ಎಸ್.ಎಂ.ಕೃಷ್ಣ: ಕರ್ನಾಟಕದ ಮುಖ್ಯಮಂತ್ರಿಗಳು

ಎಸ್ ಎಮ್ ಕೃಷ್ಣ (ಸೋಮನಹಳ್ಳಿ ಮಲ್ಲಯ್ಯ ಕೃಷ್ಣ) (ಜನನ-೧೯೩೨) ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲೊಬ್ಬರು.

೧೯೯೯ ರಿಂದ ೨೦೦೪ರವರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲರಾದ ಇವರು, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ. ವಿದ್ಯಾಭ್ಯಾಸದ ದೃಷ್ಟಿಯಿಂದ, ಕರ್ನಾಟಕದ ಅತ್ಯಂತ ಹೆಚ್ಚು ಸುಶಿಕ್ಷಿತ ಮುಖ್ಯಮಂತ್ರಿಗಳಲ್ಲಿ ಕೃಷ್ಣ ಒಬ್ಬರು. ಇವರು ಬಹುಕಾಲ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು, ಬದಲಾದ ರಾಜಕೀಯ ಸನ್ನಿವೇಶಗಳ ಕಾರಣ ಮಾರ್ಚ್ ೨೦೧೭ ರಂದು ಭಾರತೀಯ ಜನತಾ ಪಕ್ಷದ ಸದಸ್ಯತ್ವವನ್ನು ಪದೆದರು. ಅವರು ೧೯೯೯ ರಿಂದ ೨೦೦೪ ರವರೆಗೆ ಕರ್ನಾಟಕದ ೧೬ ನೇ ಮುಖ್ಯಮಂತ್ರಿಯಾಗಿದ್ದರು ಮತ್ತು ೨೦೦೪ ರಿಂದ ೨೦೦೮ ರವರೆಗೆ ಮಹಾರಾಷ್ಟ್ರದ ೧೯ ನೇ ರಾಜ್ಯಪಾಲರಾಗಿದ್ದರು . ಎಸ್.ಎಂ.ಕೃಷ್ಣ ಅವರು ಡಿಸೆಂಬರ್ ೧೯೮೯ ರಿಂದ ಜನವರಿ ೧೯೯೩ ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. ೧೯೭೧ ರಿಂದ ೨೦೧೪ ರವರೆಗೆ ವಿವಿಧ ಸಮಯಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿದ್ದರು. ಇವರಿಗೆ ೨೦೨೩ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.

ಎಸ್.ಎಂ.ಕೃಷ್ಣ
ಎಸ್.ಎಂ.ಕೃಷ್ಣ: ವಿದ್ಯಾಭ್ಯಾಸ, ರಾಜಕೀಯ ಜೀವನ, ಉಲ್ಲೇಖಗಳು
ಭಾರತದ ವಿದೇಶಾಂಗ ವ್ಯವಹಾರಗಳ ಮಂತ್ರಿಯಾಗಿ ಅಮೇರಿಕಾದಲ್ಲಿ (೨೦೧೦).

ಭಾರತದ ೨೭ನೇ ವಿದೇಶಾಂಗ ವ್ಯವಹಾರಗಳ ಮಂತ್ರಿಯಾಗಿ
ಅಧಿಕಾರ ಅವಧಿ
೨೩ ಮೇ ೨೦೦೯ – ೨೮ ಅಕ್ಟೋಬರ್ ೨೦೧೨
ಪ್ರಧಾನ ಮಂತ್ರಿ ಮನಮೋಹನ್ ಸಿಂಘ್
ಪೂರ್ವಾಧಿಕಾರಿ ಪ್ರಣಬ್ ಮುಖರ್ಜಿ
ಉತ್ತರಾಧಿಕಾರಿ ಸಲ್ಮಾನ್ ಖುರ್ಶೀದ್

ಮಹಾರಾಷ್ಟ್ರದ ೧೮ನೇ ರಾಜ್ಯಪಾಲರಾಗಿ
ಅಧಿಕಾರ ಅವಧಿ
೧೨ ಡಿಸೆಂಬರ್ ೨೦೦೪ – ೫ ಮಾರ್ಚ್ ೨೦೦೮
ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್‌ಮುಖ್
ಪೂರ್ವಾಧಿಕಾರಿ ಮೊಹ್ಮದ್ ಫಝಲ್
ಉತ್ತರಾಧಿಕಾರಿ ಎಸ್ ಸಿ ಜಮೀರ್

ಕರ್ನಾಟಕದ ೧೬ನೇ ಮುಖ್ಯಮಂತ್ರಿಯಾಗಿ
ಅಧಿಕಾರ ಅವಧಿ
೧೧ ಅಕ್ಟೋಬರ್ ೧೯೯೯ – ೨೮ ಮೇ ೨೦೦೪
ಪೂರ್ವಾಧಿಕಾರಿ ಜೆ ಹೆಚ್ ಪಟೇಲ್
ಉತ್ತರಾಧಿಕಾರಿ ಎನ್ ಧರಮ್ ಸಿಂಘ್

ಕರ್ನಾಟಕದ ಮೊದಲ ಉಪ ಮು.ಮಂ.
ಅಧಿಕಾರ ಅವಧಿ
೨೧ ಜನವರಿ ೧೯೯೩ – ೧೧ ಡಿಸೆಂಬರ್ ೧೯೯೪
ಮುಖ್ಯಮಂತ್ರಿ ಎಂ ವೀರಪ್ಪ ಮೊಯ್ಲಿ
ಪೂರ್ವಾಧಿಕಾರಿ ಇಲ್ಲ.
ಉತ್ತರಾಧಿಕಾರಿ ಜೆ ಹೆಚ್ ಪಟೇಲ್
ಮತಕ್ಷೇತ್ರ ಮದ್ದೂರು ವಿಧಾನಸಭಾ ಕ್ಷೇತ್ರ
ವೈಯಕ್ತಿಕ ಮಾಹಿತಿ
ಜನನ (1932-05-01) ೧ ಮೇ ೧೯೩೨ (ವಯಸ್ಸು ೯೧)
ಸೋಮನಹಳ್ಳಿ, ಮಂಡ್ಯ ಜಿಲ್ಲೆ, ಕರ್ನಾಟಕ (ಆಗಿನ ಮೈಸೂರು ರಾಜ್ಯ)
ರಾಜಕೀಯ ಪಕ್ಷ ಭಾರತೀಯ ಜನತಾ ಪಾರ್ಟಿ
(ಮಾರ್ಚ್ ೨೦೧೭ರಿಂದ)
ಇತರೆ ರಾಜಕೀಯ
ಸಂಲಗ್ನತೆಗಳು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
(೧೯೭೧-ಜನವರಿ ೨೦೧೭)
  • ಪ್ರಜಾ ಸೋಷಲಿಸ್ಟ್ ಪಾರ್ಟಿ
    (೧೯೬೨-೧೯೭೧)
ಸಂಗಾತಿ(ಗಳು) ಪ್ರೇಮಾ
ಅಭ್ಯಸಿಸಿದ ವಿದ್ಯಾಪೀಠ ಮೈಸೂರು ವಿವಿ ಕಾನೂನು ಕಾಲೇಜು
ಡೆಡ್‍ಮನ್ ಕಾನೂನು ಕಾಲೇಜು(ಸದರ್ನ್ ಮೆಥಡಿಸ್ಟ್ ವಿವಿ, ಟೆಕ್ಸಾಸ್)
ಜಾರ್ಜ್ ವಾಷಿಂಗ್‌ಟನ್ ವಿವಿ ಕಾನೂನು ಕಾಲೇಜು

ವಿದ್ಯಾಭ್ಯಾಸ

ಎಸ್ ಎಂ ಕೃಷ್ಣ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವೀಧರರಾದ ನಂತರ ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಓದಿದರು. ಇದರ ನಂತರ ಅಮೆರಿಕದ ಟೆಕ್ಸಸ್ ರಾಜ್ಯದಲ್ಲಿರುವ ಸದರ್ನ್ ಮೆಥಡಿಸ್ಟ್ ವಿಶ್ವವಿದ್ಯಾಲಯದಲ್ಲಿ ಓದಿ ನಂತರ ವಾಷಿಂಗ್ಟನ್ ನಲ್ಲಿರುವ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ ಫುಲ್‍ಬ್ರೈಟ್ ವಿದ್ಯಾರ್ಥಿವೇತನವನ್ನು ಪಡೆದರು.

ರಾಜಕೀಯ ಜೀವನ

ಭಾರತಕ್ಕೆ ಮರಳಿದ ನಂತರ ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಸ್ವಲ್ಪ ಕಾಲ ಅಂತಾರಾಷ್ಟ್ರೀಯ ನ್ಯಾಯದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ವಿಧಾನ ಸಭೆಗೆ ಮೊದಲ ಬಾರಿ ೧೯೬೨ ರಲ್ಲಿ ಚುನಾಯಿತರಾದರು. ೧೯೬೮ರಲ್ಲಿ ಲೋಕಸಭೆಗೆ ಚುನಾಯಿತರಾದರು. ೧೯೭೧ರಲ್ಲಿ ಅಲ್ಲಿಗೆ ಮರು ಚುನಾಯಿತರಾಗಿ ಮತ್ತೆ ೧೯೭೨ ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾಯಿತರಾದರು. ಇದೇ ಸಮಯದಲ್ಲಿ ವಾಣಿಜ್ಯ, ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದರು. ೧೯೮೩ರಲ್ಲು ಉದ್ಯಮ ಖಾತೆ ಮತ್ತು ೧೯೮೪ ರಲ್ಲಿ ವಿತ್ತ ಖಾತೆಯ ಸಚಿವರಾದರು. ೧೯೮೯ ರಿಂದ ೧೯೯೨ರ ವರೆಗೆ ವಿಧಾನಸಭೆಯ ಸ್ಪೀಕರ್ ಆಗಿ ನೇಮಿತರಾದರು. ೧೯೯೨ ರಿಂದ ೧೯೯೪ರ ವರೆಗೆ ಕರ್ನಾಟಕದ ಉಪ-ಮುಖ್ಯಮಂತ್ರಿಗಳಾದರು. ೧೯೯೬ರಲ್ಲಿ ರಾಜ್ಯಸಭೆಗೆ ನೇಮಕಗೊಂಡ ಕೃಷ್ಣ, ೧೯೯೯ ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ೧೯೯೯ರಿಂದಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿದ್ದರು. ವಿದೇಶಗಳಲ್ಲಿ ಎರಡು ಬಾರಿ (ವಿಶ್ವಸಂಸ್ಥೆಯಲ್ಲಿ ಒಮ್ಮೆ, ಮತ್ತು ಕಾಮನ್ ವೆಲ್ತ್ ಒಕ್ಕೂಟದಲ್ಲಿ ಒಮ್ಮೆ) ಭಾರತವನ್ನು ಪ್ರತಿನಿಧಿಸಿದ್ದಾರೆ.

ಎಸ್.ಎಂ.ಕೃಷ್ಣ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ

  • ಜನವರಿ ೨೮ ೨೦೧೭ಬೆಳಿಗ್ಗೆ ೧೧ ಗಂಟೆಗೆ ಎಸ್.ಎಂ.ಕೃಷ್ಣ ಅಧಿಕೃತವಾಗಿ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಘೋಷಣೆ ಮಾಡಿದರು. ಬೆಂಗಳೂರಿನಲ್ಲಿರುವ ತಮ್ಮ ನಿವಾಸದಲ್ಲಿ ತುರ್ತು ಪತ್ರಿಕಾ ಗೋಷ್ಠಿ ನಡೆಸಿ ‘ ಕಾಂಗ್ರೆಸ್ ಪಕ್ಷವನ್ನು ತ್ಯಜಿಸುತ್ತಿದ್ದೇನೆ’ ಎಂದು ಎಸ್‌. ಎಂ. ಕೃಷ್ಣ ಅಧಿಕೃತವಾಗಿ ಘೋಷಣೆ ಮಾಡಿದರು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಸ್.ಎಂ.ಕೃಷ್ಣ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ ಎಂದು ಟಿ.ವಿ.ನೈನ್ ವರದಿ ಮಾಡಿದೆ.

ಉಲ್ಲೇಖಗಳು




Tags:

ಎಸ್.ಎಂ.ಕೃಷ್ಣ ವಿದ್ಯಾಭ್ಯಾಸಎಸ್.ಎಂ.ಕೃಷ್ಣ ರಾಜಕೀಯ ಜೀವನಎಸ್.ಎಂ.ಕೃಷ್ಣ ಉಲ್ಲೇಖಗಳುಎಸ್.ಎಂ.ಕೃಷ್ಣಕರ್ನಾಟಕಪದ್ಮವಿಭೂಷಣಭಾರತೀಯ ಜನತಾ ಪಕ್ಷಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಮಹಾರಾಷ್ಟ್ರ೧೯೯೯೨೦೦೪

🔥 Trending searches on Wiki ಕನ್ನಡ:

ಚ.ಸರ್ವಮಂಗಳಪು. ತಿ. ನರಸಿಂಹಾಚಾರ್ಪ್ರಾಚೀನ ಈಜಿಪ್ಟ್‌ಕೈಗಾರಿಕೆಗಳುಬೇಬಿ ಶಾಮಿಲಿವಿಕ್ರಮಾರ್ಜುನ ವಿಜಯಪುರಂದರದಾಸಕನ್ನಡದಲ್ಲಿ ಕಾದಂಬರಿ ಸಾಹಿತ್ಯಚೆನ್ನಕೇಶವ ದೇವಾಲಯ, ಬೇಲೂರುಭಾರತದ ಮುಖ್ಯ ನ್ಯಾಯಾಧೀಶರುಗದ್ಯವರ್ಣಾಶ್ರಮ ಪದ್ಧತಿವೆಂಕಟೇಶ್ವರ ದೇವಸ್ಥಾನಪ್ಲಾಸಿ ಕದನಮಿಂಚುನಾಡ ಗೀತೆಕ್ಯಾನ್ಸರ್ಟೊಮೇಟೊಸಾವಿತ್ರಿಬಾಯಿ ಫುಲೆಭಾವನಾ(ನಟಿ-ಭಾವನಾ ರಾಮಣ್ಣ)ಕೊಡಗಿನ ಗೌರಮ್ಮಖೊಖೊಬಸವಲಿಂಗ ಪಟ್ಟದೇವರುಕಂಪ್ಯೂಟರ್ಬಾಹುಬಲಿಮದ್ಯದ ಗೀಳುಕರ್ನಾಟಕ ವಿಧಾನ ಸಭೆಪಿರಿಯಾಪಟ್ಟಣಕಾಫಿರ್ಭಾಮಿನೀ ಷಟ್ಪದಿಕನ್ನಡ ರಾಜ್ಯೋತ್ಸವಮುತ್ತುಗಳುಮುಖ್ಯ ಪುಟಧೃತರಾಷ್ಟ್ರಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ಊಳಿಗಮಾನ ಪದ್ಧತಿಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಫೇಸ್‌ಬುಕ್‌ಭಾರತದ ತ್ರಿವರ್ಣ ಧ್ವಜಜಯಚಾಮರಾಜ ಒಡೆಯರ್ಪ್ರಾಥಮಿಕ ಶಾಲೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಕೃಷ್ಣಜೀವವೈವಿಧ್ಯದೀಪಾವಳಿಭಾರತದ ವಾಯುಗುಣಅದ್ವೈತಬೆಟ್ಟದ ನೆಲ್ಲಿಕಾಯಿಸಂಸದೀಯ ವ್ಯವಸ್ಥೆಕಾವೇರಿ ನದಿಬಂಡಾಯ ಸಾಹಿತ್ಯಮಲೆನಾಡುಸುಭಾಷ್ ಚಂದ್ರ ಬೋಸ್ಕರ್ನಾಟಕದ ತಾಲೂಕುಗಳುಕಬಡ್ಡಿಬಿ. ಎಂ. ಶ್ರೀಕಂಠಯ್ಯರಾಜ್ಯಸಭೆಎಕರೆಅರಣ್ಯನಾಶಇಸ್ಲಾಂ ಧರ್ಮಪರಿಸರ ರಕ್ಷಣೆವೇದಮಲಬದ್ಧತೆಆದಿವಾಸಿಗಳುಜೀವಸತ್ವಗಳುಕುಕ್ಕೆ ಸುಬ್ರಹ್ಮಣ್ಯ ದೇವಾಲಯಧಾರವಾಡಗುಪ್ತ ಸಾಮ್ರಾಜ್ಯಸ್ತ್ರೀವಾದತ್ರಿವೇಣಿಭಾರತೀಯ ಅಂಚೆ ಸೇವೆಏಷ್ಯಾಕಲಬುರಗಿಕುರಿ🡆 More