ಎಚ್.ಎನ್.ಗಿರೀಶ್

ಹೊಸನಗರ ನಾಗರಾಜೇಗೌಡ ಗಿರೀಶ್ , ( ಹುಟ್ಟು -೨೬ ಜನವರಿ ೧೯೮೮) ಕ್ರೀಡಾಪಟುವಾಗಿದ್ದಾರೆ.

ಅವರ ಎಡಗಾಲು ಹುಟ್ಟಿನಿಂದಲೇ ಊನವಾಗಿದೆ. ಇವರು ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊಸನಗರದವರು. ಗಿರೀಶ್ ೨೦೦೬ರಿಂದ ರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುತ್ತಾ ಬಂದಿದ್ದಾರೆ. . ಅಂತರರಾಷ್ಟ್ರೀಯ ಕೂಟಗಳಲ್ಲೂ ಪದಕದ ಸಾಧನೆ ಮಾಡಿದ್ದಾರೆ. ಅವರು ಲಂಡನ್ನಲ್ಲಿ ನಡೆದ ೨೦೧೨ರ ಪ್ಯಾರಾಲಿಂಪಿಕ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿ F-42 ವರ್ಗದಲ್ಲಿ ಪುರುಷರ ಎತ್ತರದ ಜಿಗಿತದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ . ಕತ್ತರಿ ತಂತ್ರವನ್ನು ಬಳಸಿಕೊಂಡು ೧.೭೪ ಮೀಟರ್ ಜಿಗಿದು ಫೈನಲ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಅವರು ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆದ್ದ ಎಂಟನೇ ಭಾರತೀಯರಾದರು.

ಎಚ್.ಎನ್.ಗಿರೀಶ್
ಎಚ್.ಎನ್.ಗಿರೀಶ್
Girisha Nagarajegowda
ವೈಯುಕ್ತಿಕ ಮಾಹಿತಿ
ಪುರ್ಣ ಹೆಸರುಗಿರೀಶ್ ಹೊಸನಗರ ನಾಗರಾಜೇಗೌಡ
ಜನನ (1988-01-26) ೨೬ ಜನವರಿ ೧೯೮೮ (ವಯಸ್ಸು ೩೬)
Sport
ದೇಶಎಚ್.ಎನ್.ಗಿರೀಶ್ ಭಾರತ
ಕ್ರೀಡೆಅಥ್ಲೆಟಿಕ್ಸ್
ಸ್ಪರ್ಧೆಗಳು(ಗಳು)ಹೈ ಜಂಪ್ - ಎಫ್೪೨
Achievements and titles
ಪ್ಯಾರಲಂಪಿಕ್ ಫ಼ೈನಲ್‌ಗಳು೨೦೧೨ ಬೇಸಿಗೆ ಪ್ಯಾರಒಲಂಪಿಕ್ಸ್: ಹೈ ಜಂಪ್(ಎಫ್೪೨) – ಬೆಳ್ಳಿ

ಆರಂಭಿಕ ಯಶಸ್ಸು

ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟವೊಂದರಲ್ಲಿ ಅವರು ಸಾಮಾನ್ಯ ಕ್ರೀಡಾಪಟುಗಳೊಂದಿಗೆ ಸ್ಪರ್ಧಿಸಿ ಒಂದು ಬಹುಮಾನ ಪಡೆದು ಗಿರೀಶರು ಯಶಸ್ಸಿನ ಮೊದಲ ರುಚಿಯನ್ನು ನೋಡಿದರು. ನಂತರ ಮೈಸೂರು ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಒಂದು ಕಂಚಿನ ಪದಕ ಗೆದ್ದಿದ್ದಾರೆ. ನಂತರ ರಾಷ್ಟ್ರೀಯ ಎತ್ತರ ಜಿಗಿತದ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅವರು ೨೦೦೬ ರಲ್ಲಿ ಐರ್ಲೆಂಡ್ ನಲ್ಲಿ ಅಂಗವಿಕಲರ ಕಿರಿಯ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಮೊದಲ ಸಾಧನೆಯನ್ನು ಮಾಡಿದರು. ನಂತರ ಈ ಕುವೈಟ್ ಮತ್ತು ಮಲೇಷ್ಯಾ ರಲ್ಲಿ ಅಥ್ಲೆಟಿಕ್ ಕೂಟಗಳಲ್ಲಿ ಚಿನ್ನದ ಪದಕಗಳನ್ನು ಪಡೆದರು. ೨೦೧೩ ರಲ್ಲಿ ಗಿರೀಶ್‌ಗೆ ಪದ್ಮಶ್ರೀ ಗೌರವ ಒಲಿದಿದೆ.

ಪ್ರಶಸ್ತಿಗಳು ಮತ್ತು ಗೌರವಗಳು

೨೦೧೩ ರಲ್ಲಿ ಗಿರೀಶ್‌ಗೆ ಪದ್ಮಶ್ರೀ ಗೌರವ ಒಲಿದಿದೆ.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಮೈಸೂರು ಸಂಸ್ಥಾನಸನ್ನತಿಸೂರ್ಯವ್ಯೂಹದ ಗ್ರಹಗಳುಕನ್ನಡದಲ್ಲಿ ಸಣ್ಣ ಕಥೆಗಳುಸಿದ್ದರಾಮಯ್ಯಸಂಸ್ಕೃತಉಪನಯನಶೈಕ್ಷಣಿಕ ಮನೋವಿಜ್ಞಾನಮಂತ್ರಾಲಯಜಾಗತಿಕ ತಾಪಮಾನ ಏರಿಕೆಪ್ರಜಾವಾಣಿಝಾನ್ಸಿ ರಾಣಿ ಲಕ್ಷ್ಮೀಬಾಯಿಹೊಯ್ಸಳ ವಾಸ್ತುಶಿಲ್ಪಕರ್ನಾಟಕ ಹೈ ಕೋರ್ಟ್ಹೆಚ್.ಡಿ.ಕುಮಾರಸ್ವಾಮಿಅನುಪಮಾ ನಿರಂಜನಮೀನಾಕ್ಷಿ ದೇವಸ್ಥಾನಭಾರತದ ರಾಜ್ಯಗಳ ಜನಸಂಖ್ಯೆಮೈಗ್ರೇನ್‌ (ಅರೆತಲೆ ನೋವು)ಕುರುಬಹಿಂದುಸ್ತಾನಿ ಶಾಸ್ತ್ರೀಯ ಸಂಗೀತವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಸಂಘಟನೆಸಾಲುಮರದ ತಿಮ್ಮಕ್ಕಸಮುಚ್ಚಯ ಪದಗಳುಭಾರತದಲ್ಲಿ ಬಡತನರಾಷ್ಟ್ರಕೂಟಹೂವುಆಮ್ಲಗಳು ಮತ್ತು ಪ್ರತ್ಯಾಮ್ಲಗಳುಬೇಡಿಕೆಮಹಾತ್ಮ ಗಾಂಧಿಬೃಂದಾವನ (ಕನ್ನಡ ಧಾರಾವಾಹಿ)ಅಂಬರೀಶ್ಜಗನ್ನಾಥ ದೇವಾಲಯಭಾಷಾ ವಿಜ್ಞಾನತತ್ಪುರುಷ ಸಮಾಸಭಾರತದ ಸಂವಿಧಾನದ ೩೭೦ನೇ ವಿಧಿರೈತವಾರಿ ಪದ್ಧತಿಸವದತ್ತಿಬಾದಾಮಿ ಶಾಸನಪಟ್ಟದಕಲ್ಲುಏಲಕ್ಕಿಭಾರತೀಯ ಸ್ಟೇಟ್ ಬ್ಯಾಂಕ್ರೇಡಿಯೋಕನ್ನಡಪ್ರಭಅಮೃತಧಾರೆ (ಕನ್ನಡ ಧಾರಾವಾಹಿ)ಅಮ್ಮಹೊಯ್ಸಳಭಾರತದ ತ್ರಿವರ್ಣ ಧ್ವಜಪ್ರಾಥಮಿಕ ಶಾಲೆಜಲ ಮಾಲಿನ್ಯಅಂತಿಮ ಸಂಸ್ಕಾರಫ.ಗು.ಹಳಕಟ್ಟಿಮೊದಲನೇ ಅಮೋಘವರ್ಷವಜ್ರಮುನಿಹರ್ಡೇಕರ ಮಂಜಪ್ಪಜಿ.ಎಸ್.ಶಿವರುದ್ರಪ್ಪಭಾರತದಲ್ಲಿನ ಶಿಕ್ಷಣಭಾರತದ ಸಂಸತ್ತುಸ್ವರರಾಷ್ಟ್ರೀಯ ಸೇವಾ ಯೋಜನೆಕ್ರೀಡೆಗಳುಹಾವು ಕಡಿತಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಪು. ತಿ. ನರಸಿಂಹಾಚಾರ್ಮಂಗಳಮುಖಿರಾಷ್ಟ್ರೀಯತೆಹಳೇಬೀಡುರಕ್ತದೊತ್ತಡವೀರಗಾಸೆರಾಷ್ಟ್ರಕವಿಜಂತುಹುಳುಆಟಹಣಮಹಾಶರಣೆ ಶ್ರೀ ದಾನಮ್ಮ ದೇವಿಹಸ್ತ ಮೈಥುನತುಂಗಭದ್ರ ನದಿಅಗಸ್ಟ ಕಾಂಟ್🡆 More