ಎಳ್ಳು

ಎಳ್ಳು
ಎಳ್ಳು
ಎಳ್ಳು
ಎಳ್ಳಿನ ಗಿಡ
Scientific classification
ಸಾಮ್ರಾಜ್ಯ:
ಸಸ್ಯ
(ಶ್ರೇಣಿಯಿಲ್ಲದ್ದು):
ಅಂಜಿಯೋಸ್ಪೆರ್ಮ್ಸ್
(ಶ್ರೇಣಿಯಿಲ್ಲದ್ದು):
ಯೂಡಿಕೋಟ್ಸ್
(ಶ್ರೇಣಿಯಿಲ್ಲದ್ದು):
ಆಸ್ಟೆರಿಡ್ಸ್
ಗಣ:
ಲಾಮಿಯೇಲ್ಸ್
ಕುಟುಂಬ:
ಪೆಡಾಲಿಯೇಸಿಯೆ
ಕುಲ:
ಸೇಸಮಮ್
ಪ್ರಜಾತಿ:
ಎಸ್.ಇಂಡಿಕಮ್
Binomial name
ಸೇಸಮಮ ಇಂಡಿಕಮ್
L.
ಎಳ್ಳು
ಎಳ್ಳಿನ ಬೀಜಗಳು

ಎಳ್ಳು (ಸೆಸಮಮ್ ಇಂಡಿಕಮ್) ಸೆಸಮಮ್ ಪಂಗಡದಲ್ಲಿನ ಒಂದು ಹೂಬಿಡುವ ಸಸ್ಯ. ಆಫ್ರಿಕಾದಲ್ಲಿ ಅಸಂಖ್ಯಾತ ಪ್ರಮಾಣದಲ್ಲಿ ಮತ್ತು ಭಾರತದಲ್ಲಿ ಸಣ್ಣಸಂಖ್ಯೆಯಲ್ಲಿ ಕಾಡುಸಂಬಂಧಿಗಳು ಕಾಣುತ್ತವೆ. ವಿಶ್ವದಾದ್ಯಂತ ಉಷ್ಣವಲಯದ ಪ್ರದೇಶಗಳಲ್ಲಿ ಅದು ವ್ಯಾಪಕವಾಗಿ ದೇಶೀಕರಣಗೊಂಡಿದೆ ಮತ್ತು ಬೀಜಕೋಶಗಳಲ್ಲಿ ಬೆಳೆಯುವ ಅದರ ಖಾದ್ಯ ಬೀಜಗಳಿಗಾಗಿ ಬೇಸಾಯಮಾಡಲಾಗುತ್ತದೆ.

ಎಳ್ಳು: ಪಿಡಾಲಿಯೇಸಿ ಕುಟುಂಬಕ್ಕೆ ಸೇರಿದ ಸೆಸ್ಸಾಮಮ್ ಇಂಡಿಕಮ್ ಎಂಬ ಏಕವಾರ್ಷಿಕ ಸಸ್ಯಪ್ರಭೇದ. ಮಾನವ ಮೊಟ್ಟ ಮೊದಲು ಬೆಳೆದ ಎಣ್ಣೆ ಬೀಜದ ಬೆಳೆಗಳಲ್ಲಿ ಒಂದಾಗಿದೆ. ಎಳ್ಳಿನ ಬೆಳೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ. ಬರ್ಮಾ ದೇಶಕ್ಕೆ ಮೊದಲನೇ ಸ್ಥಾನ. ಏಷ್ಯದ ಇತರ ದೇಶಗಳಲ್ಲಿ ಅಂದರೆ ಸಯಾಮ್, ಇಂಡೊಚೀನ, ಫಾರ್ಮೊಸ, ಜಪಾನ್, ಪ್ಯಾಲೆಸ್ಟೈನ್, ಟರ್ಕಿ ಮತ್ತು ಯುರೋಪಿನ ಮೆಡಿಟರೇನಿಯನ್ ಭಾಗಗಳಲ್ಲಿ, ರಷ್ಯ, ಬ್ರೆಜಿಲ್, ಅರ್ಜಂಟೀನ, ಮೆಕ್ಸಿಕೋ ಮತ್ತು ಆಫ್ರಿಕ ಖಂಡಗಳಲ್ಲೂ ಎಳ್ಳನ್ನು ಬೆಳೆಸುತ್ತಾರೆ. ಈ ಸಸ್ಯದ ಮೂಲದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಇದು ಭಾರತದ ಮೂಲನಿವಾಸಿಯೆಂದು ಜಾತಿಯನ್ನು ಪೂರ್ವಆಫ್ರಿಕದ ಮೂಲನಿವಾಸಿಯೆಂದು ಇನ್ನೂ ಕೆಲವರೂ ವಾದಿಸುವರು. ವೇದಗಳಲ್ಲಿ ತಿಲಪದದ ಪ್ರಯೋಗ, ಪುರ್ವ ಅಪರ ಕರ್ಮಗಳಲ್ಲಿ ತಿಲದ ಪ್ರಾಮುಖ್ಯ ಕಂಡುಬಂದಿದೆ. ಹೇಗೇ ಆಗಲಿ ಅದು ಕ್ರಮ ಕ್ರಮವಾಗಿ ಉಷ್ಣವಲಯ ಮತ್ತು ದಕ್ಷಿಣ ಸಮಶೀತೋಷ್ಣವಲಯಗಳಲ್ಲಿ ಹರಡಿತೆಂದು ನಂಬಲಾಗಿದೆ. ಬೆಳೆಯ ಅವಧಿ ಎರಡೂವರೆಯಿಂದ ಆರು ತಿಂಗಳವರೆಗೆ. ಗಿಡ ಸುಮಾರು ಎರಡರಿಂದ ಐದು ಅಡಿ ಎತ್ತರಕ್ಕೆ ನೇರವಾಗಿ ಬೆಳೆಯುತ್ತದೆ. ರೆಂಬೆಗಳು ಅನೇಕ, ಮೊಟ್ಟೆಯಾಕಾರದ ಅಥವಾ ಭರ್ಜಿ ಆಕಾರದ ಎಲೆಗಳು ಕಾಂಡದ ಕೆಳಭಾಗದಲ್ಲಿ ಅಭಿಮುಖ ಜೋಡಣೆಯಿಂದ ಕೂಡಿರುತ್ತವೆ. ಮೇಲ್ಭಾಗದಲ್ಲಿ ಪರ್ಯಾಯ ಜೋಡಣೆ ಕಂಡು ಬರುತ್ತದೆ. ಬಿತ್ತನೆಯಾದ ಆರು ವಾರಗಳಲ್ಲಿ ಒಂದರಿಂದ ಮೂರು ಆಕರ್ಷಕ ಬಿಳಿಯ ಹೂಗಳು ಮೂಡುತ್ತವೆ. ಹೂವಿನಲ್ಲಿ ದಳಗಳು ಕೂಡಿಕೊಂಡು ಕೊಳವೆಯೋಪಾದಿಯಲ್ಲಿದ್ದು ತುದಿಯಲ್ಲಿ ಹರಡಿಕೊಂಡಿರುತ್ತದೆ. ಬಣ್ಣ ಬಿಳಿಯಾದರೂ ಬಿಳಿಯಿಂದ ದಟ್ಟ ನೀಲಿಯವರೆಗೆ ಬಣ್ಣ ವ್ಯತ್ಯಾಸ ಕಂಡುಬರುತ್ತದೆ. ಕೇಸರಗಳು ನಾಲ್ಕು. ಅವುಗಳಲ್ಲಿ ಎರಡು ಚಿಕ್ಕವು, ಎರಡು ದೊಡ್ಡವು. ಅಂಡಾಶಯ ಉಚ್ಚಸ್ಥಾನದ್ದಾಗಿದ್ದು ಇಬ್ಭಾಗದ ಎರಡು ಜೋಡಣೆಗಳಿಂದ ಕೂಡಿದೆ. ಕಾಯಿ ಸಂಪುಟ (ಕ್ಯಾಪ್ಸುಲ್) ಮಾದರಿಯದು. ಆಕಾರ ನೀಳ ಚತುರ್ಭುಜಾಕೃತಿ. ಉದ್ದ ಒಂದರಿಂದ ಎರಡು ಇಂಚು, ಸುತ್ತಳತೆ ಅರ್ಧದಿಂದ ಒಂದು ಇಂಚು, ಒಳಗೆ ಎರಡು ಕೋಣೆಗಳಿದ್ದು ಅನಂತರ ನಾಲ್ಕಾಗುತ್ತವೆ. ಬೀಜ ಗಾತ್ರದಲ್ಲಿ ಚಿಕ್ಕವಾದರೂ ಪ್ರತಿ ಕಾಯಲ್ಲೂ ಅಧಿಕ ಸಂಖ್ಯೆಯಲ್ಲಿರುತ್ತವೆ. ಆಕಾರ ಚಪ್ಪಟೆ, ಬಣ್ಣ ಅನೇಕ, ಬಿಳುಪು, ಮಾಸಲು ಬಿಳುಪು, ಸ್ವಲ್ಪ ಕಪ್ಪು, ಕಂದು ಕಪ್ಪು ಹೀಗೆ ಬೇರೆ ಬೇರೆ ಪ್ರಭೇದದ ಬೇರೆ ಬೇರೆ ತಳಿಗಳು ಬೇರೆ ಬೇರೆ ಬಣ್ಣ ಹೊಂದಿರುತ್ತವೆ.

ಕರ್ನಾಟಕ ರಾಜ್ಯದಲ್ಲಿ ಫೆಬ್ರವರಿಯಿಂದ ಮಾರ್ಚ್ ವರೆಗೆ ನೀರಾವರಿಯಿಂದ ಬಿತ್ತನೆ ಮಾಡುವುದನ್ನು ಕಾರು ಎಳ್ಳು ಎಂದು ಕರೆಯುತ್ತಾರೆ. ಇದು ಸ್ವಲ್ಪ ಕಂದು ಬಣ್ಣದ ಬೀಜದ ತಳಿ. ಕಪ್ಪು ಬಣ್ಣದವೂ ಇವೆ. ಪ್ರಮುಖ ತಳಿಗಳ ಬೀಜಗಳನ್ನು ಜೂನ್ ಅಥವಾ ಜುಲೈ ಮಧ್ಯದಲ್ಲಿ ಬಿತ್ತಿ ಅಕ್ಟೋಬರ್ ಅಥವಾ ನವಂಬರ್ ತಿಂಗಳಲ್ಲಿ ಒಕ್ಕಣೆ ಮಾಡುತ್ತಾರೆ. ಇವು ಕಂದು ಮತ್ತು ಕಪ್ಪು ಬೀಜಗಳುಳ್ಳ ತಳಿಗಳು. ಬಿಳಿಯ ಮತ್ತು ಮಾಸಲು ಬಿಳಿಯ ಜಾತಿಯನ್ನು ಸೆಪ್ಟೆಂಬರಿನಲ್ಲಿ ಬಿತ್ತಿ ಡಿಸೆಂಬರಿನಲ್ಲಿ ಒಕ್ಕಣೆ ಮಾಡುತ್ತಾರೆ. ಎಳ್ಳಿನ ಬೀಜದಲ್ಲಿ ಶೇಕಡ ನಲವತ್ತೈದರಿಂದ ಅರವತ್ತುಮೂರು ಭಾಗ ಎಣ್ಣೆ, ಹದಿನಾರರಿಂದ ಮೂವತ್ತೆರಡು ಭಾಗ ಸಾರಜನಕ ಇದೆ. ಭಾರತದಲ್ಲಿ ಹುರಿದ ಅಥವಾ ಹಸಿಯ ಎಳ್ಳು ಬೀಜವನ್ನು ಅನೇಕ ಸಿಹಿತಿಂಡಿಗೆ ಉಪಯೋಗಿಸುತ್ತಾರೆ. (ಜಿ.ಬಿ.;ಡಿ.ಜಿ.)

ಎಳ್ಳಿನ ಎಣ್ಣೆಯನ್ನು ಹೆಚ್ಚಾಗಿ ಅಡಿಗೆಗೆ ಉಪಯೋಗಿಸುತ್ತಾರೆ. ಎಣ್ಣೆ ಬೇಗ ಕಮಟು ಹಿಡಿಯದು, ಕಟುವಾದ ಯಾವ ವಾಸನೆಯೂ ಇಲ್ಲ. ತನ್ನೊಡನೆ ಬೆರೆತ ಇತರ ವಸ್ತುಗಳ ಪರಿಮಳವನ್ನು ಇದು ಸುಲಭವಾಗಿ ಹೀರಿಕೊಳ್ಳುತ್ತದೆ. ಕಿತ್ತಳೆ, ನಿಂಬೆ, ಮಲ್ಲಿಗೆ ಮತ್ತು ಇತರ ಹೂವಿನ ಸುಗಂಧವನ್ನು ತಯಾರಿಸಲು ಇದನ್ನು ಮಾಧ್ಯಮವಾಗಿ ಬಳಸುತ್ತಾರೆ. ಯುರೋಪಿನಲ್ಲಿ ಆರು ಲೀಟರ್ ಎಣ್ಣೆಗೆ ಒಂದು ಕಿಗ್ರಾಂ ಹೂವನ್ನು ಬೆರೆಸಿ, ನಲವತ್ತು ಗಂಟೆ ಇಟ್ಟು ಸುಗಂಧವನ್ನು ತಯಾರಿಸುತ್ತಾರೆ. ಎಳ್ಳು ಎಣ್ಣೆಯನ್ನು ಆಲಿವ್ ಎಣ್ಣೆಯ ಜೊತೆ ಬೆರೆಸಿ ಮಾರುವುದೂ ಉಂಟು, ವನಸ್ಪತಿ, ಕೃತಕ ತುಪ್ಪ, ಸಾಬೂನು ಮತ್ತು ಅನೇಕ ಔಷಧಿಗಳಿಗೂ ಇದನ್ನು ಉಪಯೋಗಿಸುತ್ತಾರೆ. ಎಣ್ಣೆಯಲ್ಲಿ ಸಂಪುರ್ಣ ಆಮ್ಲಗಳು (ಸ್ಯಾಚುರೇಟೆಡ್ ಆಸಿಡ್ಸ್‌) ಶೇ. 12, ಅಸಂಪೂರ್ಣ ಆಮ್ಲಗಳು ಶೇ. 81, ಇತರ ವಸ್ತುಗಳು ಶೇ. 1.7 ಇರುತ್ತವೆ.

ಲಿನೋಲೀಯಿಕ್ ಮತ್ತು ಒಲೀಯಿಕ್ ಆಮ್ಲಗಳೇ ಪ್ರಧಾನ, 0.1 ಗ್ರಾಮು ಪುಡಿ ಮಾಡಿದ ಸಕ್ಕರೆ ಮತ್ತು 100 ಮಿಲಿಲೀಟರ್ ಮದ್ಯಸಾರ ಬೆರೆಸಿ, 0.1 ಮಿಲಿಲೀಟರ್ ಮಿಶ್ರಣಕ್ಕೆ 10 ಮಿಲಿ ಹೈಡ್ರೋಕ್ಲೋರಿಕ್ ಆಮ್ಲ ಮತ್ತು 10 ಮಿಲಿ ಎಣ್ಣೆ ಹಾಕಿ ಕಲಕಿದರೆ ಕಡು ಕೆಂಪು ಬಣ್ಣ ಬರುತ್ತದೆ. ಇದಕ್ಕೆ ನೀರು ಬೆರೆಸಿದರೂ ಬಣ್ಣ ನಷ್ಟವಾಗುವುದಿಲ್ಲ. ಈ ರೀತಿ ಎಳ್ಳೆಣ್ಣೆಯನ್ನು ಸುಲಭವಾಗಿ ಗುರುತಿಸಬಹುದು. ಇತರ ಯಾವ ಎಣ್ಣೆಗಳಿಗೂ ಈ ಬಣ್ಣ ಅಂಟುವುದಿಲ್ಲ. ಇದಕ್ಕೆ ಬೊಡಾಯಿನ್ ಟೆಸ್ಟ್‌ ಎಂದು ಹೆಸರು. ಎಳ್ಳು ಹಿಂಡಿ ಜಾನುವಾರುಗಳಿಗೆ ಒಳ್ಳೆಯ ಮೇವು; ನೆಲಕ್ಕೆ ಒಳ್ಳೆಯ ಗೊಬ್ಬರ. (ವೈ.ಎಸ್.ಎಲ್.)

ಎಳ್ಳು ಬೆಳೆಗೆ ಆಂಟೆಗ್ಯಾಸ್ಟರ್ ಕ್ಯಾಟೆಲನಾಲಿಸ್ ಎಂಬ ಕಂಬಳಿ ಹುಳುಗಳು ಹತ್ತಿ ಎಲೆಗಳನ್ನು ತಿಂದು ಕಾಂಡ ಮತ್ತು ಕಾಯಿಗಳನ್ನು ಹಾಳುಮಾಡುತ್ತವೆ. ಆಸ್ಪೆನೊಡೈಲಿಯ ಸಿಸ್ಸೆಮಿ ಕೀಟದ ಚಿಟ್ಟೆ ಹೂವಿನ ಮೊಗ್ಗನ್ನು ತಿಂದು ಹಾಕುತ್ತದೆ. ಇವುಗಳ ಜೊತೆಗೆ ರಸ ಕುಡಿಯುವ ಬಲ್ಬ್‌ ಮತ್ತು ಎಫಿಡ್ಡುಗಳೂ ಬೆಳೆ ಹಾಳು ಮಾಡುತ್ತವೆ. ಎಲೆಗಳಿಗೆ ಸರ್ಕೊಸ್ಟೊರ ಎಂಬ ಬೂಷ್ಟು ರೋಗ ಬಂದರೆ ಬೂದು ಬಣ್ಣದ ಅಥವಾ ಕಪ್ಪು ಕಂದು ಬಣ್ಣದ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಈ ರೋಗ ತಗುಲಿದರೆ ಬೆಳೆಗೆ ತೀರ ಹಾನಿಯಾಗುವುದು. ಕೆಲವು ರಾಸಾಯನಿಕ ಕ್ರಿಮಿನಾಶಕಗಳಿಂದ ಈಚೆಗೆ ಈ ಪಿಡುಗುಗಳನ್ನು ಹತೋಟಿ ಗೊಳಿಸಲಾಗಿದೆ. (ಜಿ.ಬಿ)

ಉತ್ಪಾದನೆ ಮತ್ತು ವ್ಯಾಪಾರ

ಪ್ರಪಂಚದ ಹತ್ತು ಎಳ್ಳು ಉತ್ಪಾದನಾ ದೇಶಗಳು-೨೦೧೦
ದೇಶ ಉತ್ಪಾದನೆ
(ಮಿಲಿಯ ಟನ್‍ಗಳು)
ಉತ್ಪಾದನೆ
(ಟನ್/ಹೆಕ್ಟೇರ್)
ಎಳ್ಳು  ಬರ್ಮಾ 0.72 0.46
ಎಳ್ಳು  ಭಾರತ 0.62 0.34
ಎಳ್ಳು  ಚೀನಾ 0.59 1.22
ಎಳ್ಳು  ಇಥಿಯೊಪಿಯ 0.31 0.99
ಎಳ್ಳು  ಸುಡಾನ್ 0.25 0.19
ಎಳ್ಳು  ಉಗಾಂಡ 0.17 0.61
ಎಳ್ಳು  ನೈಜೀರಿಯ 0.12 0.38
ಎಳ್ಳು  ಬುರ್ಕೀನ ಫಾಸೊ 0.09 0.72
ಎಳ್ಳು  ನೈಜರ್ 0.09 0.50
ಎಳ್ಳು  ಸೊಮಾಲಿಯ 0.07 0.96
ಪ್ರಪಂಚದ ಒಟ್ಟು 3.84 0.49
ಎಳ್ಳು 
ಪ್ರಪಂಚದ ಎಳ್ಳಿನ ಉತ್ಪಾದನೆ-೨೦೦೫

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಚಾಣಕ್ಯಶಾತವಾಹನರುಗೀತಾ ನಾಗಭೂಷಣಭಾರತದ ಬ್ಯಾಂಕುಗಳ ಪಟ್ಟಿಮಲೈ ಮಹದೇಶ್ವರ ಬೆಟ್ಟರಾಯಲ್ ಚಾಲೆಂಜರ್ಸ್ ಬೆಂಗಳೂರುಊಳಿಗಮಾನ ಪದ್ಧತಿಮಯೂರಶರ್ಮಯಜಮಾನ (ಚಲನಚಿತ್ರ)ಭಾರತದ ಉಪ ರಾಷ್ಟ್ರಪತಿಮಾನವನ ನರವ್ಯೂಹವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ವಿಧಾನ ಪರಿಷತ್ತುಚಂದ್ರಗುಪ್ತ ಮೌರ್ಯಪಶ್ಚಿಮ ಬಂಗಾಳಅಂಬಿಗರ ಚೌಡಯ್ಯವಿಕಿಪೀಡಿಯವಾಸ್ತವಿಕವಾದಭಾರತದ ರಾಷ್ಟ್ರಪತಿಸಂಸದೀಯ ವ್ಯವಸ್ಥೆಭಾರತದಲ್ಲಿ ಮೀಸಲಾತಿಭಾರತದ ಮುಖ್ಯಮಂತ್ರಿಗಳುವಿಕ್ರಮಾರ್ಜುನ ವಿಜಯಹಲ್ಮಿಡಿ ಶಾಸನಹಾಸನ ಜಿಲ್ಲೆಭಾರತದ ಸಂವಿಧಾನ ರಚನಾ ಸಭೆಪಂಚಾಂಗಸಾಲುಮರದ ತಿಮ್ಮಕ್ಕಭಾರತೀಯ ಭಾಷೆಗಳುಅಕ್ಬರ್ಕಲಿಯುಗಕನ್ನಡದಲ್ಲಿ ಗದ್ಯ ಸಾಹಿತ್ಯನಂಜನಗೂಡುಭಾರತದ ಸ್ವಾತಂತ್ರ್ಯ ದಿನಾಚರಣೆಮದುವೆಅಲಂಕಾರಅಡೋಲ್ಫ್ ಹಿಟ್ಲರ್ನಾಡ ಗೀತೆಯೋಗದ್ವಂದ್ವ ಸಮಾಸಮೈಸೂರು ದಸರಾಪರಿಸರ ವ್ಯವಸ್ಥೆಕಬಡ್ಡಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಕುಕ್ಕೆ ಸುಬ್ರಹ್ಮಣ್ಯ ದೇವಾಲಯಕನ್ನಡದ ಉಪಭಾಷೆಗಳುಕಾವ್ಯಮೀಮಾಂಸೆಪರೀಕ್ಷೆಕೇಂದ್ರಾಡಳಿತ ಪ್ರದೇಶಗಳುರಾಮಾಚಾರಿ (ಕನ್ನಡ ಧಾರಾವಾಹಿ)ಆತ್ಮರತಿ (ನಾರ್ಸಿಸಿಸಮ್‌)ಆಗಮ ಸಂಧಿಸಮುದ್ರಜಶ್ತ್ವ ಸಂಧಿಏಷ್ಯಾಶೈಕ್ಷಣಿಕ ಮನೋವಿಜ್ಞಾನಯಶ್(ನಟ)ಭಾರತದ ಸ್ವಾತಂತ್ರ್ಯ ಚಳುವಳಿಭಾರತದ ರೂಪಾಯಿಕರ್ನಾಟಕದ ಮುಖ್ಯಮಂತ್ರಿಗಳುಜಯಮಾಲಾಕೆಂಬೂತ-ಘನಸಂಚಿ ಹೊನ್ನಮ್ಮಎಲಾನ್ ಮಸ್ಕ್ಇನ್ಸ್ಟಾಗ್ರಾಮ್ಕರ್ನಾಟಕಕರ್ಣಭಾರತ ಸಂವಿಧಾನದ ಪೀಠಿಕೆವಿಜ್ಞಾನಭೂತಾರಾಧನೆಕಲಿಕೆಭಾರತದ ವಾಯುಗುಣರಾಷ್ಟ್ರೀಯ ಉತ್ಪನ್ನಭಾರತದ ಮುಖ್ಯ ನ್ಯಾಯಾಧೀಶರುಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಕೊಡಗುಪಂಚ ವಾರ್ಷಿಕ ಯೋಜನೆಗಳುನಯಸೇನ🡆 More