದ್ದುದರಿಂದ ಸ್ಪರ್ಧಾಳುಗಳು ನಗ್ನರಾಗಿಯೇ ಪಾಲ್ಗೊಳ್ಳುತ್ತಿದ್ದರು. ವಿಜಯೀ ಸ್ಪರ್ಧಾಳುಗಳಿಗೆ ಆಲಿವ್ ಎಲೆಗಳಿಂದ ಮಾಡಿದ ಕಿರೀಟವನ್ನು ಉಡುಗೊರೆಯಾಗಿ ನೀಡಲಾಗುತ್ತಿತ್ತು. ಪ್ರಾಚೀನ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಒಲಿಂಪಿಕ್ ಜ್ಯೋತಿಯಾಗಲೀ ಒಲಿಂಪಿಕ್ ವರ್ತುಲಗಳಾಗಲೀ ಬಳಕೆಯಲ್ಲಿರಲಿಲ್ಲ. ಇವು ಮುಂದೆ ಆಧುನಿಕ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಸೇರಿಕೊಂಡವು.

ಪುನರುತ್ಥಾನ

ಓರ್ವ ಸಿರಿವಂತ ಗ್ರೀಕ್ ದಾನಿ ಇವಾಂಜೆಲಾಸ್ ಝಪ್ಪಾಸನು ಪ್ರಥಮ ಆಧುನಿಕ ಅಂತರರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟವನ್ನು ಪ್ರಾಯೋಜಿಸಿದನು. ೧೮೭೦ ಹಾಗೂ ೧೮೭೫ರಲ್ಲಿ ಒಲಿಂಪಿಕ್ ಕ್ರೀಡಾಕೂಟಗಳಿಗೆ ಬಳಸಲಾದ ಪಾನ್ ಅಥೀನಿಯನ್ ಕ್ರೀಡಾಂಗಣವನ್ನು ಈತನು ದುರಸ್ತಿಗೊಳಿಸಿದನು. ಅಲದೆ ಒಲಿಂಪಿಕ್ ಗ್ರಾಮವೊಂದನ್ನು ಸಹ ಇವನು ವ್ಯವಸ್ಥೆಗೊಳಿಸಿದನು. ಮುಂದೆ ಬ್ಯಾರನ್ ಪಿಯರಿ ದ ಕೂಬರ್ತಿಯು ೧೮೯೪ರಲ್ಲಿ ಪ್ಯಾರಿಸ್ ನಗರದಲ್ಲಿ ಜರಗಿದ ಸಮಾವೇಶವೊಂದರಲ್ಲಿ ಒಲಿಂಪಿಕ್ ಕ್ರೀಡಾಕೂಟವನ್ನು ಪುನರಾರಂಭಿಸುವುದರ ಬಗ್ಗೆ ತನ್ನ ಅಭಿಪ್ರಾಯಗಳನ್ನು ಮುಂದಿಕ್ಕಿದನು. ಈ ಸಮಾವೇಶದ ಕೊನೆಯಲ್ಲಿ ಪ್ರಥಮ ಆಧುನಿಕ ಒಲಿಂಪಿಕ್ ಕ್ರೀಡಾಕೂಟವನ್ನು ಅಥೆನ್ಸ್ ನಗರದಲ್ಲಿ ೧೮೯೬ರಲ್ಲಿ ನಡೆಸುವುದೆಂದು ನಿರ್ಣಯಿಸಲಾಯಿತು. ಇದನ್ನು ಆಯೋಜಿಸುವುದರ ಸಲುವಾಗಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯನ್ನು ಹುಟ್ಟುಹಾಕಲಾಯಿತು. ಗ್ರೀಸ್ ದೇಶದ ಡಿಮೆಟ್ರಿಯಸ್ ವಿಕೆಲಾಸ್ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಮೊಟ್ಟಮೊದಲ ಅಧ್ಯಕ್ಷನಾದನು. ಹೀಗೆ ಪ್ರಪ್ರಥಮ ಆಧುನಿಕ ಒಲಿಂಪಿಕ್ ಕ್ರೀಡಾಕೂಟ ಅಥೆನ್ಸ್ ನಗರದ ಪಾನ್ ಅಥೀನಿಯನ್ ಕ್ರೀಡಾಂಗಣದಲ್ಲಿ ೧೮೯೬ರಲ್ಲಿ ನಡೆಯಿತು. ಈ ಕೂಟದಲ್ಲಿ ಕೇವಲ ೧೪ ದೇಶಗಳ ೨೪೧ ಪುರುಷ ಕ್ರೀಡಾಳುಗಳು ಮಾತ್ರ ಪಾಲ್ಗೊಂಡಿದ್ದರು. ಆದರೆ ಆ ಕಾಲದ ಮಟ್ಟಿಗೆ ಇದು ಜಗತ್ತಿನ ಅತಿ ದೊಡ್ಡ ಅಂತರರಾಷ್ಟ್ರೀಯ ಕ್ರೀಡಾಕೂಟವೆಂದು ಪರಿಗಣಿಸಲ್ಪಟ್ಟಿತ್ತು. ನಾಲ್ಕು ವರ್ಷಗಳ ನಂತರ ೧೯೦೦ರಲ್ಲಿ ಪ್ಯಾರಿಸ್ ನಗರದಲ್ಲಿ ನಡೆದ ಕ್ರೀಡಾಕೂಟದಲ್ಲಿ ಮಹಿಳಾ ಕ್ರೀಡಾಪಟುಗಳೂ ಪಾಲ್ಗೊಂಡರು. ಹೀಗೆ ಸಣ್ಣ ಪ್ರಮಾಣದಲ್ಲಿ ಆರಂಭವಾದ ಒಲಿಂಪಿಕ್ ಕ್ರೀಡಾಕೂಟ ೨೦೦೪ರಲ್ಲಿ ಅಥೆನ್ಸ್ ನಲ್ಲಿ ನಡೆದ ಕೂಟದಲ್ಲಿ ೨೦೨ ರಾಷ್ಟ್ರಗಳ ಸುಮಾರು ೧೧೦೦೦ ಕ್ರೀಡಾಳುಗಳು ಪಾಲ್ಗೊಳ್ಳುವ ಮಟ್ಟಿಗೆ ಬೆಳೆಯಿತು.

ಬಹಿಷ್ಕಾರಗಳು

ಖೇದದ ಸಂಗತಿಯೆಂದರೆ ಮಾನವಭ್ರಾತೃವ್ಯದ ಸಂಕೇತವಾದ ಒಲಿಂಪಿಕ್ ಕ್ರೀಡಾಕೂಟಗಳು ಕೂಡಾ ರಾಜಕೀಯದಿಂದ ಹೊರಗುಳಿಯಲಿಲ್ಲ. ವಿವಿಧ ರಾಜಕೀಯ ಕಾರಣಗಳಿಂದಾಗಿ ಈವರೆವಿಗೆ ಹಲವು ಒಲಿಂಪಿಕ್ ಕ್ರೀಡಾಕೂಟಗಳು ನಾನಾ ದೇಶಗಳಿಂದ ಬಹಿಷ್ಕರಿಸಲ್ಪಟ್ಟವು. ೧೯೫೬ರ ಮೆಲ್ಬರ್ನ್ ಕೂಟ , ೧೯೭೨ರ ಮ್ಯೂನಿಖ್ ಕೂಟ , ೧೯೭೬ರ ಮಾಂಟ್ರಿಯಲ್ ಕ್ರೀಡಾಕೂಟ, ೧೯೮೦ರ ಮಾಸ್ಕೋ ಕೂಟ ಮತ್ತು ೧೯೮೪ರ ಲಾಸ್ ಎಂಜಲಿಸ್ ಒಲಿಂಪಿಕ್ ಕ್ರೀಡಾಕೂಟಗಳು ಈ ರೀತಿಯ ಬಹಿಷ್ಕಾರದ ಕಹಿಯನ್ನು ಅನುಭವಿಸಿದವು.

ಉದ್ದೀಪನವಸ್ತುಗಳ ದುರುಪಯೋಗ

ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಜಯ ಸಾಧಿಸುವುದು ಒಂದು ಭಾರೀ ಪ್ರತಿಷ್ಠೆಯ ಸಂಗತಿ. ಹೀಗಾಗಿ ನಾನಾ ದೇಶಗಳ ಹಲವಷ್ಟು ಕ್ರೀಡಾಳುಗಳು ಒಲಿಂಪಿಕ್ ಕ್ರೀಡಾಕೂಟದಲ್ಲಿ ಗೆಲ್ಲಲು ಅಡ್ಡದಾರಿಗಳನ್ನು ಬಳಸುವರು. ಇವುಗಳಲ್ಲಿ ಉದ್ದೀಪನವಸ್ತುಗಳ ಬಳಕೆ ಇಂದು ಒಲಿಂಪಿಕ್ಸ್ ಗೆ ಒಂದು ದೊಡ್ಡ ಸವಾಲೆನಿಸಿದೆ. ಇತ್ತೀಚಿನ ವರ್ಷಗಳಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಸಹ ಉದ್ದೀಪನವಸ್ತುಗಳ ಬಳಕೆ ನಡೆಯುತ್ತಲೇ ಇದೆ. ೧೯೮೮ರ ಸಿಯೋಲ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕೆನಡದ ಬೆನ್ ಜಾನ್ಸನ್ ಪುರುಷರ ೧೦೦ ಮೀ. ಓಟದಲ್ಲಿ ವಿಶ್ವದಾಖಲೆಯೊಂದಿಗೆ ಸ್ವರ್ಣಪದಕವನ್ನು ಗೆದ್ದನು. ನಂತರ ಈತನು ಉದ್ದೀಪನವಸ್ತುಗಳನ್ನು ಬಳಸಿದುದು ಪರೀಕ್ಷೆಯಲ್ಲಿ ಸ್ಥಾಪಿತವಾಗಿ ಆತನ ಸ್ವರ್ಣಪದಕವನ್ನು ಹಿಂಪಡೆದುಕೊಂಡು ಆತನನ್ನು ಕ್ರೀಡಾಸ್ಪರ್ಧೆಗಳಿಂದ ನಿಷೇಧಿಸಲಾಯಿತು. ವಿಷಾದದ ಸಂಗತಿಯೆಂದರೆ ಭಾರತದ ಕ್ರೀಡಾಪಟುಗಳೂ ಈ ವಿಷಯದಲ್ಲಿ ಶುದ್ಧರಾಗಿಲ್ಲದಿರುವುದು.

ಹಿಂಸಾಚಾರಗಳು

ಈವರೆವಿಗೆ ಹಲವು ಒಲಿಂಪಿಕ್ ಕ್ರೀಡಾಕೂಟಗಳು ಹಿಂಸಾಚಾರವನ್ನು ಕಂಡಿವೆ. ಅಮಾನವೀಯ ಘಟನೆಯೊಂದು ೧೯೭೨ರ ಮ್ಯೂನಿಖ್ ಕ್ರೀಡಾಕೂಟದಲ್ಲಿ ಸಂಭವಿಸಿತು. ಇಸ್ರೇಲ್ ದೇಶದ ೧೧ ಕ್ರೀಡಾಳುಗಳನ್ನು ಪ್ಯಾಲೆಸ್ಟಿನ್ ಉಗ್ರಗಾಮಿಗಳು ಒತ್ತೆಯಾಳುಗಳಾಗಿರಿಸಿಕೊಂಡರು. ಇವರನ್ನು ಬಿಡಿಸಿಕೊಳ್ಳಲು ನಡೆಸಲಾದ ವಿಫಲ ಕಾರ್ಯಾಚರಣೆಯಲ್ಲಿ ೯ ಮಂದಿ ಕ್ರೀಡಾಳುಗಳೂ ಸೇರಿದಂತೆ ಒಟ್ಟು ೧೫ ಮಂದಿ ಸಾವನ್ನಪ್ಪಿದರು. ೧೯೯೬ರ ಅಟ್ಲಾಂಟ ಕೂಟದಲ್ಲಿ ಸಂಭವಿಸಿದ ಬಾಂಬ್ ಸ್ಫೋಟವೊಂದರಲ್ಲಿ ಇಬ್ಬರು ಮರಣಿಸಿದರು.

ಟೀಕೆಗಳು

ಗಮನಿಸಬೇಕಾದ ಸಂಗತಿಯೆಂದರೆ ಈವರೆವಿಗೆನ ಹೆಚ್ಚಿನ ಒಲಿಂಪಿಕ್ ಕ್ರೀಡಾಕೂಟಗಳು ಉತ್ತರ ಅಮೆರಿಕ ಅಥವಾ ಯುರೋಪ್ ನಲ್ಲಿಯೇ ಆಯೋಜಿಸಲ್ಪಟ್ಟಿವೆ. ಕೇವಲ ಕೆಲವು ಬಾರಿ ಮಾತ್ರ ವಿಶ್ವದ ಇತರ ಭಾಗಗಳಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ನಡೆಸುವ ಅವಕಾಶ ಒದಗಿದೆ. ದಕ್ಷಿಣ ಅಮೆರಿಕ ಮತ್ತು ಆಫ್ರಿಕಾ ಖಂಡಗಳಲ್ಲಿ ಇದುವರೆಗೆ ಒಂದು ಬಾರಿಯೂ ಒಲಿಂಪಿಕ್ ಕ್ರೀಡಾಕೂಟವನ್ನು ನಡೆಸಲಾಗಿಲ್ಲ. ಹೀಗಾಗಿ ಒಲಿಂಪಿಕ್ ಕ್ರೀಡಾಕೂಟಗಳು ಕೇವಲ ಉಳ್ಳವರ ಪ್ರತಿಷ್ಠೆ ಮೆರೆಸುವ ಸಲುವಾಗಿಯೇ ಇವೆ ಎಂಬ ಟೀಕೆ ಸಾಕಷ್ಟು ವ್ಯಾಪಕವಾಗಿದೆ.

ಒಲಿಂಪಿಕ್ ಧ್ವಜ

ಒಂದಕ್ಕೊಂದು ಹೆಣೆದುಕೊಂಡಿರುವ ಐದು ವರ್ತುಲಗಳು ಒಲಿಂಪಿಕ್ ಚಿಹ್ನೆ. ಈ ಐದು ವರ್ತುಲಗಳು ಪ್ರಪಂಚದ ಐದು ಜನವಸತಿಯುಳ್ಳ ಭೂಖಂಡಗಳನ್ನು ಪ್ರತಿನಿಧಿಸುತ್ತವೆ. ( ಉತ್ತರ ಹಾಗೂ ದಕ್ಷಿಣ ಅಮೆರಿಕ ಖಂಡಗಳನ್ನು ಒಂದಾಗಿ ಪರಿಗಣಿಸಲಾಗಿದೆ). ಶ್ವೇತವರ್ಣದ ಒಲಿಂಪಿಕ್ ಧ್ವಜದಲ್ಲಿ ಈ ೫ ವರ್ತುಲಗಳು ೫ ವರ್ಣಗಳಲ್ಲಿ ಗೋಚರಿಸುತ್ತವೆ. ಕೆಂಪು,ನೀಲಿ,ಹಸಿರು,ಹಳದಿ ಹಾಗೂ ಕಪ್ಪು ಇವೇ ಆ ಐದು ವರ್ಣಗಳು.https://www.quora.com/What-do-the-colors-on-the-Olympics-symbol-mean ಅತಿ ವಿಶಿಷ್ಟ ಸಂಗತಿಯೆಂದರೆ ವಿಶ್ವದ ಪ್ರತಿಯೊಂದು ರಾ9ಷ್ಟ್ರದ ಧ್ವಜದಲ್ಲಿ ಈ ಆರು ವರ್ಣಗಳಲ್ಲಿ ( ಮೇಲಿನ ೫ ಮತ್ತು ಧ್ವಜದ ಬಿಳಿ ವರ್ಣ) ಕನಿಷ್ಠ ಒಂದಾದರೂ ಇದ್ದೇ ಇದೆ.

ಒಲಿಂಪಿಕ್ ಧ್ಯೇಯ

ಲ್ಯಾಟಿನ್ ಭಾಷೆಯ " ಸಿಟಿಯಸ್ , ಆಲ್ಟಿಯಸ್ , ಫೋರ್ಟಿಯಸ್ " ಅಂದರೆ "ಕ್ಷಿಪ್ರವಾಗಿ , ಎತ್ತರಕ್ಕೆ ಹಾಗೂ ಬಲಿಷ್ಠ" ಎಂಬುದೇ ಒಲಿಂಪಿಕ್ ಧ್ಯೇಯ. ಮೊದಮೊದಲು ಸ್ಪರ್ಧೆಗಳು ಓಟ, ಜಿಗಿತ ಮತ್ತು ಭಾರ ಎತ್ತುವಿಕೆ ಅಥವಾ ಭಾರ ಎಸೆಯುವಿಕೆಗೇ ಸೀಮಿತವಾಗಿದ್ದುದರಿಂದ ಈ ಧ್ಯೇಯ ರಚಿತವಾಯಿತು. ಕೂಬರ್ತಿಯ ಪ್ರಕಾರ " ಹೇಗೆ ಜೀವನದಲ್ಲಿ ಹೋರಾಡುವುದು ಮುಖ್ಯವೇ ಹೊರತು ಜಯಿಸುವುದಲ್ಲವೋ ಹಾಗೆಯೇ ಒಲಿಂಪಿಕ್ಸ್ ನ ಅತಿಮುಖ್ಯ ಸಂಗತಿಯೆಂದರೆ ಪಾಲ್ಗೊಳ್ಳುವುದೇ ವಿನಹ ಗೆಲ್ಲುವುದಲ್ಲ. ಅವಶ್ಯ ವಿಚಾರವೆಂದರೆ ಉತ್ತಮವಾಗಿ ಹೋರಾಡುವುದು. ವಿಜಯ ಸಾಧಿಸುವುದೇ ಗುರಿ ಅಲ್ಲ."

ಒಲಿಂಪಿಕ್ ಕ್ರೀಡಾಕೂಟ ಅತೀಥೆಯ ನಗರಗಳು

ಒಲಿಂಪಿಕ್ ಕ್ರೀಡಾಕೂಟ ಅತೀಥೆಯ ನಗರಗಳು
ವರ್ಷ ಬೇಸಿಗೆಯ ಕೂಟಗಳು ಚಳಿಗಾಲದ ಕೂಟಗಳು ಯುವ ಒಲಂಪಿಕ್ ಕೂಟಗಳು
ಒಲಿಂಪಿಕ್ ಕ್ರೀಡಾಕೂಟ ಅತೀಥೆಯ ನಗರ # ಅತೀಥೆಯ ನಗರ # ಅತೀಥೆಯ ನಗರ
1896 I ಒಲಂಪಿಕ್ ಕ್ರೀಡಾಕೂಟ  ಅಥೆನ್ಸ್, ಗ್ರೀಸ್
1900 II ಒಲಂಪಿಕ್ ಕ್ರೀಡಾಕೂಟ  ಪ್ಯಾರಿಸ್, ಫ್ರಾನ್ಸ್
1904 III ಒಲಂಪಿಕ್ ಕ್ರೀಡಾಕೂಟ  ಸೇಂಟ್ ಲೂಯಿಸ್, ಯು ಎಸ್ ಎ
1906 III ಒಲಂಪಿಕ್ ಕ್ರೀಡಾಕೂಟ  ಅಥೆನ್ಸ್, ಗ್ರೀಸ್
1908 IV ಒಲಂಪಿಕ್ ಕ್ರೀಡಾಕೂಟ  ಲಂಡನ್, ಯುನೈಟೆಡ್ ಕಿಂಗ್‌ಡಂ
1912 V ಒಲಂಪಿಕ್ ಕ್ರೀಡಾಕೂಟ  ಸ್ಟಾಖೋಂ, ಸ್ವೀಡನ್
1916 VI ಒಲಂಪಿಕ್ ಕ್ರೀಡಾಕೂಟ  ಬರ್ಲಿನ್, ಜರ್ಮನಿ
Cancelled due to World War I
1920 VII ಒಲಂಪಿಕ್ ಕ್ರೀಡಾಕೂಟ  ಎಂಟ್ವರ್ಪ್, ಬೆಲ್ಜಿಯಂ
1924 VIII ಒಲಂಪಿಕ್ ಕ್ರೀಡಾಕೂಟ  ಪ್ಯಾರಿಸ್, ಫ್ರಾನ್ಸ್ I ಒಲಂಪಿಕ್ ಕ್ರೀಡಾಕೂಟ  ಚಾಮೋನಿಕ್ಸ್, ಫ್ರಾನ್ಸ್
1928 IX ಒಲಂಪಿಕ್ ಕ್ರೀಡಾಕೂಟ  ಆಂಸ್ಟರ್ಡ್ಯಾಂ, ನೆದರ್ಲೆಂಡ್ಸ್ II ಒಲಂಪಿಕ್ ಕ್ರೀಡಾಕೂಟ  ಸೈಂಟ್ ಮೋರ್ಟಿಜ್, ಸ್ವಿಟ್ಜರ್ಲೆಂಡ್
1932 X ಒಲಂಪಿಕ್ ಕ್ರೀಡಾಕೂಟ  ಲಾಸ್ ಏಂಜೆಲ್ಸ್, , ಯು ಎಸ್ ಎ III ಒಲಂಪಿಕ್ ಕ್ರೀಡಾಕೂಟ  ಲೇಕ್ ಪ್ಲಾಸಿಡ್, ಯು ಎಸ್ ಎ
1936 XI ಒಲಂಪಿಕ್ ಕ್ರೀಡಾಕೂಟ  ಬರ್ಲಿನ್, ಜರ್ಮನಿ IV ಒಲಂಪಿಕ್ ಕ್ರೀಡಾಕೂಟ  Garmisch-Partenkirchen, ಜರ್ಮನಿ
1940 XII ಒಲಂಪಿಕ್ ಕ್ರೀಡಾಕೂಟ  ಟೋಕ್ಯೊ, ಜಪಾನ್
ಒಲಂಪಿಕ್ ಕ್ರೀಡಾಕೂಟ  ಹೆಲ್ಸಿಂಕಿ, ಫಿನ್ ಲ್ಯಾಂಡ್ →
Cancelled due to World War II
V ಒಲಂಪಿಕ್ ಕ್ರೀಡಾಕೂಟ  ಸಪ್ಪೋರೊ, ಜಪಾನ್
ಒಲಂಪಿಕ್ ಕ್ರೀಡಾಕೂಟ  ಸೈಂಟ್ ಮೋರ್ಟಿಜ್, ಸ್ವಿಟ್ಜರ್ಲೆಂಡ್ →
ಒಲಂಪಿಕ್ ಕ್ರೀಡಾಕೂಟ  Garmisch-Partenkirchen, ಜರ್ಮನಿ
ಎರಡನೆ ಮಹಾಯುದ್ಧದಿಂದಾಗಿ ರದ್ದು
1944 XIII ಒಲಂಪಿಕ್ ಕ್ರೀಡಾಕೂಟ  ಲಂಡನ್, ಯುನೈಟೆಡ್ ಕಿಂಗ್‌ಡಂ
Cancelled due to World War II
V ಒಲಂಪಿಕ್ ಕ್ರೀಡಾಕೂಟ  Cortina d'Ampezzo, ಇಟಲಿ
Cancelled due to World War II
1948 XIV ಒಲಂಪಿಕ್ ಕ್ರೀಡಾಕೂಟ  ಲಂಡನ್, ಯುನೈಟೆಡ್ ಕಿಂಗ್‌ಡಂ V ಒಲಂಪಿಕ್ ಕ್ರೀಡಾಕೂಟ  ಸೈಂಟ್ ಮೋರ್ಟಿಜ್, ಸ್ವಿಟ್ಜೆರ್ಲೆಂಡ್
1952 XV ಒಲಂಪಿಕ್ ಕ್ರೀಡಾಕೂಟ  ಹೆಲ್ಸಿನ್ಕಿ, ಫಿನ್ಲೆಂಡ್ VI ಒಲಂಪಿಕ್ ಕ್ರೀಡಾಕೂಟ  ಓಸ್ಲೊ, ನಾರ್ವೆ
1956 XVI ಒಲಂಪಿಕ್ ಕ್ರೀಡಾಕೂಟ  ಮೆಲ್ಬೋರ್ನ್, ಆಸ್ಟ್ರೇಲಿಯ +
ಒಲಂಪಿಕ್ ಕ್ರೀಡಾಕೂಟ  ಸ್ಟಾಕ್ ಹೋಂ, ಸ್ವೀಡನ್
VII ಒಲಂಪಿಕ್ ಕ್ರೀಡಾಕೂಟ  ಕೊರ್ಟಿನ ಡಿ' ಅಮ್ ಪೆಜ್ಜೊ, ಇಟಲಿ
1960 XVII ಒಲಂಪಿಕ್ ಕ್ರೀಡಾಕೂಟ  ರೋಮ್, ಇಟಲಿ VIII ಒಲಂಪಿಕ್ ಕ್ರೀಡಾಕೂಟ  ಸ್ಕ್ವಾ ವ್ಯಾಲಿ, ಅಮೇರಿಕ ಸಂಯುಕ್ತ ಸಂಸ್ಥಾನ
1964 XVIII ಒಲಂಪಿಕ್ ಕ್ರೀಡಾಕೂಟ  ಟೋಕ್ಯೊ, ಜಪಾನ್ IX ಒಲಂಪಿಕ್ ಕ್ರೀಡಾಕೂಟ  ಇನ್ಸ್ ಬ್ರೂಕ್, ಆಸ್ಟ್ರೀಯ
1968 XIX ಒಲಂಪಿಕ್ ಕ್ರೀಡಾಕೂಟ  ಮೆಕ್ಸಿಕೊ ನಗರ, ಮೆಕ್ಸಿಕೊ X ಒಲಂಪಿಕ್ ಕ್ರೀಡಾಕೂಟ  ಗ್ರೆನೊಬಲ್, ಫ್ರಾನ್ಸ್
1972 XX ಒಲಂಪಿಕ್ ಕ್ರೀಡಾಕೂಟ  ಮ್ಯೂನಿಕ್, ಪಶ್ಚಿಮ ಜರ್ಮನಿ XI ಒಲಂಪಿಕ್ ಕ್ರೀಡಾಕೂಟ  ಸಪ್ಪೊರೊ, ಜಪಾನ್
1976 XXI ಒಲಂಪಿಕ್ ಕ್ರೀಡಾಕೂಟ  ಮಾಂಟ್ರಿಯಲ್l, ಕೆನಡ XII ಒಲಂಪಿಕ್ ಕ್ರೀಡಾಕೂಟ  ಡೆನ್ವರ್, ಯು ಎಸ್ ಎ
ಒಲಂಪಿಕ್ ಕ್ರೀಡಾಕೂಟ  ಇನ್ಸ್‌ಬ್ರುಕ್, ಆಸ್ಟ್ರಿಯ
1980 XXII ಒಲಂಪಿಕ್ ಕ್ರೀಡಾಕೂಟ  ಮಾಸ್ಕೊ, ಸೋವಿಯೆಟ್ ಒಕ್ಕೂಟ XIII ಒಲಂಪಿಕ್ ಕ್ರೀಡಾಕೂಟ  ಲೇಕ್ ಪ್ಲಾಸಿಡ್, ಯು ಎಸ್ ಎ
1984 XXIII ಒಲಂಪಿಕ್ ಕ್ರೀಡಾಕೂಟ  ಲಾಸ್ ಏಂಜಲೀಸ್, ಯು ಎಸ್ ಎ XIV ಒಲಂಪಿಕ್ ಕ್ರೀಡಾಕೂಟ  ಸಾರಯೇವೋ, ಯುಗೊಸ್ಲಾವಿಯ
1988 XXIV ಒಲಂಪಿಕ್ ಕ್ರೀಡಾಕೂಟ  ಸಿಯೋಲ್, ದಕ್ಷಿಣ ಕೊರಿಯ XV ಒಲಂಪಿಕ್ ಕ್ರೀಡಾಕೂಟ  ಕ್ಯಾಲ್ ಗರಿ, ಕೆನಡ
1992 XXV ಒಲಂಪಿಕ್ ಕ್ರೀಡಾಕೂಟ  ಬಾರ್ಸಿಲೋನ, ಸ್ಪೇನ್ XVI ಒಲಂಪಿಕ್ ಕ್ರೀಡಾಕೂಟ  ಅಲ್ಬರ್ಟ್ ವಿಲ್ಲೆ, ಫ್ರಾನ್ಸ್
1994 XVII ಒಲಂಪಿಕ್ ಕ್ರೀಡಾಕೂಟ  ಲಿಲ್ಲ್‌ಹ್ಯಾಮರ್, ನಾರ್ವೆ
1996 XXVI ಒಲಂಪಿಕ್ ಕ್ರೀಡಾಕೂಟ  ಅಟ್ಲಾಂಟ, ಯು ಎಸ್ ಎ
1998 XVIII ಒಲಂಪಿಕ್ ಕ್ರೀಡಾಕೂಟ  ನಗಾನೊ, ಜಪಾನ್
2000 XXVII ಒಲಂಪಿಕ್ ಕ್ರೀಡಾಕೂಟ  ಸಿಡ್ನಿ, ಆಸ್ಟ್ರೇಲಿಯ
2002 XIX ಒಲಂಪಿಕ್ ಕ್ರೀಡಾಕೂಟ  ಸಾಲ್ಟ್ ಲೇಕ್ ಸಿಟಿ, ಯು ಎಸ್ ಎ
2004 XXVIII ಒಲಂಪಿಕ್ ಕ್ರೀಡಾಕೂಟ  ಅಥೆನ್ಸ್, ಗ್ರೀಸ್
2006 XX ಒಲಂಪಿಕ್ ಕ್ರೀಡಾಕೂಟ  ಟ್ಯೂರಿನ್, ಇಟಲಿ
2008 XXIX ಒಲಂಪಿಕ್ ಕ್ರೀಡಾಕೂಟ  ಬೀಜಿಂಗ್, ಚೀನಾ
2010 XXI ಒಲಂಪಿಕ್ ಕ್ರೀಡಾಕೂಟ  ವೆನ್‌ಕೂವರ್, ಕೆನಡ I (Summer) ಒಲಂಪಿಕ್ ಕ್ರೀಡಾಕೂಟ  ಸಿಂಗಾಪುರ
2012 XXX ಒಲಂಪಿಕ್ ಕ್ರೀಡಾಕೂಟ  ಲಂಡನ್, ಯುನೈಟೆಡ್ ಕಿಂಗ್ ಡಂ I (Winter) ಒಲಂಪಿಕ್ ಕ್ರೀಡಾಕೂಟ  ಇನ್ಸ್‌ಬ್ರುಕ್, ಆಸ್ಟ್ರಿಯ
2014 XXII ಒಲಂಪಿಕ್ ಕ್ರೀಡಾಕೂಟ  ಸೋಚಿ, ರಷ್ಯಾ II (Summer) To be determined
2016 XXXI ಒಲಂಪಿಕ್ ಕ್ರೀಡಾಕೂಟ  ರಿಯೊ ಡಿ ಜೆನೆರೋ, ಬ್ರೆಜಿಲ್ II (Winter) To be determined
2018 XXIII To be determined
2020 XXXII To be determined

ಗಮನಿಸಿ : ಈ ಪಟ್ಟಿಯು ಅಪೂರ್ಣ, ಮುಂದೆ ಇದನ್ನು ಸರಿಪಡಿಸಲಾಗುವುದು

ಒಲಿಂಪಿಕ್ ಜ್ಯೋತಿ

ಈಚಿನ ವರ್ಷಗಳಲ್ಲಿ ಒಲಿಂಪಿಕ್ ಜ್ಯೋತಿಯ ಶ್ರೇಷ್ಠ ಪರಂಪರೆಯೊಂದು ಆರಂಭವಾಗಿದೆ. ಪ್ರತಿ ಒಲಿಂಪಿಕ್ ಕ್ರೀಡಾಕೂಟದ ಕೆಲ ಸಮಯದ ಮುನ್ನ ಗ್ರೀಸ್ ದೇಶದ ಒಲಿಂಪಿಯಾದಲ್ಲಿ ಮಸೂರ ಮತ್ತು ಸೂರ್ಯಕಿರಣಗಳ ಸಹಾಯದಿಂದ ದೊಂದಿಯೊಂದನ್ನು ಹಚ್ಚಲಾಗುವುದು. ಇದೇ ಒಲಿಂಪಿಕ್ ಜ್ಯೋತಿ. ಈ ಒಲಿಂಪಿಕ್ ಜ್ಯೋತಿಯನ್ನು ಒಲಿಂಪಿಕ್ ಕ್ರೀಡಾಕೂಟದ ಆತಿಥೇಯ ನಗರದವರೆಗೆ ಭೂಮಿಯ ಬಹುತೇಕ ರಾಷ್ಟ್ರಗಳ ಮೂಲಕ ಹಾಯಿಸಿ ಕೊಂಡೊಯ್ಯಲಾಗುವುದು. ಪ್ರತಿ ರಾಷ್ಟ್ರದ ಮೂಲಕ ಹಾದುಹೋಗುವಾಗ ಆಯಾ ದೇಶದ ಪ್ರಮುಖ ಕ್ರೀಡಾಪಟುಗಳು ಮತ್ತು ಇತರ ಗಣ್ಯರು ರಿಲೇ ಓಟದ ಮೂಲಕ ಜ್ಯೋತಿಯನ್ನು ಸಾಗಿಸುವರು. ಇದರಲ್ಲಿ ಪಾಲ್ಗೊಳ್ಳುವುದು ಒಂದು ಗೌರವದ ಹಾಗೂ ಪ್ರತಿಷ್ಠೆಯ ಸಂಗತಿ. ನಂತರ ಕೂಟದ ಉಧ್ಘಾಟನಾ ಸಮಾರಂಭದಲ್ಲಿ ಮುಖ್ಯ ಕ್ರೀಡಾಂಗಣದಲ್ಲಿ ಒಂದು ದೊಡ್ಡ ಜ್ಯೋತಿಯನ್ನು ಬೆಳಗಲು ಈ ದೊಂದಿಯನ್ನು ಬಳಸಲಾಗುವುದು. ಈ ಮುಖ್ಯ ಜ್ಯೋತಿಯು ಕ್ರೀಡಾಕೂಟವು ಮುಗಿಯವರೆಗೂ ಅವಿರತವಾಗಿ ಬೆಳಗುತ್ತಲೇ ಇರುವುದು. ಒಲಿಂಪಿಕ್ ಕ್ರೀಡಾಕೂಟದ ಮುಕ್ತಾಯ ಸಮಾರಂಭದಲ್ಲಿ ಇದನ್ನು ನಂದಿಸಲಾಗುವುದು.

ಸರ್ವ ಶ್ರೇಷ್ಠ ಪ್ರದರ್ಷನ

The IOC does not keep an official record of individual medal counts, though unofficial medal tallies abound. These provide one method of determining the most successful Olympic athletes of the modern era. Below are the top ten individual medal winners of the modern Olympics (the gender of the athlete is denoted in the "Sport" column):

ಕ್ರೀಡಾಪಟು ರಾಷ್ಟ್ರ ಕ್ರೀಡೆ ಒಲಿಂಪಿಕ್ ಒಲಂಪಿಕ್ ಕ್ರೀಡಾಕೂಟ  ಬಂಗಾರ ಒಲಂಪಿಕ್ ಕ್ರೀಡಾಕೂಟ  ಬೆಳ್ಳಿ ಒಲಂಪಿಕ್ ಕ್ರೀಡಾಕೂಟ  ಕಂಚು ಒಟ್ಟ
Michael Phelps ಒಲಂಪಿಕ್ ಕ್ರೀಡಾಕೂಟ  ಅಮೇರಿಕ ಸಂಯುಕ್ತ ಸಂಸ್ಥಾನ Swimming (m) 2000–2008 14 0 2 16
Larissa Latynina ಒಲಂಪಿಕ್ ಕ್ರೀಡಾಕೂಟ  ಸೋವಿಯತ್ ಒಕ್ಕೂಟ Gymnastics (f) 1956–1964 9 5 4 18
Paavo Nurmi ಒಲಂಪಿಕ್ ಕ್ರೀಡಾಕೂಟ  Finland Athletics (m) 1920–1928 9 3 0 12
Mark Spitz ಒಲಂಪಿಕ್ ಕ್ರೀಡಾಕೂಟ  ಅಮೇರಿಕ ಸಂಯುಕ್ತ ಸಂಸ್ಥಾನ Swimming (m) 1968–1972 9 1 1 11
Carl Lewis ಒಲಂಪಿಕ್ ಕ್ರೀಡಾಕೂಟ  ಅಮೇರಿಕ ಸಂಯುಕ್ತ ಸಂಸ್ಥಾನ Athletics (m) 1984–1996 9 1 0 10
Bjørn Dæhlie ಒಲಂಪಿಕ್ ಕ್ರೀಡಾಕೂಟ  ನಾರ್ವೇ Cross-country skiing (m) 1992–1998 8 4 0 12
Birgit Fischer ಒಲಂಪಿಕ್ ಕ್ರೀಡಾಕೂಟ  ಪೂರ್ವ ಜರ್ಮನಿ
ಒಲಂಪಿಕ್ ಕ್ರೀಡಾಕೂಟ  Germany
Canoeing (flatwater) (f) 1980–2004 8 4 0 12
Sawao Kato ಒಲಂಪಿಕ್ ಕ್ರೀಡಾಕೂಟ  ಜಪಾನ್ Gymnastics (m) 1968–1976 8 3 1 12
Jenny Thompson ಒಲಂಪಿಕ್ ಕ್ರೀಡಾಕೂಟ  ಅಮೇರಿಕ ಸಂಯುಕ್ತ ಸಂಸ್ಥಾನ Swimming (f) 1992–2004 8 3 1 12
Matt Biondi ಒಲಂಪಿಕ್ ಕ್ರೀಡಾಕೂಟ  ಅಮೇರಿಕ ಸಂಯುಕ್ತ ಸಂಸ್ಥಾನ Swimming (m) 1984–1992 8 2 1 11

ಇದನ್ನೂ ನೋಡಿ

ಉಲ್ಲೇಖ

Tags:

ಒಲಂಪಿಕ್ ಕ್ರೀಡಾಕೂಟ ಪ್ರಾಚೀನ ಒಲಿಂಪಿಕ್ಸ್ಒಲಂಪಿಕ್ ಕ್ರೀಡಾಕೂಟ ಪುನರುತ್ಥಾನಒಲಂಪಿಕ್ ಕ್ರೀಡಾಕೂಟ ಬಹಿಷ್ಕಾರಗಳುಒಲಂಪಿಕ್ ಕ್ರೀಡಾಕೂಟ ಉದ್ದೀಪನವಸ್ತುಗಳ ದುರುಪಯೋಗಒಲಂಪಿಕ್ ಕ್ರೀಡಾಕೂಟ ಹಿಂಸಾಚಾರಗಳುಒಲಂಪಿಕ್ ಕ್ರೀಡಾಕೂಟ ಟೀಕೆಗಳುಒಲಂಪಿಕ್ ಕ್ರೀಡಾಕೂಟ ಒಲಿಂಪಿಕ್ ಧ್ವಜಒಲಂಪಿಕ್ ಕ್ರೀಡಾಕೂಟ ಒಲಿಂಪಿಕ್ ಧ್ಯೇಯಒಲಂಪಿಕ್ ಕ್ರೀಡಾಕೂಟ ಇದನ್ನೂ ನೋಡಿಒಲಂಪಿಕ್ ಕ್ರೀಡಾಕೂಟ ಉಲ್ಲೇಖಒಲಂಪಿಕ್ ಕ್ರೀಡಾಕೂಟಅಥೆನ್ಸ್ಕವಿಕೆನಡಾಗ್ರೀಸ್ಫ್ರಾನ್ಸ್ಬ್ರೆಜಿಲ್ರಷ್ಯಾರಿಯೊ ಡಿ ಜನೈರೊಲಂಡನ್

🔥 Trending searches on Wiki ಕನ್ನಡ:

ಬೃಂದಾವನ (ಕನ್ನಡ ಧಾರಾವಾಹಿ)ಭಾರತದ ಸಂಸತ್ತುರತ್ನಾಕರ ವರ್ಣಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಡಾ ಬ್ರೋಏಕ ಶ್ಲೋಕೀ ರಾಮಾಯಣ ಮತ್ತು ಮಹಾಭಾರತಸಿಂಧನೂರುಕಾರ್ಮಿಕರ ದಿನಾಚರಣೆಜಿಪುಣತಂತ್ರಜ್ಞಾನದ ಉಪಯೋಗಗಳುಹದಿಬದೆಯ ಧರ್ಮನಾಟಕಸಾವಿತ್ರಿಬಾಯಿ ಫುಲೆಜಯಮಾಲಾಕಲ್ಪನಾಎಳ್ಳೆಣ್ಣೆಮಣ್ಣುಜ್ವರಸಜ್ಜೆಕಾಮಸೂತ್ರವಿಶ್ವಕರ್ಮಅನುವಂಶಿಕ ಕ್ರಮಾವಳಿಭಾರತದ ಚುನಾವಣಾ ಆಯೋಗಕರ್ನಾಟಕ ವಿಶ್ವವಿದ್ಯಾಲಯಮಹಾವೀರಕರ್ನಾಟಕದ ವಿಶ್ವವಿದ್ಯಾಲಯಗಳುಗೋಪಾಲಕೃಷ್ಣ ಅಡಿಗರಾಮ ಮಂದಿರ, ಅಯೋಧ್ಯೆಹರಿಶ್ಚಂದ್ರಭಾರತದ ರಾಷ್ಟ್ರೀಯ ಉದ್ಯಾನಗಳುಮಳೆಹಾಸನ ಜಿಲ್ಲೆಕರ್ನಾಟಕ ಹೈ ಕೋರ್ಟ್ಯುಗಾದಿಕಬಡ್ಡಿಪ್ರಜಾಪ್ರಭುತ್ವಆದಿಲ್ ಶಾಹಿ ವಂಶಪುಟ್ಟರಾಜ ಗವಾಯಿಹಾಲಕ್ಕಿ ಸಮುದಾಯಇಮ್ಮಡಿ ಪುಲಿಕೇಶಿಭಗವದ್ಗೀತೆಸೂರ್ಯಪುರೂರವಸ್ದೇವನೂರು ಮಹಾದೇವಆಯ್ದಕ್ಕಿ ಲಕ್ಕಮ್ಮಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಮಾನವ ಸಂಪನ್ಮೂಲ ನಿರ್ವಹಣೆಪಿ.ಲಂಕೇಶ್ಸೀಮೆ ಹುಣಸೆದರ್ಶನ್ ತೂಗುದೀಪ್ಭಾರತದಲ್ಲಿ ಕೃಷಿಬಾದಾಮಿ ಚಾಲುಕ್ಯರ ವಾಸ್ತುಶಿಲ್ಪನಾಗಚಂದ್ರವಾಲ್ಮೀಕಿಭಾರತದಲ್ಲಿನ ಚುನಾವಣೆಗಳುಅಡಿಕೆರಾಮಾಯಣಶಬ್ದಜೈನ ಧರ್ಮಕರ್ನಾಟಕದ ಹಬ್ಬಗಳುಹೊಯ್ಸಳ ವಾಸ್ತುಶಿಲ್ಪಅವತಾರಕ್ಯಾನ್ಸರ್ಯು.ಆರ್.ಅನಂತಮೂರ್ತಿಡಿ.ವಿ.ಗುಂಡಪ್ಪಎಚ್.ಎಸ್.ಶಿವಪ್ರಕಾಶ್ಹೂಡಿಕೆಕನ್ನಡದಲ್ಲಿ ಕಾದಂಬರಿ ಸಾಹಿತ್ಯಭಾರತೀಯ ಸಂವಿಧಾನದ ತಿದ್ದುಪಡಿಜನಪದ ನೃತ್ಯಗಳುಸಾಹಿತ್ಯಭಾರತೀಯ ಅಂಚೆ ಸೇವೆಆದೇಶ ಸಂಧಿಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿ🡆 More