ಎಲ್. ಎಸ್. ಶೇಷಗಿರಿ ರಾವ್

ಎಲ್.ಎಸ್.ಶೇಷಗಿರಿರಾವ್ (೧೯೨೫ ಫೆಬ್ರುವರಿ ೧೬ - ೨೦ ಡಿಸೆಂಬರ್ ೨೦೧೯) ಅವರು ಕನ್ನಡದ ಒಬ್ಬ ಹಿರಿಯ ಸಾಹಿತಿ, ವಿಮರ್ಶಕ ಮತ್ತು ನಿಘಂಟು ತಜ್ಞರು.

ಎಲ್. ಎಸ್. ಶೇಷಗಿರಿ ರಾವ್
ಚಿತ್ರ[[File:|200px]]
ಜನನದ ದಿನಾಂಕ೧೬ ಫೆಬ್ರವರಿ 1925
ಸಾವಿನ ದಿನಾಂಕ೨೦ ಡಿಸೆಂಬರ್ 2019
ವೃತ್ತಿಲೇಖಕ
ರಾಷ್ಟ್ರೀಯತೆಭಾರತ, ಭಾರತೀಯ ಪ್ರಭುತ್ವ
ಮಾತನಾಡುವ ಅಥವಾ ಬರೆಯುವ ಭಾಷೆಗಳುಕನ್ನಡ
ಪೌರತ್ವಭಾರತ, ಭಾರತೀಯ ಪ್ರಭುತ್ವ
ದೊರೆತ ಪ್ರಶಸ್ತಿಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಲಿಂಗಪುರುಷ

ಜೀವನ

ಎಲ್.ಎಸ್.ಶೇಷಗಿರಿರಾವ್ ಅವರು ೧೯೨೫ ಫೆಬ್ರುವರಿ ೧೬ರಂದು ಬೆಂಗಳೂರಿನಲ್ಲಿ ಜನಿಸಿದರು. ಮೂಲತಃ ದೇಶಪಾಂಡೆ ಮನೆತನದವರಾದ ಇವರ ತಂದೆ, ಲಕ್ಷ್ಮೇಶ್ವರ ಸ್ವಾಮಿರಾಯರು. ಶೇಷಗಿರಿರಾಯರು, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಏ.(ಗೌರವ) ಪದವಿ ಪರೀಕ್ಷೆಯಲ್ಲಿ ಪ್ರಥಮ ತರಗತಿಯಲ್ಲಿ ಉತ್ತೀರ್ಣರಾದರು. ಎಚ್.ವಿ. ನಂಜುಂಡಯ್ಯ ಚಿನ್ನದ ಪದಕ ಪಡೆದ ಮೊದಲ ವಿದ್ಯಾರ್ಥಿ ಇವರು.ತದನಂತರ ಬೆಂಗಳೂರು ಇಂಟರಮೀಡಿಯೆಟ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾದರು.

ಸಾಹಿತ್ಯ ಸೇವೆ

೧೯೪೮ರಲ್ಲಿ ಶೇಷಗಿರಿರಾವ್ ಅವರ ಮೊದಲ ಕಥಾಸಂಕಲನ “ ಇದು ಜೀವನ ” ಪ್ರಕಟವಾಯಿತು. ಕನ್ನಡ ಸಾರಸ್ವತಲೋಕದಲ್ಲಿ ತಮ್ಮದೆ ಒಂದು ಛಾಪನ್ನು ಸ್ಥಾಪಿಸಿರುವ ಎಲ್. ಎಸ್. ಎಸ್, ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಮಾಡಿರುವ ಕಾರ್ಯಗಳು ನಿಜಕ್ಕೂ ಶ್ಲಾಘನೀಯ. ನೂರಾರು ಚಿಕ್ಕ-ಪುಟ್ಟ ಹೊತ್ತಿಗೆಗಳನ್ನು ಅವರು ರಾಷ್ಶ್ಟೋತ್ಥಾನ ಪರಿಷತ್ ವತಿಯಿಂದ ಪ್ರಕಟಿಸಿದ್ದಾರೆ. ಇದು ಮಕ್ಕಳ ಜ್ಞಾನವರ್ಧನೆಗೆಂದು ಹಮ್ಮಿಕೊಂಡ ಕೆಲಸವಾಗಿತ್ತು. ಅದರ ಬೆಲೆ ಕೇವಲ, ೭೫ ಪೈಸೆಗಳು. ಈ ಪುಸ್ತಕಗಳು ಹಿರಿಯರಿಗೂ, ಅತ್ಯಂತ ಉಪಯುಕ್ತಮಾಹಿತಿಗಳನ್ನು ಕೊಟ್ಟಿವೆ. ತುಂಬಾ ಚೆನ್ನಾಗಿವೆ. ರಾಯರ ಸಂಪಾದನೆಯ ಚಟುವಟಿಕೆಯಲ್ಲಿ, ಬೆಂಗಳೂರು ದರ್ಶನ ಸಂಪುಟಗಳು, ಅತ್ಯಂತ ಉಪಯುಕ್ತಮಾಹಿತಿಗಳನ್ನು ಬೆಂಗಳೂರಿನ ಜನರಿಗೆ ಕೊಟ್ಟಿವೆ. ವಿಶ್ವಕೋಶದತರಹವೇ ಸಂಯೋಜಿಸಿರುವ ಈ ಬೃಹದ್ ಸಂಪುಟಗಳು, ಅತ್ಯಂತ ಶ್ರಮವಹಿಸಿ, ವಿದ್ವಾಂಸರಿಂದ ತಯಾರಿಸಲ್ಪಟ್ಟ ಮಾಹಿತಿಗಳು. ಪ್ರತಿಯೊಬ್ಬ ಬೆಂಗಳೂರಿನ ನಾಗರಿಕನ ಮನೆಯಲ್ಲೂ ಪಡಸಾಲೆಯ ಕಪಾಟಿನ ಶೋಭೆಯನ್ನು ವಿಜೃಂಭಿಸುವ ಕೃತಿಗಳಿವು.

ಪ್ರಮುಖ ಕೃತಿಗಳು

ಸಣ್ಣಕಥೆಗಳ ಸಂಕಲನಗಳು

  1. ಇದು ಜೀವನ
  2. ಜಂಗಮ ಜಾತ್ರೆಯಲ್ಲಿ
  3. ಮುಟ್ಟಿದ ಗುರಿ ಮತ್ತು ಇತರ ಕಥೆಗಳು
  4. ಮುಯ್ಯಿ

ಸಾಹಿತ್ಯ ವಿಮರ್ಶೆ

  1. ಕಾದಂಬರಿ-ಸಾಮಾನ್ಯಮನುಷ್ಯ
  2. ಆಲಿವರ್ ಗೋಲ್ಡ್ ಸ್ಮಿತ್
  3. ಮಾಸ್ತಿ ವೆಂಕಟೇಶ ಐಯ್ಯಂಗಾರ್
  4. ಇಂಗ್ಲೀಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ

ವಿಮರ್ಶೆ

  1. ಪಾಶ್ಚಾತ್ಯಸಾಹಿತ್ಯ ವಿಹಾರ
  2. ಸಾಹಿತ್ಯ ವಿಶ್ಲೇಷಣೆ
  3. ಹೊಸಗನ್ನಡ ಸಾಹಿತ್ಯ ಚರಿತ್ರೆ
  4. ಫ್ರಾನ್ಸ್ ಕಾಫ್ಕಾ
  5. ಗ್ರೀಕ್ ರಂಗಭೂಮಿ ಮತ್ತು ನಾಟಕ
  6. ವಿಲಿಯಮ್ ಶೇಕ್ಸ್ ಪಿಯರ್
  7. ಸಾಹಿತ್ಯ-ಬದುಕು
  8. ಟಿ. ಪಿ. ಕೈಲಾಸಂ
  9. ಪಾಶ್ಚಾತ್ಯ ಮತ್ತು ಭಾರತೀಯಮಹಾಕಾವ್ಯ ಪರಂಪರೆಗಳ ಮನೋಧರ್ಮ
  10. ಮಾಸ್ತಿ : ಜೀವನ ಮತ್ತು ಸಾಹಿತ್ಯ
  11. ಇಂಗ್ಲೀಷ್ ಸಾಹಿತ್ಯ ಚರಿತ್ರೆ
  12. ಸಾಹಿತ್ಯದ ಕನ್ನಡಿಯಲ್ಲಿ
  13. ಪಾಶ್ಚಾತ್ಯಸಾಹಿತ್ಯಲೋಕದಲ್ಲಿ
  14. ಎಲ್. ಎಸ್. ಎಸ್. ಕಂಡ ತ. ರಾ. ಸು.
  15. ಮಹಾಭಾರತ (ನಾಲ್ಕು ಸಂಪುಟಗಳು)

ನಾಟಕಗಳು

  1. ಆಕಾಂಕ್ಷೆ ಮತ್ತು ಆಸ್ತಿ
  2. ಜೀವನ ಚರಿತ್ರೆ
  3. ಸಾರ್ಥಕ ಸುಬೋಧ
  4. ಎಂ. ವಿಶ್ವೇಶ್ವರಯ್ಯ

ನಿಘಂಟುಗಳು

  1. ಐ.ಬಿ.ಎಚ್. ಕನ್ನಡ- ಕನ್ನಡ-ಇಂಗ್ಲೀಷ್ ನಿಘಂಟು
  2. ಐ.ಬಿ.ಎಚ್ ಇಂಗ್ಲೀಷ್-ಕನ್ನಡ ನಿಘಂಟು
  3. ಐ. ಬಿ. ಎಚ್ ಕನ್ನಡ -ಕನ್ನಡ ನಿಘಂಟು
  4. ಸುಭಾಸ್ ಇಂಗ್ಲೀಷ್-ಇಂಗ್ಲೀಷ್-ಕನ್ನಡ ನಿಘಂಟು
  5. ಸುಭಾಶ್ ವಿದ್ಯಾರ್ಥಿ ಮಿತ್ರ ಇಂಗ್ಲೀಷ್-ಕನ್ನಡ್ ನಿಘಂಟು
  6. ಸುಲಭ ಇಂಗ್ಲೀಷ್ (ಏನ್ಗ್ಲಿಶ್ ಮದೆ ಎಅಸ್ಯ್.)

ಇತರೆ

  • ಮಕ್ಕಳ ಸಾಹಿತ್ಯ- ೯ ಕೃತಿಗಳು
  • ಮಕ್ಕಳಿಗಾಗಿ- ೪ ಕೃತಿಗಳು
  • ಇತರ- ೯
  • ಅನುವಾದಿತ- ೪
  • ಸಂಪಾದಿತ- ೯ ಕೃತಿಗಳು
  • ಇಂಗ್ಲೀಷ್ ನಲ್ಲಿ -ಮೂಲ ಅನುವಾದಿತ-ಸಂಪಾದಿತ- ೩೧ ಕೃತಿಗಳು.

ಪ್ರಶಸ್ತಿ, ಪುರಸ್ಕಾರಗಳು

  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
  • ಸಾಹಿತ್ಯಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ.
  • ವರ್ಧಮಾನ ಪ್ರಶಸ್ತಿ.
  • ಡಾ. ಅ.ನ.ಕೃ. ಪ್ರಶಸ್ತಿ.
  • ಬಿ.ಎಮ್.ಶ್ರೀ ಪ್ರಶಸ್ತಿ.
  • ಬಿ.ಎಮ್.ಇನಾಮದಾರ ಪ್ರಶಸ್ತಿ.
  • ಕಾವ್ಯಾನಂದ ಪ್ರಶಸ್ತಿ.
  • ದೇವರಾಜ ಬಹಾದ್ದೂರ ಪ್ರಶಸ್ತಿ.
  • ಮಾಸ್ತಿ ಪ್ರಶಸ್ತಿ.
  • ೨೦೦೭ ರ ಕರ್ನಾಟಕ ಸಾಹಿತ್ಯ ಸಮ್ಮೆಲನದ ಅದ್ಯಕ್ಶರಾಗಿದ್ದರು (ಉಡುಪಿ)

ನಿಧನ

೨೦ಡಿಸೆಂಬರ್೨೦೧೯ರಂದು ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು

ಉಲ್ಲೇಖಗಳು

ಹೊರಸಂಪರ್ಕಕೊಂಡಿಗಳು

Tags:

ಎಲ್. ಎಸ್. ಶೇಷಗಿರಿ ರಾವ್ ಜೀವನಎಲ್. ಎಸ್. ಶೇಷಗಿರಿ ರಾವ್ ಸಾಹಿತ್ಯ ಸೇವೆಎಲ್. ಎಸ್. ಶೇಷಗಿರಿ ರಾವ್ ಪ್ರಶಸ್ತಿ, ಪುರಸ್ಕಾರಗಳುಎಲ್. ಎಸ್. ಶೇಷಗಿರಿ ರಾವ್ ನಿಧನಎಲ್. ಎಸ್. ಶೇಷಗಿರಿ ರಾವ್ ಉಲ್ಲೇಖಗಳುಎಲ್. ಎಸ್. ಶೇಷಗಿರಿ ರಾವ್ ಹೊರಸಂಪರ್ಕಕೊಂಡಿಗಳುಎಲ್. ಎಸ್. ಶೇಷಗಿರಿ ರಾವ್

🔥 Trending searches on Wiki ಕನ್ನಡ:

ಒಡೆಯರ್ಹಿರಿಯಡ್ಕಕನ್ನಡ ಅಕ್ಷರಮಾಲೆಮಧುಮೇಹಬ್ಯಾಡ್ಮಿಂಟನ್‌ಕ್ಯಾನ್ಸರ್ಮಂಕುತಿಮ್ಮನ ಕಗ್ಗಭಾರತದ ಆರ್ಥಿಕ ವ್ಯವಸ್ಥೆಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಕವಿರಾಜಮಾರ್ಗಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಸಂವತ್ಸರಗಳುಗೋಪಾಲಕೃಷ್ಣ ಅಡಿಗವಚನ ಸಾಹಿತ್ಯಅಷ್ಟ ಮಠಗಳುಹಂಸಲೇಖಅರವಿಂದ ಘೋಷ್ಪ್ರಾಚೀನ ಈಜಿಪ್ಟ್‌ಕುವೆಂಪುತ್ರಿಪದಿಸಾಸಿವೆಕೇಂದ್ರಾಡಳಿತ ಪ್ರದೇಶಗಳುಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಮಹಾಭಾರತವಾಸ್ತವಿಕವಾದಉದಯವಾಣಿಭಾರತದ ಮುಖ್ಯಮಂತ್ರಿಗಳುಚುನಾವಣೆಹುಲಿರಾಷ್ಟ್ರೀಯತೆಏಳು ಪ್ರಾಣಾಂತಿಕ ಪಾಪಗಳುಬೆಳ್ಳುಳ್ಳಿದ್ವಿಗು ಸಮಾಸಭಾರತೀಯ ಜನತಾ ಪಕ್ಷಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಉಪ್ಪಿನ ಸತ್ಯಾಗ್ರಹಝಾನ್ಸಿ ರಾಣಿ ಲಕ್ಷ್ಮೀಬಾಯಿಭೂಕಂಪದ.ರಾ.ಬೇಂದ್ರೆಭೀಷ್ಮಮೆಕ್ಕೆ ಜೋಳಶಾಸ್ತ್ರೀಯ ಭಾಷೆಹೊಂಗೆ ಮರಕದಂಬ ಮನೆತನಚದುರಂಗದ ನಿಯಮಗಳುಚಂಪೂಭೂಮಿಹಿಂದುಸ್ತಾನಿ ಶಾಸ್ತ್ರೀಯ ಸಂಗೀತಭಾರತದ ವಾಯುಗುಣಸ್ವಾತಂತ್ರ್ಯಗೂಗಲ್ಸುಭಾಷ್ ಚಂದ್ರ ಬೋಸ್ಬಬಲಾದಿ ಶ್ರೀ ಸದಾಶಿವ ಮಠಯು.ಆರ್.ಅನಂತಮೂರ್ತಿಗಣರಾಜ್ಯೋತ್ಸವ (ಭಾರತ)ವೇದಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಶನಿಸಾವಿತ್ರಿಬಾಯಿ ಫುಲೆಮುಪ್ಪಿನ ಷಡಕ್ಷರಿಮಂಗಳ (ಗ್ರಹ)ರೈತಗುಪ್ತ ಸಾಮ್ರಾಜ್ಯತೇಜಸ್ವಿ ಸೂರ್ಯಛತ್ರಪತಿ ಶಿವಾಜಿಸುಧಾ ಮೂರ್ತಿಹಸಿರುಭಾರತದ ವಿಶ್ವ ಪರಂಪರೆಯ ತಾಣಗಳುಸೀತೆರಾಷ್ಟ್ರೀಯ ಜನತಾ ದಳಚಿಲ್ಲರೆ ವ್ಯಾಪಾರಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಬಿ.ಎಲ್.ರೈಸ್ಸಮಾಜ ವಿಜ್ಞಾನಬಾವಲಿಭಾರತಆಂಡಯ್ಯ🡆 More